ರಾಜ್ಯ ಘೋಷಕರ ವರದಿ
ವಿರೋಧದಲ್ಲಿಯೂ ಸುವಾರ್ತೆಯು ಸೈಪ್ರಸ್ನಲ್ಲಿ ವೃದ್ಧಿಸುತ್ತಿದೆ
ಅಪೋಸ್ತಲ ಪೌಲನು ರಾಜ್ಯದ ಶುಭವಾರ್ತೆಯನ್ನು ಸ್ರೆಪ್ರಸ್ಸಲ್ಲಿ ಸಾರಿದನು. (ಅಪೋ. 13:4-12) ಅದು ಸಾ.ಶ. 47-48 ರಲ್ಲಿ. ಇಂದು ಈ ಸುಂದರಮಯ ದ್ವೀಪದಲ್ಲಿ 1,154 ಯೆಹೋವನ ಸಾಕ್ಷಿಗಳಿಂದ ಸುವಾರ್ತೆಯು ಸಾರಲ್ಪಡುತ್ತಿದೆ ಮತ್ತು 1988 ಎಪ್ರಿಲಲ್ಲಿ ಜ್ಞಾಪಚಾರಣೆಗೆ 2,570 ಮಂದಿ ಹಾಜರಾದರು, ಇದು ಈ ದ್ವೀಪದಲ್ಲಿ ಪ್ರಾಮಾಣಿಕ ಹೃದಯದ ಮತ್ತು ದೇವಭೀರು ವ್ಯಕ್ತಿಗಳು ಇದ್ದಾರೆಂಬದನ್ನು ಸೂಚಿಸುತ್ತದೆ. ಆದರೆ ಯೆಹೋವನ ಸಾಕ್ಷಿಗಳಿಂದ ನೀಡಲ್ಪಡುವ ಶಾಂತಿಮಯ ಬೈಬಲ್ ಸಂದೇಶವನ್ನು ಅನೇಕ ಜನರು ಸ್ವಾಗತಿಸುವಾಗ, ಯೇಸುವಿನ ದಿನಗಳ ವೈದಿಕರಂತೆ, ಗ್ರೀಕ್ ಆರ್ಥಡಕ್ಸ್ ವೈದಿಕರು ಈ ಕೆಲಸವನ್ನು ವಿರೋಧಿಸುತ್ತಾರೆ. (ಯೋಹಾನ 15:20) ಸೈಪ್ರಸ್ನ ಶಾಖಾ ಆಫೀಸು ಬರೆಯುವದು: “ಹಿಂದೆಂದೂ ಮಾಡದಂತಹ ರೀತಿಯಲ್ಲಿ ಗ್ರೀಕ್ ಆರ್ಥಡರ್ಕ್ ಚರ್ಚು ನಮ್ಮ ಸಾರುವ ಕಾರ್ಯವನ್ನು ಕದಡಿಸಲು ನಿರ್ಧರಿಸಿದೆ ಎಂದು ತೋರಿಸುತ್ತಾ ಇದೆ.” ಅನಂತರ ಮನೆ ಮನೆ ಸೇವೆಯಲ್ಲಿ ವೈದಿಕರು ನಮ್ಮ ಸಹೋದರರಿಗೆ ಹೇಗೆ ಕಿರುಕುಳ ಕೊಡುತ್ತಾರೆ ಮತ್ತು ಅವರು ವಿವಾದಕ್ಕೆ ಇಳಿಯುವಂತೆ ಕೆರಳಿಸಲು ಪ್ರಯತ್ನಿಸುತ್ತಾರೆಂದು ವರದಿಯು ವಿವರಿಸುತ್ತದೆ. ಅನಂತರ ಗಲಭೆಗೆ ಕಾರಣ ಸಹೋದರರೇ ಎಂದು ಅಪಾದಿಸುತ್ತಾರೆ. ಆದರೆ, ನಮ್ಮ ಸಹೋದರರು ಕೆರಳದೇ ಅಲ್ಲಿಂದ ಹೊರಟು ಹೋಗುತ್ತಾರೆ.
ಕೆಲವೂಮ್ಮೆ ವೈದಿಕರ ವಿರೋಧವು ಮುನ್ಸಿಡಿಯುತ್ತದೆಂಬದನ್ನು ಕೆಳಗಿನ ಅನುಭವ ತೋರಿಸುತ್ತದೆ. “ಕೆಲವು ತಿಂಗಳುಗಳ ಹಿಂದೆ, ಸ್ತ್ರೀಯೆಬ್ಬಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸ ಮಾಡಲಾರಂಭಿಸಿದಳು ಮತ್ತು ಇತ್ತೀಚೆಗೆ ಅವನ ಗಂಡನೂ ಅದರಲ್ಲಿ ಕೂಡಿದನು. ಅವರ ಈ ಬೈಬಲಭ್ಯಾಸವನ್ನು ನಿಲ್ಲಿಸುವ ನಿರೀಕ್ಷೆಯಿಂದ ಒಬ್ಬ ದೇವಶಾಸ್ತ್ರ ಪಂಡಿತನು ಅವರನ್ನೀಗ ಭೇಟಿ ಮಾಡತೊಡಗಿದನು. ತ್ರಿಯೇಕತ್ವವನ್ನು ವಿವರಿಸಲು ಅವನು ಪ್ರಯತ್ನಿಸಿದನು. ಸ್ವಲ್ಪ ಸಮಯಾನಂತರ ಗಂಡನು ಮಧ್ಯ ಪ್ರವೇಶಿಸಿ, ಅಂದದ್ದು: “ಈಗ ಯೇಸುವು ಪರಲೋಕದಲ್ಲಿ, ನೀವು ಹೇಳುವಂತೆ ಬೌತಿಕ ದೇಹದಲ್ಲಿರುವುದು ಸರಿಯಾದರೆ, ಆತ್ಮ ರೂಪಿಯಾದ ದೇವರೊಂದಿಗೆ ಅದೇ ಸಮಯದಲ್ಲಿ ಅವನು ಒಂದಾಗಿರುವುದು ಹೇಗೆಸಾಧ್ಯವೆಂದು ನನಗರ್ಥವಾಗುವುದಿಲ್ಲ.’ ದೇವಶಾಸ್ತ್ರ ಪಂಡಿತನ ಉತ್ತರವು: ‘ಒಳ್ಳೆದು, ನೀವು ಎಲ್ಲವನ್ನು ಅರ್ಥಮಾಡಿಕೊಳ್ಳಬೇಕೆಂದೇನೂ ಇಲ್ಲ.’ ಆಸಕ್ತವ್ಯಕ್ತಿ ಅಂದದ್ದು: “ಆದ್ರೆ ಯೇಸು ದೇವರ ಮಗನೆಂದೂ ಅವನೇ ಸ್ವತಹ ದೇವರಲ್ಲವೆಂದೂ ನಾನು ಅರ್ಥಮಾಡಿಕೊಳ್ಳಬಲ್ಲಿ. ತ್ರಿಯೇಕದ ಕುರಿತು ನಾನು ಹೆಚ್ಚೇನೂ ಕೇಳಬಯಸೆನು.’ ಆ ಸಂದರ್ಭದಲ್ಲಿ ದೇವಶಾಸ್ತ್ರ ಪಂಡಿತನು ಎದ್ದುನಿಂತು ಕೋಪದಿಂದ ಅಂದದ್ದು: ‘ನೀವು ಬೈಬಲಧ್ಯಯನದಲ್ಲಿ ಬಹಳ ಮುಂದೆ ಇದ್ದೀರಿ. ನೀವು ಬದಲಾಗುವವರಲ್ಲ.’
ಈಗ ಆ ಸ್ತ್ರೀಯು ಎಲ್ಲಾ ಕೂಟಗಳಿಗೆ ಹಾಜರಾಗುತ್ತಾಳೆ ಮತ್ತು “ಯೆಹೋವನಲ್ಲಿ ಭರವಸ” ಜಿಲ್ಲಾ ಅಧಿವೇಶನದಲ್ಲಿ ಸ್ನಾನ ಪಡೆದಳು. ಗಂಡನು ತನ್ನ ಅಭ್ಯಾಸವನ್ನು ಮುಂದುವರಿಸುತ್ತಿದ್ದಾನೆ ಮತ್ತು ಕೆಲವು ಕೂಟಗಳಿಗೆ ಹಾಜರಾಗುತ್ತಿದ್ದಾನೆ.
“ಅವರ ಪ್ರಯತ್ನಗಳಲ್ಲಿಯೂ ವೈದಿಕರು ತಮ್ಮ ಗುರಿಯನ್ನು ಸಾಧಿಸಶಕ್ತರಾಗಿಲ್ಲ” ಎಂದು ಸೈಪ್ರಸ್ನ ಶಾಖಾ ಆಫೀಸಿನ ವರದಿ ತಿಳಿಸುತ್ತದೆ. “ಬದಲಾಗಿ, ಹಿಂದಿಗಿಂತಲೂ ಹೆಚ್ಚು ಜನರು ಕೂಟಗಳಿಗೆ ಹಾಜರಾಗುವುದನ್ನು ನಾವು ಕಾಣುತ್ತೇವೆ. ಅದೇ ಸಮಯ ಪ್ರಾಮಾಣಿಕ ಹೃದಯದ ಜನರಿಗೆ ಸುವಾರ್ತೆಯನ್ನು ತಲಪಿಸುವುದರಲ್ಲಿ ಸಹೋದರರು ಇನ್ನಷ್ಟು ದೃಢ ಮನಸ್ಕರಾಗಿದ್ದಾರೆ.” ಯೆರೆಮೀಯ 1:19 ರಲ್ಲಿ ಯೆಹೋವನು ವಾಗ್ದಾನಿಸಿದಂತೆಯೇ ಆತನು ತನ್ನ ನಿಷ್ಟಾವಂತ ಜನರನ್ನು ಬೆಂಬಲಿಸುತ್ತಾನೆ: “ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು. ಇದು ಯೆಹೋವನಾದ ನನ್ನ ಮಾತು.” (w88 10/1)