ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 12/1 ಪು. 4-7
  • ಪಾತಕದ ಅಂತ್ಯ ಈಗ ಸಮೀಪ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪಾತಕದ ಅಂತ್ಯ ಈಗ ಸಮೀಪ!
  • ಕಾವಲಿನಬುರುಜು—1990
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದಿವ್ಯ ಭಯದ ಎದುರು ಅಸೂಯೆ
  • ನಂಬಿಕೆಯ ಎದುರು ಲೋಭ
  • ಸ್ವತ್ತಿಗಿಂತ ಜನರು ಹೆಚ್ಚು ಪ್ರಾಮುಖ್ಯ
  • ಪಾತಕ—ಆಗಲೇ ನಿರ್ಮೂಲನವಾಗಿದೆಯೇ?
  • ಪಾತಕ ನಿರ್ಮೂಲನ—ಪ್ರತೀಕ್ಷೆಗಳು
  • ಇಷ್ಟೊಂದು ಪಾತಕಗಳೇಕೆ?
    ಕಾವಲಿನಬುರುಜು—1990
  • ಯೆರಿಕೋನಲ್ಲಿ ಯೇಸು ಕಲಿಸುವದು
    ಅತ್ಯಂತ ಮಹಾನ್‌ ಪುರುಷ
  • ಅಪರಾಧಗಳ ಸಮಸ್ಯೆಗೆ ಪರಿಹಾರವಿದೆಯೋ?
    ಎಚ್ಚರ!—2008
ಕಾವಲಿನಬುರುಜು—1990
w90 12/1 ಪು. 4-7

ಪಾತಕದ ಅಂತ್ಯ ಈಗ ಸಮೀಪ!

ಪತ್ತೇದಾರರು ಪಾತಕಗಳನ್ನು ಮಾಡಿದವರ ಗುರುತು ಮತ್ತು ಪ್ರೇರಕ ಶಕ್ತಿಯನ್ನು ತೋರಿಸುವ ಸುಳಿವುಗಳನ್ನು ಪರೀಕ್ಷಿಸುವುದರ ಮೂಲಕ ಪಾತಕಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ. ಪತ್ತೇದಾರರ ವಿಧಾನ ಮತ್ತು ಕೌಶಲ್ಯಗಳು ಲೋಕವ್ಯಾಪಕವಾಗಿ ಜನಪ್ರಿಯ ಕಥೆಗಳ ವಿಷಯವಸ್ತುಗಳಾಗಿವೆ. ಪತ್ತೇದಾರನು ಕ್ರಮೇಣ ಪಾತಕಿಯನ್ನು ಕಂಡುಹಿಡಿಯ ಬಹುದಾದರೂ ಅವನ ಕೆಲಸ ಸಾಮಾನ್ಯವಾಗಿ ಘಟನೆ ನಡೆದ ಬಳಿಕ, ಪಾತಕ ಮಾಡಿದ ಅನಂತರ ಆರಂಭಿಸುತ್ತದೆ.

ಪಾತಕಗಳ ವೃದ್ಧಿಯಿಂದ ನಮಗೆ ನೋಡ ಸಾಧ್ಯವಾಗುವಂತೆ, ಸಿಕ್ಕಿ ಬೀಳುವ ಪ್ರತಿಯೊಬ್ಬ ಪಾತಕಿಯ ಸ್ಥಾನದಲ್ಲಿ ಅನೇಕರು ಪಾತಕಕ್ಕೆ ಇಳಿಯುತ್ತಾರೆ. ಆದುದರಿಂದ ಪಾತಕಗಳನ್ನು ನಿವಾರಿಸಲು, ಕೇವಲ ಆಗಲೇ ನಡೆದಿರುವ ಅಪರಾಧಗಳನ್ನು ಬಗೆಹರಿಸುವುದಕ್ಕಿಂತಲೂ ಹೆಚ್ಚಿನದನ್ನು ಮಾಡುವುದು ಅಗತ್ಯ. ಜನರು ಪಾತಕಿಗಳಾಗುವುದನ್ನು ಯಾವುದು ತಡೆದೀತು?

ಪಾತಕಗಳಿಗೆ ನೀತಿ ನಿಯಮಗಳೊಂದಿಗೆ ಸಂಬಂಧವಿದೆ. ಕೊಲೆಪಾತಕ, ಬಲಾತ್ಕಾರ ಸಂಭೋಗ, ಮತಿತ್ತರ ಹಿಂಸಾತ್ಮಕ ಕ್ರಿಯೆಗಳು ಪಾತಕಗಳೆಂದು ಒಪ್ಪುವದರಲ್ಲಿ ನಮಗೆ ಕಷ್ಟವಿಲ್ಲ, ಆದರೆ ಕಂದಾಯ ತೆರುವಾಗ ಮೋಸಮಾಡುವುದಾದರೆ ಏನು? ಇದೂ ಪಾತಕವಾಗಿದೆ, ಯಾಕೆಂದರೆ ಇದು ಪ್ರಾಮಾಣಿಕತೆಯ ನೈತಿಕ ಅಳತೆಗೋಲಿಗೆ ವಿರುದ್ಧವಾಗಿದೆ. ಪಾತಕಗಳನ್ನು ಪೂರ್ಣವಾಗಿ ಅಂತ್ಯಗೊಳಿಸುವದೆಂದರೆ ಮೂಲ ನೈತಿಕತೆಗೆ ವಿರುದ್ಧವಾಗಿರುವ ಸಕಲ ಕೃತ್ಯಗಳನ್ನು ನಿರ್ಮೂಲಗೊಳಿಸುವದೆಂದರ್ಥ.

ಪಾತಕಗಳ ಕಾರಣ ಮಾತ್ರವಲ್ಲ ಅವುಗಳ ನಿರ್ಮೂಲನದ ವಿಧವನ್ನೂ ಎತ್ತಿ ತೋರಿಸುವ ಮೂರು ಬೈಬಲ್‌ ದೃಷ್ಟಾಂತಗಳನ್ನು ಪರಿಗಣಿಸಿರಿ.

ದಿವ್ಯ ಭಯದ ಎದುರು ಅಸೂಯೆ

ಕೀರ್ತನೆಗಾರನ ಆಸಾಫನ ಈ ಮಾತುಗಳನ್ನು ದಯವಿಟ್ಟು ಗಮನಿಸಿರಿ: “ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿ [ಅಸೂಯೆ, NW] ಗೊಂಡೆನು.” (ಕೀರ್ತನೆ 73:2) ಹೌದು, ಪಾತಕಿಗಳ ಸಮೃದ್ಧಿ ಮತ್ತು ಜೀವನ ರೀತಿಗಳ ಮೇಲೆ ಅಸೂಯೆಯು, ಅನೇಕರು ತಾವೂ ನಿಯಮರಹಿತ ವಿಧಾನಗಳನ್ನು ಅನುಸರಿಸುವಂತೆ ಪ್ರೇರೇಪಿಸುತ್ತದೆ. ಟೆಲಿವಿಶನ್‌ ಮತ್ತು ಪತ್ರಿಕೆಗಳಲ್ಲಿ ಪಾತಕಗಳ ಲಾವಣ್ಯೀಕರಣವು, ಕೆಟ್ಟದ್ದನ್ನು ದ್ವೇಷಿಸುವಂತೆ ಮಾಡುವ ಬದಲಿಗೆ ಅದನ್ನು ಹೆಚ್ಚು ಸ್ವೀಕಾರಯೋಗ್ಯವಾಗಿ ಮಾಡುತ್ತದೆ.

ಆದರೂ ಜ್ಞಾನೋಕ್ತಿಗಳ ಪ್ರೇರಿತ ಲೇಖಕನು ಬುದ್ಧಿ ಹೇಳುವುದು: “ಪಾಪಿಗಳನ್ನು ನೋಡಿ ಹೊಟ್ಟೇಕಿಚ್ಚು ಪಡಬೇಡ. ಯೆಹೋವನಲ್ಲಿ ದಿನವೆಲ್ಲಾ ಭಯಭಕ್ತಿಯುಳ್ಳವನಾಗಿರು.” ಒಬ್ಬ ವ್ಯಕ್ತಿಯ ಪ್ರೇರಕ ಶಕ್ತಿ ಮತ್ತು ಇಚ್ಛೆಗಳೇ ಸಮಸ್ಯೆಯ ಬೇರು. ಇವುಗಳನ್ನು ತಡೆಹಿಡಿಯುವ ಅತಿ ಕಾರ್ಯಸಾಧಕ ಮಾರ್ಗವು ಯೆಹೋವ ದೇವರನ್ನು ಅಸಮಾಧಾನಗೊಳಿಸುವದರ ವಿರುದ್ಧ ದಿವ್ಯ ಭಕ್ತಿಯನ್ನು ಬೆಳೆಸಿಯೇ. ಆಗ “ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು.”—ಜ್ಞಾನೋಕ್ತಿ 23:17, 18.

ನಂಬಿಕೆಯ ಎದುರು ಲೋಭ

ಸಾ.ಶ. 30 ರ ವಸಂತ ಕಾಲದಲ್ಲಿ ಯೇಸು ಯೆರಿಕೋ ನಗರವನ್ನು ದಾಟಿಹೋಗುತ್ತಿದ್ದನು. ಅದು ಜಕ್ಕಾಯನ ಊರಾಗಿತ್ತು. ಅವನನ್ನು ಸುವಾರ್ತಾ ಲೇಖಕ ಲೂಕನು “ಸುಂಕದ ಗುತ್ತಿಗೆಗಾರನು ಮತ್ತು ಐಶ್ವರ್ಯವಂತನು” ಎಂದು ವರ್ಣಿಸುತ್ತಾನೆ. ಯೆರಿಕೋ ನಗರದ ಸುತ್ತಲಿನ ಫಲವತ್ತಾದ ಪ್ರದೇಶ ಕಂದಾಯ ವಸೂಲಿಯ ಮುಖ್ಯ ಸ್ಥಾನವಾಗಿತ್ತು. ಮತ್ತು ಜಕ್ಕಾಯನ ಸ್ವಂತ ಮಾತುಗಳು ಸೂಚಿಸುವಂತೆ, ಮುಖ್ಯ ಕಂದಾಯ ವಸೂಲುಗಾರನಾದ ಅವನ ಕೆಲಸದಲ್ಲಿ ಸುಲಿಗೆ ಮಾಡುವ ಸಂದರ್ಭಗಳಿದ್ದವು. ಆದರೆ ಜಕ್ಕಾಯನು ಪಾತಕಿಯಾಗಿಯೇ ಉಳಿಯಲಿಲ್ಲ.—ಲೂಕ 19:1-8.

ಜಕ್ಕಾಯನು ಯೇಸುವನ್ನು ಮುತ್ತಿದ್ದ ಜನರಿಗಿಂತ ಮುಂದೆ ಓಡಿ, ತನ್ನ ಗಿಡ್ಡ ಶರೀರದ ಕಾರಣ ಅಂಜೂರದ ಮರದ ಅನುಕೂಲ ಸ್ಥಳವನ್ನೇರಿದನು. ಇದನ್ನು ಗಮನಿಸಿದ ಯೇಸು ಅವನನ್ನು ಕೆಳಗೆ ಬರಹೇಳಿ, ತಾನು ಯೆರಿಕೋನಲ್ಲಿರುವಾಗ ಅವನ ಮನೆಯಲ್ಲಿ ಉಳಿಯಬಯಸುತ್ತೇನೆಂದು ಹೇಳಿದನು. ಆ ತರುವಾಯ, ಆಡಿದ ಜಕ್ಕಾಯನ ಮಾತುಗಳು ಅವನ ಪರಿವರ್ತಿತ ಮನೋಭಾವವನ್ನು ತೋರಿಸಿತು: “ನನ್ನ ಆಸ್ತಿಯಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ. ಮತ್ತು ನಾನು ಅನ್ಯಾಯವಾಗಿ ಯಾರಿಂದ ಏನಾದರೂ ಎಳಕೊಂಡದ್ದೇ ಆದರೆ ನಾಲ್ಕರಷ್ಟು ಹಿಂದೆ ಕೊಡುತ್ತೇನೆ.” ಸುಲಿದ ಹಣವನ್ನು ಹಿಂದೆ ಭರ್ತಿಮಾಡುವುದರಲ್ಲಿ ತುಂಬಾ ಖರ್ಚು ತಗಲಲಿಕ್ಕಿತ್ತು. ಇದನ್ನು ಮಾಡಲು ವಚನ ಕೊಟ್ಟದ್ದರ ಮೂಲಕ ಜಕ್ಕಾಯನು ತನಗೆ ಯೇಸುವಿನ ಮೇಲಿದ್ದ ನಂಬಿಕೆಯನ್ನು ವ್ಯಕ್ತಪಡಿಸಿದನು. ಹೌದು, ಅವನ ಮಾರ್ಪಟ್ಟಿದ್ದ ಹೊರನೋಟವು ವಾಸ್ತವ ಪರಿಣಾಮವನ್ನು ಅಂದರೆ ಅನ್ಯಾಯವಾಗಿ ತೆಗೆದು ಕೊಂಡದ್ದಕ್ಕೆ ಪರಿಹಾರ ಮಾತ್ರವಲ್ಲ, ಮೂರು ಪಾಲು ಹೆಚ್ಚು, ಹೀಗೆ ನಾಲ್ಕು ಪಾಲು ನಷ್ಟ ಪರಿಹಾರದ ಪರಿಣಾಮವನ್ನು ತಂದಿತು. ಹೀಗೆ, ಜಕ್ಕಾಯನು ತನ್ನ ತಪ್ಪನ್ನು ಸರಿಪಡಿಸಿ ಕೊಂಡದ್ದು ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚು ಮುಂದುವರಿದು, ತನ್ನ ಮಾರ್ಪಟ್ಟ ಜೀವನ ರೀತಿಯು ಯಥಾರ್ಥವೆಂದು ರುಜುಪಡಿಸಿದನು.—2 ಕೊರಿಂಥದವರಿಗೆ 7:11.

ಸ್ವತ್ತಿಗಿಂತ ಜನರು ಹೆಚ್ಚು ಪ್ರಾಮುಖ್ಯ

ರೋಮನ್‌ ರಾಜ್ಯಪಾಲ ಪಿಲಾತನು ಆರೋಪಕ್ಕೊಳಗಾಗಿದ್ದ ಯೇಸುಕ್ರಿಸ್ತನ ಕುರಿತು, “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುವುದಿಲ್ಲ” ಎಂದು ಹೇಳಿದನು. (ಲೂಕ 23:4) ಸೊತ್ತನ್ನು ಸಂಪಾದಿಸಲು ಪಾತಕಕ್ಕಿಳಿಯುವ ಬದಲು, ಯೇಸು ತನ್ನ ಭೂಶುಶ್ರೂಷೆಯ ಕಾಲದಲ್ಲೆಲ್ಲಾ ಜನರಲ್ಲಿ ಪ್ರೀತಿಯ ಆಸಕ್ತಿ ವಹಿಸಿದನು: “ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲಾ ಎಂದು ಅವರ ಮೇಲೆ ಕನಿಕರಪಟ್ಟನು. ಆಗ ತನ್ನ ಶಿಷ್ಯರಿಗೆ—ಬೆಳೆಯು ಬಹಳ, ಕೆಲಸದವರು ಸ್ವಲ್ಪ. ಆದದರಿಂದ ಬೆಳೆಯ ಯಜಮಾನನನ್ನು ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ ಎಂದು ಹೇಳಿದನು.” (ಮತ್ತಾಯ 9:36-38) ಯೇಸು ಸೊತ್ತುಗಳಿಗಿಂತ ಮತ್ತು ತನ್ನ ಸ್ವಂತ ಸೌಕರ್ಯ ಮತ್ತು ಅಭಿರುಚಿಗಳಿಗಿಂತ ಮೊದಲು ಜನರಿಗೆ ಪ್ರಾಧಾನ್ಯತೆ ಕೊಟ್ಟನು ಎಂಬದು ಸ್ಪಷ್ಟ . ಇದನ್ನು, ತನ್ನ ಶಿಷ್ಯರನ್ನು ಪರಾಮರಿಸಲಿಕ್ಕಾಗಿ ಮತ್ತು ತಿಳುವಳಿಕೆ ಮತ್ತು ಸಹಾಯಕ್ಕಾಗಿ ಬಂದ ಜನರ ಪರವಾಗಿ ತನ್ನನ್ನು ವ್ಯಯಿಸಿ ಕೊಳ್ಳಲು ಅವನಿಗಿದ್ದ ಸಿದ್ಧ ಮನಸ್ಸಿನಿಂದಲೂ ನಾವು ನೋಡ ಬಹುದು. (ಮತ್ತಾಯ 8:20; 14:13-16) ಇದರಲ್ಲಿ ಯೇಸು ನಾವು ಅನುಸರಿಸಲು ಒಂದು ಮಾದರಿಯನ್ನಿಟ್ಟನು.—1 ಪೇತ್ರ 2:21.

ಇಂದು ಜನರು ಈ ಮಾದರಿಯನ್ನನುಸರಿಸಿ ಜೊತೆ ಮಾನವರು ಪ್ರಾಪಂಚಿಕ ಸೊತ್ತುಗಳಿಗಿಂತ ಹೆಚ್ಚು ಅಮೂಲ್ಯರೆಂದೆಣಿಸುವುದು ಸಾಧ್ಯವೇ? ಹೌದೆಂದು ನಾವು ಉತ್ತರಿಸಬಲ್ಲೆವು. ಈಗ ಸುಮಾರು 35 ಲಕ್ಷ ಸಂಖ್ಯೆಯಲ್ಲಿರುವ ಯೆಹೋವನ ಸಾಕ್ಷಿಗಳನ್ನು ತೆಗೆದುಕೊಳ್ಳಿರಿ. ಅವರು ಕ್ರಿಸ್ತನ ಮನಸ್ಸನ್ನು ಧರಿಸ ಪ್ರಯತ್ನಿಸಿ ಅದಕ್ಕೆ ಪ್ರಾಯೋಗಿಕ ಅರ್ಥವನ್ನು ಕೊಡುತ್ತಾರೆ. ಇತರರನ್ನು ಪಾತಕಗಳಿಗೆ ನಡಿಸುವ ದುರಾಶೆಯನ್ನು ಅವರು ತಮ್ಮ ಹೃದಯಗಳಿಂದ ಕಿತ್ತೊಗೆಯಲು ಸದಾ ಶ್ರಮ ಪಡುತ್ತಾರೆ. ಅವರು ಸಾಕ್ಷಿಗಳಾಗುವ ಮೊದಲು, ಬೈಬಲನ್ನು ಅಧ್ಯಯನಿಸಿ ದೇವರ ಕಡೆಗೆ ಪ್ರೀತಿ ಬೆಳೆದಾಗ ಅದು ಅವರಲ್ಲಿ ಪಾತಕಿಗಳಾಗಿದ್ದ ಕೆಲವರನ್ನು ಸ್ಪರ್ಶಿಸಿತು. ಇದು ಅವರಲ್ಲಿ ಅನೇಕರನ್ನು ತಮ್ಮ ಹಿಂದಣ ಪಾತಕಗಳಿಗಾಗಿ ನಷ್ಟ ಪರಿಹಾರ ಮಾಡುವಂತೆ ಪ್ರಚೋದಿಸಿತು. ಇಲ್ಲ, ಅವರಿದನ್ನು ಸರ್ವ ಗೋಚರಕ್ಕಾಗಿ ಮಾಡದೆ ಯೆಹೋವ ದೇವರೊಂದಿಗೆ ಸಮಾಧಾನದ ಸಂಬಂಧಕ್ಕೆ ಬಂದು ಹೀಗೆ, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಬರುವ ದೇವರ ಅನರ್ಹ ದಯೆಯಿಂದ ಪ್ರಯೋಜನ ಪಡೆಯುವ ಕಾರಣದಿಂದಲೇ ಮಾಡಿದರು.—1 ಕೊರಿಂಥದವರಿಗೆ 2:16; 6:11; 2 ಕೊರಿಂಥದವರಿಗೆ 5:18-20.

ನೆರೆಯವರ ಕಡೆಗೆ ಪ್ರೀತಿ ತೋರಿಸಿ, ಇಂಥ ಕ್ರೈಸ್ತರು, ಇತರ ಕುಟುಂಬಗಳು ದೇವರ ರಾಜ್ಯದ ಕೆಳೆಗೆ ಪ್ರಮೋದವನದ ಪರಿಸ್ಥಿತಿಗಳಲ್ಲಿ ಹೇಗೆ ಜೀವಕ್ಕಾಗಿ ಮುನ್ನೋಡ ಬಹುದೆಂದು ತಿಳಿಸುವ ಉದ್ದೇಶದಿಂದ ಅವರನ್ನು ಭೇಟಿಯಾಗಲು ಸಮಯ ತೆಗೆದುಕೊಳ್ಳುತ್ತಾರೆ. ಪ್ರತಿ ವಾರ, ಯೆಹೋವನ ಸಾಕ್ಷಿಗಳು ತಮ್ಮ ರಾಜ್ಯ ಸಭಾಗೃಹಗಳಲ್ಲಿ ನಿಯತಕ್ರಮದ ಕೂಟಗಳನ್ನು ಏರ್ಪಡಿಸುತ್ತಾರೆ. ಎಂಥಹ ಕೂಟಗಳು ನಡೆಯುತ್ತವೆಂದು ನೋಡಲು ಆಮಂತ್ರಣವನ್ನು ಸ್ವೀಕರಿಸಿದ, ಕಳ್ಳನೆಂದು ಸ್ವತಃ ಒಪ್ಪಿಕೊಂಡಿದ್ದ ಒಬ್ಬನು ಹೇಳುವುದು: “ಅತಿ ಮಿತವಾಗಿ ಹೇಳುವುದಾದರೂ ನನಗೆ ಅತ್ಯಾಶ್ಚರ್ಯವಾಯಿತು. ಎಣಿಸಿದಂತೆ ಅದು ಕಳೆ ಚೂರೂ ಇಲ್ಲದಾಗ್ದಲಿ, ಬೇಸರ ಹುಟ್ಟಿಸುವಂತಹದ್ದಾಗಲಿ ಆಗಿ ಇರಲೇ ಇಲ್ಲ. ಅಲ್ಲಿ ಪ್ರತ್ಯಕ್ಷವಾಗಿದ್ದ ವಾತ್ಸಲ್ಯ ಮತ್ತು ಪ್ರೀತಿ ನೈಜವಾಗಿತ್ತೆಂಬದು ವ್ಯಕ್ತ . ಮತ್ತು ಆತ್ಮಿಕ ವಿಷಯಗಳಿಗೆ ಎಲ್ಲಾ ಸಾಕ್ಷಿಗಳಿಗಿದ್ದ ಗಣ್ಯತೆ ಗಮನಾರ್ಹವಾಗಿತ್ತು.” ಅವನು ಎಷ್ಟು ಪ್ರಭಾವಿತನಾದನೆಂದರೆ, ಅವನು ತನ್ನ ಸಹವಾಸವನ್ನು ಮುಂದುವರಿಸಿದನು. ಇದರಿಂದ ಅವನು ಸುಧಾರಣೆ ಹೊಂದುವಂತೆ ಸಹಾಯ ದೊರೆಯಿತು. ನೀವು ಪಾತಕಿಗಳಾಗಿದ್ದಿರಲಿ ಇಲ್ಲದಿರಲಿ, ದೇವರ ಸೇವಕರೊಂದಿಗಿನ ಸಹವಾಸದಲ್ಲಿ, ಸೊತ್ತುಗಳ ಬದಲು ಜನರಲ್ಲಿ ಅವರಿಗಿರುವ ನೈಜಾಸಕ್ತಿಯನ್ನು ಕಂಡುಕೊಳ್ಳುವಿರಿ.—ಮತ್ತಾಯ 22:39.

ಪಾತಕ—ಆಗಲೇ ನಿರ್ಮೂಲನವಾಗಿದೆಯೇ?

ಈ ಜನರು ಪಾತಕಿಗಳಾಗಿ ವರ್ತಿಸುವದಿಲ್ಲವೆಂದಾದರೆ ಅವರು ಪರಿಪೂರ್ಣರೆಂಬದಾಗಿ ಇದರರ್ಥವೂ? ಅಲ್ಲವೇ ಅಲ್ಲ! ಯೆಹೋವನ ಸಾಕ್ಷಿಗಳು ಇತರರಂತೆಯೇ ಆದಾಮನೆಂಬ ಪ್ರಥಮ ಮಾನವ ಪಿತನಿಂದ ಬಾಧ್ಯತೆಯಾಗಿ ಬಂದ ಪಾಪವನ್ನು ಅನುಭವಿಸುತ್ತಾರೆ. (ರೋಮಾಪುರದವರಿಗೆ 5:12; 1 ಯೋಹಾನ 1:8) ಆದರೆ ಈಗ ಅವರು, ಅವರ ಲೋಕವ್ಯಾಪಕ ಸಾರುವ ಮತ್ತು ಕಲಿಸುವ ಕೆಲಸವು ಪ್ರತಿಬಿಂಬಿಸುವಂತೆ, ದೇವರನ್ನು ಸೇವಿಸುವುದರಲ್ಲಿ ಐಕ್ಯಗೊಂಡಿದ್ದಾರೆ. ಇದು ಯೆಶಾಯನ ಪ್ರವಾದನೆಯ ನೆರವೇರಿಕೆಗೆ ಬಲಾಢ್ಯವಾದ ಸಾಕ್ಷಿಯನ್ನೊದಗಿಸುತ್ತದೆ: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡ ಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು. ಆಗ ಸಕಲ ದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.” (ಯೆಶಾಯ 2:2) ಹೌದು, ಲಕ್ಷಾಂತರ ಜನರು ಯೆಹೋವನ ಮೇಲೆ ಎತ್ತಲ್ಪಟ್ಟ ಆರಾಧನೆಗೆ ಪ್ರವಹಿಸುತ್ತಿದ್ದು, ಆತನ ಮಾರ್ಗಗಳ ಮಾಹಿತಿಯನ್ನು ಹುಡುಕುತ್ತಿದ್ದಾರೆ. ಪಾತಕಗಳಿಂದ ದೂರವಿರುವ ಈ ಜನರ ಒಂದಿಗೆ ಸಹವಸಿಸಿ ಪ್ರಯೋಜನ ಹೊಂದುವವರಲ್ಲಿ ನೀವೂ ಒಬ್ಬರಾಗ ಬಲ್ಲಿರಿ.

ಪಾತಕ ನಿರ್ಮೂಲನ—ಪ್ರತೀಕ್ಷೆಗಳು

ನಮ್ಮ ದಿನಗಳ ಪಾತಕಗಳಲ್ಲಿ ವೃದ್ಧಿಯು ನಿಜವಾಗಿಯೂ, ಎಲ್ಲಾ ದುಷ್ಟರನ್ನು ಪಾತಕಿಗಳ ಸಹಿತ ನಿರ್ಮೂಲನ ಮಾಡಲು ದೈವಿಕ ಕೈಹಾಕುವಿಕೆಯ ಸಾಮೀಪ್ಯತೆಯನ್ನು ಮುನ್‌-ಸೂಚಿಸುತ್ತದೆ. “ಕೆಡುಕರು ತೆಗೆದು ಹಾಕಲ್ಪಡುವರು . . . ಇನ್ನು ಸ್ವಲ್ಪ ಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು. ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.” (ಕೀರ್ತನೆ 37:9, 10) ಈಗ ಪಾತಕಗಳ ಅಂತ್ಯ ನಿಶ್ಚಯವಾಗಿಯೂ ಸಮೀಪವಿದೆ. ಏಕೆಂದರೆ ಆದಿ ಪಾತಕಿಯಾದ ಪಿಶಾಚನಾದ ಸೈತಾನನು ಬಂಧಿಸಲ್ಪಟ್ಟು ಅಧೋಲೋಕಕ್ಕೆ ತಳ್ಳಲ್ಪಡುವ ಸಮಯವನ್ನು ನಾವು ಸಮೀಪಿಸುತ್ತಾ ಇದ್ದೇವೆ. (ಪ್ರಕಟನೆ 20:1-3) ಹಾಗಾದರೆ ಪಾತಕಗಳ ಭಯ ಮತ್ತು ಅದಕ್ಕೆ ಬಲಿಯಾದವರು ಪಟ್ಟಿರುವ ನೋವು ಗತ ವಿಷಯವಾಗಿ ಇರುವುದೆಂದು ತಿಳಿಯುವದು ಎಷ್ಟು ರೋಮಾಂಚಕ !

ಆದರೂ, ಪುನರುತ್ಥಾನದಲ್ಲಿ ಭೂಮಿಯ ಮೇಲೆ ಜೀವಕ್ಕೆ ಹಿಂದಿರುಗುವ ಲಕ್ಷಾಂತರ ಜನರ ವಿಷಯದಲ್ಲಿ ಏನು? (ಅಪೊಸ್ತಲರ ಕೃತ್ಯ 24:15) ಅವರು ತಮ್ಮ ಮರಣಕ್ಕೆ ಹಿಂದಿದ್ದ ವ್ಯಕ್ತಿತ್ವ ಮತ್ತು ಮಾರ್ಗಗಳನ್ನು ಪುನಃ ಪಟ್ಟು ಹಿಡಿದು ಆಚರಿಸುವಲ್ಲಿ ಒಂದು ಹೊಸ ಪಾತಕ ಲಹರಿಯನ್ನು ಅವರು ಆರಂಭಿಸರೇ? ಅದಕ್ಕೆ ಭಯ ಪಡುವ ಅಗತ್ಯವಿಲ್ಲ. ಯೇಸು ಒಬ್ಬ ಕಳ್ಳನಿಗೆ, “ನಾನು ಇಂದೇ ನಿನಗೆ ನಿಜವಾಗಿ ಹೇಳುತ್ತೇನೆ, ನೀನು ನನ್ನ ಸಂಗಡ ಪ್ರಮೋದವನದಲ್ಲಿ ಇರುವಿ” ಎಂದು ಹೇಳಿ ಪುನರುತ್ಥಾನದ ವಚನ ಕೊಟ್ಟನು. (ಲೂಕ 23:43, NW) ಇದು ನಿಶ್ಚಯವಾಗಿಯೂ, ಪುನರುತ್ಥಾನ ಹೊಂದುವವರು ಬದಲಾವಣೆ ಹೊಂದಬೇಕಾಗುವದೆಂದು ಸೂಚಿಸುತ್ತದೆ. ಇಲ್ಲವಾದರೆ ನೂತನ ಜಗತ್ತು ಪ್ರಮೋದವನವಾಗದು.

ಸಮಸ್ಯೆಗಳನ್ನು ಉಂಟುಮಾಡದೇ, ಕಠಿಣ ಪಾತಕಿಗಳನ್ನು ಸಮಾಜದಲ್ಲಿ ನೆಲೆಸುವ ಮೊದಲು, ಅವರನ್ನು ಪುನರ್ವಸತಿ ಮಾಡುವ ಆವಶ್ಯಕತೆಯಿರುವಂತೆಯೇ, ದೇವರ ರಾಜ್ಯದ ಕೆಳಗೆ ನಡಿಯುವ ವಿಸ್ತೃತವಾದ ಶೈಕ್ಷಣಿಕ ಕಾರ್ಯಕ್ರಮವು ಪ್ರಜೆಗಳು ನಿಯಮ ಬದ್ಧರಾಗಿರುವಂತೆ ಸಹಾಯ ನೀಡುವುದು. (ಪ್ರಕಟನೆ 20:12, 13) ದೇವರ ನಿಯಮಗಳನ್ನು ಪಾಲಿಸುವ ಪರದೈಸದ ನಿವಾಸಿಗಳಿಂದ ಆವರಿಸಲ್ಪಡುವ ಪ್ರಯೋಜನದಿಂದ, ಯೋಗ್ಯವಾಗಿ ನಿಯಂತ್ರಣ ಮಾಡಲ್ಪಟ್ಟಿರುವ ಆರ್ಥಿಕ ಪರಿಸ್ಥಿತಿಗಳನ್ನು ಪುನರುತ್ಥಾನ ಹೊಂದುವವರು ಅನುಭವಿಸುವರು. (ಯೆಶಾಯ 65:21-23) ಅಧಿಕಾರ ಸ್ಥಾನದಲ್ಲಿ ನ್ಯಾಯವಂತರಾದ ಪ್ರಭುಗಳಿರುವದರಿಂದ ಪಟ್ಟು ಹಿಡಿದು ತಪ್ಪು ಮಾಡುವವರು ಜೀವ ಕಳೆದು ಕೊಳ್ಳುವರು. (ಯೆಶಾಯ 32:1; 65:20) ಹೀಗೆ, ಅಂತಿಮವಾಗಿ, ಪಾತಕಗಳು ಅಂತ್ಯಗೊಳ್ಳುವವು ಎಂದು ಭರವಸವಿಡಲು ಹೇರಳ ಕಾರಣಗಳಿವೆ.

ನಾವಿನ್ನೂ ಪಾತಕಗಳಿರುವ ಲೋಕದಲ್ಲಿ ಜೀವಿಸುತ್ತಿರುವುದಾದರೂ ಯಾರು ತನ್ನ ನಂಬಿಗಸ್ತ ಸೇವಕರಿಗೆ ಪ್ರಮೋದವನದ ಸಂಪೂರ್ಣ ಜೀವನದ ಕೊಡುಗೆಯನ್ನು ವಾಗ್ದಾನಿಸಿರುತ್ತಾನೋ ಆ ಯೆಹೋವನಲ್ಲಿ ದೃಢತೆಯಿಂದ ನೀವು ಭರವಸವಿಡಬಹುದು. ಯೆಹೋವನ ಸಾಕ್ಷಿಗಳು ನೀಡುವ ಉಚಿತ ಮನೆ ಬೈಬಲ್‌ ಅಭ್ಯಾಸದ ಪ್ರಯೋಜನ ತಕ್ಕೊಂಡು ಈಗಲೇ ಹಾಗೆ ಮಾಡಿರಿ. (ಯೋಹಾನ 17:3) ನೀವು ಮುಂದಿನ ಸಲ ಅವರನ್ನು ಭೇಟಿಯಾಗುವಾಗ ಇದರ ವಿವರಣೆಯನ್ನು ಏಕೆ ಕೇಳ ಬಾರದು? ಅಥವಾ ಈ ಪತ್ರಿಕೆಯ ಎರಡನೇ ಪುಟದ ವಿಳಾಸಗಳಲ್ಲಿ ನಿಮಗೆ ಅತಿ ಹತ್ತಿರವಿರುವ ವಿಳಾಸಕ್ಕೆ ನೀವು ಬರೆಯ ಬಹುದು. ಹೀಗೆ ಪ್ರಯತ್ನಿಸುವುದು ಲಾಭದಾಯಕ, ಏಕಂದರೆ ಪಾತಕಗಳ ಅಂತ್ಯ ಈಗ ಸಮೀಪವಿದೆ ! (w89 8/15)

[ಪುಟ 5 ರಲ್ಲಿರುವ ಚಿತ್ರ]

ಜಕ್ಕಾಯನ ನಂಬಿಕೆ ಅವನು ಸುಲಿಗೆ ಮಾಡಿದುದನ್ನು ಹಿಂದೆ ಕೊಡುವಂತೆ ಪ್ರಚೋದಿಸಿತು

[ಪುಟ 7 ರಲ್ಲಿರುವ ಚಿತ್ರ]

ದೇವರ ರಾಜ್ಯದ ಪ್ರಜೆಗಳು ನಿಯಮಬದ್ಧರಾಗುವಂತೆ ಒಂದು ಶೈಕ್ಷಣಿಕ ಕಾರ್ಯಕ್ರಮವು ಕಲಿಸುವುದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ