ಜೀವಿಸುವುದಕ್ಕಾಗಿ ಒಂದು ಶೈಕ್ಷಣಿಕ ಸಾಧನ
ಆಫ್ರಿಕದ ಸಿಂಬಾಬ್ವೆಯಲ್ಲಿನ ಶಾಲಾ ಶಿಕ್ಷಕನೊಬ್ಬನು, ತಾನು ಕಲಿಸುವಂತಹ ನ್ಯಾಟ್ಸೀಮೆ ಕಾಲೇಜಿನಲ್ಲಿ, “ಜೀವಿಸುವುದಕ್ಕಾಗಿರುವ ಶಿಕ್ಷಣ” ಎಂಬ ವಿಷಯವು ಒದಗಿಸಲ್ಪಡುತ್ತದೆ ಎಂಬುದನ್ನು ಗಮನಿಸಿದನು. ತಾನು ಅನುಭವಿಸಿದ್ದ ಕೌಟುಂಬಿಕ ಸಮಸ್ಯೆಗಳನ್ನು ಅವನು ವಿವರಿಸಿ, ಅವುಗಳನ್ನು ಬಗೆಹರಿಸುವುದರಲ್ಲಿ ತನಗೆ ಸಹಾಯದ ಅಗತ್ಯವಿತ್ತೆಂಬುದನ್ನು ಒಪ್ಪಿಕೊಂಡನು.
ತನ್ನ ಸ್ವಂತ ವಿವಾಹದ ಬಳಿಕ ಏನು ಸಂಭವಿಸಿತೆಂಬುದನ್ನು ವಿವರಿಸುತ್ತಾ ಅವನು ಹೇಳಿದ್ದು: “ಸಮಸ್ಯೆಗಳು ಬಹುಮಟ್ಟಿಗೆ ಆ ಕೂಡಲೆ ಆರಂಭವಾದವು ಮತ್ತು ಇದು 1989ರ ನವೆಂಬರ್ ತಿಂಗಳಿನಲ್ಲಿ ನಾವು ಪ್ರತ್ಯೇಕವಾಗಲು ನಿರ್ಧರಿಸುವುದಕ್ಕೆ ನಡಿಸಿತು.” ಇನ್ನಿತರ ಸಮಸ್ಯೆಗಳೂ ಇದ್ದವು. ಅವನು ಬರೆದುದು: “ನಾನು ನನ್ನ ತಂದೆಯ ಮೊದಲ ಹೆಂಡತಿಯಾಗಿದ್ದ ನನ್ನ ತಾಯಿಯ ಹಿರಿಯ ಮಗನಾಗಿದ್ದೆ. ನಾನು ನನ್ನ ಶಿಕ್ಷಕರ ತರಬೇತಿ ಕಾರ್ಯಕ್ರಮದ ಎರಡನೆಯ ವರ್ಷದಲ್ಲಿದ್ದಾಗ, ನನ್ನ ತಂದೆಯವರು ತೀರಿಕೊಂಡರು. 16 ಮಂದಿ ತಮ್ಮಂದಿರು ಹಾಗೂ ತಂಗಿಯಂದಿರ ಜವಾಬ್ದಾರಿ ನನ್ನ ಮೇಲೆ ಬಿತ್ತು.”
ಯೆಹೋವನ ಸಾಕ್ಷಿಗಳೊಂದಿಗಿನ ಬೈಬಲಿನ ಅಭ್ಯಾಸವು, ತನ್ನ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಈ ಶಾಲಾ ಶಿಕ್ಷಕನಿಗೆ ಸಹಾಯ ಮಾಡಿತು. ಅವನೂ ಅವನ ಹೆಂಡತಿಯೂ ಪುನಃ ಒಂದುಗೂಡಿದ್ದಾರೆ ಹಾಗೂ ಸಂತೋಷಭರಿತರಾಗಿದ್ದಾರೆ. ಅವನು ಬರೆದುದು: “ದೇವರಿಂದ ಸ್ವತಂತ್ರನಾಗಿ ತನ್ನ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿರುವ ಮನುಷ್ಯನ ಪ್ರಯತ್ನಗಳು ನಿಷ್ಪ್ರಯೋಜಕವಾಗಿವೆ ಎಂಬುದನ್ನು, ನನ್ನ ಹೆಂಡತಿಯೂ ನಾನೂ ನಮ್ಮ ವೇದನಾಭರಿತ ಅನುಭವದಿಂದ ಕಲಿತುಕೊಂಡಿದ್ದೇವೆ.” ಆದರೂ, ಸಮಸ್ಯೆಗಳಿರುವ ತನ್ನ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರ ಕುರಿತಾಗಿ ಏನು?
“ನಾನು ನನ್ನ ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಾಗೂ ಇತರ ಶಿಕ್ಷಕರಿಗೆ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್) ಎಂಬ ಪುಸ್ತಕವನ್ನು ಯುಕ್ತವಾದ ಪಠ್ಯಪುಸ್ತಕವಾಗಿ ಶಿಫಾರಸ್ಸು ಮಾಡಿದೆ” ಎಂದು ಅವನು ಬರೆದನು. “ಅವರೆಲ್ಲರೂ ಒಪ್ಪಿದರು, ಮತ್ತು ನಮ್ಮ ಶಾಲೆಯು ನನಗೆ 56 ಪುಸ್ತಕಗಳಿಗಾಗಿ ಆರ್ಡರ್ ಕೊಟ್ಟಿತು, ಹಾಗೂ ನಾನದನ್ನು ಶಾಲೆಗೆ ತಂದೊಪ್ಪಿಸಿದ್ದೇನೆ.”
ಆಕರ್ಷಕವಾದ ಚಿತ್ರಗಳಿರುವ, 320 ಪುಟದ ಈ ಶೈಕ್ಷಣಿಕ ಸಾಧನದಿಂದ ನೀವು ಸಹ ಮಹತ್ತರವಾಗಿ ಪ್ರಯೋಜನವನ್ನು ಪಡೆದುಕೊಳ್ಳುವಿರೆಂದು ನಾವು ನಂಬುತ್ತೇವೆ. ನೀವು ಇದರ ಒಂದು ಪ್ರತಿಯನ್ನು ಪಡೆದುಕೊಳ್ಳಲು ಬಯಸುವಲ್ಲಿ ಅಥವಾ ಉಚಿತ ಬೈಬಲಧ್ಯಯನವನ್ನು ಪಡೆದುಕೊಳ್ಳಲು ಬಯಸುವಲ್ಲಿ, ದಯವಿಟ್ಟು Watch Tower, H-58 Old Khandala Road, Lonavla 410 401, Mah., India, ಇವರಿಗೆ, ಅಥವಾ ಪುಟ 5ರಲ್ಲಿರುವ ಸೂಕ್ತವಾದ ವಿಳಾಸಕ್ಕೆ ಪತ್ರ ಬರೆಯಿರಿ.