ಲಕ್ಷಾಂತರ ಜನರು ಹೋಗುತ್ತಾರೆ. ನೀವೊ?
ಹೋಗುವದೆಲ್ಲಿಗೆ? ಯೇಸು ಕ್ರಿಸ್ತನ ಮರಣದ ವಾರ್ಷಿಕಾಚರಣೆಗೆ. 1991ರಲ್ಲಿ ಜಗದ್ವ್ಯಾಪಕವಾಗಿ ಒಟ್ಟಿಗೆ 1,06,50,158 ಮಂದಿ ಹಾಜರಾದರು. ಜನರು ಹೋಗುವದೇಕೆ? ಮಾನವ ಕುಲಕ್ಕೆ ಕ್ರಿಸ್ತನ ಮರಣವು ಯಾವ ಅರ್ಥದಲಿಯ್ಲೆ ಅದಕ್ಕಾಗಿ. ಅದು ಅಸೌಖ್ಯ, ಕಷ್ಟಾನುಭವ ಮತ್ತು ಮರಣದಿಂದ ತೀವ್ರ ಬಿಡುಗಡೆಯ ಅರ್ಥದಲ್ಲಿದೆ. ಮೃತರಾಗಿರುವ ಪ್ರಿಯಜನರೂ ಪರದೈಸವಾಗಿ ಪುನಃಸ್ಥಾಪನೆಗೊಳ್ಳುವ ಭೂಮಿಯ ಮೇಲಿನ ಜೀವನಕ್ಕಾಗಿ ಪುನರುತ್ಥಾನ ಹೊಂದವರು. ಈ ಮಹತ್ವದ ಆಚರಣೆಗೆ ಅವರೊಂದಿಗೆ ಕೂಡಿಬರುವಂತೆ ಯೆಹೋವನ ಸಾಕ್ಷಿಗಳು ನಿಮ್ಮನು ಸ್ವಾಗತಿಸುತ್ತಾರೆ. ನಿಮ್ಮ ಮನೆಗೆ ಅತಿ ಹತ್ತಿರದ ರಾಜ್ಯ ಸಭಾಗೃಹಕ್ಕೆ ಹಾಜರಾಗಿರಿ. ಈ ವರ್ಷ ಅದರ ತಾರೀಕು ಶುಕ್ರವಾರ, ಎಪ್ರಿಲ್ 17ಕ್ಕೆ, ಸೂರ್ಯಾಸ್ತಮಾನದ ನಂತರ. ಸರಿ ಸಮಯವನ್ನು ಗೊತ್ತುಮಾಡಲು ಸ್ಥಳೀಕ ಸಾಕ್ಷಿಗಳನ್ನು ಸಂಪರ್ಕಿಸಿರಿ.