ಆರು ವರ್ಷ ಪ್ರಾಯದಲ್ಲಿ ಇಟ್ಟ ಒಂದು ಗುರಿಯನ್ನು ಬೆನ್ನಟ್ಟುವುದು
ಸಾಂಡ್ರ ಕಾವನ್ರಿಂದ ಹೇಳಲ್ಪಟ್ಟದ್ದು
ಅನೇಕ ಹೆತ್ತವರು ತಮ್ಮ ಮಕ್ಕಳಿಗಾಗಿ ಸಂಗೀತ ಅಥವಾ ನರ್ತನದಂಥ ಒಂದು ಜೀವನ ಕಸಬನ್ನು ಆರಿಸಿಕೊಳ್ಳುತ್ತಾರೆ, ಮತ್ತು ಅತಿ ಚಿಕ್ಕ ಪ್ರಾಯದಿಂದಲೇ ಅವರನ್ನು ತರಬೇತುಗೊಳಿಸಲು ತೊಡಗುತ್ತಾರೆ. ನನ್ನ ತಾಯಿಯು ನನಗೆ ಕಟ್ಟುನಿಟ್ಟಾಗಿ ಮಾಡಿದ್ದು ಅದನ್ನೇ. ಎರಡು ವಾರಗಳ ಮಗುವಾಗಿದ್ದ ಸಮಯದಿಂದಲೂ ನನ್ನನ್ನು ಎಲ್ಲಾ ಕ್ರೈಸ್ತ ಕೂಟಗಳಿಗೆ ಮತ್ತು ಹೊರಗೆ ಕ್ಷೇತ್ರ ಸೇವೆಗೂ ಒಯ್ಯಲಾಗಿತ್ತು.
ನಾನು ನಾಲ್ಕು ವರ್ಷ ಪ್ರಾಯದವಳಾಗಿದ್ದಾಗ, ಸ್ವತಃ ಸಾರಲು ಸಿದ್ದಳೆಂದು ಅಮ್ಮ ನೆನಸಿದ್ದರು. ನನ್ನ ಮೊದಲನೆಯ ಪ್ರಯತ್ನವು ನನಗೆ ಸ್ಪಷ್ಟವಾಗಿಗಿ ನೆನಪಿದೆ. ನಾವು ಒಂದು ದೊಡ್ಡ ಹೊಲಮನೆಗೆ ಕಾರಿನಲ್ಲಿ ಬಂದಿದ್ದೆವು ಮತ್ತು ಅಮ್ಮ ಮತ್ತು ಇತರರು ಕಾರಿನಲ್ಲಿ ಕಾದು ಕೂತಾಗ, ನಾನು ಇಳಿದು ಬಾಗಿಲ ಕಡೆಗೆ ನಡೆದೆ. ನಾನು ಹತ್ತು ಕಿರುಪುಸ್ತಕಗಳನ್ನು ನೀಡಿದಾಗ ಒಬ್ಬಾಕೆ ದಯಾಳು ಮಹಿಳೆ ಕಿವಿಗೊಟ್ಟಳು. ಅವುಗಳಿಗಾಗಿ ಬೆಲೆತೆರಲು ಆಕೆ ನನಗೊಂದು ದೊಡ್ಡ ಬಾರ್ ಸೋಪನ್ನು ಕೊಟ್ಟಳು. ಅದನ್ನು ಹಿಡಿಯಲು ನನ್ನ ಎರಡೂ ಕೈಗಳು ಬೇಕಾದವು. ನಾನು ಪುಳಕಿತಗೊಂಡೆ!
ಅದೇ ವರ್ಷವಾದ 1943 ರಲ್ಲಿ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಾದ್ ಪೂರ್ಣ-ಸಮಯದ ಪಯನೀಯರ ಶುಶ್ರೂಷಕರನ್ನು ಮಿಶನೆರಿ ಕೆಲಸಕ್ಕಾಗಿ ತರಬೇತುಗೊಳಿಸಲಿಕ್ಕಾಗಿ ತನ್ನ ದ್ವಾರಗಳನ್ನು ತೆರೆಯಿತು. ಮಿಶನೆರಿ ಸೇವೆಯನ್ನು ನನ್ನ ಜೀವನದ ಗುರಿಯಾಗಿ ಮಾಡುವಂತೆ ನನ್ನ ಅಮ್ಮ ನನ್ನನ್ನು ಪ್ರೋತ್ಸಾಹಿಸಿದರು. 2 ನೆಯ ಲೋಕ ಯುದ್ಧವು ಆಗ ಯೂರೋಪಿನಲ್ಲಿ ಅತಿ ರಭಸದಿಂದ ನಡೆದಿತ್ತು ಮತ್ತು ಸಾಕ್ಷಿಗಳ ಯುವ ಮಕ್ಕಳನ್ನು ಅವರ ಹೆತ್ತವರಿಂದ ಎಳೆದುಕೊಂಡು ಹೋಗುತ್ತಿದ್ದ ಕುರಿತು ನನ್ನ ಅಮ್ಮ ನನಗೆ ಹೇಳುತ್ತಿದ್ದರು. ಯಾವುದೇ ಪರೀಕ್ಷೆಯನ್ನು ಎದುರಿಸಲು ಸಾಕಷ್ಟು ಬಲವನ್ನು ನಾನು ಹೊಂದುವಂತೆ ಅವರು ಬಯಸಿದ್ದರು.
1946 ರ ಬೇಸಗೆಯಲ್ಲಿ, ಕೀವ್ಲ್ಲ್ಯಾಂಡ್, ಒಹಾಯೋ ಅಂತರ್ರಾಷ್ಟ್ರೀಯ ಅಧಿವೇಶನದಲ್ಲಿ ನಾನು ದೀಕ್ಷಾಸ್ನಾನ ಪಡಕೊಂಡೆನು. ಕೇವಲ ಆರು ವರ್ಷ ವಯಸ್ಸಿನವಳಾಗಿದ್ದರೂ, ಯೆಹೋವನಿಗೆ ನನ್ನ ಸಮರ್ಪಣೆಯನ್ನು ನೆರವೇರಿಸಲು ನಾನು ನಿರ್ಧಾರವನ್ನು ಮಾಡಿದ್ದೆ. ಆ ಬೇಸಗೆಯಲ್ಲಿ ಮೊತ್ತಮೊದಲಾಗಿ ನಾನು ಪಯನೀಯರ ಸೇವೆ ಮಾಡಿದೆ. ಒಂದು ದಿನ ಬೆಳಿಗ್ಗೆ ಕ್ಯಾಲಿಫೋರ್ನಿಯದ ಸಾನ್ ಡಿಯಾಗೊ ಪೇಟೆಯಲ್ಲಿ ಕೂತಿದ್ದ ಜನರೊಂದಿಗೆ 40 ಪತ್ರಿಕೆಗಳನ್ನು ನೀಡಿದ್ದ ನೆನಪು ನನಗಿದೆ. ನಾನು ಪುಟಾಣಿಯೂ ಮಾತಾಳಿಯೂ ಆಗಿದ್ದದ್ದು ಅದಕ್ಕೆ ತುಂಬಾ ಸಹಾಯವಾಗಿದ್ದಿರಬೇಕು, ನಿಶ್ಚಯ.
ನಾವು ಹೆಚ್ಚಾಗಿ ಬೆತ್-ಸರೀಮ್ ಕ್ಷೇತ್ರದಲ್ಲಿ ಸಾರುತ್ತಿದ್ದೆವು, ಇಲ್ಲಿಯೇ ವಾಚ್ಟವರ್ ಸೊಸೈಟಿಯ ಪ್ರೆಸಿಡೆಂಟರಾಗಿದ್ದ ಸಹೋದರ ರಥರ್ಫರ್ಡರು 1942ರಲ್ಲಿ ಅಸೌಖ್ಯಬಿದ್ದು ತೀರಿಹೋಗುವ ಮುಂಚೆ ತಮ್ಮ ಚಳಿಗಾಲವನ್ನು ಕಳೆದಿದ್ದರು. ನಾವು ಅಲ್ಲಿನ ಪೂರ್ಣ ಸಮಯದ ಸೇವಕರನ್ನು ಕ್ರಮವಾಗಿ ಸಂದರ್ಶಿಸುತ್ತಿದ್ದೆವು ಮತ್ತು ಕೂಡಿ ಊಟಮಾಡುತ್ತಿದ್ದೆವು. ಅಂಥ ಸಂತೋಷದ ಸಂದರ್ಶನಗಳು ನನಗೆ ಬೇಕಾಗಿದ್ದ ಜೀವನ ಮಾರ್ಗ ನಿಜವಾಗಿ ಇದೇ ಎಂದು ನಿರ್ಣಯಿಸುವಂತೆ ಮಾಡಿದವು. ಆಗ ನಾನು ಗಿಲ್ಯಾದ್ ಶಾಲೆ ಮತ್ತು ಮಿಶನೆರಿ ಸೇವೆಯನ್ನು ನನ್ನ ಜೀವನದ ಗುರಿಯಾಗಿ ಮಾಡಿದೆ.
ಮುಂದಿನ ವರ್ಷ ನನ್ನ ಹೆತ್ತವರು ವಿವಾಹ ವಿಚ್ಛೇದ ಮಾಡಿದರು, ಆದರೆ ಬದಲಾದ ಕುಟುಂಬ ಸ್ಥಿತಿಗತಿಯು ನಮ್ಮ ಆತ್ಮಿಕತೆಯನ್ನು ಕುಂದಿಸಲಿಲ್ಲ. ಅಮ್ಮ ಪಯನೀಯರರಾಗಿದ್ದರು ಮತ್ತು ನಾನು ಮತ್ತು ನನ್ನ ತಮ್ಮನು ಪಡೆಯುವ ತರಬೇತಿಯ ಕುರಿತು ಅತ್ಯಂತ ಚಿಂತಿತರಾಗಿದ್ದರು. ನಮ್ಮ ಚಿಕ್ಕ ಟ್ರೆಯ್ಲ್ರ್ ಕ್ರೈಸ್ತ ಸಹೋದರ ಮತ್ತು ಸಹೋದರಿಯರ ಸಂದರ್ಶನಗಳಿಂದ ಸಜೀವ ಸ್ಥಳವಾಗುತ್ತಿತ್ತು. ಗಿಲ್ಯಾದ್ ಪದವೀಧರರನ್ನು ನಾನು ಭೇಟಿಯಾಗುವಂತೆ ಅಮ್ಮ ವಿಶೇಷ ಪ್ರಯತ್ನ ಮಾಡುತ್ತಿದ್ದರು. ಅಂಥ ಇಬ್ಬರು ಪದವೀಧರರು ಜಪಾನಿನಲ್ಲಿ ತಮ್ಮ ಪರದೇಶ ನೇಮಕಕ್ಕೆ ಹೋಗಲು ಕಾಯುತ್ತಿದ್ದಾಗ ಸಂಚಾರ ಸೇವೆಯಲ್ಲಿ ಸಂದರ್ಶಿಸಿದ್ದ ಲೈಡ್ ಮತ್ತು ಮೆಲ್ಬ ಬ್ಯಾರಿಯವರು. ಅವರು ನನಗೆ—ಮಿಶನೆರಿಯಾಗಲು ಹಂಬಲಿಸುತ್ತಿದ್ದ ಪುಟ್ಟ ಹುಡುಗಿಗೆ—ಉತ್ತೇಜನ ಕೊಡಲು ಸಮಯ ತಕ್ಕೊಂಡರು—ಮತ್ತು ಅದು ನಿಜವಾಗಿ ನನ್ನ ಮೇಲೆ ಪ್ರಭಾವಬೀರಿತು.
ನಾನು ಹತ್ತು ವರ್ಷದವಳಾಗಿದ್ದಾಗ, ಅಮ್ಮ ಪಯನೀಯರ ಶುಶ್ರೂಷಕನಾಗಿದ್ದ ಒಬ್ಬ ಆಶ್ಚರ್ಯಕರ ಸಾಕ್ಷಿಯನ್ನು ವಿವಾಹವಾದರು. ಆವರು ನನ್ನ ತಮ್ಮನನ್ನು ಮತ್ತು ನನ್ನನ್ನು ಕಾಗ್ದ-ಪತ್ರದ ಮೇಲೆ ಮಾತ್ರವಲ್ಲ ಹೃದಯದಲ್ಲೂ ದತ್ತಸ್ವೀಕಾರ ಮಾಡಿದರು. ಯೆಹೋವನಲ್ಲಿ ಅವರಿಗಿದ್ದ ಪ್ರೀತಿ ಮತ್ತು ಅವರ ಸೇವಾ ಹುರುಪು ಸಂಸ್ಪರ್ಶಕವಾಗಿದ್ದವು.
ಅಮ್ಮ ಮತ್ತು ಅಪ್ಪ ಮಕ್ಕಳಾದ ನಮ್ಮಿಬ್ಬರನ್ನು ಆ ಕಷ್ಟದ ಹದಿವಯಸ್ಸಿನಲ್ಲಿ ಮಾರ್ಗದರ್ಶಿಸಲು ಜೊತೆಯಾಗಿ ಕಾರ್ಯನಡಿಸಿದರು. ನಮ್ಮ ಮನೆಯು ನಾನು ಅಕ್ಕರೆಯಿಂದ ಹಿನ್ನೋಡುವ ಒಂದು ಆತ್ಮಿಕ ಬೀಡಾಗಿತ್ತು. ಎರಡು ಮಕ್ಕಳನ್ನು ಬೆಳೆಸಲಿಕ್ಕಿದ್ದಾಗ ಒಂದು ಅಲ್ಪ ಆದಾಯದ ಮೇಲೆ ಪಯನೀಯರ ಸೇವೆ ಮಾಡುವುದು ಅವರಿಗೇನೂ ಸುಲಭವಿರಲಿಲ್ಲ, ಆತ್ಮ-ತ್ಯಾಗವು ಬೇಕಾಗಿತ್ತು. ಆದರೆ ಅಪ್ಪ ಮತ್ತು ಅಮ್ಮ ಯೆಹೋವನಲ್ಲಿ ಆತುಕೊಂಡರು ಮತ್ತು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಟ್ಟರು.
1950ರಲ್ಲಿ ನ್ಯೂ ಯಾರ್ಕಿನಲ್ಲಾದ ಅಂತರ್ರಾಷ್ಟ್ರೀಯ ಅಧಿವೇಶನ ನನಗೆ ಎಷ್ಟು ಚೆನ್ನಾಗಿ ನೆನಪಿದೆ! ಅಪ್ಪ ಬ್ಯಾಂಕಿನಿಂದ ಒಂದು ಸಾಲವನ್ನು ಪಡೆದರು, ಮತ್ತು ಖರ್ಚಿಗೆ ಸಹಾಯವಾಗುವಂತೆ ಕಾರಲ್ಲಿ ನಾವು ಮೂವರು ಪ್ರಯಾಣಿಕರನ್ನು ಜೊತೆಗೆ ತಕ್ಕೊಂಡೆವು. ಅಪ್ಪ, ಅಮ್ಮ, ನನ್ನ ತಮ್ಮ ಮತ್ತು ನಾನು ಎಲ್ಲರೂ ಮುಂದಿನ ಸೀಟಿನಲ್ಲಿ ಸಾನ್ಡಿಯಾಗದಿಂದ ನ್ಯೂಯಾರ್ಕಿನ ತನಕ ಒಟ್ಟು ಕೂತಾಗ, ಇತರರು ಹಿಂದಿನ ಸೀಟಲ್ಲಿ ಕೂತರು. ಅಪ್ಪನ ಧನಿ ಎರಡು ವಾರದ ರಜೆಯನ್ನು ಕೊಡಲು ನಿರಾಕರಿಸಿದ್ದರಿಂದ, ಆ ಅಧಿವೇಶನಕ್ಕೆ ಹಾಜರಿಯಿಂದ ಅವರ ಕೆಲಸ ಹೋಯಿತು. ಆದರೆ ಯೆಹೋವನು ನಮ್ಮ ಅಗತ್ಯತೆಗಳನ್ನು ಒದಗಿಸಿಕೊಡುವನೆಂದು ಅಪ್ಪ ಅಶ್ವಾಸನೆ ಕೊಟ್ಟಿದ್ದರು, ಮತ್ತು ಹಾಗೆಯೇ ಆಯಿತು. ಅಪ್ಪ ಕಾರನ್ನು ಮಾರಿ ಬ್ಯಾಂಕಿನ ಸಾಲ ತೀರಿಸಿದರು, ಮತ್ತು ಅನಂತರ ಅವರಿಗೆ ಒಂದು ಹೆಚ್ಚು ಒಳ್ಳೆಯ ಕೆಲಸ ಸಿಕ್ಕಿತು. ಇದು ಮತ್ತು ತದ್ರೀತಿಯ ಅನುಭಗಳು ವರ್ಷಗಳ ಅನಂತರ ನಾನು ಮತ್ತು ನನ್ನ ಗಂಡನು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿದಾಗ ಎಷ್ಟೋ ಅಮೂಲ್ಯವಾಗಿ ರುಜುವಾದವು.
ನ್ಯೂ ಯಾರ್ಕಿನಿಂದ ಹಿಂತಿರುಗಿ ಬರುವಾಗ, ಕಿಂಗ್ಡಂ ಫಾರ್ಮ್ನ್ನು ನಾವು ಸಂದರ್ಶಿಸಿದೆವು, ಅಲ್ಲಿ ನಾನು ಮೊದಲ ಬಾರಿ ಗಿಲ್ಯಾದ್ ಶಾಲೆಯನ್ನು ನೋಡಿದೆನು. ಅದರ ಕ್ಲಾಸ್ರೂಂ ಒಂದರಲ್ಲಿ ನಿಂತುಕೊಂಡು, ‘ನನಗಿನ್ನೂ 11 ವರ್ಷ ಪೂರ್ತಿಯಾಗಿಲ್ಲ. ನಾನೆಂದೂ ಇಲ್ಲಿಗೆ ಬರುವಂತೆ ಕಾಣುವುದಿಲ್ಲ. ಹರ್ಮಗೆದ್ದೋನ್ ಅದಕ್ಕಿಂತ ಮುಂಚೆ ಬರುವುದು’ ಎಂದು ನನ್ನಲ್ಲೇ ಗೊಣಗಿದ ನೆನಪು ನನಗಿದೆ. ಅದರೆ ಆ ಸಂದರ್ಶನೆಯು ಗಿಲ್ಯಾದನ್ನು ನನ್ನ ಗುರಿಯಾಗಿ ಮಾಡುವಂತೆ ಎಂದಿಗಿಂತಲೂ ಹೆಚ್ಚು ದೃಢ ಸಂಕಲ್ಪವನ್ನು ಕೊಟ್ಟಿತು.
ನನ್ನ ಗುರಿಯೆಡೆಗೆ ಕಾರ್ಯನಡಿಸಿದ್ದು
ಒಂದನೆಯ ಕ್ಲಾಸ್ನಿಂದಾರಂಭಿಸಿ, ಶಾಲಾ ಅವಧಿಯಲ್ಲಿಲ್ಲಾ ಪ್ರತಿ ಬೇಸಗೆಯ ರಜೆಯಲ್ಲಿ ನಾನು ಪಯನೀಯರ ಸೇವೆ ಮಾಡಿದೆ. ಅನಂತರ ಜೂನ್ 1957ರಲ್ಲಿ ಹೈಸ್ಕೂಲ್ನಿಂದ ಉತ್ತೀರ್ಣಳಾದ ಎರಡು ವಾರದ ನಂತರ, ನಾನು ಕ್ರಮದ ಪಯನೀಯರನಾದೆನು.
ಗಿಲ್ಯಾದ್ನಲ್ಲಿ ಆಸಕ್ತರಿಗಾಗಿ 1957 ರ ಲಾಸ್ ಏಂಜಲಿಸ್ ಅಧಿವೇಶನದಲ್ಲಿ ನಡೆದ ಜಿಲ್ಲಾ ಅಧಿವೇಶನ ಕೂಟವು ನನಗೆ ವಿಶೇಷಪೂರ್ಣವಾಗಿತ್ತು. ಆ ಕೂಟದ ಡೇರೆಗೆ ನಾನು ಹೋಗುತ್ತಿದ್ದಾಗ, ನಾನು ಆರು ವರ್ಷ ಪ್ರಾಯದಿಂದ ತಿಳಿದಿದ್ದ ಬಿಲ್ ಎಂಬ ಯುವ ಸಹೋದರನನ್ನು ನಾನು ಭೇಟಿಯಾದೆನು. ಕಳೆದ ಒಂದು ವರ್ಷದಿಂದ ಅವನು ಎಲ್ಲಿ ಹೆಚ್ಚಿನ ಅಗತ್ಯವಿತ್ತೋ ಆ ದೂರದ ಲೂಝಿಯಾನದಲ್ಲಿ ಸೇವೆ ನಡಿಸುತ್ತಿದ್ದನು. ನಾವಿಬ್ಬರೂ ಮಿಶನೆರಿ ಸೇವೆಯಲ್ಲಿ ಎಷ್ಟು ಆಸಕ್ತರಿದ್ದೆವೆಂದು ಕಂಡುಕೊಂಡಾಗ ನಮಗಾಶ್ಚರ್ಯವಾಯಿತು. ಆರು ತಿಂಗಳ ನಂತರ ನಾವು ಅದನ್ನು ಒಂದು ಸಂಯುಕ್ತ ಯೋಜನೆಯಾಗಿ ಮಾಡಲು ನಿರ್ಣಯಿಸಿದೆವು. ಒಂದು ನೇಮಕಕ್ಕಾಗಿ ವಿನಂತಿಸಿ ನಾವು ಸೊಸೈಟಿಗೆ ಬರೆದೆವು ಮತ್ತು ನಮ್ಮ ಮದುವೆಗೆ ಒಂದು ತಿಂಗಳು ಮುಂಚಿತವಾಗಿ, ಪಶ್ಚಿಮ ವರ್ಜೀನಿಯ ರಾಮ್ನಿಯಲ್ಲಿ ನಮಗೆ ನೇಮಕ ಸಿಕ್ಕಿತು.
1958ರ ನ್ಯೂ ಯಾರ್ಕ್ ಸಮ್ಮೇಲನಕ್ಕೆ ಹಾದಿಯಲ್ಲಿ ನಾವು ಅಲ್ಲಿಗೆ ಸ್ಥಳಾಂತರಿಸಿದೆವು. ಆ ಅಧಿವೇಶನದಲ್ಲಿದ್ದಾಗ, ಗಿಲ್ಯಾದ್ ಆಸಕ್ತರಿಗಾಗಿ ನಡೆದ ಕೂಟಕ್ಕೆ ನಾವು ಹಾಜರಾದೆವು. ನೂರಾರು ಮಂದಿ ಹಾಜರಿದ್ದರು. ಆ ಗುಂಪನ್ನು ನೋಡಿದಾಗ, ಗಿಲ್ಯಾದ್ಗೆ ಕರೆಯಲ್ಪಡುವ ನಮ್ಮ ಪ್ರತೀಕ್ಷೆಗಳು ಕೊಂಚವೇ ಎಂದು ಭಾಸವಾಯಿತು. ಮದುವೆಯಾಗಿ ಕೇವಲ 11 ವಾರಗಳು ಕಳೆದಿದ್ದರೂ, ನಾವು ಒಂದು ಪ್ರಾರಂಭದ ಅರ್ಜಿಯನ್ನು ಹಾಕಿದೆವು. ಮುಂದಿನ ವರ್ಷ ಫಿಲೆಡೆಲ್ಫಿಯದಲ್ಲಾದ ಜಿಲ್ಲಾ ಅಧಿವೇಶನದಲ್ಲಿ ನಾವು ನಮ್ಮ ಎರಡನೆಯ ಅರ್ಜಿಯನ್ನು ಸಲ್ಲಿಸಿದೆವು.
ಕಷ್ಟದ ಪರಿಸ್ಥಿತಿಗಳೊಳಗಿಂದ ನಮ್ಮನ್ನು ಬಿಡಿಸಲು ಸಹಾಯಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳುವಂತೆ ನಾನು ಮತ್ತು ಬಿಲ್ ರಾಮ್ನಿಯಲ್ಲಿ ಕಲಿತೆವು. ರಾಮ್ನೆಯು ಸುಮಾರು 2,000 ನಿವಾಸಿಗಳಿರುವ ಒಂದು ಊರಾಗಿತ್ತು. ಅಲ್ಲಿ ಕೆಲಸ ಸಿಕ್ಕುವುದು ಅಶಕ್ಯವಾಗಿತ್ತು. ಕ್ಯಾಲಿಫೋರ್ನಿಯ ಹವಾಮಾನಕ್ಕಾಗಿ ರಚಿಸಲ್ಪಟ್ಟ 16-ಅಡಿ ಉದ್ದದ ಮನೆಯಲ್ಲಿ ಮಾಡಿದ ಒಂದು ಟ್ರೆಯ್ಲರ್ನಲ್ಲಿ ನಾವು ವಾಸಿಸಿದ್ದೆವು. ಕೊಳವೆ ನೀರಾಗಲಿ, ಶಾಕವಾಗಲಿ, ಶೀತಕಾರಕ ಯಂತ್ರವಾಗಲಿ ನಮಗಿರಲಿಲ್ಲ. ಒಳಗೆ ಎಷ್ಟು ಚಳಿ ಇತ್ತೆಂದರೆ ನೀರು ಬೇಕಾದರೆ ಬಕೆಟ್ಟಿನಲ್ಲಿ ಹಿಮಗಡ್ಡೆಯನ್ನು ಒಡೆಯಬೇಕಿತ್ತು. ಸಹೋದರರು ತಾವು ಬೇಟೆ ಮಾಡಿದ ಆಹಾರವನ್ನು ಹಂಚುತ್ತಾ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿದರು. ನಾವು ಜಿಂಕೆ, ರಾಕೂನ್, ಅಳಿಲನ್ನು ತಿಂದೆವು. ಆ ದಿನಕ್ಕಾಗಿ ತಿನ್ನಲು ನಮಗೇನೂ ಇಲ್ಲವೆಂದು ಹಲವಾರು ಬಾರಿ ನೆನಸಿದ್ದೂ ಉಂಟು, ಆದರೆ ಸೇವೆಯಿಂದ ಮನೆಗೆ ಬಂದಾಗ, ಕೆಲವು ಸೇಬುಹಣ್ಣುಗಳು ಅಥವಾ ಗಿಣ್ಣು ನಮ್ಮ ಬಾಗಿಲೆದುರಲ್ಲಿ ಇರುವುದನ್ನು ನಾವು ಕಾಣುತ್ತಿದ್ದೆವು.
ಆಗಿಂದಾಗ್ಯೆ ಬಡತನದಿಂದ ಇನ್ನೂ ಕಡುಬಡತನಕ್ಕಿಳಿದ ಒಂದು ಆದಾಯದ ಮೇಲೆ ನಾವು ಒಂಭತ್ತು ತಿಂಗಳ ತನಕ ಕಷ್ಟಪಟ್ಟೆವು. ಕೊನೆಗೆ, ಮೇರಿಲ್ಯಾಂಡ್ನ ಬಾಲಿಮ್ಟೋರ್ಗೆ ಸ್ಧಳಾಂತರಿಸುವುದು ಯುಕ್ತವೆಂದು ನಾವು ನಿರ್ಣಯಿಸಿದೆವು ಯಾಕಂದರೆ ಬಿಲ್ಗೆ ಅಲ್ಲಿ ಕೆಲಸ ಸಿಗುವ ಸಾಧ್ಯತೆ ಇತ್ತು. ನಮ್ಮ ಸಹೋದರರಿಗೆ ಈ ನಿರ್ಣಯವನ್ನು ತಿಳಿಸಿದಾಗ ಅವರು ಅತರ್ತು ಮತ್ತು ನಾವೂ ಅತ್ತೆವು. ಆದ್ದರಿಂದ ಇನ್ನೂ ಸ್ವಲ್ಪ ಸಮಯ ನಿಲ್ಲಲು ನಿರ್ಣಯಿಸಿದೆವು.
ಆ ಮೇಲೆ ತುಸು ಸಮಯದಲ್ಲಿ, ಸುಮಾರು 60 ಕಿಲೊಮೀಟರ್ ದೂರದ ಮೇರಿಲ್ಯಾಂಡಿನ ವೆಸ್ಟರ್ನ್ಪೋರ್ಟ್ ಸೂಪರ್ ಮಾರ್ಕೆಟ್ನ ಮ್ಯಾನೇಜರನಾಗಿದ್ದ ಸಾಕ್ಷಿಯೊಬ್ಬನು, ಬಿಲ್ಗೆ ಅಂಶ-ಕಾಲದ ಕೆಲಸವೊಂದನ್ನು ನೀಡಿದನು. ಅದೇ ತಿಂಗಳಲ್ಲಿ ನಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬನು ಒಂದು ದೊಡ್ಡ ಇದ್ದಲಿನ ಅಗಿಷ್ಗಿಕ್ಟೆಯಿದ್ದ, ಪೀಠೋಪಕರಣ ಸಜ್ಜಿತ ಚಿಕ್ಕ-ಚೊಕ್ಕ ಮನೆಯನ್ನು ನಮಗೆ ನೀಡಿದನು. ಆಗಿನಿಂದಲೇ ಮಲಾಕಿಯ 3:10 ನನ್ನ ಅಚ್ಚುಮೆಚ್ಚಿನ ವಚನವಾಗಿ ಪರಿಣಮಿಸಿತು. ನಮ್ಮ ಅಪೇಕ್ಷೆಗಳಿಗೆ ಮೀರಿದ ಆಶೀರ್ವಾದವನ್ನು ಯೆಹೋವನು ನಮ್ಮ ಮೇಲೆ ಸುರಿಸಿದ್ದನು.
ಕಟ್ಟಕಡೆಗೆ ಗಿಲ್ಯಾದ್!
ನಮ್ಮ ಜೀವಿತದ ಅತ್ಯಂತ ರೋಮಾಂಚಕ ದಿನವು ನವಂಬರ 15 ರ ದಿನವಾಗಿತ್ತು, ನಾವು ಗಿಲ್ಯಾದಿಗೆ ಆಮಂತ್ರಣವನ್ನು ಪಡೆದ ದಿನವದು. ಕಿಂಗ್ಡಂ ಫಾರ್ಮ್ನಲ್ಲಿ ನಡೆದ ಕೊನೆಯ ವರ್ಗವಾಗಿದ್ದ 35 ನೆಯ ಕ್ಲಾಸಿಗೆ ನಾವು ಆಮಂತ್ರಿಸಲ್ಪಟ್ಟೆವು. ಚಿಕ್ಕವಳಾಗಿದ್ದಾಗ ಸಂದರ್ಶಿಸಿದ್ದ ಆದೇ ಕ್ಲಾಸ್ರೂಂನಲ್ಲಿ ನಾನು ನಿಂತಾಗ, ಯಾವುವೇ ಮಾತುಗಳು ತಕ್ಕದ್ದಾಗಿ ವರ್ಣಿಸಲಶಕ್ಯವಾದ ಬೆಚ್ಚಗೆನ, ಆನಂದದ ಅನಿಸಿಕೆಯು ನನಗಾಯಿತು.
ಗಿಲ್ಯಾದ್ ಮರುಳುಮಧ್ಯದ ಒಂದು ಆತ್ಮಿಕ ತಂಪುಜಾಗ. ಅದು ಒಂದು ಹೊಸ ಲೋಕದಲ್ಲಿ ಐದು ತಿಂಗಳುಗಳ ತನಕ ಜೀವಿಸುವಂತಿತ್ತು. ಏನಾದರೊಂದು ವಿಷಯಕ್ಕಾಗಿ ನಾವು ಜೀವಿತದಲ್ಲಿ ವರ್ಷಗಳಷ್ಟು ಕಾಲ ಕಾಯುವುದೂ ಮತ್ತು ಅನಂತರ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮವಾಗಿ ಅದನ್ನು ಕಂಡುಕೊಳ್ಳುವುದೂ ಬಹಳ ಅಪೂರ್ವ. ಆದರೆ ಗಿಲ್ಯಾದ್ ಇದ್ದದ್ದು ಹಾಗೆಯೇ.
ನಾವು ಭಾರತಕ್ಕೆ ನೇಮಿಸಲ್ಪಟ್ಟಿದ್ದೆವು, ಆದರೆ ಕೊನೆಗೆ ನಮಗೆ ವೀಸಾಗಳು ನಿರಾಕರಿಸಲ್ಪಟ್ಟವು. ಹೀಗೆ, ನ್ಯೂ ಯಾರ್ಕ್ ಶಹರದಲ್ಲಿ ಒಂದು ವರ್ಷದ ತನಕ ಕಾದನಂತರ, ವಾಚ್ಟವರ್ ಸೊಸೈಟಿಯು ಉತ್ತರ ಆಫ್ರಿಕದ ಮೊರಕ್ಕೋಗೆ ನಮ್ಮನ್ನು ಮರುನೇಮಿಸಿತು.
ಮೊರಕ್ಕೋದಲ್ಲಿ ಮಿಶನೆರಿಗಳು
ನಾವು ಮೊರಕ್ಕೋದಲ್ಲಿ ಆಗಮಿಸಿದೊಡನೆ ಅಲ್ಲಿನ ಜನರಲ್ಲಿ ಮೋಹಿತರಾದೆವು ಮತ್ತು ಹೀಗೆ 25 ಹರ್ಷಭರಿತ ವರ್ಷಗಳನ್ನು ಕಳೆದೆವು. ಅಲ್ಲಿ ವಾಸಿಸುವ ಅನೇಕ ಜನಾಂಗಗಳವರೊಂದಿಗೆ ಸಂಭಾಷಣೆ ನಡಿಸಲು ಸಹಾಯಕಾರಿಯಾದ ಫ್ರೆಂಚ್ ಮತ್ತು ಸ್ಪೇನಿಷ್ ಎರಡು ಭಾಷೆಗಳನ್ನೂ ಕಲಿತೆವು. ಯಾರು ಪರದೇಶಗಳಿಂದ ಬಂದವರಾಗಿದ್ದರೋ ಅವರೇ ಹೆಚ್ಚಾಗಿ ರಾಜ್ಯ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸುತ್ತಿದ್ದರು.
ನಾನು ಬೈಬಲಭ್ಯಾಸ ನಡಿಸಿದ್ದ ಒಬ್ಬ ಹೆಂಗಸು ಕಾಸಬ್ಲಾಂಕದ ಒಂದು ಕ್ಯಾಬರೇಯಲ್ಲಿ ಸ್ಪೇನಿಷ್ ಪಮ್ಲೆಂಕೊ ಡಾನ್ಸರ್ ಆಗಿದ್ದಳು. ಬೈಬಲ್ ತತ್ವಗಳನ್ನು ಕಲಿತನಂತರ, ಆಕೆ ತಾನು ಯಾರೊಂದಿಗೆ ಜೀವಿಸುತ್ತಿದ್ದಳೋ ಆ ಕ್ಯಾಬರೇ ಧನಿಯನ್ನು ಬಿಟ್ಟು ಸ್ಪೈನ್ಗೆ ಹಿಂತಿರುಗಿದಳು. ಅಲ್ಲಿ ಅವಳು ತನ್ನ ಎಲ್ಲಾ ಕುಟುಂಬದವರಿಗೆ ಸಾಕ್ಷಿಕೊಟ್ಟಳು, ಮತ್ತು ಅವಳು ಹಂಚಿದ್ದ ಬೈಬಲ್ ಸತ್ಯವನ್ನು ಅವರಲ್ಲಿ ಕೆಲವರು ಸ್ವೀಕರಿಸಿದರು. ಆ ಮೇಲೆ ಅವಳು ಕ್ಯಾಸಬ್ಲಾಂಕಕ್ಕೆ ಹಿಂದೆ ಬಂದಳು, ಮತ್ತು 1990 ರಲ್ಲಿ ತನ್ನ ಮರಣದ ತನಕ ದೇವರಿಗೆ ನಂಬಿಗಸ್ತಳಾಗಿ ಉಳಿದಳು.
ಮೊರಕ್ಕೋದಲ್ಲಿ ನಮ್ಮ ಮೊದಲಿನ ಕೆಲವು ವರ್ಷಗಳು ರಾಜ್ಯ ಪ್ರಚಾರಕರ ಸಂಖ್ಯೆಯಲ್ಲಿ ಅಭಿವೃದ್ಧಿಗಳನ್ನು ಕಂಡವು. ಆದರೂ, ಪರದೇಶಸ್ಥರಿಗೆ ಕೆಲಸ ಸಿಗುವುದು ಮತ್ತು ಸ್ಥಿರವಾಸಕ್ಕೆ ಅನುಮತಿಯು ಸಿಗುವುದು ಕಷ್ಟವಾದಾಗ, ಸಾಕ್ಷಿಗಳು ಯೂರೋಪಿಗೆ ನಿರ್ಗಮಿಸಿದರು. ನಾವು ಯಾರೊಂದಿಗೆ ಅಭ್ಯಾಸ ನಡಿಸಿದ್ದೆವೋ ಅವರಲ್ಲಿ ಕೆಲವರು ಈಗ ನ್ಯೂಝಿಲೆಂಡ್, ಕೆನಡಾ, ಅಮೆರಿಕ, ಬಲ್ಗೇರಿಯ, ರಶ್ಯಾ ಮತ್ತು ಪ್ರಾನ್ಸ್ನಲ್ಲಿದ್ದಾರೆ ಮತ್ತು ಅವರಲ್ಲಿ ಕೆಲವರು ಪೂರ್ಣಸಮಯದ ಸೇವೆಯಲ್ಲಿ ಪಾಲಿಗರಾಗಿದ್ದಾರೆ.
ಏಪ್ರಿಲ್ 1973 ರಲ್ಲಿ ಮೊರಕ್ಕೊದಲ್ಲಿ ನಮ್ಮ ಸಾರುವ ಕಾರ್ಯವು ಥಟ್ಟನೇ ನಿಷೇಧ ಮಾಡಲ್ಪಟ್ಟಿತು. ಅದೆಂಥ ದೊಡ್ಡ ಹೊಡೆತವಾಗಿತ್ತು! ಗುರುವಾರ ಸಂಜೆಗೆ ರಾಜ್ಯ ಸಭಾಗೃಹದಲ್ಲಿ ನಾವೊಂದು ಸಂತೋಷದ ಗುಂಪನ್ನು ಕಂಡಿದೆವ್ದು, ಮನೆಗೆ ಹೋಗುವ ವೇಳೆಯಾಯಿತೆಂದು ನಮಗೆ ತಿಳಿಸಲು ಲೈಟನ್ನು ನಂದಿಸುವ ತನಕ ಅವರು ಮಾತನಾಡುತ್ತಾ ಇದ್ದರು. ಅಂಥ ಬಹಿರಂಗ ಕ್ರೈಸ್ತ ಸಹವಾಸದ ಮೇಲೆ ಆ ಬೆಳಕು ಬೆಳಗುವುದನ್ನು ಪುನಃ ನಾವೆಂದೂ ಕಾಣಲಾರೆವು ಎಂದು ನಮಗೆ ತಿಳಿದಿರಲಿಲ್ಲ. ನಿಷೇಧದ ಪರಿಸ್ಥಿತಿಗಳ ಕೆಳಗೆ, ನಮ್ಮ ಕೂಟಗಳು ಮತ್ತು ಸರ್ಕಿಟ್ ಸಮ್ಮೇಳನಗಳು ಖಾಸಗಿ ಮನೆಗಳಲ್ಲಿ ಚಿಕ್ಕ ಗುಂಪುಗಳಿಗೆ ಪ್ರತಿಬಂಧಿಸಲ್ಪಟ್ಟವು. ಜಿಲ್ಲಾ ಅಧಿವೇಶನಗಳಿಗೆ ಹಾಜರಾಗಲು ಸಾಕ್ಷಿಗಳು ಫ್ರಾನ್ಸಿಗೆ ಅಥವಾ ಸ್ಪೈನಿಗೆ ಪ್ರಯಾಣ ಮಾಡಿದರು.
ನಮ್ಮ ಸಂಖ್ಯೆಯು ಕಡಿಮೆಯಾದಂತೆ ಮೊರಕ್ಕೋದಲ್ಲಿ ಉಳಿದ ಕೆಲವೇ ಸಾಕ್ಷಿಗಳು ಒಬ್ಬರಿಗೊಬ್ಬರು ಆಪ್ತ ಸಂಬಂಧಕ್ಕೆ ಎಳೆಯಲ್ಪಟ್ಟರು. ಹೀಗೆ ವಾಚ್ಟವರ್ ಸೊಸೈಟಿಯು ಕೊನೆಗೆ ಬ್ರಾಂಚನ್ನು ಮುಚ್ಚಲು ಮತ್ತು ನಮ್ಮನ್ನು ಬೇರೆ ಕಡೆಗೆ ನೇಮಿಸಲು ನಿರ್ಣಯಿಸಿದಾಗ, ನಾವೆಲ್ಲರೂ ತುಂಬಾ ಅತ್ತೆವು.
ಮುಂದೆ ಮಧ್ಯ ಆಫ್ರಿಕಕ್ಕೆ
ನಮ್ಮ ಹೊಸ ನೇಮಕವು ದಕ್ಷಿಣ ಆಫ್ರಿಕನ್ ರಿಪಬ್ಲಿಕ್ ಆಗಿತ್ತು. ಉತ್ತರ ಆಫ್ರಿಕಕ್ಕಿಂತ ಎಂಥ ಪ್ರಚಂಡವಾದ ಬದಲಾವಣೆಯಿದು! ಮೊರಕ್ಕೋದ ಹವಾಮಾನವು ಸಾಧಾರಣ ದಕ್ಷಿಣ ಕ್ಯಾಲಿಫೋರ್ನಿಯದಂತಿದ್ದಾಗ, ನಾವೀಗ ನಮ್ಮನ್ನು ಬಿಸಿಯಾದ ತೇವಭರಿತ ಉಷ್ಣವಲಯದಲ್ಲಿ ಕಂಡುಕೊಂಡೆವು.
ಅಲ್ಲಿ ಎದುರಿಸಲು ಹೊಸ ಸಮಸ್ಯೆಗಳು ಇದ್ದವು. ದೃಷ್ಟಾಂತಕ್ಕಾಗಿ, ಹಡಿದಾಡುವ ಕೀಟಗಳ ಭಯವನ್ನು ನಾನೀಗ ಹತೋಟಿಯಲ್ಲಿಡಬೇಕಿತ್ತು. ಬಾಗಲನ್ನು ಹಾದು ಹೋಗುವಾಗ ಮೂರು ಸಲ ಹಲ್ಲಿ ನನ್ನ ತಲೆಯ ಮೇಲೆ ಬಿತ್ತು. ಕೆಲವು ಸಾರಿ ಒಂದು ಬೈಬಲಭ್ಯಾಸ ನಡಿಸುವಾಗ, ಒಂದು ಇಲಿ ನಮ್ಮೊಂದಿಗೆ ಜತೆಗೂಡಲು ನಿರ್ಧರಿಸುತ್ತಿತ್ತು! ಅಲ್ಲಿಂದ ಹಾರಿ ಓಡಿಹೋಗಲು ನಾನು ಬಯಸಿದಾಗ್ಯೂ, ನನ್ನನ್ನು ಅಂಕೆಯಲ್ಲಿಡಲು ಕಲಿತೆ, ಶ್ರೀಮಾನ್ ಇಲಿಯಿಂದ ನನ್ನ ಕಣ್ಣನ್ನೆಂದೂ ತೆಗೆಯದೆ, ಅವನು ಹೊರಟು ಹೋಗಲು ನಿರ್ಧರಿಸುವ ತನಕ ನನ್ನ ಪುಸ್ತಕದ ಬ್ಯಾಗನ್ನು ಮತ್ತು ಕಾಲುಗಳನ್ನು ನೆಲದಿಂದ ಮೇಲಕ್ಕಿಟ್ಟು ಜಾಗ್ರತೆ ವಹಿಸುತ್ತಿದ್ದೆ. ನಾವು ಬಿಟ್ಟುಕೊಡದೇ ಇದ್ದಲ್ಲಿ ಯಾವುದನ್ನಾದರೂ ಬಳಕೆ ಮಾಡಿಕೊಳ್ಳ ಸಾಧ್ಯವಿದೆ ಎಂಬದನ್ನು ನಾನು ಕಂಡುಕೊಂಡೆನು.
ನಾವಲ್ಲಿದ್ದು ಆರು ತಿಂಗಳುಗಳು ಕಳೆದ ಮೇಲೆ, ನಮ್ಮ ಕಾರ್ಯವು ನಿಷೇಧ ಆಗಿದೆ ಎಂಬ ಪ್ರಕಟನೆಯು ರೇಡಿಯೋ ಮೂಲಕ ಮಾಡಲ್ಪಟ್ಟಿತು. ಹೀಗೆ ನಮ್ಮ ರಾಜ್ಯ ಸಭಾಗೃಹವು ಮುಚ್ಚಲ್ಪಟ್ಟಿತು, ಮತ್ತು ಮಿಶನೆರಿಗಳು ದೇಶಬಿಟ್ಟು ಹೋಗುವಂತೆ ಹೇಳಲಾಯಿತು. ಕೇವಲ ನಾವು ಮತ್ತು ಇನ್ನೊಬ್ಬ ದಂಪತಿಗಳು ಬ್ರಾಂಚ್ನಲ್ಲಿ ಇನ್ನೂ ಮೂರು ವರ್ಷಗಳ ಉಳಿಯಲು ಶಕ್ತರಾದೆವು. ಅನಂತರ ಒಂದು ಭಾನುವಾರ ಬೆಳಿಗ್ಗೆ ನಮ್ಮ ಕಾವಲಿನಬುರುಜು ಅಭ್ಯಾಸವಾಗುವಾಗ, ಸಶಸ್ತ್ರಧಾರಿ ಪೊಲೀಸರು ಬಂದು ನಮ್ಮನ್ನು ಪೊಲೀಸ್ ಮುಖ್ಯ ಕಾರ್ಯಾಲಯಕ್ಕೊಯ್ದರು. ಸ್ತ್ರೀಯರು ಮತ್ತು ಮಕ್ಕಳನ್ನು ಅವರು ಬಿಟ್ಟುಬಿಟ್ಟರು ಆದರೆ 23 ಸಹೋದರರನ್ನು, ನನ್ನ ಗಂಡ ಬಿಲ್ನನ್ನು ಸಹಾ, ಬಂಧಿಸಿಟ್ಟರು. ಆರು ದಿನಗಳ ನಂತರ ಅವರು ಅವನನ್ನು ಬಿಟ್ಟು, ಮನೆಗೆ ಹೋಗಿ ಸಾಮಾನು ಕಟ್ಟಿ ಹೊರಡುವಂತೆ ಹೇಳಿದರು. ಮೂರು ದಿನಗಳ ಅನಂತರ ಮೇ 1989ರಲ್ಲಿ ಸರಕಾರದ ಆಜ್ಞೆಯ ಮೇರೆಗೆ ನಾವು ದೇಶವನ್ನು ಬಿಟ್ಟು ಹೋದೆವು. ವಿಮಾನ ನಿಲ್ದಾಣಕ್ಕೆ ನಮ್ಮನ್ನು ಬೀಳ್ಕೊಡಲು ಬಂದಿದ್ದ ನಮ್ಮ ಅನೇಕ ಪ್ರಿಯ ಸಹೋದರರ ಇನ್ನೊಂದು ಕಂಬನಿಯುಕ್ತ ಅಗಲುವಿಕೆ ಅದಾಗಿತ್ತು.
ಕೊನೆಗೆ, ಸಿಯರ ಲಿಯೋನಿಗೆ
ನಮ್ಮ ಪ್ರಸ್ತುತ ನೇಮಕವಾದ ಪಶ್ಚಿಮ ಆಫ್ರಿಕದ ಸಿಯರ ಲಿಯೋನ್ ಸುಂದರವಾದ ಬಿಳಿ-ಮರಳಿನ ಸಮುದ್ರ ತೀರಗಳುಳ್ಳ ಅಂದವಾದ ಪಟ್ಟಣವಾಗಿದೆ. ಜನರು ಅತ್ಯಂತ ಸ್ನೇಹಪರರು ಮತ್ತು ಕ್ಷೇತ್ರ ಶುಶ್ರೂಷೆಯು ಆಹ್ಲಾದಕರವು. ಪ್ರತಿ ಮನೆಯಲ್ಲಿ ಕೂತುಕೊಳ್ಳುವ ಆಮಂತ್ರಣ ಸಿಗುತ್ತದೆ, ಹೆಚ್ಚಾಗಿ ಮಾವಿನ ಮರದ ನೆರಳಲ್ಲಿ ಅಥವಾ ತೆಂಗಿನ ಮರದ ಕೆಳಗೆ. ದೇವರ ಕುರಿತು ಮಾತಾಡಲು ಮತ್ತು ತಮ್ಮ ಸ್ವಂತ ಬೈಬಲನ್ನು ತಂದು ಹಿಂಬಾಲಿಸಲು ಜನರು ಇಷ್ಟಪಡುತ್ತಾರೆ.
ಬಿಲ್ ಮತ್ತು ನಾನು ಇಬ್ಬರೂ ಫ್ರೀಟೌನ್ ಬೆತೆಲ್ ಮನೆಯಲ್ಲಿ ಕೆಲಸ ಮಾಡುತ್ತೇವೆ. ನಾನು ರಿಸೆಷ್ಪನಿಸ್ಟ್ ಆಗಿ ಹಾಗೂ ಚಂದಾಗಳು ಮತ್ತು ಸಭಾ ಎಕೌಂಟುಗಳಲ್ಲಿ ಕೆಲಸ ಮಾಡುತ್ತೇನೆ. ನಮ್ಮ ಕಾರ್ಯವು ಎಲ್ಲಿ ನಿಷೇಧ ಆಗಿದೆಯೇ ಅಂಥ ದೇಶಗಳಲ್ಲಿ 16 ವರ್ಷ ಕಾರ್ಯನಡಿಸಿದ ನಂತರ, ಕೆಲಸಕ್ಕೆ ಸ್ವಾತಂತ್ರ್ಯವಿರುವ ಮತ್ತು ವೃದ್ಧಿಯಾಗುತ್ತಿರುವ ಒಂದು ದೇಶದಲ್ಲಿರುವುದು ನಿಜವಾಗಿಯೂ ಆನಂದಕರವು.
ಜೂನ್ 1991ರಲ್ಲಿ ನಾನು ಮಿಶನೆರಿ ಸೇವೆಯಲ್ಲಿ 30 ವರ್ಷಗಳನ್ನು ಮುಗಿಸಿದೆನು. ನಿಜವಾಗಿಯೂ ನನ್ನ ಅಮ್ಮ ನನ್ನ ಮುಂದೆ ಒಂದು ಸಾರ್ಥಕವಾದ ಗುರಿಯನ್ನಿಟ್ಟರು! ಅವರಿನ್ನೂ ಜೀವಿಸಿದ್ದಲ್ಲಿ, “ಉಪಕಾರ, ಅಮ್ಮಾ” ಎಂದು ಪುನಃ ಹೇಳಲು ತುಂಬಾ ಬಯಸುತ್ತಿದ್ದೆ. ಸಂತೋಷಕರವಾಗಿ, “ಉಪಕಾರ, ಅಪ್ಪಾ” ಎಂದು ನಾನಿನ್ನೂ ಹೇಳಬಲ್ಲೆನು!” (w93 3⁄1)
[Picture of Sandra Cowan on page 26]
[Picture of Sandra Cowan as child on page 27]
[ಪುಟ 28 ರಲ್ಲಿರುವ ಚಿತ್ರ]
ನ್ಯೂ ಯಾರ್ಕ್ ಅಧಿವೇಶನ, 1958
[ಪುಟ 29 ರಲ್ಲಿರುವ ಚಿತ್ರ]
35th class—July, 1960
[ಪುಟ 30 ರಲ್ಲಿರುವ ಚಿತ್ರ]
ಬಿಲ್ ಮತ್ತು ಸಾಂಡ್ರ ಕಾವನ್, 1991