ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 3/15 ಪು. 30-31
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1992
  • ಅನುರೂಪ ಮಾಹಿತಿ
  • ದೇವರಿಂದ ಬೋಧಿಸಲ್ಪಟ್ಟವರಂತೆ ನಡೆಯಿರಿ
    ಕಾವಲಿನಬುರುಜು—1994
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಆತ್ಮಿಕವಾಗಿ ಬಲವಾಗಿರುವ ಕುಟುಂಬವನ್ನು ಕಟ್ಟುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಹೆತ್ತವರೇ, ನಿಮ್ಮ ಮಾದರಿಯು ಏನನ್ನು ಕಲಿಸುತ್ತದೆ?
    ಕಾವಲಿನಬುರುಜು—1999
ಕಾವಲಿನಬುರುಜು—1992
w92 3/15 ಪು. 30-31

ವಾಚಕರಿಂದ ಪ್ರಶ್ನೆಗಳು

▪ ಧಾರ್ಮಿಕ ಶಿಕ್ಷಣವು ಕಡ್ಡಾಯವಾಗಿರುವ ಒಂದು ಶಾಲೆಯನ್ನು ತಮ್ಮ ಮಗುವು ಹಾಜರಾಗಲೆ ಬೇಕಾದರೆ ಒಂದು ಕ್ರೈಸ್ತ ಕುಟುಂಬವು ಏನು ಮಾಡಬೇಕು?

ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಸುಳ್ಳು ಧರ್ಮದ ಬೋಧನೆಗಳ ಸಂಪರ್ಕಕ್ಕೆ ತರಲು ಆಸಕ್ತರಿಲ್ಲ. ಆದರೆ ಮಕ್ಕಳು ಧಾರ್ಮಿಕ ಕ್ರಿಯೆಗಳಲ್ಲಿ ಅಥವಾ ಸಂಸ್ಕಾರಗಳಲ್ಲಿ ಪಾಲಿಗರಾಗದಿದ್ದರೂ, ಎಲ್ಲಿ ಧಾರ್ಮಿಕ ಶಿಕ್ಷಣವು ಕಲಿಸಲ್ಪಡುತ್ತದೊ ಅಲ್ಲಿರಲು ನಿರಾಕರಿಸಲಾಗದ ಪರಿಸ್ಥಿತಿಯ ಕೆಳಗೆ ಅವರಿರಬಹುದು.

ದೇವರ ಸ್ನೇಹಿತನಾದ ಅಬ್ರಹಾಮನು ಮಕ್ಕಳ ಧಾರ್ಮಿಕ ಶಿಕ್ಷಣದ ಬಗ್ಗೆ ಒಳ್ಳೆಯ ಮಾದರಿಯನ್ನಿಟ್ಟನು. ಎಲ್ಲಿ ಧಾರ್ಮಿಕ ತಪ್ಪುಗಳು ಮತ್ತು ಅಸಹ್ಯವಾದ “ಪವಿತ್ರ” ಪದ್ಧತಿಗಳಿಂದ ಅವರು ಸುತ್ತುವರಿಯಲ್ಪಟ್ಟಿದ್ದರೊ ಆ ಕಾನಾನಿನಲ್ಲಿ ಅವನು ತನ್ನ ಕುಟುಂಬವನ್ನು ಬೆಳೆಸಿದ್ದನು. (ವಿಮೋಚನಕಾಂಡ 34:11-15ಕ್ಕೆ ಹೋಲಿಸಿ; ಯಾಜಕಕಾಂಡ 18:21-30; ಧರ್ಮೋಪದೇಶಕಾಂಡ 7:1-5, 25, 26; 18:9-14.) ಹೇಗಿದ್ದರೂ, ತನ್ನ ಕುಟುಂಬಕ್ಕಾಗಿ ಅವನೇ ಧಾರ್ಮಿಕ ಬೋಧಕನಾಗಿದ್ದನು. ಅಬ್ರಹಾಮನು “ತನ್ನ ಪುತ್ರಪೌತ್ರರಿಗೆ—ನೀವು ನ್ಯಾಯ ನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸು”ವನೆಂಬ ಆತ್ಮವಿಶ್ವಾಸವು ದೇವರಿಗಿತ್ತು.—ಆದಿಕಾಂಡ 18:19.

ಯುವಕನಾಗಿರುವಾಗ ಯೇಸುವು ಸಹಾ ಸತ್ಯಾರಾಧನೆಯ ಕುರಿತಾದ ಕುಟುಂಬ ಮತ್ತು ಸಭಾ ಬೋಧನೆಯಿಂದ ಪ್ರಯೋಜನ ಹೊಂದಿದ್ದನು. ಹೀಗೆ ಅವನು “ಜ್ಞಾನದಲ್ಲಿಯೂ ದೇಹ ಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು. ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.”—ಲೂಕ 2:52.

ಭೂಮಿಯ ಹೆಚ್ಚಿನ ಭಾಗಗಳಲ್ಲಿ, ಕ್ರೈಸ್ತ ಯುವಕರು ಸಾರ್ವಜನಿಕ ಶಾಲೆಗಳಲ್ಲಿ ತಮ್ಮ ಐಹಿಕ ಶಿಕ್ಷಣವನ್ನು ಪಡೆಯುತ್ತಾರೆ. ಕಲಿಸಲ್ಪಡುವ ಎಲ್ಲವೂ ಬೈಬಲಿನೊಂದಿಗೆ ಪೂರ್ಣ ಸಹಮತದಿಂದಿಲ್ಲ ಮತ್ತು ಸ್ಥಾಪಿತ ಸತ್ಯವೂ ಅಲ್ಲ. ಉದಾಹರಣೆಗೆ, ಕ್ರೈಸ್ತ ಯುವಕರ ಅನೇಕ ಸಂತತಿಗಳು ವಿಜ್ಞಾನ ಮತ್ತು ಜೀವವಿಜ್ಞಾನದ ವರ್ಗಗಳನ್ನು ತಮ್ಮ ಸಾಮಾನ್ಯ ಪಾಠಕ್ರಮದ ವರ್ಗವಾಗಿ ಹಾಜರಾಗಿದ್ದಾರೆ. ಹೀಗೆ ಅವರಲ್ಲಿ ಹೆಚ್ಚಿನವರು ವಿಕಾಸವಾದದ ಇರುವಿಕೆಯ ಕಲ್ಪನೆಗಳಿಗೆ ಮತ್ತು ಭೂಮಿಯಲ್ಲಿ ಜೀವದ “ನೈಸರ್ಗಿಕ” ಮೂಲಗಳ ಕುರಿತಾದ ವೀಕ್ಷಣೆಗಳಿಗೆ ಒಡ್ಡಲ್ಪಟ್ಟಿರುತ್ತಾರೆ.

ಈ ಒಡ್ಡಲ್ಪಡುವಿಕೆಯು ಈ ಕ್ರೈಸ್ತ ಯುವಕರನ್ನು ನಾಸ್ತಿಕ ವಿಕಾಸವಾದದ ಅವಲಂಬಿಗಳಾಗಿ ಮಾಡಲಿಲ್ಲ. ಯಾಕೆ? ಯಾಕಂದರೆ ಮನೆಯಲ್ಲಿ ಮತ್ತು ಕ್ರೈಸ್ತ ಕೂಟಗಳಲ್ಲಿ, ದೇವರ ಪ್ರೇರಿತ ವಾಕ್ಯದ ಆಧಾರದಿಂದ ಈ ಮೊದಲೆ ಸ್ಪಷ್ಟವಾಗಿದ ಮಾಹಿತಿಯನ್ನು ಅವರು ಪಡೆದಿರುವರು. ಇದು ಅವರನ್ನು ತಮ್ಮ ‘ಜ್ಞಾನೇಂದ್ರಿಯವನ್ನು ಇದು ಒಳ್ಳೇದು ಅದು ಕೆಟ್ಟದು ಎಂಬ ಭೇದವನ್ನು’ ಅರಿತುಕೊಳ್ಳುವಂತೆ ತರಬೇತು ಮಾಡಲು ಸಹಾಯ ಮಾಡಿದೆ. (ಇಬ್ರಿಯ 5:14) ಅನೇಕ ಹೆತ್ತವರು ತಮ್ಮ ಮಕ್ಕಳೊಂದಿಗೆ ವಿಕಾಸವಾದದ ಸಮತೆಯುಳ್ಳ ಆವರಿಸುವಿಕೆಯನ್ನು, ಲೈಫ್‌—ಹೌ ಡಿಡ್‌ ಇಟ್‌ ಗೆ ಹಿಯರ್‌? ಬೈ ಎವಲ್ಯೂಷನ್‌ ಆರ್‌ ಕ್ರಿಯೇಶನ್‌?a ಎಂಬ ನಂಬಿಕೆ-ವರ್ಧಕ ಪುಸ್ತಕದ ಅಭ್ಯಾಸದಿಂದ ನಡಿಸಿರುತ್ತಾರೆ. ಹೀಗೆ ಸನ್ನದ್ಧರಾದ ಈ ಶಾಲಾ ಮಕ್ಕಳು ವಿಕಾಸವಾದದ ಕುರಿತು ಪಾಠಕ್ರಮದ ಬೋಧನೆಯನ್ನು ನಂಬಲರ್ಹವೆಂದು ಸ್ವೀಕರಿಸಲಿಲ್ಲ. ಆದರೂ ತಮ್ಮ ವರ್ಗದ ಪ್ರತಿಕ್ರಿಯೆಗಳಲ್ಲಿ ಮತ್ತು ಪರೀಕ್ಷೆಗಳಲ್ಲಿ, ಅವರು ಗಮನಕೊಡುತ್ತಾರೆ ಮತ್ತು ನೀಡಲ್ಪಟ್ಟ ವಿವರಗಳನ್ನು ಕಲಿಯಶಕ್ತರು ಎಂದು ಅವರು ತೋರಿಸಶಕ್ತರಾದರು. ಮಾನವ ನಿರ್ಮಾಣಿಕನಿಂದ ಬೈಬಲಿನಲ್ಲಿ ನೀಡಲ್ಪಟ್ಟ ನಿಜತ್ವಗಳ ಹೊಂದಿಕೆಯಲ್ಲಿ ಅನ್ಯ ವಿವರಣೆಗಳನ್ನು ವಿವರಿಸುವ ಸಂದರ್ಭವೂ ಕೆಲವರಿಗೆ ಸಿಕ್ಕಿದವು.—1 ಪೇತ್ರ 3:15.

ಆದರೆ ಪ್ರಧಾನ ಸ್ಥಳೀಕ ಧರ್ಮದ ಅಥವಾ ಇತರ ಸಾಮಾನ್ಯ ಧರ್ಮ ಶಿಕ್ಷಣಕ್ಕೆ ಮೀಸಲಾದ ಕ್ಲಾಸುಗಳ ಕುರಿತಾಗಿ ಏನು?

ಅಂಥ ಬೋಧನೆಯು ಕೇವಲ ಸಮಾಚಾರವಾಗಿ ತಾಟಸ್ಥ್ಯದಿಂದ ನೀಡಲ್ಪಡುವದು ಅಸಂಭವನೀಯ. ಶಿಕ್ಷಕನು ಆ ಧರ್ಮ ಪಾಲಕನೂ ಆಗಿರಬಹುದು ಮತ್ತು ಹೀಗೆ ವಿಧ್ಯಾರ್ಥಿಗಳ ಮನಸ್ಸನ್ನು ಮತ್ತು ಹೃದಯವನ್ನು ಪ್ರಭಾವಿಸಲು ಪ್ರಯತ್ನಿಸಲೂ ಬಹುದು. ಆದ್ದರಿಂದ ಯೆಹೋವನ ಸಾಕ್ಷಿಗಳು ತಮ್ಮ ಮಕ್ಕಳನ್ನು ಧಾರ್ಮಿಕ ಶಿಕ್ಷಣದ ವರ್ಗಗಳಿಂದ ವಿನಾಯಿತಿ ಪಡೆಯುವಂತೆ ಇಷ್ಟೈಸಬಹುದು. ಇದು ಶಾಲಾ ಸಮಯವನ್ನು ಅಧಿಕ ಉಪಯುಕ್ತವಾಗಿ ಬೇರೆ ವರ್ಗಗಳಿಗಾಗಿರುವ ನೇಮಕಗಳನ್ನು ಮುಗಿಸಲು ಅಥವಾ ಶಾಲಾ ಲೈಬ್ರೆರಿಯಲ್ಲಿ ಅಧ್ಯಯನ ಮಾಡಲು ಅವರ ಮಕ್ಕಳನ್ನು ಶಕ್ತರನ್ನಾಗಿ ಮಾಡಬಲ್ಲದು.

ಕೆಲವು ಸ್ಥಳಗಳಲ್ಲಾದರೊ ಅಂಥ ವಿನಂತಿಗಳು ಅಲ್ಲಗಳೆಯಲ್ಪಟ್ಟಿವೆ. ಶಾಲೆ ಅಥವಾ ಸಾರ್ವಜನಿಕ ಅಧಿಕಾರಿಗಳು ಎಲ್ಲಾ ಮಕ್ಕಳು ಧಾರ್ಮಿಕ ವರ್ಗವನ್ನು ಹಾಜರಾಗುವಂತೆ ಮತ್ತು ಮುಗಿಸುವಂತೆ ಮತ್ತು ಹೀಗೆ ಪದವೀಧರರಾಗುವಂತೆ ಅವಶ್ಯಪಡಿಸಲೂ ಬಹುದು. ವಿಷಯವು ಹಾಗಿದ್ದಲ್ಲಿ ಏನು ಮಾಡಬಹುದೆಂದು ಪ್ರತಿ ಕುಟುಂಬವು ವೈಯಕ್ತಿಕವಾಗಿ ನಿರ್ಣಯಿಸಬೇಕು.

ಕೆಲವು ದೇವರ ಸೇವಕರು ಗತಕಾಲದಲ್ಲಿ ಸತ್ಯ ದೇವರಿಗೆ ನಿಷ್ಠೆಯಲ್ಲಿ ಉಳಿದಿದ್ದಾಗ್ಯೂ, ಧಾರ್ಮಿಕ ಶಿಕ್ಷಣಗಳಿಗೆ ಮತ್ತು ಕ್ರಿಯೆಗಳಿಗೆ ಅವರು ಅನೈಚ್ಛಿಕವಾಗಿ ಒಡ್ಡಲ್ಪಟ್ಟಿದ್ದ ಸಂದರ್ಭಗಳಿದ್ದವು. ಇದು ಮೋಶೆಯ ವಿಷಯದಲ್ಲಿ ಹಾಗಿತ್ತು. ಐಗುಪ್ತದ ಫರೋಹನ ಮೊಮ್ಮಗನಾಗಿ ಅವನು ಬೆಳೆಸಲ್ಪಟ್ಟನು ಮತ್ತು ಅವನು “ಐಗುಪ್ತ ದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿದ್ದನು.” (ಅಪೊಸ್ತಲರ ಕೃತ್ಯಗಳು 7:20-22) ಅದರಲ್ಲಿ ಪ್ರಾಯಶಃ ಸ್ವಲ್ಪಮಟ್ಟಿಗೆ ಐಗುಪ್ತದಲ್ಲಿ ಸಾಮಾನ್ಯವಾಗಿದ್ದ ನಂಬಿಕೆಗಳು ಮತ್ತು ಧಾರ್ಮಿಕ ಪದ್ಧತಿಗಳು ಕೂಡಿದ್ದರಬಹುದು. ಆದರೆ ಮೋಶೆಯು ಪ್ರತ್ಯಕ್ಷವಾಗಿ ತನ್ನ ಕುಟುಂಬದಿಂದ ಅಥವಾ ಬೇರೆ ಇಬ್ರಿಯರಿಂದ ಪಡೆದ ಶ್ರೇಷ್ಠ ಬೋಧನೆಯಿಂದಾಗಿ ಸುರಕ್ಷೆಯನ್ನು ಪಡೆದನು.—ವಿಮೋಚನಕಾಂಡ 2:6-15; ಇಬ್ರಿಯ 11:23-26.

ಬೆಬಿಲೋನಿನಲ್ಲಿ ವಿಶೇಷ ಶಿಕ್ಷಣಪಡೆದ ಮತ್ತು ಸರಕಾರಿ ನೌಕರರಾಗಿ ಮಾಡಲ್ಪಟ್ಟ ದಾನಿಯೇಲನ ಸಂಗಡಿಗರಾಗಿದ್ದ ಆ ಮೂವರು ಇಬ್ರಿಯರುಗಳ ಮಾದರಿಯನ್ನೂ ಗಮನಿಸಿರಿ. (ದಾನಿಯೇಲ 1:6, 7) ತಮಗೆ ಬೇಕಾದದ್ದನ್ನು ಮಾಡಲು ಅಥವಾ ಮಾಡದೆ ಇರಲು ಅವರಿಗೆ ಸ್ವಾತಂತ್ರ್ಯವಿರಲಿಲ್ಲ. ಒಂದು ಸಂದರ್ಭದಲ್ಲಿ ರಾಜ ನೆಬೂಕದ್ನೆಚ್ಚರನು ಅವರು ಇತರ ಸರಕಾರಿ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಭಕ್ತಿಯ ಕ್ರಿಯೆಗಳು ನಡಿಯಲಿದ್ದ ದೂರಾ ಬಯಲಿನಲ್ಲಿ ಅವನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಬರುವಂತೆ ಆಜ್ಞಾಪಿಸಿದನು. ಆ ಮೂವರು ಇಬ್ರಿಯರು ಹೇಗೆ ಪ್ರತಿಕ್ರಿಯೆ ತೋರಿಸಿದರು? ಅವರು ಅಲ್ಲಿಗೆ ಹೋಗದಿರುವದನ್ನು ಇಷ್ಟಪಡುತ್ತಿದ್ದರೆಂಬದು ನಿಶ್ಚಯ, ಆದರೆ ಅದು ಶಕ್ಯವಿರಲಿಲ್ಲ.b ಆದರೂ ಅವರು ತಮ್ಮ ನಂಬಿಕೆಗೆ ಮತ್ತು ಸರ್ವಶಕ್ತನಾದ ದೇವರಿಗೆ ನಂಬಿಗಸ್ತರಾಗಿ ಉಳಿದರು. ಅವರ ದೈವಿಕ ಮನಸ್ಸಾಕ್ಷಿಗಳು ಹಾಜರಿರುವಂತೆ ಅನುಮತಿಸಿದರೂ, ಅದರಲ್ಲಿ ಪಾಲಿಗರಾಗಲು, ವೈಯಕ್ತಿಕವಾಗಿ ಸುಳ್ಳು ಧರ್ಮದ ಯಾವುದೆ ಕ್ರಿಯೆಯನ್ನು ಮಾಡಲು ದೃಢನಿಶ್ಚಯದಿಂದ ನಿರಾಕರಿಸಿದರು.—ದಾನಿಯೇಲ 3:1-18.

ಎಲ್ಲಾ ವಿದ್ಯಾರ್ಥಿಗಳು ಧರ್ಮ ಶಿಕ್ಷಣ ವರ್ಗದಲ್ಲಿ ಹಾಜರಿರುವುದು ಮತ್ತು ಸಾಧಾರಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಶಕ್ತರಾಗುವ ಮಟ್ಟಿಗೆ ಕಲಿಯುವುದು ಕಡ್ಡಾಯವಾಗಿದ್ದರೆ, ನೆಬೂಕದ್ನೆಚ್ಚರನ ಆಜೆಗ್ಞೆ ಒಳಗಾದ ಆ ಮೂವರು ಇಬ್ರಿಯರುಗಳಂತೆ ನಿಜ ಕ್ರೈಸ್ತ ಕುಟುಂಬಗಳೂ ಹಾಜರಾಗಬಹುದು. ಆದರೆ ಕ್ರೈಸ್ತ ಯುವಕರು ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವರು. ಬಂಗಾರದ ಪ್ರತಿಮೆಗೆ ಇತರರು ಅಡ್ಡಬೀಳುವಾಗ ಆ ಮೂವರು ಇಬ್ರಿಯರುಗಳು ಹೇಗೆ ಅಡಬ್ಡರಲು ಪ್ರಯತ್ನಿಸಲಿಲ್ಲವೊ ಹಾಗೆ, ನುಡಿದ ಪ್ರತಿಯೊಂದು ತಪ್ಪು ಹೇಳಿಕೆಯನ್ನು ಅಥವಾ ಇತರರು ಪಾಲಿಗರಾಗುವ ಪ್ರತಿಯೊಂದು ಅಶಾಸ್ತ್ರೀಯ ಪದ್ಧತಿಯನ್ನು ಅವರು ಪಂಥಾಹ್ವಾನಕ್ಕೆ ಕರೆಯುವ ಅಗತ್ಯವಿಲ್ಲ. ಆದರೂ, ಕ್ರೈಸ್ತ ಯುವಕರು ತಾವಾಗಿ ಆ ಆರಾಧನಾ ಕ್ರಿಯೆಗಳಲ್ಲಿ, ಸಮ್ಮಿಳಿತ ಪ್ರಾರ್ಥನೆಗಳಲ್ಲಿ ಮತ್ತು ಧಾರ್ಮಿಕ ಹಾಡುಗಳೆ ಮುಂತಾದವುಗಳಲ್ಲಿ ಭಾಗವಹಿಸಲಾರರು.

ಈ ಯುವಕರು ಬೇರೆ ಸಮಯಗಳಲ್ಲಿ, ‘ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿರುವ ಜ್ಞಾನವನ್ನು ಕೊಡುವದಕ್ಕೆ ಶಕ್ತರಾಗಿರುವ ಪವಿತ್ರ ಗ್ರಂಥದ’ ಬಲವರ್ಧಕ ಜ್ಞಾನವನ್ನು ಪಡಕೊಳ್ಳಲು ತಮ್ಮನ್ನು ಪರಿಶ್ರಮದಿಂದ ದುಡಿಸಬೇಕಾಗಿದೆ. (2 ತಿಮೊಥಿ 3:15) ತಮ್ಮ ಮಕ್ಕಳೊಂದಿಗೆ ಸಂಭಾಷಣೆಗಳಲ್ಲಿ ಹೆತ್ತವರು ಸದಾ ವರ್ಗದಲ್ಲಿ ಕಲಿಸಲ್ಪಡುವ ಬೋಧನೆಗಳ ವಿಷಯವಾಗಿ ಎಚ್ಚರ ವಹಿಸಬೇಕು. ಹೀಗೆ ತಮ್ಮ ಮಕ್ಕಳು ಗಲಿಬಿಲಿಗೆ ಅಥವಾ ತಪ್ಪು ದಾರಿಗೆ ಎಳೆಯಲ್ಪಡದಂತೆ, ಬೈಬಲಿನಿಂದ ಯಾವುದು ಸರಿಪಡಿಸಲ್ಪಡಬೇಕು ಅಥವಾ ಸ್ಪಷ್ಟೀಕರಿಸಲ್ಪಡಬೇಕು ಎಂಬದನ್ನು ಕಾಣಲು ಪ್ರೌಢ ಕ್ರೈಸ್ತರಿಗೆ ಸಹಾಯವಾಗುವುದು. (w91 12/15)

[ಅಧ್ಯಯನ ಪ್ರಶ್ನೆಗಳು]

a  ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ನ್ಯೂ ಯೋರ್ಕ್‌ ಇವರಿಂದ ಪ್ರಕಾಶಿಸಲ್ಪಟ್ಟಿದೆ.

b  ದೂರಾ ಬಯಲಿನಲ್ಲಿ ದಾನಿಯೇಲನು ಹಾಜರಿದ್ದದ್ದನು ಬೈಬಲು ತಿಳಿಸುವುದಿಲ್ಲ. ಪ್ರಾಯಶಃ ಸರಕಾರದಲ್ಲಿ ಅವನ ಉನ್ನತ ದರ್ಜೆಯು ಅಲ್ಲಿಗೆ ಹೋಗುವುದರಿಂದ ಅವನಿಗೆ ವಿನಾಯಿತಿ ಕೊಟ್ಟಿರಬಹುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ