ಅವು ಆಕೆಯ ಗಮನವನ್ನು ಸೆಳೆದವು
ಮೇ 1995ರಲ್ಲಿ, ನ್ಯೂ ಯಾರ್ಕ್ ನಗರದಲ್ಲಿರುವ ಒಬ್ಬಾಕೆ ಸ್ತ್ರೀಯು, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಪತ್ರ ಬರೆದಳು. ಆಕೆ ವಿವರಿಸಿದ್ದು:
“ನಾನು ಈಸ್ಟ್ನ 124ನೆಯ ರಸ್ತೆಯಲ್ಲಿ, ಒಂದನೆಯ ಹಾಗೂ ಎರಡನೆಯ ಬೀದಿಗಳ ನಡುವೆ ನಡೆಯುತ್ತಿದ್ದೆ. ನಾನು ಕೆಳಗೆ ನೋಡಿದಾಗ, ಗಾಳಿಯು ಕೆಲವು ಕಿರುಹೊತ್ತಗೆಗಳನ್ನು ಬೀಸುತ್ತಿತ್ತು. ನಾನು ಬಗ್ಗಿ ನಿಮ್ಮ ಕಿರುಹೊತ್ತಗೆಗಳಲ್ಲಿ ಮೂರನ್ನು ಎತ್ತಿಕೊಂಡೆ—ಮನಗುಂದಿದವರಿಗೆ ಸಾಂತ್ವನ, ಕುಟುಂಬ ಜೀವನವನ್ನು ಆನಂದಿಸಿರಿ, ಮತ್ತು ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? ನಾನು ಅವುಗಳನ್ನು ಪೂರ್ತಿಯಾಗಿ ಓದಿದೆ ಮತ್ತು ಬಹಳ ಆನಂದಿಸಿದೆ.
“ನೀವು ದಯಾಪರರಾಗಿ, ಉಚಿತ ಮನೆ ಬೈಬಲ್ ಅಧ್ಯಯನ ಕ್ರಮದ ಕುರಿತು ಒಂದಿಷ್ಟು ಮಾಹಿತಿಯನ್ನು ನನಗೆ ಕಳುಹಿಸುವುದಾದರೆ, ಅದನ್ನು ನಾನು ಗಣ್ಯಮಾಡುವೆನು. ಅಲ್ಲದೆ ಸಾಧ್ಯವಿದ್ದಲ್ಲಿ, ನಿಮ್ಮ ಸಾಹಿತ್ಯದಲ್ಲಿ ಕೆಲವನ್ನು ಪಡೆಯಲು ನಾನು ಬಯಸುವೆನು. ನನ್ನ ವಿಷಯದಲ್ಲಾದರೊ, ನಾನು ಕಂಡುಕೊಳ್ಳುವಂತೆ ದೇವರು ನನ್ನ ಮಾರ್ಗದಲ್ಲಿ ಮೂರು ಕಿರುಹೊತ್ತಗೆಗಳನ್ನು ಹಾಕಿದ್ದು ಒಂದು ಆಶೀರ್ವಾದವಾಗಿತ್ತು. ದೇವರು ನಿಜವಾಗಿಯೂ ಗೂಢವಾದ ವಿಧಗಳಲ್ಲಿ ಕೆಲಸಮಾಡುತ್ತಾನೆ.”
ಗಮನವನ್ನು ಕೆರಳಿಸುವ ಈ ಕಿರುಹೊತ್ತಗೆಗಳನ್ನು ಓದಲು ಅಥವಾ ಉಚಿತವಾದೊಂದು ಮನೆ ಬೈಬಲ್ ಅಧ್ಯಯನವನ್ನು ಪಡೆಯಲು ನೀವು ಬಯಸುವುದಾದರೆ, ದಯವಿಟ್ಟು Watch Tower, H-58, Old Khandala Road, Lonavla 410 401, Mah., India, ಇವರಿಗೆ ಅಥವಾ ಪುಟ 5ರಲ್ಲಿ ಪಟ್ಟಿಮಾಡಲಾದ ತಕ್ಕದಾದ ವಿಳಾಸಕ್ಕೆ ಬರೆಯಿರಿ.