ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 9/1 ಪು. 31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ಭಯಾನಕ ಮೃಗಗಳಿಗೆ ಭಯಪಡಬೇಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಎರಡು ಭಯಂಕರ ಮೃಗಗಳೊಂದಿಗೆ ಹೋರಾಡುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ಮಹಾ ಬಾಬೆಲನ್ನು ಹತಿಸುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು—1992
w92 9/1 ಪು. 31

ವಾಚಕರಿಂದ ಪ್ರಶ್ನೆಗಳು

ಕೆಲವು ಭಾಷಾಂತರಗಳಲ್ಲಿ ಪ್ರಸ್ತಾಪಿಸಲಾದ ಒಕ್ಕೊಂಬಿಗಳ (ಯೂನಿಕಾರ್‌ನ್ಸ್‌) ಅಸ್ತಿತ್ವವನ್ನು ಬೈಬಲು ಬೆಂಬಲಿಸುತ್ತದೋ?

ದ ಕಿಂಗ್‌ ಜೇಮ್ಸ್‌, ಡುಯೇ, ಮತ್ತು ಇತರ ಭಾಷಾಂತರಗಳು, ಒಕ್ಕೊಂಬಿಗಳನ್ನು ಪ್ರಸ್ತಾಪಿಸುತ್ತವೆ. ಆದರೆ ಹೀಬ್ರುವನ್ನು ನಿಖರವಾಗಿ ಅನುವಾದಿಸುವ ಆಧುನಿಕ ತರ್ಜುಮೆಗಳ ವಿಷಯದಲ್ಲಾದರೋ ಹಾಗಿರುವದಿಲ್ಲ.—ಕೀರ್ತನೆ 22:21; 29:6; 92:10 (21:22; 28:6; 91:11, ಡುಯೇ)

ಶತಮಾನಗಳಲ್ಲೆಲ್ಲಾ ಕುದುರೆಯ ಮೈ ಮತ್ತು ತಲೆ ಇರುವ ಆದರೆ ಜಿಂಕೆಯ ಕಾಲುಗಳು ಮತ್ತು ಸಿಂಹದ ಬಾಲವಿರುವ ಒಂದು ಪ್ರಾಣಿಯ ಕುರಿತಾದ ಪೌರಾಣಿಕ ಕಥೆಗಳು ಬೆಳೆದಿರುತ್ತವೆ. ಈ ಐತಿಹ್ಯ ಪ್ರಾಣಿಯ ಅತಿ ಭಿನ್ನವಾದ ವೈಶಿಷ್ಟವು ಪ್ರಾಯಶಃ ಅದರ ಹಣೆಯ ಮೇಲಿರುವ ತಿರುಚಿದ ಏಕ ಕೊಂಬಾಗಿರುತ್ತದೆ.a

“ಒಮ್ಮೆ ಜನರು ನಂಬಿದರೇನಂದರೆ, ಒಕ್ಕೊಂಬಿಯ ಕೊಂಬಿನಲ್ಲಿ ವಿಷಹಾರಿ ಸೇರಿದೆ ಎಂಬದಾಗಿ, ಮತ್ತು ಮಧ್ಯಕಾಲೀನ ಶತಕಗಳಲ್ಲಿ, ಇಂಥ ಕೊಂಬುಗಳಿಂದ ತಯಾರಿಸಲಾಗಿದೆ ಎಂದು ಎಣಿಸಲ್ಪಡುತ್ತಿದ್ದ ಪುಡಿಯು ವಿಪರೀತ ಹೆಚ್ಚಿನ ಧಾರಣೆಗೆ ಮಾರಲ್ಪಡುತ್ತಿತ್ತು. ಖಡ್ಗಮೃಗದ ಕುರಿತಾದ ಯೂರೋಪಿಯನ್‌ ವೃತ್ತಾಂತಗಳ ಗಾಳಿಸುದ್ದಿಯಿಂದ ಒಕ್ಕೊಂಬಿಯ ಪ್ರತೀಕವು ಉಗಮಗೊಂಡಿದೆಯೆಂದು ಹಲವಾರು ವಿದ್ವಾಂಸರು ನಂಬುತ್ತಾರೆ.” (ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ) ನಿರ್ದಿಷ್ಟ ಅಶ್ಯೂರ್ಯ ಮತ್ತು ಬ್ಯಾಬಿಲೊನಿಯ ಸ್ಮಾರಕಗಳು ಏಕ ಕೊಂಬಿನ ಪ್ರಾಣಿಗಳನ್ನು ತೋರಿಸಿದವು. ಈಗ ಅವುಗಳನ್ನು ಎರಡು ಕೊಂಬುಗಳನ್ನು ತೋರಿಸದ ಒಂದು ದೃಷ್ಟಿನೋಟವಾಗಿದ್ದು, ಪಕ್ಕದಿಂದ ಚಿತ್ರಿಸಲಾದ ಕಡವೆಗಳು, ಕಾಡುಮೇಕೆಗಳು, ದನಗಳು, ಮತ್ತು ಹೋರಿಗಳು ಎಂದು ಗುರುತಿಸಲಾಗಿದೆ.

ಇದು ಬೈಬಲ್‌ ವಿದ್ಯಾರ್ಥಿಗಳಿಗೆ ಸ್ವಲ್ಪ ಅಭಿರುಚಿಯದ್ದಾಗಿರುತ್ತದೆ ಯಾಕಂದರೆ ಹೀಬ್ರು ಪದ ರೀ-ಎಮ್‌ ಮೂಲಕ ಒಂದು ಪ್ರಾಣಿಯನ್ನು ಶಾಸ್ತ್ರವಚನಗಳು ಒಂಭತ್ತು ಬಾರಿ ನಿರ್ದೇಶಿಸಿವೆ. (ಅರಣ್ಯಕಾಂಡ 23:22; 24:8; ಧರ್ಮೋಪದೇಶಕಾಂಡ 33:17; ಯೋಬ 39:9, 10; ಕೀರ್ತನೆ 22:21; 29:6; 92:10; ಯೆಶಾಯ 34:7) ಯಾವ ಪ್ರಾಣಿಯು ಸೂಚಿಸಲ್ಪಟ್ಟಿದೆ ಎಂಬ ವಿಷಯದಲ್ಲಿ ತರ್ಜುಮೆಗಾರರು ಬಹಳ ಕಾಲದಿಂದ ಅನಿಶ್ಚಿಯತೆಯವರಾಗಿದ್ದರು. ಗ್ರೀಕ್‌ ಸೆಪ್ಟ್ಯುಅಜಿಂಟ್‌ ‘ಒಂದು ಕೊಂಬು’ ಯಾ ಒಕ್ಕೊಂಬಿಯ ಅರ್ಥದೊಂದಿಗೆ ರೀ-ಎಮ್‌ ನ್ನು ತರ್ಜುಮೆ ಮಾಡಿತ್ತು. ಲ್ಯಾಟಿನ್‌ ವಲ್ಗೆಟ್‌ ಅದನ್ನು ಹೆಚ್ಚಾಗಿ “ಖಡ್ಗಮೃಗ” ಎಂಬದಾಗಿ ತರ್ಜುಮಿಸುತ್ತದೆ. ಇತರ ಭಾಷಾಂತರಗಳು ‘ಕಾಡು ವೃಷಭ’ ‘ಕಾಡು ಮೃಗಗಳು’ ಯಾ ‘ಕೋಣ’ ಎಂಬ ಪದಗಳನ್ನು ಬಳಸಿವೆ. ರಾಬರ್ಟ್‌ ಯಂಗ್‌ ಹೀಬ್ರುವನ್ನು ಇಂಗ್ಲಿಷಿನಲ್ಲಿ ಸರಳವಾಗಿ ಕೇವಲ “ರೀಮ್‌” ಎಂದು ಲಿಪ್ಯಂತರ ಮಾಡುತ್ತಾನೆ, ಹೀಗೆ ಮೂಲತಃ ವಾಚಕನನ್ನು ಅಂಧಕಾರದಲ್ಲಿ ಬಿಡಲಾಗುತ್ತದೆ.

ಆಧುನಿಕ ವಿದ್ವಾಂಸರಾದರೋ ರೀ-ಎಮ್‌ ಮೇಲಿನ ಹೆಚ್ಚಿನ ಗಲಿಬಿಲಿಯನ್ನು ನಿವಾರಿಸಿರುತ್ತಾರೆ. ನಿಘಂಟುಗಾರರಾದ ಲುಡ್‌ವಿಗ್‌ ಕೊಯ್ಲರ್‌ ಮತ್ತು ವಾಲರ್ಟ್‌ ಬೌಮ್‌ಗಾರ್ಟನರ್‌ “ಕಾಡು ವೃಷಭ” ಎಂದದರ ಅರ್ಥವಿರುವ ಬೊಸ್‌ ಪ್ರಿಮಿಜಿನಿಯಸ್‌ ವೈಜ್ಞಾನಿಕ ಗುರುತಿಸುವಿಕೆಯೊಂದಿಗೆ ತೋರಿಸಿರುತ್ತಾನೆ. ಇದೊಂದು “ದೊಡ್ಡಕೊಂಬಿನ ಗೊರಸುಳ್ಳ ಪರಿವಾರದ ಒಂದು ಉಪಕುಟುಂಬವಾಗಿರುತ್ತದೆ.” ದ ನ್ಯೂ ಎನ್‌ಸೈಕ್ಲೊಪಿಡೀಯ ವಿವರಿಸುವದು:

“ಹಳೆಯ ಒಡಂಬಡಿಕೆಯ ನಿರ್ದಿಷ್ಟ ಕವಿತಾ ಸಾಲುಗಳು, ರೀ-ಎಮ್‌ ಎಂದು ಕರೆಯಲ್ಪಡುವ ಎಂದು ಬಲವಾದ ಮತ್ತು ಸೊಗಸಾದ ಕೊಂಬುಳ್ಳ ಪ್ರಾಣಿಯನ್ನು ಸೂಚಿಸುತ್ತವೆ. ಹಲವಾರು ಭಾಷಾಂತರಗಳಲ್ಲಿ ಈ ಪದವು ‘ಒಕ್ಕೊಂಬಿ’ ಅಥವಾ ‘ಖಡ್ಗಮೃಗ’ ಎಂದು ತರ್ಜುಮೆಯಾಗಿದೆ, ಆದರೆ ಹಲವು ಆಧುನಿಕ ಭಾಷಾಂತರಗಳು ‘ಕಾಡು ವೃಷಭ’ (ಆರಾಕ್ಸ್‌) ಗೆ ಆದ್ಯತೆ ನೀಡುತ್ತಾರೆ, ಇದು ಹೀಬ್ರು ರೀ-ಎಮ್‌ ನ ಸರಿಯಾದ ಅರ್ಥವಾಗಿರುತ್ತದೆ.”

ಪ್ರಚಲಿತದಲ್ಲಿರುವ ಇಂಗ್ಲಿಷಿನ “ವೃಷಭ” (ಆಕ್ಸ್‌) ಗೆ ಬೀಜವೊಡೆದ ಎತ್ತು ಎಂಬ ಅರ್ಥವಿರುವದರಿಂದ, ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ ಕ್ರಮಾನುಗತವಾಗಿ ಮತ್ತು ಸರಿಯಾಗಿ ರೀ-ಎಮ್‌ ನ್ನು “ಕಾಡು ಹೋರಿ” ಎಂದು ತರ್ಜುಮಿಸಿದೆ. ಆರಾಕ್ಸ್‌ (ಕಾಡು ವೃಷಭ, ಯಾ ಹೋರಿ) 17 ನೆಯ ಶತಮಾನದೊಳಗೆ ನಿಶ್ಶೇಷಗೊಂಡಿವೆ ಎಂದು ಭಾಸವಾಗುತ್ತದೆ, ಆದರೆ ವಿಜ್ಞಾನಿಗಳು ಅದು ಐತಿಹ್ಯದ ಒಕ್ಕೊಂಬಿಗಿಂತ ತುಂಬಾ ಭಿನ್ನವಾಗಿತ್ತು ಎಂದು ತೀರ್ಮಾನಿಸಿರುತ್ತಾರೆ. ಪ್ರಾಚೀನ ಆರಾಕ್ಸ್‌ಗೆ 1. 8 ಮೀಟರುಗಳಷ್ಟು ಎತ್ತರದ ಮತ್ತು ಸುಮಾರು ಮೂರು ಮೀಟರುಗಳಷ್ಟು ಉದ್ದದ ದೇಹವಿತ್ತು. ಅದು ಸುಮಾರು 900 ಕಿಲೊಗ್ರಾಮ್‌ಗಳಿಷ್ಟಿದ್ದು, ಅದರ ಎರಡು ಕೊಂಬುಗಳು 75 ಸೆಂಟಿಮೀಟರುಗಳಷ್ಟು ಉದ್ದವಿದ್ದಿರಬಹುದು.

ಇದು ನಿಶ್ಚಯವಾಗಿಯೂ, ರೀ-ಎಮ್‌ ಅಥವಾ ಕಾಡು ಹೋರಿಯ ಬೈಬಲಿನ ಪ್ರಸ್ತಾವನೆಯೊಂದಿಗೆ ಒಪ್ಪುತ್ತದೆ. ಅದರ ಬಲ ಮತ್ತು ಪಳಗಿಸಲಾಗದ ಪ್ರವೃತ್ತಗಾಗಿ (ಯೋಬ 39:10, 11) ಹಾಗೂ ಅದರ ವೇಗಕ್ಕಾಗಿ ಅದು ಪ್ರಖ್ಯಾತ್ಯವಾಗಿತ್ತು. (ಅರಣ್ಯಕಾಂಡ 23:22; 24:8) ಅದಕ್ಕೆ ಎರಡು ಕೊಂಬುಗಳಿದ್ದವು, ಐತಿಹ್ಯದ ಒಕ್ಕೊಂಬಿಯಂತೆ ಒಂದು ಕೊಂಬಿನದ್ದು ಅಲ್ಲ ಎಂಬುದು ಸುವ್ಯಕ್ತ. ಮೋಶೆಯು ಅದರ ಕೊಂಬುಗಳನ್ನು ಯೋಸೇಫನ ಇಬ್ಬರು ಪುತ್ರರುಗಳಿಂದ ಹೊರಬರಲಿರುವ ಎರಡು ಶಕ್ತಿಶಾಲೀ ಕುಲಗಳನ್ನು ದೃಷ್ಟಾಂತಿಸುತ್ತಾ ಸೂಚಿಸಿದನು.—ಧರ್ಮೋಪದೇಶಕಾಂಡ 33:17.

ಆದುದರಿಂದ, ಐತಿಹ್ಯಗಳಲ್ಲಿ ಪ್ರಸಿದ್ಧವಾಗಿರುವ ಒಕ್ಕೊಂಬಿಗಳ ಕಲ್ಪನೆಯನ್ನು ಬೈಬಲು ಬೆಂಬಲಿಸುವದಿಲ್ಲ. ಅದು ಬೈಬಲ್‌ ಸಮಯಗಳಲ್ಲಿ ಅಸ್ತಿತ್ವದಲ್ಲಿದ್ದ ಮತ್ತು ಅನತಿ ದೂರದ ಸಮಯಗಳ ತನಕ ಇದ್ದ, ದೊಡ್ಡ ಗಾತ್ರದ ಮತ್ತು ಭಯಚಕಿತಗೊಳಿಸುವ ಆರಾಕ್ಸ್‌ಗಳ ನಿಷ್ಕೃಷ್ಟವಾದರೂ, ಸೀಮಿತವಾದ ಚಿತ್ರಣವನ್ನು ಬಿಡಿಸಿದೆ.

[ಅಧ್ಯಯನ ಪ್ರಶ್ನೆಗಳು]

a  ಫ್ರೊಫೆಸರ್‌ ಪೌಲ್‌ ಹಾಪ್ಟ್‌ ವಿವರಿಸುವದು: ‘ಮಧ್ಯಕಾಲೀನ ಯುಗದಲ್ಲಿ ಖಡ್ಗಮೃಗದ ಕೊಂಬುಗಳ ಯಾ ಸತ್ತ ತಿಮಿಂಗಿಲದ (ಇದನ್ನು ಒಕ್ಕೊಂಬಿನ ಮೀನು ಯಾ ಒಕ್ಕೊಂಬಿನ ತಿಮಿಂಗಿಲ ಎಂದೂ ಕರೆಯುತ್ತಿದ್ದರು) ದಾಡೆಗಳ ಸಂಗ್ರಹಣೆಗಳು, ಒಕ್ಕೊಂಬಿನ ಕೊಂಬುಗಳು ಎಂದು ಪರಿಗಣಿಸಲ್ಪಡುತ್ತಿತ್ತು.’

[ಪುಟ 31 ರಲ್ಲಿರುವ ಚಿತ್ರ ಕೃಪೆ]

Treasury of Fantastic and Mythological Creatures: 1,087 Renderings from Historic Sources, by Richard Huber/Dover Publications, Inc.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ