ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 4/1 ಪು. 4-7
  • ಲೋಕ ವ್ಯಾಪಕ ಸಂತೋಷ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಲೋಕ ವ್ಯಾಪಕ ಸಂತೋಷ
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಯಾರೂ ಅಪಹರಿಸಲಾರದ ಸಂತೋಷ”
  • “ಭೂಲೋಕದ ಕಟ್ಟಕಡೆಯ ವರೆಗೆ”
  • “ನಿಮ್ಮಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇರಲಿ”
  • ಶಾಂತಭರಿತ ಜನರು
  • “ನನ್ನ ಬಾಧೆಗಳನ್ನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ”
  • ಹೃದಯದ ಆನಂದದಿಂದ ಯೆಹೋವನನ್ನು ಸೇವಿಸಿರಿ
    ಕಾವಲಿನಬುರುಜು—1995
  • ಸಂತೋಷದಿಂದ ತುಂಬಿಕೊಳ್ಳಿರಿ
    ಕಾವಲಿನಬುರುಜು—1991
  • ಯೆಹೋವನ ಆನಂದವು ನಮ್ಮ ಆಶ್ರಯದುರ್ಗವಾಗಿದೆ
    ಕಾವಲಿನಬುರುಜು—1995
  • ಯೆಹೋವನನ್ನು ಸಂತೋಷದಿಂದ ಸೇವಿಸುವುದು
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು—1991
w91 4/1 ಪು. 4-7

ಲೋಕ ವ್ಯಾಪಕ ಸಂತೋಷ

“ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷಧ್ವನಿಗೈಯುವರು.” (ಯೆಶಾಯ 65:14) ಹೀಗೆ ಯೆಹೋವನು ಹೇಳಿದ್ದು ತನ್ನ ಪ್ರವಾದಿಯಾದ ಯೆಶಾಯನ ಮುಖಾಂತರ, ಮತ್ತು ಯೆಹೋವನ ಸಾಕ್ಷಿಗಳ ನಡುವೆ ಆತನ ಮಾತುಗಳು ಎಂಥಹ ಮಹತ್ತಾದ ನೆರವೇರಿಕೆಯನ್ನು ಪಡೆಯುತ್ತಿವೆ! ಅವರ ಹೃದಯಾನಂದವು ಬರುವುದೆಲ್ಲಿಂದ? ಯೆಹೋವ ದೇವರನ್ನು ಅವರು ಐಕ್ಯತೆಯಿಂದ ಆರಾಧಿಸುವುದರಿಂದಲೇ ಬರುತ್ತದೆ. ಆತನು “ಸಂತೋಷವುಳ್ಳ ದೇವರು,” ಮತ್ತು ಆತನನ್ನು ಆರಾಧಿಸುವವರು “ಯೆಹೋವನಲ್ಲಿ ಆನಂದಿಸುತ್ತಾರೆ.” (1 ತಿಮೊಥಿ 1:11; ಜೆಕರ್ಯ 10:7) ಈ ಆನಂದಭರಿತ ಭಕ್ತಿಯು ಅವರನ್ನು, ರಾಜ್ಯದ ಸುವಾರ್ತೆಯನ್ನು ಒಂದುಗೂಡಿ ಸಾರುವಾಗ ಮತ್ತು ತಮ್ಮ ದೇವರಿಗಾಗಿ ಲೋಕವ್ಯಾಪಕ ಸ್ತುತಿಘೋಷವನ್ನು ಎಬ್ಬಿಸುವಾಗ, ಒಂದು ಐಕ್ಯತೆಯ ರಾಷ್ಟ್ರವನ್ನಾಗಿ ಮಾಡುತ್ತದೆ.—ಪ್ರಕಟನೆ 7:9, 10.

“ಯಾರೂ ಅಪಹರಿಸಲಾರದ ಸಂತೋಷ”

ದೇವರ ನಾಮವನ್ನು ಮತ್ತು ರಾಜ್ಯವನ್ನು ಪ್ರಕಟಪಡಿಸುವುದು ಯೆಹೋವನ ಸಾಕ್ಷಿಗಳಿಗೆ ಒಂದು ಆನಂದದ ಮೂಲ ನಿಶ್ಚಯ. (ಮಾರ್ಕ 13:10) ಅವರು ಕೀರ್ತನೆಗಾರನ ಈ ಮಾತುಗಳಿಗೆ ಪ್ರತಿಕ್ರಿಯೆ ತೋರಿಸುತ್ತಾರೆ: “ಆತನ ಪರಿಶುದ್ಧ ನಾಮದಲ್ಲಿ ಹಿಗ್ಗಿರಿ. ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ.”—ಕೀರ್ತನೆ 105:3.

ಇದನ್ನು ಮಾಡಲು ಅವರಿಗೆ ಆಗಾಗ್ಯೆ ಅಡಿತ್ಡಡೆಗಳನ್ನು ಪರಿಹರಿಸಬೇಕಾಗುತ್ತದೆ. ಸ್ಪೈನ್‌ ದೇಶದ ಇಸಿಡ್ರೊ, ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡನು ಮತ್ತು ಆತನ ಕುರಿತು ಇತರರೊಡನೆ ಮಾತಾಡ ಬಯಸಿದನು. ಆದರೆ ಅವನು ಟ್ರಕ್‌ ಡ್ರೈವರನಾಗಿದ್ದರಿಂದ ಪುರುಸೊತ್ತು ಸೀಮಿತವಾಗಿತ್ತು. ರಾತ್ರಿಯಿಡೀ ದೀರ್ಘ ಪ್ರಯಾಣ ಮಾಡಿ ಹಗಲು ಹೊತ್ತು ಮಲಗುತ್ತಿದ್ದನು. ಆದ್ದರಿಂದ, ಬೇರೆ ಲಾರಿ ಡ್ರೈವರರಿಗೆ ಇಸೆಡ್ರೊ ಸಾಕ್ಷಿ ಕೊಡ ಬಯಸಿದ. ಆದರೆ ಅವನದನ್ನು ಮಾಡುವುದು ಹೇಗೆ?

ಅವನು ತನ್ನ ಲಾರಿಗೆ ಸೀಬಿ (ಸಿಟಿಜನ್ಸ್‌ ಬ್ಯಾಂಡ್‌) ರೇಡಿಯೋ ತಗಲಿಸಿ ಬೇರೆ ಡ್ರೈವರರೊಂದಿಗೆ ಮಾತಾಡಲು ಅದನ್ನುಪಯೋಗಿಸಿದನು. ಕೊಂಚವೇ ಉಪಯೋಗಿಸಲ್ಪಡುತ್ತಿದ್ದ ಚಾನೆಲ್‌ 13ನ್ನು ಅವನು ಶೀಘ್ರದಲ್ಲೇ ಕಂಡುಕೊಂಡ ಮತ್ತು ಅದನ್ನು ಸದುಪಯೋಗಕ್ಕೆ ಹಾಕಲು ನಿರ್ಧರಿಸಿದ. ಸೀಬಿ ರೇಡಿಯೋ ಮೂಲಕ ತಾವು ಬೈಬಲಿನ ಕುರಿತು ಮಾತಾಡುವುದನ್ನು ಅವನು ಬೇರೆ ಡ್ರೈವರರಿಗೆ ಮೊದಲಾಗಿ ಸೂಚಿಸಿದಾಗ ಪ್ರತಿಕ್ರಿಯೆಯು ತೀರಾ ನಕಾರಾತ್ಮಕವಾಗಿತ್ತು. ಆದರೆ ಕೆಲವರು ಕಿವಿಗೊಟ್ಟರು. ಸುದ್ದಿ ಹರಡಿತು. ಅಧಿಕಾಧಿಕ ಸ್ಪೇನಿಷ್‌ ಲಾರಿ ಡ್ರೈವರರು ಚಾನೆಲ್‌ 13ನ್ನು ತೆರೆಯ ತೊಡಗಿದರು. ಕಡಿಮೆ ಪಕ್ಷ ಒಬ್ಬನು ತನ್ನ ಬೈಬಲ್‌ ಅಧ್ಯಯನವನ್ನು ಮುಂದರಿಸಲು ಹೆಜ್ಜೆ ತಕ್ಕೊಂಡದ್ದು ಇಸಿಡ್ರೊಗೆ ಇತ್ತೀಚೆಗೆ ತಿಳಿದುಬಂತು.

ಇಟೆಲಿಯಲ್ಲಿ ಒಬ್ಬ ಮನುಷ್ಯನು, ಬಸ್ಸಿನಲ್ಲಿ ನಡೆದ ಒಂದು ಸಂಭಾಷಣೆಯ ಮೂಲಕ ಯೆಹೋವನ ಸಾಕ್ಷಿಗಳನ್ನು ತಿಳಿದನು. ಅವನ ಪತ್ನಿಯು ಅವರನ್ನು ಒಬ್ಬ ಸ್ನೇಹಿತೆಯ ಮುಖಾಂತರ ಭೇಟಿಯಾದಳು. ಇಬ್ಬರೂ ಬೈಬಲನ್ನು ಅಭ್ಯಾಸಿಸಿದರು ಮತ್ತು ತಾವು ಕಲಿತ ವಿಷಯವನ್ನು ಇತರರೊಂದಿಗೆ ಪಾಲಿಗರಾಗಲು ಆತುರಪಟ್ಟರು. ಅವರೆಷ್ಟು ಅತುರಪಟ್ಟರೆಂದರೆ, ರಾಜ್ಯದ ಸುವಾರ್ತೆಯನ್ನು ಇತರರಿಗೆ ತಿಳಿಸುವುದರಲ್ಲಿ ಹೆಚ್ಚು ಸಮಯವನ್ನು ಕಳೆಯವುದಕ್ಕಾಗಿ ಆ ಮನುಷ್ಯನು ಕಂಪೆನಿಯಲ್ಲಿ ದೊರೆತ ಹುದ್ದೇ ಬಡತಿಯನ್ನು ನಿರಾಕರಿಸಿದನು ಮತ್ತು ಅವನ ಪತ್ನಿ ಒಳ್ಳೇ ಸಂಬಳದ ಕೆಲಸವನ್ನು ಬಿಟ್ಟುಕೊಟ್ಟಳು. ಆ ತ್ಯಾಗಕ್ಕೆ ಅದು ಅರ್ಹವಾಗಿತ್ತೋ? ಹೌದು. ಆ ಮನುಷ್ಯನು ಹೇಳುವುದು: “ಸತ್ಯವು ನಮಗೆ ತಿಳಿದು ಬಂದಂದಿನಿಂದ ನನಗೆ ಮತ್ತು ನನ್ನ ಪತ್ನಿಗೆ, ಸುಮಾರು 20 ಮಂದಿಯನ್ನು ಸತ್ಯದ ಸ್ಪಷ್ಟ ಜ್ಞಾನಕ್ಕೆ ತರಲು ನೆರವಾಗುವ ಸಂತೋಷವು ಲಭಿಸಿದೆ. ಸಂಜೆಯು ಬಂದಾಗ, ದಿನವೆಲ್ಲವನ್ನು ಯೆಹೋವನ ಸೇವೆಯಲ್ಲಿ ಕಳೆದು ಮನೆಗೆ ಹಿಂದಿರುಗಿದಾಗ, ಆಯಾಸವಾಗುತ್ತದೆ ನಿಜ. ಆದರೆ ನಾನು ಸಂತೋಷಿತನು, ಮತ್ತು ಯಾರೂ ಅಪಹರಿಸಲಾರದ ಒಂದು ಆನಂದವನ್ನು ನನಗೆ ಕೊಟ್ಟದ್ದಕ್ಕಾಗಿ ಯೆಹೋವನಿಗೆ ಕೃತಜ್ಞನು.”

“ಭೂಲೋಕದ ಕಟ್ಟಕಡೆಯ ವರೆಗೆ”

ತದ್ರೀತಿಯ ಹುರುಪನ್ನು ದೇವರ ಹರ್ಷಭರಿತ ರಾಷ್ಟ್ರದಲ್ಲಿರುವವರು, ತಾವಿರುವಲ್ಲೆಲ್ಲಾ, “ಭೂಲೋಕದ ಕಟ್ಟಕಡೆ”ಯಲ್ಲೂ ತೋರಿಸುತ್ತಾರೆ. (ಅಪೊಸ್ತಲರ ಕೃತ್ಯ 1:8) ಉತ್ತರದ ಗ್ರೀನ್‌ಲ್ಯಾಂಡಿಗಿಂತ ಅತಿ ಕಟ್ಟಕಡೆಯ ಸ್ಥಳಗಳು ಕೇವಲ ಕೆಲವೇ. ಆದರೂ ಅಲ್ಲಿ ಕೂಡಾ, ಉತ್ತರ ಧ್ರುವ ವೃತ್ತದ 200 ಮೈಲು ಉತ್ತರಕ್ಕೆ ಇಲ್ಯೂಲಿಸಾಟ್‌ನಲ್ಲಿ, 19 ಜನರಿಂದ ಕೂಡಿದ ಒಂದು ಚಿಕ್ಕ ಸಭೆಯು ಇದೆ. ಇವರೂ, ಆ ಇಟೇಲಿಯನ್‌ ದಂಪತಿಗಳಂತೆ, ಅದೇ ರಾಜ್ಯದ ಸುವಾರ್ತೆಯನ್ನು ಸಾರುತ್ತಾರೆ ಮತ್ತು ಗ್ರೀನ್‌ಲ್ಯಾಂಡಿನ ಏಳು ಜನರು ಯೆಹೋವನಿಗೆ ತಮ್ಮ ಸಮರ್ಪಣೆಯ ಸೂಚಕವಾಗಿ ದೀಕ್ಷಾಸ್ನಾನ ಪಡೆದದನ್ನು ಕಾಣುವುದರಲ್ಲಿ ಅವರು ಸಂತೋಷಿಸಿದರು.

ಗ್ರೀನ್‌ಲ್ಯಾಂಡ್‌ನಿಂದ ಅನೇಕ ಸಾವಿರ ಮೈಲುಗಳ ದೂರದಲ್ಲಿ, ಹಿಂದೂ ಸಾಗರದ ಸಮ ಉಷ್ಣವಲಯ ದ್ವೀಪವಾದ ಮರೀಶಿಯಸ್‌ನಲ್ಲಿರುವ ಅಂಜಿನಿ, ಅದೇ ಸಂತೋಷವನ್ನು ಅನುಭವಿಸುತ್ತಾಳೆ. ಮೊದಮೊದಲು ವಿಷಯಗಳು ಅಂಜಿನಿಗೆ ಕಷ್ಟವಾದವು. ಭಾರತೀಯ ಹಿಂದೂ ಮೂಲದ ಅವಿವಾಹಿತ ಹುಡುಗಿಯು ಮರೀಶಿಯಸ್‌ನಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗುವದೂ ಬಹಿರಂಗವಾಗಿ ಸಾರುವುದೂ ಯುಕ್ತವಾದ ಚಟುವಟಿಕೆಯಾಗಿ ನೋಡಲ್ಪಡುವುದಿಲ್ಲ. ಆದರೆ ಅಂಜಿನಿಯು ಬಿಡದೆ ಮುಂದುವರಿದಳು. ಈಗ ಆಕೆ, ತನ್ನ ಕ್ರಿಸ್ತೀಯ ಮಾರ್ಗವನ್ನು ಆರಂಭಿಸಿದ ಒಂಭತ್ತು ವರ್ಷಗಳ ನಂತರ, ಅವಳ ಸಂಬಂಧಿಕರಲ್ಲೂ ಕೆಲವರು ಬೈಬಲನ್ನು ಅಭ್ಯಾಸಿಸ ತೊಡಗಿದ್ದಾರೆ.

ಅಂಜಿನಿಯ ಸಂಬಂಧದಲ್ಲಿ, ಲೋಕದ ಇನ್ನೊಂದು ಭಾಗವಾದ ಹೊಂಡುರಾಸ್‌ನ ಎಮಿಲಿಯೊ ಕುರಿತೂ ತಿಳಿಸಬೇಕು. ಸಹೋದ್ಯೋಗಿಗಳು ಕೆಲಸದ ಸ್ಥಳದಲ್ಲಿ ಬೈಬಲನ್ನು ಚರ್ಚಿಸುವುದನ್ನು ಕೇಳಿದ ಎಮಿಲಿಯೋ, ತನ್ನನ್ನೂ ಸೇರಿಸುವಂತೆ ಕೇಳಿಕೊಂಡನು. ಅವನಿಗೆ ಓದು ಬರುತ್ತಿರಲಿಲ್ಲ ಆದರೆ ಬೈಬಲ್‌ ವಚನಗಳು ಓದಲ್ಪಟ್ಟಾಗ ಉಲ್ಲಾಸದಿಂದ ಕಿವಿಗೊಡುತ್ತಿದ್ದನು. ಕ್ರಿಸ್ತೀಯ ಸತ್ಯಗಳು ಅವನ ಹೃದಯವನ್ನು ತೂರಿಹೋದಾಗ ಎಮಿಲಿಯೋ, ಅನೈತಿಕ ಜೀವನವನ್ನು ತ್ಯಜಿಸಿಬಿಟ್ಟನು ಮತ್ತು ಮಿತಿಮೀರಿ ಕುಡಿಯುವುದನ್ನು ಬಿಟ್ಟುಬಿಟ್ಟನು. ಯೆಹೋವನ ಸಾಕ್ಷಿಗಳು ಅವನಿಗೆ ಓದು ಬರಹವನ್ನು ಕಲಿಸಿದರು ಮತ್ತು ಅವನೀಗ ದೇವರ ಹರ್ಷಭರಿತ ರಾಷ್ಟ್ರದಲ್ಲಿ ಒಬ್ಬ ಶುಶ್ರೂಷಕನಾಗಿದ್ದಾನೆ.

ಹೊಂಡುರಾಸ್‌ಗೆ ಸಾವಿರಾರು ಮೈಲು ವಾಯುವ್ಯದ ಅಲಾಸ್ಕದಲ್ಲಿ, ಎಸ್ಕಿಮೋ ಮಾತೆಯೊಬ್ಬಳು ಅದೇ ಕ್ರಿಸ್ತೀಯ ಸತ್ಯವನ್ನು ಕಲಿತಳು. ಈ ಮಹಿಳೆ ಅತೀ ಏಕಾಂತದ ಹಳ್ಳಿಯೊಂದರಲ್ಲಿ ಜೀವಿಸಿದ್ದಳು ಮತ್ತು ಯೆಹೋವನ ಸಾಕ್ಷಿಗಳೊಂದಿಗೆ ಅವಳ ಒಂದೇ ಸಂಪರ್ಕವು ಅಂಚೆಯ ಮೂಲಕ ಮಾತ್ರ. ಆದ್ದರಿಂದ ಅವಳು ಅಂಚೇ ಮೂಲಕವಾಗಿ ಅಭ್ಯಾಸ ಮಾಡಿದಳು, ಅಂಚೆಯ ಮೂಲಕ ತನ್ನ ಪ್ರಶ್ನೆಗಳನ್ನು ಕೇಳಿದಳು ಮತ್ತು ಈಗ, ತನಗೆ ತಿಳಿದದ್ದನ್ನು ತನ್ನ ನೆರೆಯವರೊಂದಿಗೆ ಉತ್ಸಾಹದಿಂದ ಸಾರುತ್ತಿದ್ದಾಳೆ. ಇಂಥಹ ಅನೇಕಾನೇಕ ಉದಾಹರಣೆಗಳನ್ನು ಅನಿರ್ದಿಷ್ಟವಾಗಿ ಕೊಡ ಸಾಧ್ಯವಿದೆ. ಲೋಕವ್ಯಾಪಕವಾಗಿ ದೀನ ಹೃದಯದ ಜನರು, “ಯೆಹೋವನನ್ನು ಸಂತೋಷದಿಂದ ಸೇವಿಸಲು” ಬರುತ್ತಿದ್ದಾರೆ.—ಕೀರ್ತನೆ 100:2.

“ನಿಮ್ಮಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇರಲಿ”

ಇವರೆಲ್ಲರನ್ನು ಆಕರ್ಷಿಸುತ್ತಿರುವ ಒಂದು ವಿಷಯ ಯಾವುದೆಂದರೆ, ದೇವರ ಹರ್ಷಭರಿತ ರಾಷ್ಟ್ರದಲ್ಲಿರುವ ಪ್ರೀತಿಯೇ. ಯೇಸು ಅಂದದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಇದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಕ್ರಿಸ್ತೀಯ ಪ್ರೀತಿಯು ಈ ಸತ್‌-ಕ್ರೈಸ್ತರ ದೈನಂದಿನ ಜೀವಿತದಲ್ಲಿ, ವಿಶೇಷವಾಗಿ ಆಪತ್ತು ಹೊಡೆದ ಸಂದರ್ಭದಲ್ಲಿ, ತೋರಿಬರುತ್ತದೆ.

ಯೆಹೋವನ ಸಾಕ್ಷಿಗಳ ಚಟುವಟಿಕೆಯು, ದುರ್ದೈವದಿಂದ ನಿಷೇಧ ಆಗಿರುವ ಆಫ್ರಿಕದ ದೇಶವೊಂದರಲ್ಲಿ, ಕಡು ಬರವು ಬಂತು. ಹತ್ತು ಸಾವಿರ ಜನರು ಸತ್ತರು ಮತ್ತು ದನಕರುಗಳ ಹಿಂಡುಹಿಂಡೇ ನಶಿಸಿಹೋದವು. ಸಾಕ್ಷಿಗಳು ಪಾರಾದದ್ದು ಹೇಗೆ? ಸಸ್ಯಗಳ ಬೇರುಗಳನ್ನು ಮತ್ತು ಅವೊಕಾಡೋ ಹಣ್ಣನ್ನು ಬೇಯಿಸಿ ತಿಂದ ಮೂಲಕವೇ. ಆದರೆ ಅವರ ಅವಸ್ಥೆಯು ಗಮನಾರ್ಹವಾಗಿ ಸುಧಾರಿಸಿದ್ದು ಯಾವಾಗವೆಂದರೆ, ದೇವರ ಸಹಾಯದಿಂದ, ಬೇರೆ ದೇಶಗಳ ಸಾಕ್ಷಿಗಳು 25 ಟನ್ನು ಆಹಾರ ವಸ್ತುಗಳನ್ನು ಪರಿಹಾರವಾಗಿ ಒದಗಿಸಲು ಅನಿರೀಕ್ಷಿತ ಅನುಮತಿಯನ್ನು ಪಡಕೊಳ್ಳ ಶಕ್ತರಾದಾಗಲೇ. ನಿಷೇಧದ ಮಧ್ಯೆಯೂ ಈ ಅಹಾರವಸ್ತುಗಳನ್ನು ಸುರಕ್ಷಿತವಾಗಿ ಮುಟ್ಟಿಸಲು, ಮಿಲಿಟರಿ ಬೆಂಗಾವಲನ್ನು ಒದಗಿಸಲಾಯಿತು!

ನಿಜವಾಗಿಯೂ ಆ ಆಫ್ರಿಕನ್‌ ಸಾಕ್ಷಿಗಳು ತಮಗಾಗಿ ತಮ್ಮ ಸಹೋದರರು ತೋರಿಸಿದ ಈ ಪ್ರೀತಿಯ ರುಜುವಾತಿಗಾಗಿ ಆನಂದದಿಂದ ತುಂಬಿದರು, ಯೆಶಾಯನ ಈ ಮಾತುಗಳ ನೆರವೇರಿಕೆಯನ್ನೂ ಅವರಾಗ ಅನುಭವಿಸಿದರು: “ಇಗೋ, ಯೆಹೋವನ ಹಸ್ತವು ರಕ್ಷಿಸಲಾರದಂತೆ ಮೋಟುಗೈಯಲ್ಲ; ಆತನ ಕಿವಿಯು ಕೇಳಲಾರದ ಹಾಗೆ ಕಿವುಡಲ್ಲ.”—ಯೆಶಾಯ 59:1.

ಶಾಂತಭರಿತ ಜನರು

ದೀನ ಹೃದಯದ ಜನರು ಸಹಾ ದೇವರ ಹರ್ಷಭರಿತ ರಾಷ್ಟ್ರಕ್ಕೆ ಆಕರ್ಷಿತರಾಗಿದ್ದಾರೆ ಯಾಕಂದರೆ ಅದರ ಸದಸ್ಯರು ಈ ಲೋಕದ ಕಾದಾಟಗಳ ಮಾರ್ಗವನ್ನು ತೊರೆದು, ‘ಬರ್ಜಿಗಳನ್ನು ಕುಡುಗೋಲುಗಳನ್ನಾಗಿ ಬಡೆದಿದ್ದಾರೆ.’ (ಯೆಶಾಯ 2:4) ಎಲ್‌ ಸಾಲ್ವೆಡಾರ್‌ನಲ್ಲಿ ಒಬ್ಬ ಮಾಜಿ-ಮಿಲಿಟರಿಯವನ ಮನೆತುಂಬಾ ಮಿಲಿಟರಿ ಸೇವೆಯ ಜ್ಞಾಪಕ ವಸ್ತುಗಳು ತುಂಬಿದ್ದವು. ಆದರೆ ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಭ್ಯಾಸ ಮಾಡಿದಾಗ, ಶಾಂತಿಪ್ರಿಯ ಅಭಿರುಚಿಗಳನ್ನು ಬೆಳೆಸಿಕೊಂಡನು. ಕಟ್ಟಕಡೆಗೆ ಅವನು, ಯುದ್ಧಕ್ಕೆ ಸಂಬಂಧಿಸಿದ ಸಕಲ ವಸ್ತುಗಳನ್ನು ತನ್ನ ಮನೆಯಿಂದ ತೆಗೆದು ಹಾಕಿದನು ಮತ್ತು ಉತ್ಸಾಹದಿಂದ ಸಾರುವ ಕಾರ್ಯವನ್ನು ಸುರುಮಾಡಿದನು.

ಸರಕಾರಿ ವಿರೋಧಿ ಶಕ್ತಿಗಳು ಅವನ ಹಳ್ಳಿಯನ್ನು ಹಸ್ತಗತ ಮಾಡಿದಾಗ, ಅವನನ್ನು ಕೈದಿಯಾಗಿ ಒಯ್ಯಲಾಯಿತು—ಅವನು ಹಿಂದೆ ಮಿಲಿಟರಿಯಲ್ಲಿದ್ದನೆಂದು ಯಾರೋ ಹೇಳಿಕೊಟ್ಟ ಕಾರಣದಿಂದಲೇ ಇರಬಹುದು. ಆದರೂ ಅವನು ವಿವರಿಸುತ್ತಾ, ತಾನು ಇನ್ನು ಮುಂದೆ ಸೈನಿಕನಲ್ಲವೆಂದೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದೂ ತಿಳಿಸಿದನು. ಅವನ ಮನೆಯಲ್ಲಿ ಶಸ್ತ್ರಗಳಿವೆಂದು ವಿರೋಧಿಗಳು ದೂರಿದರು ಆದರೆ, ಶೋಧಿಸಿದಾಗ ಏನೂ ಸಿಕ್ಕಲಿಲ್ಲ. ವಿರೋಧಿ ಪಂಗಡದ ಮುಖ್ಯಸ್ಥನು ಆಗ, ಅವನ ಕುರಿತಾಗಿ ನೆರೆಯವನನ್ನು ಕೇಳಿದನು. ದೊರೆತ ಸಾದಾ ಉತ್ತರ: “ದಿನದಿನವೂ ಬೈಬಲಿನ ಕುರಿತು ಸಾರುತ್ತಾ ರಸ್ತೆಯಲ್ಲಿ ಕೇವಲ ಅಡಾಡ್ಡುತ್ತಿರುತ್ತಾನೆ.” ಆ ಮನುಷ್ಯನನ್ನು ಬಿಡಲಾಯಿತು. ಅವನ ಹುರುಪು, ಅವನ ಜೀವರಕ್ಷಣೆಗೆ ನೆರವಾಯಿತೆಂಬದು ನಿಸ್ಸಂಶಯ.

ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದ್ದ ಇಬ್ಬರು ಸೈನಿಕರ ಕುರಿತು ಆಫ್ರಿಕನ್‌ ದೇಶದ ಒಂದು ವರದಿಯು ತಿಳಿಸುತ್ತದೆ. ಒಬ್ಬನು ಸರಕಾರಿ ಸೈನ್ಯದಲ್ಲಿ ಸೇವೆ ಮಾಡಿದ್ದನು ಮತ್ತು ಇನ್ನೊಬ್ಬನು ದಂಗೆಖೋರರ ಸಂಗಡ ಹೋರಾಡಿದವ್ದನು. ಕಟ್ಟಕಡೆಗೆ ಇಬ್ಬರೂ, “ಬರ್ಜಿಗಳನ್ನು ಕುಡುಗೋಲುಗಳಾಗಿ ಬಡೆಯಲು” ನಿರ್ಧರಿಸಿ, ಮಿಲಿಟರಿಗೆ ರಾಜೀನಾಮೆ ಕೊಟ್ಟರು. ಅವರು ಮೊತ್ತಮೊದಲಾಗಿ ಕೂಟಕ್ಕೆ ಹಾಜರಾದಾಗ, ಸರಕಾರಿ ವಿರೋಧಿ ಸೈನಿಕನು ಆ ಇನ್ನೊಬ್ಬನನ್ನು ಕೇಳಿದ್ದು: “ಇಲ್ಲಿ ನಿನಗೇನು ಬೇಕಿತ್ತು?” ಅವನ ಪ್ರತ್ಯುತ್ತರ: “ಮತ್ತು ನಿನಗೆ, ನಿನಗೇನು ಬೇಕು?” “ಅನಂತರ”, ವರದಿಯು ಕೊನೆಗೊಳಿಸಿದ್ದು: “ಅವರು ಒಬ್ಬರನ್ನೊಬ್ಬರು ಅಪ್ಪಿಕೊಂಡು, ತಾವಿಲ್ಲಿ ಶಾಂತಿಯಿಂದ ಕೂಡಿಬರ ಶಕ್ತರಾದದಕ್ಕಾಗಿ ಆನಂದ ಬಾಷ್ಪಗಳನ್ನು ಸುರಿಸಿದರು.” ಈ ಮಾಜಿ ಸೈನಿಕರಿಬ್ಬರೂ ದೇವರಿಗೆ ಹೀಗೆ ಪ್ರಾರ್ಥಿಸಿದ್ದರೆಂಬದು ನಿಸ್ಸಂಶಯ: “ದೇವರೇ, ನನ್ನ ರಕ್ಷಣಕರ್ತನೇ, ಪ್ರಾಣಹತ್ಯದ ಅಪರಾಧದಿಂದ ನನ್ನನ್ನು ಬಿಡಿಸು. ಆಗ ನನ್ನ ನಾಲಿಗೆಯು ಉತ್ಸಾಹದಿಂದ ನಿನ್ನ ಸತ್ಯ ಸಂಧತೆಯನ್ನು ಕೊಂಡಾಡುವುದು.”—ಕೀರ್ತನೆ 51:14.

“ನನ್ನ ಬಾಧೆಗಳನ್ನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ”

“ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು. ನಾನು ಕುಗ್ಗಿಹೋಗಿರುವುದನ್ನು ನೋಡಿ ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.” (ಕೀರ್ತನೆ 31:7) ಹೀಗೆಂದು ಕೀರ್ತನೆಗಾರನು ಪ್ರಾರ್ಥಿಸಿದ್ದನು, ಮತ್ತು ಇಂದು ಅನೇಕರು ಹರ್ಷಿಸುತ್ತಾರೆ ಏಕೆಂದರೆ ಅವರ ಬಾಧೆಗಳನ್ನು ನಿಭಾಯಿಸಲು ದೇವರ ವಾಕ್ಯವು ಸಹಾಯ ಮಾಡುವುದರಿಂದಲೇ. ಫ್ರಾನ್ಸಿನ ಒಬ್ಬಾಕೆ ಯೆಹೋವನ ಸಾಕ್ಷಿಯು ಮನೋವ್ಯಾಧಿ ಪೀಡಿತ ಮಹಿಳೆಯೊಂದಿಗೆ ಅಭ್ಯಾಸ ನಡಿಸುತ್ತಿದ್ದಳು. ಈ ಸ್ತ್ರೀಯು ಕೆಲಸಮಯ ಮನೋಚಿಕಿತ್ಸೆಯ ಕೆಳಗಿದಳ್ದು ಆದರೆ ಶಮನವಾಗಲಿಲ್ಲ. ಬೈಬಲಭ್ಯಾಸ ಆರಂಭಿಸಿ ಒಂದು ವಾರದ ಮೇಲೆ ಮನೋ ಚಿಕಿತ್ಸಕನು ಕೇಳಿದ್ದು: “ಆ ಸ್ತ್ರೀಯು ಬೈಬಲಿಂದ ವಿವರಿಸುವ ವಿಷಯವು ನಿನಗೆ ನಿಜವಾಗಿ ಅರ್ಥವಾಗುತ್ತದೋ?” ಮುಂದಿನ ವಾರ, ಸಾಕ್ಷಿಯು ಅವನ ಆಫೀಸಿಗೆ ಹೋಗಿ, ಅವನ ಎದುರಲ್ಲಿ ಆ ಮಹಿಳೆಗೆ ಬೈಬಲಭ್ಯಾಸ ಮಾಡಿದಳು.

ಅಭ್ಯಾಸದ ನಂತರ ಸಾಕ್ಷಿಗೆ, ಮನೋ ಚಿಕಿತ್ಸಕನು ಅಂದದ್ದು: “ಹಲವಾರು ವರ್ಷಗಳಿಂದ ನನ್ನ ರೋಗಿಯ ಧರ್ಮದಲ್ಲಿ ನಾನು ಆಸಕ್ತಿಯನ್ನು ತಕ್ಕೊಂಡಿದ್ದೆ. ಆದರೆ ಯಾವ ನಿಜ ಸಹಾಯವೂ ಯಾವ ಧರ್ಮದಿಂದಲೂ ನೀಡಲ್ಪಡಲಿಲ್ಲ ಎಂದು ಗಮನಿಸಿದ್ದೇನೆ. ನಿಮ್ಮ ವಿಷಯದಲ್ಲಾದರೋ, ಸಂಗತಿ ಬೇರೆ. ಶ್ರೀಮತಿ ಪಿ— ನನ್ನ ಬಳಿಗೆ ವಾರಕ್ಕೆರಡಾವರ್ತಿ ಸಲಹೆಗಾಗಿ ಬರುತ್ತಾಳೆ, ಅದಕ್ಕಾಗಿ ಹಣ ತೆರುತ್ತಾಳೆ. ಆದರೂ, ಧರ್ಮಾರ್ಥವಾಗಿ ನೀವು ಕೊಡುವ ಬೈಬಲ್‌ ಶಿಕ್ಷಣ ಮತ್ತು ಸುಸಲಹೆಯಿಂದಾಗಿ ಒಳ್ಳೇ ಕೆಲಸವಾಗಿದೆ. ಆಕೆ ಒಳ್ಳೇ ಪ್ರಗತಿ ಮಾಡುತ್ತಿದ್ದಾಳೆ. ಅದನ್ನು ಮುಂದರಿಸಿರಿ, ಮತ್ತು ನಿಮಗೆಂದಾದರೂ ಬೇಕಿದ್ದಲ್ಲಿ ನನ್ನ ಪೂರ್ಣ ಸಹಕಾರದ ಆಶ್ವಾಸನೆ ಕೊಡುತ್ತೇನೆ.”

ಬೈಬಲು ಅನ್ನುವುದು: “ಉತ್ಸಾಹ ಧ್ವನಿಯನ್ನು ಕೇಳಿದ ಜನರು ಧನ್ಯರು. ಯೆಹೋವನೇ, ಅವರು ನಿನ್ನ ಮುಖ ಪ್ರಕಾಶದಲ್ಲಿ ಸಂಚರಿಸುತ್ತಾರೆ. ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ.” (ಕೀರ್ತನೆ 89:15, 16) ಈ ಕೀರ್ತನೆಯು ಸತ್ಯವೆಂದು ಪ್ರತಿಯೊಬ್ಬ ಯೆಹೋವನ ಸಾಕ್ಷಿಗೆ ತಿಳಿದದೆ. ಅವರ ಬಾಯಿಂದ ಯೆಹೋವನ ಸ್ತುತಿಗಾಗಿ ಲೋಕ ವ್ಯಾಪಕ ಆನಂದ ಘೋಷವು ಏಳುತ್ತಿದೆ. ಅವರೊಂದಿಗೆ ಅಧಿಕಾಧಿಕ ಜನರು ದೇವರ ಸ್ತುತಿಗಾಗಿ ರಾಷ್ಟ್ರಗಳಿಂದ ಪ್ರವಾಹ ಧಾರೆಯಾಗಿ ಬರುತ್ತಿದ್ದಾರೆ. ಅವರೊಂದಿಗೆ ಸಹವಸಿಸಿ, ಆ ಸಂತೋಷವನ್ನು ನಿಮಗಾಗಿ ಯಾಕೆ ಅನುಭವಿಸಬಾರದು? (w91 1/1)

[ಪುಟ 7 ರಲ್ಲಿರುವ ಚಿತ್ರ]

ಪೂರ್ವ ಯುರೋಪಿನ ಯೆಹೋವನ ಸಾಕ್ಷಿಗಳು “ಕಾವಲಿನಬುರುಜು”ನ್ನು ತಮ್ಮ ಸ್ವಂತ ಭಾಷೆಯಲ್ಲಿ ಪಡೆಯುವ ಮತ್ತು ಅಭ್ಯಸಿಸುವ ಹೊಸ ಸ್ವಾತಂತ್ರ್ಯದಲ್ಲಿ ಈಗ ಉಲ್ಲಾಸಿಸುತ್ತಾರೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ