ಅವುಗಳನ್ನೇಕೆ ಕಳಕೊಳ್ಳಬೇಕು?
ಕಳೆದ ಬೇಸಗೆಯಲ್ಲಿ, ನಡು ಪ್ರಾಯದ ಮಹಿಳೆಯೊಬ್ಬಳು ನ್ಯೂಯೋರ್ಕ್ ಸಿಟಿ ಬ್ಯಾಂಕಿನಲ್ಲಿ ಸಾಲಿನಲ್ಲಿ ನಿಂತಿದ್ದಾಗ, ತನ್ನೆದುರಿದ್ದ ಒಬ್ಬ ಗಂಡಸು ವಾಚ್‌ಟವರ್ ಪತ್ರಿಕೆಯನ್ನು ಓದುವುದನ್ನು ಕಂಡಳು. ಅದರಲ್ಲಿದ್ದ ಪ್ರಾರ್ಥನೆಯ ಕುರಿತಾದ ಲೇಖನವನ್ನು ಓದಲು ಆಕೆ ಬಹು ಬಯಸಿದಳು, ಆದ್ದರಿಂದ ಸಂಚಿಕೆಯ ತಾರೀಕನ್ನು ಬರೆದಿಟ್ಟಳು.
ಕೆಲವು ದಿನಗಳ ನಂತರ ಯೆಹೋವನ ಸಾಕ್ಷಿಗಳು ಅವಳ ಮನೆಯನ್ನು ಸಂದರ್ಶಿಸಿದರು, ಆಗ ಅವಳು ಕೇಳಿದ್ದು: “ವಾಚ್‌ಟವರ್‌ನ ಜುಲೈ ಸಂಚಿಕೆಗಳು ನಿಮ್ಮಲ್ಲಿವೆಯೋ?” ಆ ನಿರ್ದಿಷ್ಟ ಪತ್ರಿಕೆಯಲ್ಲಿ ಅವಳೇಕೆ ಆಸಕ್ತಳೆಂದು ತಿಳಿದ ಬಳಿಕ, ಸಾಕ್ಷಿಗಳಲ್ಲಿ ಒಬ್ಬನು ಅಂದದ್ದು: “ಆಸಕ್ತಿಯುಳ್ಳ ಯಾವುದೇ ಸಂಚಿಕೆಯನ್ನು ಕಳಕೊಳ್ಳದೇ ಇರಲು ಉತ್ತಮ ವಿಧಾನ ಚಂದಾ ಮಾಡುವುದೇ.”
“ಹಾಗೆ ಮಾಡ ಸಾಧ್ಯವಿತ್ತೆಂದು ನನಗೆ ಗೊತ್ತಿರಲಿಲ್ಲ” ಎಂದು ಉದ್ಗರಿಸಿದಳು ಆ ಮಹಿಳೆ. ವಾರ್ಷಿಕ ಚಂದಾ $5 ಎಂದು ತಿಳಿಸಿದಾಗ, ಅವಳಂದದ್ದು: “ನಿಜವೂ? ಇಡೀ ವರ್ಷಕ್ಕೆ $5 ಮಾತ್ರವೆಯೋ?” ಹೌದೆಂದು ಆಶ್ವಾಸನೆ ಕೊಟ್ಟಾಗ ಅವಳು ವಾಚ್‌ಟವರ್ ಗೆ ಮಾತ್ರವಲ್ಲ ಅದರ ಜೊತೆ ಪತ್ರಿಕೆ ಅವೇಕ್ ! ಗೂ ಚಂದಾ ಮಾಡಿದಳು. “ಎರಡೂ ಪತ್ರಿಕೆಗಳು ಕೇವಲ $10 ಕ್ಕೆ ನನಗೆ ನಿಜವಾಗಿ ಸಿಗಬಲ್ಲವೋ?” ಎಂದಳವಳು ಪುನಹಾ.
ಸಾಕ್ಷಿಯಿಂದ ಚಂದಾ ಪಡೆಯಲು ಆ ಮಹಿಳೆ ಸಂತೋಷಿಸಿದಳು. ಕಾವಲಿನಬುರುಜು ಮತ್ತು ಎಚ್ಚರ ! ಪತ್ರಿಕೆಗಳು ನಿಮ್ಮ ಮನೆಗೂ ಬರಬಲ್ಲವು. ಕೇವಲ ರೂ.50. ಕಳುಹಿಸಿರಿ ಮತ್ತು ಒಂದು ವರ್ಷದ ತನಕ ಈ ಎರಡೂ ಪತ್ರಿಕೆಗಳ (ತಿಂಗಳಿಗೆ ಎರಡು ಪ್ರತಿಗಳನ್ನು) ಪಡೆಯಿರಿ.
ದಯವಿಟ್ಟು ಕಾವಲಿನಬುರುಜು ಮತ್ತು ಎಚ್ಚರ ! ದ ವಾರ್ಷಿಕ ಚಂದಾ ಕಳುಹಿಸಿ ಕೊಡಿರಿ. (ಕನ್ನಡ). ರೂ.50.00 ನ್ನು ಒಳಗೂಡಿಸಿದ್ದೇನೆ.