ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 3/8 ಪು. 29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಂತೋಷದ ಗುಟ್ಟೊ?
  • ವಾಹನ ಸಂಚಾರ ಸಂಬಂಧಿತ ಮರಣಗಳು
  • ಆನೆಗಳಿಗೆ ಸಿಂಗರಿಗ
  • ಉದ್ಭವಿಸಲಿದೆ: ಅರಣ್ಯಗಳಿಲ್ಲದ ಪ್ರಥಮ ಏಷಿಯನ್‌ ದೇಶ
  • “ತಾಳ್ಮೆಯಿಂದ ಕಾಯುವ ಕೊಲೆಗಾರರು”
  • ಹೃದಯಾಘಾತದ ಬಲಿಗಳಿಗೆ ನಿರೀಕ್ಷೆ
  • ಮೃತ ಸಮುದ್ರದ ಸುರುಳಿಗಳು ನಿಜಾಂಶವೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಆನೆಗಳು ಮಿತ್ರರೋ, ಶತ್ರುಗಳೊ?
    ಎಚ್ಚರ!—1994
  • ಶಾಂತಭಾವದ ಮಂದಚರ್ಮಿಯನ್ನು ಉಳಿಸುವುದು
    ಎಚ್ಚರ!—1993
  • ಗುಡ್‌-ಬೈ ಹೇಳುವ ಸಮಯವೋ?
    ಎಚ್ಚರ!—1990
ಇನ್ನಷ್ಟು
ಎಚ್ಚರ!—1996
g96 3/8 ಪು. 29

ಜಗತ್ತನ್ನು ಗಮನಿಸುವುದು

ಸಂತೋಷದ ಗುಟ್ಟೊ?

ಲಂಡನ್‌ನ ದ ಡೇಲಿ ಟೆಲಿಗ್ರಾಫ್‌ನಲ್ಲಿ ವರದಿಸಲಾದ ಒಂದು ಸಮೀಕ್ಷೆಗನುಸಾರ, ಬ್ರಿಟಿಷರು ತಾವು 25 ವರ್ಷಗಳ ಹಿಂದೆ ಇದ್ದುದಕ್ಕಿಂತ ಹೆಚ್ಚು ಆರೋಗ್ಯವಂತರೂ ಶ್ರೀಮಂತರೂ ಆಗಿರುವುದಾದರೂ, ಅವರು ಸಾಮಾನ್ಯವಾಗಿ ಕಡಿಮೆ ಸಂತುಷ್ಟರಾಗಿದ್ದಾರೆ. ಒಬ್ಬ ಅಮೆರಿಕನ್‌ ಸಮಾಜ ಶಾಸ್ತ್ರಜ್ಞ, ಕೇಂದ್ರೀಯ ಸಂಖ್ಯಾ ಸಂಗ್ರಹಣ ಆಫೀಸಿನಿಂದ ಬಂದ, ಸಾಮಾಜಿಕ ಒಲವುಗಳ ವರದಿಯ ಈ ಕಂಡುಹಿಡಿತಗಳೊಂದಿಗೆ ಸಮ್ಮತಿ ಸೂಚಿಸುತ್ತಾ ದೃಢೀಕರಿಸುವುದೇನೆಂದರೆ, ನಿಜವಾದ ಸಂತೋಷವು “ಸಾರ್ಥಕವಾದ ಲಕ್ಷ್ಯಗಳ ಬೆನ್ನಟ್ಟುವಿಕೆ”ಯನ್ನು ಸೇರಿಸಿ “ಜೀವನದಲ್ಲಿ ಅರ್ಥವನ್ನು” ಪಡೆದಿರುವುದರಿಂದ ಬರುತ್ತದೆ. ಬಹುಮಟ್ಟಿಗೆ 400 ಜನರ ಇಂಟರ್‌ವ್ಯೂ ಮಾಡಿದ ಮೇಲೆ, ನ್ಯೂ ಸೀಲೆಂಡ್‌ನ ಇಬ್ಬರು ಸಂಶೋಧಕರು ತದ್ರೀತಿಯ ಒಂದು ತೀರ್ಮಾನಕ್ಕೆ ಬಂದರು—ಹೆಚ್ಚಿನ ಜನರು ಸಂತೋಷವನ್ನು “ತಮ್ಮ ಅಸ್ತಿತ್ವದಲ್ಲಿನ ಕ್ರಮ ಮತ್ತು ಉದ್ದೇಶದ ಅಂಗೀಕಾರ”ಕ್ಕೆ ಅಧ್ಯಾರೋಪಿಸುತ್ತಾರೆ. ವಿವಾಹಿತ ಜನರು ಮತ್ತು ಬಲವಾದ ಧಾರ್ಮಿಕ ಗಾಢನಂಬಿಕೆಗಳಿರುವವರು ಸಂತೃಪ್ತಿಯನ್ನು ಅನುಭವಿಸುವುದು ಹೆಚ್ಚು ಸಂಭವನೀಯ. ಬ್ರಿಟನ್‌ನಲ್ಲಿನ ವಿವಾಹ ಮತ್ತು ಧಾರ್ಮಿಕ ನಂಬಿಕೆಯ ಅವನತಿಯನ್ನು ಪರಿಗಣಿಸುತ್ತಾ, ವಾರ್ತಾಪತ್ರಿಕೆಯು ತೀರ್ಮಾನಿಸುವುದೇನೆಂದರೆ, “ಒಂದು ರಾಷ್ಟ್ರದೋಪಾದಿ, ನಾವು ಹೆಚ್ಚು ಅಸಂತುಷ್ಟರಾಗಿ ವಿಕಾಸಹೊಂದುತ್ತ ಮುಂದುವರಿಯುವೆವು.”

ವಾಹನ ಸಂಚಾರ ಸಂಬಂಧಿತ ಮರಣಗಳು

ಆರ್ಜೆಂಟಿನದ ವಾರ್ತಾಪತ್ರಿಕೆಯಾದ ಕ್ಲಾರೀನ್‌ಗನುಸಾರ, ಪ್ರತಿ 1,00,000 ನಿವಾಸಿಗಳಿಗೆ 26 ಮರಣಗಳಿಂದಾಗಿ, ಆರ್ಜೆಂಟಿನ ಈಗ ಲೋಕದಲ್ಲಿ, ದೈನಿಕ ವಾಹನ ಸಂಚಾರ ಸಂಬಂಧಿತ ಸಾವುಗಳ ಸಂಖ್ಯೆಯಲ್ಲಿ ಅಗ್ರಗಣ್ಯವಾಗಿದೆ. 1993ರಲ್ಲಿ ಅಂತಹ 8,116 ಮರಣಗಳು ಆ ದೇಶದಲ್ಲಿ ಸಂಭವಿಸಿದವು. ಆ ಸಂಖ್ಯೆಯು 1994ರಲ್ಲಿ 9,120ಕ್ಕೆ ಏರಿತು. ಆದರೆ 1995ರ ಪ್ರಥಮ ಆರು ತಿಂಗಳುಗಳ ಸಮಯದಲ್ಲಿ, ಈಗಾಗಲೇ 5,000ಕ್ಕಿಂತಲೂ ಹೆಚ್ಚಿನ ವಾಹನ ಸಂಚಾರ ಸಂಬಂಧಿತ ಮರಣಗಳು ಸಂಭವಿಸಿದ್ದವು. 1994ರಲ್ಲಿ, ಬಲಿಗಳಲ್ಲಿ ಸುಮಾರು 25 ಪ್ರತಿಶತ ಜನರು ಪಾದಚಾರಿಗಳಾಗಿದ್ದರು. ಕೇವಲ ಬ್ವೇನಸ್‌ ಆ್ಯರೀಸ್‌ ಪ್ರಾಂತದಲ್ಲಿ, ವಾಹನ ಸಂಚಾರ ಸಂಬಂಧಿತ ಮರಣಗಳು 79 ಪ್ರತಿಶತದಷ್ಟು ಹೆಚ್ಚಿದವು. ಅಪಘಾತಗಳ ಒಂದು ದೊಡ್ಡ ಪ್ರತಿಶತವು, ಇತರ ವಾಹನಗಳನ್ನು ದಾಟಿಹೋಗುವಾಗ ಸಮಯ, ವೇಗ, ಮತ್ತು ಅಂತರವನ್ನು ನಿರ್ಧರಿಸಲು ಚಾಲಕರು ತಪ್ಪಿಹೋದದ್ದರಿಂದಲೇ ಸಂಭವಿಸಿದವು.

ಆನೆಗಳಿಗೆ ಸಿಂಗರಿಗ

ದಕ್ಷಿಣ ಭಾರತ ರಾಜ್ಯವಾದ ಕೇರಳದಲ್ಲಿನ ಆನೆಗಳು ಭಾರವಾದ ಹೊರೆಗಳನ್ನು, ಅನೇಕ ವೇಳೆ ತಮ್ಮ ಉದ್ದವಾದ ದಂತಗಳ ಮೇಲೆ ಹೊರುತ್ತವೆ. ಆದರೆ ಹೆಚ್ಚಿನ ಆನೆಗಳನ್ನು ದೇವಾಲಯದ ಮೆರೆವಣಿಗೆಗಳಲ್ಲಿ ಮತ್ತು ಧಾರ್ಮಿಕ ಹಬ್ಬಗಳಲ್ಲಿ ಸಹ ಉಪಯೋಗಿಸಲಾಗುತ್ತವೆ. ಈ ಸಂದರ್ಭಗಳ ಮುಂಚೆ, ಒಬ್ಬ ವೃತ್ತಿಪರ ಸಿಂಗರಿಗನು ಅವುಗಳಿಗೆ, ಮುಖ ತಿದ್ದುವಿಕೆಯನ್ನಲ್ಲ, ಬದಲಿಗೆ ದಂತ ಸಮರಿಕೆಯನ್ನು ಮಾಡುತ್ತಾನೆ. ಕೇರಳದಲ್ಲಿ ಈ ಕಷ್ಟಕರ ಕೆಲಸವನ್ನು ಮಾಡುತ್ತಿರುವ ಏಕೈಕ ವ್ಯಕ್ತಿ, ಪಿ. ಕೆ. ಸಸಿಧರನ್‌, ತನ್ನ ಕೌಶಲಗಳನ್ನು ತನ್ನ ಅಜ್ಜನಿಂದ ಪಡೆದುಕೊಂಡನು. ಎಷ್ಟು ಸಮರಿಕೆಯನ್ನು ಮಾಡಬೇಕೆಂದು ಅವನು ಹೇಗೆ ನಿರ್ಧರಿಸುತ್ತಾನೆ? ಆನೆಯ ಎತ್ತರ, ಗಾತ್ರ, ಮತ್ತು ದೇಹದ ಆಕಾರದ ಮೇಲೆ ಆಧರಿಸಿದ ವಿಶಿಷ್ಟ ವಿವರಣೆಗಳು, ಸುರಕ್ಷಿತವಾದ ಕುಟುಂಬ ಗುಟ್ಟಾಗಿದೆ. ಪ್ರಾಣಿಯು ಸಹಕರಿಸಿದರೆ, ಚಿಕಿತ್ಸೆಯು ಸುಮಾರು ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ವಿಷಮ ಸ್ವಭಾವದ ಆನೆಯೊಂದು ಅಪಾಯವನ್ನು ಒಡ್ಡುತ್ತದೆ ಮತ್ತು ದೀರ್ಘ ಸಮಯವನ್ನು ತೆಗೆದುಕೊಳ್ಳಸಾಧ್ಯವಿದೆ. ಪ್ರಸಾಧನ ಕಾರಣಗಳನ್ನು ಹೊರತು ಪಡಿಸಿ, ಹೊರೆಗಳನ್ನು ಹೊರಲಿಕ್ಕೆ ಅನುಕೂಲಕರವಾದ ಉದ್ದವನ್ನು ಇಡಲು, ಕೆಲಸಮಾಡುವ ಆನೆಗಳ ದಂತಗಳಿಗೆ ಎರಡು ವರ್ಷಗಳಿಗೊಮ್ಮೆ ಸಮರಿಕೆಯ ಅಗತ್ಯವಿದೆ.

ಉದ್ಭವಿಸಲಿದೆ: ಅರಣ್ಯಗಳಿಲ್ಲದ ಪ್ರಥಮ ಏಷಿಯನ್‌ ದೇಶ

ಫಿಲಿಪ್ಪೀನ್ಸ್‌ ದೇಶವು ಸಂಪೂರ್ಣ ಅರಣ್ಯನಾಶವನ್ನು ಎದುರಿಸುತ್ತದೆ, ಎಂದು ವಿಶ್ವ ಸಂಸ್ಥೆಯ ವಿಕಾಸ ಕಾರ್ಯಕ್ರಮವು (ಯುಎನ್‌ಡಿಪಿ) ಎಚ್ಚರಿಸುತ್ತದೆ. “ಜನಸಂಖ್ಯಾ ಒತ್ತಡಗಳು ಮತ್ತು ಭೂಮಿಗೆ ತಡೆದುಕೊಳ್ಳಲಾಗದ ಮರ ಕಡಿಯುವ ರೂಢಿಗಳು” ಫಿಲಿಪ್ಪೀನ್ಸ್‌ನಲ್ಲಿನ ಹೆಚ್ಚು ಹೆಚ್ಚು ಮರ ಆವರಿತ ನೆಲವನ್ನು ನಾಶಮಾಡುತ್ತಿವೆ. ಎರಡನೆಯ ಜಾಗತಿಕ ಯುದ್ಧದ ಮೊದಲು, ದೇಶದ 60ರಿಂದ 70 ಪ್ರತಿಶತ ಭಾಗವು ಅರಣ್ಯಗಳಿಂದ ಆವರಿತವಾಗಿತ್ತು. ಇಂದು ಕೇವಲ 15 ಪ್ರತಿಶತ ಮಾತ್ರ ಅರಣ್ಯಗಳಿಂದ ಆವರಿತವಾಗಿದೆ. “ಇಸವಿ 2000ದೊಳಗೆ, ಫಿಲಿಪ್ಪೀನ್ಸ್‌ ತನ್ನ ಎಲ್ಲ ಅರಣ್ಯ ಪ್ರದೇಶವನ್ನು ಮತ್ತು ಮರ ಹೊದಿಕೆಯನ್ನು ಕಳೆದುಕೊಳ್ಳುವ ಪ್ರಥಮ ಏಷಿಯನ್‌ ದೇಶವಾಗಬಹುದು,” ಎಂದು ಯುಎನ್‌ಡಿಪಿಯ ಸುದ್ದಿಪತ್ರವಾದ ಅಪ್‌ಡೇಟ್‌ ವರದಿಸುತ್ತದೆ.

“ತಾಳ್ಮೆಯಿಂದ ಕಾಯುವ ಕೊಲೆಗಾರರು”

ವಿಶ್ವ ಸಂಸ್ಥೆಯು, 64 ದೇಶಗಳಲ್ಲಿರುವ ಅಂದಾಜುಮಾಡಲಾದ 11 ಕೋಟಿ ಭೂಸಿಡಿಮದ್ದುಗಳ ತೆಗೆದುಹಾಕುವಿಕೆಯನ್ನು ಆರಂಭಿಸಲು 7 ಕೋಟಿ 50 ಲಕ್ಷ ಡಾಲರುಗಳನ್ನು ಸಂಗ್ರಹಿಸಲು ಪ್ರಯತ್ನಸುತ್ತಿದೆ, ಎಂಬುದಾಗಿ ಇಂಟರ್‌ನ್ಯಾಷನಲ್‌ ಹೆರಲ್ಡ್‌ ಟ್ರಿಬ್ಯೂನ್‌ ವರದಿಸುತ್ತದೆ. ಸಿಗರೇಟುಗಳ ಒಂದು ಪೊಟ್ಟಣಕ್ಕಿಂತ ದೊಡ್ಡದಾಗಿರದ ಒಂದು ಜನನಾಶಕ (ಎಪಿ) ಸಿಡಿಮದ್ದನ್ನು ಉತ್ಪಾದಿಸಲು ಸುಮಾರು 3 ಡಾಲರುಗಳ ವೆಚ್ಚ ಮಾತ್ರ ತಗಲುತ್ತದೆ. ಆದರೆ ನೆಲದಿಂದ ಅಂತಹ ಒಂದು ಸಿಡಿಮದ್ದನ್ನು ಗುರುತಿಸಿ ತೆಗೆಯಲು 300 ಡಾಲರುಗಳಿಂದ 1,000 ಡಾಲರುಗಳ ವರೆಗಿನ ವೆಚ್ಚ ತಗಲುತ್ತದೆ. ಸಿಡಿಮದ್ದುಗಳ ತೆಗೆದುಹಾಕುವಿಕೆ ಮತ್ತೊಂದು ಸಮಸ್ಯೆಯಿಂದ ನಿರ್ಬಂಧಿಸಲ್ಪಟ್ಟಿದೆ. ವಿಶ್ವ ಸಂಸ್ಥೆಯ ಒಬ್ಬ ಪ್ರತಿನಿಧಿಯು ಹೇಳಿದ್ದು: “ಪ್ರತಿ ವರ್ಷ, ಈಗಾಗಲೇ ಅಲ್ಲಿರುವ ಹತ್ತು ಕೋಟಿಗಿಂತಲೂ ಹೆಚ್ಚಿನ ಸಿಡಿಮದ್ದುಗಳ ಜತೆಗೆ 20 ಲಕ್ಷ ಹೊಸ ಎಪಿ ಸಿಡಿಮದ್ದುಗಳನ್ನು ಇರಿಸಲಾಗುತ್ತದೆ.” ಯಾವುದನ್ನು ಒಬ್ಬ ಕಂಬೋಡಿಯನ್‌ ಜನರಲ್‌ “ಕೊಲ್ಲಲು ಅಥವಾ ಗಾಯಗೊಳಿಸಲು ಎಂದೂ ಸೋಲದ, ತಾಳ್ಮೆಯಿಂದ ಕಾಯುವ ಕೊಲೆಗಾರರು” ಎಂಬುದಾಗಿ ವರ್ಣಿಸಿದನೊ, ಅದನ್ನು ಲೋಕದಿಂದ ಹೊರಹಾಕಲು ದಶಕಗಳು ಹಿಡಿಯುವವು ಎಂಬುದಾಗಿ ಪರಿಣತರು ಒಪ್ಪುತ್ತಾರೆ.

ಹೃದಯಾಘಾತದ ಬಲಿಗಳಿಗೆ ನಿರೀಕ್ಷೆ

“ವಿಸ್ತೃತವಾದ ಹೃದಯ ಹಾನಿಯ ನಂತರ, ಹೃದಯಾಘಾತದ ಕಡೆಗಿನ ಸಾಗಣೆಯು ಅನಿವಾರ್ಯವೆಂದು ಹಿಂದೆ ನೆನೆಸಲಾಗಿತ್ತು, ಆದರೆ ವ್ಯಾಯಾಮದ ಮೂಲಕ ನಷ್ಟದ ವಿಪರ್ಯಸ್ತಗೊಳಿಸುವಿಕೆಯನ್ನು ಮಾಡಸಾಧ್ಯವಿದೆ,” ಎಂದು ಟೊರಾಂಟೊ ಆಸ್ಪತ್ರೆಯಲ್ಲಿ ಹೃದಯ ವಿಜ್ಞಾನ ಸಂಶೋಧನೆಯ ಡೈರೆಕ್ಟರ್‌, ಡಾ. ಪೀಟರ್‌ ಲಿಯೂ ವಾದಿಸುತ್ತಾರೆ. ಇಲಿಗಳ ಮೇಲೆ ಮಾಡಲಾದ ಆಶಾಜನಕ ಅಧ್ಯಯನವನ್ನು ಅನುಸರಿಸಿ, ಆಸ್ಪತ್ರೆಯ ಕಾರ್ಡಿಯಕ್‌ ಫಂಕ್ಷನ್‌ ಕ್ಲಿನಿಕ್‌ ಹೃದ್ರೋಗಿಗಳನ್ನು, “ಪ್ರತಿ ದಿನ ಕ್ರಮೇಣ ಹೆಚ್ಚಾಗುವ ಅಂತರಗಳನ್ನು ನಡೆಯುವಂತೆ” ಮಾಡಿತೆಂದು ದ ಗ್ಲೋಬ್‌ ಆ್ಯಂಡ್‌ ಮೇಲ್‌ ವರದಿಸುತ್ತದೆ. “ಆರಂಭಿಕ ಫಲಿತಾಂಶಗಳು ತೋರಿಸುವುದೇನೆಂದರೆ, ದಿನವೂ ಕಡಿಮೆ ಪಕ್ಷ ಒಂದು ಕಿಲೊಮೀಟರ್‌ನಷ್ಟು ದೂರ ನಡೆಯುವುದು ಮನುಷ್ಯರಲ್ಲಿಯೂ ಹೃದಯಾಘಾತದ ಕಡೆಗಿನ ‘ಅವನತಿಯ ಮಾರ್ಗ’ವನ್ನು ವಿಪರ್ಯಸ್ತಗೊಳಿಸಬಲ್ಲದು.” ಹಾಗಿದ್ದರೂ, ನಡಿಗೆಯ ಗತಿಯು ಸಂಬಂಧಸೂಚಕವಾಗಿ ಹುರುಪುಳ್ಳದ್ದಾಗಿರಬೇಕು ಮತ್ತು ನಡಿಗೆಯು ಮೇಲ್ವಿಚಾರಣೆಯ ಕೆಳಗೆ ಮಾಡಲ್ಪಡಬೇಕು ಎಂದು ಡಾ. ಲಿಯೂ ಹೇಳಿದರು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ