ಲೋಕದ ಸುತ್ತಲೂ ಯೆಹೋವನ ಸಾಕ್ಷಿಗಳು—ಪೋಲೆಂಡ್
1989ರ ಮಾಗಿ ಕಾಲದಲ್ಲಿ, ಬಾಲಿಕ್ಟ್ನಿಂದ ಹಿಡಿದು ಕಪ್ಪು ಸಮುದ್ರದ ವರೆಗಿದ್ದ ಕಮ್ಯೂನಿಸ್ಟ್ ಸರಕಾರಗಳು ಬೀಳಲಾರಂಭಿಸಿದವು. ಕಬ್ಬಿಣದ ಪರದೆಯು ಇಬ್ಭಾಗವಾಗಿ ಬೇರ್ಪಡಿಸಲ್ಪಟ್ಟಂತೆ, ಪೂರ್ವ ಯೂರೋಪ್ನಲ್ಲಿದ್ದ ರಾಷ್ಟ್ರಗಳು ತಮ್ಮ ಸ್ವಂತ ಸ್ವತಂತ್ರ ದಿಕ್ಕುಗಳನ್ನು ಹುಡುಕಲಾರಂಭಿಸಿದವು. ಅವುಗಳಲ್ಲಿ, ಏರು ತಗ್ಗಿನ ಗುಡ್ಡಗಳು, ಸಮತಲ ಬಯಲುಗಳು ಮತ್ತು ಒಡ್ಡೊಡ್ಡಾದ ಪರ್ವತಗಳಿಂದ ಆವರಿಸಲ್ಪಟ್ಟ ದೇಶವಾದ ಪೋಲೆಂಡ್ ಒಂದಾಗಿತ್ತು.a
ಪೋಲಿಷ್ ಜನರು ಕಷ್ಟಪಟ್ಟು ಕೆಲಸಮಾಡುವವರಾಗಿದ್ದಾರೆ, ಮತ್ತು ಲೋಕದ ಪ್ರಖ್ಯಾತ ಕಲಾವಿದರಲ್ಲಿ ಮತ್ತು ವಿಜ್ಞಾನಿಗಳಲ್ಲಿ ಕೆಲವರನ್ನು ಪೋಲೆಂಡ್ ದೇಶವು ಉತ್ಪಾದಿಸಿದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ, ಈಗ ಅಲ್ಲಿ ದೇವರ ರಾಜ್ಯದ ಸುವಾರ್ತೆಯ ಘೋಷಕರ ಬೆಳೆಯುತ್ತಿರುವ ಒಂದು ಸಮೂಹವಿದೆ.
ಅಸತ್ಯವನ್ನು ಬಯಲುಪಡಿಸುವುದರಲ್ಲಿ ಧೀರರು
ಪೋಲೆಂಡ್ನಲ್ಲಿ, ಬೈಬಲಿನಿಂದ ಸತ್ಯವನ್ನು ಕಲಿಯಲು ಇಷ್ಟಪಡುವವರು ಅನೇಕರಿದ್ದಾರೆ. ಆದರೆ ಕೆಲವರು ತಮ್ಮ ಸಂಬಂಧಿಕರಿಂದ ಯಾ ನೆರೆಯವರಿಂದ ಧೈರ್ಯಗುಂದಿಸಲ್ಪಡುತ್ತಾರೆ. ಉದಾಹರಣೆಗೆ, ವ್ರಾಟ್ಸ್ಲಾಫ್ನ ಪರಿಸರದಲ್ಲಿ, ಒಬ್ಬ ಆಸಕ್ತ ಹೆಂಗಸು, ಆಕೆಯ ಮೇಲೆ ಕುಟುಂಬ ಮತ್ತು ಮಿತ್ರರು ಒತ್ತಡವನ್ನು ಹಾಕಿದಾಗ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಭ್ಯಸಿಸುವುದನ್ನು ನಿಲ್ಲಿಸಿದಳು. ಆದರೂ, ಆಕೆಯ ಹದಿವಯಸ್ಕ ಮಗಳು, ಸುಳ್ಳು ಧರ್ಮವನ್ನು ಬಯಲುಪಡಿಸುವ ಕಾವಲಿನಬುರುಜು ಲೇಖನಗಳ ಒಂದು ಸರಣಿಯನ್ನು ಓದಿದಳು. ಇವು ಸತ್ಯದ ಕಡೆಗಿದ್ದ ಆಕೆಯ ಅಭಿರುಚಿಯನ್ನು ಕೆರಳಿಸಿದವು.
ಆರು ತಿಂಗಳುಗಳ ಬೈಬಲ್ ಅಧ್ಯಯನದ ಬಳಿಕ, ಈ ಯುವತಿಯು ಸುಳ್ಳು ಧರ್ಮದೊಂದಿಗಿದ್ದ ತನ್ನ ಎಲ್ಲ ಸಂಬಂಧಗಳನ್ನು ಮುರಿದು ಹಾಕಲು ನಿರ್ಧರಿಸಿದಳು. ತನ್ನ ನಿರ್ಧಾರದ ಕುರಿತು ತಿಳಿಸಲು ಆಕೆ ತನ್ನ ಚರ್ಚಿನ ಪಾದ್ರಿಯನ್ನು ಭೇಟಿಯಾದಳು. ಈ ಮುಂದಿನ ಸಾಲನ್ನು ಬರೆಯುವಂತೆ ಅವನು ಆಕೆಗೆ ಹೇಳಿದನು: “ನಾನು, ಕೆ—— ಪಿ——, ಕ್ಯಾತೊಲಿಕ್ ನಂಬಿಕೆಯನ್ನು ತ್ಯಜಿಸುತ್ತೇನೆ.”
ಮುಂದಿನ ಆದಿತ್ಯವಾರದಂದು, ಈ ಹೇಳಿಕೆಯು ಚರ್ಚಿನಲ್ಲಿ ಓದಲ್ಪಟ್ಟಿತು. ಹುಡುಗಿಯ ಅಜ್ಜನು ಮೂರ್ಛೆಹೋದನು, ಮತ್ತು ಆಕೆಯ ಅಜ್ಜಿ ಜೋರಾಗಿ ಅಳಲಾರಂಭಿಸಿದಳು. ಹಾಗಿದ್ದರೂ, ಚರ್ಚಿನ ಇತರ ಸದಸ್ಯರು ಪ್ರಭಾವಿತರಾದರು ಮತ್ತು ಹೀಗೆ ಹೇಳಿದರು: “ಕಟ್ಟಕಡೆಗೆ, ನಮ್ಮ ಚರ್ಚಿನಲ್ಲಿ ಬಹಳ ಅಸತ್ಯವಿದೆ ಎಂದು ಹೇಳುವಷ್ಟು ಧೈರ್ಯವಂತರು ಯಾರೋ ಒಬ್ಬರಿದ್ದಾರೆ.” ಈ ಧೈರ್ಯವಂತ ಹದಿವಯಸ್ಕಳು ಈಗ ದೀಕ್ಷಾಸ್ನಾನ ಪಡೆದ ಒಬ್ಬಾಕೆ ಆತ್ಮಿಕ ಸಹೋದರಿಯಾಗಿದ್ದಾಳೆ ಮತ್ತು ತನ್ನ ಹಳ್ಳಿಯಲ್ಲಿ ಏಳು ಬೈಬಲ್ ಅಧ್ಯಯನಗಳನ್ನು ಆರಂಭಿಸಿದ್ದಾಳೆ.
‘ಅವರ ಫಲಗಳಿಂದ’
ಕೂಯಾವೆ ಈ ಪಾಮಾಜೆ ಎಂಬ ವಾರ ಪತ್ರಿಕೆಯು, “ಅವರ ಫಲದಿಂದ ನೀವು ಅವರನ್ನು ಗುರುತಿಸುವಿರಿ” ಎಂಬ ವರದಿಯನ್ನು ಪ್ರಕಟಿಸಿತು. ಕ್ರೈಸ್ತಪ್ರಪಂಚದಲ್ಲಿರುವ ಆರಾಧಕರು, “ವಾಸ್ತವದಲ್ಲಿ ತಾವು ಸ್ವೀಕರಿಸಿರುವ ಧಾರ್ಮಿಕ ತತ್ವಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವುದಿಲ್ಲ. ಕ್ರೈಸ್ತಪ್ರಪಂಚದ ಆರಾಧಕರ ಮತ್ತು ನುಡಿದಂತೆ ವರ್ತಿಸುವ—ಮತ್ತು ಅವರು ಬೈಬಲ್ ಆಜ್ಞಾಪಿಸುವುದನ್ನು ನುಡಿಯುತ್ತಾರೆ—ಯೆಹೋವನ ಸಾಕ್ಷಿಗಳ ನಡುವೆ ಮಹಾ ವೈದೃಶ್ಯವಿದೆ” ಎಂದು ಲೇಖನವು ಆಂಶಿಕವಾಗಿ ಹೇಳಿತು.
ನಾಮಮಾತ್ರದ ಕ್ರೈಸ್ತರಿಂದ ಸಾಕ್ಷಿಗಳ ತೋರಿಕೆಯನ್ನು ವೈದೃಶ್ಯಗೊಳಿಸಿದ ಬಳಿಕ, ವರದಿಯು ಮುಂದುವರಿಸಿದ್ದು: “ನಾಮಮಾತ್ರದ ಕ್ರೈಸ್ತರಿಗೆ ತಮ್ಮ ನಂಬಿಕೆಯ ಅಗತ್ಯವಾದ ಸತ್ಯಗಳು ಮತ್ತು ತತ್ವಗಳು ಬಹುಶಃ ತಿಳಿದಿರುವುದಿಲ್ಲ, ಮತ್ತು ಅನೇಕ ವೇಳೆ ಅವುಗಳನ್ನು ಅನ್ವಯಿಸುವುದಿಲ್ಲ. . . . ತಮ್ಮ ಮನೋಭಾವದಿಂದ, ಯೆಹೋವನ ಸಾಕ್ಷಿಗಳು ತಮ್ಮ ಮಾತುಗಳ ಹಾಗೂ ಕ್ರಿಯೆಗಳ ಹೊಂದಾಣಿಕೆಯನ್ನು ಪ್ರದರ್ಶಿಸುತ್ತಾರೆ, ಹೀಗೆ ಅವರು ‘ಸುಳ್ಳು ಪ್ರವಾದಿಗಳು’ ಅಲ್ಲವೆಂದು, ತಮ್ಮ ಫಲಗಳಿಂದ ಅವರನ್ನು ಗುರುತಿಸಸಾಧ್ಯವಿದೆ ಎಂದು ಅವರು ರುಜುಪಡಿಸುತ್ತಾರೆ. ‘ಜನರು ಮುಳ್ಳುಗಳಿಂದ ದ್ರಾಕ್ಷೇಹಣ್ಣುಗಳನ್ನು ಯಾ ಮದ್ದುಗುಣಿಕೇಗಿಡಗಳಿಂದ ಅಂಜೂರಗಳನ್ನು ಎಂದೂ ಕೊಯ್ಯುವುದಿಲ್ಲ, ಅಲ್ಲವೇ?’ (ಮತ್ತಾಯ 7:15-20).”
ತನ್ನ ಮಗನು ಕ್ಯಾತೊಲಿಕ್ ಧರ್ಮವನ್ನು ಬಿಟ್ಟು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದಾನೆಂಬುದರ ಕುರಿತು ಪ್ರಲಾಪಿಸುತ್ತಾ, ಷ್ಚೀಆಚೂಕ್ ಎಂಬ ವಾರ ಪತ್ರಿಕೆಗೆ ಒಬ್ಬಾಕೆ ಹೆಂಗಸು ಒಂದು ಪತ್ರವನ್ನು ಬರೆದಳು. ಸಂಪಾದಕಿಯ ಬುದ್ಧಿವಾದವು ಏನಾಗಿತ್ತು? “ನಿನ್ನ ಮಗನು ಯೆಹೋವನ ಸಾಕ್ಷಿಗಳೊಂದಿಗೆ ಸೇರಿದವನಾದರೆ, ಅವರ ನಂಬಿಕೆಯ ಕುರಿತು ಕಲಿತು ಅದನ್ನು ಸ್ವೀಕರಿಸಿದರೆ, ಅದೆಲ್ಲವೂ ಅವನ ಸ್ವಂತ ನಿರ್ಣಯವಾಗಿದೆ, ಮತ್ತು ಆ ನಿರ್ಣಯವು ಗುರುತಿಸಲ್ಪಡಬೇಕು ಹಾಗೂ ಗೌರವಿಸಲ್ಪಡಬೇಕು. . . . ಈ ಧಾರ್ಮಿಕ ಗುಂಪು, ಅವರ ಅಸಾಮಾನ್ಯವಾದ ಐಕಮತ್ಯ ಮತ್ತು ಗಾಢವಾದ ಗುಂಪಿನ ಬಂಧಗಳು, ಮಹಾ ಪ್ರಾಮಾಣಿಕತೆ ಮತ್ತು ಸಮುದಾಯ ಜೀವಿತದ ಸ್ವೀಕೃತ ನಿಯಮಗಳ ನಿಕಟವಾದ ಅನುಕರಣೆ, ಮತ್ತು ಕೊನೆಯದಾಗಿ, ಸತ್ಯದೊಂದಿಗೆ ಹೊಂದಾಣಿಕೆಯಲ್ಲಿ ಜೀವಿಸುವ ಸಾಮರ್ಥ್ಯ, ಹೇಳಿಕೊಳ್ಳುವ ಮೌಲ್ಯಗಳನ್ನು ನಿಜವಾಗಿಯೂ ಆಚರಿಸುವುದು—ಇಂತಹ ಅನೇಕ ಸುಂದರವಾದ ಮತ್ತು ಸಾಮಾಜಿಕವಾಗಿ ಅಪೇಕ್ಷಣೀಯವಾಗಿರುವ ಗುಣಲಕ್ಷಣಗಳಿಂದ ಗುರುತಿಸಲ್ಪಡುತ್ತದೆ. ಇವು ಅಮೂಲ್ಯವಾದ ಸದ್ಗುಣಗಳಾಗಿವೆ.”
[ಅಧ್ಯಯನ ಪ್ರಶ್ನೆಗಳು]
a ಹೆಚ್ಚಿನ ಮಾಹಿತಿಗಾಗಿ, 1994 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ ನೋಡಿರಿ.
[ಪುಟ 9 ರಲ್ಲಿರುವ ಚೌಕ]
ದೇಶದ ಪಾರ್ಶ್ವದೃಶ್ಯ
1993ರ ಸೇವಾ ವರ್ಷ
ಸಾಕ್ಷಿನೀಡುತ್ತಿರುವವರ ಉಚ್ಚಾಂಕ: 1,13,551
ಪ್ರಮಾಣ: 1 ಸಾಕ್ಷಿಗೆ 339
ಜ್ಞಾಪಕ ಹಾಜರಿ: 2,35,642
ಸರಾಸರಿ ಪಯನೀಯರ್ ಪ್ರಚಾರಕರು: 7,961
ಸರಾಸರಿ ಬೈಬಲ್ ಅಧ್ಯಯನಗಳು: 79,131
ದೀಕ್ಷಾಸ್ನಾನ ಪಡೆದವರು: 8,164
ಸಭೆಗಳ ಸಂಖ್ಯೆ: 1,397
ಬ್ರಾಂಚ್ ಆಫೀಸ್: ನಾಡಾಜಿನ್
[ಪುಟ 9 ರಲ್ಲಿರುವ ಚಿತ್ರ]
1948 ರಲ್ಲಿ, ಲೂಜ್ನಲ್ಲಿ ಪೋಲೆಂಡ್ ಬ್ರಾಂಚ್ ಆಫೀಸು
[ಪುಟ 9 ರಲ್ಲಿರುವ ಚಿತ್ರ]
ಹಿಂದಿನ ಪೂರ್ವ ಪ್ರಷ್ಯದಲ್ಲಿ, ಪ್ಲ್ಯಾಕಾರ್ಡ್ ಕೆಲಸ, ಜೂನ್ 1948
[ಪುಟ 9 ರಲ್ಲಿರುವ ಚಿತ್ರ]
ಪೋಲೆಂಡ್ ಬೆತೆಲ್ ಸಿಬ್ಬಂದಿಯ ಎಪ್ಪತ್ತೆರಡು ಸದಸ್ಯರು, ಜನವರಿ 1993
[ಪುಟ 9 ರಲ್ಲಿರುವ ಚಿತ್ರ]
ನಾಡಾಜಿನ್ ನಲ್ಲಿರುವ ಹೊಸ ಬ್ರಾಂಚ್