ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w94 11/15 ಪು. 4-7
  • ಮೃತರು ಎಲ್ಲಿದ್ದಾರೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೃತರು ಎಲ್ಲಿದ್ದಾರೆ?
  • ಕಾವಲಿನಬುರುಜು—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯಾರು ಸ್ವರ್ಗಕ್ಕೆ ಹೋಗುತ್ತಾರೆ?
  • ಸ್ವರ್ಗಕ್ಕೆ ಹೋಗದವರು
  • ಮರಣದಲ್ಲಿ ನಿದ್ರಿಸುವದು
  • ನಮ್ಮ ಪೂರ್ವಜರಿಗಾಗಿ ಒಂದು ಹೊಸ ಜೀವನ
    ಕಾವಲಿನಬುರುಜು—1995
  • ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • ಮೃತರಾದ ನಿಮ್ಮ ಪ್ರಿಯರು ನೀವು ಅವರನ್ನು ಪುನಃ ನೋಡುವಿರೊ?
    ಕಾವಲಿನಬುರುಜು—1994
  • ಏಕೈಕ ಪರಿಹಾರ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಕಾವಲಿನಬುರುಜು—1994
w94 11/15 ಪು. 4-7

ಮೃತರು ಎಲ್ಲಿದ್ದಾರೆ?

“ಭೂಮಿಯು ಒಂದು ಮಾರುಕಟ್ಟೆಯಾಗಿದೆ; ಸ್ವರ್ಗ ನಮ್ಮ ಮನೆಯಾಗಿದೆ,” ಎಂದು ಪಶ್ಚಿಮ ಆಫ್ರಿಕದ ಯೊರಬರು ಹೇಳುತ್ತಾರೆ. ಈ ಅಭಿಪ್ರಾಯವು ಹಲವಾರು ಧರ್ಮಗಳಲ್ಲಿ ಪ್ರತಿಧ್ವನಿಸಲ್ಪಟ್ಟಿದೆ. ಭೂಮಿಯು, ನಾವು ಸ್ವಲ್ಪಕಾಲಕ್ಕಾಗಿ ಭೇಟಿನೀಡುವ ಮತ್ತು ಅನಂತರ ಹೊರಟುಹೋಗುವ ಒಂದು ಮಾರುಕಟ್ಟೆಯಂತಿದೆ ಎಂಬ ಭಾವನೆಯನ್ನು ಅದು ಕೊಡುತ್ತದೆ. ಈ ನಂಬಿಕೆಗನುಸಾರ, ನಾವು ಸಾಯುವಾಗ ನಮ್ಮ ನಿಜವಾದ ನಿವಾಸಸ್ಥಾನವಾದ ಸ್ವರ್ಗಕ್ಕೆ ನಾವು ಹೋಗುತ್ತೇವೆ.

ಕೆಲವರು ಸ್ವರ್ಗಕ್ಕೆ ಹೋಗುವರೆಂಬದಾಗಿ ಬೈಬಲು ನಿಶ್ಚಯ ಕಲಿಸುತ್ತದೆ. ಯೇಸು ಕ್ರಿಸ್ತನು ತನ್ನ ನಂಬಿಗಸ್ತ ಅಪೊಸ್ತಲರಿಗೆ ಅಂದದ್ದು: “ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು ಅವೆ; . . . ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.”—ಯೋಹಾನ 14:2, 3.

ಎಲ್ಲಾ ಒಳ್ಳೇ ಜನರು ಸ್ವರ್ಗಕ್ಕೆ ಹೋಗುವರು ಅಥವಾ ಸ್ವರ್ಗವು ಮಾನವಕುಲದ ಮನೆಯಾಗಿದೆ ಎಂದು ಯೇಸುವಿನ ಮಾತುಗಳ ಅರ್ಥವಾಗಿರುವದಿಲ್ಲ. ಭೂಮಿಯ ಮೇಲಿನ ಆಳಿಕೆಯ ಸಂಬಂಧದಲ್ಲಿ ಕೆಲವರನ್ನು ಸ್ವರ್ಗಕ್ಕೆ ಕೊಂಡೊಯ್ಯಲಾಗುತ್ತದೆ. ಮಾನವ ಸರಕಾರಗಳು ಭೂಮಿಯ ಮೇಲಿನ ವ್ಯವಹಾರಗಳನ್ನು ಎಂದೂ ಯಶಸ್ವಿಯಾಗಿ ನಿರ್ವಹಿಸಲಾರವು ಎಂದು ಯೆಹೋವ ದೇವರಿಗೆ ತಿಳಿದಿತ್ತು. ಆದುದರಿಂದ, ಕಟ್ಟಕಡೆಗೆ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುವ ಮತ್ತು ಆತನು ಆರಂಭದಲ್ಲಿ ಅದು ಆಗಿರಬೇಕೆಂದು ಉದ್ದೇಶಿಸಿದ ಪ್ರಮೋದವನವಾಗಿ ಪರಿವರ್ತಿಸಲಿರುವ ಒಂದು ಸ್ವರ್ಗೀಯ ಸರಕಾರ, ಅಥವಾ ರಾಜ್ಯಕ್ಕಾಗಿ ಏರ್ಪಡಿಸಿದನು. (ಮತ್ತಾಯ 6:9, 10) ದೇವರ ರಾಜ್ಯದ ಅರಸನು ಯೇಸುವಾಗಿರುವನು. (ದಾನಿಯೇಲ 7:13, 14) ಆತನೊಂದಿಗೆ ಆಳಲು ಮಾನವಕುಲದಿಂದ ಇತರರು ಆರಿಸಲ್ಪಡಲಿದ್ದರು. ಸ್ವರ್ಗಕ್ಕೆ ಕೊಂಡೊಯ್ಯಲ್ಪಡುವವರು “ನಮ್ಮ ದೇವರಿಗೋಸ್ಕರ ಒಂದು ರಾಜ್ಯ ಮತ್ತು ಯಾಜಕರು” ಆಗಿರುವರು ಮತ್ತು “ಭೂಮಿಯ ಮೇಲೆ ರಾಜರಾಗಿ ಆಳುವರು” ಎಂದು ಬೈಬಲು ಮುಂತಿಳಿಸಿತ್ತು.—ಪ್ರಕಟನೆ 5:10, NW.

ಯಾರು ಸ್ವರ್ಗಕ್ಕೆ ಹೋಗುತ್ತಾರೆ?

ಈ ಸ್ವರ್ಗೀಯ ಅಧಿಪತಿಗಳಿಗೆ ಇರಲಿರುವ ಮಹತ್ತಾದ ಜವಾಬ್ದಾರಿಯನ್ನು ಪರಿಗಣಿಸುವಾಗ, ಅವರಿಗೆ ಕಟ್ಟುನಿಟ್ಟಾದ ಆವಶ್ಯಕತೆಗಳನ್ನು ಮುಟ್ಟಲಿಕ್ಕಿದೆ ಎಂಬದು ಆಶ್ಚರ್ಯಜನಕವಲ್ಲ. ಸ್ವರ್ಗಕ್ಕೆ ಹೋಗುವವರಿಗೆ ಯೆಹೋವನ ಕುರಿತಾಗಿ ನಿಷ್ಕೃಷ್ಟ ಜ್ಞಾನವಿರಬೇಕು ಮತ್ತು ಆತನಿಗೆ ವಿಧೇಯರಾಗಿರಲೇಬೇಕು. (ಯೋಹಾನ 17:3; ರೋಮಾಪುರ 6:17, 18) ಅವರು ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೇಲೆ ನಂಬಿಕೆಯನ್ನು ಇಡುವಂತೆ ಅವಶ್ಯಪಡಿಸಲ್ಪಡುತ್ತಾರೆ. (ಯೋಹಾನ 3:16) ಆದರೂ, ಹೆಚ್ಚಿನದು ಒಳಗೂಡಿದೆ. ಅವರು ದೇವರಿಂದ ಆತನ ಪುತ್ರನ ಮೂಲಕ ಕರೆಯಲ್ಪಟ್ಟು ಆರಿಸಲ್ಪಡಬೇಕು. (2 ತಿಮೊಥೆಯ 1:9, 10; 1 ಪೇತ್ರ 2:9) ಅದೂ ಅಲ್ಲದೆ, ಅವರು ದೇವರ ಪವಿತ್ರಾತ್ಮದಿಂದ ಹುಟ್ಟಿರುವ, ‘ಹೊಸದಾಗಿ ಹುಟ್ಟಿರುವ’ ದೀಕ್ಷಾಸ್ನಾನ ಹೊಂದಿರುವ ಕ್ರೈಸ್ತರಾಗಿರಬೇಕು. (ಯೋಹಾನ 1:12, 13; 3:3-6) ಅವರು ಮರಣದ ತನಕ ದೇವರೆಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಅಗತ್ಯವೂ ಇದೆ.—2 ತಿಮೊಥೆಯ 2:11-13; ಪ್ರಕಟನೆ 2:10.

ಜೀವಿಸಿ ಮರಣಹೊಂದಿದ ಅಸಂಖ್ಯಾತ ಕೋಟಿಗಟ್ಟಲೆ ಜನರು ಈ ಆವಶ್ಯಕತೆಗಳನ್ನು ಮುಟ್ಟಲಿಲ್ಲ. ಅನೇಕರಿಗೆ ಸತ್ಯ ದೇವರ ಕುರಿತಾಗಿ ಕಲಿಯಲು ಸ್ವಲ್ಪವೇ ಅವಕಾಶವಿತ್ತು. ಇತರರು ಬೈಬಲನ್ನು ಎಂದೂ ಓದಿಲ್ಲ ಮತ್ತು ಯೇಸು ಕ್ರಿಸ್ತನ ಕುರಿತಾಗಿ ಸ್ವಲ್ಪ ಅಥವಾ ಏನೂ ಗೊತ್ತಿಲ್ಲ. ಇಂದು ಭೂಮಿಯ ಮೇಲಿರುವ ನಿಜ ಕ್ರೈಸ್ತರಲ್ಲೂ, ಕೆಲವರೇ ಸ್ವರ್ಗೀಯ ಜೀವನಕ್ಕಾಗಿ ದೇವರಿಂದ ಆರಿಸಲ್ಪಟ್ಟಿದ್ದಾರೆ.

ಆದುದರಿಂದ, ಸ್ವರ್ಗಕ್ಕೆ ಹೋಗುವವರ ಸಂಖ್ಯೆ ಸಂಬಂಧ ಸೂಚಕವಾಗಿ ಚಿಕ್ಕದ್ದಾಗಿರುವದು. ಯೇಸು ಅಂಥವರನ್ನು ಒಂದು “ಚಿಕ್ಕ ಹಿಂಡು” ಎಂದು ಸೂಚಿಸಿದನು. (ಲೂಕ 12:32) ಅನಂತರ, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಲು “ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ” ವರ ಸಂಖ್ಯೆ ಕೇವಲ 1,44,000 ಆಗಿರುವದು ಎಂದು ಅಪೊಸ್ತಲ ಯೋಹಾನನಿಗೆ ಪ್ರಕಟಿಸಲ್ಪಟ್ಟಿತು. (ಪ್ರಕಟನೆ 14:1, 3; 20:6) ಭೂಮಿಯಲ್ಲಿ ಜೀವಿಸಿರುವ ಶತಕೋಟಿಗಟ್ಟಲೆ ಜನರಿಗೆ ಹೋಲಿಸಲ್ಪಡುವಾಗ, ಅದು ನಿಜವಾಗಿಯೂ ಒಂದು ಚಿಕ್ಕ ಸಂಖ್ಯೆ.

ಸ್ವರ್ಗಕ್ಕೆ ಹೋಗದವರು

ಸ್ವರ್ಗಕ್ಕೆ ಹೋಗದವರಿಗೆ ಏನಾಗುತ್ತದೆ? ಕೆಲವು ಧರ್ಮಗಳು ಕಲಿಸುವಂತೆ, ನಿತ್ಯ ಯಾತನೆಯ ಒಂದು ಸ್ಥಳದಲ್ಲಿ ಅವರು ಕಷ್ಟಾನುಭವಿಸುತ್ತಿದ್ದಾರೋ? ಖಂಡಿತವಾಗಿಯೂ ಇಲ್ಲ; ಯಾಕಂದರೆ ಯೆಹೋವನು ಒಬ್ಬ ಪ್ರೀತಿಯ ದೇವರಾಗಿದ್ದಾನೆ. ಪ್ರೀತಿಸುವ ಹೆತ್ತವರು ತಮ್ಮ ಮಕ್ಕಳನ್ನು ಬೆಂಕಿಯೊಳಗೆ ಎಸೆಯುವುದಿಲ್ಲ, ಮತ್ತು ಯೆಹೋವನು ಆ ರೀತಿಯಲ್ಲಿ ಜನರಿಗೆ ಯಾತನೆ ಕೊಡುವದಿಲ್ಲ.—1 ಯೋಹಾನ 4:8.

ಭೂಪ್ರಮೋದವನವೊಂದರಲ್ಲಿ ಪುನರುತ್ಥಾನವು ಸತ್ತವರಲ್ಲಿ ಬಹುಸಂಖ್ಯಾತರಿಗಾಗಿ ಪ್ರತೀಕ್ಷೆಯಾಗಿರುತ್ತದೆ. ಯೆಹೋವನು ಭೂಮಿಯನ್ನು “ಜನನಿವಾಸಕ್ಕಾಗಿ” ಸೃಷ್ಟಿಸಿದನು ಎಂದು ಬೈಬಲು ಹೇಳುತ್ತದೆ. (ಯೆಶಾಯ 45:18) ಕೀರ್ತನೆಗಾರನು ಘೋಷಿಸಿದ್ದು: “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ.” (ಕೀರ್ತನೆ 115:16) ಭೂಮಿ, ಸ್ವರ್ಗವಲ್ಲ, ಮಾನವಕುಲದ ಶಾಶ್ವತವಾದ ಮನೆಯಾಗಿರುವದು.

ಯೇಸು ಮುಂತಿಳಿಸಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ [“ಮನುಷ್ಯಕುಮಾರ” ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:27-29) ಕ್ರೈಸ್ತ ಅಪೊಸ್ತಲನಾದ ಪೌಲನು ದೃಢೀಕರಿಸಿದ್ದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು . . . ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.” (ಅ. ಕೃತ್ಯಗಳು 24:15) ಹಿಂಸಾಕಂಭದ ಮೇಲೆ, ಯೇಸು ಒಬ್ಬ ಪಶ್ಚಾತ್ತಾಪಿ ಕೆಡುಕನಿಗೆ ಭೂಪ್ರಮೋದವನವೊಂದರೊಳಗೆ ಪುನರುತ್ಥಾನದ ಮೂಲಕ ಜೀವವನ್ನು ವಾಗ್ದಾನಿಸಿದನು.—ಲೂಕ 23:43.

ಆದಾಗ್ಯೂ, ಭೂಮಿಯ ಮೇಲೆ ಜೀವಕ್ಕೆ ಪುನರುತ್ಥಾನಗೊಳಿಸಲ್ಪಡುವ ಸತ್ತವರ ಪ್ರಚಲಿತ ಸ್ಥಿತಿಯೇನಾಗಿದೆ? ಯೇಸುವಿನ ಶುಶ್ರೂಷೆಯ ಸಮಯದಲ್ಲಿನ ಒಂದು ಘಟನೆ ಈ ಪ್ರಶ್ನೆಯನ್ನು ಉತ್ತರಿಸಲು ಸಹಾಯ ಮಾಡುತ್ತದೆ. ಅವನ ಮಿತ್ರ ಲಾಜರನು ಮರಣಹೊಂದಿದ್ದನು. ಅವನನ್ನು ಪುನರುತ್ಥಾನಗೊಳಿಸಲು ಹೋಗುವ ಮುಂಚೆ, ಅವನು ತನ್ನ ಶಿಷ್ಯರಿಗೆ ಅಂದದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕೆ ಹೋಗುತ್ತೇನೆ.” (ಯೋಹಾನ 11:11) ಹೀಗೆ ಯೇಸು ಮರಣವನ್ನು ನಿದ್ರೆಗೆ ಹೋಲಿಸಿದನು, ಸ್ವಪ್ನಗಳಿರದ ಒಂದು ಗಾಢ ನಿದ್ರೆ.

ಮರಣದಲ್ಲಿ ನಿದ್ರಿಸುವದು

ಮರಣದಲ್ಲಿ ನಿದ್ರಿಸಿರುವದರ ಈ ವಿಚಾರದೊಂದಿಗೆ ಇತರ ಶಾಸ್ತ್ರವಚನಗಳು ಹೊಂದಿಕೊಳ್ಳುತ್ತವೆ. ಮರಣಹೊಂದಿದಾಗ ಆತ್ಮ ಕ್ಷೇತ್ರದೊಳಗೆ ದಾಟಿಹೋಗುವ ಒಂದು ಅಮರ ಆತ್ಮ ಮಾನವರಿಗೆ ಇದೆ ಎಂದು ಅವು ಕಲಿಸುವದಿಲ್ಲ. ಬದಲಿಗೆ, ಬೈಬಲು ಹೇಳುವದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ. . . ಅವರ ಪ್ರೀತಿಯೂ ಹಗೆಯೂ ಹೊಟ್ಟೇಕಿಚ್ಚೂ ಅಳಿದು ಹೋದವು. . . ನೀನು ಸೇರಬೇಕಾದ ಪಾತಾಳದಲ್ಲಿ [ಸಮಾಧಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 6, 10) ಅಲ್ಲದೆ, ಕೀರ್ತನೆಗಾರನು ಘೋಷಿಸಿದ್ದೇನಂದರೆ ಮಾನವನು “ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.”—ಕೀರ್ತನೆ 146:4.

ಈ ಶಾಸ್ತ್ರವಚನಗಳು ಸ್ಪಷ್ಟಪಡಿಸುತ್ತವೇನಂದರೆ ಮರಣದಲ್ಲಿ ನಿದ್ರಿಸುತ್ತಿರುವವರು ನಮ್ಮನ್ನು ನೋಡಲಾರರು ಅಥವಾ ಕೇಳಲಾರರು. ಅವರು ಆಶೀರ್ವಾದವನ್ನು ಅಥವಾ ಕೇಡನ್ನು ತರಲು ಅಸಮರ್ಥರು. ಅವರು ಸ್ವರ್ಗದಲ್ಲಿಯೂ ಇಲ್ಲ, ಪೂರ್ವಜರ ಒಂದು ಸಮಾಜದಲ್ಲಿಯೂ ವಾಸಿಸುತ್ತಿಲ್ಲ. ಅವರು ಜೀವರಹಿತರು, ಅಸ್ತಿತ್ವಹೀನರಾಗಿದ್ದಾರೆ.

ದೇವರ ತಕ್ಕ ಸಮಯದಲ್ಲಿ, ಈಗ ಮರಣದಲ್ಲಿ ನಿದ್ರಿಸುತ್ತಿರುವವರು ಮತ್ತು ಆತನ ಸ್ಮರಣೆಯಲ್ಲಿರುವವರು ಪ್ರಮೋದವನವಾದ ಭೂಮಿಯಲ್ಲಿ ಜೀವಕ್ಕೆ ಎಬ್ಬಿಸಲ್ಪಡುವರು. ಮಾನವಕುಲವು ಇಂದು ಅನುಭವಿಸುತ್ತಿರುವ ಮಾಲಿನ್ಯ, ತೊಂದರೆಗಳು ಮತ್ತು ಸಮಸ್ಯೆಗಳಿಂದ ಶುದ್ಧಗೊಳಿಸಲ್ಪಟ್ಟ ಒಂದು ಭೂಮಿ ಅದಾಗಿರುವದು. ಎಂತಹ ಒಂದು ಆನಂದಕರ ಸಮಯ ಅದಾಗಿರುವದು! ಆ ಪ್ರಮೋದವನದಲ್ಲಿ ಅವರಿಗೆ ಸದಾ ಜೀವಿಸುವ ಪ್ರತೀಕ್ಷೆಯಿರುವದು, ಯಾಕಂದರೆ ಕೀರ್ತನೆ 37:29 ನಮಗೆ ಅಶ್ವಾಸನೆಯನ್ನೀಯುವದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”

[ಪುಟ 6,7ರಲ್ಲಿರುವಚಿತ್ರ/ಚಿತ್ರಗಳು]

ಮೃತರನ್ನು ಆರಾಧಿಸುವದನ್ನು ನಾನು ನಿಲ್ಲಿಸಿದೆ

“ನಾನೊಬ್ಬ ಹುಡುಗನಾಗಿದ್ದಾಗ, ನನ್ನ ತಂದೆ ತನ್ನ ಮೃತ ತಂದೆಗೆ ಕ್ರಮವಾದ ಬಲಿಗಳನ್ನು ಅರ್ಪಿಸುತ್ತಿದ್ದಾಗ ನಾನು ಅವರಿಗೆ ಸಹಾಯ ಮಾಡುತ್ತಿದ್ದೆ. ಒಂದು ಸಂದರ್ಭದಲ್ಲಿ ನನ್ನ ತಂದೆಯು ಒಂದು ಭೀಕರ ರೋಗದಿಂದ ಗುಣಹೊಂದಿದಾಗ, ಅವರ ಗುಣವಾಗುವಿಕೆಗೆ ಗಣ್ಯತೆಯಲ್ಲಿ ಅವರು ತಮ್ಮ ಮೃತ ತಂದೆಗೆ ಒಂದು ಆಡು, ಮುಳ್ಳುಗೆಣಸುಗಳು, ಕೋಲದ ಕರಟಕಾಯಿಗಳು, ಮತ್ತು ಮದ್ಯದ ಬಲಿಯನ್ನು ಅರ್ಪಿಸಬೇಕು ಎಂದು ಅರ್ಚಕರು ಅವರಿಗೆ ಹೇಳಿದರು. ಹೆಚ್ಚಿನ ಅಸ್ವಸ್ಥತೆಯನ್ನು ಮತ್ತು ಆಪತ್ತನ್ನು ತಪ್ಪಿಸಿಕೊಳ್ಳಲು ತನ್ನ ಮೃತ ಪೂರ್ವಜರಿಗೆ ಮೊರೆಯಿಡುವಂತೆ ಅವರಿಗೆ ಸಲಹೆ ಕೊಡಲಾಯಿತು.

“ನನ್ನ ತಾಯಿ ಬಲಿಗಾಗಿ ಆವಶ್ಯಕವಾದುದನ್ನೆಲ್ಲಾ ಖರೀದಿಸಿದರು. ಅದು ನನ್ನ ಅಜ್ಜನ ಸಮಾಧಿಯ ಹತ್ತಿರ ನಡಿಸಲ್ಪಡಲಿತ್ತು. ಸ್ಥಳಿಕ ಪದ್ಧತಿಗೆ ಹೊಂದಿಕೆಯಲ್ಲಿ, ಸಮಾಧಿಯು ನಮ್ಮ ಮನೆಯ ಬದಿಯಲ್ಲೇ ಇತ್ತು.

“ಸ್ನೇಹಿತರು, ಸಂಬಂಧಿಕರು, ಮತ್ತು ನೆರೆಹೊರೆಯವರು ಬಲಿಯನ್ನು ಪ್ರೇಕ್ಷಿಸಲು ಆಮಂತ್ರಿಸಲ್ಪಟ್ಟಿದ್ದರು. ನನ್ನ ತಂದೆ, ಸಂದರ್ಭಕ್ಕೆ ತಕ್ಕದ್ದಾಗಿ ಸೊಗಸಾಗಿ ಉಡುಪು ಧರಿಸಿಕೊಂಡು, ಎಲ್ಲಿ ಮುಂಚಿನ ಬಲಿಗಳಿಗಾಗಿ ಉಪಯೋಗಿಸಲ್ಪಟ್ಟಿದ್ದ ಆಡುಗಳ ಹಲವಾರು ತಲೆಬುರುಡೆಗಳು ಸಾಲಾಗಿ ಇಡಲ್ಪಟ್ಟಿದ್ದವೋ ಆ ಗುಡಿಗೆ ಮುಖಮಾಡಿಕೊಂಡು ಒಂದು ಕುರ್ಚಿಯ ಮೇಲೆ ಕುಳಿತುಕೊಂಡಿದ್ದರು. ಒಂದು ಬಾಟಲಿಯಿಂದ ದ್ರಾಕ್ಷಾಮದ್ಯವನ್ನು ಲೋಟಕ್ಕೆ ಹಾಕಿ, ಅದನ್ನು ತಂದೆಗೆ ಕೊಡುವದು ನನ್ನ ಕೆಲಸವಾಗಿತ್ತು. ಪ್ರತಿಯಾಗಿ, ಅವರು ಅದನ್ನು ಬಲಿಯಾಗಿ ನೆಲದ ಮೇಲೆ ಸುರಿಸುತ್ತಿದ್ದರು. ನನ್ನ ತಂದೆ ತನ್ನ ತಂದೆಯ ಹೆಸರನ್ನು ಮೂರು ಸಲ ಕೂಗಿ ಕರೆದರು ಮತ್ತು ಮುಂದಿನ ಆಪತ್ತುಗಳಿಂದ ರಕ್ಷಣೆಗಾಗಿ ಅವರಿಗೆ ಪ್ರಾರ್ಥಿಸಿದರು.

“ಕೋಲ ಕರಟಕಾಯಿಗಳನ್ನು ಸಲ್ಲಿಸಲಾಯಿತು, ಮತ್ತು ಒಂದು ಟಗರನ್ನು ಕಡಿದು, ಬೇಯಿಸಿ, ಉಪಸ್ಥಿತರಿದ್ದವರೆಲ್ಲರು ತಿಂದರು. ನಾನು ತಿನ್ನುವದರಲ್ಲಿ ಭಾಗವಹಿಸಿದೆ ಮತ್ತು ಡೋಲುಗಳ ಬಡಿತಕ್ಕೆ ಮತ್ತು ಹಾಡುವಿಕೆಗೆ ಕುಣಿದಾಡಿದೆ. ನನ್ನ ತಂದೆಗೆ ವಯಸ್ಸಾಗಿರುವದನ್ನು ನೋಡಬಹುದಿತ್ತಾದರೂ ಅವರು ಚೆನ್ನಾಗಿ ಮತ್ತು ಬಿರುಸಾಗಿ ಕುಣಿಯುತ್ತಿದ್ದರು. ಆಗಾಗ ಅವರು ಉಪಸ್ಥಿತರೆಲ್ಲರನ್ನು ಆಶೀರ್ವದಿಸಲಿಕ್ಕಾಗಿ ತನ್ನ ಪೂರ್ವಜರಿಗೆ ಪ್ರಾರ್ಥಿಸುತ್ತಿದ್ದರು, ಮತ್ತು ಜನರು—ನನ್ನನ್ನು ಸೇರಿಸಿ—ಈಸೆ, ಅಂದರೆ ‘ಹಾಗೆಯೇ ಆಗಲಿ’ ಎಂದು ಉತ್ತರಿಸುತ್ತಿದ್ದೆವು. ನಾನು ನನ್ನ ತಂದೆಯನ್ನು ತೀವ್ರ ಆಸಕ್ತಿ ಮತ್ತು ಮೆಚ್ಚುಗೆಯಿಂದ ಗಮನಿಸುತ್ತಿದ್ದೆ ಮತ್ತು ಮೃತ ಪೂರ್ವಜರಿಗೆ ಬಲಿಗಳನ್ನು ಮಾಡುವಷ್ಟು ದೊಡ್ಡವನಾಗುವ ದಿವಸಕ್ಕಾಗಿ ಹಂಬಲಿಸಿದೆ.

“ಹಲವಾರು ಬಲಿಗಳು ಅರ್ಪಿಸಲ್ಪಟ್ಟವಾದರೂ, ಶಾಂತಿಯು ಇನ್ನೂ ಕುಟುಂಬಕ್ಕೆ ಎಟುಕದ್ದಾಯಿತು. ನನ್ನ ತಾಯಿಗೆ ಮೂವರು ಬದುಕಿರುವ ಪುತ್ರರು ಇದ್ದರೂ, ಅವಳು ಹೆತ್ತ ಮೂರು ಪುತ್ರಿಯರಲ್ಲಿ ಯಾರೂ ಹೆಚ್ಚು ಸಮಯ ಜೀವಿಸಲಿಲ್ಲ; ಎಲ್ಲರೂ ಬಾಲ್ಯಾವಸ್ಥೆಯಲ್ಲಿ ಸತ್ತರು. ನನ್ನ ತಾಯಿ ಪುನಃ ಗರ್ಭವತಿಯಾದಾಗ, ಮಗುವು ಸುರಕ್ಷಿತವಾಗಿ ಜನಿಸಲು ನನ್ನ ತಂದೆಯು ಅತ್ಯುತ್ತಮವಾಗಿ ಪರಿಷ್ಕರಿಸಿದ ಬಲಿಗಳನ್ನು ಅರ್ಪಿಸಿದರು.

“ತಾಯಿ ಇನ್ನೊಬ್ಬಳು ಹುಡುಗಿಗೆ ಜನ್ಮವನ್ನಿತರ್ತು. ಎರಡು ವರ್ಷಗಳ ನಂತರ ಮಗು ಕಾಯಿಲೆ ಬಿದ್ದು ಸತ್ತಿತು. ನನ್ನ ತಂದೆ ಅರ್ಚಕನನ್ನು ವಿಚಾರಿಸಿದರು, ಒಬ್ಬ ವೈರಿ ಮರಣಕ್ಕೆ ಜವಾಬ್ದಾರನಾಗಿದ್ದಾನೆ ಎಂದು ಅವನು ಹೇಳಿದನು. ಮಗುವಿನ ‘ಆತ್ಮ’ವು ಪ್ರತಿದಾಳಿ ಮಾಡಲು, ಉರಿಯುತ್ತಿರುವ ಒಂದು ಮರದ ತುಂಡು, ಒಂದು ಬಾಟಲಿ ಮದ್ಯ, ಮತ್ತು ಒಂದು ನಾಯಿಮರಿ ಬಲಿಗಾಗಿ ಬೇಕಾಗಿದೆ ಎಂದು ಅರ್ಚಕನು ಹೇಳಿದನು. ಇದು ತನ್ನ ಮರಣಕ್ಕೆ ಸೇಡು ತೀರಿಸಲು ಸತ್ತ ಹುಡುಗಿಯ ಆತ್ಮವನ್ನು ಎಬ್ಬಿಸುತ್ತದೆಂದು ಊಹಿಸಲಾಯಿತು.

“ನಾನು ಮದ್ಯದ ಬಾಟಲಿ ಮತ್ತು ಉರಿಯುತ್ತಿರುವ ಮರದ ತುಂಡನ್ನು ಸಮಾಧಿಗೆ ಒಯ್ದೆ, ಮತ್ತು ನನ್ನ ತಂದೆ ನಾಯಿಮರಿಯನ್ನು ಒಯ್ದರು. ಅದನ್ನು ಅವರು ಅರ್ಚಕನ ಅಪ್ಪಣೆಗಳಿಗನುಸಾರ ಹೂಣಿಟ್ಟರು. ಏಳು ದಿವಸಗಳೊಳಗೆ ಸತ್ತ ಹುಡುಗಿಯ ಆತ್ಮವು, ಅವಳ ಅಕಾಲ ಮೃತ್ಯುವಿಗೆ ಕಾರಣವಾದ ವ್ಯಕ್ತಿಯನ್ನು ಕೊಲ್ಲುವದು ಎಂದು ನಾವೆಲ್ಲರೂ ನಂಬಿದೆವು. ಎರಡು ತಿಂಗಳುಗಳು ಕಳೆದವು ಮತ್ತು ನೆರೆಹೊರೆಯಲ್ಲಿ ಯಾವ ಮರಣವು ವರದಿಸಲ್ಪಡಲಿಲ್ಲ. ನನಗೆ ಭ್ರಮನಿರಸನವಾಯಿತು.

“ನಾನು ಆ ಸಮಯದಲ್ಲಿ 18 ವರ್ಷ ಪ್ರಾಯದವನಾಗಿದ್ದೆ. ಅನಂತರ ಸ್ವಲ್ಪದರಲ್ಲೇ ನಾನು ಯೆಹೋವನ ಸಾಕ್ಷಿಗಳನ್ನು ಭೇಟಿಯಾದೆ. ಮೃತರು ಜೀವಿತರಿಗೆ ಒಳ್ಳೇದನ್ನು ಅಥವಾ ಕೆಟ್ಟದ್ದನ್ನು ಮಾಡಲಾರರು ಎಂದು ಅವರು ನನಗೆ ಶಾಸ್ತ್ರವಚನಗಳಿಂದ ತೋರಿಸಿದರು. ದೇವರ ವಾಕ್ಯದ ಜ್ಞಾನವು ನನ್ನ ಹೃದಯದಲ್ಲಿ ಬೇರೂರಿದಂತೆ, ಮೃತರಿಗಾಗಿ ಬಲಿಗಳನ್ನು ಅರ್ಪಿಸಲು ನಾನು ಇನ್ನು ಮುಂದೆ ಅವರೊಂದಿಗೆ ಜೊತೆಗೂಡಲಾರೆ ಎಂದು ನಾನು ನನ್ನ ತಂದೆಗೆ ಹೇಳಿದೆ. ಅವರು ಹೇಳಿದಂತೆ, ನಾನು ಅವರನ್ನು ತೊರೆದದ್ದಕ್ಕಾಗಿ ಅವರು ಮೊದಲು ನನ್ನೊಂದಿಗೆ ಕ್ರೋಧಿತರಾದರು. ಆದರೆ ನಾನು ನನ್ನ ಹೊಸತಾದ ನಂಬಿಕೆಯನ್ನು ಬಿಟ್ಟುಬಿಡಲು ಸಿದ್ಧನಾಗಿರದಿದ್ದದ್ದನ್ನು ಅವರು ಗಮನಿಸಿದಾಗ, ಯೆಹೋವನಿಗೆ ನನ್ನ ಆರಾಧನೆಯನ್ನು ಅವರು ವಿರೋಧಿಸಲಿಲ್ಲ.

“ಎಪ್ರಿಲ್‌ 18, 1948 ರಂದು, ನಾನು ದೀಕ್ಷಾಸ್ನಾನದ ಮೂಲಕ ನನ್ನ ಸಮರ್ಪಣೆಯನ್ನು ಸಂಕೇತವಾಗಿ ಸೂಚಿಸಿದೆನು. ಅಂದಿನಿಂದ, ನಾನು ಯೆಹೋವನನ್ನು ತುಂಬಾ ಹರ್ಷ ಮತ್ತು ತೃಪ್ತಿಯಿಂದ—ನಮಗೆ ಸಹಾಯ ಅಥವಾ ಹಾನಿಯನ್ನೂ ಮಾಡಲಾರದ, ಮೃತ ಪೂರ್ವಜರ ಆರಾಧನೆಯಿಂದ ಮುಕ್ತರಾಗಲು ಇತರರಿಗೆ ಸಹಾಯ ಮಾಡುತ್ತಿದ್ದು—ಯೆಹೋವನನ್ನು ಸೇವಿಸುತ್ತಾ ಮುಂದರಿದಿದ್ದೇನೆ.”—ನೈಜೀರಿಯ, ಬೆನಿನ್‌ ಸಿಟಿ, ಜೆ. ಬಿ. ಓಮೀಎಗ್ಬೆಯವರ ದತ್ತ ಲೇಖನ.

[ಪುಟ 7 ರಲ್ಲಿರುವ ಚಿತ್ರ]

ಪ್ರಮೋದವನವಾದ ಭೂಮಿಯೊಂದರಲ್ಲಿ ಸತ್ತವರು ಪುನರುತ್ಥಾನಗೊಳಿಸಲ್ಪಟ್ಟಾಗ ಮಹಾ ಆನಂದವಿರುವದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ