ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 7/1 ಪು. 10-11
  • ಯೂದಾಯದ ಅರಣ್ಯ ಬಂಜರಾದರೂ ಆಕರ್ಶಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೂದಾಯದ ಅರಣ್ಯ ಬಂಜರಾದರೂ ಆಕರ್ಶಕ
  • ಕಾವಲಿನಬುರುಜು—1990
  • ಅನುರೂಪ ಮಾಹಿತಿ
  • ಸೀನಾಯಿಯಲ್ಲಿ ಆತನು ಇಸ್ರಾಯೇಲಿಗಾಗಿ ಒದಗಿಸಿದನು
    ಕಾವಲಿನಬುರುಜು—1992
  • ವಾಗ್ದತ್ತ ದೇಶದಿಂದ ಪ್ರಾಯೋಗಿಕ ಪಾಠಗಳು
    ಕಾವಲಿನಬುರುಜು—1996
  • ಗಲಿಲಾಯದ ಸಮುದ್ರ ಸಂಚಾರಕ್ಕೆ ಬನ್ನಿರಿ!
    ಕಾವಲಿನಬುರುಜು—1993
ಕಾವಲಿನಬುರುಜು—1990
w90 7/1 ಪು. 10-11

ವಾಗ್ದಾನ ದೇಶದ ದೃಶ್ಯಗಳು

ಯೂದಾಯದ ಅರಣ್ಯ ಬಂಜರಾದರೂ ಆಕರ್ಶಕ

ವಾಗ್ದಾನ ದೇಶದಲ್ಲಿ ಯೂದಾಯದ ಅರಣ್ಯವು ಹೇಗಿರಬಹುದೆಂದು ನೀವು ಊಹಿಸುವಿರಿ? ಅನೇಕರು ಇದು ವಿಸ್ತಾರವಾದ ದಟ್ಟನೆಯ ಕಾಡು ಎಂದೆಣಿಸುತ್ತಾರೆ. ಇನ್ನಿತರರು ಇದನ್ನು ಕೊನೆಯಿಲ್ಲದ ಮರಳಿನ ಸಹಾರಾದಂತಹ ಮರುಭೂಮಿ ಎಂದು ಊಹಿಸುತ್ತಾರೆ.

ಮೇಲಿನ ಚಿತ್ರಣವನ್ನು ನೀವು ವೀಕ್ಷಿಸುವಾಗ ಈ ಅರಣ್ಯವು ಈ ಎರಡೂ ಕಲ್ಪನೆಗಳನ್ನು ಸರಿದೂಗುವುದಿಲ್ಲ. ಈ ದೃಶ್ಯದಲ್ಲಿ, ಯೇಸುವೂಂದಿಗೆ ಜತೆಗೂಡಿದ್ದ ಅರಣ್ಯದ ಒಂದು ಭಾಗವನ್ನು ನೀವು ನೋಡುತ್ತೀರಿ. ಅರಣ್ಯದ ಅಂಚಿನಲ್ಲಿರುವ ಈ ಶಿಕರದಿಂದ ಸೈತಾನನು “ಭೂಮಿಯ ಎಲ್ಲಾ ರಾಜ್ಯಗಳನ್ನು” ಯೇಸುವಿಗೆ ತೋರಿಸಿದ್ದನೆಂದು ಸಂಪ್ರದಾಯವು ಹೇಳುತ್ತದೆ, ಇದಕ್ಕೆದುರಾಗಿ ಪೂರ್ವದಲ್ಲಿ ಯೋರ್ದಾನ್‌ ಕಣಿವೆಯಲ್ಲಿ ತಾಳೇ ಮರಗಳಿಂದಾವೃತವಾದ ಯೆರಿಕೋ ಶಹರವು ಕಾಣಿಸುತ್ತದೆ.—ಮತ್ತಾಯ 3:1; 4:1-11.

ಈ ಈಶಾನ್ಯ ಭಾಗದಿಂದ, ಯೂದಾಯದ ಅರಣ್ಯವು ಮೃತ ಸಮುದ್ರದ ಪಶ್ಚಿಮ ಭಾಗದ ತನಕ ಉದ್ದಕ್ಕೂ ಚಾಚಿಕೊಂಡಿದೆ. 1989 ಕ್ಯಾಲೆಂಡರ್‌ ಆಫ್‌ ಜೆಹೋವಸ್‌ ವಿಟ್ನೆಸಸ್‌ ಇದರ ಆವರಣದ ಭೂಪಟವನ್ನು ನೀವು ನೋಡುವುದಾದರೆ, ಈ ಕ್ಷೇತ್ರವನ್ನು ಚಿತ್ರಿಸಿಕೊಳ್ಳಲು ನಿಮಗೆ ಸಹಾಯವಾಗಬಹುದು. (ಈ ಕ್ಯಾಲೆಂಡರಲ್ಲಿ ಮೇಲಿನ ಚಿತ್ರದ ಒಂದು ದೊಡ್ಡ ಅವೃತ್ತಿ ಸಹಾ ಇದೆ.) ಅರಣ್ಯವು (10 ರಿಂದ 15 ಮೈಲುಗಳಷ್ಟು ಅಗಲ) ಯುದಾಯ ಪರ್ವತಗಳ ಇಳುಕಲಿನಲ್ಲಿದ್ದು ಮೃತಸಮುದ್ರದ ಕರಾವಳಿಯ ತನಕವಿದೆ.

ಭೂಮಧ್ಯ ಸಮುದ್ರದಿಂದ ಬರುವ ನೀರಿನ ಹೆಚ್ಚಿನ ಹಬೆಯನ್ನು ಈ ಪರ್ವತಗಳು ತಡೆಗಟ್ಟುತ್ತವೆ. ಆದುದರಿಂದು ಪೂರ್ವಭಾಗದ ಮೆದು, ಬಂಜರು ಸೀಮೆ ಸುಣ್ಣದ ಗುಡ್ಡಗಳು ನವಂಬರ ಮತ್ತು ದಶಂಬರದ ಚಳಿಗಾಲದ ತಿಂಗಳುಗಳನ್ನು ಬಿಟ್ಟು ಬೇರೆ ಸಮಯದಲ್ಲಿ ಕೊಂಚವೇ ಮಳೆಯನ್ನು ಪಡೆಯುತ್ತವೆ. ಆ ಸಮಯದಲ್ಲಿ ಹುಲ್ಲು ಮೊಳೆಯುವದರಿಂದ ಕುರೀ ಮಂದೆಗಳು ಅಲ್ಲಿ ಮೇಯಶಕ್ತವು. ಆದ್ದರಿಂದ 1 ಸಮುವೇಲ 24:3 ರಲ್ಲಿ “ಕುರೀಹಟ್ಟಿಗಳು” ಎಂದು ಉಲ್ಲೇಖಿಸಿರುವುದು ಈ ಪ್ರದೇಶವನ್ನು ಸರಿಯಾಗಿ ಒಪ್ಪುತ್ತದೆ.

ಇಲ್ಲಿ ಬೆಳೆಯುವ ಹುಲ್ಲು ತುಂಬಾ ಕಾಲ ಉಳಿಯುವುದಿಲ್ಲ. ಮರುಭೂಮಿಯಿಂದ ಬರುವ ಪೂರ್ವದ ಗಾಳಿ ಹಸುರು ಹುಲ್ಲನ್ನು ಒಣಗಿಸಿ ಕಂದು ಬಣ್ಣಕ್ಕೆ ತಿರುಗಿಸುತ್ತದೆ. ಇದು ಪ್ರವಾದನಾ ಹೇಳಿಕೆ ಯನ್ನು ಎಷ್ಟು ಚೆನ್ನಾಗಿ ಚಿತ್ರಿಸುತ್ತದೆ: “ಹುಲ್ಲು ಒಣಗಿ ಹೋಗುವದು. ಹೂ ಬಾಡಿಹೋಗುವದು. ನಮ್ಮ ದೇವರ ಮಾತೋ ಸದಾಕಾಲವೂ ಇರುವುದು.”—ಯೆಶಾಯ 40:8; 1 ಪೇತ್ರ 1:24, 25.

ಈ ಅರಣ್ಯದಲ್ಲಿ 40 ದಿನ ಮತ್ತು 40 ರಾತ್ರಿಗಳನ್ನು ಕಳೆದು ಅಲೆದಾಡಿದಾಗ ಯೇಸು ಪ್ರಾಯಶ: ಈ ವಚನಗಳ ಮೇಲೆ ಧ್ಯಾನಿಸಿರಬೇಕು. ಮರಗಳಿಲ್ಲದ ಬಂಡೆಗಳಲ್ಲಿ ಮತ್ತು ಕಮರಿಗಳಲ್ಲಿ ಉರಿಯುವ ಝಳದ ಕೆಳಗೆ ಯೇಸುವಿಗೆ ಎಂತಹ ಅನುಭವವಾಗಿದ್ದಿರಬೇಕೆಂದು ಯೋಚಿಸಿರಿ. (ಯೆಶಾಯ 32:2) ಅನಂತರ “ದೇವದೂತರು ಬಂದು ಅವನನ್ನು ಉಪಚರಿಸಿದರು” ಎಂಬದು ಎಷ್ಟೊಂದು ಅರ್ಥಭರಿತ!—ಮತ್ತಾಯ 4:1-11.

ಅದರ ಬಂಜರುತನ ಮತ್ತು ಜನಶೂನ್ಯತೆಯ ಕಾರಣ ಯೂದಾಯ ಅರಣ್ಯವನ್ನು ಆಶ್ರಯಸ್ಥಾನವಾಗಿ ಬಳಸಲಾಗುತಿತ್ತು. ಕುಪಿತ ಅರಸ ಸೌಲನಿಂದ ಪಲಾಯನ ಗೈಯುತ್ತಿದ್ದಾಗ ಅಲ್ಲಿ ಭದ್ರತೆಯನ್ನು ಕಂಡುಕೊಂಡ ದಾವೀದನು ಅದನ್ನು “ನೀರಿಲ್ಲದೆ ಒಣಗಿದ ಭೂಮಿ” ಯಾಗಿ ವರ್ಣಿಸಿದ್ದಾನೆ. (ಕೀರ್ತನೆ 63:1 ಮತ್ತು ಮೇಲ್ಬರಹ; 1 ಸಮುವೇಲ 23:29) ಕೆಲವೂಂದು ಸಮಯ ಅವನು ಅಡಗಿದ್ದ ಗವಿಯು ವಾಡೀ ಖಾರೇಟುನ್‌ (ಬೆತ್ಲೆಹೇಮಿನ ಪೂರ್ವದಿಂದ ಮೃತ ಸಮುದ್ರದ ತನಕ ಇರುವ ಕಣಿವೆ) ನಲ್ಲಿರುವ ಉಮ್ಮ್‌ ಕುಟೇಫಾ ದಂತಹ ಗವಿಯಾಗಿದ್ದಿರಬಹುದು. ಗವಿಯಿಂದ ನೋಡುವಾಗ, ಅಲ್ಲಲ್ಲಿ ಚದರಿರುವ ಸಸ್ಯಗಳ ಎಡೆಗಳಲ್ಲಿ ಕೆಲವು ಕಪ್ಪು ಕುರಿಗಳು ನಿಮ್ಮ ಕೆಳಗಡೆಯೇ ಮೇವು ತಿನ್ನುವುದನ್ನು ನೀವು ಕಾಣಬಹುದು.

ಸೌಲನು ಶೌಚಕ್ಕೋಸ್ಕರ ಹೋದಾಗ, ಪಕ್ಕದಲ್ಲಿಯೇ ಏಗೆಂದಿನ ಗುಹೆಯಲ್ಲಿ ದಾವೀದನು ಇದ್ದನು. ಸೌಲನ ನಿಲುವಂಗಿಯ ಮೂಲೆಯನ್ನು ದಾವೀದನು ಕತ್ತರಿಸಿದರೂ, “ಯೆಹೋವನ ಅಭಿಷಿಕ್ತನಿಗೆ” ಯಾವ ಹಾನಿಯನ್ನೂ ಮಾಡಲಿಲ್ಲ. ಅನಂತರ ಸೌಲನನ್ನು ದಾವೀದನು ಕೂಗಿ ಕರೆದಾಗ, ಅರಸನು ಬಹಳ ಗಿಡಮರಗಳ ಎಲೆಗುಂಪಲುಗಳಲ್ಲಿ ಇದ್ದಿರಬೇಕು. (1 ಸಮುವೇಲ 24:1-22) ‘ಬಹಳ ಗಿಡಮರಗಳ ಎಲೆಗುಂಪಲುಗಳು ಇಲ್ಲಿಯೋ?’ ಎಂದು ನೀವು ಕೇಳಬಹುದು.

ಹೌದು, ಬೇಕಾದಷ್ಟು ನೀರು ಇರುವಾಗ ಈ ಅರಣ್ಯವು ಚಿಗುರುತ್ತಿತ್ತು. ಏಗೆಂದಿಯು ಅದರ ಒಂದು ನಿದರ್ಶನ. ಬಿರುಕುಬಿಟ್ಟಿರುವ ಬಂಡೆಗಳ ಎಡೆಗಳಿಂದ ನೀರು ಮೃತ ಸಮುದ್ರದ ಪಶ್ಚಿಮ ಕರಾವಳಿಗೆ ತೆರೆದಿರುವ ಈ ಕಣಿವೆಯಲ್ಲಿ ಕಾರಂಜಿಗಳಾಗಿ ಮತ್ತು ಜಲಪಾತಗಳಾಗಿ ಹೊರಡುತ್ತವೆ. ಇದು ಏಂಗೆದಿಯನ್ನು ಸಸ್ಯ ಸಮೃದ್ಧವಾದ ವಾಸ್ತವಿಕ ಕಾಡನ್ನಾಗಿ ಮಾಡುತ್ತವೆ. ಇಲ್ಲಿ ಸಂದರ್ಶನವಿತ್ತರೆ, ಹಲವಾರು ವಿಧದ ಹೂಗಳನ್ನೂ ಹಣ್ಣುಹಂಪಲನ್ನೂ ನೀವು ಕಾಣುವಿರಿ. ಬಿಲನಿವಾಸಿ ಕರಡಿಯಿಂದ ಹಿಡಿದು ಬೆಟ್ಟದಾಡುಗಳೇ ಮುಂತಾದ ವನ್ಯಜೀವಿಗಳನ್ನೂ ನೀವು ನೋಡಬಹುದು; ಈ ಕ್ಷೇತ್ರದಲ್ಲಿ ಚಿರತೆಗಳು ಸಹಾ ಇವೆ.—1 ಸಮುವೇಲ 24:2; ಪರಮಗೀತ 1:14.

ಯೂದಾಯದ ಆ ಬಂಜರು ಕಾಡು ಅಷ್ಟೊಂದು ಹಚ್ಚನೆಯದಾಗಬಲ್ಲದು ಎಂಬ ಸಂಗತಿಯು ಯೆರೂಸಲೇಮಿನ ಆಲಯದಿಂದ ಪ್ರವಹಿಸಿದ್ದ ನೀರಿನ ಕುರಿತಾದ ಯೆಹೆಜ್ಕೇಲನ ದರ್ಶನದ ನಮ್ಮ ತಿಳುವಳಿಕೆಗೆ ಹೆಚ್ಚನ್ನು ಕೂಡಿಸುತ್ತದೆ. ಪ್ರವಾಹವು ಪೂರ್ವಾಭಿಮುಖವಾಗಿ ಹರಿದು ಯೂದಾಯದ ಅರಣ್ಯ ಪ್ರದೇಶದ ತನಕ ಮುಟ್ಟುವಾಗ ಅದರ ಪರಿಮಾಣವು ಏರಿತ್ತು. ಅದರಿಂದಾದ ಫಲಿತಾಂಶ? ಯೆಹೆಜ್ಕೇಲನು ಬರೆದದ್ದು: “ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯವವು. . . . ಅವುಗಳ ಹಣ್ಣು ಆಹಾರಕ್ಕೂ ಸೊಪ್ಪು ಔಷದಕ್ಕೂ ಅನುಕೂಲಿಸುವವು.” ಸತ್ತ ಸಮುದ್ರಕ್ಕೆ ಹರಿದುಹೋದ ನೀರು, ಅದರ ನಿರ್ಜೀವ ನೀರನ್ನೂ ವಾಸಿಮಾಡಿತ್ತು.—ಯೆಹೆಜ್ಕೇಲ 47:1-12; ಯೆಶಾಯ 35:1, 6, 7.

ಆದಕಾರಣ, ಯೂದಾಯದ ಅರಣ್ಯ ಅರ್ಧಾಂಶ ಬಂಜರಾಗಿಯೂ ನಿರ್ಜನವಾಗಿಯೂ ಇರುವುದಾದರೂ, ಬೈಬಲಿನ ಅನೇಕ ದಾಖಲೆಗಳಲ್ಲಿ ಇದು ಭಿನ್ನತೆಗಳ ಒಂದು ಆಕರ್ಶಕ ಪ್ರದೇಶವೆಂದು ವರ್ಣಿಲಾಗಿದೆ.—ಲೂಕ 10:29-37. (w89 11/1)

[ಪುಟ 10 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.

[ಪುಟ 11 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ