ಒಂದು ವಿಭಾಗಿತವಾದ ಚರ್ಚು ಅದು ಪಾರಾಗಿ ಉಳಿಯಬಲ್ಲದೊ?
“ಕ್ರಿಸ್ತನ ರಕ್ಷಿಸುವ ಸತ್ಯವನ್ನು ಪ್ರತಿಪಾದಿಸುವವರೆಲ್ಲರೂ ದೃಶ್ಯ ಚರ್ಚಿಗೆ ಸೇರಿದವರಾಗಿದ್ದಾರೆ. ಕ್ರೈಸ್ತಪ್ರಪಂಚದ ಮತಬೇಧಗಳು—ಪೂರ್ವ ಮತ್ತು ಪಶ್ಚಿಮದ ನಡುವೆ, ಮತ್ತು ರೋಮ್ ಮತ್ತು ತೀವ್ರ ಸುಧಾರಣೆಯ ಚರ್ಚುಗಳ ನಡುವೆ ಇರುವ ಮತಬೇಧಗಳು—ಒಂದೇ ಚರ್ಚಿನೊಳಗಣ ಪಕ್ಷಬೇಧಗಳಾಗಿವೆ. (ಕ್ರಿಶ್ಚಿಯನ್ಸ್ ಇನ್ ಕಮ್ಯೂನಿಯನ್) ಒಬ್ಬ ಗ್ರಂಥಕರ್ತನು ಕ್ರೈಸ್ತತ್ವವನ್ನು ಹಾಗೆಂದು ವೀಕ್ಷಿಸುತ್ತಾನೆ—ಅದು ಒಂದು ವ್ಯಾಪಕವಾಗಿ ಚದರಿದ ಧರ್ಮಗಳ ಪರಿವಾರದಂತಿದ್ದು, ಅದರಲ್ಲಿರುವವರೆಲ್ಲರೂ ಯೇಸು ಕ್ರಿಸ್ತನಲ್ಲಿ ಒಂದು ವಿಧದ ನಂಬಿಕೆಯನ್ನು ತೋರ್ಪಡಿಸುತ್ತಾರೆ.
ಆದರೂ, ಅದು ಪರಸ್ಪರ ವಿರುದ್ಧವಾದ ನಂಬಿಕೆಗಳು ಮತ್ತು ನಡೆವಳಿಯ ಮಟ್ಟಗಳು ಇರುವ ಒಂದು ವಿಭಾಗಿತವಾದ ಕುಟುಂಬವಾಗಿದೆ. “ಪ್ರಚಲಿತ ದಿನದ ಕ್ರೈಸ್ತತ್ವದಲ್ಲಿ . . . ಚರ್ಚ್ ಸದಸ್ಯತನಕ್ಕಾಗಿ ಇರುವ ಮಟ್ಟಗಳು, ಒಂದು ಬಸ್ಸಿನಲ್ಲಿ ಪ್ರಯಾಣಿಸುವುದಕ್ಕೆ ಬೇಕಾದ ಮಟ್ಟಗಳಿಗಿಂತ ಕಡಿಮೆಯದ್ದಾಗಿವೆ,” ಎನ್ನುತ್ತಾರೆ ನಿರೀಕ್ಷಕರೊಬ್ಬರು. ಹೀಗಿರಲಾಗಿ ಅದರ ಆತ್ಮಿಕ ಸ್ಥಿತಿಗತಿಯು ಎಂತಹದೆಂದು ನಾವು ಕಂಡುಹಿಡಿಯುವುದು ಹೇಗೆ? ಕ್ಯಾತೊಲಿಕ್ ಬಿಷಪರಾದ ಬೇಸಿಲ್ ಬಟ್ಲರ್ ತೀರ್ಮಾನಿಸುವುದು: “ಒಂದು ವಿಭಾಗಿತವಾದ ಕ್ರೈಸ್ತತ್ವವು ಖಂಡಿತವಾಗಿ ಅತ್ಯಂತ ರೋಗಗ್ರಸ್ತವೇ ಸರಿ.” (ದ ಚರ್ಚ್ ಆ್ಯಂಡ್ ಯುನಿಟಿ) ಆ ರೋಗವು ಪ್ರಾರಂಭವಾದದ್ದು ಹೇಗೆ? ಗುಣಹೊಂದುವುದಕ್ಕೆ ನಿರೀಕ್ಷೆಗಳಿವೆಯೆ?
“ಅಧರ್ಮ ಸ್ವರೂಪನು”
ಅನೈಕ್ಯವು ವಿಕಸಿತವಾಗುವುದೆಂದು ಅಪೊಸ್ತಲ ಪೌಲನು ಎಚ್ಚರಿಸಿದ್ದನು. ಕ್ರಿಸ್ತನ ಸಾನ್ನಿಧ್ಯವು ಸನ್ನಿಹಿತವಾಗಿತ್ತೆಂದು ನೆನಸಿದ್ದ ಥೆಸಲೊನೀಕದ ಕ್ರೈಸ್ತರಿಗೆ ಅವನು ಬರೆದದ್ದು: “ಯಾರೂ ಯಾವ ವಿಧದಲ್ಲಿಯೂ ನಿಮ್ಮನ್ನು ಮೋಸಗೊಳಿಸದಂತೆ ನೋಡಿಕೊಳ್ಳಿರಿ; ಯಾಕಂದರೆ ಮೊದಲು ಮತಭ್ರಷ್ಟತೆಯು ಉಂಟಾಗಿ [ನಾಶನದ ಪುತ್ರನಾದ, NW] ಅಧರ್ಮಸ್ವರೂಪನು ಬೈಲಿಗೆ ಬಂದ ಹೊರತು ಆ ದಿನವು [ಯೆಹೋವನ ದಿನ] ಬರುವದಿಲ್ಲ.”—2 ಥೆಸಲೊನೀಕ 2:3.
ಈ “ಅಧರ್ಮಸ್ವರೂಪನು” ಮತಭ್ರಷ್ಟತೆ ಮತ್ತು ದಂಗೆಯನ್ನು ಕ್ರೈಸ್ತ ಸಭೆಯೊಳಗೆ ಪ್ರವೇಶಮಾಡಿಸಿದನು. ಅವನು ಯಾರು? ಯಾವನೇ ಒಬ್ಬ ವ್ಯಕ್ತಿಯು ಅಲ್ಲ ಬದಲಿಗೆ, ಕ್ರೈಸ್ತಪ್ರಪಂಚದ ವೈದಿಕವರ್ಗವು ಅದಾಗಿರುತ್ತದೆ. ಈ ವರ್ಗವು, ಯೇಸುವಿನ ಅಪೊಸ್ತಲರ ಮರಣಾನಂತರ ತುಲನಾತ್ಮಕವಾಗಿ ಬೇಗನೆ ಮತಭ್ರಷ್ಟ ಸಭೆಯ ಮೇಲೆ ತನ್ನನ್ನು ಎತ್ತರಿಸಿಕೊಂಡಿತು, ಮತ್ತು ಕೊನೆಗೆ ತ್ರಯೈಕ್ಯ ಮತ್ತು ಮಾನವ ಆತ್ಮದ ಅಮರತ್ವದಂತಹ ವಿಧರ್ಮಿ ತತ್ವಜ್ಞಾನಗಳನ್ನು ಕಲಿಸತೊಡಗಿತು. (ಅ. ಕೃತ್ಯಗಳು 20:29, 30; 2 ಪೇತ್ರ 2:1-3) ಒಂದು ಮಾರಕ ಜಾಡ್ಯದೋಪಾದಿ, ಅದು ಕ್ರೈಸ್ತರೆನಿಸಿಕೊಳ್ಳುವ ಸಭೆಯನ್ನು ಅನೈಕ್ಯಕ್ಕೆ ಅನಿವಾರ್ಯವಾಗಿ ನಡಿಸುವ ದೆವ್ವ-ಪ್ರೇರಕ ವಿಚಾರಗಳಿಂದ ಕಲುಷಿತಗೊಳಿಸಿತು.—ಗಲಾತ್ಯ 5:7-10.
ಈ ಸೋಂಕು ಅಪೊಸ್ತಲ ಪೌಲನ ದಿನಗಳಲ್ಲಿ ಆವಾಗಲೆ ಪ್ರಾರಂಭಿಸಿತ್ತು. ಅವನು ಬರೆದದ್ದು: “ಅಧರ್ಮವು ಈಗಲೂ ಗುಪ್ತವಾಗಿ ತನ್ನ ಕಾರ್ಯವನ್ನು ಸಾಧಿಸುತ್ತದೆ; ಆದರೆ ಇದುವರೆಗೆ ಅಡಿಮ್ಡಾಡಿದವನು ತೆಗೆದುಬಿಡಲ್ಪಡುವ ತನಕ ಅದು ಗುಪ್ತವಾಗಿಯೇ ಇರುವದು.” (2 ಥೆಸಲೊನೀಕ 2:7) ಮತಭ್ರಷ್ಟತೆಯ ವಿಷದ ವಿರುದ್ಧ ಅಪೊಸ್ತಲರು ಒಂದು ಪ್ರತಿಬಂಧಕವಾಗಿ ಕಾರ್ಯನಡಿಸಿದರು. ಅವರ ಒಗ್ಗೂಡಿಸುವ ಪ್ರಭಾವವು ತೆಗೆಯಲ್ಪಟ್ಟಾಗ, ಅನಿರ್ಬಂಧಿತ ಮತಭ್ರಷ್ಟತೆಯು ಅರ್ಬುದ ವ್ಯಾಧಿಯಂತೆ ಹರಡಿತು.—1 ತಿಮೊಥೆಯ 4:1-3; 2 ತಿಮೊಥೆಯ 2:16-18.
ಈ “ಅಧರ್ಮಸ್ವರೂಪನ” ಚಟುವಟಿಕೆಗಳು ತಡೆಯಿಲ್ಲದೆ ಮುಂದರಿಯುತ್ತಿವೆ. “ಲೈಂಗಿಕ ಮತ್ತು ದೇವತಾಶಾಸ್ತ್ರ ಯಾತನೆಯಲ್ಲಿ ಚರ್ಚು,” ಇದರ ಕುರಿತ ಇತ್ತೀಚಿಗಿನ ಒಂದು ವರದಿಯಲ್ಲಿ, ಚರ್ಚ್ ಆಫ್ ಇಂಗ್ಲೆಂಡಿನ ಒಬ್ಬ ಆರ್ಚ್ಡೀಕನರು ಹೀಗೆ ದೂರುವುದಾಗಿ ಉಲ್ಲೇಖಿಸಲ್ಪಟ್ಟರು: “ವಿವಾಹದ ಹೊರಗೆ ಲೈಂಗಿಕ ಕೃತ್ಯದಲ್ಲಿ ಭಾಗಿಗಳಾಗ ಕೂಡದೆಂದು ವೈದಿಕರಿಗೆ ಕರೆಗೊಟ್ಟ ಪ್ರಸ್ತಾಪಗಳು ತಿರಸ್ಕರಿಸಲ್ಪಡುತ್ತವೆ. ಆಚರಿಸುವ ಪುರುಷಗಾಮಿಗಳಿಗೆ ಪಾದ್ರಿಯ ದೀಕ್ಷೆಕೊಡಲಾಗುತ್ತದೆ. ಅವರು ಒಳ್ಳೇದ್ದನ್ನು ಕೆಟ್ಟದ್ದಾಗಿ ಮತ್ತು ಕೆಟ್ಟದ್ದನ್ನು ಒಳ್ಳೇದ್ದಾಗಿ ಮಾಡಿರುತ್ತಾರೆ.”—ದಿ ಸಂಡೇ ಟೈಮ್ಸ್ ಮ್ಯಾಗಜೀನ್, ಲಂಡನ್, ನವಂಬರ 22, 1992.
ಗೋದಿ ಮತ್ತು ಹಣಜಿಗಳು
ನಿಜ ಕ್ರೈಸ್ತತ್ವವು ತಾತ್ಕಾಲಿಕವಾಗಿ ದೃಶ್ಯದಿಂದ ಅಗೋಚರವಾಗುವುದೆಂದು ಯೇಸು ಕ್ರಿಸ್ತನು ತಾನೇ ಕಲಿಸಿದ್ದನು. ಕ್ರೈಸ್ತ ಸಭೆಯ ಪ್ರಾರಂಭವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತುವ ಒಬ್ಬ ಮನುಷ್ಯನಂತಿತ್ತು ಎಂದು ಆತನು ಹೇಳಿದನು. ಆದರೆ, ಯೇಸುವಂದದ್ದು, “ಅವನ ವೈರಿಯು ಬಂದು ಗೋದಿಯ ನಡುವೆ ಹಣಜಿ ಬಿತ್ತಿಹೋದನು.” ಹಣಜಿಯನ್ನು ಕಿತ್ತುಹಾಕಲು ತಾವು ಯತ್ನಿಸಬೇಕೊ ಎಂದು ಅವನ ಆಳುಗಳು ಕೇಳಲಾಗಿ, ಹೊಲದ ಯಜಮಾನನು ಹೇಳಿದ್ದು: “ಬೇಡ; ಹಣಜಿಯನ್ನು ಆರಿಸಿ ತೆಗೆಯುವಾಗ ಅದರ ಸಂಗಡ ಗೋದಿಯನ್ನೆಲ್ಲಾದರೂ ಕಿತ್ತೀರಿ.” ಗೋದಿ ಮತ್ತು ಹಣಜಿಗಳ ಈ ಮಿಶ್ರಣವು ಎಷ್ಟು ಕಾಲ ಮುಂದುವರಿಯಲಿಕ್ಕಿತ್ತು? ಯಜಮಾನನು ಹೇಳಿದ್ದು: “ಸುಗ್ಗೀಕಾಲದ ತನಕ ಎರಡೂ ಕೂಡ ಬೆಳೆಯಲಿ.”—ಮತ್ತಾಯ 13:25, 29, 30.
“ಸುಗ್ಗೀಕಾಲದ” ತನಕ, ಅಥವಾ “ವಿಷಯಗಳ ವ್ಯವಸ್ಥೆಯ” ಕೊನೆಯ ದಿನಗಳಲ್ಲಿ ಪ್ರತ್ಯೇಕಮಾಡುವ ತನಕ, ಕೃತಕ ಕ್ರೈಸ್ತರು ನಿಜ ಕ್ರೈಸ್ತರೊಂದಿಗೆ ಪಕ್ಕಪಕ್ಕದಲ್ಲಿ ಬೆಳೆದರು. (ಮತ್ತಾಯ 28:20) ಒಂದು ಭ್ರಷ್ಟಗೊಂಡ ಮತ್ತು ವಿಭಾಗಿತವಾದ ಕೃತಕ ಕ್ರೈಸ್ತ ಸಭೆಯನ್ನು ನಿರ್ಮಿಸಲು ಪಿಶಾಚನಾದ ಸೈತಾನನು ಮತಭ್ರಷ್ಟರನ್ನು ಬಳಸಿದನು. (ಮತ್ತಾಯ 13:36-39) ಅವರು ನಿಜ ಕ್ರೈಸ್ತತ್ವದ ಒಂದು ಅವಮಾನಕರವಾದ ಖೋಟಾ ನಕಲನ್ನು ಉತ್ಪಾದಿಸಿದರು. (2 ಕೊರಿಂಥ 11:3, 13-15; ಕೊಲೊಸ್ಸೆ 2:8) ಶತಮಾನಗಳ ಅವಧಿಯಲ್ಲಿ ಚರ್ಚು ತುಂಡು ತುಂಡಾಗಿ ಒಡೆದುಹೋದಾಗ, ನಿಜ ಕ್ರೈಸ್ತರನ್ನು ಗುರುತಿಸುವುದು ಅಧಿಕಾಧಿಕವಾಗಿ ಕಷ್ಟವಾಗ ತೊಡಗಿತು.
ಹೊಸ ಪಂಗಡಗಳು
ಹೆಚ್ಚು ಆಧುನಿಕ ಸಮಯಗಳಲ್ಲಿ, ಟೆಸ್ಟಿಂಗ್ ಆಫ್ ದ ಚರ್ಚಸ್—1932-1982 (ಇಂಗ್ಲಿಷ್ನಲ್ಲಿ) ಹೇಳುವುದು, “ಹೊಸ ಹೊಸ ಪಂಗಡಗಳು, ವಿಶೇಷವಾಗಿ ವ್ಯಕ್ತಿಪರ ನಂಬಿಕೆ ಮತ್ತು ಅನುಭವಗಳಿಗೆ ಒತ್ತನ್ನು ಹಾಕುವ ಕ್ಯಾರಿಸ್ಮ್ಯಾಟಿಕ್ (ಜನಪ್ರಿಯತೆ) ಚಳುವಳಿಯು, ಗೋಚರಿಸಿವೆ.” ರಸಕರವಾಗಿಯೇ, ಬಾರ್ನ್ ಅಗೆನ್ (ಹೊಸದಾಗಿ ಹುಟ್ಟುವುದು) ಮತ್ತು ಕ್ಯಾರಿಸ್ಮ್ಯಾಟಿಕ್ ಚಳವಳಿಗಳನ್ನು ಕೆಲವರು ಹೊಸ ಪಂಗಡಗಳಾಗಿ ಎಣಿಸುವುದಕ್ಕಿಂತ ಹೆಚ್ಚಾಗಿ ಆತ್ಮಿಕ ಪುನರೆಚ್ಚರದ ಲಕ್ಷಣಗಳಾಗಿ ಕಾಣುತ್ತಾರೆ. ಉದಾಹರಣೆಗೆ, ಉತ್ತರ ಐರ್ಯಲೆಂಡ್ ಅಂಥ ಒಂದು ಪುನರುಜ್ಜೀವನವನ್ನು 1850 ಗಳಲ್ಲಿ ಕಂಡಿತು. ಮಹಾ ನಿರೀಕ್ಷಣೆಗಳು ಎಬ್ಬಿಸಲ್ಪಟ್ಟವು. “ಪ್ರೆಸ್ಬಿಟಿಯರಿಯನ್, ವೆಸಿಯ್ಲನ್, ಮತ್ತು ಇಂಡಿಪೆಂಡೆಂಟ್ ಪಂಗಡಗಳ ಪಾದ್ರಿಗಳ ನಡುವೆ ಭ್ರಾತ್ರೀಯ ಐಕಮತ್ಯ”ದ ಕುರಿತು ಒಂದು ವರದಿ ಮಾತಾಡಿತು ಮತ್ತು “ಆನಂದಪರವಶತೆಗಳ, ನಿದ್ರೆಗಳ, ದರ್ಶನಗಳ, ಸ್ವಪ್ನಗಳ ಮತ್ತು ಅದ್ಭುತಗಳ ಹೊಸ ಹೊಸ ಕಥೆಗಳನ್ನು ಪ್ರತಿದಿನ ಹೊರತಂದಿತು.”—ರಿಲಿಜಯಸ್ ರಿವೈವಲ್ಸ್.
ಅನೇಕರು ಈ ನಾಟಕೀಯ ತೋರ್ಪಡಿಸುವಿಕೆಗಳನ್ನು ದೇವರ ಆತ್ಮವು ಆತನ ಚರ್ಚನ್ನು ಪುನರುಜ್ಜೀವನಗೊಳಿಸಲು ಕಾರ್ಯನಡಿಸುವ ಪುರಾವೆಯಾಗಿ ಕಂಡರು. “ದೇವರ ಸಭೆಯು,” ಒಬ್ಬ ವೀಕ್ಷಕನಂದದ್ದು, “ಅದರ ಉತ್ಕೃಷ್ಟಾರ್ಥದಲ್ಲಿ ಈ ಪ್ರಾಂತಗಳಲ್ಲಿ ಪುನರುಜ್ಜೀವಿಸಲ್ಪಟ್ಟಿದೆ.” ಆದರೂ, ಈ ನಿರ್ದಿಷ್ಟ ಪುನರುಜ್ಜೀವನವು “ಅಲ್ಸರ್ಟ್ನ ಧಾರ್ಮಿಕ ಇತಿಹಾಸದಲ್ಲಿ ಒಂದು ಭವ್ಯವಾದ ಮತ್ತು ಅಭೂತಪೂರ್ವ ಯುಗಾರಂಭವಾಗಿ” ಘೋಷಿಸಲ್ಪಟ್ಟರೂ, ಅದು ಮತ್ತು ಅದರಂತಹ ಪುನರುಜ್ಜೀವನಗಳು, ಒಂದು ಆತ್ಮಿಕ ಮರುಹುಟ್ಟನ್ನು ಪ್ರತಿಪಾದಿಸುವವರ ನಡುವೆ ಧಾರ್ಮಿಕ ಐಕಮತ್ಯವನ್ನು ಉತ್ಪಾದಿಸಿರುವುದಿಲ್ಲ.
ತಾವು ಹೆಚ್ಚು ಪ್ರಾಮುಖ್ಯವಾದ ಮತ್ತು ಮೂಲಭೂತ ವಿಷಯಗಳಲ್ಲಿ ಏಕತೆಯಲ್ಲಿದ್ದೇವೆಂದು ಅಂಥ ಜನರು ವಾದಿಸುತ್ತಾರೆ. ಆದರೆ “ಕ್ರೈಸ್ತರನ್ನು ಇನ್ನೂ ವಿಭಾಗಿಸುವ ವಿಷಯಗಳಿಗಿಂತ ಅವರನ್ನು ಯಾವುದು ಐಕ್ಯಗೊಳಿಸುತದ್ತೊ ಅದು ಈವಾಗಲೆ ಹೆಚ್ಚು ಪ್ರಾಮುಖ್ಯವಾದದ್ದು” ಎಂದು ಸಯುಕಿಕ್ತವಾಗಿ ಮಾಡುವ ಕ್ರೈಸ್ತಪ್ರಪಂಚದ ಮಿಕ್ಕವರಿಂದ ಇದೇ ವಾದವು ಬಳಸಲ್ಪಡುತ್ತದೆ, (ದ ಚರ್ಚ್ ಆ್ಯಂಡ್ ಯೂನಿಟಿ) ಕ್ರೈಸ್ತಪ್ರಪಂಚವು ವಾದಿಸುವುದು: “ಒಬ್ಬರೊಂದಿಗೊಬ್ಬರ ಮತ್ತು ನಮ್ಮೆಲ್ಲ ಜತೆಕ್ರೈಸ್ತರೊಂದಿಗಿನ ನಮ್ಮ ಮೂಲಭೂತ ಐಕಮತ್ಯವು, ಕ್ರಿಸ್ತನಲ್ಲಿ ನಮಗಾದ ಸ್ನಾನದಲ್ಲಿ ಬೇರೂರಿರುತ್ತದೆ.” (ಕ್ರಿಶ್ಚಿಯನ್ಸ್ ಇನ್ ಕಮ್ಯೂನಿಯನ್) ಆದರೂ, ಕ್ರಿಸ್ತನಲಿಡ್ಲುವ ಸಾಮಾನ್ಯ ನಂಬಿಕೆಯ ಕಾರಣ, ಮತಬೇಧಗಳು ಪ್ರಾಮುಖ್ಯವಲ್ಲವೆಂದು ಹೇಳುವುದು, ಎಷ್ಟರ ತನಕ ನಿಮ್ಮ ಹೃದಯವು ಸುದೃಢವಾಗಿದೆಯೊ ಆ ತನಕ ಕ್ಯಾನ್ಸರ್ ರೋಗ ಅಷ್ಟೇನು ಗಂಭೀರವಲ್ಲವೆಂದು ಹೇಳುವಂತಿದೆ.
ವಾಸ್ತವವೇನಂದರೆ ಒಡಂಬಡಿಸುವ ಬೋಧಕರು ತಮಗಾಗಿ ಅನುಯಾಯಿಗಳನ್ನು ಕೂಡಿಸಿಕೊಳ್ಳುವಾಗ ಅಂತಹ ಆಧುನಿಕ ಧಾರ್ಮಿಕ ಚಳವಳಿಗಳು ಗಲಿಬಿಲಿಗೆ ಹೆಚ್ಚನ್ನು ಕೂಡಿಸಿವೆ ಮತ್ತು ಆತ್ಮಿಕ ಅರಾಜಕತೆಯನ್ನು ಉಂಟುಮಾಡಿವೆ. ಸಾವಿರಾರು ಜನರನ್ನು ತಪ್ಪುದಾರಿಗೆಳೆದ ಆತ್ಮಿಕ ಮುಖಂಡರಲ್ಲಿ ಜಿಮ್ ಜೋನ್ಸ್ ಮತ್ತು ಡೇವಿಡ್ ಕೋರೆಷ್ ಇತ್ತೀಚಿನ ಉದಾಹರಣೆಗಳಾಗಿದ್ದಾರೆ. (ಮತ್ತಾಯ 15:14) ಬ್ಯಾಪ್ಟಿಸ್ಟ್ ಪಾದ್ರಿಯೊಬ್ಬರು ಕು ಕಕ್ಲ್ಸ್ ಕ್ಲ್ಯಾನ್ನ ಒಬ್ಬ ಮುಖ್ಯ ಸದಸ್ಯರಾಗಿ ಇದ್ದಾರೆ. ಬಿಳಿಯರ ಶ್ರೇಷ್ಠತ್ವಕ್ಕಾಗಿ ಅವರು ತನ್ನ ಚಳವಳಿಯನ್ನು ಒಂದು ಧಾರ್ಮಿಕ ಪುನರುಜ್ಜೀವನದೊಂದಿಗೆ ಜೋಡಿಸುತ್ತಾರೆ ಮತ್ತು ಯಾರು ಅದರಲ್ಲಿ ಭಾಗಿಗಳಾಗುವರೊ ಅವರಿಗೆ “ದೈವಿಕ ಮಾರ್ಗದರ್ಶನದ ಬಲವು ಕೊಡಲ್ಪಡುವುದು, ಕಲ್ವರಿಯಲ್ಲಿ ಸತ್ತಾದಾತನ [ಯೇಸು ಕ್ರಿಸ್ತನ] ಧೈರ್ಯವು ನೀಡಲ್ಪಡುವುದು” ಎಂದು ಹೇಳುತ್ತಾರೆ.
ಯೇಸುವಿನ ಹೆಸರಿನಲ್ಲಿ ನಡಿಸಲ್ಪಟ್ಟವುಗಳೆಂದು ಎಣಿಸಲಾಗುವ ಅದ್ಭುತಗಳು, ಮಹತ್ಕಾರ್ಯಗಳು, ಮತ್ತು ಸೂಚಕ ಕಾರ್ಯಗಳ ಕುರಿತೇನು? ಕೇವಲ “ಸ್ವಾಮೀ, ಸ್ವಾಮೀ” ಎಂದು ಹೇಳುವವರು ಆತನ ಅನುಗ್ರಹವನ್ನು ಪಡೆಯುವುದಿಲ್ಲ, ಬದಲಿಗೆ ‘ಆತನ ತಂದೆಯ ಚಿತ್ತವನ್ನು ಮಾಡುವವರು’ ಪಡೆಯುತ್ತಾರೆ ಎಂಬ ಯೇಸು ಕ್ರಿಸ್ತನ ಬಲವಾದ ಎಚ್ಚರಿಕೆಯನ್ನು ನೆನಪಿಸಿರಿ. ಇಂದು ಅನೇಕರಿಗೆ ಆತನ ತಂದೆಯಾದ ಯೆಹೋವನ ಹೆಸರು ಕೂಡ ಗೊತ್ತಿರುವುದಿಲ್ಲ. ‘ಅವನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವ, ಮತ್ತು ಅವನ ಹೆಸರಿನ ಮೇಲೆ ಮಹತ್ಕಾರ್ಯಗಳನ್ನು ಮಾಡುವ,’ ಆದರೂ “ಧರ್ಮವನ್ನು ಮೀರಿನಡೆಯುವವ”ರಾಗಿರುವ ಆ ಜನರ ವಿಷಯದಲ್ಲಿ ಯೇಸು ಎಚ್ಚರಿಸಿದನು.—ಮತ್ತಾಯ 7:21-23.
“ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ”
ರೋಗಗ್ರಸ್ತ ಕ್ರೈಸ್ತಪ್ರಪಂಚಕ್ಕಾಗಿ ಇರುವ ಮುಂಗಾಣಿಕೆ ಏನು? ಅದು ಅತಿ ಕೆಟ್ಟದ್ದಾಗಿದೆ. ಹಾಗಾದರೆ ನಾವು ಕ್ಯಾತೊಲಿಕ್ ಬಿಷಪ್ ಬಟ್ಲರ್ರ ಸಲಹೆಯನ್ನು ತೆಗೆದುಕೊಂಡು, “ಹೆಚ್ಚು ಗಡಿಬಿಡಿಯಿಲ್ಲದೆ [ಚರ್ಚನ್ನು] ಸೇರಿ, ಆಕೆಯ ಪಂಕ್ತಿಯೊಳಗಿಂದ ಆಕೆಯ ಸತತ ‘ಶುದ್ಧೀಕರಣ’ಕ್ಕಾಗಿ” ನಮ್ಮ ನೆರವನ್ನು ನೀಡೋಣವೆ? ಇಲ್ಲ! ವಿಭಾಗಿತವಾದ ಮತ್ತು ಮತಬೇಧದ ಕ್ರೈಸ್ತಪ್ರಪಂಚವು ಪಾರಾಗಿ ಉಳಿಯುವುದಿಲ್ಲ. (ಮಾರ್ಕ 3:24, 25) ಅವಳು ಮಹಾ ಬಾಬೆಲು ಎಂಬ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ಒಂದು ಭಾಗವಾಗಿದ್ದಾಳೆ. (ಪ್ರಕಟನೆ 18:2, 3) ಈ ರಕ್ತಾಪರಾಧಿ ಧಾರ್ಮಿಕ ವ್ಯವಸ್ಥೆಯ ದೇವರ ಕೈಯಿಂದ ಶೀಘ್ರ ನಾಶನವನ್ನು ಎದುರಿಸುತ್ತದೆ.
ನಿಜ ಕ್ರೈಸ್ತರು ಈ ಭ್ರಷ್ಟ ಧಾರ್ಮಿಕ ಸಂಸ್ಥೆಯೊಳಗೆ ಉಳಿದು ಅದನ್ನು ಒಳಗಿನಿಂದ ಸುಧಾರಿಸಲು ಪ್ರಯತ್ನಿಸಬೇಕೆಂದು ಬೈಬಲ್ ಸೂಚಿಸುವುದಿಲ್ಲ. ಬದಲಿಗೆ ಅದು ಪ್ರಬೋಧಿಸುವುದು: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು. ಅವಳ ಪಾಪಗಳು ಒಂದರ ಮೇಲೊಂದು ಸೇರಿ ಆಕಾಶದ ಪರ್ಯಂತರಕ್ಕೂ ಬೆಳೆದವೆ. ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿಕೊಂಡನು.”—ಪ್ರಕಟನೆ 18:4, 5.
“ಬಿಟ್ಟುಬನ್ನಿರಿ” ಎಲ್ಲಿಗೆ? ನೆನಪಿಸಿರಿ, ಕೊಯ್ಲಿನ ಸಮಯದಲ್ಲಿ, ನಿಜ ಕ್ರೈಸ್ತರು ಒಂದು ಲೋಕವ್ಯಾಪಕ ಐಕಮತ್ಯದೊಳಗೆ ಪುನಃ ಒಂದುಗೂಡಿಸಲ್ಪಡುವರು ಎಂದು ಯೇಸು ವಚನವಿತ್ತನು. ಪ್ರವಾದಿ ಮೀಕನು ಸಹ ಅಂಥ ಒಂದು ಪುನಃ ಒಟ್ಟುಸೇರುವಿಕೆಯನ್ನು ಈ ಮಾತುಗಳಲ್ಲಿ ಮುಂತಿಳಿಸಿದ್ದಾನೆ: “ಅವರನ್ನು ಹಟ್ಟಿಯಲ್ಲಿನ ಕುರಿಗಳಂತೆ ಒಟ್ಟಿಗಿಡುವೆನು.” (ಮೀಕ 2:12) ಇದು ಸಂಭವಿಸಿರುತ್ತದೊ?
ಹೌದು! ಲೋಕದಾದ್ಯಂತ ಒಂದು ಐಕ್ಯವುಳ್ಳ ಸಹೋದರತ್ವದೊಳಗೆ ನಿಜ ಕ್ರೈಸ್ತರು ಈಗ ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಅವರು ಯಾರು? ಯಾರು 231 ದೇಶಗಳಲ್ಲಿ ದೇವರ ರಾಜ್ಯದ ಕುರಿತ ಸುವಾರ್ತೆಯನ್ನು ಐಕಮತ್ಯದಿಂದ ಸಾರುತ್ತಿದ್ದಾರೊ ಆ ಯೆಹೋವನ ಸಾಕ್ಷಿಗಳ ಕ್ರೈಸ್ತ ಸಭೆಯೇ ಅವರಾಗಿದ್ದಾರೆ. ಅವರು ಕ್ರೈಸ್ತಪ್ರಪಂಚದ ಬೇಧಹುಟ್ಟಿಸುವ ಬೋಧನೆಗಳ್ನು ತಿರಸ್ಕರಿಸಿದ್ದಾರೆ ಮತ್ತು ದೇವರನ್ನು ಆತನ ವಾಕ್ಯದ ಸತ್ಯಕ್ಕನುಗುಣವಾಗಿ ಆರಾಧಿಸಲು ಅವರು ಹುಡುಕುತ್ತಾರೆ.—ಯೋಹಾನ 8:31, 32; 17:17.
ಅವರೊಂದಿಗೆ ಮಾತಾಡಲು ನೀವು ಹೃತ್ಪೂರ್ವಕವಾಗಿ ಆಮಂತ್ರಿಸಲ್ಪಡುತ್ತೀರಿ. ಯೆಹೋವನ ಸಾಕ್ಷಿಗಳ ಕುರಿತು ನೀವು ಹೆಚ್ಚನ್ನು ತಿಳಿಯಲು ಇಷ್ಟೈಸುವುದಾದರೆ, ದಯವಿಟ್ಟು ಅವರನ್ನು ಸ್ಥಳಿಕವಾಗಿ ಅಥವಾ ಈ ಪತ್ರಿಕೆಯ 2 ನೆಯ ಪುಟದಲ್ಲಿರುವ ತಕ್ಕದಾದ ವಿಳಾಸದ ಮೂಲಕ ಸಂಪರ್ಕಿಸಿರಿ.
[ಪುಟ 7 ರಲ್ಲಿರುವ ಚಿತ್ರ]
“ದೇವರು ಅವಳ ಅನ್ಯಾಯಗಳನ್ನು ಜ್ಞಾಪಿಸಿಕೊಂಡನು”