ಈಜಿಪ್ಟಿನ ಕಸದ ಕುಪ್ಪೆಯಿಂದ ನಿಕ್ಷೇಪ
ಒಂದು ಕಸದ ಕುಪ್ಪೆಯಲ್ಲಿ ಅಮೂಲ್ಯವಾದ ಬೈಬಲ್ ಹಸ್ತಪ್ರತಿಗಳನ್ನು ಕಾಣಲು ನೀವು ನಿರೀಕ್ಷಿಸುವಿರೋ? ಈಜಿಪ್ಟಿನ ಮರಳತೀರದ ನಡುವೆ, ಕೊನೆಯ ಶತಮಾನದ ಅಂತ್ಯದಲ್ಲಿ, ಸಂಭವಿಸಿದ್ದು ಅದೇ. ಹೇಗೆ?
1778ರಿಂದ ಆರಂಭಿಸಿ ಮತ್ತು 19ನೆಯ ಶತಮಾನದ ಕೊನೆಯ ತನಕ ಮುಂದುವರಿದು, ಹಲವಾರು ಪಪೈರಸ್ ಗ್ರಂಥಭಾಗಗಳು ಅಕಸ್ಮಾತ್ತಾಗಿ ಈಜಿಪ್ಟಿನಲ್ಲಿ ಸಂಶೋಧಿಸಲ್ಪಟ್ಟವು. ಒಂದು ನೂರು ವರ್ಷಕ್ಕೆ ಹಿಂದೆ ಅಲ್ಲಿ ಕ್ರಮಪ್ರಕಾರವಾದ ಆನ್ವೇಷಣೆಯು ನಡೆದದ್ದಾದರೂ ಬಹು ಕೊಂಚವೇ. ಅಷ್ಟರೊಳಗೆ ಪುರಾತನ ಹಸ್ತಪ್ರತಿಗಳ ಒಂದು ಏಕಪ್ರಕಾರವಾದ ಪ್ರವಾಹವು ನಾಡಿಗ ಫೆಲಾಹಿನ್ರಿಂದ ಕಂಡುಹಿಡಿಯಲ್ಪಡುತ್ತಾ ಇದ್ದವು, ಮತ್ತು ವೇಳೆ ಮೀರಿಹೋಗುವ ಮುಂಚೆ ಒಂದು ಸಂಶೋಧನಾ ತಂಡವನ್ನು ಕಳುಹಿಸುವ ಅಗತ್ಯವನ್ನು ಬ್ರಿಟಿಷ್-ನಿಯೋಜಿತ ಈಜಿಪ್ಟ್ ಎಕ್ಸ್ಪರ್ಲೇಶನ್ ಫಂಡ್ ಅರಿತುಕೊಂಡಿತು. ಅವರು ಇಬ್ಬರು ಆಕ್ಸ್ಫರ್ಡ್ ಪಂಡಿತರಾದ ಬರ್ನಾರ್ಡ್ ಪಿ. ಗ್ರೆನ್ಫೆಲ್ ಮತ್ತು ಆರ್ಥರ್ ಎಸ್. ಹಂಟ್ ಇವರನ್ನು ಆರಿಸಿಕೊಂಡರು, (ಮೇಲೆ ತೋರಿಸಿದ) ಫೈಯುಮ್ ಜಿಲ್ಲೆಯಲಿನ್ಲ ವ್ಯವಸಾಯ ಪ್ರದೇಶದ ದಕ್ಷಿಣದ ಕ್ಷೇತ್ರವನ್ನು ಅನ್ವೇಷಿಸುವ ಅನುಮತಿಯನ್ನು ಅವರು ಪಡೆದರು.
ಬೆನೆಸ್ಸ ಎಂದು ಜಾಗವು ಗ್ರೆನ್ಫೆಲ್ಲರಿಗೆ ನಿರೀಕ್ಷಣೆಗೆ ಆಧಾರಕೊಡುವುದಾಗಿ ಕಂಡಿತು ಯಾಕಂದರೆ ಅದರ ಪುರಾತನ ಗ್ರೀಕ್ ಹೆಸರಾದ ಆಕ್ಸಿರಿಂಕಸ್ನ ಕಾರಣದಿಂದ. ಈಜಿಪ್ಟಿನಲ್ಲಿ ಕ್ರೈಸ್ತತ್ವದ ಒಂದು ಕೇಂದ್ರವಾಗಿದ್ದ ಆಕ್ಸಿರಿಂಕಸ್ ಸಾ.ಶ. ನಾಲ್ಕನೆಯ ಮತ್ತು ಐದನೆಯ ಶತಮಾನಗಳಲ್ಲಿ ಒಂದು ಪ್ರಧಾನ ಸ್ಥಳವಾಗಿತ್ತು. ಅನೇಕ ಆರಂಭದ ಸಂನ್ಯಾಸಿ ಮಠಗಳು ಹತ್ತಿರದಲ್ಲೇ ಕಂಡುಹಿಡಿಯಲ್ಪಟ್ಟಿದ್ದವು ಮತ್ತು ಪ್ರಾಂತ್ಯಗಳಿದ್ದ ಈ ಊರಿನ ಭಗ್ನಾವಶೇಷಗಳು ವಿಸ್ತಾರ್ಯವಾಗಿದ್ದವು. ಅಲ್ಲಿ ಕ್ರೈಸ್ತ ಸಾಹಿತ್ಯದ ಅವಶೇಷಗಳನ್ನು ಕಾಣಲು ಗ್ರೆನ್ಫೆಲ್ ನಿರೀಕ್ಷಿಸಿದ್ದರು, ಆದರೆ ಧಪನಭೂಮಿ ಮತ್ತು ಮುರುಕು ಮನೆಗಳ ಸಂಶೋಧನೆಯಿಂದ ಏನೂ ದೊರೆಯಲಿಲ್ಲ. ಊರಿನ ಕಸದ ಕುಪ್ಪೆಗಳು ಮಾತ್ರವೇ ಉಳಿದಿದ್ದವು, ಅವುಗಳಲ್ಲಿ ಕೆಲವು 9 ಮೀಟರ್ ಎತ್ತರಕ್ಕೆ ಬೆಳೆದಿದ್ದವು. ಅಲ್ಲಿ ಪಪೈರಿಗಾಗಿ ಅಗೆಯುವುದು ತಾನೇ ಬಹಳಮಟ್ಟಿಗೆ ಸೋಲನ್ನೊಪ್ಪುವಂತೆ ತೋರಿತ್ತು. ಆದರೂ ಸಂಶೋಧಕರು ಪ್ರಯತ್ನಿಸಲು ನಿರ್ಧರಿಸಿದರು.
ಗುಪ್ತನಿಕ್ಷೇಪ
ಜನವರಿ 1897ರಲ್ಲಿ ಒಂದು ಪರೀಕ್ಷಾ ಪ್ರಯೋಗದ ಕಂದಕವನ್ನು ತೋಡಲಾಯಿತು, ಮತ್ತು ಕೆಲವೇ ತಾಸುಗಳೊಳಗೆ ಪುರಾತನ ಪಪೈರಸ್ ಸಾಮಗ್ರಿಗಳು ಅಲ್ಲಿ ಕಂಡುಬಂದವು. ಅವುಗಳಲ್ಲಿ ಪತ್ರಗಳು, ಕರಾರುಗಳು ಮತ್ತ ಅಧಿಕೃತ ದಸ್ತಾವೇಜುಗಳು ಸೇರಿದ್ದವು. ಗಾಳಿಗೀಡಾದ ಮರಳು ಅವುಗಳನ್ನು ಮುಚ್ಚಿತ್ತು, ಮತ್ತು ಒಣಹವೆಯು ಸುಮಾರು 2,000 ವರ್ಷಗಳಿಂದ ಅವನ್ನು ಕಾಪಾಡಿ ಉಳಿಸಿತ್ತು.
ಬರೇ ಮೂರು ತಿಂಗಳುಗಳ ಅವಧಿಯೊಳಗೆ ಬಹಳಮಟ್ಟಿಗೆ ಎರಡು ಟನ್ನಷ್ಟು ಪಪೈರಿ ಬರಹಗಳನ್ನು ಆಕ್ಸಿರಿಂಕಸ್ನಿಂದ ಅಗೆದು ತೆಗೆಯಲಾಯಿತು. ಇಪ್ಪತ್ತೈದು ದೊಡ್ಡ ಪೆಟ್ಟಿಗೆಗಳನ್ನು ತುಂಬಿಸಿ ಹಿಂದೆ ಇಂಗ್ಲೆಂಡಿಗೆ ಹಡಗದ ಮೂಲಕ ಕಳುಹಿಸಿದರು. ಮತ್ತು ಮುಂದಿನ ಹತ್ತು ವರ್ಷಗಳ ಪ್ರತಿಯೊಂದು ಚಳಿಗಾಲದಲ್ಲಿ, ಆ ಇಬ್ಬರು ಧೀರ ಪಂಡಿತರು ತಮ್ಮ ಸಂಗ್ರಹಣವನ್ನು ಹೆಚ್ಚಿಸಲು ಈಜಿಪ್ಟಿಗೆ ಮರಳುತ್ತಿದ್ದರು.
ಒಂದು ಸಂದರ್ಭದಲ್ಲಿ ಟೆಪ್ಟ್ಯುನಿಸ್ನ ಒಂದು ಸಮಾಧಿಯನ್ನು ಅಗೆಯುತ್ತಿದ್ದಾಗ, ಮೊಸಳೆಗಳ ಶುಷ್ಕದೇಹಗಳಲ್ಲದೆ ಬೇರೆ ಏನೂ ಅವರಿಗೆ ದೊರೆಯಲಿಲ್ಲ. ಆಶಾಭಂಗಗೊಂಡ ಒಬ್ಬ ಕೆಲಸಗಾರನು ಒಂದನ್ನು ನೆಲಕ್ಕೆ ಹೊಡೆದು ಚೂರುಚೂರು ಮಾಡಿದನು. ಪಪೈರಸ್ನ ಹಾಳೆಗಳಲ್ಲಿ ಅದು ಸುತ್ತಲ್ಪಟ್ಟಿದದ್ದನ್ನು ಕಂಡಾಗ ಅವನಿಗೆ ಆಶ್ಚರ್ಯ. ಬೇರೆ ಮೊಸಳೆಗಳೂ ಅದೇ ರೀತಿ ಇದ್ದದ್ದನ್ನು ಅವರು ಕಂಡುಕೊಂಡರು ಮತ್ತು ಕೆಲವು ಮೊಸಳೆಗಳ ಗಂಟಲೊಳಗೂ ಪಪೈರಸ್ನ ಹಾಳೆಗಳು ತುರುಕಿಸಲ್ಪಟ್ಟಿದ್ದವು. ವ್ಯಾಪಾರದ ಲೆಕ್ಕಪತ್ರಗಳು ಮತ್ತು ಖಾಸಗಿ ಓಲೆಗಳೊಂದಿಗೆ ಮಿಶ್ರಿತವಾಗಿದ್ದ ರಾಜಾಜ್ಞೆಗಳು ಮತ್ತು ಕರಾರುಪತ್ರಗಳೊಂದಿಗೆ ಪುರಾತನ ಸಾಂಸ್ಕೃತಿಕ ಸಾಹಿತ್ಯದ ಬರಹಗಳ ಅವಶೇಷಗಳು ಸಂಶೋಧಿಸಲ್ಪಟ್ಟವು.
ಈ ಎಲ್ಲಾ ದಸ್ತಾವೇಜುಗಳ ಮೂಲ್ಯತೆಯೇನು? ಅವು ಬಹು ಅಭಿರುಚಿಯುಳ್ಳವುಗಳಾಗಿ ರುಜುವಾದವು, ಯಾಕಂದರೆ ಅವುಗಳಲ್ಲಿ ಹೆಚ್ಚಿನವು ಸಾಮಾನ್ಯ ಜನರಿಂದ ಆ ಕಾಲದ ಸಾಮಾನ್ಯ ಗ್ರೀಕ್ ಭಾಷೆಯಾದ ಕೊಯಿನಿಯಲ್ಲಿ ಬರೆಯಲ್ಪಟ್ಟಿತ್ತು. ಅವರು ಉಪಯೋಗಿಸಿದ್ದ ಅನೇಕ ಶಬ್ದಗಳು ಬೈಬಲಿನ ಗ್ರೀಕ್ ಶಾಸ್ತ್ರವಾದ “ಹೊಸ ಒಡಂಬಡಿಕೆ”ಯಲ್ಲಿ ಸಹ ಕಂಡುಬರುವುದರಿಂದ, ಶಾಸ್ತ್ರಗ್ರಂಥದ ಭಾಷೆಯು, ಕೆಲವು ಪಂಡಿತರು ಸೂಚಿಸಿದ ಪ್ರಕಾರ, ಒಂದು ವಿಶೇಷ ಬೈಬಲ್ ಗ್ರೀಕ್ ಅಲ್ಲ, ಬದಲಾಗಿ ಜನಸಾಮಾನ್ಯರ ಸಾಮಾನ್ಯ ಭಾಷೆಯೆಂದು ಥಟ್ಟನೇ ತೋರಿಬಂತು. ಹೀಗೆ ದಿನನಿತ್ಯದ ಪರಿಸ್ಥಿತಿಗಳಲ್ಲಿ ಶಬ್ದಗಳು ಉಪಯೋಗಿಸಲ್ಪಟ್ಟ ರೀತಿಯನ್ನು ಹೋಲಿಸುವ ಮೂಲಕ, ಕ್ರೈಸ್ತ ಗ್ರೀಕ್ ಶಾಸ್ತ್ರದಲ್ಲಿ ಅವುಗಳ ಅರ್ಥಗಳ ಹೆಚ್ಚು ಸ್ಪಷ್ಟವಾಗಿದ ತಿಳುವಳಿಕೆಯು ಹೊರಬಂತು.
ಬೈಬಲ್ ಹಸ್ತಪ್ರತಿಗಳು
ಬೈಬಲ್ ಹಸ್ತಪ್ರತಿಗಳ ಅವಶೇಷಗಳು ಸಹಾ ಸಿಕ್ಕಿದವು, ಮತ್ತು ಇವು ಹೆಚ್ಚಾಗಿ ಯಾವುದೇ ಅಲಂಕಾರವಿಲ್ಲದೆ ಒರಟು ಲಿಪಿಯಲ್ಲಿ ಮತ್ತು ನ್ಯೂನ ದರ್ಜೆಯ ಸಾಮಗ್ರಿಯ ಮೇಲೆ ಬರೆಯಲ್ಪಟ್ಟದ್ದಾಗಿದ್ದು, ಜನ ಸಾಮಾನ್ಯರ ಬೈಬಲನ್ನು ಪ್ರತಿನಿಧಿಸಿತ್ತು. ದೊರೆತ ಕೆಲವು ಹಸ್ತಪ್ರತಿಗಳನ್ನು ನಾವು ಪರೀಕ್ಷಿಸೋಣ.
ದೊಡ್ಡ ಅಕ್ಷರಗಳಲ್ಲಿ, ಸಾ.ಶ. ಮೂರನೆಯ ಶತಮಾನದಲ್ಲಿ ಬರೆಯಲ್ಪಟ್ಟ ಮತ್ತಾಯನ ಸುವಾರ್ತೆಯ ಮೊದಲನೆ ಅಧ್ಯಾಯ, ವಚನಗಳು 1 ರಿಂದ 9, 12, ಮತ್ತು 14 ರಿಂದ 20ರ ಒಂದು ಪ್ರತಿಯನ್ನು ಹಂಟ್ ಕಂಡುಹಿಡಿದರು. ಅದು ಆಗಿ ಪರಿಣಮಿಸಿತು, ಹಲವಾರು ಸ್ಥಳಗಳಿಂದ ಬಂದ ಪಪೈರಸ್ ಮೂಲ ಗ್ರಂಥಪಾಠದ ಕ್ಯಾಟ್ಲಾಗ್ನಲ್ಲಿ ಮೊದಲನೆಯ ವಿಷಯವಾಯಿತು, ಈಗ ಕ್ರೈಸ್ತ ಗ್ರೀಕ್ ಶಾಸ್ತ್ರದ ಇಂಥಾ ಒಂದು ನೂರರಷ್ಟು ಹೆಚ್ಚು ಹಸ್ತಪ್ರತಿಗಳು ಅಥವಾ ಹಸ್ತಪ್ರತಿಗಳ ಅಂಶಗಳು ದೊರೆಯುತಲ್ತಿವೆ. ಹಂಟ್ ಕಂಡುಕೊಂಡ ಈ ಕೆಲವೇ ವಚನಗಳ ಉಪಯೋಗವಾದರೂ ಏನು? ಬರಹಗಳ ಗುಣಲಕ್ಷಣವು ಸ್ಪಷ್ಟವಾಗಿಗಿ ಅದನ್ನು ಸಾ.ಶ. ಮೂರನೆಯ ಶತಮಾನದ ತಾರೀಕಿಗೆ ಹಾಕಿದೆ, ಮತ್ತು ಅದರ ಪಾಠಾಂತರ ಪರೀಕ್ಷೆಯು, ಆಗ ತೀರಾ ಹೊಸತಾಗಿ ನಡಿಸಲ್ಪಟ್ಟಿದ್ದ ವೆಸ್ಕಾಟ್ ಮತ್ತು ಹೊರ್ಟ್ ಇವರ ಮೂಲಪಾಠಕ್ಕೆ ಸಹಮತದಲ್ಲಿತ್ತೆಂದು ತೋರಿಸಿದೆ. ಈಗ ಅಮೆರಿಕದ ಪೆನ್ಸಿಲ್ವೇನಿಯದ ಫಿಲೆಡೆಲ್ಪಿಯದಲ್ಲಿ ಯೂನಿರ್ವಸಿಟಿ ಮ್ಯುಸೀಯಮ್ನಲ್ಲಿದೆ.
ಒಂದು ಕೋಡೆಕ್ಸ್ ಅಥವಾ ಪುಸ್ತಕದ ಪಪೈರಸ್ ಹಾಳೆಯ ಎಡಗಡೆಯ ಎಲೆಯಲ್ಲಿ ಯೋಹಾನ ಆಧ್ಯಾಯ 1ರ ಭಾಗಗಳು ಮತ್ತು ಬಲಗಡೆಯ ಎಲೆಯಲ್ಲಿ ಯೋಹಾನ 20ನೆಯ ಅಧ್ಯಾಯದ ಭಾಗಗಳಿವೆ. ಕಾಣೆಯಾಗಿರುವ ಭಾಗಗಳ ಪುನರ್ರಚನೆಯು ಇಡೀ ಸುವಾರ್ತೆಯಲ್ಲಿ ಮೂಲತಃ 25 ಹಾಳೆಗಳಿದ್ದವೆಂದೂ ಮತ್ತು ಆರಂಭದ ಸಮಯದಿಂದ ಅವುಗಳಲ್ಲಿ 21ನೆಯ ಅಧ್ಯಾಯವೂ ಸೇರಿರಬೇಕೆಂದು ಸೂಚಿಸುತ್ತವೆ. ಅದರ ನಂಬ್ರ ಆಗಿತ್ತು, ಅದು ಸಾ.ಶ. ಮೂರನೆಯ ಶತಕದ್ದು, ಮತ್ತು ಅದೀಗ ಇಂಗ್ಲೆಂಡಿನ ಲಂಡನ್ನಲ್ಲಿ ಬ್ರಿಟಿಷ್ ಲೈಬ್ರೆರಿಯಲ್ಲಿ ಇದೆ.
ರೋಮಾಪುರ 1:1-7 ಅಡಕವಾಗಿರುವ ಒಂದು ಅವಶೇಷವು ಎಷ್ಟು ದೊಡ್ಡ ಒರಟು ಅಕ್ಷರಗಳಿಂದ ಬರೆಯಲ್ಪಟ್ಟಿತ್ತೆಂದರೆ ಕೆಲವು ಪಂಡಿತರು ಅದನ್ನು ಪ್ರಾಯಶಃ ಶಾಲಾ ಬಾಲಕನ ಅಭ್ಯಾಸಪಾಠವಿರಬೇಕೆಂದು ನೆನಸಿದ್ದರು. ಅದೀಗ ನಂಬ್ರವನ್ನು ಪಡೆದದೆ ಮತ್ತು ಅದು ಸಾ.ಶ. ನಾಲ್ಕನೆಯ ಶತಮಾನದ ಕಾಲಾವಧಿಯದ್ದು.
ಸಿಕ್ಕಿದ ಒಂದು ಹೆಚ್ಚು ದೊಡ್ಡ ಹಸ್ತಪ್ರತಿಯಲ್ಲಿ ಇಬ್ರಿಯರಿಗೆ ಬರೆದ ಪತ್ರಿಕೆಯ ಸುಮಾರು ಮೂರನೆಯ ಒಂದಂಶವು ಅಡಕವಾಗಿದೆ. ಎದುರಲ್ಲಿ ರೋಮನ್ ಇತಿಹಾಸಕಾರ ಲಿವಿಯ್ವ ಸಾಂಸ್ಕೃತಿಕ ಬರಹಗಳಿದ್ದ ಒಂದು ಸುತ್ತು [ಸುರುಳಿ] ಯ ಹಿಂದುಗಡೆಯಲ್ಲಿ ಅದು ನಕಲು ಮಾಡಲ್ಪಟ್ಟಿತ್ತು. ಎದುರಲ್ಲಿ ಮತ್ತು ಹಿಂದುಗಡೆ ಅಂಥ ಭಿನ್ನವಾದ ಸಮಾಚಾರವೇಕೆ? ಆ ಕಾಲದಲ್ಲಿ ಬರೆಯುವ ಸಾಮಗ್ರಿಗಳ ಅಭಾವ ಮತ್ತು ಬೆಲೆಯಿಂದಾಗಿ ಹಳೆಯ ಪಪೈರಿಗಳನ್ನು ದುಂದು ಮಾಡ ಸಾಧ್ಯವಿರಲಿಲ್ಲ. ಈಗ ನಂಬ್ರವನ್ನು ಪಡೆದಿರುವ ಇದು ಸಾ.ಶ, ಮೂರನೆಯ ಮತ್ತು ನಾಲ್ಕನೆಯ ಶತಮಾನದ ಕಾಲಾವಧಿಯದ್ದು.
ರೋಮಾಪುರ ಅಧ್ಯಾಯ 8 ಮತ್ತು 9 ರ ಅಂಶಗಳುಳ್ಳ ಒಂದು ಪಪೈರಸ್ ಹಾಳೆಯು ಅತ್ಯಂತ ಚಿಕ್ಕ ಅಕ್ಷರಗಳಲ್ಲಿ ಬರೆಯಲ್ಪಟ್ಟಿದ್ದು ಸುಮಾರು 11.5 ಸೆಂಟಿಮೀಟರ್ ಎತ್ತರ ಮತ್ತು ಬರೇ 5 ಸೆಂಟಿಮೀಟರ್ ಅಗಲವುಳ್ಳದ್ದು. ಹೀಗಿರಲಾಗಿ, ಶಾಸ್ತ್ರದ ಪಾಕೆಟ್-ಸೈಜ್ ಆವೃತ್ತಿಗಳು ಸಾ.ಶ. ಮೂರನೆಯ ಶತಮಾನದಲ್ಲೂ ಅಸ್ತಿತ್ವದಲ್ಲಿದ್ದವೆಂದು ತೋರಿಬರುತ್ತದೆ. ಇದು ಆಗಿ ಪರಿಣಮಿಸಿತು ಮತ್ತು ಕೋಡೆಕ್ಸ್ ವ್ಯಾಟಿಕನಸ್ನೊಂದಿಗೆ ಸಾಮಾನ್ಯವಾಗಿ ಸಹಮತದಲ್ಲಿದೆ.
ಒಂದು ಗ್ರೀಕ್ ಸೆಪ್ಟ್ಯುಜಿಂಟ್ ಕೋಡೆಕ್ಸ್ನಲ್ಲಿ ಆದಿಕಾಂಡದ ಆರು ಅಧ್ಯಾಯಗಳ ಭಾಗಗಳು ಅಡಕವಾಗಿವೆ. ಈ ಕೋಡೆಕ್ಸ್ ಮಹತ್ವವುಳ್ಳದ್ದು ಯಾಕಂದರೆ ಸಾ.ಶ. ಎರಡನೆಯ ಅಥವಾ ಮೂರನೆಯ ಶತಮಾನಗಳ ಅದರ ಕಾಲಾವಧಿಯ ಕಾರಣ, ಮತ್ತು ಈ ಅಧ್ಯಾಯಗಳು ಕೋಡೆಕ್ಸ್ ವ್ಯಾಟಿಕನಸ್ನಲ್ಲಿ ಲೋಪಗೊಂಡಿರುವ ಮತ್ತು ಕೋಡೆಕ್ಸ್ ಸೈನೈಟಿಕಸ್ನಲ್ಲಿ ಭ್ರಂಶಗೊಂಡಿರುವ ಕಾರಣ.. ಪಪೈರಸ್ 656 ಎಂದು ನಂಬ್ರ ಕೊಡಲ್ಪಟ್ಟಿದ್ದು, ಈ ಹಾಳೆಗಳು ಈಗ ಇಂಗ್ಲೆಂಡಿನ ಆಕ್ಸ್ಫರ್ಡ್ನ ಬಾಡಿಯ್ಲನ್ ಲೈಬ್ರೆರಿಯಲ್ಲಿವೆ.
ಈ ಎಲ್ಲಾ ಅವಶೇಷಗಳು ಅಸ್ತಿತ್ವದಲ್ಲಿರುವ ನಮ್ಮ ಆರಂಭದ ಹಸ್ತಪ್ರತಿಗಳಿಗಿಂತ ಹೆಚ್ಚೇನೂ ವೈವಿಧ್ಯತೆಗಳನ್ನು ತೋರಿಸುವುದಿಲ್ಲ, ಹೀಗೆ ಬೈಬಲ್ ಮೂಲಪಾಠಗಳು ಈಜಿಪ್ಟಿನ ಆ ದೂರದ ಸ್ಥಳದಲ್ಲಿ ಸಾಮಾನ್ಯ ಜನರ ನಡುವೆ ಆ ಅರಂಭದ ಸಮಯದಲ್ಲೂ ಸಂಚಲನೆಯಲ್ಲಿತ್ತೆಂಬದನ್ನು ದೃಢಪಡಿಸುತ್ತವೆ. ದೇವರ ವಾಕ್ಯದ ನಂಬಲರ್ಹತೆ ಮತ್ತು ನಿಷ್ಕ್ರಷತ್ಟೆಯನ್ನು ಸಹ ಅವು ದೃಢೀಕರಿಸುತ್ತವೆ. (w92 2/15)
[ಪುಟ 27 ರಲ್ಲಿರುವ ಚಿತ್ರ]
ಯೋಹಾನ 1 ನೆಯ ಅಧ್ಯಾಯದ ಭಾಗಗಳು ಅಡಕವಾಗಿರುವ ಫೈಯುಮ್ನ ಪಪೈರಿ
[ಕೃಪೆ]
By permission of the British Library
[ಪುಟ 26 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.