ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 1/15 ಪು. 8-12
  • ಸೌಮ್ಯ-ಚಿತರ್ತು ಎಷ್ಟೋ ಧನ್ಯರು!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೌಮ್ಯ-ಚಿತರ್ತು ಎಷ್ಟೋ ಧನ್ಯರು!
  • ಕಾವಲಿನಬುರುಜು—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸೌಮ್ಯತೆಯೆಡೆಗೆ ಒಂದು ನಿಕಟ ನೋಟ
  • ಸೌಮ್ಯತೆಯನ್ನು ವಿಕಸಿಸುವ ವಿಧ
  • ಸೌಮ್ಯತೆಯ ಪ್ರಯೋಜನಗಳು
  • ಸೌಮ್ಯತೆ ಧನ್ಯತೆಯನ್ನು ಪ್ರವರ್ಧಿಸುತ್ತದೆ
  • ಸೌಮ್ಯಭಾವ—ಕೊಡುತ್ತೆ ಸಂತೋಷವ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಸೌಮ್ಯತೆಯನ್ನು ಧರಿಸಿಕೊಳ್ಳಿರಿ!
    ಕಾವಲಿನಬುರುಜು—1992
  • ಸೌಮ್ಯಭಾವ—ಅತ್ಯಂತ ಪ್ರಾಮುಖ್ಯವಾದ ಒಂದು ಕ್ರೈಸ್ತ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • “ಎಲ್ಲಾ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು” ತೋರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಕಾವಲಿನಬುರುಜು—1992
w92 1/15 ಪು. 8-12

ಸೌಮ್ಯ-ಚಿತರ್ತು ಎಷ್ಟೋ ಧನ್ಯರು!

“ಸೌಮ್ಯ-ಚಿತರ್ತು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.”—ಮತ್ತಾಯ 5:5, NW.

1. ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಯಾವ ಸೌಮ್ಯ ಚಿತ್ತದ ಕುರಿತು ಮಾತಾಡಿದನು?

ಯೇಸು ಕ್ರಿಸ್ತನು ತನ್ನ ಪರ್ವತ ಪ್ರಸಂಗದಲ್ಲಿ ಅಂದದ್ದು: “ಶಾಂತರು (ಸೌಮ್ಯ-ಚಿತರ್ತು, NW) ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5) ಈ ಸೌಮ್ಯ-ಚಿತ್ತ ಅಥವಾ ದೀನತೆಯು ಕೇವಲ ವಿನೀತಭಾವದ ಒಂದು ಡಾಂಭಿಕ ಹೊರತೋರಿಕೆಯಲ್ಲ, ಇಲ್ಲವೇ ವ್ಯಕ್ತಿತ್ವದ ಕೇವಲ ಒಂದು ಸಹಜ ಪ್ರವೃತ್ತಿಯಲ್ಲ. ಬದಲಾಗಿ ಅದು ಯೆಹೋವನ ಚಿತ್ತಕ್ಕೆ ಮತ್ತು ಮಾರ್ಗದರ್ಶನೆಗೆ ಪ್ರತಿಕ್ರಿಯೆಯಲ್ಲಿ ಮುಖ್ಯವಾಗಿ ತೋರಿಸಲ್ಪಡುವ ಒಂದು ನಿಜವಾದ ಆಂತರಿಕ ಸೌಮ್ಯತೆ ಮತ್ತು ಶಾಂತಿಶೀಲತೆಯಾಗಿದೆ. ನಿಜವಾಗಿಯೂ ಸೌಮ್ಯ ಸ್ವಭಾವದ ಜನರು ದೇವರಲ್ಲಿ ಆತುಕೊಳ್ಳುವ ತೀವ್ರಾಭಿಲಾಷೆಯುಳ್ಳವರು, ಅದು ಜೊತೆ ಮಾನವರ ಕಡೆಗೆ ಅವರು ತೋರಿಸುವ ಸೌಮ್ಯ ನಡವಳಿಕೆಯಲ್ಲಿ ಪ್ರತಿಬಿಂಬಿತವಾಗುತ್ತದೆ.—ರೋಮಾಪುರ 12:17-19; ತೀತ 3:1, 2.

2. ಸೌಮ್ಯ-ಚಿತರ್ತು ಧನ್ಯರು ಎಂದು ಯೇಸು ಹೇಳಿದ್ದೇಕೆ?

2 ಸೌಮ್ಯ-ಚಿತರ್ತು ಧನ್ಯರು ಎಂದು ಯೇಸು ಹೇಳಿದ್ದು ಯಾಕೆಂದರೆ ಅವರು ಭೂಮಿಗೆ ಬಾಧ್ಯರಾಗಿ ಇರಲಿಕ್ಕಿದ್ದರು. ಪರಿಪೂರ್ಣ ಸೌಮ್ಯ-ಚಿತ್ತದ ದೇವ ಕುಮಾರನೋಪಾದಿ ಯೇಸು ಕ್ರಿಸ್ತನು, ಭೂಮಿಯ ಮುಖ್ಯ ಬಾಧ್ಯಸ್ಥನು ಆಗಿದ್ದಾನೆ. (ಕೀರ್ತನೆ 2:8; ಮತ್ತಾಯ 11:29; ಇಬ್ರಿಯ 1:1, 2; 2:5-9) ಆದರೆ ಮೆಸ್ಸೀಯ “ಮನುಷ್ಯ ಕುಮಾರನಾದ” ಆತನು, ತನ್ನ ಸ್ವರ್ಗೀಯ ರಾಜ್ಯದಲ್ಲಿ ಆಳಲಿಕ್ಕಾಗಿ ಜೊತೆ ಅರಸರನ್ನು ಪಡೆಯಲಿಕ್ಕಿದ್ದನು. (ದಾನಿಯೇಲ 7:13, 14, 22, 27) ಕ್ರಿಸ್ತನ “ಜೊತೆ ಬಾಧ್ಯಸ್ಥ”ರೋಪಾದಿ, ಈ ಅಭಿಷಿಕ್ತ ಸೌಮ್ಯ-ಚಿತ್ತದ ಜನರು ಆತನ ಭೂಮಿಯ ಬಾಧ್ಯಸ್ಥಿಕೆಯಲ್ಲಿ ಪಾಲುಗಾರರಾಗುವರು. (ರೋಮಾಪುರ 8:17) ಕುರಿ-ಸದೃಶ್ಯರಾದ ಇತರ ಸೌಮ್ಯ-ಚಿತರ್ತಾದ ಜನರಾದರೋ ಆ ರಾಜ್ಯದ ಭೂಕ್ಷೇತ್ರದಲ್ಲಿನ ಪ್ರಮೋದವನದಲ್ಲಿ ನಿತ್ಯಜೀವವನ್ನು ಆನಂದಿಸಲಿರುವರು. (ಮತ್ತಾಯ 25:33, 34, 46; ಲೂಕ 23:43) ಆ ಪ್ರತೀಕ್ಷೆಯು ಅವರನ್ನು ಧನ್ಯರನ್ನಾಗಿ ಮಾಡುತ್ತದೆ ನಿಶ್ಚಯ.

3. ಸೌಮ್ಯತೆಯ ವಿಷಯದಲ್ಲಿ ದೇವರು ಮತ್ತು ಕ್ರಿಸ್ತನು ಯಾವ ಮಾದರಿಯನ್ನಿಟ್ಟರು?

3 ಸೌಮ್ಯ-ಚಿತನ್ತಾದ ಈ ಮುಖ್ಯ ಬಾಧ್ಯಸ್ಥನು, ಸೌಮ್ಯ ಪ್ರಕೃತಿಗೆ ಪ್ರಧಾನ ಮಾದರಿಯಾದ ತನ್ನ ತಂದೆ ಯೆಹೋವನಿಂದ ಆ ಭೂಮಿಯನ್ನು ಪಡೆಯುವನು. ದೇವರು “ದೀರ್ಘಶಾಂತನೂ ಕನಿಕರ ದಯೆಗಳುಳ್ಳವನೂ” ಆಗಿದ್ದಾನೆಂದು ದೇವರ ವಾಕ್ಯವು ಅದೆಷ್ಟು ಬಾರಿ ಹೇಳಿದೆಯಲ್ಲವೇ! (ವಿಮೋಚನಕಾಂಡ 34:6; ನೆಹೆಮೀಯ 9:17; ಕೀರ್ತನೆ 86:15) ಆತನು ಮಹಾ ಶಕ್ತಿಶಾಲಿಯು, ಆದರೆ ಎಷ್ಟು ಸೌಮ್ಯತೆಯನ್ನು ಪ್ರದರ್ಶಿಸುತ್ತಾನೆಂದರೆ ಆತನ ಆರಾಧಕರು ಆತನನ್ನು ನಿರ್ಭೀತರಾಗಿ ಗೋಚರಿಸಶಕ್ತರು. (ಇಬ್ರಿಯ 4:16; 10:19-22) “ಸೌಮ್ಯನೂ ದೀನ ಮನಸ್ಸುಳ್ಳವನೂ” ಆಗಿದ್ದ ದೇವ ಕುಮಾರನು ತನ್ನ ಶಿಷ್ಯರಿಗೆ ಸೌಮ್ಯ-ಚಿತ್ತದವರಾಗಿರಲು ಕಲಿಸಿದನು. (ಮತ್ತಾಯ 11:29; ಲೂಕ 6:27-29) ಅನುಕ್ರಮದಲ್ಲಿ, ದೇವರ ಮತ್ತು ಆತನ ಪುತ್ರನ ಈ ಸೌಮ್ಯ-ಚಿತ್ತದ ದಾಸರು “ಕ್ರಿಸ್ತನ ಸೌಮ್ಯತೆಯನ್ನೂ ದಯೆಯನ್ನೂ” ಅನುಕರಿಸಿದರು ಮತ್ತು ಅದರ ಕುರಿತಾಗಿ ಬರೆದರು.—2 ಕೊರಿಂಥ 10:1; ರೋಮಾಪುರ 1:1; ಯಾಕೋಬ 1:1, 2; 2 ಪೇತ್ರ 1:1.

4. (ಎ) ಕೊಲೊಸ್ಸೆಯ 3:12ಕ್ಕೆ ಅನುಸಾರವಾಗಿ, ನಿಜವಾಗಿ ಸೌಮ್ಯ-ಚಿತರ್ತಾಗಿರುವ ಜನರಿಂದ ಏನು ಮಾಡಲ್ಪಟ್ಟಿದೆ? (ಬಿ) ಯಾವ ಪ್ರಶ್ನೆಗಳು ನಮ್ಮ ಪರಿಗಣನೆಗೆ ಅರ್ಹವಾಗಿವೆ?

4 ಇಂದು, ಅಭಿಷಿಕ್ತ ಕ್ರೈಸ್ತರು ಮತ್ತು ಅವರ ಐಹಿಕ ಸಂಗಡಿಗರು ಇಬ್ಬರೂ ಸೌಮ್ಯ-ಚಿತರ್ತಾಗಿರುವ ಅವಶ್ಯಕತೆ ಇದೆ. ಎಲ್ಲಾ ತರದ ಕೆಟ್ಟತನ, ಮೋಸ, ಕಪಟತನ, ದ್ವೇಷ ಮತ್ತು ಕಲಹವನ್ನು ವರ್ಜಿಸಿದವರಾದ ಅವರು, ‘ಅವರ ಅಂತರ್ಯದ ಚಾಲನಶಕ್ತಿಯಲ್ಲಿ’ ಹೊಸಬರಾಗುವಂತೆ ದೇವರಾತ್ಮದಿಂದ ಸಹಾಯ ಮಾಡಲ್ಪಟ್ಟಿದ್ದಾರೆ. (ಎಫೆಸ 4:22-24; 1 ಪೇತ್ರ 2:1, 2) ಅವರು “ಕನಿಕರ ದಯೆ ದೀನಭಾವ ಸೌಮ್ಯತೆ ದೀರ್ಘಶಾಂತಿ” ಎಂಬ ಸದ್ಗುಣಗಳಿಂದ ತಮ್ಮನ್ನು ಧರಿಸಿಕೊಳ್ಳುವಂತೆ ಪ್ರೇರೇಪಿಸಲ್ಪಟ್ಟರು. (ಕೊಲೊಸ್ಸೆಯ 3:12) ಆದರೆ ಈ ಸೌಮ್ಯತೆಯಲ್ಲಿ ನಿಖರವಾಗಿ ಏನು ಒಳಗೊಂಡಿದೆ? ಸೌಮ್ಯ ಸ್ವಭಾವಿಗಳಾಗಿರುವುದು ಅದೇಕೆ ಪ್ರಯೋಜನಕಾರಿಯು? ಮತ್ತು ಈ ಗುಣವು ನಮ್ಮ ಸಂತೋಷಕ್ಕೆ [ಯಾ ಧನ್ಯತೆಗೆ] ಹೇಗೆ ನೆರವಾಗಬಲ್ಲದು?

ಸೌಮ್ಯತೆಯೆಡೆಗೆ ಒಂದು ನಿಕಟ ನೋಟ

5. ಹೇಗೆ ಸೌಮ್ಯತೆಯ ಅರ್ಥವಿವರಣೆ ಮಾಡಬಹುದು?

5 ಒಬ್ಬ ಸೌಮ್ಯ-ಚಿತನ್ತಾದ ವ್ಯಕ್ತಿಯು ತನ್ನ ಮನೋಧರ್ಮದಲ್ಲಿ ಮತ್ತು ನಡವಳಿಕೆಯಲ್ಲಿ ಮೃದು ಸ್ವಭಾವದವನಾಗಿರುತ್ತಾನೆ. ಕೆಲವು ನಿರ್ದಿಷ್ಟ ಬೈಬಲ್‌ ಭಾಷಾಂತರಗಳಲ್ಲಿ ಅದು ಗುಣವಾಚಕ ಪ್ರಾ-ಯೆಸ್‌ ಆಗಿದ್ದು, “ದೀನ,” “ಶಾಂತ,” “ಸೌಮ್ಯ-ಚಿತ್ತದ,” ಮತ್ತು “ಮೃದು ಸ್ವಭಾವದ” ಎಂಬದಾಗಿ ತರ್ಜುಮೆಯಾಗಿದೆ. ಸಾಂಸ್ಕೃತಿಕ ಗ್ರೀಕ್‌ ಭಾಷೆಯಲ್ಲಿ ಗುಣವಾಚಕ ಪ್ರಾ.ಯೆಸ್‌ ಒಂದು ಮಂದ ಮಾರುತ ಯಾ ಮೃದು ಸರ್ವಕ್ಕೆ ಅನ್ವಯಿಸಬಲ್ಲದು. ಅದು ಒಬ್ಬ ವಿನಯಶೀಲ ವ್ಯಕ್ತಿಗೂ ಸೂಚಿಸಶಕವ್ತಾಗಿದೆ. ಪಂಡಿತ ಡಬ್ಲ್ಯೂ. ಇ. ವೈನ್‌ ಅನ್ನುವುದು: “ಆ [ನಾಮಪದ ಪ್ರಾ.ಯೆಟೆಸ್‌]ನ ಕ್ರಿಯೆಗಳು ಪ್ರಥಮವಾಗಿ ಮತ್ತು ಮುಖ್ಯವಾಗಿ ದೇವರ ಕಡೆಗೆ ಮಾಡುವಂಥವುಗಳು. ನಮ್ಮೊಂದಿಗೆ ಆತನ ವ್ಯವಹಾರಗಳು ಒಳ್ಳೆಯವುಗಳೇ ಆಗಿರುವುದರಿಂದ ಯಾವ ವಾಗ್ವಾದವೂ ಪ್ರತಿಭಟನೆಯೂ ಇಲ್ಲದೆ ಅವನ್ನು ಸ್ವೀಕರಿಸುವ ಮನೋಧರ್ಮ ಅದಾಗಿದೆ; ಅದು ಟಪೈನೊಪ್ರೊಸುನೆ [ದೀನತೆ] ಎಂಬ ಶಬ್ದದೊಂದಿಗೆ ನಿಕಟವಾಗಿ ಜೋಡಿಸಲ್ಪಟ್ಟಿದೆ.”

6. ಸೌಮ್ಯತೆಯು ದುರ್ಬಲತೆಯಲ್ಲವೆಂದು ಹೇಳಬಹುದೇಕೆ?

6 ಸೌಮ್ಯತೆಯು ಬಲಹೀನತೆಯಲ್ಲ. “ಪ್ರಾವಸ್‌ನಲ್ಲಿ ಕೋಮಲತೆ ಇದೆ” ಎಂದು ಬರೆದಿದ್ದಾರೆ ಪಂಡಿತ ವಿಲ್ಯಂ ಬಾರ್‌ಕ್ಲೇ, “ಆದರೆ ಆ ಸೌಮ್ಯತೆಯ ಹಿಂದುಗಡೆ ಉಕ್ಕಿನಂಥ ಬಲವು ಅದರಲ್ಲಿದೆ.” ಸೌಮ್ಯ-ಚಿತರ್ತಾಗಿರುವುದಕ್ಕೆ ಶಕ್ತಿಯು ಬೇಕು. ಉದಾಹರಣೆಗೆ, ಚಿತಾಯಿಸಲ್ಪಡುವಾಗ ಅಥವಾ ನಾವು ಹಿಂಸಿಸಲ್ಪಡುವಾಗ ಸೌಮ್ಯತೆಯವರಾಗಿರಲು ಬಲವು ಬೇಕಾಗಿದೆ. ದೇವರ ಸೌಮ್ಯ-ಪ್ರವೃತ್ತಿಯ ಪುತ್ರನಾದ ಯೇಸು ಕ್ರಿಸ್ತನು ಈ ವಿಷಯದಲ್ಲಿ ಒಂದು ಉತ್ತಮ ಮಾದರಿಯನ್ನಿಟ್ಟನು. “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ. ಆತನು ಬಾಧೆಯನ್ನು ಅನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪು ಮಾಡುವಾತನಿಗೆ [ಯೆಹೋವ ದೇವರಿಗೆ] ತನ್ನ ಕಾರ್ಯವನ್ನು ಒಪ್ಪಿಸಿದನು.” (1 ಪೇತ್ರ 2:23) ಸೌಮ್ಯ ಸ್ವಭಾವಿಯಾದ ಯೇಸು ಕ್ರಿಸ್ತನಂತೆ ನಾವು ಸಹಾ, ನಮ್ಮ ನಿಂದಕರ ಮತ್ತು ಹಿಂಸಕರೆಡೆಗೆ ದೇವರು ಕ್ರಮ ಕೈಕೊಳ್ಳುವನೆಂಬ ಭರವಸವುಳ್ಳವರಾಗಿರಬಹುದು. (1 ಕೊರಿ 4:12, 13) ಹಿಂಸಿಸಲ್ಪಟ್ಟ ಸೆಫ್ತನನಂತೆ ನಾವು ಪ್ರಶಾಂತ ಚಿತ್ತರಾಗಿರಲು ಸಾಧ್ಯವಿದೆ, ಯಾಕಂದರೆ ನಾವು ನಂಬಿಗಸ್ತರಾಗಿದ್ದಲ್ಲಿ ಯೆಹೋವನು ನಮ್ಮನ್ನು ಬಲಪಡಿಸುವನು ಮತ್ತು ಯಾವುದಾದರೂ ನಮಗೆ ಶಾಶ್ವತವಾದ ಕೇಡನ್ನು ತರುವಂತೆ ಬಿಡಲಾರನು.—ಕೀರ್ತನೆ 145:14; ಅಪೊಸ್ತಲರ ಕೃತ್ಯಗಳು 6:15; ಫಿಲಿಪ್ಪಿಯ 4:6, 7, 13.

7. ಸೌಮ್ಯತೆಯ ಕೊರತೆಯುಳ್ಳ ವ್ಯಕ್ತಿಯ ಕುರಿತು ಜ್ಞಾನೋಕ್ತಿ 25:28 ಏನನ್ನು ಸೂಚಿಸುತ್ತದೆ?

7 ಯೇಸು ಸೌಮ್ಯ ಪ್ರಕೃತಿಯವನಾಗಿದ್ದನು, ಆದರೂ ಯಾವುದು ಸರಿಯೋ ಅದಕ್ಕಾಗಿ ದೃಢವಾಗಿ ನಿಲ್ಲುವದರಲ್ಲಿ ಬಲವನ್ನು ತೋರಿಸಿದನು. (ಮತ್ತಾಯ 21:5; 23:13-39) “ಕ್ರಿಸ್ತನ ಮನಸ್ಸು” ದೊರಕಿರುವ ಯಾವನಾದರೂ ಈ ವಿಷಯದಲ್ಲಿ ಆತನಂತೆಯೇ ಇರುವನು. (1 ಕೊರಿಂಥ 2:16) ವ್ಯಕ್ತಿಯೊಬ್ಬನು ಶಾಂತ ಸ್ವಭಾವಿಯಲವ್ಲಾದರೆ, ಅವನು ಕ್ರಿಸ್ತನಂತಿರುವುದಿಲ್ಲ. ಬದಲಾಗಿ ಅವನು ಈ ಮಾತುಗಳಿಂದ ಸರಿಯಾಗಿ ವರ್ಣಿಸಲ್ಪಡುತ್ತಾನೆ: “ಆತ್ಮವನ್ನು ಸ್ವಾಧೀನ ಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.” (ಜ್ಞಾನೋಕ್ತಿ 25:28) ಸೌಮ್ಯತೆಯಲ್ಲಿ ನ್ಯೂನನಾದ ಇಂಥ ವ್ಯಕ್ತಿಯು ಕೆಟ್ಟ ವಿಚಾರಗಳ ಆಕ್ರಮಣಗಳಿಗೆ ಭೇದ್ಯನಾಗಿ ಅನುಚಿತ ರೀತಿಗಳಲ್ಲಿ ವರ್ತಿಸುವಂತೆ ನಡಿಸಲ್ಪಟ್ಟಾನು. ಸೌಮ್ಯ-ಚಿತನ್ತಾದ ಕ್ರೈಸ್ತನು ದುರ್ಬಲನಲ್ಲವಾದರೂ, “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವುದು” ಎಂದು ಅವನಿಗೆ ಗೊತ್ತಿದೆ.—ಜ್ಞಾನೋಕ್ತಿ 15:1.

8. ಸೌಮ್ಯ-ಚಿತರ್ತಾಗಿರುವುದು ಅಷ್ಟೇನೂ ಸುಲಭವಲ್ಲವೇಕೆ?

8 ಸೌಮ್ಯ-ಚಿತರ್ತಾಗಿರುವುದೇನೂ ಸುಲಭವಲ್ಲ, ಯಾಕೆಂದರೆ ಅಪೂರ್ಣತೆ ಮತ್ತು ಪಾಪವನ್ನು ನಾವು ಬಾಧ್ಯತೆಯಾಗಿ ಪಡೆದಿದ್ದೇವೆ. (ರೋಮಾಪುರ 5:12) ಯೆಹೋವನ ಸೇವಕರು ನಾವಾಗಿದ್ದರೆ, ಹಿಂಸೆಯ ಮೂಲಕ ನಮ್ಮ ಸೌಮ್ಯತೆಯ ಸ್ವಭಾವವನ್ನು ಪರೀಕೆಗ್ಷೆ ಹಾಕುವ ದುರಾತ್ಮ ಸೇನೆಗಳ ವಿರುದ್ಧವಾಗಿಯೂ ನಮಗೆ ಹೋರಾಡಲಿಕ್ಕಿದೆ. (ಎಫೆಸ 6:12) ಮತ್ತು ನಮ್ಮಲ್ಲಿ ಹೆಚ್ಚಿನವರು ಪಿಶಾಚನ ಹತೋಟಿಯ ಕೆಳಗಿರುವ ಲೋಕದ ನಿರ್ದಯ-ಆತ್ಮದ ಜನರ ನಡುವೆ ಕೆಲಸಮಾಡುವವರು. (1 ಯೋಹಾನ 5:19) ಹೀಗಿರಲಾಗಿ ನಾವು ಸೌಮ್ಯ-ಚಿತ್ತವನ್ನು ವಿಕಾಸಿಸಿಕೊಳ್ಳುವದು ಹೇಗೆ?

ಸೌಮ್ಯತೆಯನ್ನು ವಿಕಸಿಸುವ ವಿಧ

9. ಯಾವ ದೃಷ್ಟಿಕೋನವು ಸೌಮ್ಯತೆಯನ್ನು ಬೆಳೆಸಲು ನಮಗೆ ಸಹಾಯ ಮಾಡುವದು?

9 ಸೌಮ್ಯತೆಯನ್ನು ತೋರಿಸಲು ನಾವು ಕೇಳಲ್ಪಟ್ಟಿದೇವ್ದೆಂಬ ಬೈಬಲಾಧಾರಿತ ಮನವರಿಕೆಯು ಈ ಗುಣವನ್ನು ಬೆಳೆಸಲು ನಮಗೆ ಸಹಾಯ ಮಾಡುತ್ತದೆ. ದಿನದಿನವೂ ಸೌಮ್ಯತೆಯನ್ನು ಬೆಳೆಸಲು ನಾವು ಕಾರ್ಯನಡಿಸಬೇಕು. ಇಲ್ಲವಾದರೆ ನಾವು, ಸೌಮ್ಯತೆಯನ್ನು ದುರ್ಬಲತೆಯಾಗಿ ವೀಕ್ಷಿಸುವ ಮತ್ತು ಒರಟುತನ, ಪುಂಡಾಟಿಕೆ ಮತ್ತು ಕ್ರೂರತ್ವದಿಂದ ಸಹಾ ಸಾಫಲ್ಯವು ಬರುತ್ತದೆಂದು ನೆನಸುವ ಜನರಂತೆ ಆಗುವೆವು. ಆದರೆ ದೇವರ ವಾಕ್ಯವು ಅಹಂಕಾರವನ್ನು ಖಂಡಿಸುತ್ತದೆ ಮತ್ತು ಒಂದು ಜ್ಞಾನೋಕ್ತಿಯು ನುಡಿಯುವುದು: “ಪರೋಪಕಾರವು ತನಗೂ ಉಪಕಾರ; ಕ್ರೂರನು ತನ್ನ ಶರೀರವನ್ನು ಹಿಂಸಿಸುವನು.” (ಜ್ಞಾನೋಕ್ತಿ 11:17; 16:18) ಕಠೋರನೂ ನಿರ್ದಯನೂ ಆದ ವ್ಯಕ್ತಿಯಿಂದ ಜನರು ದೂರವಿರುತ್ತಾರೆ, ಅವರು ಹಾಗೆ ಮಾಡುವುದು ಮುಖ್ಯವಾಗಿ ಅವನ ಕ್ರೌರ್ಯ ಮತ್ತು ಸೌಮ್ಯತೆಯ ಕೊರತೆಯಿಂದಾಗಿ ಬಾಧಿಸಲ್ಪಡುವುದನ್ನು ತಪ್ಪಿಸಲಿಕ್ಕಾಗಿ.

10. ಸೌಮ್ಯ-ಚಿತರ್ತಾಗಿರಬೇಕಾದರೆ, ನಾವು ಯಾವುದಕ್ಕೆ ಅಧೀನರಾಗಿರಬೇಕು?

10 ಸೌಮ್ಯ-ಚಿತರ್ತು ನಾವಾಗಬೇಕಾದರೆ, ದೇವರಾತ್ಮದ ಅಥವಾ ಕಾರ್ಯಕಾರಿ ಶಕ್ತಿಯ ಪ್ರಭಾವಕ್ಕೆ ನಾವು ನಮ್ಮನ್ನು ಅಧೀನಪಡಿಸಿಕೊಳ್ಳಬೇಕು. ಯೆಹೋವನು ಹೇಗೆ ಭೂಮಿಯು ತನ್ನ ಬೆಳೆಯನ್ನು ಬೆಳೆಸುವಂತೆ ಸಾಧ್ಯಮಾಡಿದ್ದಾನೋ ಹಾಗೆಯೇ, ಅವನ ಸೇವಕರು ಆತನ ಆತ್ಮದ ಫಲಗಳನ್ನು, ಸೌಮ್ಯತೆಯೂ ಸೇರಿ, ಬೆಳೆಸುವಂತೆ ಶಕ್ಯಮಾಡಿರುತ್ತಾನೆ. ಪೌಲನು ಬರೆದದ್ದು: “ದೇವರಾತ್ಮದಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ (ಸೌಮ್ಯತೆ, NW) ಶಮೆದಮೆ ಇಂಥವುಗಳೇ. ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ.” (ಗಲಾತ್ಯ 5:22, 23) ಹೌದು, ಸೌಮ್ಯತೆಯು ದೇವರನ್ನು ಮೆಚ್ಚಿಸ ಬಯಸುವವರಿಂದ ತೋರಿಸಲ್ಪಡುವ ದೇವರಾತ್ಮದ ಒಂದು ಫಲವಾಗಿದೆ. (ಕೀರ್ತನೆ 51:9, 10) ಮತ್ತು ಸೌಮ್ಯತೆಯು ಎಂಥಾ ಬದಲಾವಣೆಗಳನ್ನು ಉತ್ಪಾದಿಸುತ್ತದೆ! ದೃಷ್ಟಾಂತಕ್ಕಾಗಿ: ಟೋನಿ ಎಂಬ ಹೆಸರಿನ ಪುಂಡನು ಕಲಹಗಾರನಾಗಿದ್ದನು, ಜನರನ್ನು ದೋಚುತ್ತಿದ್ದನು, ಮಾದಕದ್ರವ್ಯದ ಕಳ್ಳಸಾಗಣೆ ಮಾಡುತ್ತಿದ್ದನು, ಮೋಟಾರ್‌ ಸೈಕಲ್‌ ಪುಂಡರ ತಂಡವನ್ನು ನಡಿಸುತ್ತಿದ್ದನು, ಜೈಲಿಗೂ ಹೋಗಿದ್ದನು. ಆದರೂ ಬೈಬಲಿನ ಜ್ಞಾನವನ್ನು ದೇವರಾತ್ಮದ ಸಹಾಯದಿಂದ ಪಡಕೊಂಡಾಗ, ಸೌಮ್ಯ ಪ್ರಕೃತಿಯ ದೇವರ ಸೇವಕನಾಗಿ ತನ್ನನ್ನು ಮಾರ್ಪಡಿಸಿಕೊಂಡನು. ಟೋನಿಯ ಕಥೆಯು ಅಸಾಮಾನ್ಯವೇನೂ ಅಲ್ಲ. ಹೀಗಿರಲಾಗಿ, ಸೌಮ್ಯತೆಯ ಕೊರತೆಯು ಒಬ್ಬನ ವ್ಯಕ್ತಿತ್ವದ ಪ್ರಧಾನ ರೂಪವಾಗಿದ್ದಲ್ಲಿ, ಅವನು ಏನು ಮಾಡ ಸಾಧ್ಯವಿದೆ?

11. ಸೌಮ್ಯತೆಯನ್ನು ಬೆಳೆಸುವಲ್ಲಿ ಪ್ರಾರ್ಥನೆಯು ಯಾವ ಪಾತ್ರವನ್ನು ವಹಿಸುತ್ತದೆ?

11 ದೇವರಾತ್ಮಕ್ಕಾಗಿ ಮತ್ತು ಅದರ ಫಲವಾದ ಸೌಮ್ಯತೆಗಾಗಿ ಹೃದಯಪೂರ್ವಕವಾದ ಪ್ರಾರ್ಥನೆಯು ಈ ಗುಣವನ್ನು ಬೆಳೆಸುವಂತೆ ನಮಗೆ ಸಹಾಯ ಮಾಡುವುದು. ಯೇಸುವಂದಂತೆ, “ಬೇಡಿಕೊಳ್ಳುತ್ತಾ ಇರುವ” ಅಗತ್ಯವು ನಮಗಿರಬಹುದು, ಮತ್ತು ಯೆಹೋವ ದೇವರು ನಮ್ಮ ವಿನಂತಿಯನ್ನು ದಯಪಾಲಿಸುವನು. ಮಾನವ ತಂದೆಗಳು ತಮ್ಮ ಮಕ್ಕಳಿಗೆ ಒಳ್ಳೇ ವಸ್ತುಗಳನ್ನು ಕೊಡುತ್ತಾರೆಂದು ತೋರಿಸಿದ ನಂತರ, ಯೇಸುವಂದದ್ದು: “ಹಾಗಾದರೆ [ಪಾಪಭರಿತ ಮತ್ತು ಹೀಗೆ ತುಲನಾತ್ಮಕವಾಗಿ] ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ!” (ಲೂಕ 11:9-13) ಪ್ರಾರ್ಥನೆಯು ಸೌಮ್ಯತೆಯನ್ನು ನಮ್ಮ ಮನೋಧರ್ಮದ ಒಂದು ಖಾಯಂ ಸ್ವರೂಪವನ್ನಾಗಿ—ನಮ್ಮ ಮತ್ತು ನಮ್ಮ ಸಹವಾಸಿಗಳ ಸಂತೋಷಕ್ಕೆ ನೆರವಾಗುವ ಒಂದು ಗುಣವನ್ನಾಗಿ ಮಾಡಲು ನೆರವಾಗಬಲ್ಲದು.

12. ಮಾನವರು ಅಪೂರ್ಣರೆಂಬದನ್ನು ಮನಸ್ಸಿನಲ್ಲಿಡುವುದು, ನಮಗೆ ಸೌಮ್ಯ-ಚಿತರ್ತಾಗಿರುವಂತೆ ನೆರವಾಗಬಲ್ಲದೇಕೆ?

12 ಮಾನವರು ಅಪೂರ್ಣರೆಂಬದನ್ನು ಸದಾ ಮನಸ್ಸಿನಲ್ಲಿಡುವ ಮೂಲಕ ಸೌಮ್ಯ-ಚಿತ್ತರಾಗಿರಲು ನಮಗೆ ಸಹಾಯವಾಗಬಹುದು. (ಕೀರ್ತನೆ 51:5) ನಾವು ಇತರರಿಗಿಂತ ಹೆಚ್ಚು ಪರಿಪೂರ್ಣತೆಯಿಂದ ಯೋಚಿಸಲು ಅಥವಾ ಕ್ರಿಯೆಗೈಯಲು ಶಕ್ತರಲ್ಲದವರು, ಆದುದರಿಂದ, ನಾವು ನಿಶ್ಚಯವಾಗಿ ಅನುತಾಪ ಇದ್ದವರಾಗಿರತಕ್ಕದ್ದು ಮತ್ತು ಸ್ವತಃ ಹೇಗೆ ಉಪಚರಿಸಲ್ಪಡಲು ಬಯಸುತ್ತೇವೋ ಹಾಗೆಯೇ ಅವರನ್ನೂ ಉಪಚರಿಸಬೇಕು. (ಮತ್ತಾಯ 7:12) ನಾವೆಲ್ಲರೂ ತಪ್ಪು ಮಾಡುವವರೆಂಬ ಅರಿವು ನಮ್ಮನ್ನು ಕ್ಷಮಾಶೀಲರೂ, ಇತರರೊಂದಿಗೆ ವ್ಯವಹರಿಸುವಾಗ ಸೌಮ್ಯ-ಚಿತ್ತರೂ ಆಗಿರುವಂತೆ ಮಾಡಬೇಕು. (ಮತ್ತಾಯ 6:12-15; 18:21, 22) ಎಷ್ಟೆಂದರೂ ದೇವರು ನಮ್ಮ ಕಡೆಗೆ ಪ್ರೀತಿಯನ್ನೂ ಸೌಮ್ಯತೆಯನ್ನೂ ಪ್ರದರ್ಶಿಸುವುದಕ್ಕಾಗಿ ನಾವು ಕೃತಜ್ಞರಾಗಿರುವುದಿಲ್ಲವೇ?—ಕೀರ್ತನೆ 103:10-14.

13. ದೇವರು ಮನುಷ್ಯರಿಗೆ ಸ್ವತಂತ್ರವಾದ ನೈತಿಕ ಆಯ್ಕೆಯನ್ನು ಕೊಟ್ಟಿದ್ದಾನೆ ಎಂಬದನ್ನು ನಾವು ಅಂಗೀಕರಿಸಿದ್ದಲ್ಲಿ, ಸೌಮ್ಯತೆಯನ್ನು ಬೆಳೆಸಲು ನಮಗೆ ಹೇಗೆ ಸಹಾಯವಾಗುವುದು?

13 ದೇವರು ಮಾನವರನ್ನು ಸ್ವತಂತ್ರ ನೈತಿಕ ವ್ಯಕ್ತಿಗಳಾಗಿ ಮಾಡಿದ್ದಾನೆಂಬದನ್ನು ಅಂಗೀಕರಿಸುವುದು ಕೂಡಾ ಸೌಮ್ಯತೆಯನ್ನು ಬೆಳೆಸಲು ನಮಗೆ ಸಹಾಯ ಮಾಡಬಲ್ಲದು. ಇದು ಯಾರಿಗಾದರೂ ಯೆಹೋವನಿಂದ ಅಭಯಪಡೆದು, ಆತನ ನಿಯಮಗಳನ್ನು ಅಸಡ್ಡೆ ಮಾಡಲು ಪರವಾನಗಿ ಕೊಡುವುದಿಲ್ಲ, ಆದರೆ ಇದು ದೇವಜನರೊಳಗೆ ಅಭಿರುಚಿಗಳಲ್ಲಿ, ಇಷ್ಟಗಳಲ್ಲಿ ಮತ್ತು ಇಷ್ಟವಿಲ್ಲದಿರುವಿಕೆಗಳಲ್ಲಿ ತರತರದ ವೈವಿಧ್ಯತೆಗಳಿಗೆ ದಾರಿಮಾಡುತ್ತದೆ. ಆದುದರಿಂದ, ಉತ್ತಮವೆಂದು ನಾವು ಪರಿಗಣಿಸಬಹುದಾದ ಒಂದು ಅಚಿನ್ಚೊಳಗೆ ತುಂಬಲು ಯಾರೇ ಒಬ್ಬನು ಹಂಗಿನಲ್ಲಿಲ್ಲವೆಂಬದನ್ನು ನಾವು ಅಂಗೀಕರಿಸೋಣ. ಈ ಭಾವವು ನಮ್ಮನ್ನು ಸೌಮ್ಯ-ಚಿತ್ತರಾಗಿರಲು ಸಹಾಯ ಮಾಡುವುದು.

14. ಸೌಮ್ಯತೆಯ ವಿಷಯದಲ್ಲಿ ನಮ್ಮ ನಿರ್ಧಾರವು ಏನಾಗಿರಬೇಕು?

14 ಸೌಮ್ಯತೆಯನ್ನು ತೊರೆದು ಬಿಡದೇ ಇರುವ ನಿರ್ಧಾರವು ಈ ಗುಣವನ್ನು ಬೆಳೆಸುತ್ತಾ ಇರುವಂತೆ ನಮಗೆ ಸಹಾಯ ಮಾಡುವುದು. ಯೆಹೋವನ ಆತ್ಮದ ಪ್ರಭಾವಕ್ಕೆ ನಮ್ಮನ್ನು ಅಧೀನಪಡಿಸಿಕೊಂಡ ಮೂಲಕ ನಮ್ಮ ಯೋಚನೆಯಲ್ಲಿ ಒಂದು ರೂಪಾಂತರವು ಉಂಟಾಯಿತು. (ರೋಮಾಪುರ 12:2) ಒಂದು ಸೌಮ್ಯ, ಕ್ರಿಸ್ತನಂಥಾ ಆತ್ಮವು ನಮ್ಮನ್ನು, “ದುಷ್ಕೃತ್ಯಗಳು, ಬಂಡುತನ, ದುರಾಶೆ, ಕುಡಿಕತನ, ದುಂದೌತನ, ಮದ್ಯಪಾನಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ”ಗಳಲ್ಲಿ ತೊಡಗುವದರಿಂದ ನಮ್ಮನ್ನು ನಿಗ್ರಹಿಸಲು ಈಗ ಸಹಾಯ ಮಾಡುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ಇತರ ಕಾರಣಗಳಿಗಾಗಿ ಅಥವಾ ನಮ್ಮ ದೇವಭಕ್ತಿಯ ಕುರಿತು ಜನರು ದೂಷಣಾ ಮಾತುಗಳನ್ನಾಡುವ ಕಾರಣದಿಂದಾಗಿ, ಸೌಮ್ಯತೆಯನ್ನು ನಾವೆಂದೂ ತೊರೆದು ಬಿಡಬಾರದು. (1 ಪೇತ್ರ 4:3-5, NW) ನಾವು ನಮ್ಮ ಸೌಮ್ಯತೆಯನ್ನು ತೊರೆಯುವಂತೆ ಮತ್ತು ದೇವರ ರಾಜ್ಯವನ್ನು ಬಾಧ್ಯತೆಯಾಗಿ ಹೊಂದಲು ಅಥವಾ ಅದರ ಆಶೀರ್ವಾದಗಳಲ್ಲಿ ಆನಂದಿಸಲು ತಪ್ಪುವಂತೆ ಮಾಡುವ ಈ “ಶರೀರಭಾವದ ಕರ್ಮಗಳಿಗೆ” ನಾವೆಂದೂ ಎಡೆಗೊಡಬಾರದು. (ಗಲಾತ್ಯ 5:19-21) ನಾವು ಸ್ವರ್ಗೀಯ ಜೀವಿತಕ್ಕಾಗಿ ಅಭಿಷೇಕಿತರಾಗಿರಲಿ ಅಥವಾ ಐಹಿಕ ನಿರೀಕ್ಷೆಯುಳ್ಳವರಾಗಿರಲಿ, ದೇವರ ಸೌಮ್ಯ-ಚಿತ್ತದ ಜನರಾಗಿರುವ ಸುಯೋಗವನ್ನು ಯಾವಾಗಲೂ ನೆಚ್ಚಿಕೊಂಡಿರೋಣ. ಇದಕ್ಕಾಗಿ, ಸೌಮ್ಯತೆಯ ಕೆಲವು ಪ್ರಯೋಜನಗಳನ್ನು ನಾವೀಗ ಪರಿಗಣಿಸುವ.

ಸೌಮ್ಯತೆಯ ಪ್ರಯೋಜನಗಳು

15. ಜ್ಞಾನೋಕ್ತಿ 14:30ಕ್ಕೆ ಅನುಸಾರವಾಗಿ, ಸೌಮ್ಯರಾಗಿರುವುದು ವಿವೇಕಪ್ರದವೇಕೆ?

15 ಸೌಮ್ಯ ವ್ಯಕ್ತಿಯು ಹೃದಯ, ಮನಸ್ಸು ಮತ್ತು ದೇಹದಲ್ಲಿ ಶಾಂತಚಿತ್ತನಾಗಿರುತ್ತಾನೆ. ಇದು ಹಾಗಿದೆ ಏಕೆಂದರೆ ಅವನು ಕಲಹದಲ್ಲಿ ಭಾಗವಹಿಸುವುದಿಲ್ಲ, ಬೇರೆಯವರ ಕ್ರಿಯೆಗಳಿಂದಾಗಿ ಕಲಕುವುದಿಲ್ಲ, ತೀವ್ರ ಕ್ಷೋಭೆಯಿಂದ ತನ್ನನ್ನು ವೇದನೆಪಡಿಸಿಕೊಳ್ಳುವದಿಲ್ಲ. ಸೌಮ್ಯತೆಯು ಅವನ ಭಾವುಕತೆಗಳನ್ನು ನಿಯಂತ್ರಣದಲ್ಲಿಡಲು ಅವನಿಗೆ ಸಹಾಯ ಮಾಡುತ್ತದೆ ಮತ್ತು ಇದು ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಯೋಜನಕಾರಿಯು. ಜ್ಞಾನೋಕ್ತಿಯೊಂದು ಹೇಳುವುದು: “ಶಾಂತ ಗುಣವು (ಹೃದಯ, NW) ದೇಹಕ್ಕೆ ಜೀವಾಧಾರವು.” (ಜ್ಞಾನೋಕ್ತಿ 14:30) ಸೌಮ್ಯತೆಯಲ್ಲಿ ಕೊರತೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು ಇಲ್ಲವೇ ಜೀರ್ಣಶಕ್ತಿಯ ಬಾಧೆಗಳನ್ನು, ಉಬ್ಬಸರೋಗ, ಕಣ್ಣುನೋವು ಮತ್ತು ಇತರ ಸಮಸ್ಯೆಗಳನ್ನು ತರಬಹುದು. ಸೌಮ್ಯ-ಚಿತನ್ತಾದ ಕ್ರೈಸ್ತನು ಹಲವಾರು ಪ್ರಯೋಜನಗಳನ್ನು, ತನ್ನ ಹೃದಯವನ್ನು ಮತ್ತು ಮಾನಸಿಕ ಶಕ್ತಿಯನ್ನು ಕಾಯುವ “ದೇವರ ಶಾಂತಿಯನ್ನು” ಸಹ ಪಡೆಯ ಶಕ್ತನಾಗುವನು. (ಫಿಲಿಪ್ಪಿಯ 4:6, 7) ಹೀಗಿರಲಾಗಿ ಸೌಮ್ಯ-ಚಿತರ್ತಾಗಿರುವುದು ಅದೆಷ್ಟು ವಿವೇಕಪ್ರದವು!

16-18. ಇತರರೊಂದಿಗೆ ನಮ್ಮ ಸಂಬಂಧದ ಮೇಲೆ ಸೌಮ್ಯತೆ ಯಾವ ಪ್ರಭಾವ ಬೀರುತ್ತದೆ?

16 ಸೌಮ್ಯ ಪ್ರಕೃತಿಯು ಇತರರೊಂದಿಗಿನ ನಮ್ಮ ಸಂಬಂಧವನ್ನು ಪ್ರಗತಿಗೊಳಿಸುತ್ತದೆ. ಪ್ರಾಯಶಃ ಒಂದು ಸಮಯದಲ್ಲಿ ನಮಗೇನು ಬೇಕಿತ್ತೋ ಅದನ್ನು ಪಡೆಯುವ ತನಕ ವಿಷಯಗಳಿಗೆ ಒತ್ತಡಹಾಕುವ ಹವ್ಯಾಸ ನಮಗಿದ್ದಿರಬಹುದು. ನಮ್ಮಲ್ಲಿದ್ದ ದೀನತೆ ಮತ್ತು ಸೌಮ್ಯತೆಯ ಕೊರತೆಯಿಂದಾಗಿ ಜನರು ಸಿಟ್ಟಾಗಿರಲೂ ಬಹುದು. ಅಂಥ ಪರಿಸ್ಥಿತಿಗಳ ಕೆಳಗೆ, ನಾವು ಒಂದರ ಹಿಂದೊಂದು ವಾಗ್ವಾದಗಳಲ್ಲಿ ಒಳಗೂಡುತ್ತಾ ಇದ್ದದ್ದು ನಮ್ಮನ್ನು ಆಶ್ಚರ್ಯಪಡಿಸಿದಿರ್ದಲಿಕ್ಕಿಲ್ಲ. ಆದರೆ ಜ್ಞಾನೋಕ್ತಿಯೊಂದು ಹೀಗನ್ನುತ್ತದೆ: “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು. ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವದು.” (ಜ್ಞಾನೋಕ್ತಿ 26:20, 21) ನಾವು ಸೌಮ್ಯ-ಚಿತರ್ತಾಗಿದಲ್ದ್ಲಿ, ‘ಬೆಂಕಿಗೆ ಕಟ್ಟಿಗೆಯನ್ನು ಹಾಕಿ’ ಇತರರನ್ನು ಸಿಟ್ಟಿಗೆಬ್ಬಿಸುವ ಬದಲಾಗಿ ಅವರೊಂದಿಗೆ ಒಳ್ಳೇ ಸಂಬಂಧವನ್ನು ಕಾಪಾಡಿಕೊಳ್ಳ ಶಕ್ತರಾಗುವೆವು.

17 ಒಬ್ಬ ಸೌಮ್ಯ-ಚಿತ್ತದ ವ್ಯಕ್ತಿಗೆ ಒಳ್ಳೇ ಸ್ನೇಹಿತರು ಇರುವದು ಸಂಭವನೀಯವು. ಅವನಲ್ಲಿ ಸಕಾರಾತ್ಮಕ ಭಾವವಿರುವುದರಿಂದ ಜನರು ಅವನೊಂದಿಗೆ ಸಹವಸಿಸಲು ಆನಂದಿಸುತ್ತಾರೆ, ಮತ್ತು ಅವನ ಮಾತುಗಳು ಚೈತನ್ಯಕರವೂ ಜೇನಿನಂತೆ ಮಧುರವೂ ಆಗಿರುವುದು. (ಜ್ಞಾನೋಕ್ತಿ 16:24) ಯೇಸುವಿನ ವಿಷಯದಲ್ಲಿ ಇದು ಸತ್ಯವಾಗಿತ್ತು, ಅವನು ಹೀಗೆ ಹೇಳಶಕ್ತನಾಗಿದ್ದನು: “ನಾನು ಸಾತ್ವಿಕನೂ (ಸೌಮ್ಯನು, NW) ದೀನ ಮನಸ್ಸುಳ್ಳವನೂ (ಹೃದಯವುಳ್ಳವನೂ, NW) ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಗುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು, ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:29, 30) ಯೇಸು ಕಠೋರನಾಗಿರಲಿಲ್ಲ, ಮತ್ತು ಅವನ ನೊಗವು ಗೋಳುಗುಟ್ಟಿಸುವಂಥದಲ್ಲ. ಅವನ ಬಳಿಗೆ ಬಂದವರು ಚೆನ್ನಾಗಿ ಉಪಚರಿಸಲ್ಪಟ್ಟರು ಮತ್ತು ಆತ್ಮಿಕವಾಗಿ ಚೇತರಿಸಲ್ಪಟ್ಟರು. ಸೌಮ್ಯ-ಚಿತನ್ತಾದ ಕ್ರೈಸ್ತ ಮಿತ್ರನೊಂದಿಗೆ ನಾವು ಸಹವಸಿಸುವಾಗಲೂ ಪರಿಸ್ಥಿತಿಯು ಇದೇ ರೀತಿ ಇರುವುದು.

18 ಸೌಮ್ಯತೆಯು ಜೊತೆ ವಿಶ್ವಾಸಿಗಳಿಗೆ ನಮ್ಮನ್ನು ಪ್ರಿಯರನ್ನಾಗಿ ಮಾಡುತ್ತದೆ. ಕೊರಿಂಥದ ಹೆಚ್ಚಿನ ಕ್ರೈಸ್ತರು ಪೌಲನ ಕಡೆಗೆ ನಿಸ್ಸಂಶಯವಾಗಿ ಆಕರ್ಷಿಸಲ್ಪಟ್ಟದ್ದು, “ಕ್ರಿಸ್ತನ ಶಾಂತ ಮನಸ್ಸು (ಸೌಮ್ಯತೆ, NW) ಮತ್ತು ಸಾತ್ವಿಕತದ್ವಿಂದ” ಅವನು ಅವರನ್ನು ಉಪಚರಿಸಿದ್ದೇ ಆಗಿತ್ತು. (2 ಕೊರಿಂಥ 10:1) ಅವನು ಸೌಮ್ಯ ಪ್ರಕೃತಿಯ ಕೋಮಲ ಶಿಕ್ಷಕನಾಗಿದ್ದರಿಂದಲೇ ಥೆಸಲೊನೀಕದವರು ಅಪೊಸ್ತಲನಿಗೆ ಒಳ್ಳೇ ಪ್ರತಿಕ್ರಿಯೆಯನ್ನು ನಿಶ್ಚಯವಾಗಿಯೂ ತೋರಿಸಿದ್ದಿರಬೇಕು. (1 ಥೆಸಲೊನೀಕ 2:5-8) ಎಫೆಸದ ಹಿರಿಯರು ಸಹಾ ಪೌಲನಿಂದ ಬಹಳಷ್ಟನ್ನು ಕಲಿತಿದಿರ್ದಬೇಕು ಮತ್ತು ಅವನನ್ನು ಬಹಳವಾಗಿ ಪ್ರೀತಿಸಿದಿರ್ದಬೇಕೆಂಬದಕ್ಕೆ ಸಂದೇಹವಿಲ್ಲ. (ಅಪೊಸ್ತಲರ ಕೃತ್ಯಗಳು 20:20, 21, 37, 38) ಇತರರಿಗೆ ನಿಮ್ಮನ್ನು ಪ್ರಿಯಗೊಳಿಸುವ ಆ ಸೌಮ್ಯತೆಯನ್ನು ನೀವು ಪ್ರದರ್ಶಿಸುತ್ತೀರೋ?

19. ಯೆಹೋವನ ಜನರು ಆತನ ಸಂಸ್ಥೆಯಲ್ಲಿ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವಂತೆ ಸೌಮ್ಯತೆ ಹೇಗೆ ಸಹಾಯ ಮಾಡುತ್ತದೆ?

19 ಸೌಮ್ಯಚಿತ್ತವು ಯೆಹೋವನ ಜನರನ್ನು ಅಧೀನತೆಯಲ್ಲಿರುವಂತೆ ಮಾಡುತ್ತದೆ ಮತ್ತು ಆತನ ಸಂಸ್ಥೆಯಲ್ಲಿ ತಮ್ಮ ಸ್ಥಾನವನ್ನು ಕಾಪಾಡುವಂತೆ ಸಹಾಯ ಮಾಡುತ್ತದೆ. (ಫಿಲಿಪ್ಪಿಯ 2:5-8, 12-14; ಇಬ್ರಿಯ 13:17) ಸೌಮ್ಯತೆಯು ಘನಮಾನವನ್ನು ಹುಡುಕುವುದರಿಂದ ನಮ್ಮನ್ನು ನಿರೋಧಿಸುತ್ತದೆ, ಅದು ಅಹಂಕಾರದಲ್ಲಿ ಆಧರಿತವಾಗಿದ್ದು, ಯೆಹೋವನಿಗೆ ಅಸಹ್ಯವಾಗಿದೆ. (ಜ್ಞಾನೋಕ್ತಿ 16:5) ಒಬ್ಬ ಸೌಮ್ಯ ವ್ಯಕ್ತಿಯು ತನ್ನನ್ನು ಇತರರಿಗಿಂತ ಶ್ರೇಷ್ಠನೆಂದು ಭಾವಿಸುವುದಿಲ್ಲ ಮತ್ತು ಅವನು ಅವರನ್ನು ಕೆಟ್ಟದ್ದಕ್ಕಾಗಿ ಬಳಸಿ ಹೆಚ್ಚಳಪಡಲು ಬಯಸುವದಿಲ್ಲ. (ಮತ್ತಾಯ 23:11, 12) ಬದಲಾಗಿ, ಅವನು ತನ್ನ ಪಾಪಪೂರ್ಣ ಸ್ಥಿತಿಯನ್ನು ಒಪ್ಪಿಕೊಂಡು ದೇವರ ವಿಮೋಚನಾ ಒದಗಿಸುವಿಕೆಯಲ್ಲಿ ತನಗಿರುವ ಅಗತ್ಯವನ್ನು ಅಂಗೀಕರಿಸುವನು.

ಸೌಮ್ಯತೆ ಧನ್ಯತೆಯನ್ನು ಪ್ರವರ್ಧಿಸುತ್ತದೆ

20. ಕುಟುಂಬ ಜೀವಿತದ ಮೇಲೆ ಸೌಮ್ಯತೆಯು ಹೇಗೆ ಪ್ರಭಾವಿಸುತ್ತದೆ?

20 ಸೌಮ್ಯತೆಯು ಸಂತೋಷವನ್ನು ತರುವಂಥ ದೇವರಾತ್ಮದ ಫಲವೆಂಬದನ್ನು ದೇವರ ಸೇವಕರೆಲ್ಲರೂ ನೆನಪಿನಲ್ಲಿಡತಕ್ಕದ್ದು. ಉದಾಹರಣೆಗೆ, ಯೆಹೋವನ ಜನರು ಪ್ರೀತಿ ಮತ್ತು ಸೌಮ್ಯತೆಯೆಂಬ ಗುಣಗಳನ್ನು ಪ್ರದರ್ಶಿಸುವ ಕಾರಣ ಅವರ ನಡುವೆ ಸಂತೋಷವುಳ್ಳ ಕುಟುಂಬಗಳು ನೆಲೆಸಿರುತ್ತವೆ. ಪತಿ ಮತ್ತು ಪತ್ನಿ ತಮ್ಮ ತಮ್ಮೊಳಗೆ ಸೌಮ್ಯ ಭಾವದಿಂದ ವರ್ತಿಸುವಾಗ, ಅವರ ಮಕ್ಕಳು ಶಾಂತ ಪರಿಸರದಲ್ಲಿ ಬೆಳೆಸಲ್ಪಡುತ್ತಾರೆ, ಕಟುವಾದ ನುಡಿ ಮತ್ತು ನಡೆಗಳಿರುವ ಕುಟುಂಬದಲ್ಲಿ ಅಲ್ಲ. ತಂದೆಯು ತನ್ನ ಮಕ್ಕಳನ್ನು ಸೌಮ್ಯತೆಯಿಂದ ತಿದ್ದುವಾಗ, ಅವರ ಎಳೆ ಮನಸ್ಸಿನ ಮೇಲೆ ಇದು ಒಳ್ಳೇ ಪರಿಣಾಮವನ್ನು ಬೀರುತ್ತದೆ ಮತ್ತು ಸೌಮ್ಯ ಭಾವವು ಅವರ ವ್ಯಕ್ತಿತ್ವದ ಭಾಗವಾಗಿ ಪರಿಣಮಿಸುವ ಸಂಭವನೀಯತೆ ಅಲ್ಲಿದೆ. (ಎಫೆಸ 6:1-4) ಒಂದು ಸೌಮ್ಯ ಸ್ವಭಾವವು ಗಂಡಂದಿರಿಗೆ ತಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರುವಂತೆ ನೆರವಾಗುತ್ತದೆ. ಅದು ಪತ್ನಿಯರನ್ನು ತಮ್ಮ ಗಂಡಂದಿರಿಗೆ ಅಧೀನರಾಗಿ ಇರುವಂತೆಯೂ ಮತ್ತು ಮಕ್ಕಳನ್ನು ಅವರ ಹೆತ್ತವರಿಗೆ ವಿಧೇಯರಾಗುವಂತೆಯೂ ಸಹಾಯ ಮಾಡುತ್ತದೆ. ಸೌಮ್ಯತೆಯು ಕುಟುಂಬ ಸದಸ್ಯರನ್ನು, ಕುಟುಂಬ ಸಂತೋಷಕ್ಕೆ ನೆರವಾಗುವ ಕ್ಷಮಿಸುವ ಭಾವವುಳ್ಳವರಾಗಿಯೂ ಮಾಡುತ್ತದೆ.—ಕೊಲೊಸ್ಸೆಯ 3:13, 18-21.

21. ಸಾರಾಂಶದಲ್ಲಿ ಅಪೊಸ್ತಲ ಪೌಲನು ಎಫೆಸ 4:1-3ರಲ್ಲಿ ಯಾವ ಸೂಚನೆಯನ್ನು ಕೊಟ್ಟನು?

21 ಸೌಮ್ಯ ಸ್ವಭಾವದ ಕುಟುಂಬಗಳು ಮತ್ತು ವ್ಯಕ್ತಿಗಳು ತಾವು ಸಹವಸಿಸುವ ಸಭೆಗಳಲ್ಲಿ ಸಂತೋಷವನ್ನು ಪ್ರವರ್ಧಿಸುತ್ತಾರೆ. ಆದುದರಿಂದ ಯೆಹೋವನ ಜನರು ಸೌಮ್ಯ-ಚಿತರ್ತಾಗಿರುವಂತೆ ಮನಃಪೂರ್ವಕವಾಗಿ ಪ್ರಯತ್ನವನ್ನು ಮಾಡುವ ಅಗತ್ಯವಿದೆ. ನೀವದನ್ನು ಮಾಡುತ್ತಿದ್ದೀರೋ? ಅಪೊಸ್ತಲ ಪೌಲನು ಜೊತೆ ಅಭಿಷಿಕ್ತ ಕ್ರೈಸ್ತರನ್ನು ತಮ್ಮ ಸ್ವರ್ಗೀಯ ಕರೆಗೆ ಅರ್ಹರಾಗಿ ನಡೆದುಕೊಳ್ಳುವಂತೆ, “ಪೂರ್ಣವಿನಯ ಸೌಮ್ಯತೆಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿದ್ದು ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಂಡು ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಂಡು” ಅದನ್ನು ಮಾಡುವಂತೆ ಪ್ರಬೋಧಿಸಿದನು. (ಎಫೆಸ 4:1-3) ಭೂನಿರೀಕ್ಷೆ ಇರುವ ಕ್ರೈಸ್ತರು ಸಹಾ ಸೌಮ್ಯತೆ ಮತ್ತು ಇತರ ದೈವಿಕ ಗುಣಗಳನ್ನು ಪ್ರದರ್ಶಿಸಬೇಕು. ಇದು ನಿಜ ಸಂತೋಷವನ್ನು ತರುವ ಮಾರ್ಗವಾಗಿದೆ. ಸೌಮ್ಯ-ಚಿತರ್ತು ನಿಶ್ಚಯವಾಗಿಯೂ ಧನ್ಯರೇ ಸರಿ! (w91 10/15)

ನೀವು ಹೇಗೆ ಉತ್ತರಿಸುವಿರಿ?

◻ ಸೌಮ್ಯ-ಚಿತರ್ತು ಧನ್ಯರೇಕೆ?

◻ ಸೌಮ್ಯ-ಚಿತರ್ತಾಗಿರುವುದು ಎಂದರೇನರ್ಥ?

◻ ಸೌಮ್ಯತೆಯನ್ನು ಹೇಗೆ ವಿಕಾಸಿಸಬಹುದು?

◻ ಸೌಮ್ಯತೆಯ ಕೆಲವು ಪ್ರಯೋಜನಗಳಾವುವು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ