ಜಗತ್ತನ್ನು ಗಮನಿಸುವುದು
ಮಕ್ಕಳು ಅಮಲೌಷಧದ ವಶವಾಗುವ ಕಾರಣ
“ನಮ್ಮ ಮಕ್ಕಳು ಅಮಲೌಷಧಗಳು ಮತ್ತು ಮದ್ಯಪಾನದಲ್ಲಿ ಸಿಕ್ಕಿಬೀಳದಂತೆ ನಾವು ಹೇಗೆ ಕಾಪಾಡಬಲ್ಲೆವು, ಮತ್ತು ‘ಕೇವಲ ಬೇಡವೆಂದು ಹೇಳುವುದು’ ಕೆಲವು ಮಕ್ಕಳಿಗೆ ಇತರರಿಗಿಂತ ಹೆಚ್ಚು ಸುಲಭವಾಗಿರುವುದು ಏಕೆ?” ಆ ಪ್ರಶ್ನೆಗಳು ಇತ್ತೀಚೆಗೆ ಪೇರೆಂಟ್ಸ್ ಪತ್ರಿಕೆಯಲ್ಲಿ ಎಬ್ಬಿಸಲ್ಪಟ್ಟವು. ಅದು ಕೆಲವು ಶಕ್ಯವಾಗಿರುವ ಉತ್ತರಗಳನ್ನು ಅಮೆರಿಕದ ಅರಿಸೋನ ವಿಶ್ವವಿದ್ಯಾಲಯದ ಸಂಶೋಧಕರಿಂದ ಮಾಡಲ್ಪಟ್ಟ ಒಂದು ಅಧ್ಯಯನದಲ್ಲಿ ಕಂಡುಕೊಂಡಿತು. ಆ ಅಧ್ಯಯನವು ಆರು ಮತ್ತು ಏಳನೆಯ ತರಗತಿಯ ಸುಮಾರು 1,200 ಮಕ್ಕಳನ್ನು ಪರೀಕ್ಷಿಸಿ, ಮಕ್ಕಳನ್ನು ಅಮಲೌಷಧ ಮತ್ತು ಮದ್ಯ ದುರುಪಯೋಗದ ಕಡೆಗೆ ಪ್ರಭಾವಿಸುತ್ತವೆಂದು ಸಂದೇಹಿಸಲಾಗಿದ್ದ ಹತ್ತು ವಿಭಿನ್ನ ಅಪಾಯಾಂಶಗಳ ಮೇಲೆ ಕೇಂದ್ರೀಕರಿಸಿತು. ಎರಡು ಪ್ರಧಾನ ಮುನ್ಸೂಚಕಗಳು, “ಸಮಾನಸ್ಥರ ಒತ್ತಡಕ್ಕೆ ಈಡಾಗುವ ಸ್ವಭಾವದವರಾಗಿರುವುದು, ಮತ್ತು ಮದ್ಯ ಅಥವಾ ಅಮಲೌಷಧಗಳನ್ನು ಉಪಯೋಗಿಸುವ ಸ್ನೇಹಿತರಿರುವುದು” ಆಗಿದ್ದವು. ಇನ್ನೊಂದು ಕಡೆಯಲ್ಲಿ, ಶೈಕ್ಷಣಿಕ ಸಾಧನೆಯು, ಅದು ಪ್ರಾಯಶಃ ಆತ್ಮಗೌರವವನ್ನು ಅಭಿವೃದ್ಧಿಗೊಳಿಸಿ ವಸ್ತು ದುರುಪಯೋಗಿಗಳೊಂದಿಗೆ ಮಿತ್ರತ್ವವನ್ನು ವಿರಳವಾಗಿ ಪ್ರವರ್ಧಿಸುವುದರಿಂದ, ತಡೆಯುವ ಪಾತ್ರವನ್ನು ವಹಿಸಬಲ್ಲದೆಂದು ಆ ಅಧ್ಯಯನವು ಕಂಡುಹಿಡಿಯಿತು.
ಭಯಂಕರತೆಯ ಮೋಹ
“ಹದಿವಯಸ್ಕರು ಭಯಂಕರತೆ (ಹಾರರ್)ಯ ಚಟದಲ್ಲಿ ಸಿಕ್ಕಿಕೊಂಡಿದ್ದಾರೆ,” ಎಂದು ವರದಿ ಮಾಡುತ್ತದೆ, ಕೆನಡದ ದ ಗ್ಲೋಬ್ ಆ್ಯಂಡ್ ಮೇಲ್. ತರುಣಾವಸ್ಥೆಯ ವೃತ್ತದಲ್ಲಿ ಬಲು ಜನಪ್ರಿಯವಾಗಿರುವ ಟ್ರೇಡಿಂಗ್ ಕಾರ್ಡುಗಳು, ಕಾಮಿಕ್ ಪುಸ್ತಕಗಳು, ಕಲಾವಸ್ತುಗಳು, ಚಲನ ಚಿತ್ರಗಳು ಮತ್ತು ಸಂಗೀತ ಕೂಡ ಇವೆ. ಓದುವ ಪುಸ್ತಕಗಳಲ್ಲಿ ಇಂತಹ ಅಸಹ್ಯ ಸಾದ್ವವನ್ನು ತೃಪ್ತಿಗೊಳಿಸಲು, ಒಬ್ಬ ಗ್ರಂಥ ಪ್ರಕಾಶಕನು ಹದಿವಯಸ್ಕರ ಭಯಂಕರತೆಯ ಪುಸ್ತಕಗಳ ಉತ್ಪಾದನೆಯನ್ನು ವರುಷಕ್ಕೆ ನಾಲ್ಕರಿಂದ ತಿಂಗಳಿಗೆ ಒಂದರಂತೆ ಹೆಚ್ಚಿಸಿದನು. ಇತರರು ತಿಂಗಳಿಗೆ ಎರಡು ಹಾರರ್ ಪುಸ್ತಕಗಳನ್ನು ಪ್ರಕಟಿಸಿದರು. ಭಯಂಕರತೆಯೊಂದಿಗೆ ಅಂತಹ ಮೋಹವೇಕೆ? ಗ್ರಂಥಕರ್ತ ಶಾನ್ ರಾಯನ್‌ಗನುಸಾರ, “ಐತಿಹಾಸಿಕ ದೃಷ್ಟಿಯಲ್ಲಿ, ಅಸ್ವಸ್ಥತೆ ಅಥವಾ ಅಸಂತೋಷವಿದ್ದಲ್ಲಿ ಭಯಂಕರತೆ ಯಾವಾಗಲೂ ಯಶಸ್ವಿಗೊಂಡಿದೆ.” ದ ಗ್ಲೋಬ್‌ಗನುಸಾರ, ಶ್ರೀ ರಾಯನ್ ಹೇಳಿದ್ದು: “ತೊಂಬತ್ತುಗಳಲ್ಲಿ, ನಾವು ಸರಕಾರದ ವಿಷಯದಲ್ಲಿ ಅತೃಪರ್ತು, ಅಸಂತುಷ್ಟರು ಮತ್ತು ಪಾತಕಗಳ ವಿಷಯದಲ್ಲಿ ಭಯಗ್ರಸ್ತರು ಎಂಬುದು ವ್ಯಕ್ತ. ಭಯಂಕರತೆಯು ಯಶಸ್ಸು ಕಾಣುವ ಸಮಯಗಳು ಇವಾಗಿವೆ.”
ಯೋಗ್ಯ ಕೈತೊಳೆತ
ನಿಮ್ಮ ಕೈಗಳನ್ನು ಕ್ರಮವಾಗಿ ತೊಳೆಯುವ ಆ ಸರಳ ಕ್ರಿಯೆಯು, “ನೆಗಡಿ, ಫ್ಲೂ, ಗಂಟಲು ನೋವು, ಹೊಟ್ಟೆಯ ದುಸ್ಥಿತಿ ಮತ್ತು ಹೆಚ್ಚು ಗುರುತರವಾದ ಕಾಯಿಲೆಗಳನ್ನು ಉಂಟುಮಾಡುವ ಕ್ರಿಮಿ ಮತ್ತು ವೈರಸ್‌ಗಳನ್ನು ತೊಲಗಿಸಲು ಸಹಾಯ ಮಾಡುತ್ತದೆ,” ಎಂದು ದ ಟೊರಾಂಟೊ ಸ್ಟಾರ್ ವರದಿಸುತ್ತದೆ. ಆ ಪತ್ರ ಕೂಡಿಸುವುದು: “ಮಾಂಟ್ರಿಯಲ್‌ನ ಸಾಂಕ್ರಾಮಿಕ ರೋಗ ತಜ್ಞರಾದ ಡಾ. ಕೂಲ್ಯೊ ಸೋಟೊ ಮಾಡಿದ ಒಂದು . . . ಅಧ್ಯಯನವು, ಸರಿಯಾದ ರೀತಿಯ ಕೈತೊಳೆಯುವಿಕೆಯು ವೈರಸ್ ಮತ್ತು ಬ್ಯಾಕ್ಟೀರಿಯ ಸಂಬಂಧಿತ ಸಾಂಕ್ರಾಮಿಕ ರೋಗಗಳನ್ನು ನಾಟಕೀಯವಾಗಿ—ಉಸಿರಾಟ ಸಂಬಂಧದ ಮೇಲ್ಭಾಗದ ರೋಗಗಳನ್ನು 54 ಪ್ರತಿಶತದಷ್ಟು ಮತ್ತು ಅತಿಭೇದಿ ರೋಗಗಳನ್ನು 72 ಪ್ರತಿಶತದಷ್ಟು—ಕಡಮೆ ಮಾಡಬಲ್ಲದೆಂದು ತೋರಿಸುತ್ತದೆ.” ಕೈಗಳ ಯೋಗ್ಯ ರೀತಿಯ ತೊಳೆಯುವಿಕೆಯಲ್ಲಿ, ಹರಿಯುವ ನೀರಿನಲ್ಲಿ ಕೈಗಳನ್ನು ಒದೆಮ್ದಾಡಿ, 30 ಎಣಿಸುವ ತನಕ ಸಾಬೂನಿನಿಂದ ಉಜ್ಜಿ, ಹರಿಯುತ್ತಿರುವ ನೀರಿನಲ್ಲಿ 5 ಎಣಿಸುವ ತನಕ ತೊಳೆದು, ಕೊನೆಗೆ, ಇತರರು ಉಪಯೋಗಿಸಿರದ ಶುದ್ಧ ಟವೆಲಿನಿಂದ ಅಥವಾ ಪೇಪರ್ ಟವೆಲಿನಿಂದ ಅಥವಾ ಕೈಯಿಂದ ಮುಟ್ಟದ ಬಿಸಿಗಾಳಿ ಯಂತ್ರದಿಂದ ಕೈಗಳನ್ನು ಒಣಗಿಸಬೇಕೆಂದು ಸೂಚಿಸುತ್ತದೆ. ಭೋಜನಾಲಯಗಳಲ್ಲಿ, ಹಾಟ್ ಡಾಗ್ ಅಂಗಡಿಗಳಲ್ಲಿ ಮತ್ತು ಶಾಪಿಂಗ್ ಕ್ಷೇತ್ರಗಳಲ್ಲಿರುವ ಆಹಾರ ವಲಯಗಳಲ್ಲಿ ಆಹಾರವನ್ನು ಮುಟ್ಟುವವರು ವಿಶೇಷವಾಗಿ ಕೈತೊಳೆಯುವಿಕೆಗೆ ಜಾಗ್ರತೆಯ ಗಮನವನ್ನು ಕೊಡಬೇಕು.
ದರಿದ್ರರ ಪಾಡು
ಡೆನ್ಮಾರ್ಕಿನ ಕೋಪನ್‌ಹೇಗನ್‌ನಲ್ಲಿ ನಡೆದ ಇತ್ತೀಚಿನ ಒಂದು ಯುಎನ್ ಸಂಮೇಳನವಾದ, ಸಾಮಾಜಿಕ ಅಭಿವೃದ್ಧಿಗಾಗಿರುವ ಲೋಕ ಶೃಂಗಸಭೆಗನುಸಾರ, ಲೋಕದಾದ್ಯಂತ ಇರುವ ಗ್ರಾಮೀಣ ದರಿದ್ರರು ಭಯಂಕರ ಪೇಚಾಟದಲ್ಲಿದ್ದಾರೆ. 100 ಕೋಟಿಗಿಂತಲೂ ಹೆಚ್ಚಿನ ಜನರು ತೀವ್ರ ದಾರಿದ್ರ್ಯದಲ್ಲಿ ಜೀವಿಸುತ್ತಾರೆ ಮತ್ತು ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಪ್ರತಿ ದಿನ ಹಸಿವೆಯಿಂದಿರುತ್ತಾರೆ ಎಂದು ಶೃಂಗಸಭೆಯಲ್ಲಿ ವರದಿಸಲಾಗಿತ್ತು. ಸಮಸ್ಯೆಯನ್ನು ಅಧಿಕಗೊಳಿಸುವಂತಹದ್ದು ನಿರುದ್ಯೋಗವಾಗಿದೆ. ಉದ್ಯೋಗರಹಿತರಾಗಿರುವ ಅಥವಾ ಅಸಮರ್ಪಕ ಉದ್ಯೋಗವಿರುವ ಜನರ ಒಟ್ಟು ಸಂಖ್ಯೆಯ ಮೇಲಿನ ಅಂದಾಜುಗಳು, 80 ಕೋಟಿಗಳಷ್ಟು ಉನ್ನತಕ್ಕೆ ವ್ಯಾಪಿಸುತ್ತವೆ. ಒಟ್ಟಿನಲ್ಲಿ, ಲೋಕದ ಉದ್ಯೋಗಶೀಲ ಜೀತಗಾರರ ವರ್ಗದ ಸುಮಾರು 30 ಪ್ರತಿಶತವು, ಉತ್ಪನ್ನದಾಯಕವಾಗಿ ಕಾರ್ಯೋನ್ಮುಖವಾಗಿಲ್ಲ. 110 ಕೋಟಿಯಿಂದ 113 ಕೋಟಿ ಜನರು ದಿನವೊಂದಕ್ಕೆ ಒಂದು (ಯು.ಎಸ್.) ಡಾಲರ್‌ಗಿಂತಲೂ ಕಡಿಮೆ ಆದಾಯದಲ್ಲಿ ಜೀವಿಸುತ್ತಾರೆ. ಖಂಡಿತವಾಗಿಯೂ ಸಮಸ್ಯೆಯನ್ನು ಹೆಚ್ಚಿಸುವ ಅನಕ್ಷರತೆಯು, ಈಗ ಸುಮಾರು 90.5 ಕೋಟಿ ಜನರಿಗೆ ಕ್ಲೇಶವನ್ನುಂಟುಮಾಡುತ್ತದೆ. ಅವರ ಸಂಖ್ಯೆಗಳು ತ್ವರಿತವಾಗಿ ಕ್ಷೀಣಿಸುತ್ತಿಲ್ಲ; ಯೋಗ್ಯತೆಯುಳ್ಳವರಾಗಿರುವುದಾದರೂ 13 ಕೋಟಿ ಮಕ್ಕಳು ಶಾಲೆಗೆ ಹೋಗುವುದಿಲ್ಲ, ಮತ್ತು 2000 ವರ್ಷದಷ್ಟಕ್ಕೆ ಅವರ ಸಂಖ್ಯೆಗಳು 14.4 ಕೋಟಿಗೆ ಏರುತ್ತವೆಂದು ನೀರೀಕ್ಷಿಸಲ್ಪಡುತ್ತದೆ.
ಭಾವೀ ಜೀವನವೊ ಮನೋವಿಕಲ್ಪವೊ?
ಮಾಧ್ಯಮಗಳು ಅನೇಕಸಲ “ಮರಣ ಸಮೀಪ ಅನುಭವಗಳ” ವೃತ್ತಾಂತಗಳನ್ನು ಪ್ರಕಟಿಸುತ್ತವೆ. ಅವುಗಳಲ್ಲಿ ಮರಣಕ್ಕೆ ಸಮೀಪವಾಗಿದ್ದ ರೋಗಿಗಳು ಆ ಬಳಿಕ ಭಾವೀ ಜೀವನದ ಕಣ್ಷಿಕ ನೋಟವನ್ನು ನೋಡಿದ್ದಾಗಿ ವಾದಿಸುತ್ತಾರೆ. ಜರ್ಮನ್ ನರರೋಗ ಶಾಸ್ತ್ರಜ್ಞರ ಒಂದು ತಂಡದ ಪ್ರಯೋಗಗಳು, ಅಂತಹ ಅನುಭವಗಳು ಯಾವುದು ಮನೋವಿಕಲ್ಪಗಳನ್ನು ಉಂಟುಮಾಡುತ್ತದೋ, ಆ ಆಮ್ಲಜನಕ ನಷ್ಟದಿಂದ ಉಂಟಾಗುತ್ತವೆಂದು ಇತ್ತೀಚೆಗೆ ಸೂಚಿಸಿದವು. ಡಚ್ ವಾರ್ತಾಪತ್ರವಾದ ಡ ಕೋಯೀ ಎನ್ ಏಮ್‌ಲಾಂಡೀರ್‌ಗನುಸಾರ, ಆ ತಂಡವು ಅತಿಶಯ ವಾಯು ಸಂಚಾರದ ಮೂಲಕ ಅಧಿಕತಮ 22 ಸೆಕೆಂಡುಗಳ ವರೆಗೆ ಪ್ರಜ್ಞಾಹೀನರಾಗಿದ್ದ 42 ಆರೋಗ್ಯವಂತ ಯುವಜನರನ್ನು ಅಧ್ಯಯನಿಸಿತು. ಆ ಬಳಿಕ, ಆ ಯುವಜನರು, “ಮರಣ ಸಮೀಪ ಅನುಭವಗಳಿ”ಗೆ ಗಮನಾರ್ಹವಾಗಿ ಹೋಲುವ ಸಂವೇದನೆಗಳನ್ನು ಮತ್ತು ದರ್ಶನಗಳನ್ನು ವರ್ಣಿಸಿದರು. ತಾವು ಸ್ಪಷ್ಟ ವರ್ಣಗಳನ್ನು ಮತ್ತು ಬೆಳಕುಗಳನ್ನು ಕಂಡದ್ದನ್ನು, ತಮ್ಮನ್ನು ಪಕ್ಷಿನೋಟದಿಂದ ನೋಡಿಕೊಂಡದ್ದನ್ನು, ತಮ್ಮ ಪ್ರಿಯರು ಸುಖಕರವಾದ ಹಿನ್ನೆಲೆಯಲ್ಲಿ ಇದುದ್ದೇ ಮುಂತಾದುವನ್ನು ನೋಡಿದ್ದಾಗಿ ಕೆಲವರು ವರದಿಸಿದರು. ಅನೇಕ ಯುವಜನರು ತಮ್ಮ ಸಂವೇದನೆಗಳನ್ನು ಸುಖಕರವೂ ಶಾಂತಿಭರಿತವೂ ಆಗಿದ್ದವೆಂದು ವರ್ಣಿಸಿದರು. ಎಷ್ಟೆಂದರೆ ಅವರಿಗೆ ಪ್ರಜ್ಞಾವಸ್ಥೆಗೆ ಹಿಂದಿರುಗಲು ಮನಸ್ಸಿರಲಿಲ್ಲ.
ಭೂಮಿಯಲ್ಲಿ ಅರ್ಧಾಂಶ ಮುಟ್ಟಲ್ಪಟ್ಟಿರುವುದಿಲ್ಲ
“ಮಾನವ ಕುಲದ ಅತ್ಯುತ್ತಮ ಪ್ರಯತ್ನಗಳ ಹೊರತೂ, ಭೂಗ್ರಹದ ಅರ್ಧಾಂಶಕ್ಕಿಂತಲೂ ಹೆಚ್ಚು ನೆಲಪ್ರದೇಶವು ಇನ್ನೂ ನಿರ್ಜನ ಪ್ರದೇಶವಾಗಿಯೇ ಇದೆ,” ಎಂದು ನ್ಯೂ ಸೈಎಂಟಿಸ್ಟ್ ಪತ್ರಿಕೆ ವರದಿ ಮಾಡುತ್ತದೆ. ಒಂದು ಹೊಸ ಅಧ್ಯಯನವು, “ನೆಲ ಪ್ರದೇಶದ ಒಂಬತ್ತು ಕೋಟಿ ಚದರ ಕಿಲೊಮೀಟರ್‌ಗಳು, ಒಟ್ಟು ನೆಲ ಪ್ರದೇಶದ ಸುಮಾರು 52 ಪ್ರತಿಶತ, ಇನ್ನೂ ಮುಟ್ಟಲ್ಪಡದೆ ಇದೆ ಎಂದು ಕಂಡುಹಿಡಿಯಿತು.” ಇದು, ಗ್ರಹದ ಮೂರನೆಯ ಒಂದು ಭಾಗ ಮಾತ್ರ ನಿರ್ಜನವೆಂದು ತಿಳಿಸಿದ 1989ರ ಒಂದು ಸಮೀಕ್ಷೆಗಿಂತ ಇಷ್ಟು ಹೆಚ್ಚಾಗಿರುವುದು ಏಕೆ? ಏಕೆಂದರೆ ಕನ್ಸರ್ವೇಶನ್ ಇಂಟರ್ನ್ಯಾಷನಲ್‌ನ ಲೀ ಹಾನಾ ಎಂಬವರು ಮಾಡಿದ ಈ ಇತ್ತೀಚಿನ ಅಧ್ಯಯನವು, ಹಿಂದೆ ಉಪಯೋಗಿಸಿದ್ದ ಕನಿಷ್ಠತಮ 4,000 ಚದರ ಕಿಲೊಮೀಟರುಗಳ ಬದಲು 1,000 ಚದರ ಕಿಲೊಮೀಟರುಗಳಷ್ಟೂ ಚಿಕ್ಕ ಪ್ರದೇಶಗಳನ್ನು ಕೂಡಿತ್ತು. “ಇನ್ನೂ ಹೆಚ್ಚು ಗಾಢವಾದ ಒಂದು ಅಧ್ಯಯನವು, ಗ್ರಹದ ಇನ್ನೂ ಹೆಚ್ಚು ದೊಡ್ಡದಾದ ಪ್ರತಿಶತವನ್ನು ಮನುಷ್ಯರು ಮುಟ್ಟಿರುವುದಿಲ್ಲವೆಂದು ಕಂಡುಹಿಡಿಯುವುದು ಸಂಭವನೀಯ,” ಎಂದಿತು ಆ ಲೇಖನ. ಆದರೂ ಈ ಮುಟ್ಟಲ್ಪಟ್ಟಿರದ ನೆಲ ಪ್ರದೇಶದ ಒಂದು ದೊಡ್ಡ ಭಾಗವು, ಮನುಷ್ಯರಿಗೂ ವನ್ಯ ಜೀವಿಗಳಿಗೂ ರಕ್ಷಣೆ ಕೊಡದ “ಬಂಡೆ, ಹಿಮ ಮತ್ತು ಬೀಸುತ್ತಿರುವ ಮರಳು” ಆಗಿದೆ ಎಂದು ಹಾನಾ ಸೂಚಿಸಿದರು. “ನೈಸರ್ಗಿಕ ಇರು ನೆಲೆಯು ಈ ಗ್ರಹದ ನಿವಾಸಯೋಗ್ಯ ಪ್ರದೇಶದ ಸುಮಾರು ಮುಕ್ಕಾಲು ಭಾಗದಲ್ಲಿ ಮಾನವ ಅಡ್ಡೈಸುವಿಕೆಯಿಂದಾಗಿ ಆಕ್ರಮಿಸಲ್ಪಟ್ಟಿದೆ,” ಎಂದರು ಅವರು. ಆ ಸಮೀಕ್ಷೆಯ ಮೂರು ವರ್ಗಗಳು: ಭಂಗಗೊಳ್ಳದಿರುವುದು (52 ಪ್ರತಿಶತ), ಆಂಶಿಕವಾಗಿ ಭಂಗಗೊಂಡದ್ದು (24 ಪ್ರತಿಶತ), ಮತ್ತು ಪ್ರಾಬಲ್ಯವುಳ್ಳದ್ದು (24 ಪ್ರತಿಶತ).
ಪ್ರಾಣಿಗಳಿಗಾಗಿ ವಾಹನ ಸಂಕೇತ ದೀಪಗಳೋ?
ಮೋಟಾರು ವಾಹನ ಚಾಲಕರಿಗೆ ಮತ್ತು ಪ್ರಾಣಿಗಳಿಗೆ ಇಬ್ಬರಿಗೂ, ಪ್ರಾಣಿಗಳ ರಸ್ತೆ ದಾಟುವಿಕೆಯು ದೀರ್ಘಸಮಯದಿಂದಲೂ ಒಂದು ಸಂಭಾವ್ಯ ಅಪಾಯವಾಗಿದೆ. ರಾತ್ರಿಯಲ್ಲಿ ಪ್ರಾಣಿಗಳು ಕಾಡಿನ ರಸ್ತೆಗಳನ್ನು ದಾಟುವ ಮೂಲಕ ಸಂಭವಿಸಿದ ಅನೇಕ ಅಪಘಾತಗಳ ಫಲಿತಾಂಶವಾಗಿ, ಫ್ರೆಂಚ್ ನ್ಯಾಷನಲ್ ಆಫೀಸ್ ಆಫ್ ಫಾರೆಸ್ಟ್ಸ್‌ನ ತಂತ್ರಜ್ಞರು ಆಶ್ಚರ್ಯಕರವಾದ ಒಂದು ಅನ್ವೇಷಣೆಯನ್ನು ಮಾಡಿದ್ದಾರೆ, ಎಂದು ಫ್ರೆಂಚ್‌ನ ನಿಸರ್ಗ ಪತ್ರಿಕೆಯಾದ ಟೆರ್ ಸೋವಾಸ್ ವರದಿಸುತ್ತದೆ. ಪ್ರಾಣಿಗಳು ಕೆಂಪು ದೀಪಗಳನ್ನು ನೋಡಿ ನಿಲ್ಲುತ್ತವೆ! ಕೆಂಪು ದೀಪಗಳ ಕಂಪನಕ್ಕೆ, ಪ್ರಾಣಿಗಳನ್ನು ತಾತ್ಕಾಲಿಕವಾಗಿ ಶಕಿಹ್ತೀನ ಮಾಡುವ ಸಾಮರ್ಥ್ಯವಿದೆಯೆಂದು ಪ್ರಯೋಗಗಳು ತೋರಿಸಿವೆ. ಫ್ರಾನ್ಸ್‌ನಲ್ಲಿ ಕಾಡಿನ ರಸ್ತೆಗಳುದ್ದಕ್ಕೂ, ಸಮೀಪಿಸುತ್ತಿರುವ ವಾಹನಗಳ ಹೆಡ್‌ಲೈಟ್‌ಗಳಿಂದ ಬೆಳಕನ್ನು ಸೆರೆಹಿಡಿಯುವ ಕೆಂಪು ಪ್ರತಿಬಿಂಬಕಗಳು ಈಗ ಅಳವಡಿಸಲ್ಪಟ್ಟಿವೆ, ಆದರೆ ಬೆಳಕನ್ನು ಪುನಃ ಮೋಟಾರು ವಾಹನ ಚಾಲಕರ ಕಡೆಗೆ ಪ್ರತಿಬಿಂಬಿಸುವುದಕ್ಕೆ ಬದಲಾಗಿ, ಅದನ್ನು ಕಾಡಿನೊಳಗೆ ಪ್ರತಿಬಿಂಬಿಸಲಾಗುತ್ತದೆ. ನಡುರಸ್ತೆಯ ಮೇಲೆ ಎಗರುವುದಕ್ಕೆ ಮೊದಲು, ಪ್ರಾಣಿಗಳು ಈಗ ದೀಪವು ಕಾಣದೆಹೋಗುವ ವರೆಗೆ ಕಾಯುತ್ತವೆ.
ಹಾಸಿಗೆ ವಿಶ್ರಾಂತಿಯ ಅಹಿತಗಳು
“ದೀರ್ಘಕಾಲದ ಹಾಸಿಗೆ ವಿಶ್ರಾಂತಿಯು ಒಳಿತಿಗಿಂತ ಹೆಚ್ಚು ಹಾನಿಯನ್ನು ಮಾಡಸಾಧ್ಯವಿದೆ,” ಎಂದು ವಾದಿಸುತ್ತದೆ ಲಂಡನ್‌ನ ದ ಟೈಮ್ಸ್. ಸುಮಾರು 50 ವರ್ಷಗಳ ಹಿಂದೆ, ಈ ವೈದ್ಯಕೀಯ ಪದ್ಧತಿಯನ್ನು ಕುರಿತು ಸರ್ ರಿಚರ್ಡ್ ಆ್ಯಶರ್ ಆಕ್ಷೇಪಣೆಯನ್ನೆತ್ತಿ, ರಕ್ತ ಘನೀಭವನ, ಸ್ನಾಯು ಕ್ಷಯ, ಎಲುಬುಗಳಲ್ಲಿ ಕ್ಯಾಲ್ಸಿಯಮ್‌ನ ನಷ್ಟ, ಮೂತ್ರ ಕೋಶದ ಕಲ್ಲು, ಮಲಬದ್ಧತೆ ಮತ್ತು ಖಿನ್ನತೆಯಂತಹ ಆರೋಗ್ಯ ಅಪಾಯಗಳಿಗೆ ಗಮನ ಸೆಳೆದರು. ಅಂದಿನಿಂದ ಅಧ್ಯಯನಗಳು ಈ ಎಚ್ಚರಿಕೆಯನ್ನು ದೃಢೀಕರಿಸಿವೆ, ಮತ್ತು ಶವಪರೀಕ್ಷೆಗಳು ರಕ್ತ ಘನೀಭವನವನ್ನು ಅನುಸರಿಸಿ ಬರುವ ಮಾರಕ ಶ್ವಾಸಧಮನಿ ಬಂಧವು ಹಾಸಿಗೆ ವಿಶ್ರಾಂತಿಯ ಅವಧಿಗೆ ನೇರವಾಗಿ ಸಂಬಂಧಿಸಿದೆಯೆಂದು ತೋರಿಸುತ್ತವೆ. ಇನ್ನೊಂದು ಪಕ್ಕದಲ್ಲಿ, ಕಟಿವಾಯು ಮತ್ತು ಗರ್ಭಧಾರಣೆಯ ಅಂತಿಮ ತೊಡಕಿನ ಜೊತೆಗೆ ಬರುವ ತೀವ್ರ ಬೆನ್ನು ನೋವಿನ ಕೇಸುಗಳಲ್ಲಿ ವೈದ್ಯರು ಹಾಸಿಗೆ ವಿಶ್ರಾಂತಿಯನ್ನು ಶಿಫಾರಸ್ಸು ಮಾಡುತ್ತಾರೆ. ತೀವ್ರತೆಗೇರುವ ಮತ್ತು ಗುರುತರವಾದ ಇತರ ವ್ಯಾಧಿಗಳಲ್ಲಿ ವಿಶ್ರಾಂತಿಯಲ್ಲದೆ ಬೇರೆ ಯಾವ ಮಾರ್ಗವೂ ನಿಜವಾಗಿಯೂ ಇರಲಿಕ್ಕಿಲ್ಲ ನಿಶ್ಚಯ. ಆದರೆ ವಿಷಮ ಸ್ಥಿತಿಯು ದಾಟಿದ ಕೂಡಲೇ ಎದ್ದು ನಡೆದಾಡುವುದು ಗುಣಹೊಂದುವಿಕೆಯನ್ನು ಶೀಘ್ರಗೊಳಿಸುತ್ತದೆಂದು ವೈದ್ಯರು ನಂಬುತ್ತಾರೆ.
ಸಂತಾನರಹಿತ ದಂಪತಿಗಳಿಗಾಗಿ ಹೊಸ ನಿರೀಕ್ಷೆಯೊ?
ಒಂದು ಹೊಸ ವೈದ್ಯಕೀಯ ಪ್ರಯೋಗತಂತ್ರವು, ಸಂತಾನರಹಿತ ದಂಪತಿಗಳಿಗೆ ತಮ್ಮ ಬಂಜೆತನವನ್ನು ಜಯಿಸಲಿಕ್ಕಾಗಿ ಸಹಾಯ ಮಾಡುತ್ತಿದೆ, ಎಂದು ಫ್ರೆಂಚ್ ವಾರ್ತಾ ಏಜೆನ್ಸಿಯಾದ ಫ್ರಾನ್ಸ್-ಪ್ರೆಸ್ ವರದಿಸುತ್ತದೆ. ಡೆನ್ಮಾರ್ಕಿನಲ್ಲಿ ಮೂಲತಃ ಪರಿಶೋಧಿಸಲ್ಪಟ್ಟಿದ್ದ ಈ ಪ್ರಯೋಗತಂತ್ರವು, ಸ್ತ್ರೀಯೊಳಗಿನ ಒಂದು ಅಂಡಾಣುವಿನ ಮೇಲೆ ಒಂದೇ ಒಂದು ಪುರುಷ ವೀರ್ಯವನ್ನು ಇಡಲಿಕ್ಕಾಗಿ, ಗಾಜಿನ ಸೂಕ್ಷ್ಮ ಸೂಜಿಯನ್ನು ಉಪಯೋಗಿಸುವುದನ್ನು ಒಳಗೂಡುತ್ತದೆ. ಪ್ರಯೋಗತಂತ್ರವು ಅತಿಸೂಕ್ಷ್ಮ ರೀತಿಯದ್ದು ಮತ್ತು ಮಹತ್ತಾದ ಕೌಶಲ (ಒಂದು ವೀರ್ಯವು ಒಂದು ಮಿಲಿಮೀಟರಿನ ಎರಡು ಸಾವಿರದಲ್ಲಿ ಒಂದು ಭಾಗದಷ್ಟು ಅಳತೆಯದ್ದಾಗಿದೆ; ಒಂದು ಅಂಡಾಣುವು ಒಂದು ಮಿಲಿಮೀಟರಿನ ಹತ್ತನೇ ಒಂದು ಭಾಗ)ವನ್ನು ಅಗತ್ಯಪಡಿಸುವಂತಹದ್ದಾಗಿರುವುದಾದರೂ, ಈ ವಿಧಾನವು ಯಶಸ್ವಿಕರವಾಗಿ ಪರಿಣಮಿಸಿದೆ. ಸ್ತ್ರೀಯ ದೇಹದೊಳಗೆ ಸಂಭವಿಸುವ ಮತ್ತು ಅನಾಮಧೇಯ ದಾನಿಯ ವೀರ್ಯಕ್ಕೆ ಬದಲಾಗಿ, ಅವಳ ಗಂಡನ ವೀರ್ಯವನ್ನು ಉಪಯೋಗಿಸುವ ಹೆಚ್ಚಿನ ಪ್ರಯೋಜನವು ಇದಕ್ಕಿದೆ—ಹೀಗೆ ಸೂಕ್ಷ್ಮವಾದ ನೈತಿಕ ಹಾಗೂ ಧಾರ್ಮಿಕ ಪ್ರಶ್ನೆಗಳನ್ನು ದೂರಮಾಡುತ್ತದೆ. ಎಲ್ಲಾ ಸಂತಾನರಹಿತ ದಂಪತಿಗಳಲ್ಲಿ ಮೂರನೆಯ ಒಂದು ಭಾಗದಷ್ಟು ಮಂದಿಗೆ, ನ್ಯೂನಗುಣಮಟ್ಟದ ವೀರ್ಯವು ಬಂಜೆತನಕ್ಕೆ ಕಾರಣವಾಗಿರುವುದರಿಂದ, ಪ್ರಯೋಗತಂತ್ರವನ್ನು ಉಪಯೋಗಿಸಿ ಅನೇಕ ದಂಪತಿಗಳು ಈಗ ಒಂದು ಕುಟುಂಬವನ್ನು ಆರಂಭಿಸುವ, ಪುನಃ ನವೀಕರಿಸಲ್ಪಟ್ಟ ನಿರೀಕ್ಷೆಗಳನ್ನು ಹೊಂದಬಹುದೆಂದು ಒಬ್ಬ ವೈದ್ಯರು ಅಭಿಪ್ರಯಿಸುತ್ತಾರೆ.