ನೀವು ನಿರಾಶೆಗೊಳ್ಳಲಿಕ್ಕಿಲ್ಲ
ಫಿಲಿಪ್ಪೀನ್ಸ್ನಲ್ಲಿ ಒಬ್ಬ ದಂಪತಿಗಳು ಅಲ್ಲಿಗೆ ಹೋಗಲು ಎರಡು ದಿನ ವ್ಯಯಿಸಿದರು. ಅವರು ಜಿಗುಣೆಗಳಿಂದ ತುಂಬಿದ ಕಾಡುಗಳ ಮತ್ತು ತುಫಾನು ಮಳೆಯಿಂದ ಉಕ್ಕೇರಿದ ನದಿಗಳ ದಾರಿಯಾಗಿ, ಇಬ್ಬರು ಮಕ್ಕಳನ್ನು ಹೊತ್ತುಕೊಂಡು 70 ಕಿಲೊಮೀಟರುಗಳನ್ನು ದೂರನಡಗೆ ಮಾಡಿಕೊಂಡು ಹೋದರು. ಆದರೆ ಅವರು ಅದನ್ನು ತಪ್ಪಿಸಿಕೊಳ್ಳಬಾರದೆಂಬ ನಿರ್ಧಾರದಿಂದಿದ್ದರು.
ಸಾಎರ್ಯಲ್ಲಿ ಇಬ್ಬರು ಹೆಂಗಸರು ಅಲ್ಲಿರುವಂತೆ 14 ದಿನ ರಸ್ತೆಯಲ್ಲಿ ಪ್ರಯಾಣಿಸುತ್ತಾ, 500 ಕ್ಕಿಂತಲೂ ಹೆಚ್ಚು ಕಿಲೊಮೀಟರುಗಳನ್ನು ನಡೆದರು. ಸಾಎರ್ಯಲಿಯ್ಲೆ, 70 ವರ್ಷ ಪ್ರಾಯದ ಪುರುಷನು 260 ಕಿಲೊಮೀಟರುಗಳನ್ನು ಸೈಕಲು ತುಳಿದುಕೊಂಡು ಅಲ್ಲಿಗೆ ಬಂದಿದ್ದನು. ಅವನು ದೂರ ಯಾ ಅನಾನುಕೂಲತೆಗಳಿಂದ ಹಿಮ್ಮೆಟಲ್ಟಿಲ್ಲ. ಪ್ರಾಮುಖ್ಯ ಸಂಗತಿಯೇನಂದರೆ ಅವನದನ್ನು ತಪ್ಪಿಸಕೂಡದು.
ಇವರೆಲ್ಲರೂ ಎಲ್ಲಿಗೆ ಹೋಗುತ್ತಿದ್ದರು? ಅವರ ದೇಶಗಳಲ್ಲಿ ಸಂಸ್ಥಾಪಿಸಲ್ಪಟ್ಟ ಯೆಹೋವನ ಸಾಕ್ಷಿಗಳ ಅತಿ ದೊಡ್ಡ ಒಟ್ಟುಗೂಡುವಿಕೆಗಳಲ್ಲೊಂದಕ್ಕೆ. ಮತ್ತು ಪ್ರಯಾಣವು ಎಷ್ಟೇ ಕಷ್ಟಕರವಾಗಿದ್ದರೂ, ಅವರ ಪ್ರಯತ್ನಗಳು ಮೂಲ್ಯತೆಯುಳ್ಳವುಗಳೆಂದು ಅವರೆಲ್ಲರೂ ಭಾವಿಸಿದರು.
1992 ರ “ಬೆಳಕು ವಾಹಕರು” ಜಿಲ್ಲಾ ಅಧಿವೇಶನಕ್ಕೆ ಹಾಜರಿರುವಂತೆ ನೀವು ಯೋಜನೆಗಳನ್ನು ಮಾಡಿದ್ದೀರೋ? ಪ್ರಾಯಶಃ ಅಷ್ಟೊಂದು ಮಹತ್ತಾದ ಪ್ರಯತ್ನಗಳನ್ನು, ಹಾಜರಾದ ಈ ನಂಬಿಗಸ್ತರು ಮಾಡಿದಂತೆ, ನಿಮಗೆ ಮಾಡಲಿಕ್ಕಿರಲಿಕ್ಕಿಲ್ಲ. ಆದರೆ ನಿಮಗದು ಸ್ವಲ್ಪ ಅನಾನುಕೂಲತೆಯನ್ನುಂಟುಮಾಡುವದಾದರೂ, ಅದನ್ನು ತಪ್ಪಿಸಬೇಡಿರಿ ಎಂದು ನಾವು ನಿಮ್ಮನ್ನು ಉತ್ತೇಜಿಸ್ತುತ್ತೇವೆ.
ಅತ್ಯುತ್ಕೃಷವ್ಟಾದ ಮತ್ತು ವ್ಯಾವಾಹಾರಿಕ ಕಾರ್ಯಕ್ರಮವು ತಯಾರಿಸಲ್ಪಟ್ಟಿದೆ. ಕ್ರೈಸ್ತ ಸಹವಾಸದಲ್ಲಿ ನೀವು ಆನಂದಿಸುವದಾದರೆ, ಮತ್ತು ನಿಜ ಶಾಂತಿಯನ್ನು ಹೇಗೆ ಪಡೆಯುವದು, ಭವಿಷ್ಯತ್ತಿನಲ್ಲಿ ಏನು ಕಾದಿರುತ್ತದೆ, ಯಾ ದೇವರ ಚಿತ್ತವನ್ನು ಹೇಗೆ ಉತ್ತಮವಾಗಿ ಮಾಡುವದು ಎಂದು ಕಲಿಯುವದರಲ್ಲಿ ಆಸಕ್ತರಾಗಿರುವುದಾದರೆ, ನೀವು ನಿರಾಶೆಗೊಳ್ಳಲಿಕ್ಕಿಲ್ಲ ಎಂದು ನಾವು ವಾಗ್ದಾನಿಸಬಲ್ಲೆವು. ನಿಮ್ಮ ವಠಾರದ ಯಾವನೇ ಒಬ್ಬ ಸಾಕ್ಷಿಯು ನಿಮಗೆ ಸಮೀಪವಾಗಿರುವ ಅಧಿವೇಶನವು ಎಲ್ಲಿ ಮತ್ತು ಯಾವಾಗ ಜರಗಲಿರುವದು ಎಂದು ಹೇಳಬಲ್ಲನು. (w92 6/1)