“ಹರ್ಷಭರಿತ ಸುತ್ತಿಗಾರರು” ಅಧಿವೇಶನ ನೀವಲ್ಲಿ ಇರುವಿರೋ?
ಹರ್ಷ! ಈ ಸಮಸ್ಯೆಭರಿತ ಸಮಯದಲ್ಲಿ ಆ ಶಬ್ದವು ವಿಚಿತ್ರವೂ, ಪರಕೀಯವಾಗಿಯೂ ಕೇಳಿಸುತ್ತದೋ? ನಿಶ್ಚಯವಾಗಿಯೂ, ವಾರ್ತಾಪತ್ರಗಳು ನಮ್ಮನ್ನು ಹರ್ಷಿಸಲು ಅನೇಕ ಕಾರಣಗಳನ್ನು ಕೊಡುವದಿಲ್ಲ. ಕುಲಸಂಬಂಧಿತ ಹೋರಾಟ, ವ್ಯಾಪಕ ಹಸಿವು, ನಿರುದ್ಯೋಗ, ಅಪಾಯಕಾರಿ ಮಾಲಿನ್ಯ, ರಾಜಕೀಯ ಅಸ್ಥಿರತೆ, ಪಾತಕ—ಇವು ಹೃದಯವನ್ನು ಹರ್ಷದಿಂದ ತುಂಬಿಸುವ ವಿಷಯಗಳಾಗಿಲ್ಲ, ಆಗಿವೆಯೋ?
ಇಂದು ಹೆಚ್ಚಿನ ಜನರು ಜೀವಿತದಿಂದ ತಾವು ಪಡೆಯಬಹುದಾದ ಯಾವುದೇ ಸುಖವನ್ನು ಕಸಿದುಕೊಳ್ಳುತ್ತಾರೆ. ಆದರೆ ಹರ್ಷ? ಹರ್ಷವನ್ನು “ಸಂತೋಷದ ಒಂದು ಸ್ಥಿತಿ; ಅತ್ಯಾನಂದ” ಎಂದು ವರ್ಣಿಸಲಾಗಿದೆ. ಅನೇಕ ಜನರು ನಿಜವಾದ ಹರ್ಷವನ್ನು ಅನುಭವಿಸುವದಿಲ್ಲ, ಮತ್ತು ಅವರು ಅನುಭವಿಸಿದ್ದಲ್ಲಿ, ಅದು ಅನೇಕ ಸಲ ತಾತ್ಕಾಲಿಕವಾಗಿರುತ್ತದೆ.
ಆದರೂ, ನಮ್ಮ ಸಮಯವನ್ನು ಎದುರುನೋಡುತ್ತಾ, ಬೈಬಲು ಮುಂತಿಳಿಸಿದ್ದು: “ಹೀಗಿರಲು, ಕರ್ತನಾದ ಯೆಹೋವನು ಹೀಗನ್ನುತ್ತಾನೆ—ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, . . . ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.” (ಯೆಶಾಯ 65:13, 14) ಅದು ಹೇಗಾಗಬಲ್ಲದು?
ಉತ್ತರವನ್ನು ಕಂಡುಹಿಡಿಯಲು, 1995 ರಲ್ಲಿ ನಡೆಯಲಿರುವ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳಲ್ಲಿ ಒಂದನ್ನು ಹಾಜರಾಗಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಅಧಿವೇಶನಗಳ ಮುಖ್ಯವಿಷಯವು “ಹರ್ಷಭರಿತ ಸುತ್ತಿಗಾರರು” ಆಗಿದೆ ಮತ್ತು ಹಾಜರಿಯು ಉಚಿತವಾಗಿದೆ. ಮೂರು ದಿನಗಳ ಅಧಿವೇಶನದ ಕಾರ್ಯಕ್ರಮದಲ್ಲಿ ಬೈಬಲ್ ಆಧರಿತ ಭಾಷಣಗಳು, ಪ್ರತ್ಯಕ್ಷಾಭಿನಯಗಳು, ಚರ್ಚೆಗಳು ಮತ್ತು ಹೆಚ್ಚು ವಿಷಯಗಳು ಒಳಗೂಡಿರುವುದು. ಕಾರ್ಯಕ್ರಮದಾದ್ಯಂತ ಹರ್ಷದ ಕುರಿತಾದ ಮುಖ್ಯವಿಷಯವನ್ನು ಎತ್ತಿತೋರಿಸಲಾಗುವುದು.
ಅಧಿವೇಶನಗಳು ಅಮೆರಿಕದಲ್ಲಿ ಜೂನ್ನಲ್ಲಿ ಆರಂಭವಾಗಿ, 1996ರ ಆದಿಭಾಗದ ವರೆಗೆ ಜಗತ್ತಿನ ನಗರಗಳಲ್ಲಿ ಮುಂದುವರಿಯುವುವು. ನಿಮ್ಮ ಸಮೀಪದಲ್ಲಿ ಒಂದು ಅಧಿವೇಶನವಿರುವುದು ಸಂಭಾವ್ಯ. ನಿಮ್ಮ ವಠಾರದಲ್ಲಿ ಜೀವಿಸುತ್ತಿರುವ ಯೆಹೋವನ ಸಾಕ್ಷಿಗಳನ್ನು ನೀವು ಏಕೆ ಕೇಳಬಾರದು? ನೀವು ಅಲ್ಲಿರಬೇಕೆಂದು ನಾವು ಹೃದಯೋಲ್ಲಾಸದಿಂದ ಆಮಂತ್ರಿಸುತ್ತೇವೆ.