ಬೈಬಲಿನ ದೃಷ್ಟಿಕೋನ
ನಿಮ್ಮ ಪ್ರಾರ್ಥನೆಗಳಲ್ಲಿ ನಿಮ್ಮ ಪಾತ್ರ
ಪಟ್ಟಣವನ್ನು ದೃಷ್ಟಿಸಬಹುದಾದ ಪರ್ವತದ ಒಂದು ಪಕ್ಕದಲ್ಲಿ, ಮುತ್ತಿಗೆ ಹಾಕಲ್ಪಟ್ಟ ರಾಜನು ತನ್ನ ಮಹಾವೈಭವದ ಅರಮನೆಯನ್ನು, ಅಸ್ತವ್ಯಸ್ತವಾಗಿ ಹರಡಿದ್ದ ರಾಜಧಾನಿಯನ್ನು, ಮತ್ತು ತನ್ನ ಮನೆವಾರ್ತೆಯ ದುರವಸ್ಥೆಯನ್ನು ಅವಲೋಕಿಸಲು ಸ್ವಲ್ಪ ಕಾಲ ನಿಲ್ಲುತ್ತಾನೆ. ಒಂದು ದೊಡ್ಡ ಸೈನ್ಯವು ದಕ್ಷಿಣ ಭಾಗದಲ್ಲಿ ಒಟ್ಟುಗೂಡಿದೆ ಮತ್ತು ಪಟ್ಟಣದ ಕಡೆಗೆ ಈಗ ಸಾಗುತ್ತಿದೆ. ಉನ್ನತ ಶ್ರೇಣಿಯ ಸರಕಾರೀ ಅಧಿಕಾರಿಗಳು ಪಕ್ಷಾಂತರಿಸಿದ್ದಾರೆ, ಮತ್ತು ಜನಾಭಿಪ್ರಾಯವು ದಂಗೆಕೋರರ ಪರವಾಗಿದೆ. ಎದೆಗುಂದಿದವನಾಗಿ ರಾಜನು, ದೇವರಿಗೆ ಒಂದು ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ. ಬಹಳ ಧಾರ್ಮಿಕ ಮನುಷ್ಯನಾಗಿದ್ದ ಕಾರಣ, ದೇವರು ತನ್ನ ವಾದವನ್ನು ಆಲಿಸಿ, ರಾಜದ್ರೋಹಿಗಳ ಯೋಜನೆಗಳನ್ನು ವಿಘ್ನಗೊಳಿಸುವನೆಂಬ ಅವನ ಭರವಸೆಯು ಹೆಚ್ಚಾಗುತ್ತದೆ. ಅನಂತರ, ತನ್ನ ಪ್ರಕಾಶಮಾನವಾದ ಪಟ್ಟಣದಿಂದ ತಿರುಗುತ್ತಾ ಅವನು ಪರ್ವತದಿಂದ ಇಳಿದು, ನದಿಯ ಆಚೆಗಿರುವ ಅರಣ್ಯದ ಕಡೆಗೆ, ಉತ್ತರ ದಿಕ್ಕಿನಲ್ಲಿ ಮುಂದುವರಿಯುತ್ತಾನೆ. ಅವನು ಇನ್ನೇನು ಮಾಡಬಲ್ಲನು? ಪರಿಸ್ಥಿತಿಯು ಈಗ ದೇವರ ಕೈಯಲ್ಲಿದೆ.
ತದ್ರೀತಿಯಲ್ಲಿ, ಹೇಗೆ ಪ್ರಾರ್ಥಿಸಬೇಕು ಎಂಬುದರ ಕುರಿತು ಸ್ಪಷ್ಟವಾಗಿದ ಮಾರ್ಗದರ್ಶನಗಳನ್ನು ಒದಗಿಸುವುದರೊಂದಿಗೆ ಬೈಬಲು, ಯೆಹೋವ ದೇವರು “ಪ್ರಾರ್ಥನೆಯನ್ನು ಕೇಳುವವ”ನೆಂದು ಪ್ರಕಟಿಸುತ್ತದೆ ಎಂಬ ಸಾಂತ್ವನಪಡಿಸುವ ಭರವಸೆಯಿಂದ, ದೀನ ಮತಶ್ರದ್ಧಾಳುಗಳು ಕಷ್ಟದ ಸಮಯಗಳಲ್ಲಿ ದೇವರ ಕಡೆಗೆ ಪ್ರಾರ್ಥನೆಯಲ್ಲಿ ತಿರುಗುತ್ತಾರೆ. (ಕೀರ್ತನೆ 65:2) ದೇವರನ್ನು ಪ್ರಾಮಾಣಿಕ ಹೃದಯದಿಂದ ಹುಡುಕುವವರೆಲ್ಲರು ದೇವರಿಂದ ಆಲಿಸಲ್ಪಡುವರೆಂಬ ಆಶ್ವಾಸನೆ ನಮಗಿದೆ.
ಆದರೂ, ನಂಬಿಕೆ ಮತ್ತು ಪ್ರಾರ್ಥನೆಯು ಸಾಕೊ? ನಮ್ಮ ಪ್ರಾರ್ಥನೆಗಳ ಫಲಿತಾಂಶದಲ್ಲಿ ನಾವು ಯಾವ ಪಾತ್ರವನ್ನು ವಹಿಸುತ್ತೇವೆ?
ನಾವು ಹೇಗೆ ನೆರವಾಗಬಲ್ಲೆವು?
ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ರಾಜನು, ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನಾಗಿದ್ದನು. ಪಿತೂರಿ ನಡೆಸುತ್ತಿದ್ದ ತನ್ನ ಮಗನಾದ ಅಬ್ಷಾಲೋಮ ಮತ್ತು ಅವನ ಕಪಟಿ ಸಲಹೆಗಾರನಾದ ಅಹೀತೋಫೆಲನ ಒಳಸಂಚನ್ನು ಎದುರಿಸುವವನಾಗಿ ಅವನು, ಯೆರೂಸಲೇಮಿಗೆ ಓಡಿಹೋಗಲು ಮತ್ತು ಯೋರ್ದಾನ್ ನದಿಯ ಪೂರ್ವ ಭಾಗದಲ್ಲಿರುವ, ಭದ್ರಪಡಿಸಲಾದ ಅರಣ್ಯ ಪಟ್ಟಣವಾದ ಮಹಾನಾಯಿಮ್ನಲ್ಲಿ ಆಶ್ರಯ ಪಡೆಯಲು ಆಯ್ದುಕೊಂಡನು. ನಿರಾಶೆ, ಖಿನ್ನತೆ, ಮತ್ತು ಕಳವಳದಿಂದ ಬಹುಶಃ ಮನಸ್ಸು ಭಾರಗೊಂಡ ಕಾರಣ, ಹೀಗೆ ಹೇಳುತ್ತಾ ಅವನು ಪ್ರಾರ್ಥನೆಯಲ್ಲಿ ಯೆಹೋವನಿಗೆ ಮೊರೆಯಿಟನ್ಟು: “ಯೆಹೋವನೇ, ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು.” (2 ಸಮುವೇಲ 15:11-15, 30, 31) ಹಾಗಿದ್ದರೂ, ದಾವೀದನು ಕೇವಲ ಒಂದು ಪ್ರಾರ್ಥನೆಯನ್ನು ಸಲ್ಲಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡಿದನು. ತನ್ನ ಪ್ರಾರ್ಥನೆಯ ಯಶಸ್ವಿಕರವಾದ ಫಲಿತಾಂಶಕ್ಕಾಗಿ ಅವನು ಸಕಾರಾತ್ಮಕ ವಿಧದಲ್ಲಿ ನೆರವು ನೀಡಿದನು. ಅದು ಹೇಗೆ?
ಅವನ ನೆರವು ಅವನು ಎದುರಿಸಿದ ಪರೀಕೆಗ್ಷಳಿಗೆ ಬಹಳ ಮುಂಚಿತವಾಗಿ ಆರಂಭಿಸಿತು. ಅನೇಕ ವರ್ಷಗಳ ಕಾಲ, ಅವನು ರಾಜನಾಗುವ ಮೊದಲೇ ತಾನು ಯೆಹೋವನ ಒಬ್ಬ ನಿಷ್ಠಾವಂತ ಆರಾಧಕನೆಂದು ದಾವೀದನು ರುಜುಪಡಿಸಿದನು. (1 ಸಮುವೇಲ 16:12, 13; ಅ. ಕೃತ್ಯಗಳು 13:22) ಅವನು ದೇವರೊಂದಿಗೆ ಆಪ್ತನಾದನು. ಹೀಗೆ, ಪರೀಕ್ಷೆಯ ಕೆಳಗೆ ಯೆಹೋವನು ತನ್ನ ಪ್ರಾರ್ಥನೆಯನ್ನು ಆಲಿಸಿ, ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯಿಸುವನೆಂಬ ನಂಬಿಕೆ ದಾವೀದನಿಗಿತ್ತು.
ಅದೇ ವಿಷಯವು ಇಂದು ಸತ್ಯವಾಗಿದೆ. ಅನೇಕವೇಳೆ ನಮ್ಮ ಪ್ರಾರ್ಥನೆಗಳ ಫಲಿತಾಂಶಕ್ಕೆ ನೆರವಾಗುವುದರ ಒಂದು ಪ್ರಮುಖ ವಿಧಾನವು, ಬೈಬಲ್ ಸಲಹೆಯನ್ನು ಜೀವನದ ಒಂದು ಕ್ರಮವಾದ ನಮೂನೆಯೋಪಾದಿ ಅನುಸರಿಸುವುದಾಗಿದೆ. ದೇವದತ್ತ ಮೂಲತತ್ವಗಳಿಗೆ ಇಂತಹ ನಿಷ್ಠಾವಂತ ಅನುಸರಣೆಯು ಆತನೊಂದಿಗೆ ನಿಕಟವಾದೊಂದು ಸಂಬಂಧವನ್ನು ಉಂಟುಮಾಡುತ್ತದೆ. ದೇವರ ಕಡೆಗಿನ ಈ ಸಾಮೀಪ್ಯವು ಮತ್ತು ನಂಬಿಕೆಯ ನಮೂನೆಯು, ಪರೀಕ್ಷೆಗಳು ತೊಡಗುವ ಮೊದಲು ಅಲ್ಲಿರುವವು. ಯಾವುದರ ಮೇಲೆ ಮನೆಯೊಂದು ಕಟ್ಟಲ್ಪಡಲಿದೆಯೊ, ಆ ಬಲವಾದ ಅಸ್ತಿವಾರದಂತೆ ಅದು ಇರಬೇಕು; ಅದರ ಮೇಲೆ ಕಟ್ಟಡದ ಭಾರವನ್ನು ಹಾಕುವ ಮೊದಲು ಅದು ಅಲ್ಲಿರಬೇಕು. ಹೀಗೆ ನಾವು, ಪರೀಕ್ಷೆಗಳು ಬರುವ ಮೊದಲು, ಈಗಲೂ ನಮ್ಮ ಪ್ರಾರ್ಥನೆಗಳಲ್ಲಿ ಹೆಚ್ಚಿನವುಗಳ ಯಶಸ್ವಿಕರವಾದ ಫಲಿತಾಂಶಕ್ಕೆ ನೆರವಾಗಬಲ್ಲೆವು.
ಒಂದು ಸಕ್ರಿಯ ಪಾತ್ರವನ್ನು ತೆಗೆದುಕೊಳ್ಳಿರಿ!
ದೇವರೊಂದಿಗಿನ ದಾವೀದನ ಸಂಬಂಧವು ಪ್ರಾಮುಖ್ಯವಾದ ಒಂದು ಪಾತ್ರವನ್ನು ವಹಿಸಿತೆಂಬುದು ಸತ್ಯವಾಗಿದ್ದರೂ, ತನ್ನ ಪ್ರಾರ್ಥನೆಯ ನೆರವೇರಿಕೆಯಲ್ಲಿ ತಾನೊಬ್ಬ ನಿಷ್ಕ್ರಿಯ ವೀಕ್ಷಕನಾಗಿರಲು ಸಾಧ್ಯವಿಲ್ಲವೆಂದೂ ಅವನು ಗ್ರಹಿಸಿದನು. ಅದಕ್ಕೆ ವ್ಯತಿರಿಕ್ತವಾಗಿ, ತನ್ನ ಪ್ರಾರ್ಥನೆಯನ್ನು ಅನುಸರಿಸಿ ಬಂದ ವಿವೇಕದ ಕ್ರಿಯಾರೀತಿಯಲ್ಲಿ ರುಜುವಾಗಿರುವಂತೆ, ದಾವೀದನು ಒಂದು ಸಕ್ರಿಯ ಪಾತ್ರವನ್ನು ತೆಗೆದುಕೊಂಡನು.
ದಾವೀದನ ನಿಷ್ಠಾವಂತ ಮಿತ್ರರಲ್ಲಿ ಅರ್ಕೀಯನಾದ ಹೂಷೈ ಒಬ್ಬನಾಗಿದ್ದನು. ಎಣ್ಣೇ ಮರಗಳ ಗುಡ್ಡದ ಮೇಲೆ ಹೂಷೈ ಪಲಾಯನ ಮಾಡುತ್ತಿದ್ದ ರಾಜನನ್ನು ಭೇಟಿಯಾದನು. ದಾವೀದನ ಜೊತೆಗೆ ಪರದೇಶವಾಸಕ್ಕೆ ಹೋಗಲು ಬಯಸಿದರೂ, ಅವನು ಪಟ್ಟಣದಲ್ಲಿ ಉಳಿಯಬೇಕೆಂಬ ದಾವೀದನ ಒತ್ತಯಾಕ್ಕೆ ಹೂಷೈ ಮಣಿದನು. ಅವನು ಅಬ್ಷಾಲೋಮನ ಕಡೆಗೆ ನಿಷ್ಠೆಯ ಸೋಗುಹಾಕಿ, ವಿಶ್ವಾಸಘಾತುಕ ಸಲಹೆಗಾರನಾದ ಅಹೀತೋಫೆಲನ ಸಲಹೆಯನ್ನು ನಿಷ್ಫಲಗೊಳಿಸಿ, ಆ ಘಟನೆಗಳ ಕುರಿತು ದಾವೀದನಿಗೆ ಮಾಹಿತಿ ಕೊಡಬೇಕಿತ್ತು. (2 ಸಮುವೇಲ 15:32-37) ಅಪೇಕ್ಷಿಸಿದಂತೆ, ಅಬ್ಷಾಲೋಮನ ಭರವಸೆಯನ್ನು ಪಡೆಯುವುದರಲ್ಲಿ ಹೂಷೈ ಸಫಲನಾದನು. ಈಗ ಯೆಹೋವನು ಹಸ್ತಕ್ಷೇಪಮಾಡಲಿದ್ದನು.
ಚತುರನಾದರೂ, ಕುಟಿಲನಾದ ಅಹೀತೋಫೆಲನು ಒಂದು ಪ್ರತಿಭಾವಂತ ಯೋಜನೆಯ ಪ್ರಸ್ತಾಪ ಮಾಡಿದನು. ದಾವೀದನು ಅಸ್ತವ್ಯಸ್ತವಾಗಿ ಮತ್ತು ಆಕ್ರಮಣಕ್ಕೆ ಅವಕಾಶವನ್ನೀಯತ್ತಾ ತಪ್ಪಿಸಿಕೊಂಡು ಓಡುತ್ತಿರುವಾಗ, ಅದೇ ರಾತ್ರಿ ಅವನ ಮೇಲೆ ಆಕ್ರಮಣ ಮಾಡಲು ತನಗೆ 12,000 ಪುರುಷರನ್ನು ಕೊಡುವಂತೆ ಅವನು ಅಬ್ಷಾಲೋಮನನ್ನು ಒತ್ತಾಯಿಸಿದನು—ಒಂದು ಯಶಸ್ವಿಕರವಾದ ಕ್ರಾಂತಿಯನ್ನು ನಿರ್ಧರಿಸಲಿದ್ದ ಒಂದು ಸಾವೇಟು! ಹಾಗಿದ್ದರೂ, ಅನೇಕರಿಗೆ ಆಶ್ಚರ್ಯವಾಗುವಂತೆ, ವಿಷಯದ ಮೇಲೆ ಹೂಷೈಯ ಸಲಹೆಯನ್ನು ಅಬ್ಷಾಲೋಮನು ಕೇಳಿದನು. ಬೇರೆ ಯಾರಿಂದಲೂ ಅಲ್ಲದೆ ಸ್ವತಃ ಅಬ್ಷಾಲೋಮನಿಂದ ನಡೆಸಲ್ಪಡುವ ಸೈನಿಕರ ಒಂದು ಬಹು ಸಂಖ್ಯೆಯ ಸೇನೆಯನ್ನು ಒಟ್ಟುಗೂಡಿಸಲು ಇನ್ನಷ್ಟು ಸಮಯವನ್ನು ವ್ಯಯಿಸುವಂತೆ ಅವನು ಅಬ್ಷಾಲೋಮನಿಗೆ ಸಲಹೆ ನೀಡಿದನು. ಯೆಹೋವನ ನಿರ್ದೇಶನದಿಂದ ಹೂಷೈಯ ಸಲಹೆಯು ಸ್ವೀಕರಿಸಲ್ಪಟ್ಟಿತು. ಹೂಷೈಯ ಸಲಹೆಯನ್ನು ಅನುಸರಿಸುವುದು ಖಂಡಿತವಾದ ಸೋಲಿನ ಅರ್ಥದಲ್ಲಿದೆ ಎಂಬುದನ್ನು ಸ್ಪಷ್ಟವಾಗಿಗಿ ಗ್ರಹಿಸಿದ ಅಹೀತೋಫೆಲನು, ತನ್ನ ಮನೆಗೆ ಹಿಂದಿರುಗಿ ಆತ್ಮಹತ್ಯೆ ಮಾಡಿಕೊಂಡನು.—2 ಸಮುವೇಲ 17:1-14, 23.
ಯೆಹೋವನು ದಾವೀದನ ಪ್ರಾರ್ಥನೆಯನ್ನು, ಅವನು ಪ್ರಾರ್ಥಿಸಿದಂತೆಯೇ, ಉತ್ತರಿಸಿದ್ದನೆಂಬುದರಲ್ಲಿ ಯಾವ ಸಂದೇಹವೂ ಇರಲಿಲ್ಲ. ತನ್ನ ಪ್ರಾರ್ಥನೆಗನುಗುಣವಾಗಿ ಕೆಲಸಮಾಡುವ ವಿಷಯದಲ್ಲಿ ದಾವೀದನ ಮಾದರಿಯು, ಪ್ರಾರ್ಥನೆಯ ಮುಖಾಂತರ ದೇವರ ಸಹಾಯವನ್ನು ಕೋರುವವರೆಲ್ಲರಿಗೆ ಒಂದು ಅಮೂಲ್ಯವಾದ ಪಾಠವನ್ನು ಒದಗಿಸುತ್ತದೆ.
ಯೆಹೋವನು ತನ್ನ ಭಾಗದ ಕಾರ್ಯವನ್ನು ಮಾಡುವನು
ತಮ್ಮ ಅನುದಿನದ ಆಹಾರಕ್ಕಾಗಿ ಪ್ರಾರ್ಥಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು ಮತ್ತು ಅವರು ದೇವರ ಅಭಿರುಚಿಗಳನ್ನು ಪ್ರಥಮವಾಗಿಡುವಲ್ಲಿ ಆತನು ಅವರ ಅಗತ್ಯಗಳ ಕಾಳಜಿ ವಹಿಸುವನೆಂದು ವಾಗ್ದಾನಮಾಡಿದನು, ನಿಜ. (ಮತ್ತಾಯ 6:11, 33) ಉದಾಹರಣೆಗೆ, ಒಬ್ಬ ವ್ಯಕ್ತಿ ನಿರುದ್ಯೋಗಿಯಾಗಿರುವುದಾದರೆ, ಕೆಲಸವನ್ನು ಕಂಡುಹಿಡಿಯಲು ಅಥವಾ ಸೃಷ್ಟಿಸಲು ತನ್ನಿಂದ ಸಾಧ್ಯವಾದ ಎಲ್ಲವನ್ನು ಮಾಡುವ ಮೂಲಕ, ಪೋಷಣೆಗಾಗಿ ತಾನು ಮಾಡಿದ ಪ್ರಾರ್ಥನೆಯ ಹೊಂದಿಕೆಯಲ್ಲಿ ಅವನು ಕೆಲಸಮಾಡಬೇಕು.
ನಮ್ಮ ಪ್ರಾರ್ಥನೆಗಳ ವಿಷಯವು ಏನೇ ಆಗಿರಲಿ, ಫಲಿತಾಂಶಕ್ಕೆ ನೆರವಾಗುವ ನಮ್ಮ ಸಾಮರ್ಥ್ಯವು ಬಹಳ ಭಿನ್ನವಾಗಿರುತ್ತದೆ. ನಾವು ಬಹಳಷ್ಟನ್ನು ಮಾಡಸಾಧ್ಯವಿರುವ ಸಮಯಗಳಿವೆ ಮತ್ತು ಮಾಡಲು ಸಾಧ್ಯವಿರುವ ಏನಾದರೂ ಇರುವಲ್ಲಿ, ಅತಿ ಕಡಿಮೆಯಾದದ್ದನ್ನು ಮಾಡಸಾಧ್ಯವಿರುವ ಸಮಯಗಳಿವೆ. ಪ್ರಾಮುಖ್ಯವಾದ ವಿಷಯವು ನಾವು ಏನನ್ನು ನೀಡಲು ಸಾಧ್ಯ ಅಥವಾ ಅಸಾಧ್ಯ ಎಂಬುದಲ್ಲ, ಬದಲಿಗೆ ನಮ್ಮಿಂದ ಸಾಧ್ಯವಾದ ಅತ್ಯುತ್ತಮವನ್ನು ನಾವು ಮಾಡುತ್ತಿದ್ದೇವೊ ಎಂಬುದೇ.
ಯೆಹೋವನಿಗೆ ನಮ್ಮ ಪರಿಸ್ಥಿತಿಗಳ ಮತ್ತು ಸಾಮರ್ಥ್ಯಗಳ ತಿಳಿವಳಿಕೆಯಿದೆ ಎಂಬ ಖಾತರಿ ನಮಗಿರಸಾಧ್ಯವಿದೆ. ಏನನ್ನು ಮಾಡಲು ನಮಗೆ ಸಾಧ್ಯವೆಂದು ಆತನು ಸಂಪೂರ್ಣವಾಗಿ ಗ್ರಹಿಸುತ್ತಾನೆ ಮತ್ತು ಸಾಧಿಸಸಾಧ್ಯವಿರುವುದಕ್ಕಿಂತ ಹೆಚ್ಚನ್ನು ಆತನು ನಮ್ಮಿಂದ ಎಂದೂ ಕೇಳನು. ನಮಗೆ ಬಹಳಷ್ಟನ್ನು ಮಾಡಸಾಧ್ಯವಿರಲಿ, ಬಹಳ ಕಡಮೆಯನ್ನು ಮಾಡಸಾಧ್ಯವಿರಲಿ, ಯೆಹೋವನು ಯಾವುದೇ ಕೊರತೆಯನ್ನು ಸರಿದೂಗಿಸುವನು. ನಮ್ಮ ಪ್ರಯತ್ನಗಳನ್ನು ಆತನು ಗಣ್ಯಮಾಡಿ, ಬೆಂಬಲಿಸುತ್ತಾನೆ ಮತ್ತು ಒಳಗೊಂಡಿರುವ ಎಲ್ಲರಿಗಾಗಿ ಅತ್ಯುತ್ತಮ ಪರಿಹಾರಮಾರ್ಗವನ್ನು ಸಾಧಿಸಲು ಅವರೊಂದಿಗೆ ಕೆಲಸಮಾಡುವನು.—ಕೀರ್ತನೆ 3:3-7.
ತೊಂದರೆಯ ಮಧ್ಯದಲ್ಲಿ ರಾಜ ದಾವೀದನು ಭರವಸೆಯಿಂದ ಹೀಗೆ ಘೋಷಿಸಸಾಧ್ಯವಿತ್ತು: “ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು. [ಯೆಹೋವನೇ,] ನಿನ್ನ ಆಶೀರ್ವಾದವು ನಿನ್ನ ಪ್ರಜೆಯ ಮೇಲೆ ಇರಲಿ.” (ಕೀರ್ತನೆ 3:8) ಯೆಹೋವನ ಶಕ್ತಿಯಲ್ಲಿ ನಮ್ಮ ಭರವಸೆಯೊಂದಿಗೆ ನಮ್ಮ ಪಾತ್ರದ ನೆರವು—ಹೆಚ್ಚಿನದ್ದು ಇಲ್ಲವೆ ಕಡಿಮೆಯಾದದ್ದು—ನಮ್ಮ ಪ್ರಾರ್ಥನೆಗಳ ಯಶಸ್ವಿಕರವಾದ ಫಲಿತಾಂಶಕ್ಕಾಗಿ ಕೆಲಸಮಾಡುವಂತಾಗಲಿ.