ನಿಮ್ಮ ಸದಾಚಾರಗಳನ್ನು ಯಾವನೂ ಕೆಡಿಸದಿರಲಿ
“ಮೋಸಹೋಗಬೇಡಿರಿ. ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”—1 ಕೊರಿಂಥ 15:33.
1, 2. (ಎ) ಕೊರಿಂಥದ ಕ್ರೈಸ್ತರೆಡೆಗೆ ಪೌಲನ ಭಾವನೆ ಏನಾಗಿತ್ತು, ಮತ್ತು ಏಕೆ? (ಬಿ) ಯಾವ ವಿಶಿಷ್ಟ ಬುದ್ಧಿವಾದವನ್ನು ನಾವು ಚರ್ಚಿಸುವೆವು?
ಹೆತ್ತವರ ಪ್ರೀತಿಯು ಎಂತಹ ಒಂದು ಭಾವುಕತೆಯಾಗಿದೆ! ಅದು ಹೆತ್ತವರನ್ನು ತಮ್ಮ ಮಕ್ಕಳಿಗಾಗಿ ತ್ಯಾಗವನ್ನು ಮಾಡುವಂತೆ, ಕಲಿಸುವಂತೆ ಮತ್ತು ಬುದ್ಧಿಹೇಳುವಂತೆ ಪ್ರೇರೇಪಿಸುತ್ತದೆ. ಅಪೊಸ್ತಲ ಪೌಲನು ಪ್ರಾಕೃತಿಕ ತಂದೆಯಾಗಿದ್ದಿರಲಿಕ್ಕಿಲ್ಲ, ಆದರೆ ಕೊರಿಂಥದ ಕ್ರೈಸ್ತರಿಗೆ ಅವನು ಬರೆದದ್ದು: “ನಿಮಗೆ ಕ್ರಿಸ್ತನಲ್ಲಿ ಉಪಾಧ್ಯಾಯರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹುಮಂದಿ ಇಲ್ಲ. ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದೆನು.”—1 ಕೊರಿಂಥ 4:15.
2 ಇದಕ್ಕೆ ಮುಂಚಿತವಾಗಿ, ಪೌಲನು ಕೊರಿಂಥಕ್ಕೆ ಪ್ರಯಾಣ ಬೆಳೆಸಿದ್ದನು, ಅಲ್ಲಿ ಅವನು ಯೆಹೂದ್ಯರಿಗೂ ಗ್ರೀಕರಿಗೂ ಸಾರಿದ್ದನು. ಕೊರಿಂಥದಲ್ಲಿ ಸಭೆಯನ್ನು ರಚಿಸಲು ಅವನು ಸಹಾಯ ಮಾಡಿದ್ದನು. ಇನ್ನೊಂದು ಪತ್ರದಲ್ಲಿ ಪೌಲನು ತನ್ನ ಪರಾಮರಿಕೆಯನ್ನು ಮೊಲೆಯುಣಿಸುವ ತಾಯಿಗೆ ಹೋಲಿಸಿದನು, ಆದರೆ ಕೊರಿಂಥದವರಿಗೆ ಅವನು ಒಬ್ಬ ತಂದೆಯಂತಿದ್ದನು. (1 ಥೆಸಲೊನೀಕ 2:7) ಒಬ್ಬ ಪ್ರೀತಿಯುಳ್ಳ ಪ್ರಾಕೃತಿಕ ತಂದೆಯಂತೆ, ಪೌಲನು ತನ್ನ ಆತ್ಮಿಕ ಮಕ್ಕಳಿಗೆ ಉಪದೇಶ ಮಾಡಿದನು. ಆದರೂ ಕೊರಿಂಥದಲ್ಲಿನ ಕ್ರೈಸ್ತರಿಗೆ ಕೊಟ್ಟ ಅವನ ಪಿತೃ ಸದೃಶ ಬುದ್ಧಿವಾದದಿಂದ ನೀವು ಪ್ರಯೋಜನ ಹೊಂದಬಲ್ಲಿರಿ: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಅದನ್ನು ಪೌಲನು ಕ್ರೈಸ್ತರಿಗೆ ಬರೆದದ್ದೇಕೆ? ಆ ಬುದ್ಧಿವಾದವನ್ನು ನಾವು ಹೇಗೆ ಅನ್ವಯಿಸಬಲ್ಲೆವು?
ಅವರಿಗಾಗಿ ಮತ್ತು ನಮಗಾಗಿ ಬುದ್ಧಿವಾದ
3, 4. ಒಂದನೆಯ ಶತಕದ ಕೊರಿಂಥದ ಮತ್ತು ಅದರ ಜನಸಂಖ್ಯೆಯ ಕುರಿತು ನಾವೇನನ್ನು ತಿಳಿದಿದ್ದೇವೆ?
3 ಒಂದನೆಯ ಶತಮಾನದಲ್ಲಿ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಸ್ಟ್ರೇಬೊ ಬರೆದದ್ದು: “ಕೊರಿಂಥವನ್ನು ‘ಧನಿಕ’ ದೇಶವಾಗಿ ಕರೆದದ್ದು ಅದರ ವ್ಯಾಪಾರ ವ್ಯವಹಾರದಿಂದಾಗಿ, ಯಾಕಂದರೆ ಅದು ಇಸಮ್ತಸ್ ಭೂಕಂಠದ ಮೇಲೆ ನೆಲೆಸಿದೆ ಮತ್ತು ಎರಡು ರೇವುಗಳ ಒಡೆತನ ಅದಕ್ಕಿದೆ, ಅದರಲ್ಲೊಂದು ನೇರವಾಗಿ ಏಷ್ಯಾಕ್ಕೆ ಮತ್ತು ಬೇರೊಂದು ಇಟೆಲಿಗೆ ನಡಿಸುತ್ತದೆ; ಮತ್ತು ಎರಡೂ ದೇಶಗಳಿಂದ ಸರಕುಗಳ ವಿನಿಮಯವನ್ನು ಅದು ಸುಲಭವನ್ನಾಗಿ ಮಾಡುತ್ತದೆ.” ಪ್ರತಿ ಎರಡು ವರ್ಷ ಪ್ರಖ್ಯಾತ ಇಸ್ಮ್ತಿಯನ್ ಆಟಗಳು ದೊಡ್ಡ ಜನಸ್ತೋಮವನ್ನು ಕೊರಿಂಥಕ್ಕೆ ತರುತ್ತಿತ್ತು.
4 ಸರಕಾರಿ ಅಧಿಕಾರ ಮತ್ತು ಆಫ್ರೊಡೈಟಿಯ ವಿಷಯಾಸಕ್ತ ಆರಾಧನೆ ಎರಡಕ್ಕೂ ಕೇಂದ್ರವಾಗಿದ್ದ ಈ ಶಹರದ ಜನರು ಹೇಗಿದ್ದರು? ಪ್ರೊಫೆಸರ್ ಟಿ.ಎಸ್. ಎವನ್ಸ್ ವಿವರಿಸಿದ್ದು: “ಜನ ಸಂಖ್ಯೆಯು ಪ್ರಾಯಶಃ ಸುಮಾರು 4,00,000 [ಆಗಿತ್ತು]. ಸಮಾಜ ಉಚ್ಚ ಸಂಸ್ಕೃತಿಯ [ದಾಗಿತ್ತು], ಆದರೆ ನೈತಿಕತೆಯಲ್ಲಿ ಸಡಿಲು, ಅಶ್ಲೀಲ ಸಹ. . . . ಅಖಾಯದ ಗ್ರೀಕ್ ನಿವಾಸಿಗಳು ಪ್ರಜ್ಞಾಶಾಲಿ ಅಸ್ತಿಮಿತದಿಂದ ಮತ್ತು ನವೀನತೆಗಾಗಿ ಉದ್ರಿಕ್ತ ಹಂಬಲದಿಂದ ಗುರುತಿಸಲ್ಪಟ್ಟಿದ್ದರು. . . . ಅವರ ಅಹಂಭಾವವು ಪಕ್ಷಬೇಧವನ್ನು ಸುಲಭವಾಗಿಯೇ ಪ್ರಚೋದಿಸಶಕವ್ತಾಗಿತ್ತು.”
5. ಕೊರಿಂಥದ ಸಹೋದರರು ಯಾವ ಅಪಾಯವನ್ನು ಎದುರಿಸಿದ್ದರು?
5 ಕಾಲಾನಂತರ, ಸಭೆಯು ಕೂಡ ಬಿಂಕದ ಊಹಾಪೋಹಗಳ ಕಡೆಗೆ ಇನ್ನೂ ಓಲಿದ್ದ ಕೆಲವರಿಂದ ವಿಭಾಗವಾಯಿತು. (1 ಕೊರಿಂಥ 1:10-31; 3:2-9) “ಸತ್ತವರಿಗೆ ಪುನರುತ್ಥಾನವೇ ಇಲ್ಲ” ಎಂದು ಕೆಲವರು ಹೇಳುತ್ತಿದ್ದದ್ದು ಒಂದು ದೊಡ್ಡ ಸಮಸ್ಯೆಯಾಗಿತ್ತು. (1 ಕೊರಿಂಥ 15:12; 2 ತಿಮೊಥೆಯ 2:16-18) ಅವರ ನಿಖರವಾದ ನಂಬಿಕೆ (ಯಾ ತಪ್ಪು ನಂಬಿಕೆ) ಯು ಏನೇ ಆಗಿರಲಿ, ಕ್ರಿಸ್ತನು “ಸತ್ತವರೊಳಗಿಂದ ಎದ್ದು ಬಂದೇ ಇದ್ದಾನೆ” ಎಂಬ ಸ್ಪಷ್ಟವಾಗಿದ ರುಜುವಾತಿನೊಂದಿಗೆ ಪೌಲನು ಅವರನ್ನು ತಿದ್ದಬೇಕಾಯಿತು. ಹೀಗೆ ದೇವರು, “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು” ಕೊಡುವನೆಂದು ಕ್ರೈಸ್ತರು ಭರವಸೆಯಿಡ ಶಕ್ತರಾದರು. (1 ಕೊರಿಂಥ 15:20, 51-57) ನೀವಲಿದ್ಲದ್ದಾದರೆ, ಆ ಭಿನ್ನಾಭಿಪ್ರಾಯಗಳ ಆತ್ಮದಿಂದ ಪ್ರಭಾವಿತರಾಗುವ ಸಂಭವನೀಯತೆ ಇರುತ್ತಿತ್ತೋ?
6. ಪೌಲನ 1 ಕೊರಿಂಥ 15:33 ರ ಬುದ್ಧಿವಾದವು ವಿಶಿಷ್ಟವಾಗಿ ಯಾರಿಗೆ ಅನ್ವಯಿಸತಕ್ಕದಾಗಿತ್ತು?
6 ಮೃತರು ಪುನರುತ್ಥಾನಗೊಳಿಸಲ್ಪಡಲಿರುವರೆಂಬದಕ್ಕೆ ದೃಢ ಪುರಾವೆಯನ್ನು ಒದಗಿಸುತ್ತಿರುವ ನಡುವೆ, ಪೌಲನು ಅವರಿಗೆ ಅಂದದ್ದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ಈ ಬುದ್ಧಿವಾದದ ವಿಷಯವು, ಪುನರುತ್ಥಾನದ ಬೋಧನೆಯ ಮೇಲೆ ಭಿನ್ನಾಭಿಪ್ರಾಯಪಟ್ಟಿದ್ದ ಸಭಾ ಸಹವಾಸಿಗಳ ಸಂಬಂಧದಲ್ಲಿತ್ತು. ಅವರಿಗೆ ಅರ್ಥವಾಗದ ಒಂದು ವಿಷಯದ ಕುರಿತು ಅವರು ಕೇವಲ ಅನಿಶ್ಚಿತರಾಗಿದ್ದರೋ? (ಹೋಲಿಸಿರಿ ಲೂಕ 24:38.) ಇಲ್ಲ. “ನಿಮ್ಮಲ್ಲಿ ಕೆಲವರು ಪುನರುತ್ಥಾನವೇ ಇಲ್ಲವೆಂದು ಹೇಳುವದು” ಎಂಬದಾಗಿ ಪೌಲನು ಬರೆದನು, ಹೀಗೆ ಒಳಗೊಂಡವರು ಧರ್ಮಭ್ರಷ್ಟತೆಯ ಕಡೆಗೆ ಓಲಿದವರಾಗಿ, ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದವರಾಗಿದ್ದರು. ಅವರು ಬೇರೆಯವರ ಸದಾಚಾರಗಳನ್ನು ಮತ್ತು ಯೋಚನೆಗಳನ್ನು ಹಾಳುಮಾಡ ಸಾಧ್ಯವಿದೆಂದು ಪೌಲನು ಚೆನ್ನಾಗಿ ಅರಿತಿದ್ದನು.—ಅ. ಕೃತ್ಯಗಳು 20:30; 2 ಪೇತ್ರ 2:1.
7. ನಾವು 1 ಕೊರಿಂಥ 15:33 ನ್ನು ಅನ್ವಯಿಸ ಸಾಧ್ಯವಿರುವ ಒಂದು ಸನ್ನಿವೇಶ ಯಾವುದು?
7 ಸಹವಾಸಗಳ ಕುರಿತಾದ ಪೌಲನ ಎಚ್ಚರಿಕೆಯನ್ನು ನಾವು ಹೇಗೆ ಅನ್ವಯಿಸಬಲ್ಲೆವು? ಒಂದು ಬೈಬಲ್ ವಚನವನ್ನು ಅಥವಾ ಬೋಧನೆಯನ್ನು ಅರ್ಥಮಾಡಲು ಕಷ್ಟಕರವಾಗಿ ಕಾಣುವ ಸಭೆಯ ಯಾವನಿಗಾದರೂ ನಾವು ಸಹಾಯಮಾಡಲು ನಿರಾಕರಿಸಬೇಕೆಂದು ಅವನು ಅರ್ಥೈಸಲಿಲ್ಲ. ನಿಶ್ಚಯವಾಗಿ ಅಂಥ ಸಂಶಯಗಳಿರುವ ಪ್ರಾಮಾಣಿಕ ಜನರಿಗೆ ದಯೆಯುಳ್ಳ ಸಹಾಯವನ್ನು ಕೊಡುವಂತೆ ಯೂದ 22, 23 ನಮ್ಮನ್ನು ಪ್ರೇರೇಪಿಸುತ್ತದೆ. (ಯಾಕೋಬ 5:19, 20) ಆದರೆ, ಬೈಬಲ್ ಸತ್ಯವೆಂದು ನಮಗೆ ತಿಳಿದಿರುವ ಒಂದು ವಿಷಯಕ್ಕೆ ಒಬ್ಬನು ಆಕ್ಷೇಪವನ್ನು ತಕ್ಕೊಳ್ಳುತ್ತಾ ಇರುವುದಾದರೆ ಅಥವಾ ಸಂದೇಹಪಡುವ ಯಾ ನಕಾರಾತ್ಮಕ ತರದ ಹೇಳಿಕೆಗಳನ್ನೀಯುತ್ತಾ ಇರುವುದಾದರೆ, ಪೌಲನ ಪಿತೃ ಸದೃಶ ಬುದ್ಧಿವಾದವು ಖಂಡಿತವಾಗಿಯೂ ಅನ್ವಯಿಸಲ್ಪಡಬೇಕು. ಆ ರೀತಿಯ ವ್ಯಕ್ತಿಯೊಂದಿಗೆ ಸಹವಾಸದ ವಿರುದ್ಧ ನಾವು ಜಾಗ್ರತೆ ವಹಿಸಬೇಕಾಗಿದೆ. ಒಬ್ಬನು ಖಚಿತವಾಗಿ ಧರ್ಮಭ್ರಷ್ಟನಾಗಿ ಪರಿಣಮಿಸಿದರೆ, ಹಿಂಡನ್ನು ರಕ್ಷಿಸುವುದಕ್ಕಾಗಿ ಆತ್ಮಿಕ ಹಿರಿಯರು ಕ್ರಿಯೆಗೈಯಬೇಕೆಂಬದು ನಿಶ್ಚಯ.— 2 ತಿಮೊಥೆಯ 2:16-18; ತೀತ 3:10, 11.
8. ಒಬ್ಬನು ಒಂದು ಬೈಬಲ್ ಬೋಧನೆಯ ಮೇಲೆ ಭಿನ್ನಾಭಿಪ್ರಾಯ ತೋರಿಸಿದಾಗ, ನಾವು ವಿವೇಚನೆಯಿಂದ ಹೇಗೆ ಕ್ರಿಯೆಗೈಯಬಹುದು?
8 ಸುಳ್ಳು ಬೋಧನೆಗಳನ್ನು ಪ್ರವರ್ಧಿಸುವ ಸಭೆಯ ಹೊರಗಿನ ಜನರ ವಿಷಯದಲ್ಲಿ ಸಹ ನಾವು 1 ಕೊರಿಂಥ 15:33 ರ ಪೌಲನ ಪಿತೃ ಸದೃಶ ಮಾತುಗಳನ್ನು ಅನ್ವಯಿಸಬಲ್ಲೆವು. ಅವರೊಂದಿಗೆ ಸಹವಾಸದೊಳಗೆ ನಾವು ಹೇಗೆ ಎಳೆಯಲ್ಪಡಬಹುದು? ಯಾರಿಗೆ ಸತ್ಯವನ್ನು ಕಲಿಯಲು ಸಹಾಯಮಾಡಲ್ಪಡ ಸಾಧ್ಯವೂ ಅವರ ಮತ್ತು ಯಾರು ಒಂದು ಸುಳ್ಳು ಬೋಧನೆಯನ್ನು ಪ್ರವರ್ಧಿಸಲಿಕ್ಕಾಗಿ ಕೇವಲ ಒಂದು ವಾಗ್ವಾದವನ್ನು ಎಬ್ಬಿಸುತ್ತಾರೋ ಅವರ ನಡುವಣ ವ್ಯತ್ಯಾಸವನ್ನು ನಾವು ಕಾಣದೆ ಇರುವಾಗ, ಇದು ಸಂಭವಿಸಬಹುದು. ದೃಷ್ಟಾಂತಕ್ಕಾಗಿ, ನಮ್ಮ ಸಾಕ್ಷಿ ಕಾರ್ಯದಲ್ಲಿ ಒಂದು ವಿಷಯದ ಮೇಲೆ ಭಿನ್ನಾಭಿಪ್ರಾಯವಿರುವ ವ್ಯಕ್ತಿಯೊಬ್ಬನು ನಮಗೆ ಎದುರಾಗಬಹುದು, ಆದರೆ ಅದರ ಕುರಿತು ಹೆಚ್ಚನ್ನು ಚರ್ಚಿಸಲು ಅವನು ಸಿದ್ಧಮನಸ್ಕನಿದ್ದಂತೆ ತೋರುತ್ತಾನೆ. (ಅ. ಕೃತ್ಯಗಳು 17:32-34) ಅದು ತಾನೇ ಒಂದು ಸಮಸ್ಯೆಯನ್ನು ತರುವ ಅಗತ್ಯವಿಲ್ಲ, ಯಾಕಂದರೆ ಅಂತಹದನ್ನು ತಿಳಿಯಲು ನಿಜವಾಗಿ ಬಯಸುವ ಯಾವನಿಗಾದರೂ ಬೈಬಲ್ ಸತ್ಯವನ್ನು ನಾವು ಸಂತೋಷದಿಂದ ವಿವರಿಸುತ್ತೇವೆ, ಮನಗಾಣಿಸುವ ಪುರಾವೆ ನೀಡಲು ಪುನರ್ಭೇಟಿಯನ್ನೂ ಮಾಡುತ್ತೇವೆ. (1 ಪೇತ್ರ 3:15) ಆದರೂ, ಬೈಬಲ್ ಸತ್ಯವನ್ನು ಕಂಡುಕೊಳ್ಳುವುದರಲ್ಲಿ ಕೆಲವರು ನಿಜವಾಗಿ ಆಸಕ್ತರಿಲ್ಲದೆ ಇರಬಹುದು.
9. ನಮ್ಮ ನಂಬಿಕೆಗಳಿಗೆ ಹಾಕಲ್ಪಡುವ ಪಂಥಾಹ್ವಾನಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
9 ಅನೇಕ ಜನರು ತಾಸುಗಳ ತನಕ, ವಾರ ವಾರಗಳ ತನಕ ವಾಗ್ವಾದ ನಡಿಸುವರು, ಆದರೆ ಸತ್ಯಕ್ಕಾಗಿ ಅವರು ಹುಡುಕುವದರಿಂದಾಗಿ ಅಲ್ಲ. ಹೀಬ್ರು, ಗ್ರೀಕ್, ಅಥವಾ ವಿಕಾಸ ವಿಜ್ಞಾನದಲ್ಲಿ ತಮ್ಮ ಸ್ವಂತ ಗ್ರಹಿಕೆಯ ಶಿಕ್ಷಣವನ್ನು ಪ್ರದರ್ಶಿಸುತ್ತಾ, ಇನ್ನೊಬ್ಬರ ನಂಬಿಕೆಯನ್ನು ಉರುಳಿಸಿಬಿಡುವುದೇ ಅವರ ಬಯಕೆ. ಅವರನ್ನು ಎದುರಿಸುವಾಗ ಕೆಲವು ಸಾಕ್ಷಿಗಳು ಪಂಥಾಹ್ವಾನದ ಅನುಭವವಾಗಿ, ಸುಳ್ಳು ಧಾರ್ಮಿಕ ನಂಬಿಕೆ, ತತ್ವಜ್ಞಾನ, ಅಥವಾ ವೈಜ್ಞಾನಿಕ ತಪ್ಪಿನ ಮೇಲೆ ಕೇಂದ್ರಿತವಾದ ವಿಸ್ತಾರ್ಯ ಸಹವಾಸವನ್ನು ಮಾಡಿದವರಾದರು. ಹೀಬ್ರು ಮತ್ತು ಗ್ರೀಕ್ನಲ್ಲಿ ಶಿಕ್ಷಣ ಪಡೆದಿದ್ದ ಧಾರ್ಮಿಕ ಮುಖಂಡರೊಂದಿಗೆ ವಾಗ್ವಾದಗಳನ್ನು ಯೇಸುವಿಗೆ ಜಯಿಸ ಸಾಧ್ಯವಿತ್ತಾದರೂ, ಅದು ತನಗೆ ಸಂಭವಿಸುವಂತೆ ಯೇಸು ಬಿಡಲಿಲ್ಲವೆಂಬದು ಗಮನಾರ್ಹವು. ಪಂಥಾಹ್ವಾನಕ್ಕೆ ಒಳಗಾದಾಗ ಯೇಸು ಸಂಕ್ಷೇಪ ಉತ್ತರ ಕೊಟ್ಟನು ಮತ್ತು ನಂತರ ತನ್ನ ಗಮನವನ್ನು ಪುನಃ ದೀನ ಜನರೆಡೆಗೆ, ನಿಜ ಕುರಿಗಳೆಡೆಗೆ ತಿರುಗಿಸಿದನು.—ಮತ್ತಾಯ 22:41-46; 1 ಕೊರಿಂಥ 1:23–2:2.
10. ಕಂಪ್ಯೂಟರುಗಳಿರುವ ಮತ್ತು ಇಲೆಕ್ಟ್ರೊನಿಕ್ ಬುಲೆಟಿನ್ ಬೋರ್ಡ್ಗಳಿಗೆ ಪ್ರವೇಶವಿರುವ ಕ್ರೈಸ್ತರಿಗೆ ಎಚ್ಚರಿಕೆಯು ಯುಕ್ತವಾಗಿದೆಯೇಕೆ?
10 ಆಧುನಿಕ ಕಂಪ್ಯೂಟರುಗಳು ದುಸ್ಸಹವಾಸಕ್ಕೆ ಬೇರೆ ಮಾರ್ಗಗಳನ್ನು ತೆರೆದಿವೆ. ಕೆಲವು ವ್ಯಾಪಾರಿ ವ್ಯವಸ್ಥಾಪನೆಗಳು ಒಂದು ಕಂಪ್ಯೂಟರ್ ಮತ್ತು ಟೆಲಿಫೊನ್ ಉಪಯೋಗಿಸಿ ಇಲೆಕ್ಟ್ರೊನಿಕ್ ಬುಲೆಟಿನ್ ಬೋರ್ಡ್ಗಳಿಗೆ ಒಂದು ಸಂದೇಶವನ್ನು ಕಳುಹಿಸುವಂತೆ ವರ್ಗಣಿದಾರರನ್ನು ಶಕ್ತರನ್ನಾಗಿ ಮಾಡುತ್ತವೆ. ಒಬ್ಬ ವ್ಯಕ್ತಿಯು ಹೀಗೆ ಬುಲೆಟಿನ್ ಬೋರ್ಡ್ನಲ್ಲಿ ಎಲ್ಲಾ ವರ್ಗಣಿದಾರರಿಗೆ ತೆರೆದಿರುವ ಒಂದು ಸಂದೇಶವನ್ನು ಹಾಕಶಕ್ತನಾಗುತ್ತಾನೆ. ಇದು ಧಾರ್ಮಿಕ ವಿಚಾರಗಳ ಮೇಲೆ ಇಲೆಕ್ಟ್ರೊನಿಕ್ ವಾಗ್ವಾದಗಳು ಎಂದೆಣಿಸುವ ವಿಷಯಕ್ಕೆ ನಡಿಸಿದೆ. ಒಬ್ಬ ಕ್ರೈಸ್ತನು ಅಂಥ ವಾಗ್ವಾದಗಳಿಗೆ ಸೆಳೆಯಲ್ಪಡಬಹುದು ಮತ್ತು ಸಭೆಯಿಂದ ಬಹಿಷ್ಕೃನಾಗಿದ್ದಿರಬಹುದಾದ ಒಬ್ಬ ಧರ್ಮಭ್ರಷ್ಟ ಆಲೋಚಕನೊಂದಿಗೆ ಅನೇಕ ತಾಸುಗಳನ್ನು ಕಳೆಯಲೂಬಹುದು. ದುಸ್ಸಹವಾಸವನ್ನು ವರ್ಜಿಸುವ ಕುರಿತು ಪೌಲನ ಪಿತೃ ಸದೃಶ ಬುದ್ಧಿವಾದವನ್ನು 2 ಯೋಹಾನ 9-11ರ ಮಾರ್ಗದರ್ಶನವು ಒತ್ತಿಹೇಳುತ್ತದೆ.a
ಮೋಸಹೋಗುವುದರಿಂದ ದೂರವಿರ್ರಿ
11. ಕೊರಿಂಥದಲ್ಲಿನ ವ್ಯಾಪಾರದ ಸನ್ನಿವೇಶವು ಯಾವ ಅವಕಾಶವನ್ನು ನೀಡಿತ್ತು?
11 ಗಮನಿಸಲ್ಪಟ್ಟ ಪ್ರಕಾರ ಕೊರಿಂಥವು, ಬಹು ಸಂಖ್ಯಾಕ ಅಂಗಡಿಗಳು ಮತ್ತು ವ್ಯಾಪಾರಗಳುಳ್ಳ ಒಂದು ವಾಣಿಜ್ಯ ಕೇಂದ್ರವಾಗಿತ್ತು. (1 ಕೊರಿಂಥ 10:25) ಇಸ್ಮ್ತಿಯನ್ ಆಟಗಳಿಗೆ ಬಂದ ಅನೇಕರು ಡೇರೆಗಳಲ್ಲಿ ನಿವಾಸಿಸುತ್ತಿದ್ದರು, ಮತ್ತು ಆ ಫಟನೆಯ ಸಮಯದಲ್ಲಿ, ಒಯ್ಯಲಾಗುವ ಗುಡಾರಗಳಿಂದ ಅಥವಾ ಛಾವಣಿಯಿರುವ ಅಂಗಡಿಗಳಿಂದ ವರ್ತಕರು ಮಾರಾಟಗಳನ್ನು ಮಾಡುತ್ತಿದ್ದರು. (ಹೋಲಿಸಿರಿ ಅ. ಕೃತ್ಯಗಳು 18:1-3.) ಅಲ್ಲಿ ಡೇರೆಗಳನ್ನು ಮಾಡುವ ಕೆಲಸವನ್ನು ಕಂಡುಕೊಳ್ಳಲು ಇದು ಪೌಲನಿಗೆ ಶಕ್ಯವನ್ನಾಗಿ ಮಾಡಿತು. ಮತ್ತು ಅವನು ಕೆಲಸದ ಸ್ಥಳವನ್ನು ಸುಸಮಾಚಾರದ ಪ್ರವರ್ಧನೆಗಾಗಿ ಉಪಯೋಗಿಸಲು ಶಕ್ತನಾದನು. ಪ್ರೊಫೆಸರ್ ಜೆ. ಮರ್ಫಿ-ಒ’ಕಾನರ್ ಬರೆಯುವುದು: “ಕಾರ್ಯಮಗ್ನ ಪೇಟೆಯ ಒಂದು ಅಂಗಡಿಯಿಂದ . . . ಎದುರುಗಡೆಯ ಜನನಿಬಿಡ ರಸ್ತೆಗೆ, ಜೊತೆಗೆಲಸಗಾರರೊಂದಿಗೆ ಮತ್ತು ಗಿರಾಕಿಗಳೊಂದಿಗೆ ಮಾತ್ರವಲ್ಲ, ಹೊರಗಣ ಜನಸಮೂಹದೆಡೆಗೂ ಪೌಲನಿಗೆ ಸಂಪರ್ಕವಿತ್ತು. ವ್ಯಾಪಾರ ಚಟುವಟಿಕೆಯ ಇಳಿತದ ಅವಧಿಗಳಲ್ಲಿ, ಅವನು ಬಾಗಲಲ್ಲಿ ನಿಲ್ಲಬಹುದಿತ್ತು ಮತ್ತು ಯಾರು ಆಲಿಸಬಹುದೆಂದು ಅವನು ನೆನಸಿದನೋ ಅವರನ್ನು ತಡೆದು ನಿಲ್ಲಿಸಬಹುದಿತ್ತು. . . . ಅವನ ಕ್ರಿಯಾಶಕ್ತ ವ್ಯಕ್ತಿತ್ವವು ಮತ್ತು ದಟ್ಟ ಮನವರಿಕೆಯು ಶೀಘ್ರವೇ ಅವನನ್ನು ನೆರೆಕರೆಯ ‘ಒಬ್ಬ ಮಹತ್ತಾದ ವ್ಯಕ್ತಿ’ ಯನ್ನಾಗಿ ಮಾಡಲಿಲ್ಲವೆಂದು ಕಲ್ಪಿಸುವುದು ಕಷ್ಟ, ಮತ್ತು ಇದು ಕುತೂಹಲಕಾರರನ್ನು, ಕೇವಲ ವ್ಯರ್ಥ ಕಾಲಹರಣಗಾರರನ್ನಲ್ಲ, ನಿಜವಾಗಿಯೂ ಮಾಹಿತಿಗಾಗಿ ಹುಡುಕುವವರನ್ನು ಸೆಳೆದಿರಬಹುದು. . . . ಅವನ ಕುರಿತು ಕೇಳಿದ್ದ ವಿವಾಹಿತ ಸ್ತ್ರೀಯರು, ಖರೀದಿಸಲಿಕ್ಕಾಗಿ ಬರುವ ಸೋಗಿನಿಂದ ತಮ್ಮ ಪರಿಚಾರಕರೊಂದಿಗೆ ಅವನನ್ನು ಸಂದರ್ಶಿಸುವ ಸಾಧ್ಯತೆಯಿತ್ತು. ಒತ್ತಡದ ಸಮಯಗಳಲ್ಲಿ, ಹಿಂಸೆಯು ಅಥವಾ ಸಾಮಾನ್ಯ ಪೀಡೆಯು ಬೆದರಿಕೆ ಹಾಕಿದಾಗ, ವಿಶ್ವಾಸಿಗಳು ಗಿರಾಕಿಗಳಂತೆ ಬಂದು ಅವನನ್ನು ಸಂಧಿಸಬಹುದಿತ್ತು. ಕೆಲಸದ ಸ್ಥಳವು ಅವನನ್ನು ಪೌರ ಸಂಸ್ಥೆಯ ಅಧಿಕಾರಿಗಳ ಸಂಪರ್ಕದೊಳಗೂ ತಂದಿತ್ತು.”
12, 13. ಕೆಲಸದ ಸ್ಥಳದಲ್ಲಿ 1 ಕೊರಿಂಥ 15:33 ಹೇಗೆ ಸರಿಯಾಗಿ ಅನ್ವಯಿಸಬಲ್ಲದು?
12 ಆದರೂ ಪೌಲನು, ಕೆಲಸದ ಸ್ಥಳದಲ್ಲಿನ “ದುಸ್ಸಹವಾಸ” ದ ಸಂಭವನೀಯತೆಯನ್ನು ಅಂಗೀಕರಿಸಿದ್ದಿರಬೇಕು. ನಾವು ಕೂಡಾ ಅಂಗೀಕರಿಸಬೇಕು. ಅರ್ಥವತ್ತಾಗಿ, ಕೆಲವರಲ್ಲಿ ನೆಲೆಸಿದ್ದ ಒಂದು ಮನೋಭಾವನೆಯನ್ನು ಪೌಲನು ಉಲ್ಲೇಖಿಸಿದನು: “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.” (1 ಕೊರಿಂಥ 15:32) ಅದನ್ನು ಕೂಡಲೆ ಹಿಂಬಾಲಿಸಿ ಅವನು ತನ್ನ ಪಿತೃ ಸದೃಶ ಬುದ್ಧಿವಾದವನ್ನು ಕೊಟ್ಟನು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” ಕೆಲಸದ ಸ್ಥಳ ಮತ್ತು ವಿಲಾಸದ ಹುಡುವಿಕೆಯು ಒಂದು ಅಪಾಯದ ಸಾಧ್ಯತೆಯನ್ನು ನಿರ್ಮಿಸುವುದರಲ್ಲಿ ಹೇಗೆ ಸಂಬಂಧಕವಾಗಿರಬಹುದು?
13 ಕ್ರೈಸ್ತರು ಜೊತೆ ಕೆಲಸಗಾರರೊಂದಿಗೆ ಸ್ನೇಹಪರರಾಗಿರಲು ಬಯಸುತ್ತಾರೆ, ಮತ್ತು ಇದು ಒಂದು ಸಾಕ್ಷಿಯನ್ನು ಕೊಡುವುದಕ್ಕೆ ದಾರಿ ತೆರೆಯುವುದರಲ್ಲಿ ಎಷ್ಟು ಪರಿಣಾಮಕಾರಿಯೆಂದು ಅನೇಕ ಅನುಭವಗಳು ತೋರಿಸುತ್ತವೆ. ಆದರೂ, ಒಬ್ಬ ಸಹೋದ್ಯೋಗಿಯು ಆ ಸ್ನೇಹಪರತೆಯನ್ನು, ಒಟ್ಟುಗೂಡಿ ಮಜಾ ಮಾಡುವುದಕ್ಕಾಗಿ ಸಹವಾಸದ ಆಮಂತ್ರಣವಾಗಿ, ತಪ್ಪರ್ಥಮಾಡಿಕೊಳ್ಳಬಹುದು. ಅವನು ಅಥವಾ ಅವಳು ಒಂದು ಊಟಕ್ಕಾಗಿ, ಕೆಲಸದ ನಂತರ ತುಸು ಹೊತ್ತಿನ ಮದ್ಯಪಾನಕ್ಕಾಗಿ, ಅಥವಾ ವಾರಾಂತ್ಯದ ಯಾವುದೇ ಮನೋರಂಜನೆಗಾಗಿ ಸಹಜ ಸ್ಥಿತಿಯ ಆಮಂತ್ರಣವನ್ನು ನೀಡಬಹುದು. ಈ ವ್ಯಕ್ತಿಯು ದಯಾಪರನೂ ಸಭ್ಯನೂ ಆಗಿ ಕಾಣಬಹುದು ಮತ್ತು ಆಮಂತ್ರಣವು ನಿಷ್ಕಪಟದ್ದಾಗಿ ತೋರಬಹುದು. ಆದರೂ, ಪೌಲನು ನಮಗೆ ಸಲಹೆ ಕೊಡುವುದು: “ಮೋಸಹೋಗಬೇಡಿರಿ.”
14. ಸಹವಾಸಗಳ ಮೂಲಕ ಕೆಲವು ಕ್ರೈಸ್ತರು ಮೋಸಹೋಗಿರುವುದು ಹೇಗೆ?
14 ಕೆಲವು ಕ್ರೈಸ್ತರು ಮೋಸಹೋಗಿದ್ದಾರೆ. ಸಹೋದ್ಯೋಗಿಗಳೊಂದಿಗಿನ ಸಹವಾಸದೆಡೆಗೆ ಕ್ರಮೇಣ ಒಂದು ಆರಾಮದ ಮನೋಭಾವವನ್ನು ಅವರು ವಿಕಾಸಿಸಿದರು. ಒಂದು ಕ್ರೀಡೆ ಅಥವಾ ಕಸಬಿನಲ್ಲಿ ಸಾಮಾನ್ಯ ಅಭಿರುಚಿಯಿಂದಾಗಿ ಅದು ಬೆಳೆದಿರಬಹುದು. ಅಥವಾ ಕೆಲಸದ ಸ್ಥಳದ ಒಬ್ಬ ಕ್ರೈಸ್ತೇತರನು ಅಸಾಧಾರಣವಾದ ದಯೆ ಮತ್ತು ವಿಚಾರಪರತೆ ತೋರಿಸಿದರಿಂದಾಗಿ ಅವನೊಂದಿಗೆ ಹೆಚ್ಚೆಚ್ಚು ಸಮಯವನ್ನು ಕಳೆಯುವದಕ್ಕೆ ನಡಿಸಿರಬಹುದು, ಮತ್ತು ಅಂಥ ಸಹವಾಸವನ್ನು ಸಭೆಯಲ್ಲಿರುವ ಇತರರಿಗಿಂತ ಹೆಚ್ಚು ಇಷ್ಟೈಸುವಂತೆ ಮಾಡಿರಲೂಬಹುದು. ಅನಂತರ ಆ ಸಹವಾಸವು ಕೇವಲ ಒಂದು ಕೂಟವನ್ನು ತಪ್ಪುವುದಕ್ಕೆ ನಡಿಸಬಹುದು. ಒಂದು ಸಂಜೆ ಹೊರಗೆ ಬಹಳ ಹೊತ್ತು ಕಳೆಯುವುದು ಮತ್ತು ಬೆಳಿಗ್ಗೆ ಕ್ಷೇತ್ರ ಶುಶ್ರೂಷೆಯಲ್ಲಿ ಪಾಲಿಗರಾಗುವ ಹವ್ಯಾಸವನ್ನು ಬಿಟ್ಟುಬಿಡುವ ಅರ್ಥದಲ್ಲಿರಬಹುದು. ಕ್ರೈಸ್ತನು ಸಾಮಾನ್ಯವಾಗಿ ನಿರಾಕರಿಸುವ ತೆರದ ಒಂದು ಚಿತ್ರಪಟ ಅಥವಾ ವಿಡಿಯೊ ನೋಡುವುದರಲ್ಲಿ ಅದು ಪರಿಣಮಿಸಲೂಬಹುದು. ‘ಓ, ಅದು ನನಗೆಂದೂ ಸಂಭವಿಸದು,’ ಎಂದು ನಾವು ನೆನಸಬಹುದು. ಆದರೆ ಮೋಸಹೋದವರಲ್ಲಿ ಹೆಚ್ಚಿನವರೂ ಆರಂಭದಲ್ಲಿ ಆ ರೀತಿ ಪ್ರತಿಕ್ರಿಯೆ ತೋರಿಸಿದಿರ್ದಬಹುದು. ನಾವು ನಮ್ಮನ್ನು ಕೇಳಿಕೊಳ್ಳುವ ಅಗತ್ಯವಿದೆ, ‘ಪೌಲನ ಬುದ್ಧಿವಾದವನ್ನು ಅನ್ವಯಿಸಲು ನಾನೆಷ್ಟು ದೃಢ ನಿಶ್ಚಯ ಮಾಡಿದ್ದೇನೆ?’
15. ನೆರೆಯವರ ಕಡೆಗೆ ಯಾವ ಸಮತೂಕದ ಮನೋಭಾವವು ನಮಗಿರಬೇಕು?
15 ಕೆಲಸದ ಸ್ಥಳದ ವಿಷಯವಾಗಿ ನಾವೀಗಲೇ ಚರ್ಚಿಸಿದ ವಿಷಯವು ನೆರೆಯವರೊಂದಿಗಿನ ನಮ್ಮ ಸಹವಾಸಕ್ಕೂ ಅನ್ವಯಿಸುತ್ತದೆ. ಪುರಾತನ ಕೊರಿಂಥದಲ್ಲಿನ ಕ್ರೈಸ್ತರಿಗೆ ನೆರೆಯವರಿದ್ದರೆಂಬದು ಖಂಡಿತ. ಕೆಲವು ಸಮಾಜಗಳಲ್ಲಿ ನೆರೆಯವರಿಗೆ ತೀರ ಸ್ನೇಹ ಮತ್ತು ಬೆಂಬಲವನ್ನು ತೋರಿಸುವುದು ಸಹಜ ಸ್ಥಿತಿಯಾಗಿದೆ. ಗ್ರಾಮೀಣ ಕ್ಷೇತ್ರಗಳಲ್ಲಿ ಒಂಟಿತನದ ಕಾರಣ ನೆರೆಯವರು ಒಬ್ಬರ ಮೇಲೊಬ್ಬರು ಆತುಕೊಂಡಿರಬಹುದು. ಕೆಲವು ಸಂಸ್ಕೃತಿಗಳಲ್ಲಿ ಕುಟುಂಬ ಸಂಬಂಧಗಳು ವಿಶಿಷ್ಟವಾಗಿ ಬಲವಾಗಿದ್ದು, ಊಟಗಳಿಗಾಗಿ ಆಮಂತ್ರಣಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಯೇಸು ತೋರಿಸಿದ ಪ್ರಕಾರ, ಒಂದು ಸಮತೂಕದ ನೋಟವು ಪ್ರಾಮುಖ್ಯವೆಂಬದು ಸ್ಫುಟ. (ಲೂಕ 8:20, 21; ಯೋಹಾನ 2:12) ನೆರೆಯವರೊಂದಿಗೆ ಮತ್ತು ಸಂಬಂಧಿಕರೊಂದಿಗೆ ನಮ್ಮ ವ್ಯವಹಾರಗಳಲ್ಲಿ, ಕ್ರೈಸ್ತರಾಗುವ ಮುಂಚೆ ನಾವು ಮಾಡುತ್ತಿದ್ದಂತೆಯೇ ಮುಂದುವರಿಯುವ ಪ್ರವೃತ್ತಿಯುಳ್ಳವರಾಗಿದ್ದೇವೋ? ಬದಲಿಗೆ, ಅಂಥ ವ್ಯವಹಾರಗಳನ್ನು ನಾವೀಗ ಪುನರ್ವಿಮರ್ಶೆ ಮಾಡಿ, ಯಾವ ಸೀಮಿತಗಳು ಯುಕ್ತವಾಗಿವೆಯೆಂದು ಮನಃಪೂರ್ವಕವಾಗಿ ನಿರ್ಧರಿಸಬಾರದೋ?
16. ಮತ್ತಾಯ 13:3, 4 ರ ಯೇಸುವಿನ ಮಾತುಗಳನ್ನು ಹೇಗೆ ಅರ್ಥಮಾಡಬೇಕಾಗಿದೆ?
16 ಯೇಸು ಒಮ್ಮೆ ರಾಜ್ಯದ ವಾಕ್ಯವನ್ನು, “ದಾರಿಯ ಮಗಲ್ಗಲ್ಲಿ ಬಿದ್ದ . . . ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟ” ಬೀಜಗಳಿಗೆ ಹೋಲಿಸಿದ್ದಾನೆ. (ಮತ್ತಾಯ 13:3, 4, 19) ಆ ಸಮಯದಲ್ಲಿ, ಅನೇಕ ಜನರ ಆಚೆ-ಈಚೆಯ ನಡೆತದಿಂದಾಗಿ ಒಂದು ದಾರಿಯ ಮಣ್ಣು ಗಟ್ಟಿಯಾಗಿ ಹೋಗುತ್ತಿತ್ತು. ಅನೇಕ ಜನರ ವಿಷಯದಲ್ಲೂ ಹಾಗೆಯೇ ಇದೆ. ಅವರ ಜೀವಿತವು ನೆರೆಯವರ, ಸಂಬಂಧಿಕರ ಮತ್ತು ಇತರರ ಬಂದುಹೋಗುವಿಕೆಗಳಿಂದ ತುಂಬಿರುತ್ತಾ, ಅವರನ್ನು ಕಾರ್ಯಮಗ್ನವಿರಿಸುತ್ತದೆ. ಇದು, ಅವರ ಹೃದಯದ ಮಣ್ಣು ತುಳಿಯಲ್ಪಡುತ್ತದೋ ಎಂಬಂತಿದ್ದು, ಸತ್ಯದ ಬೀಜಗಳಿಗೆ ಬೇರೂರಲು ಕಷ್ಟಕರವನ್ನಾಗಿ ಮಾಡುತ್ತದೆ. ಈ ಮೊದಲೇ ಕ್ರೈಸ್ತನಾಗಿರುವ ಒಬ್ಬನಲ್ಲೂ ತದ್ರೀತಿಯ ಪ್ರತಿಕ್ರಿಯಾಹೀನತೆಯು ವಿಕಸಿಸಬಲ್ಲದು.
17. ನೆರೆಯವರೊಂದಿಗೆ ಮತ್ತು ಇತರರೊಂದಿಗೆ ಸಹವಾಸವು ನಮ್ಮನ್ನು ಹೇಗೆ ಪ್ರಭಾವಿಸ ಸಾಧ್ಯವಿದೆ?
17 ಕೆಲವು ಐಹಿಕ ನೆರೆಯವರು ಮತ್ತು ಸಂಬಂಧಿಕರು, ಆತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನಾಗಲಿ ನೀತಿಯ ಕಡೆಗೆ ಪ್ರೀತಿಯನ್ನಾಗಲಿ ಸತತವಾಗಿ ತೋರಿಸದಿದ್ದರೂ, ಸ್ನೇಹಪರರೂ ಸಹಾಯಕಾರಿಗಳೂ ಆಗಿರಬಹುದು. (ಮಾರ್ಕ 10:21, 22; 2 ಕೊರಿಂಥ 6:14) ನಮ್ಮ ಕ್ರೈಸ್ತರಾಗುವಿಕೆಯ ಅರ್ಥವು ನಾವು ಸ್ನೇಹಭಾವವಿಲ್ಲದ, ನೆರೆಹೊರೆತನವಿಲ್ಲದವರಾಗುತ್ತೇವೆ ಎಂದಲ್ಲ. ಇತರರಲ್ಲಿ ನಿಜಾಸಕ್ತಿಯನ್ನು ತೋರಿಸುವಂತೆ ಯೇಸು ನಮಗೆ ಹಿತೋಪದೇಶ ಕೊಟ್ಟಿದ್ದಾನೆ. (ಲೂಕ 10:29-37) ಆದರೆ ನಮ್ಮ ಸಹವಾಸಗಳ ಕುರಿತು ಜಾಗ್ರತೆಯಿಂದಿರುವುದಕ್ಕೆ ಪೌಲನ ಬುದ್ಧಿವಾದವು ಸಮಾನವಾಗಿ ಪ್ರೇರಿತವೂ ಆವಶ್ಯಕವೂ ಆಗಿರುತ್ತದೆ. ಮೊದಲಿನ ಬುದ್ಧಿವಾದವನ್ನು ನಾವು ಅನ್ವಯಿಸುವಾಗ, ಎರಡನೆಯದನ್ನು ನಾವು ಮರೆತುಬಿಡಬಾರದು. ಎರಡೂ ಹಿತೋಪದೇಶಗಳನ್ನು ನಾವು ಮನಸ್ಸಿನಲ್ಲಿಡದಿದ್ದರೆ, ನಮ್ಮ ಆಚಾರಗಳು ಬಾಧಿಸಲ್ಪಡಬಲ್ಲವು. ನಿಮ್ಮ ಆಚಾರಗಳು, ಪ್ರಾಮಾಣಿಕತೆ ಅಥವಾ ಕೈಸರನ ನಿಯಮವನ್ನು ಪಾಲಿಸುವ ಸಂಬಂಧದಲ್ಲಿ ನಿಮ್ಮ ನೆರೆಯವರ ಮತ್ತು ಸಂಬಂಧಿಕರೊಂದಿಗೆ ಹೇಗೆ ಹೋಲುತ್ತವೆ? ದೃಷ್ಟಾಂತಕ್ಕಾಗಿ, ತೆರಿಗೆ ಕೊಡುವ ಸಮಯದಲ್ಲಿ ಆದಾಯವನ್ನು ಅಥವಾ ವ್ಯಾಪಾರ ಲಾಭಗಳನ್ನು ಕಡಿಮೆಮಾಡಿ ವರದಿಸುವುದು ಸಮರ್ಥನೀಯವೆಂದು, ಬದುಕಿ ಉಳಿಯಲು ಆವಶ್ಯಕವೆಂದೂ ಅವರು ಭಾವಿಸಬಹುದು. ಯಥಾ ಸ್ಥಿತಿಯಲ್ಲಿ ಒಂದು ಕಪ್ ಕಾಫಿ ಕುಡಿಯುವ ಸಮಯದಲ್ಲಿ ಅಥವಾ ಒಂದು ಸಂಕ್ಷಿಪ್ತ ಸಂದರ್ಶನದ ಸಮಯದಲ್ಲಿ ಅವರು ತಮ್ಮ ನೋಟಗಳನ್ನು ಮನವೊಲಿಸುವ ರೀತಿಯಲ್ಲಿ ಮಾತಾಡಬಹುದು. ಅದು ನಿಮ್ಮ ಯೋಚನೆ ಮತ್ತು ಪ್ರಾಮಾಣಿಕ ಆಚಾರಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? (ಮಾರ್ಕ 12:17; ರೋಮಾಪುರ 12:2) “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.”
ಯೌವನದ ಆಚಾರಗಳು ಸಹ
18. ಯುವಕರಿಗೆ ಸಹ 1 ಕೊರಿಂಥ 15:33 ಅನ್ವಯಿಸುತ್ತದೆ ಏಕೆ?
18 ಯುವ ಜನರು ತಾವು ಕಾಣುವ ಮತ್ತು ಕೇಳುವ ವಿಷಯಗಳಿಂದ ವಿಶಿಷ್ಟವಾಗಿ ಪ್ರಭಾವಿತರಾಗುತ್ತಾರೆ. ಮಕ್ಕಳ ಭಾವಾಭಿನಯಗಳು ಅಥವಾ ವರ್ತನೆಗಳು ಅವರ ಹೆತ್ತವರನ್ನು ಅಥವಾ ರಕ್ತಸಂಬಂಧಿಗಳನ್ನು ಬಹಳವಾಗಿ ಹೋಲುವಂಥವುಗಳಾಗಿರುವುದನ್ನು ನೀವು ಗಮನಿಸಿಲ್ಲವೇ? ಹೀಗಿರಲಾಗಿ, ಮಕ್ಕಳು ತಮ್ಮ ಆಟದ ಸಂಗಾತಿಗಳಿಂದ ಅಥವಾ ಸಹಪಾಠಿಗಳಿಂದ ಅತಿಯಾಗಿ ಪ್ರಭಾವಿಸಲ್ಪಡಬಹುದೆಂಬದು ನಮ್ಮನ್ನು ಆಶ್ಚರ್ಯಗೊಳಿಸಬಾರದು. (ಹೋಲಿಸಿರಿ ಮತ್ತಾಯ 11:16, 17.) ತಮ್ಮ ಹೆತ್ತವರ ಕುರಿತು ಅಗೌರವದಿಂದ ಮಾತಾಡುವ ಯುವಕರ ನಡುವೆ ನಿಮ್ಮ ಮಗ ಅಥವಾ ಮಗಳು ಇರುವುದಾದರೆ, ಅದು ನಿಮ್ಮ ಮಕ್ಕಳನ್ನು ಬಾಧಿಸದೆಂದು ನೀವು ಊಹಿಸುವುದೇಕೆ? ಬೇರೆ ಯುವಕರು ಹೊಲಸು ಭಾಷೆಯನ್ನು ಬಳಸುವುದನ್ನು ಅವರು ಆಗಿಂದಾಗ್ಗೆ ಆಲಿಸುತ್ತಾರಾದರೆ ಆಗೇನು? ಶಾಲೆಯಲ್ಲಿನ ಅಥವಾ ಅವರ ನೆರೆಹೊರೆಯ ಸಮ ವಯಸ್ಕರು ಒಂದು ಹೊಸ ಶೈಲಿಯ ಪಾದರಕ್ಷೆಗಳಲ್ಲಿ ಅಥವಾ ಒಡವೆಯ ಒಂದು ಫ್ಯಾಷನ್ನಿನಲ್ಲಿ ಆತುರತೆಯನ್ನು ತೋರಿಸುವುದಾದರೆ ಆಗೇನು? ಯುವ ಕ್ರೈಸ್ತರು ಅಂಥ ಪ್ರಭಾವಕ್ಕೆ ಅಭೇದ್ಯರಾಗಿರುವರೆಂದು ನಾವು ನೆನಸಬೇಕೋ? ಒಂದು ನಿರ್ದಿಷ್ಟ ಪ್ರಾಯವನ್ನು ತಲಪಿದವರಿಗೆ ಮಾತ್ರವೇ 1 ಕೊರಿಂಥ 15:33 ಅನ್ವಯಿಸುತ್ತದೆಂದು ಪೌಲನು ಹೇಳಿದ್ದಾನೋ?
19. ಹೆತ್ತವರು ತಮ್ಮ ಮಕ್ಕಳಲ್ಲಿ ಯಾವ ನೋಟವನ್ನು ಬೇರೂರಿಸಲು ಪ್ರಯತ್ನಿಸಬೇಕು?
19 ನೀವೊಬ್ಬ ಹೆತ್ತವರಾಗಿದ್ದರೆ, ನಿಮ್ಮ ಮಕ್ಕಳೊಂದಿಗೆ ವಿವೇಚಿಸುವಲ್ಲಿ ಮತ್ತು ಅವರ ಕುರಿತು ನಿರ್ಣಯಗಳನ್ನು ಮಾಡುವಲ್ಲಿ, ಆ ಬುದ್ಧಿವಾದದ ಪ್ರಜ್ಞೆ ನಿಮಗಿದೆಯೇ? ನಿಮ್ಮ ಮಕ್ಕಳ ನಡುವೆ ನೆರೆಹೊರೆಯಲ್ಲಿ ಅಥವಾ ಶಾಲೆಯಲ್ಲಿ ಇರುವ ಬೇರೆಲ್ಲಾ ಯುವಕರು ಕೆಟ್ಟವರೆಂದು ಇದರ ಅರ್ಥವಲ್ಲವೆಂದು ನೀವು ಅಂಗೀಕರಿಸಿದರೆ ಪ್ರಾಯಶಃ ಸಹಾಯಕಾರಿಯಾಗಲಿದೆ. ನಿಮ್ಮ ನೆರೆಯವರಲ್ಲಿ, ಸಂಬಂಧಿಕರಲ್ಲಿ, ಮತ್ತು ಸಹೋದ್ಯೋಗಿಗಳಲ್ಲಿ ಕೆಲವರಂತೆ, ಅವರಲ್ಲಿಯೂ ಕೆಲವರು ಇಷ್ಟಕಾರಿಗಳೂ ಸಭ್ಯರೂ ಆಗಿರಬಹುದು. ಇದನ್ನು ಕಾಣಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಲು ಪ್ರಯತ್ನಿಸಿರಿ ಮತ್ತು ಕ್ರೈಸ್ತರಿಗೆ ಪೌಲನ ವಿವೇಕವುಳ್ಳ, ಪಿತೃ ಸದೃಶ ಬುದ್ಧಿವಾದದ ನಿಮ್ಮ ಅನ್ವಯದಲ್ಲಿ ನೀವು ಸಮತೆಯಿಂದಿದ್ದೀರೆಂದು ಅವರು ಗ್ರಹಿಸುವಂತೆ ಮಾಡಿರಿ. ನೀವು ವಿಷಯಗಳನ್ನು ಸಮತೂಕಿಸುವ ರೀತಿಯನ್ನು ಅವರು ನೋಡುವಾಗ, ನಿಮ್ಮನ್ನು ಅನುಕರಿಸುವುದಕ್ಕೆ ಅದು ಅವರಿಗೆ ಸಹಾಯ ಮಾಡಬಲ್ಲದು.—ಲೂಕ 6:40; 2 ತಿಮೊಥೆಯ 2:22.
20. ಯುವಕರೇ, ನೀವು ಯಾವ ಪಂಥಾಹ್ವಾನವನ್ನು ಎದುರಿಸುತ್ತೀರಿ?
20 ಇನ್ನೂ ಎಳೆಯರಾಗಿರುವ ನೀವು, ಪೌಲನ ಬುದ್ಧಿವಾದವು, ಎಳೆಯನಾಗಿರಲಿ ವೃದ್ಧನಾಗಿರಲಿ ಪ್ರತಿಯೊಬ್ಬ ಕ್ರೈಸ್ತನಿಗೆ ಮಹತ್ವವುಳ್ಳದೆಂದು ತಿಳಿದವರಾಗಿ, ಅದನ್ನು ಅನ್ವಯಿಸುವುದು ಹೇಗೆಂಬದನ್ನು ವಿವೇಚಿಸಲು ಪ್ರಯತ್ನಿಸಿರಿ. ಇದಕ್ಕೆ ಮಹಾ ಪ್ರಯತ್ನ ಮತ್ತು ದೃಢ ನಿಶ್ಚಯವು ಬೇಕು, ಆದರೆ ಆ ಪಂಥಾಹ್ವಾನವನ್ನು ಎದುರಿಸಲು ಏಕೆ ಸಿದ್ಧರಾಗಿರಬಾರದು? ಆ ಕೆಲವು ಯುವಕರನ್ನು ನೀವು ಬಾಲ್ಯದಿಂದಲೇ ತಿಳಿದಿದ್ದೀರೆಂಬ ಕಾರಣ ಮಾತ್ರದಿಂದ, ನಿಮ್ಮ ಆಚಾರಗಳ ಮೇಲೆ ಅವರು ಪ್ರಭಾವ ಹಾಕಲಾರರು, ಒಬ್ಬ ಕ್ರೈಸ್ತ ಯುವಕನೋಪಾದಿ ನೀವು ರೂಪಿಸುತ್ತಿರುವ ಹವ್ಯಾಸಗಳನ್ನು ಕೆಡಿಸಲಾರರು ಎಂದರ್ಥವಾಗುವುದಿಲ್ಲ ಎಂಬದನ್ನು ಗ್ರಹಿಸಿರಿ.—ಜ್ಞಾನೋಕ್ತಿ 2:1, 10-15.
ನಮ್ಮ ಆಚಾರಗಳನ್ನು ರಕ್ಷಿಸುವುದಕ್ಕೆ ಸಕಾರಾತ್ಮಕ ಹೆಜ್ಜೆಗಳು
21. (ಎ) ಸಹವಾಸದ ಸಂಬಂಧದಲ್ಲಿ ನಮಗೆ ಯಾವ ಅಗತ್ಯವು ಇದೆ? (ಬಿ) ಕೆಲವು ಸಹವಾಸಗಳು ಅಪಾಯಕಾರಿಯಾಗಿರಬಲ್ಲವೆಂದು ನಮಗೆ ನಿಶಯ್ವತೆ ಇರಬಲ್ಲದೇಕೆ?
21 ನಮಗೆಲ್ಲರಿಗೆ ಸಹವಾಸದ ಅಗತ್ಯವಿದೆ. ಆದರೂ, ನಮ್ಮ ಸಹವಾಸಗಳು ಒಳ್ಳೆಯದಕ್ಕಾಗಿ ಅಥವಾ ಕೆಟ್ಟದಕ್ಕಾಗಿ ನಮ್ಮನ್ನು ಪ್ರಭಾವಿಸಬಲ್ಲವೆಂಬ ನಿಜತ್ವಕ್ಕೆ ನಾವು ಎಚ್ಚರವಾಗಿರತಕ್ಕದ್ದು. ಅದು ಆದಾಮನೊಂದಿಗೆ ಮತ್ತು ಅಂದಿನಿಂದ ಶತಮಾನಗಳಲ್ಲಿ ಪ್ರತಿಯೊಬ್ಬರೊಂದಿಗೆ, ಸತ್ಯವಾಗಿ ರುಜುವಾಗಿದೆ. ಉದಾಹರಣೆಗೆ, ಯೆಹೂದದ ಒಳ್ಳೆಯ ಅರಸನಾದ ಯೆಹೋಷಾಫಾಟನು, ಯೆಹೋವನ ಅನುಗ್ರಹ ಮತ್ತು ಆಶೀರ್ವಾದದಲ್ಲಿ ಆನಂದಿಸಿದ್ದನು. ಆದರೆ ತನ್ನ ಮಗನಿಗೆ ಇಸ್ರಾಯೇಲಿನ ಅರಸ ಆಹಾಬನ ಮಗಳನ್ನು ಮದುವೆಯಾಗಲು ಅನುಮತಿಸಿದ ನಂತರ, ಯೆಹೋಷಾಫಾಟನು ಆಹಾಬನೊಂದಿಗೆ ಸಹವಾಸ ಮಾಡಲು ಆರಂಭಿಸಿದನು. ಆ ದುಸ್ಸಹವಾಸವು ಯೆಹೋಷಾಫಾಟನನ್ನು ಬಹುಮಟ್ಟಿಗೆ ಅವನ ಜೀವ ನಷ್ಟಕ್ಕೇ ಹತ್ತಿರ ನಡಿಸಿತ್ತು. (2 ಅರಸುಗಳು 8:16-18; 2 ಪೂರ್ವಕಾಲವೃತ್ತಾಂತ 18:1-3, 29-31) ನಮ್ಮ ಸಹವಾಸಗಳ ಸಂಬಂಧದಲ್ಲಿ ನಾವು ಅವಿವೇಕದ ಆಯ್ಕೆಗಳನ್ನು ಮಾಡಿದರೆ, ಅದು ಅಷ್ಟೇ ಅಪಾಯಕರವಾಗಿರಬಲ್ಲದು.
22. ನಾವೇನನ್ನು ಹೃದಯಕ್ಕೆ ತಕ್ಕೊಳ್ಳಬೇಕು, ಮತ್ತು ಏಕೆ?
22 ಆದುದರಿಂದ ನಾವು, 1 ಕೊರಿಂಥ 15:33 ರಲ್ಲಿ ಪೌಲನು ನಮಗೆ ನೀಡುವ ಪ್ರೀತಿಯುಳ್ಳ ಬುದ್ಧಿವಾದವನ್ನು ಹೃದಯಕ್ಕೆ ತಕ್ಕೊಳ್ಳೋಣ. ನಾವು ಎಷ್ಟು ಸಾರಿ ಅದನ್ನು ಆಲಿಸಿರಬಹುದೆಂದರೆ ಜ್ಞಾಪಕದಿಂದಲೂ ಪುನರುಚ್ಚರಿಸಬಲ್ಲ ಕೇವಲ ಮಾತುಗಳು ಅವುಗಳಲ್ಲ. ತನ್ನ ಕೊರಿಂಥದ ಸಹೋದರ ಮತ್ತು ಸಹೋದರಿಯರಿಗಾಗಿ, ಮತ್ತು ವಿಸ್ತರಣದಲ್ಲಿ ನಮಗಾಗಿಯೂ, ಪೌಲನಿಗಿದ್ದ ಪಿತೃ ಸದೃಶ ಮಮತೆಯನ್ನು ಅವು ಪ್ರತಿಬಿಂಬಿಸುತ್ತವೆ. ಮತ್ತು ನಿಸ್ಸಂಶಯವಾಗಿ ನಮ್ಮ ಸ್ವರ್ಗೀಯ ತಂದೆಯು ಒದಗಿಸುವ ಬುದ್ಧಿವಾದವು ಅವುಗಳಲ್ಲಿ ಅಡಕವಾಗಿದೆ ಯಾಕಂದರೆ ಆತನು ನಮ್ಮ ಪ್ರಯತ್ನಗಳು ಯಶಸ್ವಿಯಾಗುವಂತೆ ಬಯಸುತ್ತಾನೆ.—1 ಕೊರಿಂಥ 15:58.
[ಅಧ್ಯಯನ ಪ್ರಶ್ನೆಗಳು]
a ಅಂಥ ಬುಲೆಟಿನ್ ಬೋರ್ಡ್ಗಳ ಇನ್ನೊಂದು ಅಪಾಯವೇನಂದರೆ ಗ್ರಂಥಸ್ವಾಮ್ಯ ಪಡೆದ ಕಾರ್ಯಕ್ರಮಗಳನ್ನು ಅಥವಾ ಪ್ರಕಾಶನಗಳನ್ನು, ಮೂಲ ಗ್ರಂಥಕರ್ತರ ಯಾ ಮಾಲಕರ ಅಪ್ಪಣೆಯ ಹೊರತು, ತಮ್ಮ ಸ್ವಂತ ಕಂಪ್ಯೂಟರುಗಳಿಗೆ ನಕಲು ಮಾಡುವ ಶೋಧನೆ, ಅದು ಅಂತರ್ರಾಷ್ಟ್ರೀಯ ಗ್ರಂಥಸ್ವಾಮ್ಯ ನಿಯಮಗಳಿಗೆ ವಿರುದ್ಧವಾಗಿರುವುದು.—ರೋಮಾಪುರ 13:1.
ನಿಮಗೆ ನೆನಪಿದೆಯೇ?
▫ ಯಾವ ವಿಶಿಷ್ಟ ಕಾರಣಕ್ಕಾಗಿ ಪೌಲನು 1 ಕೊರಿಂಥ 15:33 ನ್ನು ಬರೆದನು?
▫ ಕೆಲಸದ ಸ್ಥಳದಲ್ಲಿ ನಾವು ಪೌಲನ ಬುದ್ಧಿವಾದವನ್ನು ಹೇಗೆ ಅನ್ವಯಿಸಬಲ್ಲೆವು?
▫ ನೆರೆಯವರ ಸಂಬಂಧದಲ್ಲಿ ಯಾವ ಸಮತೂಕದ ನೋಟವು ನಮಗಿರಬೇಕು?
▫ ಯುವಕರಿಗಾಗಿ 1 ಕೊರಿಂಥ 15:33 ವಿಶೇಷವಾಗಿ ಯುಕ್ತವಾದ ಬುದ್ಧಿವಾದವಾಗಿದೆ ಏಕೆ?
[ಪುಟ 17 ರಲ್ಲಿರುವ ಚಿತ್ರ]
ಪೌಲನು ಸುವಾರ್ತೆಯನ್ನು ಪ್ರವರ್ಧಿಸಲು ಕೆಲಸದ ಸ್ಥಳವನ್ನು ಉಪಯೋಗಿಸಿದನು
[ಪುಟ 18 ರಲ್ಲಿರುವ ಚಿತ್ರ]
ಬೇರೆ ಯುವಕರು ನಿಮ್ಮ ಕ್ರೈಸ್ತ ಆಚಾರಗಳನ್ನು ಕೆಡಿಸಬಲ್ಲರು