ಪಪೀಯಸನು ಕರ್ತನ ಹೇಳಿಕೆಗಳನ್ನು ಮಹತ್ವದ್ದೆಂದೆಣಿಸಿದನು
“ಹೆಚ್ಚಾದುದನ್ನು ಹೇಳಲಿರುವ ವ್ಯಕ್ತಿಗಳ ಸಹವಾಸದಲ್ಲಿ . . . ನಾನು ಆನಂದಿಸಲಿಲ್ಲ, ಆದರೆ ಸತ್ಯವಾದುದನ್ನು ಯಾರು ಕಲಿಸಿದರೊ ಅವರ ಸಹವಾಸದಲ್ಲಿ ನಾನು ಆನಂದಿಸಿದೆನು.” ನಮ್ಮ ಸಾಮಾನ್ಯ ಶಕದ ಎರಡನೆಯ ಶತಮಾನದ ಒಬ್ಬ ಕ್ರೈಸ್ತನೆಂದು ಹೇಳಿಕೊಳ್ಳುವ, ಪಪೀಯಸನು ಹೀಗೆ ಬರೆದನು.
ಯೇಸು ಕ್ರಿಸ್ತನ ಅಪೊಸ್ತಲರ ಮರಣಾನಂತರ ಕೂಡಲೆ ಹಿಂಬಾಲಿಸಿದ ಕಾಲಾವಧಿಯಲ್ಲಿ ಪಪೀಯಸನು ಜೀವಿಸಿದ್ದನು. ವಾಸ್ತವವಾಗಿ, ವರದಿಗಳಿಗನುಸಾರ ಅವನು ಅಪೊಸ್ತಲ ಯೋಹಾನನಿಂದ ಕಲಿತ ಪೊಲಿಕಾರ್ಪ್ನ ಒಬ್ಬ ಸಹವಾಸಿಯಾಗಿದ್ದನು. ಜ್ಞಾನವನ್ನು ಸಂಪಾದಿಸುವ ಪಪೀಯಸನ ವಿಧಾನದೊಂದಿಗೆ ಜೊತೆಗೂಡಿದ ಈ ಆಧಾರಗಳು, ಅವನು ತಕ್ಕ ತಿಳಿವಳಿಕೆಯುಳ್ಳವನಾಗಿದ್ದಿರಬಹುದೆಂದು ತೋರಿಸುತ್ತವೆ.
ಜಾಗರೂಕವಾದ ವಿಧಾನ
ಕರ್ತನ ಹೇಳಿಕೆಗಳ ಮೇಲೆ ಅವನ ಕೃತಿಯು ಕೂಡಿರುವ ಐದು ಪುಸ್ತಕಗಳಲ್ಲಿ, ಪಪೀಯಸನ ಸತ್ಯಕ್ಕಾಗಿರುವ ದಾಹವು ಸ್ಪಷ್ಟವಾಗಿಗಿ ರುಜುವಾಗಿದೆ. ಅವನ ಮುಂಚಿನ ವರ್ಷಗಳಲ್ಲಿ, ಸಂದೇಹವಿಲ್ಲದೆ ಪಪೀಯಸನು ಅವನು ಕೇಳಿದ್ದ ಸತ್ಯದ ಹೇಳಿಕೆಗಳಲ್ಲಿ ಹೆಚ್ಚಿನವುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದನು. ತದನಂತರ, ಏಷ್ಯಾ ಮೈನರ್ನಲ್ಲಿ, ಅವನ ವಾಸಸ್ಥಾನವಾಗಿದ್ದ ಹೈರಾಪೊಲಿಸ್ ಎಂಬ ಫ್ರಿಜಿಯದ ಪಟ್ಟಣದಿಂದ, ವಯಸ್ಸಾದವರು ಯೇಸುವಿನ ಅಪೊಸ್ತಲರಲ್ಲಿ ಯಾರನ್ನಾದರೂ ನೋಡಿದ್ದರೊ ಯಾ ಅವರಿಗೆ ಕಿವಿಗೊಟ್ಟಿದ್ದರೊ ಎಂಬುದನ್ನು ಖಚಿತ ಪಡಿಸಿಕೊಳ್ಳಲು, ಪಪೀಯಸನು ಅವರನ್ನು ವಿಚಾರಿಸಿದನು. ಅವನು ಅವರನ್ನು ಅತ್ಯಾಸಕಿಯ್ತಿಂದ ಪ್ರಶ್ನಿಸಿದನು ಮತ್ತು ಅವರಿಗೆ ಏನು ಹೇಳಲಿಕ್ಕಿತ್ತೊ ಅದನ್ನು ದಾಖಲು ಮಾಡಿದನು.
ಪಪೀಯಸನು ವಿವರಿಸುವುದು: “ಅವರ ಸತ್ಯದ ಕುರಿತಾಗಿ ನಿಮಗೆ ಆಶ್ವಾಸನೆಯನ್ನೀಯುತ್ತಾ, ವಯಸ್ಸಾದರಿಂದ ಯಾವುದೇ ಸಮಯದಲ್ಲಿ ನಾನು ಯಾವುದನ್ನು ಜಾಗರೂಕವಾಗಿ ಕಲಿತಿದ್ದೇನೊ, ಮತ್ತು ಜಾಗರೂಕವಾಗಿ ನೆನಪಿನಲ್ಲಿ ಇಟ್ಟುಕೊಂಡಿದೇನ್ದೊ . . . ಅದನ್ನು ಬರೆದಿಡಲು ನಾನು ಹಿಂಜರಿಯುವುದಿಲ್ಲ. ಹೆಚ್ಚಿನ ಜನರಂತೆ, ನಾನು ಯಾರಿಗೆ ಹೆಚ್ಚನ್ನು ಹೇಳಲಿಕ್ಕಿತ್ತೊ ಅವರ ಜೊತೆಯನ್ನಲ್ಲ, ಆದರೆ ಯಾರು ಸತ್ಯವಾದದ್ದನ್ನು ಕಲಿಸಿದರೊ ಅವರ ಜೊತೆಯನ್ನು; ಇತರರ ಆಜ್ಞೆಗಳನ್ನು ತಿಳಿಸುವವರೊಂದಿಗಲ್ಲ, ಆದರೆ ನಂಬಿಕೆಯಲ್ಲಿರುವವರಿಗೆ ಕರ್ತನಿಂದ ಕೊಡಲ್ಪಟ್ಟ ಮತ್ತು ಸತ್ಯದಿಂದ ಹೊರಬರುವ ಆಜ್ಞೆಗಳನ್ನು ತಿಳಿಸುವವರೊಂದಿಗೆ ನಾನು ಆನಂದಿಸಿದೆನು. ಹಿರಿಯರ ಹಿಂಬಾಲಕನಾಗಿದ್ದ ಯಾವುದೇ ವ್ಯಕ್ತಿ ನನ್ನನ್ನು ಭೇಟಿಯಾಗುವುದಾದರೆ, ಆಂದ್ರೆಯನು ಯಾ ಪೇತ್ರನು ಏನನ್ನು ಹೇಳಿದರು, ಅಥವಾ ಫಿಲಿಪ್ ಯಾ ತೋಮನು ಯಾ ಯಾಕೋಬನು, ಅಥವಾ ಯೋಹಾನನು ಯಾ ಮತ್ತಾಯನು ಅಥವಾ ಕರ್ತನ ಬೇರೆ ಯಾವ ಶಿಷ್ಯರಾದರೂ ಏನನ್ನು ಹೇಳಿದರು—ಎಂಬುದಾಗಿ ಹಿರಿಯರ ಮೂಲಕ ಕೊಡಲ್ಪಟ್ಟ ವರದಿಗಾಗಿ ನಾನು ಕೇಳುತ್ತಿದ್ದೆ.”
ಅವನ ಕೃತಿ
ನಿಸ್ಸಂಶಯವಾಗಿ ಆತ್ಮಿಕ ಜ್ಞಾನದ ಒಂದು ಸಂಪತ್ತು ಪಪೀಯಸನಿಗೆ ಲಭ್ಯವಾಗಿತ್ತು. ಅಪೊಸ್ತರಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಜೀವನ ಮತ್ತು ಶುಶ್ರೂಷೆಯನ್ನು ಸುತ್ತುವರೆದಿದ್ದ ವಿವರಗಳಿಗೆ ಅವನು ಎಷ್ಟು ತಲ್ಲೀನತೆಯಿಂದ ಕಿವಿಗೊಟ್ಟಿರಬಹುದೆಂದು ನಾವು ಕೇವಲ ಊಹಿಸಬಲ್ಲೆವು. ಸುಮಾರು ಸಾ. ಶ. 135 ರಲ್ಲಿ, ಅವನಿಗೆ ಏನನ್ನು ಹೇಳಲಿಕ್ಕಿತ್ತೊ ಅದನ್ನು ತನ್ನ ಸ್ವಂತ ಪುಸ್ತಕದಲ್ಲಿ ಪಪೀಯಸನು ಬರೆದನು. ವಿಷಾದಕರವಾಗಿ, ಈ ಪುಸ್ತಕವು ಕಾಣೆಯಾಗಿದೆ. ಅದು ಸಾ. ಶ. ಎರಡನೆಯ ಶತಮಾನದ ಒಬ್ಬ ಅಪಾದಿತ ಕ್ರೈಸ್ತನಾದ ಐರಿನಿಯಸ್, ಮತ್ತು ನಾಲ್ಕನೆಯ ಶತಮಾನದ ಇತಿಹಾಸಗಾರನಾದ ಯುಸಿಬಿಯಸನಿಂದ ಉದ್ಧರಿಸಲಾಗಿತ್ತು. ವಾಸ್ತವವಾಗಿ, ಅದನ್ನು ಇನ್ನೂ 9 ನೆಯ ಶತಮಾನದಲ್ಲಿ ಓದಲಾಗುತ್ತಿತ್ತು ಮತ್ತು 14 ನೆಯ ಶತಮಾನದ ತನಕ ಅದು ಅಸ್ತಿತ್ವದಲ್ಲಿ ಇದ್ದಿರಬಹುದು.
ಕ್ರಿಸ್ತನ ಬರಲಿರುವ ಸಹಸ್ರ ವರ್ಷಗಳ ಆಳಿಕೆಯಲ್ಲಿ ಪಪೀಯಸನು ನಂಬಿಕೆಯನ್ನಿಟ್ಟಿದ್ದನು. (ಪ್ರಕಟನೆ 20:2-7) “ಕರ್ತನ ಶಿಷ್ಯನಾದ ಯೋಹಾನನನ್ನು ಕಂಡ ವಯಸ್ಸಾದವರು, ಆ ಸಮಯಗಳ ಕುರಿತು ಕರ್ತನು ಹೇಗೆ ಕಲಿಸಿದ್ದನು ಎಂಬುದರ ಬಗೆಗೆ ಅವರು ಕೇಳಿದ್ದರೆಂದು ವರದಿಸಿದ ಹಾಗೆಯೇ, ಆಕಾಶದ ಮಂಜಿನಿಂದ ಮತ್ತು ಭೂಮಿಯ ಫಲಶಕ್ತಿಯಿಂದ ನವೀಕರಿಸಲ್ಪಟ್ಟ ಮತ್ತು ಸ್ವತಂತ್ರಗೊಳಿಸಲ್ಪಟ್ಟ ಸೃಷ್ಟಿಯು ಎಲ್ಲಾ ಬಗೆಯ ಆಹಾರವನ್ನು ವಿಪುಲವಾಗಿ ನೀಡುವ,” ಸಮಯದ ಕುರಿತು ಐರಿನಿಯಸನಿಗನುಸಾರ, ಅವನು ಬರೆದನು. ಪಪೀಯಸನು ಮುಂದುವರಿಸಿ ಬರೆದದ್ದು: “ನಂಬುವವರಿಗೆ, ಈ ವಿಷಯಗಳು ವಿಶ್ವಾಸಾರ್ಹವಾಗಿವೆ. ದ್ರೋಹಿಯಾದ ಯೂದನು, ನಂಬಲು ನಿರಾಕರಿಸಿ, ‘ಕರ್ತನಿಂದ ಇಂಥ ಒಂದು ವಿಷಯವು ಹೇಗೆ ಸಾಧಿಸಲ್ಪಡುವುದು?’ ಎಂಬುದಾಗಿ ಕೇಳಿದಾಗ, ‘ಆಗ ಜೀವಿಸುವವರು ಅದನ್ನು ನೋಡುವರು,’ ಎಂಬುದಾಗಿ ಕರ್ತನು ಹೇಳಿದನು.”
ಜ್ಞಾನವಾದವು ಅತಿಯಾಗಿದ್ದ ಸಮಯದಲ್ಲಿ ಪಪೀಯಸನು ಬರೆದನು. ಜ್ಞಾನವಾದಿಗಳು ಧರ್ಮಭ್ರಷ್ಟ ಕ್ರೈಸ್ತತ್ವದೊಂದಿಗೆ ತತ್ವಜ್ಞಾನ, ಊಹೆ, ಮತ್ತು ವಿಧರ್ಮಿ ರಹಸ್ಯವಾದವನ್ನು ಹೆಣೆದರು. ವಾಸ್ತವವಾಗಿ, ಕರ್ತನ ಉಪದೇಶಗಳು, ಯಾ ಹೇಳಿಕೆಗಳ ಕುರಿತಾದ ಪಪೀಯಸನ ಪ್ರದರ್ಶನವು, ಜ್ಞಾನವಾದದ ಹರಡುವಿಕೆಯನ್ನು ತಡೆಯುವುದರಲ್ಲಿ ಒಂದು ಪ್ರಯತ್ನವಾಗಿತ್ತು. ಅವನ ತರುವಾಯ, ಐರಿನಿಯಸ್ ಜ್ಞಾನವಾದಿಗಳ ಸುಳ್ಳಾದ ಮತ್ತು ಅತಿರೇಕ ಆತ್ಮಿಕತೆಯನ್ನು ಪ್ರತಿರೋಧಿಸಲು ಮುಂದುವರಿದನು. ಜ್ಞಾನವಾದಿಗಳ ಸಾಹಿತ್ಯವು ದೊಡ್ಡ ಗಾತ್ರದ್ದಾಗಿದ್ದು, “ಯಾರಿಗೆ ಹೇಳಲು ಇಷ್ಟು ಹೆಚ್ಚು ಇತ್ತೊ,” ಎಂಬ ವ್ಯಂಗ್ಯವಾದ ಪ್ರಸ್ತಾಪವನ್ನು ಪಪೀಯಸನು ಮಾಡುವಂತೆ ಕಾರಣವಾಯಿತು. ಅವನ ಉದ್ದೇಶವು ಸ್ಪಷ್ಟವಾಗಿಗಿತ್ತು—ಸುಳ್ಳನ್ನು ಸತ್ಯದಿಂದ ನಿವಾರಿಸುವುದು.—1 ತಿಮೊಥೆಯ 6:4; ಫಿಲಿಪ್ಪಿ 4:5.
ಸುವಾರ್ತೆಗಳ ಮೇಲೆ ಹೇಳಿಕೆಗಳು
ಇನ್ನೂ ಅಸ್ತಿತ್ವದಲ್ಲಿ ಇರುವ ಪಪೀಯಸನ ಬರಹಗಳ ಅವಶಿಷ್ಟಗಳಲ್ಲಿ, ಮತ್ತಾಯ ಮತ್ತು ಮಾರ್ಕರಿಂದ ಬರೆಯಲ್ಪಟ್ಟ ಕಥನಗಳ ಕುರಿತು ಉಲ್ಲೇಖವನ್ನು ನಾವು ಕಾಣುತ್ತೇವೆ. ಉದಾಹರಣೆಗೆ, ಮಾರ್ಕನ ದಾಖಲೆಯ ಕುರಿತು ಪಪೀಯಸನು ಹೀಗೆ ಹೇಳುತ್ತಾನೆ: “ಪೇತ್ರನ ವ್ಯಾಖ್ಯಾಕಾರನಾಗಿ ಪರಿಣಮಿಸಿದ್ದ ಮಾರ್ಕನು, ಅವನು ಜ್ಞಾಪಕದಲ್ಲಿಟ್ಟು ಕೊಂಡಿದ್ದನ್ನೆಲ್ಲಾ ನಿಷ್ಕೃಷ್ಟವಾಗಿ ಬರೆದನು.” ಈ ಸುವಾರ್ತೆಯ ನಿಷ್ಕೃಷ್ಟತೆಯನ್ನು ಇನ್ನೂ ಹೆಚ್ಚಾಗಿ ದೃಢೀಕರಿಸುತ್ತಾ, ಪಪೀಯಸನು ಮುಂದುವರಿಸುತ್ತಾನೆ: “ಕೆಲವು ವಿಷಯಗಳನ್ನು ಅವನು ಜ್ಞಾಪಿಸಿಕೊಂಡಂತೆ, ಅವುಗಳನ್ನು ಹೀಗೆ ಬರೆಯುವಾಗ, ಮಾರ್ಕನು ಯಾವ ತಪ್ಪನ್ನು ಮಾಡಲಿಲ್ಲ; ಅವನು ಕೇಳಿದರ್ದಲ್ಲಿ ಯಾವುದನ್ನು ಬಿಟ್ಟುಬಿಡದೇ ಇರುವುದನ್ನು, ಯಾ ಅದರೊಳಗೆ ಯಾವುದೇ ಸುಳ್ಳು ಹೇಳಿಕೆಯನ್ನು ಹಾಕದೇ ಇರುವುದನ್ನು ಅವನ ಆಸ್ಥೆಯನ್ನಾಗಿ ಮಾಡಿದನು.”
ಮತ್ತಾಯನು ತನ್ನ ಸುವಾರ್ತೆಯನ್ನು ಮೂಲತಃ ಹೀಬ್ರು ಭಾಷೆಯಲ್ಲಿ ಬರೆದನೆಂಬುದಕ್ಕೆ ಬಾಹ್ಯ ಪ್ರಮಾಣವನ್ನು ಪಪೀಯಸನು ಒದಗಿಸುತ್ತಾನೆ. ಪಪೀಯಸನು ಹೇಳುವುದು: “ಹೇಳಿಕೆಗಳನ್ನು ಅವನು ಇಬ್ರಿಯ ಭಾಷೆಯಲ್ಲಿ ಬರೆದನು, ಮತ್ತು ಅವನಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಅವುಗಳಲ್ಲಿ ಪ್ರತಿಯೊಂದನ್ನು ವ್ಯಾಖ್ಯಾನಿಸಿದನು.” ಲೂಕನ ಮತ್ತು ಯೋಹಾನನ ಸುವಾರ್ತೆಯ ದಾಖಲೆಗಳಿಗೂ, ಅಷ್ಟೇ ಅಲ್ಲದೆ ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳ ಬೇರೆ ಬರಹಗಳಿಗೂ ಕೂಡ ಪಪೀಯಸನು ಉಲ್ಲೇಖ ಮಾಡಿದ ಸಾಧ್ಯತೆ ಇದೆ. ಹಾಗಿರುವುದಾದರೆ, ಅವುಗಳ ನಿಜತ್ವ ಮತ್ತು ದೈವಿಕ ಪ್ರೇರಣೆಯನ್ನು ಸ್ಥಾಪಿಸುವಲ್ಲಿ, ಬಹಳ ಆದಿಯ ಸಾಕ್ಷಿಗಳಲ್ಲಿ ಅವನು ಒಬ್ಬನಾಗಿರುವನು. ದುರ್ಭಾಗ್ಯಕರವಾಗಿ, ಪಪೀಯಸನ ಬರಹಗಳ ಅತ್ಯಲ್ಪವಾದ ಅವಶಿಷ್ಟಗಳು ಮಾತ್ರ ಬದುಕಿ ಉಳಿದಿವೆ.
ಅವನ ಆತ್ಮಿಕ ಅಗತ್ಯದ ಕುರಿತು ಅರಿವುಳ್ಳವನು
ಹೈರಾಪೊಲಿಸ್ನ ಸಭೆಯಲ್ಲಿ ಒಬ್ಬ ಮೇಲ್ವಿಚಾರಕನೋಪಾದಿ, ಪಪೀಯಸನು ದಣಿಯದ ಪರೀಕ್ಷಕನಾಗಿದ್ದನು. ಪರಿಶ್ರಮಿ ಸಂಶೋಧಕನಾಗಿರುವದರೊಟ್ಟಿಗೆ, ಶಾಸ್ತ್ರವಚನಗಳಿಗಾಗಿ ತೀವ್ರವಾದ ಗಣ್ಯತೆಯನ್ನು ಅವನು ಪ್ರದರ್ಶಿಸಿದನು. ಅವನ ದಿನದ ಸಾಹಿತ್ಯದಲ್ಲಿ ಕಂಡುಕೊಳ್ಳಲಾದ ವಿಚಿತ್ರ ಹೇಳಿಕೆಗಳಿಗಿಂತಲೂ ಯೇಸು ಕ್ರಿಸ್ತನ ಯಾ ಅವನ ಅಪೊಸ್ತಲರ ಯಾವುದೇ ತಾತ್ವಿಕ ಹೇಳಿಕೆಯನ್ನು ವಿವರಿಸುವುದು ಹೆಚ್ಚು ಬೆಲೆಯುಳ್ಳದ್ದಾಗಿ ಇರುವುದೆಂದು ಪಪೀಯಸನು ಸರಿಯಾಗಿ ತೀರ್ಮಾನಿಸಿದನು.—ಯೂದ 17.
ಪಪೀಯಸನು, ಸುದ್ದಿಗನುಸಾರ ಪೆರ್ಗಮದಲ್ಲಿ ಸಾ. ಶ. 161 ಯಾ 165 ರಲ್ಲಿ ಮರಣವನ್ನು ಅನುಭವಿಸಿದನು. ಯೇಸು ಕ್ರಿಸ್ತನ ಬೋಧನೆಗಳು ನಿಜವಾಗಿಯೂ ಪಪೀಯಸನ ಜೀವನ ಮತ್ತು ವರ್ತನೆಯನ್ನು ಎಷ್ಟು ಆಳವಾಗಿ ಪ್ರಭಾವಿಸಿತ್ತೆಂದು ಖಾತ್ರಿಯಿಂದ ಹೇಳಲು ಆಗುವುದಿಲ್ಲ. ಆದರೂ, ಶಾಸ್ತ್ರವಚನಗಳನ್ನು ಕಲಿಯಲು ಮತ್ತು ಚರ್ಚಿಸಲು ಅವನಿಗೆ ತೀಕ್ಷೈವಾದ ಬಯಕೆ ಇತ್ತು. ಅವರ ಆತ್ಮಿಕ ಅಗತ್ಯದ ಅರಿವು ಅವರಿಗೆ ಇರುವುದರಿಂದ, ನಿಜ ಕ್ರೈಸ್ತರು ಇಂದು ಹಾಗೆಯೇ ಮಾಡುತ್ತಾರೆ. (ಮತ್ತಾಯ 5:3) ಮತ್ತು ಪಪೀಯಸನ ಹಾಗೆ ಅವರು ಕರ್ತನ ಹೇಳಿಕೆಗಳನ್ನು ಮಹತ್ವದ್ದೆಂದೆಣಿಸುತ್ತಾರೆ.