ಸ್ತ್ರೀಯರು ಹೆಚ್ಚು ದೀರ್ಘಾಯುಷಿಗಳಾದರೂ ಹೆಚ್ಚು ಉತ್ತಮ ಜೀವನಗಳನ್ನು ನಡೆಸುತ್ತಾರೆಂದಿರಬೇಕೆಂದಿಲ್ಲ
ಲೋಕವ್ಯಾಪಕವಾಗಿ ಸ್ತ್ರೀಯರು ವಯಸ್ಸಾದ ಮೇಲೆ ವಿವಾಹವಾಗುತ್ತಿದ್ದಾರೆ, ಕೆಲವೇ ಮಕ್ಕಳನ್ನು ಪಡೆದು, ಹೆಚ್ಚು ದೀರ್ಘಾಯುಷಿಗಳಾಗುತ್ತಿದ್ದಾರೆ. “ಸ್ತ್ರೀಯರ ಜೀವನಗಳು ಬದಲಾಗುತ್ತಿವೆ” ಎಂದು ಯುನೆಸ್ಕೊ ಸೋರ್ಸಸ್ ಎಂಬ ಪತ್ರಿಕೆಯು ವರದಿಸುತ್ತದೆ. 1970ರಿಂದ 1990ರ ನಡುವೆ, ವಿಕಾಸಹೊಂದಿರುವ ದೇಶಗಳಲ್ಲಿ ಜನ್ಮತಃ ಸ್ತ್ರೀಯರ ಆಯುಷ್ಯವು ನಾಲ್ಕು ವರ್ಷಗಳಷ್ಟು ಅಧಿಕಗೊಂಡಿದೆ ಮತ್ತು ವಿಕಾಸಹೊಂದುತ್ತಿರುವ ದೇಶಗಳಲ್ಲಿ ಬಹುಮಟ್ಟಿಗೆ ಒಂಬತ್ತು ವರ್ಷಗಳಷ್ಟು ಹೆಚ್ಚಿದೆ. “ಅಂದರೆ ಇಂದು ವಿಕಾಸಹೊಂದಿರುವ ದೇಶಗಳಲ್ಲಿ, ಪುರುಷರಿಗಿಂತಲೂ ಸ್ತ್ರೀಯರು 6.5 ವರ್ಷಗಳಷ್ಟು ಹೆಚ್ಚು ದೀರ್ಘಾಯುಷಿಗಳಾಗಿದ್ದಾರೆ. ವಿಕಾಸಹೊಂದುತ್ತಿರುವ ದೇಶಗಳಲ್ಲಿನ ವ್ಯತ್ಯಾಸವು, ಲ್ಯಾಟಿನ್ ಅಮೆರಿಕ ಹಾಗೂ ಕ್ಯಾರಿಬಿಯನ್ನಲ್ಲಿ ಐದು ವರ್ಷಗಳು ಮತ್ತು ಆಫ್ರಿಕದಲ್ಲಿ 3.5 ವರ್ಷಗಳು ಹಾಗೂ ಏಷಿಯ ಮತ್ತು ಪೆಸಿಫಿಕ್ನಲ್ಲಿ ಮೂರು ವರ್ಷಗಳು.”
ಅನೇಕ ಸ್ತ್ರೀಯರಿಗಾದರೋ, ಹೆಚ್ಚು ದೀರ್ಘಾಯುಷಿಗಳಾಗಿರುವುದು, ಹೆಚ್ಚು ಉತ್ತಮ ಜೀವನಗಳನ್ನು ನಡೆಸುವುದನ್ನು ಅರ್ಥೈಸುವುದಿಲ್ಲ. ವಿಶ್ವಸಂಸ್ಥೆಯ ನಮ್ಮ ಭೂಗ್ರಹ (ಇಂಗ್ಲಿಷ್) ಎಂಬ ಒಂದು ಪತ್ರಿಕೆಯು ಗಮನಿಸುವುದೇನೆಂದರೆ, ಲೋಕದ ಸ್ತ್ರೀಯರಲ್ಲಿ ಅಧಿಕಾಂಶ ಮಂದಿಗೆ, ಮೂಲಭೂತ ಮಾನವ ಹಕ್ಕುಗಳು ಇನ್ನೂ “ತುಂಬ ಅಪೇಕ್ಷಿತ ವಿಷಯಗಳಾಗಿರುವುದಾದರೂ ಅನುಭವಿಸಿರದ ವಿಷಯಗಳಾಗಿವೆ. ಅವರಿನ್ನೂ ತೀರ ಸಾಧಾರಣವಾದ ಮೂಲಭೂತ ಮಾನವ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.” ಆದರೂ ಆ ಮೂಲಭೂತ ಮಾನವ ಹಕ್ಕುಗಳು ಸಹ ಕೋಟಿಗಟ್ಟಲೆ ಸ್ತ್ರೀಯರಿಗೆ ಕೈಗೆನಿಲುಕದವುಗಳಾಗಿವೆ, ಏಕೆಂದರೆ ಇಡೀ ಲೋಕದ ಅನಕ್ಷರಸ್ಥರು, ನಿರಾಶ್ರಿತರು ಹಾಗೂ ಬಡ ಜನರಲ್ಲಿ ಅತ್ಯಧಿಕ ಜನರು ಇನ್ನೂ ಸ್ತ್ರೀಯರೇ ಆಗಿದ್ದಾರೆ ಎಂದು ವಿಶ್ವಸಂಸ್ಥೆಯು ಹೇಳುತ್ತದೆ. ಕೆಲವೊಂದು ಪ್ರಗತಿಗಳು ಆಗಿರುವುದಾದರೂ, “ಸ್ತ್ರೀಯರ ಕಡೆಗಿರುವ ಸಂಪೂರ್ಣ ಹೊರನೋಟವು . . . ಉತ್ಸಾಹಶೂನ್ಯವಾಗಿ ಕಂಡುಬರುತ್ತಿದೆ” ಎಂದು ಯುನೆಸ್ಕೊ ಸೋರ್ಸಸ್ ಮುಕ್ತಾಯಗೊಳಿಸುತ್ತದೆ.