ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 11/15 ಪು. 3-4
  • ಮೃತರು ನಮ್ಮನ್ನು ನೋಡಬಲ್ಲರೊ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೃತರು ನಮ್ಮನ್ನು ನೋಡಬಲ್ಲರೊ?
  • ಕಾವಲಿನಬುರುಜು—1994
  • ಅನುರೂಪ ಮಾಹಿತಿ
  • ಮೃತರು ಎಲ್ಲಿದ್ದಾರೆ?
    ಕಾವಲಿನಬುರುಜು—1994
  • ನೀವು ಮೃತರಿಗೆ ಭಯಪಡಬೇಕೊ?
    ಎಚ್ಚರ!—1996
  • ಒಬ್ಬ ಮುಖ್ಯಸ್ಥನು ತನ್ನ ಭವಿಷ್ಯವನ್ನು ಪರ್ಯಾಲೋಚಿಸುತ್ತಾನೆ
    ಕಾವಲಿನಬುರುಜು—1995
  • “ಪಾದಗಳಿಗಲ್ಲ, ಬಾಯಿಗೆ ಉಣಿಸಿರಿ”
    ಕಾವಲಿನಬುರುಜು—1994
ಇನ್ನಷ್ಟು
ಕಾವಲಿನಬುರುಜು—1994
w94 11/15 ಪು. 3-4

ಮೃತರು ನಮ್ಮನ್ನು ನೋಡಬಲ್ಲರೊ?

ಒಬ್ಬಳು ಹೆಂಗಸು ಅವಳ ಗಂಡನ ಕೊಲೆಗೈಯುತ್ತಾಳೆ. ಏಳು ವರ್ಷಗಳ ನಂತರ, ತನ್ನ ಸತ್ತ ಗಂಡನ ಕೋಪದ ಚಿಹ್ನೆ ಎಂದು ಅವಳು ನಂಬುವ ಒಂದು ಕನಸಿನಿಂದ ಅವಳು ದಿಗಿಲುಗೊಳ್ಳುತ್ತಾಳೆ. ಅವನ “ಆತ್ಮ” ವನ್ನು ಸಮಾಧಾನಗೊಳಿಸಲು, ಅವನ ಸಮಾಧಿಯ ಮೇಲೆ ಮದ್ಯ ಅರ್ಪಣೆಗಳನ್ನು ಮಾಡಲಿಕ್ಕಾಗಿ ತನ್ನ ಮಗಳನ್ನು ಕಳುಹಿಸುತ್ತಾಳೆ.

ತನ್ನ ತಂದೆಯ ಆತ್ಮದೊಂದಿಗೆ ಹೇಗೆ ಮಾತಾಡುವದೆಂದು ಮಗಳಿಗೆ ತಿಳಿಯುವದಿಲ್ಲ, ಏಕೆಂದರೆ ಅರ್ಪಣೆಯು, ಅವನನ್ನು ಕೊಂದ ಅವಳ ತಾಯಿಯಿಂದ ಬರುತ್ತದೆ. ಮರೆಯಲ್ಲಿ ಒಂದು ಜಾಗದಿಂದ ಅವಳ ತಮ್ಮನು ಗಮನಿಸುತ್ತಾನೆ. ಅವನು ಮುಂದೆ ಬರುತ್ತಾನೆ, ಮತ್ತು ಅವನು ಮತ್ತವನ ಅಕ್ಕ, ಅವನ ಕೊಲೆಯ ಸೇಡು ತೀರಿಸಲು ತಮಗೆ ಸಹಾಯ ಮಾಡುವಂತೆ ತಮ್ಮ ತಂದೆಗೆ ಒಂದು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಈ ದೃಶ್ಯವು, ಸುಮಾರು 2,400 ವರ್ಷಗಳ ಹಿಂದೆ ಬರೆಯಲ್ಪಟ್ಟ ದ ಲೈಬೇಷನ್‌ ಬೇರರ್ಸ್‌ ಎಂಬ ಗ್ರೀಕ್‌ ನಾಟಕದಿಂದ ತೆಗೆಯಲ್ಪಟ್ಟಿದೆ. ಲೋಕದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಆಫ್ರಿಕದಲ್ಲಿ, ತದ್ರೀತಿಯ ಸಮಾಧಿಬದಿ ಬಲಿಗಳು ಇಂದೂ ಅರ್ಪಿಸಲ್ಪಡುತ್ತವೆ.

ಉದಾಹರಣೆಗಾಗಿ, ನೈಜೀರಿಯದಲ್ಲಿ ಜೀವಿಸುತ್ತಿರುವ ಈಬೆ ಎಂಬವನ ಅನುಭವವನ್ನು ಪರಿಗಣಿಸಿರಿ. ಮೂರು ಮಕ್ಕಳನ್ನು ಮರಣದಲ್ಲಿ ಕಳೆದುಕೊಂಡವನಾಗಿ, ಅವನು ಸಾಂಪ್ರದಾಯಿಕ ಮಾಂತ್ರಿಕನನ್ನು ಸಮೀಪಿಸುತ್ತಾನೆ. ಮರಣಗಳು ವಿನಾ ಕಾರಣ ಸಂಭವಿಸಿಲ್ಲ—ಈಬೆಯ ಗತಿಸಿದ ತಂದೆ ಸಿಟ್ಟಿನಿಂದಿದ್ದಾನೆ ಯಾಕಂದರೆ ಅವನ ಶವಸಂಸ್ಕಾರವು ಸರಿಯಾದ ವಿಧದಲ್ಲಿ ನಡೆಸಲ್ಪಡಲಿಲ್ಲವೆಂದು ಅವನು ಈಬೆಗೆ ಹೇಳುತ್ತಾನೆ.

ಮಾಂತ್ರಿಕನ ಸಲಹೆಯನ್ನು ಪಾಲಿಸುತ್ತಾ, ಈಬೆ ಒಂದು ಆಡನ್ನು ಬಲಿಕೊಡುತ್ತಾನೆ ಮತ್ತು ತನ್ನ ತಂದೆಯ ಸಮಾಧಿಯ ಮೇಲೆ ಜಿನ್‌ ಮದ್ಯ ಮತ್ತು ದ್ರಾಕ್ಷಾಮದ್ಯದ ಅರ್ಪಣೆಯನ್ನು ಸುರಿಸುತ್ತಾನೆ. ಕ್ಷಮೆ ಬೇಡುತ್ತಾ, ತನ್ನ ಪ್ರೀತಿಯನ್ನು ಒತ್ತಿಹೇಳುತ್ತಾ, ಮತ್ತು ಆಶೀರ್ವಾದಕ್ಕಾಗಿ ಕೇಳಿಕೊಳ್ಳುತ್ತಾ ಅವನು ತನ್ನ ತಂದೆಯ ಆತ್ಮವನ್ನು ಕರೆಯುತ್ತಾನೆ.

ತನ್ನ ತಂದೆಯು ತನ್ನನ್ನು ನೋಡಬಲ್ಲನು ಮತ್ತು ಕೇಳಬಲ್ಲನು ಎಂಬದನ್ನು ಈಬೆ ಸಂದೇಹಿಸುವದಿಲ್ಲ. ತನ್ನ ತಂದೆಯು ನಿರ್ಜೀವನಾಗಿದ್ದಾನೆ ಎಂಬದಾಗಿ ಅವನು ನಂಬುವದಿಲ್ಲ, ಬದಲಾಗಿ ಮರಣಹೊಂದಿದಾಗ ಅವನು ದೃಶ್ಯ ಲೋಕದಿಂದ ಅದೃಶ್ಯ ಲೋಕಕ್ಕೆ “ದಾಟಿದನು” ಎಂದು ಅವನು ನಂಬುತ್ತಾನೆ. ತನ್ನ ತಂದೆಯು ರಕ್ತ ಮತ್ತು ಮಾಂಸದ ಲೋಕದಿಂದ ಆತ್ಮಗಳ ಲೋಕಕ್ಕೆ, ಪೂರ್ವಜರ ಕ್ಷೇತ್ರಕ್ಕೆ ಹೋಗಿದ್ದಾನೆ ಎಂದು ಈಬೆ ನಂಬುತ್ತಾನೆ.

ಈಬೆ ಹೀಗೆ ವಿವೇಚಿಸುತ್ತಾನೆ: ‘ತಂದೆ ಇನ್ನು ಮುಂದೆ ಈ ಲೋಕದಲ್ಲಿ ಇರದಿದ್ದರೂ, ಅವನು ಇನ್ನೂ ನನ್ನನ್ನು ನೆನಪಿಸುತ್ತಾನೆ ಮತ್ತು ನನ್ನ ಹಿತದಲ್ಲಿ ಆಸಕ್ತನಾಗಿದ್ದಾನೆ. ಮತ್ತು ಈಗ ಅವನು ವರ್ಧಿಸಲ್ಪಟ್ಟ ಶಕಿಗ್ತಳಿರುವ ಒಬ್ಬ ಆತ್ಮನಾಗಿರುವದರಿಂದ, ನನಗೆ ಸಹಾಯ ಮಾಡಲು ಅವನು ಭೂಮಿಯ ಮೇಲೆ ಮನುಷ್ಯನಾಗಿದದ್ದಕ್ಕಿಂತ ಹೆಚ್ಚು ಉತ್ತಮ ಸ್ಥಾನದಲ್ಲಿ ಇದ್ದಾನೆ. ಮೇಲಾಗಿ, ದೇವರು ಸಹ ಒಬ್ಬ ಆತ್ಮನಾಗಿರುವದರಿಂದ ಅವನು ನನ್ನ ಪರವಾಗಿ ದೇವರನ್ನು ನೇರವಾಗಿ ಸಮೀಪಿಸಬಹುದು. ತಂದೆಯು ಈಗ ಕೋಪದಿಂದಿರಬಹುದು, ಆದರೆ ನಾನು ಅವನಿಗೆ ಸರಿಯಾದ ಗೌರವವನ್ನು ತೋರಿಸಿದರೆ, ಅವನು ನನ್ನನ್ನು ಕ್ಷಮಿಸುವನು ಮತ್ತು ಆಶೀರ್ವದಿಸುವನು.’

ಮೃತರು ಭೂಮಿಯ ಮೇಲಿರುವ ಜನರನ್ನು ನೋಡುತ್ತಾರೆ ಮತ್ತು ಅವರ ಜೀವಿತಗಳನ್ನು ಪ್ರಭಾವಿಸುತ್ತಾರೆ ಎಂಬ ನಂಬಿಕೆಯು ಆಫ್ರಿಕದಲ್ಲಿ ಸಾಂಪ್ರದಾಯಿಕ ಧರ್ಮವನ್ನು ಆಚರಿಸುವವರ ಮಧ್ಯೆ ಸಾಮಾನ್ಯವಾಗಿದೆ. ಅದು ಕ್ರೈಸ್ತರೆಂದು ಹೇಳಿಕೊಳ್ಳುವವರ ಮಧ್ಯೆಯೂ ತೋರಿಬರುತ್ತದೆ. ಉದಾಹರಣೆಗಾಗಿ, ಒಬ್ಬ ಹೆಂಗಸು ಚರ್ಚಿನಲ್ಲಿ ಮದುವೆಯಾದ ನಂತರ, ಒಂದು ಸಾಂಪ್ರದಾಯಿಕ ಆಶೀರ್ವಾದವನ್ನು ಪಡೆಯಲು ತನ್ನ ಹೆತ್ತವರ ಮನೆಗೆ ಹೋಗುವದು ಅಸಾಮಾನ್ಯವಲ್ಲ. ಅಲ್ಲಿ ಪೂರ್ವಜರಿಗೆ ಪ್ರಾರ್ಥಿಸಲಾಗುತ್ತದೆ ಮತ್ತು ಅವರಿಗಾಗಿ ಒಂದು ಮದ್ಯದ ಅರ್ಪಣೆಯು ಸುರಿಸಲ್ಪಡುತ್ತದೆ. ಇದನ್ನು ಮಾಡಲು ತಪ್ಪುವದು ವಿವಾಹದ ಮೇಲೆ ವಿಪತ್ತನ್ನು ತರುತ್ತದೆಂದು ಅನೇಕ ಜನರು ನಂಬುತ್ತಾರೆ.

ಪೂರ್ವಜರು, ಅಥವಾ ಪೂರ್ವಜರ ಆತ್ಮಗಳು, ಭೂಮಿಯ ಮೇಲಿರುವ ಪರಿವಾರಗಳ ಉಳಿಯುವಿಕೆ ಮತ್ತು ಅಭಿವೃದ್ಧಿಯನ್ನು ನಿಶ್ಚಿತಗೊಳಿಸುತ್ತವೆ ಎಂದು ಯೋಚಿಸಲಾಗುತ್ತದೆ. ಈ ದೃಷ್ಟಿಕೋನಕ್ಕನುಸಾರ, ಅವು ಶಕ್ತಿಶಾಲಿ ಸ್ನೇಹಿತರಾಗಿವೆ, ಒಳ್ಳೆಯ ಫಸಲುಗಳನ್ನು ತರಶಕ್ತವಾಗಿವೆ, ಕ್ಷೇಮವನ್ನು ಪ್ರವರ್ಧಿಸುತ್ತವೆ, ಮತ್ತು ಜನರನ್ನು ಹಾನಿಯಿಂದ ಸಂರಕ್ಷಿಸಬಲ್ಲವುಗಳಾಗಿವೆ. ಅವು ಮಾನವನ ಪರವಾಗಿ ಮಧ್ಯಸಿಕ್ಥೆ ಮಾಡುತ್ತವೆ. ಹಾಗಿದ್ದರೂ, ಅಲಕ್ಷಿಸಲ್ಪಟ್ಟರೆ ಯಾ ರೇಗಿಸಲ್ಪಟ್ಟರೆ, ಅವು ವಿಪತ್ತನ್ನು—ರೋಗ, ಬಡತನ, ಮರಣವನ್ನು ಸಹ—ತರುತ್ತವೆ. ಆದುದರಿಂದ, ಬಲಿ ಮತ್ತು ಸಂಸ್ಕಾರಗಳ ಮೂಲಕ, ಜನರು ಮೃತರೊಂದಿಗೆ ಒಳ್ಳೆಯ ಸಂಬಂಧಗಳನ್ನು ಕಾಪಾಡಲು ಪ್ರಯತ್ನಮಾಡುತ್ತಾರೆ.

ಜೀವಿಸುತ್ತಿರುವವರ ಜೀವಿತಗಳಲ್ಲಿ ಮೃತರು ಒಂದು ಸಕ್ರಿಯ ಪಾತ್ರವನ್ನು ಆಡುತ್ತಾರೆಂದು ನೀವು ನಂಬುತ್ತೀರೋ? ಪ್ರಿಯರೊಬ್ಬರ ಸಮಾಧಿಯ ಬಳಿಯಲ್ಲಿ ನಿಂತುಕೊಂಡು, ಒಂದು ವೇಳೆ ಅವನು ಅಥವಾ ಅವಳು ನಿಮ್ಮನ್ನು ಕೇಳಶಕ್ತರಾದರೆ ಎಂದುಕೊಂಡು, ಕೆಲವು ಶಬ್ದಗಳನ್ನು ಆಡಿದ್ದುಂಟೋ? ಒಳ್ಳೇದು, ಮೃತರು ನಮ್ಮನ್ನು ನೋಡಿ ಕೇಳುತ್ತಾರೋ ಇಲ್ಲವೋ ಎಂಬದು ಮರಣಹೊಂದಿದಾಗ ಏನು ಸಂಭವಿಸುತ್ತದೆ ಎಂಬದರ ಮೇಲೆ ಅವಲಂಬಿತವಾಗಿದೆ. ಈ ಪ್ರಾಮುಖ್ಯ ವಿಷಯದ ಕುರಿತಾಗಿ ಬೈಬಲು ಏನು ಹೇಳುತ್ತದೆಂದು ನಾವು ಪರೀಕ್ಷಿಸೋಣ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ