ಯೆಹೋವನ ಸಾಕ್ಷಿಗಳು ಹೆಸರಿನ ಹಿಂದೆ ಇರುವ ಸಂಸ್ಥಾಪನೆ
ಅಕ್ಟೋಬರ 6, 1990 ರಲ್ಲಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ವಾರ್ಷಿಕ ಕೂಟಕ್ಕೆ, ಅಮೆರಿಕದ ನ್ಯೂ ಜೆರ್ಸಿ, ಜೆರ್ಸಿ ಸಿಟಿಯ ಯೆಹೋವನ ಸಾಕ್ಷಿಗಳ ಎಸೆಂಬ್ಲಿ ಹಾಲ್ನಲ್ಲಿ ನೆರೆದ ಬಹುಮಟ್ಟಿಗೆ 5,000 ದಷ್ಟು ಜನಸಮೂಹವು ಒಂದು ಅಚ್ಚರಿಯನ್ನು ಪಡೆಯಲಿಕ್ಕಿತ್ತು. ಸಭಾಧ್ಯಕ್ಷ, ಜೋನ್ ಇ. ಬರ್, ಜೆಹೊವಾಸ್ ವಿಟ್ನೆಸೆಸ್—ದ ಆರ್ಗನೈಸೆಷನ್ ಬಿಹೈಂಡ್ ದ ನೇಮ್ [ಯೆಹೋವನ ಸಾಕ್ಷಿಗಳು—ಹೆಸರಿನ ಹಿಂದೆ ಇರುವ ಸಂಸ್ಥಾಪನೆ] ಎಂಬ ನಾಮಾಂಕಿತ 55-ನಿಮಿಷಗಳ ವಿಡಿಯೋದ ಬಿಡುಗಡೆಯ ಕುರಿತಾಗಿ ಸಭಿಕರಿಗೆ ತಿಳಿಸಿದರು. ಇದು ಸೊಸೈಟಿಯಿಂದ ಉತ್ಪಾದಿಸಲ್ಪಟ್ಟ ಮೊತ್ತ ಮೊದಲ ವಿಡಿಯೋ ಆಗಿರುವುದಾದರೂ, ಖಂಡಿತವಾಗಿಯೂ ಕೊನೆಯದ್ದಲ್ಲ.
ದೈವಿಕ ನಾಮಕ್ಕೆ ಸಾಕ್ಷಿಯನ್ನು ನೀಡಲು ಮತ್ತು “ರಾಜ್ಯದ ಸುವಾರ್ತೆ”ಯನ್ನು ಸಾರಲು ಯೆಹೋವನ ಜನರು ಸಂಸ್ಥಾಪಿಸಲ್ಪಟ್ಟ ವಿಧವನ್ನು ವಿಡಿಯೋ ತೋರಿಸುತ್ತದೆ. (ಮತ್ತಾಯ 24:14) ನ್ಯೂ ಯಾರ್ಕ್, ಬ್ರೂಕ್ಲಿನ್ನಲ್ಲಿರುವ ಕೇಂದ್ರ ಕಾರ್ಯಾಲಯ ಮತ್ತು ವಾಚ್ಟವರ್ ಫಾರ್ಮ್ಸ್ಗಳಲ್ಲಿರುವ ಸೌಕರ್ಯಗಳು ಎತ್ತಿತೋರಿಸಲ್ಪಟ್ಟಿವೆ. ಇಂಗ್ಲಿಷಿನಲ್ಲಿ 5,00,000 ಕ್ಕಿಂತಲೂ ಹೆಚ್ಚು ಪ್ರತಿಗಳು ಉತ್ಪಾದಿಸಲ್ಪಟ್ಟಿವೆ, ಮತ್ತು ಈಗ (ಯಾ ಬಲುಬೇಗನೆ) ಇತರ 26 ಭಾಷೆಗಳಲ್ಲಿ ದೊರಕುವುವು.a
ಪ್ರತಿವರ್ತನೆ ಏನಾಗಿತ್ತು?
ಯೆಹೋವನ ಸಾಕ್ಷಿಗಳಲ್ಲದ ಜನರು ವಿಡಿಯೋಗೆ ಹೇಗೆ ಪ್ರತಿವರ್ತಿಸಿದ್ದಾರೆ? ಒಬ್ಬ ವ್ಯಾಪಾರಸ್ಥನು ಬರೆದದ್ದು:
“ಟೇಪ್ ಅತ್ಯುತ್ಕೃಷ್ಟ ಗುಣಮಟ್ಟದ್ದಾಗಿ ನಾನು ಕಂಡುಕೊಂಡೆನು. ನಾನು ವಿಶೇಷವಾಗಿ ಚಿತ್ರಗಳ ಹೊಳಪಿನಿಂದ ಮತ್ತು ವೃತ್ತಿಪರ ಸಂಯೋಜನಾ ಕೆಲಸದಿಂದ ಪ್ರಭಾವಿತನಾದೆನು. ಅದೊಂದು ಟೇಪ್ ಎಂದು ಮರೆಯುವ ಮತ್ತು ಅದನ್ನು ಚಲನ ಚಿತ್ರದೋಪಾದಿ ಹೆಚ್ಚಾಗಿ ಯೋಚಿಸುವ ಒಂದು ಪ್ರವೃತ್ತಿ ನನ್ನಲ್ಲಾಯಿತು. ನಿಮ್ಮ ನ್ಯೂ ಯಾರ್ಕ್ ಕೇಂದ್ರ ಕಾರ್ಯಾಲಯದ ಉದ್ದೇಶವನ್ನು ವಿವರಿಸುವುದರಲ್ಲಿ ಈ ಟೇಪ್ ಅಸಾಧಾರಣವಾಗಿ ಪ್ರಯೋಜನಕರದ್ದಾಗಿರುವುದು. ಈ ಒಂದು ಕೃತಿಗಾಗಿ ನಿಮಗೆ ಶುಭಾಶಯಗಳು.”—ಜೆ. ಜೆ.
ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಿನ ಅಧ್ಯಯನ ಮಾಡುವವರು ಈ ವಿಡಿಯೋವನ್ನು ವೀಕ್ಷಿಸುವುದರ ಮೂಲಕ ಪ್ರಯೋಜನ ಪಡೆದಿರುತ್ತಾರೆ. ಯಾಕೆ ಎಂದು ಕೆಳಗಿನದ್ದು ವಿವರಿಸುತ್ತದೆ:
“ಇಪ್ಪತ್ತು ವರ್ಷ ವಯಸ್ಸಿನ ಮತ್ತು ಸ್ಥಳೀಯ ವಿಶ್ವವಿದ್ಯಾನಿಲಯದಲ್ಲಿ ಹಾಜರಾಗುವ ಒಬ್ಬ ಯುವಕನೊಂದಿಗೆ ನಾನು ಬೈಬಲನ್ನು ಅಧ್ಯಯನಿಸುತ್ತೇನೆ. ಲೋಕದ ಹದಗೆಡುತ್ತಿರುವ ಪರಿಸ್ಥಿತಿಗಳ ಕುರಿತು ಅವನು ಚಿಂತಿತನಾಗಿದ್ದನು. ಆದರೆ ಟೇಪನ್ನು ವೀಕ್ಷಿಸಿದ ಮೇಲೆ ಮತ್ತು ಜೀವಿತದಲ್ಲಿ ಒಂದು ನಿಜೋದ್ದೇಶದೊಂದಿಗಿನ ಉತ್ತಮ ಎಳೆಯ ಬೆತೆಲ್ ಸಹೋದರರೆಲ್ಲರನ್ನು ನೋಡಿದ ಮೇಲೆ, ಅವನ ಸಮಗ್ರ ಮನೋಭಾವವು ಬದಲಾಯಿತು. ಅವನು ನಮ್ಮ ವಿಶೇಷ ಸಮ್ಮೇಳನ ದಿನಕ್ಕೆ ಹಾಜರಾದನು ಮತ್ತು ವಾರಕ್ಕೆ ಎರಡಾವರ್ತಿ ಬೈಬಲನ್ನು ಅಧ್ಯಯನಿಸಲು ಕೇಳಿಕೊಂಡನು. ಹೈಸ್ಕೂಲ್ ಅಧ್ಯಾಪಕಳಾಗಿರುವ ಇನ್ನೊಬ್ಬ ಬೈಬಲ್ ವಿದ್ಯಾರ್ಥಿಯು ಅವಳ ಸಂಬಂಧಿಕರಿಗೆ ತೋರಿಸಲು ವಿಡಿಯೋವನ್ನು ಎರವಲಾಗಿ ಕೊಂಡುಹೋದಳು. ಯೆಹೋವನ ಸಾಕ್ಷಿಗಳು ಕೇವಲ ನಿರ್ಬಲವಾದ, ಜನಪ್ರಿಯವಲ್ಲದ, ಚಿಕ್ಕ ಸಂಸ್ಥಾಪನೆ ಎಂದು ಅವರು ಎಣಿಸಿದ್ದರು. ನಮ್ಮ ಕೆಲಸದ ಭೌಗೋಲಿಕ ಲಕ್ಷಣವನ್ನು ಮತ್ತು ಮಾಡುತ್ತಿರುವ ತಾರತಮ್ಯವನ್ನು ನೋಡಿ ದಿಕ್-ಭ್ರಮೆಗೊಂಡರು, ಯೆಹೋವನಿಗೆ ಉಪಕಾರಗಳು.”—ಜೆ. ಬಿ.
“ವಿಡಿಯೋವನ್ನು ನೋಡಿಯಾದ ನಂತರ ನಾನು ಬೈಬಲ್ ಅಧ್ಯಯನ ಮಾಡುತ್ತಿದ್ದ ಹೆಂಗಸು ಆನಂದ ಮತ್ತು ಮೆಚ್ಚುಗೆಯ ಕಣ್ಣೀರನ್ನು ಸುರಿಸಿದಾಗ, ನನಗಾದ ಸಂತೋಷವು ಮಾತುಗಳಿಂದ ಹೇಳತೀರದ್ದಾಗಿದೆ. ಅವಳು ಅಶ್ರುಭರಿತಳಾಗಿ ಅಂದದ್ದು: ‘ಸತ್ಯ ದೇವರಾದ ಯೆಹೋವನ ಸಂಸ್ಥಾಪನೆ ಇದು ಎಂದು ಯಾರಾದರೊಬ್ಬರು ನೋಡದೆ ಹೇಗೆ ಇರಸಾಧ್ಯವಿದೆ? ಅಂತಹ ಜನರು ಇದ್ದರು ಎಂದು ನಾನೆಂದಿಗೂ ತಿಳಿದಿರಲಿಲ್ಲ.’ ಮತ್ತು ಅನಂತರ ಅವಳು ಹೇಳಿದ್ದು: ‘ನನಗೆ ದೀಕ್ಷಾಸ್ನಾನವಾಗಬೇಕು.’”—ಸಿ. ಡಿ.
“ಬೈಬಲ್ ವಿದ್ಯಾರ್ಥಿಗಳೊಂದಿಗೆ ವಿಡಿಯೋವನ್ನು ಉಪಯೋಗಿಸುವುದರಲ್ಲಿ ನಮಗೆ ಬಹಳಷ್ಟು ಯಶಸ್ಸು ದೊರಕಿತು. ನನ್ನ ಹೆಂಡತಿಯ ಬೈಬಲ್ ವಿದಾರ್ಥಿಗಳಲ್ಲೊಬ್ಬಳ ಗಂಡನು ಕಳೆದ ರಾತ್ರಿ ನನ್ನ ಬಳಿಗೆ ಬಂದನು. ಅವನು ಬಹಳವಾಗಿ ವಿರೋಧಿಸುತ್ತಿದ್ದನು. ಅವನು ವಿಡಿಯೋವನ್ನು ವೀಕ್ಷಿಸಿದನು. ಅನಂತರ ಪ್ರಶ್ನೆಗಳನ್ನು ಕೇಳಿದನು ಮತ್ತು ಒಂದು ಬೈಬಲ್ ಮತ್ತು ಬೈಬಲ್ ಅಧ್ಯಯನ ಸಹಾಯಕವಾದ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದೊಂದಿಗೆ ಇಲ್ಲಿಂದ ಹೋದನು. ಈ ಮೊದಲು ಅವನ ಹೆಂಡತಿಯ ಬೈಬಲ್ ಸಾಹಿತ್ಯಗಳನ್ನೆಲ್ಲಾ ಅವನು ಸುಟ್ಟುಹಾಕಿದ್ದನು!”—ಡಿ. ಏಚ್.
ಕೆಳಗಿನ ಹೇಳಿಕೆಗಳು ತೋರಿಸುವಂತೆ, ಎಳೆಯರು ಕೂಡ ವಿಡಿಯೋವು ಬಹಳಷ್ಟು ತಲ್ಲೀನಗೊಳಿಸುವಂತಹದ್ದಾಗಿ ಕಂಡುಕೊಂಡಿದ್ದಾರೆ:
“ನಾನು ಆರೂವರೆ ವರ್ಷದವಳು. ಬೈಬಲ್ಗಳ ಕುರಿತಾದ ಭಾಗವನ್ನು ಮತ್ತು ಬಹಳ ವೇಗವಾಗಿ ಪೆಟ್ಟಿಗೆಗಳು ಚಲಿಸುವದನ್ನು ನಾನು ಮೆಚ್ಚಿದೆನು.”—ಕೆ. ಡಬ್ಲ್ಯೂ.
“ನನ್ನ ಎಳೆಯ ಮಕ್ಕಳು ಹೇಳಿದ್ದೇನಂದರೆ ಟೀವೀಯಲ್ಲಿ ನೋಡಿದ್ದ ಯಾವುದೇ ಕಾರ್ಯಕ್ರಮಕ್ಕಿಂತಲೂ ಇದು ಉತ್ತಮವಾಗಿತ್ತು.”—ಆರ್. ಸಿ.
“ಎರಡನೆಯ ಬಾರಿ ವಿಡಿಯೋವನ್ನು ನೋಡಿದ ನಂತರ, ಆದ್ಯಂತವಾಗಿ ನಿಕಟ ಗಮನವನ್ನು ಕೊಟ್ಟ ನನ್ನ ಐದು ವರ್ಷ ಪ್ರಾಯದ ಮಗನು, ವಿಚಾರಿಸಿದ್ದು, ‘ನಾವಿದನ್ನು ಪ್ರತಿದಿನ ನೋಡಬಹುದೇ?’ ನಮ್ಮ ಮೂರು ವರ್ಷದ ಮಗಳು ಜೊತೆಗೂಡುತ್ತಾ ಅಂದದ್ದು ‘ನಾನು ಬೆತೆಲಿಗೆ ಹೋಗಲು ಮತ್ತು ಪುಸ್ತಕಗಳನ್ನು ಮಾಡಲು ಬಯಸುತ್ತೇನೆ!’”—ಎಮ್. ಇ.
“ನನ್ನ ಮಕ್ಕಳು, ರೊಬಿನ್ ಮತ್ತು ಶಾನ್ಇನ್ 12 ಮತ್ತು 9 ವರುಷ ಪ್ರಾಯದವರು, ಟೇಪನ್ನು ಪುನಃ ಪುನಃ ಇಟ್ಟು ನೋಡುತ್ತಾ ಇರುತ್ತಾರೆ. ನನ್ನ ಚಿಕ್ಕ ಮಗಳು, ಟೇಪನ್ನು ನೋಡಿಯಾದ ಮೇಲೆ ಘೋಷಿಸಿದ್ದು, ‘ನನಗೆ ಕ್ಷೇತ್ರ ಸೇವೆಗೆ ಹೋಗಲು ತುಂಬಾ ಇಷ್ಟ. ಅದರಲ್ಲಿ ತುಂಬಾ ವಿನೋದವಿದೆ.’ ನಮ್ಮ ಕುಟುಂಬ ಜೀವಿತದ ಮೇಲೆ ಈ ವಿಡಿಯೋ ನೇರ ಪ್ರಭಾವ ಬೀರಿದೆ ಎಂದು ನಾವು ಭಾವಿಸುತ್ತೇವೆ. ವೀಕ್ಷಿಸುವುದು ಸುರಕ್ಷಿತವಾಗಿದೆ ಎಂದು ನೀವು ಎಣಿಸುವ ಎಂದು ಟೆಲಿವಿಶನ್ ಕಾರ್ಯಕ್ರಮಕ್ಕೆ ತಿರುಗಿಸುವುದು ಎಷ್ಟೊಂದು ಚೇತೋಹಾರಿಯಾಗಿರುತ್ತದೆ!”—ಎನ್. ಬಿ.
“ನಾನು 131⁄2 ವರ್ಷ ವಯಸ್ಸಿನವಳು. ನನಗೆ ಈ ಹೊಸ ವಿಡಿಯೋ, ಯೆಹೋವನಿಂದ ಬರುವ ಆಶ್ಚರ್ಯಕರ ಒದಗಿಸುವಿಕೆಗಳನ್ನು ನಾನು ಎಷ್ಟೊಂದು ಹಗುರವಾಗಿ ತೆಗೆದುಕೊಳ್ಳುತ್ತಿದ್ದೆ ಎಂದು ತಿಳಿಯುವಂತೆ ಮಾಡಿತು. ದೇವರ ಜನರಲ್ಲಿ ಒಬ್ಬಳಾಗಿರುವುದು ಒಂದು ಸುಯೋಗವಾಗಿದೆ.”—ಕೆ. ಡಬ್ಲ್ಯೂ.
“ನಾನು 16 ವರ್ಷ ಪ್ರಾಯದವಳು, ಮತ್ತು ಇದೊಂದು ನಡಿಸಲ್ಪಡುತ್ತಾ ಇರುವ ಭೌಗೋಲಿಕ ಕೆಲಸವಾಗಿದೆ ಎಂದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಲು ಈ ವಿಡಿಯೋ ಸಹಾಯ ಮಾಡಿತು.”—ಎ. ಎಮ್.
“ನಿಜ ದೇವಪ್ರಭುತ್ವ ಮನೋರಂಜನೆ ಹೇಗಿರಸಾಧ್ಯವಿದೆ ಎಂದು ನೋಡಿದ ಫಲಿತಾಂಶವಾಗಿ, ಕ್ರಮದ ಟೆಲಿವಿಶನ್ ಕಾರ್ಯಕ್ರಮಗಳು ಅವರ ಮನಸ್ಸಿಗೆ ಹಿಡಿಯುವುದಿಲ್ಲವೆಂದು ನಮ್ಮ ಮಕ್ಕಳು ಹೇಳಿದರು. ಪೂರ್ಣ ಸಮಯದ ಸೇವೆಯಲ್ಲಿ ಪ್ರವೇಶಿಸುವ ಅವರ ಹಂಬಲವನ್ನು ಕೂಡ ಇದು ಬಲಗೊಳಿಸಿತು.”—ಎಲ್. ಎಮ್.
ಅನೇಕ ವರ್ಷಗಳಿಂದ ಯೆಹೋವನ ಸಾಕ್ಷಿಗಳಾಗಿದ್ದವರು ಕೂಡ, ಅವರೇನನ್ನು ನೋಡಿದರೋ ಅದರಿಂದ ಪ್ರೇರಿಸಲ್ಪಟ್ಟರು.
“ಯೆಹೋವನ ಜನರಾಗಿರುವ ನಮ್ಮ ಮೇಲೆ ವಿಡಿಯೋ ಅಷ್ಟೊಂದು ಪ್ರಭಾವವನ್ನು ಬೀರುತ್ತಿರುವುದಾದರೆ, ಅದು ಎಷ್ಟು ಹೆಚ್ಚಾಗಿ ಇತರರನ್ನು ಪ್ರಭಾವಿಸಬಹುದು? ಈ ವ್ಯವಸ್ಥೆಯೊಂದಿಗೆ ನಿಭಾಯಿಸಲು ತುಂಬಾ ಕಷ್ಟಕರವಾಗುವಾಗ, ನನ್ನ ಸಮಯದಿಂದ ಒಂದು ತಾಸನ್ನು ತಕ್ಕೊಂಡು, ನನ್ನ ನಿವಾಸದ ಕೋಣೆಯ ಆರಾಮದಲ್ಲಿ, ಬೆತೆಲನ್ನು ಸಂದರ್ಶಿಸುತ್ತೇನೆ!”—ಕೆ. ಬಿ.
“ಪ್ರತಿಯೊಂದು ಕೆಲಸದ ಹಿಂದೆ ತಕ್ಕೊಳ್ಳಲ್ಪಡುವ ಜಾಗ್ರತೆ ಮತ್ತು ನಿಷ್ಕೃಷ್ಟತೆಯನ್ನು ನಾನು ನೋಡಿದ ನಂತರ, ನನ್ನ ಕೋಣೆಯೊಳಗೆ ಹೋಗಿ, ನನ್ನ ಬೈಬಲ್ ಸಾಹಿತ್ಯಗಳನ್ನು ಅಪ್ಪಿಕೊಳ್ಳುವ ಭಾವನೆ ನನಗಾಯಿತು.”—ಎಲ್. ಪಿ.
ಜೆಹೊವಾಸ್ ವಿಟ್ನೆಸೆಸ್—ದ ಆರ್ಗನೈಸೆಷನ್ ಬಿಹೈಂಡ್ ದ ನೇಮ್ ವಿಡಿಯೋವನ್ನು ನೋಡಲು, ನೀವು ಕೂಡ ಸಮಯವನ್ನು ತಕ್ಕೊಳ್ಳುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಜೀವಿತದಲ್ಲಿ ನಿಮಗೆ ಅದು ಒಂದು ಭಿನ್ನವಾದ ಯಥಾದೃಷ್ಟಿಯ ನೋಟವನ್ನು ಕೊಡುವುದು ಮತ್ತು ಭದ್ರವಾದ ಭವಿಷ್ಯತ್ತೊಂದರಲ್ಲಿ ಭರವಸೆ ಇರುವಂತೆ ನಿಮಗೆ ಸಹಾಯ ಮಾಡುವುದು. (w92 10⁄1)
[ಅಧ್ಯಯನ ಪ್ರಶ್ನೆಗಳು]
a ಅಮೆರಿಕನ್ ಸನ್ನೆ ಭಾಷೆ, ಅರೇಬಿಕ್, ಇಟಾಲಿಯನ್, ಕಟಲನ್, ಕಂಟೊನಿಸ್, ಕೊರಿಯನ್, ಕ್ರೊಯೆಶಿಯನ್, ಗ್ರೀಕ್, ಜರ್ಮನ್, ಜಾಪನೀಸ್, ಜೆಕ್ (ಬೊಹೆಮಿಯನ್), ಡಚ್, ಡೇನಿಶ್, ನಾರ್ವೆಜಿಯನ್, ಪೋಲಿಶ್, ಪೋರ್ಚುಗೀಸ್ (ಯೂರೋಪ್), ಪೋರ್ಚುಗೀಸ್ (ಬ್ರೆಸೀಲ್), ಫಿನಿಷ್, ಫ್ರೆಂಚ್, ಬಾಸ್ಕ್, ಮಂಡಾರಿನ್, ರುಮೇನಿಯನ್, ಸ್ಪ್ಯಾನಿಶ್, ಸ್ಲಾವಕ್, ಸ್ವೀಡಿಶ್, ಹಂಗೇರಿಯನ್.