“ಇಷ್ಟ ವಸ್ತುಗಳನ್ನು” ಒಟ್ಟುಗೂಡಿಸುವದು—ಪೋಲೆಂಡ್ನಲ್ಲಿ
ಪೋಲೆಂಡ್ ಒಂದು ಕ್ಯಾತೊಲಿಕ್ ದೇಶವೆಂದು ಹೇಳಲ್ಪಡುತ್ತದೆ. ಅಧಿಕೃತ ಸಂಖ್ಯಾಸಂಗ್ರಹಣಕ್ಕನುಸಾರ, ಜನಸಂಖ್ಯೆಯ 93 ಪ್ರತಿಶತ ಕ್ಯಾತೊಲಿಕ್ ಚರ್ಚ್ಗೆ ಸೇರಿದವರಾಗಿದ್ದಾರೆ. ಆದಾಗ್ಯೂ, ಅಲ್ಲಿ ಸಂಭವಿಸುತ್ತಿರುವ ಇತ್ತೀಚೆಗಿನ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳು ಅಲ್ಲಿಯ ಜನರ ಮೇಲೆ ಮತ್ತು ಅವರ ಧಾರ್ಮಿಕ ಜೀವನದ ಮೇಲೆ ಗಮನಾರ್ಹವಾದ ಆಘಾತವನ್ನು ಒಡ್ಡಿದೆ. ಗಣನೆಮಾಡಲ್ಪಟ್ಟವರಲ್ಲಿ ಕೇವಲ ಸುಮಾರು 50 ಪ್ರತಿಶತ ತಮ್ಮನ್ನು ಆಚರಣೆಯ ಕ್ಯಾತೊಲಿಕರೆಂದು ಎಣಿಸುತ್ತಾರೆಂದು ಮತಗಣನೆಯ ಸಮೀಕ್ಷೆಗಳು ತೋರಿಸುತ್ತವೆ.
ಮೇ 1989 ರಲ್ಲಿ, ಯೆಹೋವನ ಸಾಕ್ಷಿಗಳು ಪೋಲೆಂಡ್ನಲ್ಲಿ ಒಂದು ಧಾರ್ಮಿಕ ಸಂಸ್ಥೆಯೆಂದು ಅಧಿಕೃತವಾಗಿ ಮನ್ನಣೆಪಡೆದರು. ಅಂದಿನಿಂದ ರಾಜ್ಯದ ಸುವಾರ್ತೆಯ ಪ್ರಚಾರಕರೋಪಾದಿ ಅವರ ಸಾಲಿಗೆ ಸುಮಾರು 11,000 ಹೊಸಬರು ಸೇರಿದ್ದಾರೆ. ಈಗ 1,300 ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ 1,06,000 ರಾಜ್ಯ ಪ್ರಚಾರಕರು ಸಹವಸಿಸುತ್ತಾ ಇದ್ದಾರೆ, ಮತ್ತು 1991 ರ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 2,00,422 ಮಂದಿ ಹಾಜರಿದ್ದರು. ಹೀಗೆ, ಮುಂತಿಳಿಸಲ್ಪಟ್ಟ ‘ಜನಾಂಗಗಳಿಂದ ಇಷ್ಟವಸ್ತುಗಳ’ ಒಟ್ಟುಗೂಡಿಸುವಿಕೆಯು ಪೋಲೆಂಡ್ನಲ್ಲಿ ನಡೆಯುತ್ತಾ ಇದೆ. (ಹಗ್ಗಾಯ 2:7) ಇತ್ತೀಚಿಗೆ, ಪೋಲೆಂಡ್ನಲ್ಲಿ ಮುಖಶೀರ್ಷಿಕೆಯನ್ನುಂಟುಮಾಡುವ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಅಧಿವೇಶನಗಳು ಜರುಗಿದವು. ಆದರೆ ಆ ದೇಶದಲ್ಲಿ ಒಟ್ಟುಗೂಡಿಸುವ ಕೆಲಸವು ಹೇಗೆ ಮುಂದರಿಯುತ್ತದೆ ಎಂದು ದೇಶದ ಕೆಲವು ಸಣ್ಣ ಶಹರಗಳ ವೀಕ್ಷಣವು ವಿಶೇಷವಾಗಿ ತೋರಿಸುವುದು.
ಪಯನೀಯರರು ದಾರಿಯನ್ನು ತೆರೆಯುತ್ತಾರೆ
ಬಾಲಿಕ್ಟ್ ಸಮುದ್ರಕ್ಕೆ ವಿಸ್ಟುಲಾ ನದಿಯು ಬರಿದಾಗುವ ಪ್ರದೇಶದಲ್ಲಿರುವ ಶ್ಟಮ್ ನಗರದಲ್ಲಿ ಸುಮಾರು 10,000 ಜನವಸತಿಯಿದೆ. ಸಾರುವ ಕಾರ್ಯದ ಕುರಿತಾಗಿ ಹೇಳುವದಾದರೆ ಈ ನಗರವು ದುರ್ಗಮ್ಯವಾದ ಟೆರಿಟೊರಿ ಎಂದು ಬಹಳ ಕಾಲದಿಂದ ಪರಿಗಣಿಸಲ್ಪಟ್ಟಿದೆ. ಆ ಪ್ರದೇಶದಲ್ಲಿ ಕೇವಲ ಎಂಟು ಪ್ರಚಾರಕರು 1987 ರಲ್ಲಿ ಇದ್ದರು. ಆದಾಗ್ಯೂ, ಪಯನೀಯರರು ಯಾ ಪೂರ್ಣ ಸಮಯದ ರಾಜ್ಯ ಘೋಷಕರು ಆಗಮಿಸಿದಾಗ ವಿಷಯಗಳು ಬದಲಾದವು. ಒಂದು ಚಲನಚಿತ್ರ ಮಂದಿರದಲ್ಲಿ ನಡೆದ ಐದನೆಯ ಕೂಟದಲ್ಲಿ 100 ಆಸಕ್ತ ಜನರು ಹಾಜರಿದ್ದರು! ಎರಡು ವರ್ಷಗಳ ಶ್ರದ್ಧೆಯ ಪ್ರಯತ್ನದ ಬಳಿಕ ಒಂದು ಸಭೆಯು ರಚಿಸಲ್ಪಟ್ಟಿತು. ಈಗ 90 ಪ್ರಚಾರಕರಿಗೆ ಅವರದ್ದೇ ಸ್ವಂತ ರಾಜ್ಯ ಸಭಾಗೃಹವಿರುತ್ತದೆ, ಮತ್ತು ಅವರ ಕೂಟಗಳಿಗೆ ಕ್ರಮವಾಗಿ 150 ಜನರು ಹಾಜರಾಗುತ್ತಿದ್ದಾರೆ.
ನಿರೀಕ್ಷಿಸಲ್ಪಟ್ಟಂತೆ, ಕ್ಯಾತೊಲಿಕ್ ಚರ್ಚ್ನಿಂದ ವಿರೋಧವು ಬಲುಬೇಗನೆ ಬಂತು. ಒಬ್ಬ “ವಿಶೇಷಜ್ಞೆ” ಕ್ಯಾತೊಲಿಕ್ ಸಂನ್ಯಾಸಿನಿ (ನನ್) ಸಾಕ್ಷಿಗಳ ಕುರಿತಾಗಿ ಕೆಲವು ಹೆಸರುಗೆಡಿಸುವ ಭಾಷಣಗಳನ್ನು ನೀಡುತ್ತಾ, ಸುಳ್ಳು ಬೋಧನೆಗಳನ್ನು ಕಲಿಸುತ್ತಾರೆಂದು ಅವರ ಮೇಲೆ ಆಪಾದಿಸಿದಳು. ಆದರೆ ಅನೇಕ ವೇಳೆ ಆಗುವಂತೆ, ಇದು ವಿಪರ್ಯಸ್ತವಾಗಿ ತಿರುಗಿತು. ಅವಳ ಭಾಷಣಗಳು ಕೇವಲ ಜನರು ನಿಜಾಂಶಗಳನ್ನು ಕಂಡುಕೊಳ್ಳಲು ಬಯಸುವಂತೆ ಮಾಡಿದವು. ಅನೇಕರು ಸತ್ಯವನ್ನು ಕಲಿತರು ಮತ್ತು ಈಗ ಕ್ರಮದ ಪಯನೀಯರರಾಗಿದ್ದಾರೆ! ಅವರು ಹೇಳುವದು: ‘ಸತ್ಯವನ್ನು ಕಲಿಯುವಾಗ, ಸಾಕ್ಷಿಯಾಗಲು ಬಯಸುವ ಪ್ರತಿಯೊಬ್ಬನು ಅವನ ಶಿಕ್ಷಕನಂತೆ ಆಗಬೇಕು ಅಂದರೆ ಒಬ್ಬ ಪಯನೀಯರನಾಗಬೇಕೆಂದು ನಾವು ಎಣಿಸಿದೆವು.’ ಆದುದರಿಂದ ಇಡೀ ಸಭೆಯಲ್ಲಿ ಪಯನೀಯರಾತ್ಮವು ವ್ಯಾಪಿಸಿದೆ.
ಇದರ ಫಲಿತಾಂಶವಾಗಿ, ಆ ಪ್ರದೇಶದಲ್ಲಿ ಸುಮಾರು 180 ಮನೆ ಅಭ್ಯಾಸಗಳನ್ನು ನಡಿಸಲಾಗುತ್ತದೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ ಮೂಲಕ, ಕೆಲವರಿಗೆ ಓದಲು ಸಹಾ ಕಲಿಸಲಾಯಿತು. ಅದೇ ಸಮಯದಲ್ಲಿ, ಅವರು ಸತ್ಯವನ್ನೂ ಕಲಿತರು. ಸ್ಥಳೀಯ ಸೆರೆಮನೆ ವಾಸಿಗಳ ಒಂದು ಗುಂಪಿಗೆ ರಸ್ತೆಗಳನ್ನು ಶುಚಿಗೊಳಿಸಲು ಅವರು ಹೊರಗೆ ಬರುವಾಗ ಕ್ರಮವಾಗಿ ಹತ್ತು ನಿಮಿಷಗಳ ಬೈಬಲ್ ಅಭ್ಯಾಸಗಳನ್ನು ನಡಿಸಲಾಗುತ್ತದೆ. ದಾಟಿಹೋಗುತ್ತಿದ್ದ ಹೆಂಗಸೊಬ್ಬಳು ಒಬ್ಬ ಸಾಕ್ಷಿಯನ್ನು ದೂಷಿಸಲು ಆರಂಭಿಸಿದಾಗ, ಅವರಲ್ಲೊಬ್ಬನು ಸಾಕ್ಷಿಯ ಪರವಾಗಿ ವಾದಿಸಲು ಬಂದನು. ಸಹೋದರಿಯ ಬಳಿಗೆ ಧಾವಿಸಿ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಅವಳ ಕೈಗಳಿಂದ ತೆಗೆದುಕೊಂಡು, ಅದನ್ನು ಎತ್ತಿಹಿಡಿದನು ಮತ್ತು ಆ ದೂಷಿಸುವ ಹೆಂಗಸಿಗೆ ಕೇಳಿದ್ದು: “ನಿನಗೆ ಓದಲಿಕ್ಕೆ ಆಗುವದಿಲ್ಲವಾ? ಇಲ್ಲಿ ಏನು ಬರೆದದೆ? ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ! ಅಂಥ ಒಂದು ಸಂಗತಿಯನ್ನು ನೀನೆಂದಾದರೂ ಕೇಳಿದೀಯ್ದಾ? ದೇವರನ್ನು ಮತ್ತು ಅವನ ಆರಾಧಕರನ್ನು ನೀವು ಯಾಕಮ್ಮಾ ಅವಮಾನಿಸುತ್ತೀರಿ?”
ಬೀದಿ ಸುದ್ದಿ
ಕ್ರುಶ್ವೀಟ್ಸ, ಒಂದು ಸಮಯದಲ್ಲಿ ಪೋಲೆಂಡ್ನ ಪ್ರಖ್ಯಾತ ರಾಜಧಾನಿಯಾಗಿದ್ದು, ಒಂದು ಕ್ಯಾತೊಲಿಕ್ ಭದ್ರಕೋಟೆಯಾಗಿದೆ. ಅದರ 9,300 ನಿವಾಸಿಗಳ ನಡುವೆ 1990 ರ ಮಧ್ಯಭಾಗದಲ್ಲಿ ಕೇವಲ ಕೆಲವೇ ಸಾಕ್ಷಿಗಳು ಇದ್ದರು. ಆದರೆ ಯೆಹೋವನ ಹೇರಳವಾದ ಆಶೀರ್ವಾದವು ರಾಜ್ಯ ಘೋಷಕರ ಪ್ರಯತ್ನಗಳ ಮೇಲೆ ಇತ್ತು.
ಅವರ ಧಾರ್ಮಿಕ ಮುಂದಾಳುಗಳ ಕಪಟತನವನ್ನು ಗಮನಿಸಿಕೊಂಡು, ಅಧಿಕಾಧಿಕ ಜನರು—ವಿಶೇಷವಾಗಿ ಯೌವನಸ್ಥರು—ಉತ್ತರಗಳಿಗಾಗಿ ಸಾಕ್ಷಿಗಳೆಡೆಗೆ ತಿರುಗಿದರು. ಕೇವಲ ಕೊಂಚ ಸಮಯದಲ್ಲಿ, 20 ಮನೆ ಬೈಬಲ್ ಅಭ್ಯಾಸಗಳು ಆರಂಭಿಸಲ್ಪಟ್ಟವು. ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಚರ್ಚ್ನ ಪಾದ್ರಿಯು ಕೆಲವು ಕೆಟ್ಟ ಪ್ರಸಂಗಗಳನ್ನು ಕೊಟ್ಟನು, ಆದರೆ ಇದು ಯಥಾರ್ಥ ಜನರು ಅವರ ಕೂಟಗಳಿಗೆ ಹಾಜರಾಗುವದರಿಂದ ಅವರನ್ನು ನಿರುತ್ಸಾಹಗೊಳಿಸಲಿಲ್ಲ. ಅಂಗಡಿಗಳಲ್ಲಿ ಮತ್ತು ಉದ್ಯಾನವನಗಳಲ್ಲಿ ಮತ್ತು ಚರ್ಚ್ನಲ್ಲಿಯೂ ಕೂಡ ಸಾಕ್ಷಿಗಳು ಮಾತುಕತೆಯ ಮುಖ್ಯ ವಿಷಯವಸ್ತುವಾದರು. ಅರ್ಧ ವರ್ಷದ ನಂತರ, ಎರಡು ದೊಡ್ಡ ಪುಸ್ತಕಾಭ್ಯಾಸ ಗುಂಪುಗಳು ರಚಿಸಲ್ಪಟ್ಟವು. ಕ್ರುಶ್ವೀಟ್ಸದಲ್ಲಿ ಈಗ ಸುಮಾರು ಯೆಹೋವನ 35 ಆರಾಧಕರ ಒಂದು ಅತಿ ಹುರುಪಿನ ಸಭೆಯು ಇದೆ. ಅವರು 75 ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದಾರೆ ಮತ್ತು ಸುಳ್ಳು ಧರ್ಮದಿಂದ ಒಮ್ಮೆ ಬಂಧನದಲ್ಲಿಟ್ಟಿದ್ದ “ಇಷ್ಟವಸ್ತುಗಳನ್ನು” ಕಾರ್ಯಮಗ್ನರಾಗಿ ತರುತ್ತಿದ್ದಾರೆ.
ಇವರಲ್ಲಿ 23 ವರ್ಷ ಪ್ರಾಯದ ಬೊಗ್ಡಾನ್, ತೀವ್ರಾಸಕ್ತಿಯ ಕ್ಯಾತೊಲಿಕ್ ಕುಟುಂಬವೊಂದರ ಸದಸ್ಯನು ಇದ್ದನು. ಅವನು ಜ್ಞಾಪಿಸುವುದು: “ನಾನು ಮದ್ಯಪಾನ ಮಾಡುತ್ತಿದ್ದೆ, ಧೂಮಪಾನ ಮಾಡುತ್ತಿದ್ದೆ, ಮತ್ತು ಒಂದು ಅನೈತಿಕ ಜೀವನವನ್ನು ಜೀವಿಸುತ್ತಿದ್ದೆ. ನಾನು ಒಬ್ಬ ಸಜಾತಿಯ ಮೈಥುನದ ಹುಡುಗನೆಂದೂ ಕ್ರಾಂತಿಕಾರನೆಂದೂ ಹೆಸರುವಾಸಿಯಾಗಿದ್ದೆ, ಮತ್ತು ಯಾರೂ ಲಕ್ಷಿಸುತ್ತಿರಲಿಲ್ಲವೆಂದು ಭಾಸವಾಗುತ್ತಿತ್ತು. ಆದರೆ ನಾನು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ, ತಾನು ವಿಷ ತಕ್ಕೊಳ್ಳುತ್ತೇನೆಂದು ನನ್ನ ತಾಯಿಯು ಬೆದರಿಕೆಯೊಡಿದ್ಡಳು. ಒತ್ತಡವನ್ನು ತಡೆದುಕೊಳ್ಳಲಾರದೆ ನಾನು ಸಾಕ್ಷಿಗಳೊಂದಿಗಿನ ಸಂಪರ್ಕವನ್ನು ಪೂರ್ಣವಾಗಿ ಕಡಿದುಕೊಂಡೆ. ಅನಂತರ, ವಿಶೇಷ ಪಯನೀಯರರ ಪ್ರೀತಿಯ ಸಹಾಯದಿಂದಾಗಿ, ಎಲ್ಲಾ ಕೆಟ್ಟ ಅಭ್ಯಾಸಗಳಿಂದ ಸ್ವತಂತ್ರಿಸಿಕೊಳ್ಳಲು ನಾನು ಶಕ್ತನಾದೆ. ‘ಸ್ವಾತಂತ್ರ್ಯ ಪ್ರಿಯರು’ ಎಂಬ 1991 ರ ಜಿಲ್ಲಾ ಅಧಿವೇಶನದಲ್ಲಿ ನಾನು ದೀಕ್ಷಾಸ್ನಾನ ಪಡೆದಂದಿನಿಂದ, ಪೂರ್ಣ ಸಮಯದ ಶುಶ್ರೂಷೆಯನ್ನು ನನ್ನ ಜೀವಿತದ ಧ್ಯೇಯವನ್ನಾಗಿ ನಾನು ಆರಿಸಿದ್ದೇನೆ ಮತ್ತು ಅಂದಿನಿಂದ ಸಹಾಯಕ ಪಯನೀಯರನಾಗಿ ಇದ್ದೇನೆ.”
ಇಪ್ಪತ್ತೊಂದು ವರ್ಷ ಪ್ರಾಯದ ಸವ್ವೊಮೀರ್ ಪ್ರೇತ ಆಚಾರಗಳಲ್ಲಿ ಮತ್ತು ಸೈತಾನೀ ಪ್ರವೃತ್ತಿಯಲ್ಲಿ ಸಿಲುಕಿಕೊಂಡಿದ್ದನು, ಬೈಬಲ್ ಅಂಥ ಆಚಾರಗಳನ್ನು ಖಂಡಿಸುತ್ತದೆ ಎಂದು ನೋಡಿದಾಗ, ಅವನು ಅದನ್ನು ತೊರೆದನು. “ಆದರೆ ಸೈತಾನನು ಬಿಡಲಿಲ್ಲ” ಅನ್ನುತ್ತಾನೆ ಅವನು. “ಒಂದು ರಾತ್ರಿ ರೆಕಾರ್ಡ್ ಪೇಯ್ಲರ್ ಗುಂಡಿ ಒತ್ತದೆ ಹಾಡಲು ಆರಂಭಿಸಿತು, ಮತ್ತು ಪೈಶಾಚಿಕ ಆರಾಧನೆಗೆ ಸಂಬಂಧಪಟ್ಟ ಪ್ರತಿಯೊಂದು ವಿಷಯವನ್ನು ನಾನು ಮನೆಯಿಂದ ತೆಗೆದಿದ್ದೇನಾದರೂ, ನನಗೆ ಸೈತಾನೀ ಸಂಗೀತ ಕೇಳಿಸಿತು. ನಾನು ಯೆಹೋವನಿಗೆ ಪ್ರಾರ್ಥಿಸಿದೆ, ಮತ್ತು ನನ್ನ ಆತ್ಮಿಕ ಸಮತೂಕವನ್ನು ಪುನಃ ಪಡಕೊಳ್ಳಲು ಅವನು ಸಹಾಯ ಮಾಡಿದನು. ನನ್ನ ಹೆತ್ತವರ ಒತ್ತಾಯದಿಂದ ನಾನು ಭೇಟಿಯಾಗುತ್ತಿದ್ದ ಒಬ್ಬ ಮನೋರೋಗಿ ತಜ್ಞನು ನನ್ನ ಪರಿಸ್ಥಿತಿಯಲ್ಲಿ ಆಮೂಲಾಗ್ರ ಮೇಲಾಗಿದೆ ಮತ್ತು ನಾನು ಆರೋಗ್ಯದಲ್ಲಿದ್ದೇನೆ ಎಂದು ತೀರ್ಮಾನಿಸಿದನು. ನನ್ನ ತಖ್ತೆಯ ಮೇಲೆ ಅವನು ಬರೆದದ್ದು: ‘ಯೆಹೋವನ ಸಾಕ್ಷಿಗಳಿಂದ ಗುಣಪಡಿಸಲ್ಪಟ್ಟನು.’”
ಲೌಕಿಕ ಆತ್ಮವನ್ನು ಪ್ರತಿಭಟಿಸುವದು
ಕ್ರುಶ್ವೀಟ್ಸದ ನೈರುತ್ಯದಲ್ಲಿ, ಶ್ರಾಡ ಶ್ಕಾನ್ಸ್ಕ ಇದೆ. ಒಂಬತ್ತು ಸಾವಿರದಷ್ಟು ಜನಸಂಖ್ಯೆಯಿರುವ ಈ ಚಿಕ್ಕ ಊರಿನಲ್ಲಿಯೂ “ಇಷ್ಟವಸ್ತುಗಳು” ತಮ್ಮ ಗೋಚರಿಸುವಿಕೆಯನ್ನು ಮಾಡುತ್ತಿವೆ. ನಾಲ್ಕು ವರ್ಷಗಳ ಹಿಂದೆ, ನಮ್ಮ ಆತ್ಮಿಕ ಸಹೋದರಿಯರಲ್ಲಿ ಕೇವಲ ಒಬ್ಬಳು ಅಲ್ಲಿ ಜೀವಿಸುತ್ತಿದ್ದಳು. ಆದಾಗ್ಯೂ ಈಗ, ರಾಜ್ಯದ ಪ್ರಚಾರಕರ ಸಂಖ್ಯೆಯು 47 ಕ್ಕೆ ಏರಿದೆ. ಸಾಕ್ಷಿಗಳಲ್ಲಿ ಅನೇಕರು ಭೂತಾರಾಧನೆ, ಮಾದಕೌಷಧದ ವ್ಯಸನ, ಮತ್ತು ಅನೈತಿಕತೆಯ ಪಾಶಗಳೊಳಗೆ ಒಮ್ಮೆ ಸಿಲುಕಿಕೊಂಡಿದ್ದರು. ಸಹಾಯ ಮಾಡುವದಲ್ಲ, ಬದಲು ಆತ್ಮಿಕವಾಗಿ ಕೇವಲ ಖಂಡಿಸಲು ಮಾತ್ರವೆ ಶಕವ್ತಾಗಿದ್ದ ಚರ್ಚ್ನಲ್ಲಿದ್ದ ಆತ್ಮಿಕ ಶೂನ್ಯತೆಯ ಕಾರಣ ಇದಾಯಿತು ಎಂದು ಅವರು ಭಾವಿಸುತ್ತಾರೆ. ಸಾಕ್ಷಿಗಳು ಜನರಿಗೆ ನಿಜ ಪರಿಹಾರವನ್ನು ನೀಡುತ್ತಿದ್ದಾರೆ.
ಎಳೆಯರು ಸಾರುವ ಕೆಲಸಕ್ಕಾಗಿ ಶಾಲೆಯನ್ನು ತಮ್ಮ ವೈಯಕ್ತಿಕ ಟೆರಿಟೊರಿಯನ್ನಾಗಿ ಮಾಡಿದ್ದಾರೆ. “ನನ್ನ ಶಾಲಾಸಂಗಾತಿಗಳು ಆಗಾಗ್ಯೆ ನನಗೆ ಹೇಳುತ್ತಿದ್ದರು: ‘ನೀನು ನಿನ್ನ ತಾರುಣ್ಯವನ್ನು ಪೋಲುಮಾಡುತ್ತಾ ಇದ್ದಿ,’” ಎಂದು 18 ವರ್ಷ ಪ್ರಾಯದ ಕಾಜಾ ಹೇಳುತ್ತಾಳೆ. “ಆದರೆ ನಾನು ಅನೇಕ ಸಮಸ್ಯೆಗಳನ್ನು ಹೋಗಲಾಡಿಸಿದ್ದೇನೆ, ಮತ್ತು ನನ್ನ ಜೀವಿತವು ಅರ್ಥಭರಿತವಾಗಿದೆ. ನಾನು ಶಾಲೆಯಲ್ಲಿ ಅನೇಕ ಬೈಬಲ್ ಅಧ್ಯಯನಗಳನ್ನು ನಡಿಸುತ್ತಾ ಇದ್ದೇನೆ ಮತ್ತು ನನ್ನ ಮನೆಪಾಠಗಳನ್ನು ಯಾ ನನ್ನ ವೈಯಕ್ತಿಕ ಅಧ್ಯಯನವನ್ನು ನಾನು ಕಡೆಗೆಣಿಸುವದಿಲ್ಲ. ‘ನನ್ನ ತಾರುಣ್ಯವನ್ನು ಪೋಲುಮಾಡುತ್ತಾ ಇದ್ದೇನೆ’ ಎಂದು ಹೇಳುವ ಹುಡುಗಿಯರು ಈಗಾಗಲೆ ತಾಯಂದಿರಾಗಿದ್ದು, ಸಮಸ್ಯೆಗಳ ಹೊರೆಯೊಂದಿಗೆ ಹೋರಾಡುತ್ತಾ ಇದ್ದಾರೆ.”
ವಾಚ್ ಟವರ್ ಪ್ರಕಾಶನಗಳು ಸ್ಥಳೀಯ ಶಾಲೆಗಳಲ್ಲಿ ಬಹಳಷ್ಟು ಜನಪ್ರಿಯವಾಗಿವೆ. ಉದಾಹರಣೆಗೆ, ಪೋಲಿಷ್ ಅಧ್ಯಾಪಿಕೆಯೊಬ್ಬಳು ಅವಳ ವಿದ್ಯಾರ್ಥಿಗಳಿಗೆ ಅವರ ಪ್ರಬಂಧಗಳನ್ನು ಬರೆಯುವಾಗ ನಮ್ಮ ವೃತ್ತಪತ್ರಕೆಯಾದ ಎಚ್ಚರ! ದ ಸರಳ ಭಾಷೆಯನ್ನು ಒಂದು ಆದರ್ಶವಾಗಿ ಅನುಕರಿಸುವಂತೆ ಹೇಳಿದಳು. ಸಹಾಯಕ ಪಯನೀಯರ್ ಇವಾ ಸ್ಕೂಲ್ ಆ್ಯಂಡ್ ಜೆಹೊವಾಸ್ ವಿಟ್ನೆಸೆಸ್ ಬ್ರೋಷರ್ ಬಹಳ ಉಪಯುಕ್ತವೆಂದು ಕಂಡುಕೊಂಡಿದ್ದಾಳೆ. “ಈ ಪ್ರಕಾಶನವನ್ನು ನಾನು ನಿಜವಾಗಿಯೂ ಮೆಚ್ಚುತ್ತೇನೆ. ನನ್ನ ಶಿಕ್ಷಕರು ಇದರ ಒಳ್ಳೆಯ ಪರಿಚಯವುಳ್ಳವರಾಗಿದ್ದಾರೆ. ದೊಡ್ಡ ಅಧಿವೇಶನಗಳಿಗೆ ಹಾಜರಾಗಲು ಶಾಲೆಯಿಂದ ವಿನಾಯಿತಿ ಪಡೆಯಲು ನನಗೆಂದೂ ಸಮಸ್ಯೆಯಿರಲಿಲ್ಲ.” ಎಳೆಯರ ವತಿಯಿಂದ ಅಂಥ ಉತ್ತಮ ಮನೋಭಾವವು ಯೆಹೋವನ ಹೃದಯವನ್ನು ಸಂತೋಷಗೊಳಿಸುತ್ತದೆ.—ಜ್ಞಾನೋಕ್ತಿ 27:11.
ನಿರ್ದಯಿ ಕೈದಿಗಳು ಪರಿವರ್ತಿತರಾದರು
ಶ್ರಾಡ ಶ್ಲಾನ್ಸ್ಕದ ಪೂರ್ವಕ್ಕೆ ಇರುವ ಶೆಟ್ಲ್ಸ ಆಪಲ್ಸ್ಕ್ಯ ಒಪೊಲ್ಸ್ಕಾಯ್ಯಲ್ಲಿ ಎರಡು ಸೆರೆಮನೆಗಳು ಇವೆ. ತಿದ್ದಲಾಗದ ಅಪರಾಧಿಗಳಿಗೆ ಅಧಿಕ ಭದ್ರತೆಯ ಸೆರೆಮನೆ ಒಂದಾಗಿದೆ. ಕೈದಿಗಳಿಗೆ ಸತ್ಯವನ್ನು ನೀಡಲು, ದಂಡನೆಯ ಈ ಎರಡು ಸಂಸ್ಥೆಗಳಿಗೆ ಸಾಕ್ಷಿಗಳು ಕ್ರಮವಾಗಿ ಬೇಟಿಕೊಡುತ್ತಾರೆ. ಅವರಲ್ಲಿ ಅನೇಕರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಬಂದಿವಾಸಿಗಳು ಕೂಡ ಆಗಿದ್ದರು.—ಪ್ರಕಟನೆ 18:1-5.
ವೈಯಕ್ತಿಕ ನಿವಾಸಿಗಳೊಂದಿಗೆ ಮತ್ತು ಕೈದಿಗಳ ಚಿಕ್ಕ ಗುಂಪುಗಳೊಂದಿಗೆ ಸಾಕ್ಷಿಗಳು ಬೈಬಲನ್ನು ಅಭ್ಯಾಸಿಸುತ್ತಾರೆ, ಅವರಲ್ಲಿ ಕೆಲವರು ದೀಕ್ಷಾಸ್ನಾನಿತರಾದರು. ಅವರ ಶಿಕ್ಷೆಯ ತೀರ್ಪುಗಳನ್ನು ಅವರು ಅನುಭವಿಸಬೇಕಾದರೂ, ಇತರ ಸಹನಿವಾಸಿಗಳಿಗೆ ಅವರು ಕ್ರಿಯಾತ್ಮಕವಾಗಿ ಶುಭ ವಾರ್ತೆಯನ್ನು ಸಾರುತ್ತಾ ಇದ್ದಾರೆ. ದೀಕ್ಷಾಸ್ನಾನಕ್ಕೆ ಸಿದ್ಧನಾಗುತ್ತಿದ್ದ ಒಬ್ಬ ಕೈದಿಯು ಎಷ್ಟೊಂದು ಗಮನಾರ್ಹವಾದ ಪರಿವರ್ತನೆಗಳನ್ನು ಮಾಡಿದ್ದಾನಂದರೆ, ವಾರಕ್ಕೆ ಒಮ್ಮೆ ಮನೆಗೆ ಹೋಗುವಂತೆ ಸೆರೆಮನೆಯ ಅಧಿಕಾರಿಗಳು ಅವನಿಗೆ ಅನುಮತಿಯನ್ನಿತ್ತರು. ದುಷ್ಕರ್ಮಿಗಳಾಗಿ ಅಲ್ಲ, ಬದಲು ಯೆಹೋವನ ಸಾಕ್ಷಿಗಳಾಗಿ ಸೆರೆಮನೆಯನ್ನು ಬಿಡುವ ತಮ್ಮ ನಿರ್ಧಾರದ ಕುರಿತು ಇತರರು ತಮ್ಮ ಕುಟುಂಬಗಳಿಗೆ ಬರೆದಿದ್ದಾರೆ.
ಒಂದು ಸೆರೆಮನೆಯ ಮುಖ್ಯ ಅಧಿಕಾರಿಯು ಕ್ಯಾತೊಲಿಕ್ ಪಾದ್ರಿಗಳು ಬರುತ್ತಾ ಇದ್ದರು, ಆದರೆ ಅವರೇನೂ ಸಾಧಿಸಲಿಲ್ಲ ಎಂದು ದೂರಿದನು. ಅವನು ಸಾಕ್ಷಿಗಳಿಗೆ ಕೇಳಿದ್ದು: “ಈ ಜನರನ್ನು ಪರಿವರ್ತಿಸಲು ಮತ್ತು ಪುನರ್ಸಜ್ಜುಗೊಳಿಸಲು ನಿಮಗೆ ಸಾಧ್ಯಮಾಡುವುದು ಯಾವುದು?” ಕೈದಿಯೊಬ್ಬನು ತನ್ನ ಕುಟುಂಬಕ್ಕೆ ಬರೆದ ಪತ್ರವೊಂದು ಇದನ್ನು ಉತ್ತರಿಸುತ್ತದೆ: “ಭೂಮಿಯನ್ನು ಶೀಘ್ರದಲ್ಲಿಯೇ ಆಳಲಿರುವ ಹೊಸ ಸರಕಾರವಾದ ಯೆಹೋವನ ರಾಜ್ಯದ ಕುರಿತಾಗಿ ದೇವರ ಅಚ್ಚರಿಗೊಳಿಸುವ ವಾಗ್ದಾನದ ಕುರಿತು ಯೆಹೋವನ ಸಾಕ್ಷಿಗಳು ನನಗೆ ಇಲ್ಲಿ ಸೆರೆಮನೆಯಲ್ಲಿ ತಿಳಿಸಿದ್ದಾರೆ. ಬೈಬಲಿನ ಬೆಳಕಿನಲ್ಲಿ ಗತಕಾಲದ ನನ್ನ ಜೀವನ ರೀತಿಯನ್ನು ವಿಶೇಷ್ಲಿಸಲು ನನಗೆ ಸಮಯ ಸಿಕ್ಕಿತು. ಕಹಿಯಾದ ಸಮಾಪ್ತಿಗಳಿಗೆ ಬಂದಿರುವದರಿಂದ, ನಾನೊಬ್ಬ ಸ್ವತಂತ್ರ ಮನುಷ್ಯನಾಗುವ ಮತ್ತು ದೇವರ ರಾಜ್ಯದ ಪ್ರಜೆಯಾಗಿ ಸ್ವತಃ ನನ್ನನ್ನು ಕಾಣುವ ಆಶೆಯಿಂದ ನಾನು ಆವೃತನಾಗಿದ್ದೇನೆ. ಇವತ್ತು ನಾನೊಬ್ಬ ಯೆಹೋವನ ಸ್ನಾನಿತ ಸಾಕ್ಷಿಯಾಗಿದ್ದೇನೆ.”
ಇನ್ನೊಂದು ಸೆರೆಮನೆಯಲ್ಲಿ, ಅನೇಕರು ಕೊಲೆಗಾಗಿ 25 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಾ ಇದ್ದಾರೆ. ಕ್ರಮದ ಒಂದು ಬೈಬಲ್ ಅಭ್ಯಾಸ 12 ಪುರುಷರೊಂದಿಗೆ ನಡಿಸಲ್ಪಡುತ್ತಿದೆ. ಅವರಲ್ಲೊಬ್ಬನು ತನ್ನ ಜೀವವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ದೀಕ್ಷಾಸ್ನಾನ ಹೊಂದಿದನು, ಮತ್ತು ಈ ಹೆಜ್ಜೆಗಳನ್ನು ಇತರರು ತಕ್ಕೊಳ್ಳಲು ಯೋಜಿಸುತ್ತಿದ್ದಾರೆ. ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಶೈಕ್ಷಣಿಕ ವಿಧಾನಗಳ ಉತ್ತಮ ಫಲಿತಾಂಶಗಳನ್ನು ಗಣ್ಯಮಾಡುತ್ತಾ, ಸೆರೆಮನೆಯ ಮುಖ್ಯ ಅಧಿಕಾರಿಯು ಅಂದದ್ದು: “ನನಗೆ 12 ಅಲ್ಲ, 600 ಕೈದಿಗಳಿದ್ದಾರೆ. ಅವರನ್ನು ಪುನರ್ಸಜ್ಜುಗೊಳಿಸಲು ದಯಮಾಡಿ ನನಗೆ ಸಹಾಯ ಮಾಡಿರಿ. ನಿಮಗೆ ಬೇಕಾದ ಎಲ್ಲವನ್ನೂ ನಾನು ನಿಮಗೆ ಒದಗಿಸುತ್ತೇನೆ, ಆದರೆ ಕಾರ್ಯಕ್ರಮವನ್ನು ತಯಾರಿಸಿರಿ. ಅವರ ಜಾಗ್ರತೆ ತಕ್ಕೊಳ್ಳಿರಿ!”
ಅದನ್ನು ತಾನೇ ಸಹೋದರರು ಮಾಡಿದರು. ಜೀವಿತದ ಉದ್ದೇಶ, ಭವಿಷ್ಯತ್ತಿಗಾಗಿ ನಿರೀಕ್ಷೆ, ಮತ್ತು ಕೆಟ್ಟ ಅಭ್ಯಾಸಗಳನ್ನು ತೊರೆಯುವ ಅಗತ್ಯತೆಗಳೊಂದಿಗೆ ವ್ಯವಹರಿಸುವ ಒಂದು ಬೈಬಲ್ ಕಾರ್ಯಕ್ರಮವನ್ನು ಅವರು ನೀಡಿದರು. ಯೆಹೋವನ ಸಾಕ್ಷಿಯಾಗಿರುವ ಮತ್ತು ಸಕಾಲದಲ್ಲಿ ಸಭೆಯ ಹಿರಿಯನಾಗಿ ನೇಮಕಗೊಂಡಿರುವ, ಒಬ್ಬ ಹಿಂದಿನ ಸೆರೆಮನೆವಾಸಿಯ ಅನುಭವಗಳನ್ನು ಕೂಡ ಅವರು ವಿವರಿಸಿದರು. ಒಬ್ಬ ವಜ್ರ ಕಳ್ಳನ ಮತ್ತು ಮಾದಕದ್ರವ್ಯದ ದುರುಪಯೋಗಿಯ ಜೀವನ ಕಥನಗಳಿಂದ ಮುಖ್ಯ ವಿಚಾರಗಳನ್ನು ಕೂಡ ಸಾಕ್ಷಿಗಳು ಹೇಳಿದರು.a ಹಾಜರಿದ್ದ 20 ಕೈದಿಗಳು ಕಾರ್ಯಕ್ರಮವು ಅತಿ ಆಸಕ್ತಿಯದ್ದಾಗಿತ್ತೆಂದು ಕಂಡರು ಮತ್ತು ಅನೇಕ ಪ್ರಶ್ನೆಗಳನ್ನು ಕೇಳಿದರು, ಕೆಲವರು ಬೈಬಲ್ ಅಭ್ಯಾಸಕ್ಕಾಗಿಯೂ ವಿನಂತಿಸಿದರು.
ನಂಬಿಕೆ ಮತ್ತು ಸಹಿಷ್ಣುತೆಯು ಪರೀಕ್ಷಿಸಲ್ಪಟ್ಟಿತು
ಯುಕ್ರೇನಿನ ಗಡಿಯ ಹತ್ತಿರ 12,000 ಜನನಿವಾಸಿಗಳಿರುವ ಲೂಬಶಫ್ ಎಂಬದು ಒಂದು ಚಿಕ್ಕ ಶಹರವಾಗಿದೆ. ಪಯನೀಯರರು ಅಲ್ಲಿಯ ಸ್ಥಳೀಕ 12 ಪ್ರಚಾರಕರಿಗೆ ಸಹಾಯಮಾಡಲು 1988 ರಲ್ಲಿ ಹೋದಂದಿನಿಂದ, ಸುವಾರ್ತೆ ಸಾರುವ ಕಾರ್ಯವು ರಭಸವನ್ನು ಪಡೆದಿದೆ. ಈಗ ಅಲ್ಲಿ 72 ಕ್ರಿಯಾಶೀಲ ರಾಜ್ಯ ಪ್ರಚಾರಕರಿದ್ದಾರೆ, ಮತ್ತು ಹೊಸತಾಗಿ ಕಟ್ಟಲ್ಪಟ್ಟ ರಾಜ್ಯ ಸಭಾಗೃಹದಲ್ಲಿ ಜ್ಞಾಪಕಾಚರಣೆಗೆ 1991 ರಲ್ಲಿ 150 ಮಂದಿ ಹಾಜರಾದರು.
ಜೂನ್ 1991 ರಲ್ಲಿ, ಪೋಪ್ ಜಾನ್ ಪೌಲ್ II ಲೂಬಶಫ್ ಶಹರಕ್ಕೆ ಭೇಟಿನೀಡಿದರು. ಆದರೆ ಅದು ಜನರಲ್ಲಿ ಸಾಚಾ ನಂಬಿಕೆಗೆ ಆಸರೆಕೊಡಲು ಏನನ್ನೂ ಮಾಡಲಿಲ್ಲ. ಜೀವಿತದ ಉದ್ದೇಶ ಮತ್ತು ಭವಿಷ್ಯತ್ತಿಗಾಗಿ ನಿರೀಕ್ಷೆಯ ಸಂದೇಹಗಳಿಂದ ಅವರಲ್ಲಿ ಅನೇಕರು ಆಘಾತಕ್ಕೊಳಗಾಗಿದ್ದರು. ವೈದಿಕರಿಂದ ತೃಪ್ತಿಯಾಗುವ ಉತ್ತರಗಳನ್ನು ಪಡೆಯಲು ಅವರಿಗೆ ಅಸಾಧ್ಯವಾದಾಗ, ಅವರು ಯೆಹೋವನ ಸಾಕ್ಷಿಗಳೆಡೆಗೆ ತಿರುಗುತ್ತಾರೆ. ಆರಂಭದಲ್ಲಿ, ಅವರ ಧರ್ಮಕ್ಕೆ ಬೆನ್ನು ತೋರಿಸುವುದು ಜನರಿಗೆ ಮನಸ್ಸಾಕ್ಷಿಯ ವೇದನೆಯನ್ನುಂಟುಮಾಡಿರಬಹುದಾದರೂ, ಅವರು ಸರಿಯಾದ ನಿರ್ಣಯವನ್ನು ಮಾಡಿದ್ದಾರೆ ಎಂದು ಕಾಣಲು ಅವರು ಕಲಿಯುತ್ತಿರುವ ಬೈಬಲ್ ಸತ್ಯವು ಅವರಿಗೆ ಸಹಾಯ ಮಾಡುತ್ತದೆ.
ಈಗ ಒಬ್ಬ ಕ್ರಮದ ಪಯನೀಯರಳಾಗಿರುವ ಒನೊರಾಟಳ ಅನುಭವವು ಒಂದು ಪ್ರತಿನಿಧಿರೂಪದ್ದಾಗಿದೆ. ಒಂದು ವರ್ಷದ ಹಿಂದೆ, ವೈದಿಕನಿಗೆ ಪಾಪನಿವೇದನೆ ಮಾಡುವಾಗ ದೇವರ ಹೆಸರು ಏನೆಂದು ಅವಳು ಕೇಳಿದಳು. “ದೇವರು ಪ್ರೀತಿ—ಅದು ಅವನ ಅತಿ ಸುಂದರವಾದ ಹೆಸರು,” ಎಂದುತ್ತರಿಸಿದನು ವೈದಿಕನು. ಸ್ವಲ್ಪ ಸಮಯದ ನಂತರ, ಅವನು ಕೂಡಿಸಿದ್ದು: “ಸ್ಫಟಿಕದಂತೆ ಸ್ವಚ್ಛ ನೀರಿರುವ ಒಂದು ಬಕೆಟ್ಟಿನಲ್ಲಿ ಯಾರೋ ಶಾಯಿಯನ್ನು ಹಾಕಿದವಳಂತೆ ನೀನಿದ್ದಿ. ಪರಿಣಾಮಗಳು ಮಾರ್ಪಡಿಸಲಾಗದಂಥವುಗಳು.” ಹೀಗೆ ಅವಳು ಉತ್ತರವನ್ನು ಪಡೆದಳು. “ನಾನೊಬ್ಬ ಯೆಹೋವನ ಸಾಕ್ಷಿಯಾಗುವೆನು ಎಂದು ಆಗಲೇ ನಾನು ನಿರ್ಣಯಿಸಿದೆನು,” ಅನ್ನುತ್ತಾಳೆ ಒನೊರಾಟ. “ಅದು ಕೂಡ ಮಾರ್ಪಡಿಸಲಾಗದ್ದು.”
ಲಬಾಶಫ್ನಲ್ಲಿರುವ ಸತ್ಯ ಕಲಿತಿರುವ ಹೆಚ್ಚುಕಡಿಮೆ ಪ್ರತಿಯೊಬ್ಬನು ಬಲಿಷ್ಠವಾದ ಮತ್ತು ಮತಭ್ರಾಂತವೂ ಆಗಿರುವ ವಿರೋಧವನ್ನು ಸಹಿಸಿಕೊಳ್ಳಬೇಕಿತ್ತು. ಆದರೆ ಬೈಬಲ್ ಸತ್ಯವನ್ನು ತಮ್ಮದಾಗಿ ಮಾಡಿಕೊಳ್ಳುವದರಲ್ಲಿ ಮತ್ತು ಯೆಹೋವನ ಪರವಾಗಿ ಅವರ ನಿಲುವನ್ನು ತಕ್ಕೊಳ್ಳುವದರಲ್ಲಿ ಅದು ಅವರನ್ನು ತಡೆಯಲಿಲ್ಲ.
ಎಲ್ಸ್ಬಿಯಟ ಹೇಳುವದು: “ನನ್ನ ಹೆತ್ತವರು ಮೊದಲು ನನ್ನನ್ನು ಮನೆಯಲ್ಲಿ ಹೊಡೆದರು. ಅನಂತರ ನನ್ನ ಕುಟುಂಬವು ರಾಜ್ಯ ಸಭಾಗೃಹದೊಳಗೆ ಏಕಾಏಕಿ ನುಗ್ಗಿತು. . . . ಅವರು ನನ್ನನ್ನು ಹಿಡಿದುಕೊಂಡು, ಮನೆಗೆ ಕೊಂಡೊಯ್ದರು ಮತ್ತು ಬಹಳ ಗಂಟುಗಳಿರುವ ಕೋಲಿನಿಂದ ‘ನ್ಯಾಯವನ್ನು ವಿಧಿಸಲು’ ಆರಂಭಿಸಿದರು. ನಾನು ಸಾಕ್ಷಿಗಳೊಂದಿಗೆ ಕೇವಲ ಸಹವಾಸಮಾಡುತ್ತಿದ್ದೇನೆ ಎಂಬ ಕಾರಣದಿಂದ ನನಗೆ ಮುಡಿಯಿಂದ ಅಡಿಯ ವರೆಗೆ ಹೊಡೆಯಲಾಯಿತು ಮತ್ತು ಒದೆಯಲಾಯಿತು. ಎಷ್ಟು ಕಠಿಣವಾಗಿ ಹೊಡೆಯಲಾಯಿತೆಂದರೆ ನನಗೆ ತುರ್ತಾಗಿ ವೈದ್ಯಕೀಯ ಚಿಕಿತ್ಸೆಯ ಆವಶ್ಯಕತೆಯುಂಟಾದುದರಿಂದ, ನನ್ನನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಯೆಹೋವನು ನನಗೆ ಸಹಾಯ ಮಾಡಿದನು, ಮತ್ತು ನಾನು ಗುಣಮುಖಳಾದೆನು. ನನ್ನ ಕುಟುಂಬವು ನನ್ನನ್ನು ತ್ಯಜಿಸಿತು. ನಾನದನ್ನು ವೈದಿಕನಿಗೆ ಹೇಳಿದಾಗ, ಅವನು ನನ್ನನ್ನು ತೆಗಳುತ್ತಾ, ಅಂದದ್ದು: ‘ಕೇವಲ ಕೆಲವೇ ಅಂಗೈ ಹೊಡೆತಗಳಿಗಾಗಿ ನನ್ನ ಹತ್ತಿರ ದೂರು ಹೇಳಲಿಕ್ಕೆ ಬಂದಿಯಾ?’”
ಇನ್ನೊಬ್ಬ ಸಹೋದರಿಯು ಜ್ಞಾಪಿಸಿದ್ದು: “ಪ್ರತಿವರ್ಷ ನಾನು ಶೆನ್ಸೆಕ್ಟೊವ ನಗರಕ್ಕೆ ಮೊಣಕಾಲಿನಲ್ಲಿ ಶಿಲುಬೆಯ ಭಂಗಿಯಲ್ಲಿ ನಡೆಯಲು ಹೋಗುತ್ತಿದ್ದೆ ಯಾಕಂದರೆ ಅದು ಪ್ರತಿಯೊಬ್ಬ ಯಥಾರ್ಥ ಕ್ಯಾತೊಲಿಕನ ಕರ್ತವ್ಯವಾಗಿದೆ ಎಂದು ನಾನೆಣಿಸಿದ್ದೆ. ನನ್ನ ಮೊಣಕಾಲಿನಲ್ಲಿ ಗಾಯದ ಕಲೆಗಳು ಇನ್ನೂ ಇವೆ.” ಅವಳು 18 ನೆಯ ವರ್ಷ ವಯಸ್ಸಿನಲ್ಲಿ ಸತ್ಯವನ್ನು ಕಲಿತಳು ಮತ್ತು ಪಾದ್ರಿಗೆ ಮತ್ತು ಅವಳ ಕುಟುಂಬಕ್ಕೆ ಇನ್ನು ಮುಂದೆ ಚರ್ಚ್ಗೆ ಅವಳು ಹೋಗುವದಿಲ್ಲ ಎಂದು ಹೇಳಿದಳು. ಅವಳನ್ನು ಕಠಿಣವಾಗಿ ಹೊಡೆಯಲಾಯಿತು—“ಎಷ್ಟೊಂದು ಕೆಟ್ಟದ್ದಾಗಿ ಅಂದರೆ ನನ್ನ ಮಿದುಳಿಗೆ ಅಘಾತವಾಯಿತು,” ಅವಳು ವರದಿಸುವುದು. “ಆದರೆ ‘ಸ್ವಾತಂತ್ರ್ಯ ಪ್ರಿಯರು’ ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಶಕ್ತಳಾಗುವಷ್ಟು ನಾನು ಆಸ್ಪತ್ರೆಯಲ್ಲಿ ಗುಣಮುಖಳಾದೆನು. ಯಾವುದೆ ಮತಭ್ರಾಂತಿಯಿಲ್ಲದೆ ನಿಜ ಐಕ್ಯತೆ ಮತ್ತು ಪ್ರೀತಿಯು ಜನರಲ್ಲಿ ಇರುವದನ್ನು ನಾನು ನೋಡಿದಾಗ ಸಂತೋಷದಿಂದ ಅತೆನ್ತು—ಅದು ಶೆನ್ಸೆಕ್ಟೊವನಲ್ಲಿ ನಾನು ಎಂದಿಗೂ ನೋಡದ ಒಂದು ಸಂಗತಿ. ಯೆಹೋವನ ಒಳ್ಳೇತನವನ್ನು ನಾನು ಅನುಭವಿಸಿದ್ದಕ್ಕಾಗಿ ಮತ್ತು ಅವನ ಮೇಲೆ ಭರವಸವಿಡಲು ಕಲಿತದ್ದಕ್ಕಾಗಿ ನಾನೆಷ್ಟು ಆನಂದಿತಳಾಗಿದ್ದೇನೆ.” ಅವರ ಭಾರವನ್ನು ಅವನ ಮೇಲೆ ಹಾಕುವವರನ್ನು ಯೆಹೋವನು ಬಲಗೊಳಿಸುತ್ತಾನೆ ಮತ್ತು ಎತ್ತಿಹಿಡಿಯುತ್ತಾನೆ.—ಕೀರ್ತನೆ 55:22.
ಬೇರೆಡೆಗಳಲ್ಲಿ ಅವರು ಮಾಡುವಂತೆ, ಈ ಕ್ಯಾತೊಲಿಕ್ ದೇಶದಲ್ಲಿಯೂ ಮಹಾ ಬಾಬೆಲಿನ ಅನೇಕ ಬಂದಿಗಳು “ಅವಳನ್ನು ಬಿಟ್ಟುಬನ್ನಿರಿ” ಎಂಬ ಕರೆಗೆ ಈಗ ಕಿವಿಗೊಡುತ್ತಿದ್ದಾರೆ. ಅದು ಯೆಹೋವನ ಚಿತ್ತವಾಗಿದ್ದಲ್ಲಿ, ಅವನ ನಿರ್ಭೀತ ಜನರು ಪೋಲೆಂಡಿನಲ್ಲೆಲ್ಲಾ ಚದರಿರುವ ಇನ್ನಷ್ಟು “ಇಷ್ಟ ವಸ್ತುಗಳನ್ನು” ಒಟ್ಟುಗೂಡಿಸುವದನ್ನು ಮುಂದರಿಸುವರು. ಖಂಡಿತವಾಗಿಯೂ, ಇನ್ನೂ ಅನೇಕರು ಈ ಕರೆಗೆ ಪ್ರತಿವರ್ತಿಸುವರು: “ಬಾ! ಕೇಳುವವನು—ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.”—ಪ್ರಕಟನೆ 18:4; 22:17.
[ಅಧ್ಯಯನ ಪ್ರಶ್ನೆಗಳು]
[ಪುಟ 24ರಲ್ಲಿರುವಚಿತ್ರ]
(For fully formatted text, see publication.)
ಪೋಲೆಂಡ್
ಶ್ಟಮ್
ಕ್ರುಶ್ವೀಟ್ಸ
ಪೊಜ್ಞಾನ್
ವಾರ್ಸೊ
ಶ್ರಾಡ ಶ್ಲಾನ್ಸ್ಕ
ಶೆನ್ಸೆಕ್ಟೊವ
ಶೆಟ್ಲ್ಸ ಆಪಲ್ಸ್ಕ್ಯ
ಲೂಬಶಫ್
[ಪುಟ 26 ರಲ್ಲಿರುವ ಚಿತ್ರ]
ಪೋಲೆಂಡ್ನ ಕ್ರುಶ್ವೀಟ್ಸದಲ್ಲಿ ರಾಜ್ಯ ಸಂದೇಶವನ್ನು ಸಾರುವುದು