ಇಷ್ಟೊಂದು ಪಾತಕಗಳೇಕೆ?
ಬ್ರಿಟಿಷ್ ಸರಕಾರದ ಒಂದು ಬ್ರೊಷೂರ್, “ಅಧಿಕಾಂಶ ಪಾತಕಗಳು ಸ್ವತ್ತಿನ ವಿರುದ್ಧ ನಡೆಯುತ್ತವೆ” ಎಂದು ಹೇಳುತ್ತವೆ. ಆದರೂ ಆ ದೇಶದಲ್ಲಿ ಜನರ ವಿರುದ್ಧ ನಡೆಯುವ ಹಿಂಸಾತ್ಮಕ ಪಾತಕಗಳು ಎಲ್ಲಾ ಅಪರಾಧಗಳ ಕೇವಲ 5 ಸೇಕಡಾ ಇರುವುದಾದರೂ ಅದು, “ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಪಾತಕದ ರೂಪವಾಗಿದೆ.”
ಈ ಪರಿಸ್ಥಿತಿಯು ಲೋಕ ವ್ಯಾಪಕ ಪಾತಕಗಳ ವೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ವಾಹನಾಪಹರಣ, ಶಸ್ತ್ರಸಜ್ಜಿತ ದರೋಡೆ, ಬಲಾತ್ಕಾರ ಸಂಭೋಗ ಮತಿತ್ತರ ಹಿಂಸಾತ್ಮಕ ಕೃತ್ಯಗಳನ್ನು ಲೋಕದ ಪತ್ರಿಕಾಂಕಣಗಳು ಕ್ರಮವಾಗಿ ಹೊರಡಿಸುತ್ತಿವೆ. ಮತ್ತು ಅವು ಅನೇಕ ಸಲ ಇತರ ಅಹಿಂಸಾತ್ಮಕ ಪಾತಕಗಳಿಗಿಂತ ಹೆಚ್ಚು ಗಮನವನ್ನು ಸೆಳೆಯುತ್ತವೆ. ಹಾಗಾದರೆ ನೀವೂ, ನಿಮ್ಮ ಸ್ವತ್ತೂ ಪಾತಕಗಳಿಗೆ ಬಲಿಯಾಗಬಹುದೆಂಬದು ಸ್ಪಷ್ಟ . ಆದರೆ ಏಕೆ? ಜನರು ಪಾತಕಿಗಳಾಗುವಂತೆ ಯಾವುದು ಪ್ರೇರೇಪಿಸುತ್ತದೆ?
ಅನೇಕ ಪಾತಕಿಗಳು ಕಾಲಾನುಸರಣಿಗಳು. ಇದರ ಪರಿಣಾಮವಾಗಿ, ಪಾತಕಗಳ ಉಕ್ಕೇರುವಿಕೆಯನ್ನು ತಡೆಯಲು ಜನರು ತಮ್ಮ ನೆರೆಹೊರೆಯಲ್ಲಿ ಹೆಚ್ಚು ಪ್ರಜ್ಞೆಯಿಂದಿರುವಂತೆ ಅಧಿಕಾರಿಗಳು ಪ್ರಯತ್ನಿಸುತ್ತಾರೆ. ಇಂಥ ಹಂಚಿಕೆಗಳನ್ನು ಪಾತಕಗಳನ್ನು ತಡೆಹಿಡಿಯಲು ಉಪಯೋಗಿಸುತ್ತದಾದರೂ, ಜನರು ಪಾತಕಿಗಳಾಗುವದನ್ನು ಅದು ನಿಲ್ಲಿಸುತ್ತದೋ? ಇಲ್ಲ.
ಪಾತಕದ ವ್ಯಕ್ತಿತ್ವವನ್ನು ತುಂಬ ಅಧ್ಯಯನ ಮಾಡಲಾಗುತ್ತದೆ. ಸ್ವಾರಸ್ಯಕರವಾಗಿ, ದೇವರ ವಾಕ್ಯವಾದ ಬೈಬಲು, ಪಾತಕಿಗಳ ಯೋಚನೆಯ ಒಳನೋಟವನ್ನು ಒದಗಿಸುತ್ತದೆ. ದುರಾಕರ್ಷಣೆ ಮಾಡುತ್ತಾ ಇರುವವರ ವಿರುದ್ಧ ಯುವಕರನ್ನು ಅದು ಎಚ್ಚರಿಸುತ್ತಾ ಹೇಳುವುದು: “ಅವರು — ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ ! ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವದಕ್ಕೆ ಕಾದಿರೋಣ. ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗಿ ಬಿಡುವಂತೆ ನಾವೂ ಇವರನ್ನು ಜೀವದೊಡನೆ ನುಂಗಿಬಿಡುವ. ಸಕಲ ವಿಧವಾದ ಅಮೂಲ್ಯ ಸಂಪತ್ತನ್ನು ಕಂಡುಹಿಡಿದು ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬುವೆವು. ನಮ್ಮ ಸಂಗಡ ಪಾಲುಗಾರನಾಗು.” (ಜ್ಞಾನೋಕ್ತಿ 1:11-14) ಹೌದು, ದುರಾಶೆ, ಲೋಭ ಮತ್ತು ಪ್ರಾಪಂಚಿಕ ಮನೋಭಾವ ಪಾತಕವನ್ನು ಪೋಷಿಸುತ್ತದೆ.
ಈ ಇಪ್ಪತ್ತನೇ ಶತಮಾನದಲ್ಲಿ ಮಾದಕ ದ್ರವ್ಯಗಳ ದುರುಪಯೋಗ ಮತ್ತು ಸುಖವೇ ಮುಖ್ಯವೆಂಬ ಧ್ಯೇಯವು ಅನೇಕರ ವಿಚಾರಗಳಲ್ಲಿ ಪ್ರಾಧಾನ್ಯತೆ ವಹಿಸುತ್ತದೆ. ಅತಿರೇಕ ಅಭ್ಯಾಸಗಳಿಗೆ ಹಣಬೇಕಾಗುತ್ತದೆ. ಇದನ್ನು ಪಡೆಯುವಾಗ ಇತರರಿಗೆ ನೋವಾದರೂ, ಪ್ರಾಣ ತೆಗೆಯ ಬೇಕಾದರೂ ಅದು ಚಿಂತಿಲ್ಲ. ಈ ‘ಕಷ್ಟಕರವಾದ ಕಠಿಣ ಸಮಯಗಳಲ್ಲಿ’ ಜನರ “ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುವವು. ಅವರು ರಕ್ತವನ್ನು ಸುರಿಸಲು ಆತುರ ಪಡುವರು” ಎಂಬದು ಹೆಚ್ಚು ಜನರ ವಿಷಯದಲ್ಲಿ ಸತ್ಯ.—2 ತಿಮೊಥಿ 3:1, 3, 4; ಜ್ಞಾನೋಕ್ತಿ 1:16.
ಪಾತಕವೆಂದರೆ, “ವಿಶೇಷವಾಗಿ ನೈತಿಕತೆಯ ವಿರುದ್ಧದ ಘೋರ ಅಪರಾಧ” ಎನ್ನುತ್ತದೆ ವೆಬ್ಸ್‌ಟರ್ಸ್ ನೈನ್ತ್ ನ್ಯೂ ಕೊಲಿಜಿಯೇಟ್ ಡಿಕ್ಷನೆರಿ. ನಾವು ನೈತಿಕ ಅಧಃಪತನದ ಕಾಲದಲ್ಲಿ ಜೀವಿಸುತ್ತೇವೆ. ಅಪೊಸ್ತಲ ಪೌಲನು ಎಫೆಸದ ಕ್ರೈಸ್ತರಿಗೆ ಇಂಥ ಜನರ ವಿರುದ್ಧ ಎಚ್ಚರಿಸಿದನು: “ಅವರು ನಿಷ್ಪ್ರಯೋಜನ ಬುದ್ಧಿಯುಳ್ಳವರಾಗಿ ನಡೆದು ಕೊಳ್ಳುತ್ತಾರೆ. ಅವರ ಮನಸ್ಸು ಮೊಬ್ಬಾಗಿ ಹೋಗಿದೆ. ಅವರು ತಮ್ಮ ಹೃದಯದ ಕಾಠಿಣ್ಯದ ನಿಮಿತ್ತದಿಂದಲೂ, ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.” ನಾವು ಇದೇ ರೀತಿ ಇಂದು ಇದಕ್ಕೆ ಗಮನ ನೀಡಬೇಕು.—ಎಫೆಸದವರಿಗೆ 4:17-19.
ಕ್ರೌರ್ಯಕಾಮ ವಿಷಯವಾದ ವಿಡಿಯೋ ಟೇಪ್ ರೆಕಾರ್ಡಿಂಗ್‌ಗಳ ಸಮೃದ್ಧಿ, ಯುದ್ಧದ ವೈಭವಾನ್ವಿಕತೆ ಮತ್ತು ನಿಷಿದ್ಧ ಸುಖಾಭಿಲಾಷೆಗಳನ್ನು ಸ್ವಾರ್ಥದಿಂದ ಬೆನ್ನಟ್ಟುವಿಕೆ—ಇವೆಲ್ಲವು ಕೆಲವರು ಪಾತಕಿಗಳಾಗುವಂತೆಯೂ ನಿರಪರಾಧಿಗಳು ಪಾತಕದ ಗುರಿಹಲಗೆಗಳಾಗುವಂತೆಯೂ ಮಾಡುವುದಿಲ್ಲವೇ? ಆದರೂ ಈ ಪಾತಕದ ಒಳಸಂಚಿನ ಜಾಲದಲ್ಲಿ ಇನ್ನೊಂದು ವಿಷಯ ಸೇರಿದೆ. ಅದೇನು?
ಅವನೇ ಪಿಶಾಚನಾದ ಸೈತಾನನು. ಈಗಿನ ಲೋಕದ ಸ್ವಭಾವವನ್ನು ಸೂಚಿಸುವ ಅಂತಃಕರಣ ರಹಿತ ಹಿಂಸೆ ಮತ್ತು ಪಾತಕದ ಕಿಚ್ಚನ್ನು ಹೊತ್ತಿಸುವುದು ಅವನ ಸಿಟ್ಟೇ. (1 ಯೋಹಾನ 5:19; ಪ್ರಕಟನೆ 12:12) ಸತ್ಯ ದೇವರಾದ ಯೆಹೋವನಿಂದ ಜನರೆಲ್ಲರನ್ನು ತೊಲಗಿಸುವುದೇ ಅವನ ಗುರಿ. ಅವನು ಅನೇಕರನ್ನು ತಿರುಗಿಸುವುದರಲ್ಲಿ ಸಾಫಲ್ಯ ಪಡೆದರೂ ದೇವರ ನಿಜ ಸೇವಕರ ಸಮಗ್ರತೆಯನ್ನು ಮುರಿಯುವದರಲ್ಲಿ ವಿಫಲಗೊಳ್ಳುವನೆಂದು ಬೈಬಲು ಪ್ರವಾದನಾ ರೂಪವಾಗಿ ತಿಳಿಸುತ್ತದೆ. ಅಂತಿಮವಾಗಿ, ಸೈತಾನನನ್ನೇ ಕಿತ್ತು ಹಾಕಲಾಗುವುದು. ಆದರೆ, ಸೈತಾನನು ಇಲ್ಲದೆ ಹೋದಾಗ ಪಾತಕ ಅಂತ್ಯಗೊಳ್ಳುವದೆಂದು ಅರ್ಥವೂ? ಮತ್ತು ಪಾತಕಗಳ ಅಂತ್ಯ ಈಗ ಸಮೀಪವೇ? (w89 8/15)