ಧಾರ್ಮಿಕ ಸತ್ಯವು ಪ್ರಾಪ್ಯವೋ?
ಸ್ವೀಡನ್‌ನಲ್ಲಿ ವಿಶ್ವವಿದ್ಯಾಲಯವೊಂದಿರುವ ಅಪ್ಸಲಾದ ಪಟ್ಟಣದಲ್ಲಿದ್ದ ಆತ್ಮಿಕವಾಗಿ ಕುತೂಹಲವುಳ್ಳವನಾಗಿದ್ದ ಮನುಷ್ಯನೊಬ್ಬನು, ತನ್ನ ಪಟ್ಟಣದಲ್ಲಿರುವ ವಿಭಿನ್ನ ಧರ್ಮಗಳ ನಂಬಿಕೆಗಳನ್ನು ಅಭ್ಯಸಿಸಲು ನಿರ್ಣಯಿಸಿ, ಅವುಗಳ ಆರಾಧನಾ ಸ್ಥಳಗಳಿಗೂ ಭೇಟಿಕೊಟ್ಟನು. ಅವುಗಳ ವೈದಿಕರು ಸಾರಿದಂತೆ ಅವನು ಕಿವಿಗೊಟ್ಟನು ಮತ್ತು ಕೆಲವು ಸದಸ್ಯರನ್ನು ಸಂದರ್ಶಿಸಿದನು. ಕೇವಲ ಯೆಹೋವನ ಸಾಕ್ಷಿಗಳು ತಾವು “ಸತ್ಯವನ್ನು ಕಂಡುಹಿಡಿದಿದ್ದೇವೆ” ಎಂಬ ವಿಷಯದಲ್ಲಿ ಮನವರಿಕೆಯುಳ್ಳವರಾಗಿ ಕಂಡುಬಂದರೆಂದು ಆತನು ಗಮನಿಸಿದನು. ಅಸ್ತಿತ್ವದಲ್ಲಿರುವ ವೈವಿಧ್ಯಮಯ ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸುವಾಗ ಅವರು ಅಂತಹ ಒಂದು ಹೇಳಿಕೆಯನ್ನು ಹೇಗೆ ಮಾಡಬಲ್ಲರೆಂದು ಅವನು ಕುತೂಹಲಪಟ್ಟನು.
ಧರ್ಮದ ಕುರಿತಾದ ಸತ್ಯವನ್ನು ಪಡೆಯುವುದು ಸಾಧ್ಯವೆಂದು ನೀವು ವೈಯಕ್ತಿಕವಾಗಿ ನೆನಸುತ್ತೀರೋ? ಮೂಲ ಸತ್ಯವೆಂದು ಏನನ್ನು ಕರೆಯಬಹುದೋ ಅದನ್ನು ನಿರ್ಧರಿಸುವುದು ಸಹ ಸಾಧ್ಯವೂ?
ತತ್ವಜ್ಞಾನ ಮತ್ತು ಸತ್ಯ
ತತ್ವಜ್ಞಾನವನ್ನು ಅಭ್ಯಸಿಸಿರುವವರು, ಮೂಲ ಸತ್ಯವು ಮಾನವನ ನಿಲುಕಿಗೆ ಮೀರಿದಂತಹದ್ದೆಂಬ ದೃಷ್ಟಿಯನ್ನು ಬೆಳೆಸಿಕೊಂಡಿದ್ದಾರೆ. ತತ್ವಜ್ಞಾನವನ್ನು “ಜೀವ ಮತ್ತು ಅಸ್ತಿತ್ವದ ಮೂಲವನ್ನು ವಿವರಿಸಲು ಪ್ರಯತ್ನಿಸುವ ವಿಜ್ಞಾನ” ವಾಗಿ ಅರ್ಥ ನಿರೂಪಿಸಲಾಗಿದೆಯೆಂದು ನಿಮಗೆ ತಿಳಿದಿರಬಹುದು. ವಾಸ್ತವದಲಾದ್ಲರೋ, ಅದು ವಿರಳವಾಗಿ ಅಷ್ಟು ದೂರ ಹೋಗುತ್ತದೆ. ಫಿಲೋಸೋಫೀನ್ಸ್ ಹಿಸ್ಟೋರಿಆ (ತತ್ವಜ್ಞಾನದ ಇತಿಹಾಸ) ದಲ್ಲಿ, ಸ್ವೀಡಿಷ್ ಲೇಖಕ ಆಲ್ಫ್ ಆಲ್‌ಬರ್ಗ್ ಬರೆದದ್ದು: “ಅನೇಕ ತತ್ವಶಾಸ್ತ್ರೀಯ ಪ್ರಶ್ನೆಗಳು ಎಂತಹ ಒಂದು ಸ್ವಭಾವದ್ದಾಗಿವೆಯೆಂದರೆ ಅವುಗಳಿಗೆ ಒಂದು ಖಂಡಿತವಾದ ಉತ್ತರ ಕೊಡುವುದು ಅಸಾಧ್ಯ. . . . ಎಲ್ಲಾ ಅಪ್ರಾಕೃತ [ವಿಷಯಗಳ ಪ್ರಥಮ ಸೂತ್ರಗಳಿಗೆ ಸಂಬಂಧಿಸುವ] ಸಮಸ್ಯೆಗಳು ಈ ಗುಂಪಿಗೆ ಸೇರಿವೆಯೆಂಬದು . . . ಅನೇಕ ಜನರ ಅಭಿಪ್ರಾಯವಾಗಿದೆ.”
ಪರಿಣಾಮವಾಗಿ, ಜೀವಿತದ ಅತಿ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ತತ್ವಜ್ಞಾನದ ಮೂಲಕ ಕಂಡುಹಿಡಿಯಲು ಪ್ರಯತ್ನಿಸಿರುವವರು ಹೆಚ್ಚಾಗಿ ಅತೃಪ್ತರಾಗಿದ್ದಾರೆ ಅಥವಾ ಕಡುಸಂಕಟದ ಸ್ಥಿತಿಗೆ ಬಂದಿದ್ದಾರೆ. ತನ್ನ ಪುಸ್ತಕವಾದ ಟಾನ್‌ಕಲಿನ್ಯರ್ ಓಕ್ ಟ್ರೂಸ್‌ಫೊರ್ಮರ್ (ಆಲೋಚನೆ ಮತ್ತು ಧಾರ್ಮಿಕ ನಂಬಿಕೆಯ ಪಂಕ್ತಿಗಳು) ನಲ್ಲಿ ಸ್ವೀಡಿಷ್ ಲೇಖಕ ಗನ್ನಾರ್ ಆಸ್ಪಲಿನ್ ಹೇಳಿದ್ದು: “ನಿಸರ್ಗಕ್ಕೆ, ಮನುಷ್ಯನಲ್ಲಿರುವ ಆಸಕ್ತಿಯು, ಚಿಟ್ಟೆ ಮತ್ತು ಸೊಳ್ಳೆಯಲ್ಲಿ ಅದಕ್ಕೆ ಇರುವಂತಹ ಆಸಕ್ತಿಗಿಂತ ಹೆಚ್ಚೇನೂ ಇಲ್ಲ . . . ಬ್ರಹ್ಮಾಂಡದಲ್ಲಿ ಮತ್ತು ನಮ್ಮ ಆಂತರಿಕ ಲೋಕದಲ್ಲಿ ಪರಸ್ಪರವಾಗಿ ಕಾರ್ಯಮಾಡುವ ನೈಸರ್ಗಿಕ ಶಕ್ತಿಗಳ ಮುಂದೆ ನಾವು ನಿಶ್ಯಕ್ತರಾಗಿದ್ದೇವೆ, ಸಂಪೂರ್ಣವಾಗಿ ನಿಶ್ಶಕ್ತರು. ಯಾವ ಶತಮಾನದಲ್ಲಿ ಮನುಷ್ಯರು ಪ್ರಗತಿಯಲ್ಲಿ ನಂಬಿಕೆಯಿಟ್ಟು ಒಂದು ಉತ್ತಮವಾದ ಭವಿಷ್ಯತ್ತಿನ ಕುರಿತಾಗಿ ಕನಸನ್ನು ಕಂಡಿದ್ದಾರೋ ಆ ಶತಮಾನದ ಅಂತ್ಯದ ಕಡೆಗೆ ಸಾಹಿತ್ಯದಲ್ಲಿ ಜೀವಿತದ ಕುರಿತಾಗಿ ಇಷ್ಟು ಹೆಚ್ಚಾಗಿ ಕಂಡುಬಂದಿರುವ ಹೊರನೋಟವು ಇದಾಗಿದೆ.”
ಸತ್ಯದ ಕುರಿತಾದ ಒಂದು ಪ್ರಕಟನೆಯು ಅಗತ್ಯವಾಗಿದೆಯೋ?
ಜೀವಿತದ ಕುರಿತಾದ ಸತ್ಯವನ್ನು ಕಂಡುಹಿಡಿಯುವದರಲ್ಲಿ ಕೇವಲ ಮಾನವ ಪ್ರಯತ್ನಗಳು ಯಶಸ್ವಿಯಾಗಿಲ್ಲವೆಂಬದು ವ್ಯಕ್ತ ಮತ್ತು ಎಂದೂ ಆಗಲಾರವೆಂದು ತೋರುತ್ತದೆ. ಆದುದರಿಂದ, ಯಾವುದೇ ಒಂದು ವಿಧದ ದೈವಿಕ ಪ್ರಕಟನೆಯು ಆವಶ್ಯಕವೆಂಬ ತೀರ್ಮಾನಕ್ಕೆ ಬರಲು ಒಂದು ಒಳ್ಳೆಯ ಕಾರಣವಿದೆ. ನಿಸರ್ಗ ಪುಸ್ತಕವೆಂದು ಅನೇಕರಿಂದ ಯಾವುದನ್ನು ಕರೆಯಲಾಗುತ್ತದೋ, ಅದು ಸ್ವಲ್ಪ ಪ್ರಕಟನೆಯನ್ನು ಒದಗಿಸುತ್ತದೆ. ಜೀವದ ಮೂಲದ ಕುರಿತಾಗಿ ನಿರ್ಧಾರಾತ್ಮಕ ವಿವರಗಳನ್ನು ಕೊಡದಿದ್ದರೂ, ಜೀವದ ಕುರಿತಾಗಿ ಶುದ್ಧವಾದ ಭೌತದ್ರವ್ಯವಾದ ವಿವರಣೆಗಿಂತ ಹೆಚ್ಚು ತೃಪ್ತಿಕರವಾದಂತಹದ್ದು ಇದೆಯೆಂದು ಅದು ತೋರಿಸುತ್ತದೆ. ಮೇಲ್ಮುಖವಾಗಿ ಬೆಳೆಯುವ ಹುಲ್ಲಿನ ಒಂದು ಗರಿಕೆಯು ನಿಜವಾಗಿ, ಪುಡಿಯಾಗಿ ಉದುರುತ್ತಿರುವ ಒಂದು ಗುಂಡಿಯಲ್ಲಿರುವ ಬಂಡೆಗಳ ರಾಶಿಯನ್ನು ನಡೆಸುವ ನಿಯಮಗಳಿಗಿಂತ ಭಿನ್ನವಾಗಿರುವ ನಿಯಮಗಳನ್ನು ಅನುಸರಿಸುತ್ತದೆ. ನಿಸರ್ಗದಲ್ಲಿ, ಸಜೀವ ವಸ್ತುಗಳು, ನಿರ್ಜೀವ ವಸ್ತುಗಳು ಮಾಡದಂತಹ ರೀತಿಯಲ್ಲಿ, ತಮ್ಮನ್ನು ಕಟ್ಟಿಕೊಳ್ಳುತ್ತವೆ ಮತ್ತು ವ್ಯವಸ್ಥಿತಗೊಳಿಸುತ್ತವೆ. ಆದುದರಿಂದ ನಿಯಮ ಮತ್ತು ಧರ್ಮದ ಕುರಿತಾದ ಒಬ್ಬ ಪ್ರಖ್ಯಾತ ವಿದ್ಯಾರ್ಥಿಯು ಈ ರೀತಿಯಲ್ಲಿ ತೀರ್ಮಾನಿಸಲು ಒಂದು ಆಧಾರವಿತ್ತು: “ಕಣ್ಣಿಗೆ ಕಾಣದಿರುವ [ದೇವರ] ಗುಣಲಕ್ಷಣಗಳು . . . ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”—ರೋಮಾಪುರ 1:20.
ಆದರೆ ಈ ಕಟ್ಟುವಿಕೆಯ ಮತ್ತು ವ್ಯವಸ್ಥಾಪನೆಯ ಹಿಂದೆ ಯಾರಿದ್ದಾನೆಂದು ತಿಳಿಯಲಿಕ್ಕಾಗಿ, ನಮಗೆ ಇನ್ನೂ ಹೆಚ್ಚಿನ ಪ್ರಕಟನೆಯ ಅಗತ್ಯವಿದೆ. ಅಂತಹ ಒಂದು ಪ್ರಕಟನೆಯು ಅಸ್ತಿತ್ವದಲ್ಲಿರುವದನ್ನು ನಾವು ನಿರೀಕ್ಷಿಸಬಾರದೋ? ಭೂಮಿಯ ಮೇಲಿನ ಜೀವಕ್ಕೆ ಜವಾಬ್ದಾರನಾಗಿರುವವನು ತನ್ನ ಸೃಷ್ಟಿಜೀವಿಗಳಿಗೆ ತನ್ನನ್ನೇ ಪ್ರಕಟಿಸಿಕೊಳ್ಳುವನೆಂದು ನಿರೀಕ್ಷಿಸುವುದು ಸಮಂಜಸವಾಗಿರದೋ?
ಬೈಬಲು ಅಂತಹ ಒಂದು ಪ್ರಕಟನೆಯಾಗಿರುವದಾಗಿ ಸಮರ್ಥಿಸಿಕೊಳ್ಳುತ್ತದೆ. ಈ ಪತ್ರಿಕೆಯಲ್ಲಿ, ಈ ಸಮರ್ಥನೆಯನ್ನು ಸ್ವೀಕರಿಸಲು ಒಳ್ಳೆಯ ಕಾರಣಗಳನ್ನು ನಾವು ಅನೇಕ ಸಾರಿ ಪ್ರಸ್ತುತಪಡಿಸಿದ್ದೇವೆ. ಬೈಬಲನ್ನು ಬರೆದಂತಹ ಮನುಷ್ಯರು, ತಾವೇನನ್ನು ಬರೆದಿದ್ದರೋ ಅದು ತಮ್ಮ ಸ್ವಂತದ್ದಾಗಿರಲಿಲ್ಲವೆಂದು ಸ್ಪಷ್ಟಪಡಿಸುವ ಅವರ ಆತುರವು ತಾನೇ ತುಂಬ ಗಮನಾರ್ಹವಾಗಿದೆ. 300 ಕ್ಕಿಂತಲೂ ಹೆಚ್ಚು ಸಲ “ಯೆಹೋವನು ಹೀಗನ್ನುತ್ತಾನೆ” ಎಂಬಂತಹ ಅಭಿವ್ಯಕ್ತಿಗಳನ್ನು ಬೈಬಲಿನ ಪ್ರವಾದಿಗಳು ಉಪಯೋಗಿಸುವುದನ್ನು ನಾವು ಕಂಡುಕೊಳ್ಳುತ್ತೇವೆ. (ಯೆಶಾಯ 37:33; ಯೆರೆಮೀಯ 2:2; ನಹೂಮ 1:12) ಪುಸ್ತಕಗಳನ್ನು ಅಥವಾ ಲೇಖನಗಳನ್ನು ಬರೆಯುವ ಪುರುಷರು ಅಥವಾ ಸ್ತ್ರೀಯರು ತಮ್ಮ ಕೃತಿಗಳಿಗೆ ಸಹಿ ಮಾಡಲು ಸಾಮಾನ್ಯವಾಗಿ ತವಕಿಸುತ್ತಾರೆಂಬದು ನಿಮಗೆ ತಿಳಿದಿರಬಹುದು. ಆದರೂ, ಬೈಬಲನ್ನು ಬರೆದವರು ತಮ್ಮನ್ನು ಹಿನ್ನಲೆಯಲ್ಲಿ ಇಟ್ಟುಕೊಂಡರು; ಕೆಲವು ವಿದ್ಯಮಾನಗಳಲ್ಲಿ, ಬೈಬಲಿನ ನಿರ್ದಿಷ್ಟ ಭಾಗಗಳನ್ನು ಬರೆದವರು ಯಾರೆಂದು ನಿಷ್ಕರ್ಷಿಸುವುದೇ ಕಷ್ಟಕರವಾಗಿರುತ್ತದೆ.
ಪ್ರಾಮುಖ್ಯವೆಂದು ನೀವು ಕಂಡುಕೊಳ್ಳಬಹುದಾದ ಬೈಬಲಿನ ಇನ್ನೊಂದು ರೂಪವು ಅದರ ಆಂತರಿಕ ಸಾಮರಸ್ಯವಾಗಿದೆ. 1,600 ವರ್ಷಗಳ ಒಂದು ಅವಧಿಯಲ್ಲಿ ಬೈಬಲಿನ 66 ಪುಸ್ತಕಗಳು ಬರೆಯಲ್ಪಟ್ಟಿದ್ದವು ಎಂಬ ವಿಷಯವನ್ನು ಪರಿಗಣಿಸುವಾಗ, ಇದು ನಿಜವಾಗಿಯೂ ಗಮನಾರ್ಹವಾಗಿದೆ. ನೀವೊಂದು ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ, 16 ಶತಮಾನಗಳ ಒಂದು ಅವಧಿಯಲ್ಲಿ ಬರೆಯಲ್ಪಟ್ಟಿದ್ದ 66 ಧಾರ್ಮಿಕ ಪುಸ್ತಕಗಳನ್ನು ಆರಿಸಿದ್ದೀರೆಂದು ಎಣಿಸಿರಿ. ಅನಂತರ ನೀವು ಒಂದೊಂದು ಪುಸ್ತಕವನ್ನು ಒಂದೇ ಸಂಪುಟವಾಗಿ ರಟ್ಟುಗಟ್ಟುತ್ತೀರಿ. ಆ ಸಂಪುಟಕ್ಕೆ ಒಂದು ಸರ್ವಸಾಮಾನ್ಯ ಮುಖ್ಯವಿಷಯ ಮತ್ತು ಒಂದು ಹೊಂದಿಕೆಯ ಸಂದೇಶವಿರಲು ನೀವು ನಿರೀಕ್ಷಿಸುವಿರೋ? ಖಂಡಿತವಾಗಿಯೂ ಇಲ್ಲ. ಇದು ಒಂದು ಅದ್ಭುತವನ್ನು ಕೇಳಿಕೊಳ್ಳುತ್ತದೆ. ಇದನ್ನು ಪರಿಗಣಿಸಿರಿ: ಬೈಬಲಿನ ಪುಸ್ತಕಗಳಿಗೆ ಅಂತಹ ಒಂದು ಸರ್ವಸಾಮಾನ್ಯ ಮುಖ್ಯವಿಷಯವಿದೆ, ಮತ್ತು ಅವು ಒಂದು ಇನ್ನೊಂದನ್ನು ಸಮರ್ಥಿಸುತ್ತವೆ. ಬೈಬಲಿನ ಬರಹಗಾರರು ಏನನ್ನು ಬರೆದರೋ ಅದನ್ನು ನಿರ್ದೇಶಿಸಿದ ಒಬ್ಬನೇ ಸರ್ವನಿಯಂತ್ರಕನು ಅಥವಾ ಲೇಖಕನಿರಬೇಕೆಂದು ಇದು ಪ್ರದರ್ಶಿಸುತ್ತದೆ.
ಹಾಗಿದ್ದರೂ, ಎಲ್ಲದಕ್ಕಿಂತಲೂ ಹೆಚ್ಚಾಗಿ ಬೈಬಲಿನ ಮೂಲವನ್ನು ರುಜುಪಡಿಸುವ ಒಂದು ವೈಶಿಷ್ಟ್ಯವನ್ನು ನೀವು ಕಂಡುಕೊಳ್ಳುವಿರಿ. ಪ್ರವಾದನೆಗಳು—ಭವಿಷ್ಯದಲ್ಲಿ ಖಂಡಿತವಾಗಿ ಏನು ಸಂಭವಿಸಲಿದೆಯೆಂಬದರ ಕುರಿತಾಗಿ ಮುಂಚೆಯೇ ಬರೆದಿಡಲ್ಪಟ್ಟ ಮಾಹಿತಿ. “ಆ ದಿನದಲ್ಲಿ” ಮತ್ತು “ಅಂತ್ಯಕಾಲದಲ್ಲಿ” ಇವುಗಳಂತಹ ಅಭಿವ್ಯಕ್ತಿಗಳು ಬೈಬಲಿನಲ್ಲಿ ಅಪೂರ್ವವಾಗಿವೆ. (ಯೆಶಾಯ 2:2; 11:10, 11; 23:15; ಯೆಹೆಜ್ಕೇಲ 38:18; ಹೋಶೇಯ 2:21-23; ಜೆಕರ್ಯ 13:2-4) ಯೇಸು ಕ್ರಿಸ್ತನು ಈ ಭೂಮಿಯ ಮೇಲೆ ಬರುವ ಅನೇಕ ನೂರಾರು ವರ್ಷಗಳ ಮುಂಚೆ, ಆತನ ಜೀವಿತದ, ಜನನದಿಂದ ಮರಣದ ಕುರಿತಾದ ವಿವರಗಳನ್ನು ಹೀಬ್ರು ಶಾಸ್ತ್ರವಚನಗಳಲ್ಲಿನ ಪ್ರವಾದನೆಗಳು ಕೊಟ್ಟವು. ಬೈಬಲ್ ತಾನೇ ಜೀವದ ಕುರಿತಾದ ಸತ್ಯದ ಮೂಲವೆಂಬ ತೀರ್ಮಾನದ ಹೊರತು ಬೇರೆ ಯಾವ ಸಮಂಜಸವಾದ ತೀರ್ಮಾನಕ್ಕೆ ತಲಪಲಾರೆವು. ಯೇಸು ತಾನೇ ಈ ಮಾತುಗಳಿಂದ ಇದನ್ನು ದೃಢೀಕರಿಸುತ್ತಾನೆ: “ನಿನ್ನ ವಾಕ್ಯವೇ ಸತ್ಯವು.”—ಯೋಹಾನ 17:17.
ಧರ್ಮ ಮತ್ತು ಸತ್ಯ
ಸಂಪೂರ್ಣ ಸತ್ಯವು ಅಪ್ರಾಪ್ಯವೆಂದು, ಬೈಬಲಿನಲ್ಲಿ ನಂಬಿಕೆಯಿದೆಯೆಂದು ಹೇಳುವ ಅನೇಕರೂ ನಂಬುತ್ತಾರೆ. ಅಮೆರಿಕದ ವೈದಿಕ ಜಾನ್ ಎಸ್. ಸ್ಪಾಂಗ್ ವ್ಯಾಖ್ಯಾನಿಸಿದ್ದು: “ನಮ್ಮ ಹತ್ತಿರ ಸತ್ಯವಿದೆ ಮತ್ತು ಇತರರು ನಮ್ಮ ದೃಷ್ಟಿಕೋನಕ್ಕೆ ಬರಬೇಕು ಎಂದು ಆಲೋಚಿಸುವುದರಿಂದ ಸಂಪೂರ್ಣ ಸತ್ಯವು ನಮ್ಮೆಲ್ಲರ ಹಿಡಿತಕ್ಕೆ ಎಟುಕದಂತಹ ವಿಷಯ ಎಂಬ ಅರಿವಿಗೆ . . . ನಾವು ಹೋಗಬೇಕು.” ಒಬ್ಬ ರೋಮನ್ ಕ್ಯಾತೊಲಿಕ್ ಲೇಖಕ, ಕ್ರಿಸ್ಟಫರ್ ಡೆರಿಕ್, ಸತ್ಯವನ್ನು ಕಂಡುಹಿಡಿಯುವ ಕುರಿತಾದ ನಕಾರಾತ್ಮಕ ದೃಷ್ಟಿಕೋನಗಳಿಗೆ ಒಂದು ಕಾರಣವನ್ನು ಕೊಡುತ್ತಾರೆ: “ಧಾರ್ಮಿಕ ‘ಸತ್ಯ’ದ ಕುರಿತಾದ ಯಾವುದೇ ಪ್ರಸ್ತಾಪವು ಒಂದು ರೀತಿಯ ತಿಳಿದಿದೆ ಎಂಬ ವಾದವನ್ನು ಸೂಚಿಸುತ್ತದೆ . . . ಯಾರಾದರೂ ಇನ್ನೊಬ್ಬರು ತಪ್ಪಾಗಿರುವುದು ಸಂಭವನೀಯ; ಮತ್ತು ಅದು ಸ್ವೀಕರಣೀಯವಾಗಿಲ್ಲವೆಂದು ನೀವು ಸೂಚಿಸುತ್ತೀರಿ.”
ಆದಾಗಲೂ, ಒಬ್ಬ ಆಲೋಚಿಸುವ ವ್ಯಕ್ತಿಯೋಪಾದಿ, ಕೆಲವು ಸಂಬಂಧಪಟ್ಟ ಪ್ರಶ್ನೆಗಳನ್ನು ಪರಿಗಣಿಸುವುದು ನಿಮಗೆ ಪ್ರಯೋಜನಕಾರಿಯಾಗಿರುವುದು. ಸತ್ಯವು ಅಪ್ರಾಪ್ಯವಾಗಿರುವಲ್ಲಿ, “ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು” ಎಂದು ಯೇಸು ಏಕೆ ಹೇಳುತ್ತಿದ್ದನು? ಮತ್ತು ಯೇಸುವಿನ ಅಪೊಸ್ತಲರಲ್ಲಿ ಒಬ್ಬನು “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿದೆಯೆಂದು ಯಾಕೆ ಹೇಳುತ್ತಿದ್ದನು? ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳಲ್ಲಿ ನಂಬಿಕೆಯ ಸಂಬಂಧದಲ್ಲಿ “ಸತ್ಯ” ಎಂಬ ಶಬ್ದವು ನೂರಕ್ಕಿಂತಲೂ ಹೆಚ್ಚು ಸಲ ಏಕೆ ತೋರಿಬರುತ್ತದೆ? ಹೌದು, ಸತ್ಯವು ಪ್ರಾಪ್ಯವಿಲ್ಲದಿರುವಲ್ಲಿ ಯಾಕೆ?—ಯೋಹಾನ 8:32; 1 ತಿಮೊಥೆಯ 2:3, 4.
ನಿಜವಾಗಿ, ಸತ್ಯವು ಪ್ರಾಪ್ಯ ಎಂಬದನ್ನು ಮಾತ್ರವಲ್ಲದೆ ದೇವರಿಂದ ಮೆಚ್ಚಲ್ಪಡಲು ಅದನ್ನು ಕಂಡುಹಿಡಿಯುವುದು ಆವಶ್ಯಕವೆಂದು ಯೇಸು ತೋರಿಸಿದನು. ಆರಾಧನೆಯ ಯಾವ ರೂಪವು ಸತ್ಯವಾಗಿದೆ—ಯೆರೂಸಲೇಮಿನಲ್ಲಿ ಯೆಹೂದ್ಯರಿಂದ ಆಚರಿಸಲ್ಪಟ್ಟ ಆರಾಧನೆಯೋ ಅಥವಾ ಗೆರೀಜಿಮ್ ಬೆಟ್ಟದಲ್ಲಿ ಸಮಾರ್ಯದವರಿಂದ ಆಚರಿಸಲ್ಪಟ್ಟಂತಹದ್ದೋ—ಎಂದು ಒಬ್ಬ ಸಮಾರ್ಯದ ಸ್ತ್ರೀಯು ಯೋಚಿಸಿದಾಗ, ಸತ್ಯವು ಪ್ರಾಪ್ಯವಿಲ್ಲವೆಂದು ಹೇಳುವ ಮೂಲಕ ಯೇಸು ಉತ್ತರಿಸಲಿಲ್ಲ. ಬದಲಾಗಿ, ಆತನಂದದ್ದು: “ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; . . . ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು ಅಂದನು.”—ಯೋಹಾನ 4:23, 24.
ಅನೇಕ ಜನರು ಸಮರ್ಥಿಸುವುದು, ‘ಬೈಬಲನ್ನು ವಿವಿಧ ರೀತಿಗಳಲ್ಲಿ ಅರ್ಥವಿವರಿಸಸಾಧ್ಯವಿದೆ, ಆದುದರಿಂದ ಸತ್ಯವೇನಾಗಿದೆಯೆಂದು ಯಾವನಿಗೂ ಖಚಿತವಾಗಿರುವ ಸಾಧ್ಯತೆಯೇ ಇಲ್ಲ.’ ಆದರೆ ಅದನ್ನು ಹೇಗೆ ಅರ್ಥೈಸಬೇಕೆಂದು ನೀವು ನಿಶ್ಚಿತರಾಗಿರಲಾರದಷ್ಟು ಅಸ್ಪಷ್ಟ ರೀತಿಯಲ್ಲಿ ಬೈಬಲು ಬರೆಯಲ್ಪಟ್ಟಿದೆಯೋ? ನಿರ್ದಿಷ್ಟ ಪ್ರವಾದನಾ ಮತ್ತು ಸಾಂಕೇತಿಕ ಭಾಷೆಯು ಗ್ರಹಿಸಲು ಕಷ್ಟಕರವೆಂಬುದು ಸಮ್ಮತವೇ. ಉದಾಹರಣೆಗೆ, ಪ್ರವಾದಿಯಾದ ದಾನಿಯೇಲನಿಗೆ, ತುಂಬಾ ಪ್ರವಾದನಾತ್ಮಕ ಭಾಷೆಯು ಒಳಗೂಡಿದ್ದ ತನ್ನ ಪುಸ್ತಕವು, “ಅಂತ್ಯಕಾಲದ” ವರೆಗೆ ಸಂಪೂರ್ಣವಾಗಿ ಅರ್ಥೈಸಲ್ಪಡಲಾರದೆಂದು ದೇವರು ಹೇಳಿದನು. (ದಾನಿಯೇಲ 12:9) ಮತ್ತು ನಿರ್ದಿಷ್ಟ ಸಾಮ್ಯಗಳ ಮತ್ತು ಸಂಕೇತಗಳ ಅರ್ಥವಿವರಿಸುವ ಅಗತ್ಯವಿದೆಯೆಂಬದು ವ್ಯಕ್ತ.
ಆದರೂ, ಸತ್ಯದಲ್ಲಿ ದೇವರನ್ನು ಆರಾಧಿಸಲು ಪ್ರಾಮುಖ್ಯವಾಗಿರುವ ಯಾವುದೇ ಮೂಲ ಕ್ರೈಸ್ತ ಬೋಧನೆಗಳು ಮತ್ತು ನೈತಿಕ ಮೌಲ್ಯಗಳ ವಿಷಯದಲ್ಲಿ, ಬೈಬಲ್ ತುಂಬಾ ನೇರವಾಗಿರುತ್ತದೆಂಬದು ಸ್ಪಷ್ಟ. ಅಸಂಗತವಾದ ಅರ್ಥವಿವರಣೆಗಳನ್ನು ಅದು ಅನುಮತಿಸುವದಿಲ್ಲ. ಎಫೆಸದವರಿಗೆ ಬರೆದ ಪತ್ರದಲ್ಲಿ, ಕ್ರೈಸ್ತ ನಂಬಿಕೆಯನ್ನು “ಒಂದೇ” ಆಗಿ ಮಾತಾಡಲಾಗಿದೆ, ಇದು ಹಲವಾರು ನಂಬಿಕೆಗಳು ಇಲ್ಲವೆಂದು ತೋರಿಸಿತು. (ಎಫೆಸ 4:4-6) ‘ಬೈಬಲನ್ನು ಯೋಗ್ಯವಾಗಿ ಹಲವಾರು ವಿಭಿನ್ನ ರೀತಿಗಳಲ್ಲಿ ಅರ್ಥವಿವರಿಸಲಸಾಧ್ಯವಾಗಿದ್ದಲ್ಲಿ, ಇಷ್ಟೊಂದು ವಿಭಿನ್ನ “ಕ್ರೈಸ್ತ” ಪಂಗಡಗಳು ಯಾಕಿವೆ?’ ಎಂದು ನೀವು ಪ್ರಾಯಶಃ ಸೋಜಿಗಪಡಬಹುದು. ಯೇಸುವಿನ ಅಪೊಸ್ತಲರು ಸತ್ತ ಸ್ವಲ್ಪ ಸಮಯದ ನಂತರ ಮತ್ತು ನಿಜ ಕ್ರೈಸ್ತ ನಂಬಿಕೆಯಿಂದ ಒಂದು ಧರ್ಮಭ್ರಷ್ಟತೆಯು ಬೆಳೆದಿದ್ದ ಸಮಯಕ್ಕೆ ನಾವು ಹಿಂದೆ ನೋಡುವಲ್ಲಿ ನಮಗೆ ಉತ್ತರವು ದೊರಕುತ್ತದೆ.
‘ಗೋದಿ ಮತ್ತು ಹಣಜಿ’
ಯೇಸು, ಗೋದಿ ಮತ್ತು ಹಣಜಿಯ ಕುರಿತಾದ ತನ್ನ ಸಾಮ್ಯದಲ್ಲಿ ಈ ಧರ್ಮಭ್ರಷ್ಟತೆಯನ್ನು ಮುಂತಿಳಿಸಿದನು. “ಗೋದಿ” ನಿಜ ಕ್ರೈಸ್ತರನ್ನು ಪ್ರತಿನಿಧಿಸುತ್ತದೆಂದು ಯೇಸು ತಾನೇ ವಿವರಿಸಿದನು; “ಹಣಜಿ” ಸುಳ್ಳು, ಅಥವಾ ಧರ್ಮಭ್ರಷ್ಟ ಕ್ರೈಸ್ತರನ್ನು ಪ್ರತಿನಿಧಿಸುತ್ತದೆ. “ಜನರು ನಿದ್ರೆಮಾಡುವ ಕಾಲದಲ್ಲಿ” ಒಬ್ಬ “ವೈರಿ”ಯು ಗೋದಿಯ ಹೊಲದಲ್ಲಿ ಹಣಜಿಗಳನ್ನು ಬಿತ್ತುವನೆಂದು ಯೇಸು ಹೇಳಿದನು. ಅಪೊಸ್ತಲರು ಮರಣದಲ್ಲಿ ನಿದ್ರೆಹೋದ ನಂತರ ಈ ಬಿತ್ತುವಿಕೆಯು ಆರಂಭಿಸಿತು. ಸತ್ಯ ಕ್ರೈಸ್ತರೊಂದಿಗೆ ಸುಳ್ಳು ಕ್ರೈಸ್ತರ ಈ ಬೆರೆತುಕೊಂಡಿರುವಿಕೆಯು “ಯುಗದ ಸಮಾಪ್ತಿಯ” ತನಕ ನಡೆಯುವುದೆಂದು ಸಾಮ್ಯವು ತೋರಿಸುತ್ತದೆ. ಹೀಗೆ, ಶತಮಾನಗಳಲ್ಲೆಲ್ಲಾ, ಸತ್ಯ ಕ್ರೈಸ್ತರ ಗುರುತು ಮಸುಕಾಗಿದೆ ಯಾಕಂದರೆ ಕೇವಲ ನಾಮಮಾತ್ರದ ಕ್ರೈಸ್ತರಾಗಿರುವವರಿಂದ ಧಾರ್ಮಿಕ ಕ್ಷೇತ್ರವು ಪ್ರಭಾವಿಸಲ್ಪಟ್ಟಿದೆ. ಹಾಗಿದ್ದರೂ, “ಯುಗದ ಸಮಾಪ್ತಿ” ಯಲ್ಲಿ ಒಂದು ಬದಲಾವಣೆಯು ನಡೆಯಲಿತ್ತು. ನಿಜ ಕ್ರೈಸ್ತರಿಂದ ಸುಳ್ಳು ಕ್ರೈಸ್ತರನ್ನು ವಿಂಗಡಿಸಲು “ಮನುಷ್ಯ ಕುಮಾರನು ತನ್ನ ದೂತರನ್ನು ಕಳುಹಿಸುವನು.” ಆಗ, ಅಪೊಸ್ತಲರ ಸಮಯದಲ್ಲಿ ಅದಕ್ಕಿದ್ದ ಅಂತಸ್ತೇ ಇರುವದರಿಂದ, ಕ್ರೈಸ ಸಭೆಯನ್ನು ಗುರುತಿಸಲು ಸುಲಭವಾಗಿರುವುದೆಂದು ಇದರ ಅರ್ಥವಾಗಿತ್ತು.—ಮತ್ತಾಯ 13:24-30; 36-43.
ಯೆಶಾಯನ ಹಾಗೂ ಮೀಕನ, ಇಬ್ಬರ ಪ್ರವಾದನೆಗಳು “ಅಂತ್ಯಕಾಲದಲ್ಲಿ” ಸತ್ಯ ಆರಾಧಕರ ಅಂತಹ ಒಂದು ಪುನಃ ಒಟ್ಟುಗೂಡಿಸುವಿಕೆಯ ಕುರಿತಾಗಿ ಮುಂತಿಳಿಸುತ್ತವೆ. ಯೆಶಾಯನು ಹೇಳುವುದು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು. ಏಕಂದರೆ ಚೀಯೋನಿನಿಂದ ಧರ್ಮೋಪದೇಶವೂ ಯೆರೂಸಲೇಮಿನಿಂದ ಯೆಹೋವನ ವಾಕ್ಯವೂ ಹೊರಡುವವು.” ವಾಸ್ತವಿಕತೆಗಳ ಕಡೆಗಿನ ಒಂದು ಪರಿಶೀಲನಾತ್ಮಕ ನೋಟವು, ಯೆಶಾಯನ ಪ್ರವಾದನೆಯು ನಮ್ಮ ಸಮಯದಲ್ಲಿ ನೆರವೇರುತ್ತಿದೆಯೆಂಬದನ್ನು ತೋರಿಸುತ್ತದೆ.—ಯೆಶಾಯ 2:2, 3; ಮೀಕ 4:1-3.
ಕ್ರೈಸ್ತ ಸಭೆಯ ಬೆಳವಣಿಗೆಯಾದರೋ, ಯಾವ ಮಾನವ ಪ್ರಯತ್ನದಿಂದಲೂ ಸಂಭವಿಸುತ್ತಿಲ್ಲ. ಒಂದು ಒಟ್ಟುಗೂಡಿಸುವಿಕೆಯ ಕೆಲಸವನ್ನು ಮಾಡಲು “ತನ್ನ ದೂತರನ್ನು ಕಳುಹಿಸು”ವೆನೆಂದು ಯೇಸು ಮುಂತಿಳಿಸಿದನು. ಅದಕ್ಕಾಗಿ ಒಂದು ಅತಿ ವಿಶೇಷವಾದ ಉದ್ದೇಶವನ್ನೂ ಆತನು ಸೂಚಿಸಿದನು: “ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು.” (ಮತ್ತಾಯ 13:43) ಕ್ರೈಸ್ತ ಸಭೆಯಿಂದ ಲೋಕವ್ಯಾಪಕವಾಗಿ ಒಂದು ಜ್ಞಾನೋದಯದ, ಅಥವಾ ಶೈಕ್ಷಣಿಕ, ಕೆಲಸವು ನಡಿಸಲ್ಪಡುವುದೆಂದು ಇದು ತೋರಿಸುತ್ತದೆ.
ಇಂದು 232 ದೇಶಗಳಲ್ಲಿ ಅವರು ನಡಿಸುತ್ತಿರುವ ಶೈಕ್ಷಣಿಕ ಕೆಲಸದಲ್ಲಿ ಯೆಹೋವನ ಸಾಕ್ಷಿಗಳು ಈ ಪ್ರವಾದನೆಗಳ ಒಂದು ನೆರವೇರಿಕೆಯನ್ನು ಕಾಣುತ್ತಾರೆ. ಸಾಕ್ಷಿಗಳ ನಂಬಿಕೆಗಳು, ನಡತೆಯ ಮಟ್ಟಗಳು, ಮತ್ತು ಸಂಸ್ಥೆಯನ್ನು ಬೈಬಲಿನೊಂದಿಗೆ ಹೋಲಿಸುವ ಮೂಲಕ, ಇವು ಪ್ರಥಮ ಶತಮಾನದ ಕ್ರೈಸ್ತ ಸಭೆಯೊಂದಿಗೆ ಹೊಂದಿಕೆಯಲ್ಲಿವೆಯೆಂದು, ಮುನ್ನೊಲವು ಇಲ್ಲದ ಜನರು ಸ್ಪಷ್ಟವಾಗಿಗಿ ಕಾಣುತ್ತಾರೆ. ಸಾಕ್ಷಿಗಳು ತಮ್ಮ ನಂಬಿಕೆಯನ್ನು “ಸತ್ಯ”ವೆಂದು ಹೇಳುತ್ತಾರೆ ಆದರೆ ಇದು ವೈಯಕ್ತಿಕ ಶ್ರೇಷ್ಠತೆಯ ದುರಹಂಕಾರದಿಂದಲ್ಲ. ಬದಲಿಗೆ, ಅವರು ಹೀಗೆ ಹೇಳುತ್ತಾರೆ ಯಾಕಂದರೆ ದೇವರ ವಾಕ್ಯವಾದ ಬೈಬಲನ್ನು ವ್ಯಾಪಕವಾಗಿ ಅಭ್ಯಸಿಸಿದ್ದಾರೆ ಮತ್ತು ಧರ್ಮವನ್ನು ಯೋಗ್ಯವಾಗಿ ಅಳತೆಮಾಡುವ ಏಕಮಾತ್ರ ಮಟ್ಟವಾಗಿ ಅವರು ಅದನ್ನು ಅನುಸರಿಸುತ್ತಾರೆ.
ಆದಿ ಕ್ರೈಸ್ತರು ತಮ್ಮ ನಂಬಿಕೆಯನ್ನು “ಸತ್ಯ” ವೆಂದು ಸೂಚಿಸಿದರು. (1 ತಿಮೊಥೆಯ 3:15; 2 ಪೇತ್ರ 2:2; 2 ಯೋಹಾನ 1) ಅವರಿಗೆ ಯಾವುದು ಸತ್ಯವಾಗಿತ್ತೋ ಅದು ಇಂದು ನಮಗೂ ಸತ್ಯವಾಗಿರಬೇಕು. ಬೈಬಲನ್ನು ಅಭ್ಯಸಿಸುವ ಮೂಲಕ ತಾವೇ ಇದನ್ನು ನಿಶ್ಚಿತಗೊಳಿಸುವಂತೆ ಯೆಹೋವನ ಸಾಕ್ಷಿಗಳು ಎಲ್ಲರನ್ನು ಆಮಂತ್ರಿಸುತ್ತಾರೆ. ಹಾಗೆ ಮಾಡುವದರಿಂದ, ಬೇರೆಯವುಗಳನ್ನು ಮೀರಿಸುವ ಧರ್ಮವನ್ನು ಮಾತ್ರವಲ್ಲ ಸತ್ಯವನ್ನು ಕಂಡುಹಿಡಿದಿದರ್ದಿಂದ ಬರುವ ಆನಂದವನ್ನು ನೀವೂ ಅನುಭವಿಸುವಿರೆಂದು ನಾವು ನಿರೀಕ್ಷಿಸುತ್ತೇವೆ!
[ಪುಟ 5 ರಲ್ಲಿರುವ ಚೌಕ]
ಸತ್ಯಕ್ಕೆ ವಿರುದ್ಧವಾದ ಕೆಲವು ತತ್ವಜ್ಞಾನಗಳು
ದೃಷ್ಟಪ್ರಮಾಣವಾದ (ಪಾಸಿಟಿವಿಸ್‌ಮ್): ಒಂದು ಧಾರ್ಮಿಕ ಸ್ವಭಾವದ ಎಲ್ಲಾ ಅಭಿಪ್ರಾಯಗಳು ದೃಢಪಡಿಸಲಾಗದ ಅರ್ಥವಿಲ್ಲದ ಕಲ್ಪನೆಗಳಾಗಿವೆ ಮತ್ತು ತತ್ವಜ್ಞಾನದ ಉದ್ದೇಶವು ಸಕಾರಾತ್ಮಕ ವಿಜ್ಞಾನಗಳನ್ನು ಒಂದು ಇಡೀಯನ್ನಾಗಿ ಮಾಡುವುದಾಗಿದೆ ಎಂಬ ವೀಕ್ಷಣ.
ಅಸ್ತಿತ್ವ ವಿಶ್ಲೇಷಣವಾದ (ಎಕ್ಸಿಸೆನ್ಟಲ್ಷಿಸಮ್): ಅದರ ಸಮರ್ಥಕರು IIನೇ ಲೋಕ ಯುದ್ಧದ ಭಯಂಕರತೆಯಿಂದ ಅತಿಯಾಗಿ ಪ್ರಭಾವಿಸಲ್ಪಟ್ಟಿದ್ದರು ಮತ್ತು ಈ ಕಾರಣದಿಂದ ಜೀವನದ ಕುರಿತಾದ ಒಂದು ಕೇಡು ನೋಟವನ್ನು ಹೊಂದಿದವರಾದರು. ಮರಣ ಮತ್ತು ಜೀವಿತದ ಶೂನ್ಯತೆಯ ಎದುರಿನಲ್ಲಿ ಮಾನವನ ಸಂಕಟವನ್ನು ಪರೀಕ್ಷಿಸುವದನ್ನು ಅದು ಒತ್ತಿ ಹೇಳುತ್ತದೆ. ಎಕ್ಸಿಸ್ಟೆನ್ಷಲಿಸ್ಟ್ ಲೇಖಕ ಜಾನ್ ಪಾಲ್ ಸಾರ್ಟ್ರ ಹೇಳಿದ್ದೇನಂದರೆ, ದೇವರಿಲ್ಲದಿರುವದರಿಂದ, ಮಾನವನು ತೊರೆಯಲ್ಪಟ್ಟಿದ್ದಾನೆ ಮತ್ತು ಸಮಗ್ರವಾಗಿ ಉದಾಸೀನವಾಗಿರುವ ಒಂದು ವಿಶ್ವದಲ್ಲಿ ಅಸ್ತಿತ್ವದಲ್ಲಿದ್ದಾನೆ.
ಅಜ್ಞೇಯತಾವಾದ (ಸ್ಕೆಪಿಸ್ಟಿಸ್‌ಮ್): ಅವಲೋಕನೆ ಮತ್ತು ವಿವೇಚನೆಯಿಂದ ಅಸ್ತಿತ್ವದ ಕುರಿತಾದ ಯಾವುದೇ ಗುರಿ, ಸಾರ್ವತ್ರಿಕ ಜ್ಞಾನ—ಯಾವುದೇ ಸತ್ಯ—ವನ್ನು ತಲಪುವುದು ಅಸಾಧ್ಯವೆಂದು ಹೇಳುತ್ತದೆ.
ಫಲಪ್ರಮಾಣವಾದ (ಪ್ರ್ಯಾಗ್‌ಮ್ಯಾಟಿಸಮ್): ಶಿಕ್ಷಣ, ಮೌಲ್ಯಗಳು, ಮತ್ತು ರಾಜಕೀಯಗಳನ್ನು ಪುನರ್‌ರಚಿಸುವಂತಹ ಮಾನವ ಅಭಿರುಚಿಗಳಲ್ಲಿ ಅವುಗಳ ಪ್ರಾಯೋಗಿಕ ಸಂಬಂಧದಿಂದ ಮಾತ್ರ ನಮ್ಮ ಮನವರಿಕೆಗಳ ನಿಜ ಮೌಲ್ಯವನ್ನು ಎಣಿಸುತ್ತದೆ. ಸತ್ಯಕ್ಕೆ ತನ್ನದೇ ಆದ ಒಂದು ಮೌಲ್ಯವಿದೆಯೆಂಬದನ್ನು ಅದು ಪರಿಗಣಿಸುವದಿಲ್ಲ.
[ಪುಟ 2 ರಲ್ಲಿರುವ ಚಿತ್ರ ಕೃಪೆ]
Page 3: Second from left: Courtesy of The British Museum; Right: Sung Kyun Kwan University, Seoul, Korea