ಅಲೆಗಳ ಕೆಳಗಿನ ಜಗತ್ತನ್ನು ಸುರಕ್ಷಿತವಾಗಿ ಪರಿಶೋಧಿಸುವುದು
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
ತುಲನಾತ್ಮಕವಾಗಿ ಕೆಲವೇ ಜನರು ನೇರವಾಗಿ ನೋಡಿರುವ ಒಂದು ಚಿತ್ತಾಕರ್ಷಕ ಜಗತ್ತು ಇದೆ. ಇದು ಸಮುದ್ರದ ಮೇಲ್ಮೈಯ ಸ್ವಲ್ಪ ಕೆಳಗೆ ಇದೆ. ಇದು ಅಲೆಗಳ ಕೆಳಗಿನ ಜಗತ್ತಾಗಿದ್ದು, ನೀವು ಅನ್ವೇಷಿಸಲಿಕ್ಕಾಗಿ ಸಿದ್ಧವಾಗಿದೆ. ‘ಅಂತಹ ಒಂದು ಸಂಚಾರವು ಎಷ್ಟು ಸುರಕ್ಷಿತವಾದದ್ದಾಗಿದೆ?’ ಎಂದು ನೀವು ಕೇಳಬಹುದು. ‘ಈ ಚಿತ್ತಾಕರ್ಷಕ ಅಂತರ್ಜಲ ಜಗತ್ತನ್ನು ನಾನು ಸಂದರ್ಶಿಸಶಕ್ತನಾಗುವುದಕ್ಕೆ ಮೊದಲು ನಾನು ಸಮರ್ಥ ಈಜುಗಾರನಾಗಿರಬೇಕಾದ ಅಗತ್ಯವಿದೆಯೆ? ಮತ್ತು ನನಗೆ ಈಜಾಡಲು ಸ್ವಲ್ಪವೂ ಸಾಧ್ಯವಿಲ್ಲವಾದರೆ ನಾನು ತ್ಯಜಿಸಲ್ಪಡುವೆನೊ?’
ಅನ್ವೇಷಿಸುವಿಕೆಯ ಎರಡು ರೀತಿಗಳು
ಅಂತರ್ಜಲ ಜಗತ್ತನ್ನು ಅನ್ವೇಷಿಸುವುದರಲ್ಲಿ ಎರಡು ಮೂಲಭೂತ ವಿಧಾನಗಳು—ಸ್ನಾರ್ಕೆಲ್ ಮುಳುಗುವಿಕೆ ಮತ್ತು ಸ್ಕೂಬ ಮುಳುಗುವಿಕೆ—ಜನಪ್ರಿಯವಾಗಿವೆ.a
ಸ್ನಾರ್ಕೆಲ್, ಈಜುಗಾರನು ತನ್ನ ಮುಖವನ್ನು ಮುಳುಗಿಸಿ ನೀರಿನ ಮೇಲ್ಮೈಯ ಮೇಲೆ ಕೆಳಮುಖವಾಗಿ ಈಜುವಾಗ, ಈಜುಗಾರನ ಬಾಯೊಳಗೆ ಜೋಡಣೆಯಾಗುವಂತಹ ಒಂದು ಸಾಧನವಾಗಿದ್ದು, ನೀರಿನ ಮೇಲೆ ಎದ್ದಿರುವ ಬಾಗಿದ ಕೊಳವೆಯೊಂದನ್ನು ಹೊಂದಿರುತ್ತದೆ. ಇದು ಗಾಳಿಗಾಗಿ ಈಜುಗಾರನು ನೀರಿನಿಂದ ತನ್ನ ತಲೆಯನ್ನು ಮೇಲಕ್ಕೆತ್ತದೆ ಉಸಿರಾಡುವಂತೆ ಅವನನ್ನು ಶಕ್ತನನ್ನಾಗಿ ಮಾಡುತ್ತದೆ. ಒಂದು ಮುಸುಕು ಅವನ ಕಣ್ಣುಗಳನ್ನು ರಕ್ಷಿಸುತ್ತದೆ.
ಇನ್ನೊಂದು ಕಡೆಯಲ್ಲಿ, ಉಸಿರಾಟದ ಉಪಕರಣವೊಂದಕ್ಕೆ ಜೋಡಿಸಲ್ಪಟ್ಟಿರುವ, ಒತ್ತುಗಾಳಿಯನ್ನು ಒಳಗೊಂಡಿರುವ ಒಂದು ಸಿಲಿಂಡರ್ ಅಥವಾ ಸಿಲಿಂಡರ್ಗಳಿಂದ ರಚಿತವಾಗಿರುವ ಸಲಕರಣೆಯನ್ನು ಸ್ಕೂಬ ಸೂಚಿಸುತ್ತದೆ. ಆದುದರಿಂದ ನಿಸ್ಸಂಶಯವಾಗಿ, ಸ್ಕೂಬ ಮುಳುಗುವಿಕೆಯು, ಮೇಲ್ಮೈಯ ಕೆಳಗೆ ಹೆಚ್ಚು ಆಳಕ್ಕೆ ಹೋಗುವುದರಲ್ಲಿ ಆಸಕ್ತರಾಗಿರುವವರಿಗಾಗಿದ್ದು, ಇದು ಅತ್ಯಧಿಕವಾಗಿ ಜಟಿಲವಾದದ್ದಾಗಿದೆ, ಮತ್ತು ಬಹಳ ದುಬಾರಿಯದ್ದಾಗಿರಸಾಧ್ಯವಿದೆ.
ಸ್ನಾರ್ಕೆಲ್ ಮುಳುಗುವಿಕೆಯ ಹೆಚ್ಚು ಸರಳವಾದ ಮತ್ತು ತೀರ ಕಡಿಮೆ ಖರ್ಚು ತಗಲುವ ಹವ್ಯಾಸವು, ಮೇಲ್ಮೈಯಿಂದಲೂ ಅಂತರ್ಜಲ ಜಗತ್ತಿನ ಮನೋಹರವಾದ ಹರ್ಷಕಾರಕಗಳನ್ನು ನೋಡುವಂತೆ ನಿಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಅತ್ಯುತ್ಸಾಹವುಳ್ಳ ಸ್ನಾರ್ಕೆಲ್ ಮುಳುಗಾಳುವೊಬ್ಬನು ತನ್ನ ಪ್ರಥಮ ಅನುಭವವನ್ನು ಹೀಗೆಂದು ವಿವರಿಸುತ್ತಾನೆ: “ನಾನು ಕೇವಲ 14 ವರ್ಷ ಪ್ರಾಯದ ತರುಣನಾಗಿದ್ದಾಗ, ಸಾವಿರಗಟ್ಟಲೆ ಸಣ್ಣ ಮೀನುಗಳ ಅಧಿಕ ಪ್ರಮಾಣದ ಗುಂಪಿನ ಮಧ್ಯೆ ಪ್ರಥಮ ಬಾರಿಗೆ ನಾನು ಸ್ನಾರ್ಕೆಲ್ ಮುಳುಗುವಿಕೆಯನ್ನು ಮಾಡಿದ್ದು ನನಗಿನ್ನೂ ಸ್ಪಷ್ಟವಾಗಿಗಿ ನೆನಪಿದೆ. ನಾನು ಅವುಗಳ ಮಧ್ಯೆ ಜಾರಿಕೊಂಡು ಹೋದಂತೆ, ಮೀನುಗಳು ನನಗಾಗಿ ಸಜೀವವಾದ ಒಂದು ಸುರಂಗವನ್ನು ರೂಪಿಸುವಂತೆ ತೋರುತ್ತಿತ್ತು. ಸುಂದರವಾದ ಒಂದು ಪರಿಣಾಮವನ್ನು ಸೃಷ್ಟಿಸುತ್ತಾ, ಅವುಗಳ ಬೆಳ್ಳಿಯಂತಹ ದೇಹಗಳು ಸೂರ್ಯಪ್ರಕಾಶವನ್ನು ಪ್ರತಿಬಿಂಬಿಸಿದವು. ನಾನು ಆನಂದ ಪರವಶನಾದೆ. ಮತ್ತು ಹೀಗೆ ಸ್ನಾರ್ಕೆಲ್ ಮುಳುಗುವಿಕೆಯೊಂದಿಗೆ ಜೀವನಪರ್ಯಂತದ ಪ್ರಣಯ ಪ್ರಸಂಗವು ಆರಂಭಗೊಂಡಿತು.”
ಆದರೆ ಇದು ನಿಜವಾಗಿಯೂ ಸುರಕ್ಷಿತವಾಗಿದೆಯೆ?
ಸ್ನಾರ್ಕೆಲ್ ಮುಳುಗುವಿಕೆಗಿಂತಲೂ, ಅದಕ್ಕಾಗಿ ಒಬ್ಬನ ಕಾರನ್ನು ಸಮುದ್ರತೀರಕ್ಕೆ ನಡೆಸುವುದು ಅತ್ಯಧಿಕ ಅಪಾಯಕರವಾದದ್ದಾಗಿದೆಯೆಂದು, 20 ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಸ್ನಾರ್ಕೆಲ್ ಮುಳುಗುವಿಕೆಯನ್ನು ಸುರಕ್ಷಿತವಾಗಿ ಆನಂದಿಸಿರುವ ಅತ್ಯುತ್ಸಾಹಿಯೊಬ್ಬನು ಸೂಚಿಸುತ್ತಾನೆ! ನೀರಿನಲ್ಲಿರುವಾಗ, ಸುರಕ್ಷೆಯು ಚಟುವಟಿಕೆಗಿಂತಲೂ ಹೆಚ್ಚಾಗಿ ವ್ಯಕ್ತಿಯ ಮೇಲೆ ಅವಲಂಬಿಸಿರುತ್ತದೆ. ನೀವೊಬ್ಬ ಸಮರ್ಥ ಈಜುಗಾರರಾಗಿಲವ್ಲಾದರೆ, ನೀವು ಪ್ರಶಾಂತವಾದ, ಹೆಚ್ಚು ಆಳವಿಲ್ಲದ ನೀರನ್ನು ಅತಿಕ್ರಮಿಸುವ ಸಾಹಸಕ್ಕೆ ಕೈಹಾಕಬಾರದು, ಮತ್ತು ನೀವು ಎಂದೂ ನಿಮ್ಮ ಆಳವನ್ನು ಅತಿಕ್ರಮಿಸಿ ಹೋಗಬಾರದು. ವಾಸ್ತವವಾಗಿ, ಒಂದು ಮೀಟರ್ನಷ್ಟು ನೀರಿನಲ್ಲಿಯೇ ನೋಡಲು ಹೆಚ್ಚಿನದ್ದು ಇರಸಾಧ್ಯವಿದೆ. ಕೌಶಲ ಮತ್ತು ದೃಢವಿಶ್ವಾಸವನ್ನು ನೀವು ಪಡೆದುಕೊಂಡಂತೆ, ನೀವು ಹೆಚ್ಚು ಆಳವಾದ ನೀರಿನೊಳಗೆ ಹೋಗಲು ಶಕ್ತರಾಗುವಿರಿ, ಆದರೆ ಆಗಲೂ ನಿಮ್ಮೊಂದಿಗೆ ಸಮರ್ಥನಾದ ಒಬ್ಬ ಜೊತೆಗಾರನು ಯಾವಾಗಲೂ ಇರಬೇಕು. ಕಡಲತೀರದಿಂದ ಬಹಳ ದೂರ ಅಥವಾ ಆಳವಾದ ನೀರಿನೊಳಗೆ ಒಬ್ಬರೇ ಹೋಗುವ ಸಾಹಸಕ್ಕೆ ಎಂದಿಗೂ ಕೈಹಾಕದಿರುವುದನ್ನು ಅತ್ಯಂತ ಹೆಚ್ಚು ಅನುಭವವುಳ್ಳ ಮುಳುಗಾಳುಗಳು ಒಂದು ನಿಯಮವನ್ನಾಗಿ ಮಾಡುತ್ತಾರೆ. ಮತ್ತು ಸುರಕ್ಷೆಯ ಅಂಶದ ಹೊರತಾಗಿ, ಸ್ನಾರ್ಕೆಲ್ ಮುಳುಗುವಿಕೆಯ ಅನುಭವವನ್ನು ಜೊತೆಗಾರನೊಬ್ಬನೊಂದಿಗೆ ಹಂಚಿಕೊಳ್ಳುವುದು ಹೆಚ್ಚು ವಿಶ್ರಾಂತಿಕರವೂ ಆನಂದದಾಯಕವಾದದ್ದೂ ಆಗಿದೆ.
ನಿಮ್ಮ ಮುಖವು ಅಂತರ್ಜಲವಾಗಿ ಒಂದು ಸ್ನಾರ್ಕೆಲ್ನ ಮೂಲಕ ಉಸಿರಾಡುವುದು ಸ್ವಲ್ಪ ಒಗ್ಗಿಸಿಕೊಳ್ಳುವುದನ್ನು ಕೇಳಿಕೊಳ್ಳಬಹುದೆಂಬುದು ಸತ್ಯವಾಗಿರುವುದಾದರೂ, ನೀವು ಪಟ್ಟುಹಿಡಿಯುವುದಾದರೆ, ಅದು ನಿಜವಾಗಿಯೂ ಕಷ್ಟಕರವಾಗಿಲ್ಲವೆಂದು ನೀವು ಕಂಡುಕೊಳ್ಳುವಿರಿ. ಕೆಲವು ಆರಂಭಿಗರು ಒಂದು ಈಜು ಕೊಳದಲ್ಲಿ ಅಥವಾ ಎಲ್ಲಿ ಅಲೆಗಳಿರುವುದಿಲ್ಲವೋ ಆ ಸಮುದ್ರತೀರದ ಆಳವಿಲ್ಲದ ಜಲಪ್ರದೇಶಗಳಲ್ಲಿ ಅಭ್ಯಾಸ ಮಾಡುತ್ತಾರೆ. ಕೆಲವರು ಸ್ನಾನದ ತೊಟ್ಟಿಯೊಂದರಲ್ಲಿ ಸಹ ಅಭ್ಯಾಸ ಮಾಡುತ್ತಾರೆ.
ನಿಮಗೆ ಅಗತ್ಯವಿರುವ ಸಲಕರಣೆ
ಸ್ನಾರ್ಕೆಲ್ ಮುಳುಗುವಿಕೆಗೆ ಅಗತ್ಯವಾಗಿರುವ ಸಲಕರಣೆಯು ಸಂಬಂಧ ಸೂಚಕವಾಗಿ ಸರಳವಾಗಿದೆ, ದುಬಾರಿಯಾಗಿಲ್ಲ: ಒಂದು ಮುಖದ ಮುಸುಕು, ಎರಡು ಈಜುರೆಕ್ಕೆಗಳು (ಈಜುಪಾದರಕ್ಷೆಗಳು), ಮತ್ತು ಸ್ವತಃ ಸ್ನಾರ್ಕೆಲ್. ನಿಶ್ಚಯವಾಗಿ, ನೀವು ಚಳಿಗಾಲದಲ್ಲಿ ಅಥವಾ ಸಾಮಾನ್ಯ ಈಜುವಿಕೆಗಾಗಿ ತೀರ ತಣ್ಣಗಿರುವ ನೀರಿನಲ್ಲಿ ಸ್ನಾರ್ಕೆಲ್ ಮುಳುಗುವಿಕೆಗೆ ಯೋಜಿಸುವುದಾದರೆ, ನಿಮಗೆ ಬಹುಶಃ ಒಂದು ವೆಟ್ ಸೂಟ್ ಬೇಕಾಗುತ್ತದೆ, ಮತ್ತು ಇದು ವೆಚ್ಚಗಳನ್ನು ಗಮನಾರ್ಹವಾಗಿ ಅಧಿಕಗೊಳಿಸುವುದು. ಆರಂಭಿಸಲು ಅಗತ್ಯವಾಗಿರುವ ಮೂರು ಮೂಲಭೂತ ವಸ್ತುಗಳನ್ನಷ್ಟೇ ಪರಿಗಣಿಸೋಣ.
ಮುಖದ ಮುಸುಕು ಸರಿಯಾಗಿ ಜೋಡಣೆಯಾಗಬೇಕು, ನೀರುತಡೆಯದ್ದಾಗಿರಬೇಕು, ಮತ್ತು ಹಿತಕರವಾದದ್ದಾಗಿರಬೇಕು. ಒಂದು ಸಮೀಕಾರಕವೂ ಅದಕ್ಕಿರಬೇಕು, ಅಂದರೆ, ಮುಸುಕಿನ ಹೊರಗಿನಿಂದ ನಿಮ್ಮ ಮೂಗನ್ನು ಇರುಕಿಸಲು ನಿಮ್ಮನ್ನು ಅನುಮತಿಸುತ್ತಾ ಕುಳಿಗಳ ಒಂದು ಸರಣಿಯಿರಬೇಕು. ಇದರ ಕಾರಣವನ್ನು ಬಳಿಕ ವಿವರಿಸಲಾಗುವುದು. ಆ ಮುಸುಕಿಗೆ ಒಂದು ಒಳ್ಳೆಯ ದೃಷ್ಟಿಕ್ಷೇತ್ರವಿರಬೇಕು, ಮತ್ತು ಅದು ಕಡಿಮೆ ಪರಿಮಾಣದ್ದಾಗಿರಬೇಕು, ಅಂದರೆ ಒಳಗಿರುವ ಗಾಳಿಯ ಪರಿಮಾಣವನ್ನು ಕಡಿಮೆಮಾಡುವ ಮೂಲಕ ಆ ಗಾಜು ನಿಮ್ಮ ಮುಖಕ್ಕೆ ಹತ್ತಿರವಾಗಿರಬೇಕು. ಅತ್ಯಂತ ಹಿತಕರವಾದ ಮುಸುಕುಗಳು ಸಿಲಿಕನ್ನಿಂದ ಮಾಡಲ್ಪಟ್ಟಿವೆ. ಈಗಿನ ಕಾಲದಲ್ಲಿ ಸಮೀಪದೃಷ್ಟಿ ದೋಷವುಳ್ಳವರಿಗಾಗಿ ದೃಷ್ಟಿಸಂಬಂಧಿತವಾಗಿ ಸರಿಪಡಿಸಿದ ಮುಖದ ಮುಸುಕುಗಳನ್ನು ಸಹ ಪಡೆದುಕೊಳ್ಳಸಾಧ್ಯವಿದೆ.
ತದನಂತರ ಈಜುರೆಕ್ಕೆಗಳು ಬರುತ್ತವೆ, ಪ್ರತಿ ಪಾದಕ್ಕೆ ಒಂದು. ಅವು ಸಾಮಾನ್ಯವಾಗಿ ರಬ್ಬರ್ ಮತ್ತು ಹುಟ್ಟಿನಂತಹ ಸಾಧನಗಳಿಂದ ಮಾಡಲ್ಪಟ್ಟಿದ್ದು ಈಜಾಡುವುದರಲ್ಲಿ ವೇಗವನ್ನು ಕೊಡಲಿಕ್ಕಾಗಿ ಕಾಲಿಗೆ ಧರಿಸಲಾಗುತ್ತದೆ. ಆಯ್ಕೆ ಮಾಡಲಿಕ್ಕಾಗಿ ಎರಡು ವಿಧಗಳಿವೆ: ಪೂರ್ಣಪಾದದ ರೀತಿಯದ್ದು ಮತ್ತು ತೆರೆದಹಿಮ್ಮಡಿಯ ವಿನ್ಯಾಸದ್ದು. ಹೆಚ್ಚು ಆಳವಾದ ನೀರನ್ನು ತಲಪುವುದಕ್ಕೆ ಮೊದಲು ಚಿಪ್ಪುಜಂತುಗಳಿಂದಾವೃತವಾದ ಬಂಡೆಗಳು ಅಥವಾ ಆಳವಿಲ್ಲದ ಜಲಪ್ರದೇಶದ ಹವಳ ಪದರಗಳ ಸುತ್ತಲೂ ನಡೆಯುವ ಕಾರಣದಿಂದ ನಿಮಗೆ ಪಾದರಕ್ಷೆಯ ಅಗತ್ಯವಿರುವುದಾದರೆ, ಆಗ ನಿಮಗೆ ತೆರೆದಹಿಮ್ಮಡಿಯ ರೀತಿಯದ್ದು ಬೇಕಾಗುತ್ತದೆ. ಇದು ಸರಳವಾಗಿ ನಿಮ್ಮ ಪಾದರಕ್ಷೆಗಳ ಮೇಲೆ ನಿಮ್ಮ ಈಜುಪಾದರಕ್ಷೆಗಳನ್ನು ಹಾಕಿಕೊಳ್ಳುವಂತೆ ಮತ್ತು ಸ್ನಾರ್ಕೆಲ್ ಮುಳುಗುವಿಕೆಯನ್ನು ಮಾಡುವಂತೆ ನಿಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಪೂರ್ಣಪಾದದ ಈಜುರೆಕ್ಕೆಯು ನೇರವಾಗಿ ನಿಮ್ಮ ಪಾದಕ್ಕೆ ಜೋಡಣೆಯಾಗುತ್ತದೆ ಮತ್ತು ಈಜುಪಾದರಕ್ಷೆಗೆ ಕೂಡಿಸಿ ಇತರ ಯಾವುದೇ ಪಾದರಕ್ಷೆಯ ಅಗತ್ಯವಿಲ್ಲದಿರುವಲ್ಲಿ ಉಪಯೋಗಿಸಸಾಧ್ಯವಿದೆ.
ಕೊನೆಯದಾಗಿ ಸ್ವತಃ ಸ್ನಾರ್ಕೆಲ್. ಅತ್ಯಂತ ಪ್ರಾಮುಖ್ಯವಾದ ವೈಶಿಷ್ಟ್ಯವು ಉಸಿರಾಟದ ಸುಗಮತೆಯಾಗಿರುವುದರಿಂದ, ವಿಶೇಷವಾಗಿ ಆರಂಭಿಗನಿಗೆ, ಒಂದು ಸರಳವಾದ ಜೆ-ಆಕಾರದ ಸ್ನಾರ್ಕೆಲ್ ಅತ್ಯುತ್ತಮ. ಅತ್ಯಂತ ಹೆಚ್ಚು ಅಂಗೀಕೃತವಾದ ವಿಧವು ಕಡಿಮೆಪಕ್ಷ 2 ಸೆಂಟಿಮೀಟರ್ಗಳಷ್ಟು ವ್ಯಾಸ ಮತ್ತು 30ರಿಂದ 35 ಸೆಂಟಿಮೀಟರ್ಗಳಷ್ಟು ಉದ್ದದ ನಾಳವ್ಯಾಸವನ್ನು ಹೊಂದಿರಬೇಕೆಂದು ಮುಳುಗುವಿಕೆಯ ಕುರಿತಾದ ಒಂದು ಪ್ರಯೋಗ ಪುಸ್ತಕವು ಸಲಹೆ ನೀಡುತ್ತದೆ.
ಸ್ನಾರ್ಕೆಲ್ ಉಪಯೋಗಿಸಲಿಕ್ಕಾಗಿ ಸಹಾಯಕಾರಿ ಸೂಚನೆಗಳು
ಈಗಾಗಲೇ ವಿವರಿಸಲ್ಪಟ್ಟಂತೆ, ನೀರಿನ ಮೇಲ್ಮೈಯ ಮೇಲೆ ಈಜಾಡುವಾಗ, ನಿಮ್ಮ ತಲೆಯನ್ನು ಮೇಲಕ್ಕೆತ್ತದೆ ಉಸಿರಾಡುವಂತೆ ಸ್ನಾರ್ಕೆಲ್ ನಿಮ್ಮನ್ನು ಅನುಮತಿಸುತ್ತದೆ. ಆದರೆ ಮೇಲ್ಮೈಯ ಕೆಳಗೆ ಮುಳುಗುವುದರ ಕುರಿತೇನು? ಇದು ಸಹ ಸಾಧ್ಯವಿದೆ, ಆದರೆ ಮೊದಲಾಗಿ ನೀವು ಪೂರ್ಣವಾಗಿ, ದೀರ್ಘವಾದ ಶ್ವಾಸವನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಒಮ್ಮೆ ಸ್ನಾರ್ಕೆಲ್ ಮೇಲ್ಮೈಯ ಕೆಳಗೆ ಹೋದಕೂಡಲೆ ಅದರ ಒಳಗೆ ನೀರು ಹೋಗುವುದು ನಿಶ್ಚಯ. ಮುಳುಗಾಳುವೊಬ್ಬನು ಮೇಲಕ್ಕೆ ಎದ್ದಾಗ, ಅವನ ಸ್ನಾರ್ಕೆಲ್ನಿಂದ ಅನೇಕವೇಳೆ ನೀರಿನ ಧಾರೆಯು ರಭಸವಾಗಿ ಹೊರಬರುವುದನ್ನು ಬಹುಶಃ ನೀವು ನೋಡಿದ್ದೀರಿ. ನೀರನ್ನು ಬರಿದುಮಾಡುವ ಸ್ಫೋಟಕ ವಿಧಾನವೆಂದು ಇದನ್ನು ಕರೆಯಲಾಗುತ್ತದೆ. ವಾಸ್ತವವಾಗಿ ಇದು ಕಲಿಯಲು ಸುಲಭ, ಆದರೆ ಒಂದು ಬಲವಾದ ಒತ್ತುಗಾಳಿಯನ್ನು ಅಗತ್ಯಪಡಿಸುತ್ತದೆ. ಆದುದರಿಂದ ನೀವು ಸ್ನಾರ್ಕೆಲನ್ನು ಯಶಸ್ವಿಕರವಾಗಿ ಬರಿದು ಮಾಡಬೇಕಾದಲ್ಲಿ, ನೀವು ಇನ್ನೂ ನಿಮ್ಮ ಶ್ವಾಸಕೋಶಗಳಲ್ಲಿ ಸಾಕಷ್ಟು ಗಾಳಿಯೊಂದಿಗೆ ನೀರಿನ ಮೇಲ್ಮೈಗೆ ಬರಬೇಕು.
ಕೆಲವರು ಪಲ್ಲಟನ ವಿಧಾನವನ್ನು ಹೆಚ್ಚು ಉತ್ತಮವಾದದ್ದಾಗಿ ಪರಿಗಣಿಸುತ್ತಾರೆ, ಆದರೆ ಅದಕ್ಕೆ ಹೆಚ್ಚು ಅಭ್ಯಾಸವು ಬೇಕು. ಈ ವಿಧಾನವು ಹೇಗೆ ಕಾರ್ಯನಡಿಸುತ್ತದೆ? ಮುಳುಗಿದ ನಂತರ ನೀವು ಮೇಲ್ಮೈಯನ್ನು ಸಮೀಪಿಸಿದಂತೆ, ನೇರವಾಗಿ ಮೇಲಕ್ಕೆ ನೋಡಿರಿ. ನಿಮ್ಮ ಸ್ನಾರ್ಕೆಲ್ನ ತುದಿಯು ಈಗ ಸ್ವಲ್ಪಮಟ್ಟಿಗೆ ಕೆಳಮುಖವಾಗಿ ತೋರತಕ್ಕದ್ದು. ಈ ಭಂಗಿಯಲ್ಲಿ ನಿಮ್ಮ ತಲೆಯನ್ನಿಡುವುದರಿಂದ, ನಿಮ್ಮ ಸ್ನಾರ್ಕೆಲ್ನ ಒಳಗೆ ತುಂಬಿರುವ ನೀರನ್ನು ಸ್ಥಳಾಂತರಿಸಲು ಕೇವಲ ಒಂದು ಸಣ್ಣ ಒತ್ತುಸಿರನ್ನು ಮಾತ್ರ ಇದು ತೆಗೆದುಕೊಳ್ಳುತ್ತದೆ. ನಿಮ್ಮ ಮುಖವು ಮೇಲ್ಮೈಯನ್ನು ಭೇದಿಸಲಿಕ್ಕಿರುವ ವರೆಗೆ ನಿಮ್ಮ ತಲೆಯನ್ನು ಈ ಭಂಗಿಯಲ್ಲಿಡಿರಿ. ಆ ಕ್ಷಣದಲ್ಲಿ, ನಿಮ್ಮ ಮುಖವನ್ನು ಕೆಳಕ್ಕೆ ತಿರುಗಿಸಿ ಉಸಿರಾಡಿರಿ. ಬರಿದಾದ ಸ್ನಾರ್ಕೆಲ್ ಖಾಲಿಯಾಗಿ ಉಳಿಯುವುದು, ಮತ್ತು ನೀವು ನಿರಾಯಾಸವಾಗಿ ಉಸಿರಾಡಶಕರ್ತೆಂಬುದನ್ನು ನೀವು ಕಂಡುಕೊಳ್ಳವಿರಿ.
ಸಾಂದರ್ಭಿಕವಾಗಿ ನೀವು ಇನ್ನೂ ಮೇಲ್ಮೈಯ ಮೇಲಿರುವಾಗ ಹಾದುಹೋಗುತ್ತಿರುವ ಅಲೆಯೊಂದರಿಂದ ನೀರು ಸ್ನಾರ್ಕೆಲ್ನ ಒಳಗೆ ಸೇರುವುದಾದರೆ ಗಾಬರಿಗೊಳ್ಳಬೇಡಿರಿ. ಇದು ಸಂಭವಿಸುವಲ್ಲಿ, ಬಿರುಸಾಗಿ ಗಾಳಿಯನ್ನು ಊದಿರಿ, ಸ್ನಾರ್ಕೆಲ್ ಎಲ್ಲ ನೀರಿನಿಂದ ಮುಕ್ತವಾಗುವುದು.
ನಿಮ್ಮ ಸ್ನಾರ್ಕೆಲ್ ಮುಳುಗುವಿಕೆಯನ್ನು ಅನುಭೋಗಿಸಿರಿ
ಮೇಲ್ಮೈಯ ಮೇಲಿರುವಾಗ, ಸ್ತಿಮಿತವಾಗಿ—ದೀರ್ಘವಾಗಿ ಉಸಿರನ್ನೆಳೆದುಕೊಳ್ಳಲು, ತದನಂತರ ದೃಢವಾಗಿ ಹೊರಬಿಡಲು—ಉಸಿರಾಡುವಂತೆ ಕಲಿಯಲು ಪ್ರಯತ್ನಿಸಿರಿ. ಇದರ ಪ್ರಯೋಜನಗಳನ್ನು ನಿಮ್ಮ ಶ್ವಾಸಕೋಶಗಳು ಅನುಭವಿಸುವವು. ಎಷ್ಟು ದೂರ ಅಥವಾ ಎಷ್ಟು ವೇಗವಾಗಿ ನೀವು ಈಜುತ್ತೀರಿ ಎಂಬುದಲ್ಲ, ಬದಲಾಗಿ ನೀವು ಹಾದುಹೋಗುವಾಗ ಎಷ್ಟು ಹೆಚ್ಚನ್ನು ನೀವು ನೋಡುತ್ತೀರಿ ಮತ್ತು ಅನ್ವೇಷಿಸುತ್ತೀರಿ ಎಂಬುದು ಆನಂದಕರವಾದ ಸ್ನಾರ್ಕೆಲ್ ಮುಳುಗುವಿಕೆಯ ರಹಸ್ಯವಾಗಿದೆ ಎಂಬುದನ್ನು ನೆನಪಿನಲ್ಲಿಡಿರಿ. ಮೇಲ್ಮೈಯ ಕೆಳಗೆ ಮುಳುಗಲು ನೀವು ಬಯಸುವಾಗ, ವಿಶ್ರಾಂತಿ ಪಡೆಯಲು ಹಾಗೂ ಸಾಧ್ಯವಿರುವಷ್ಟು ಹೆಚ್ಚು ಆಮ್ಲಜನಕವನ್ನು ಕಾಪಾಡಿಕೊಳ್ಳಲು ಕಲಿಯಿರಿ, ಏಕೆಂದರೆ ಆಗ ನೀವು ಹೆಚ್ಚು ಸಮಯದ ವರೆಗೆ ಕೆಳಗೆ ಉಳಿಯಲು ಶಕ್ತರಾಗುವಿರಿ. ಆದರೆ ಸಹನೆಯ ಯಾವುದೇ ದಾಖಲೆಗಳನ್ನು ಸ್ಥಾಪಿಸಲು ಪ್ರಯತ್ನಿಸಬೇಡಿರಿ!
ನೀವು ಜಾರಿಕೊಂಡು ಹೋದಂತೆ, ನಿಮ್ಮ ಕೈಗಳು ನಿಮ್ಮ ಪಕ್ಕದಿಂದ ಅಪ್ರಯತ್ನವಾಗಿ ಹೊಡೆದುಕೊಂಡು ಹೋಗಲಿ. ಉದ್ದವಾದ, ಸ್ತಿಮತವಾದ ಹೊಡೆತಗಳೊಂದಿಗೆ, ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಓರೆಯಾಗಿಡುತ್ತಾ, ನಿಮ್ಮ ಈಜುಪಾದರಕ್ಷೆಗಳನ್ನು ಮಾತ್ರ ಉಪಯೋಗಿಸಿರಿ. ಆರಂಭದಲ್ಲಿ, ಇದನ್ನು ನಿರಾಯಾಸವಾಗಿ ಮತ್ತು ನಿರರ್ಗಳವಾಗಿ ಮಾಡಲು ಏಕಾಗ್ರತೆ ಬೇಕಾಗುತ್ತದಾದರೂ, ಸ್ವಲ್ಪ ಸಮಯದ ಬಳಿಕ ಅದು ಸ್ವಯಂಚಾಲಿತವಾಗಿ ಪರಿಣಮಿಸುತ್ತದೆ. ಆದರೆ ನಿಮ್ಮ ಮುಖದ ಮುಸುಕಿಗೆ ಮಂಜು ಮುಸುಕುತ್ತಾ ಇರುವುದಾದರೆ ನೀವೇನು ಮಾಡಬೇಕು? ಮುಸುಕನ್ನು ಹಾಕಿಕೊಳ್ಳುವುದಕ್ಕೆ ಮೊದಲು ಗಾಜಿನ ಮೇಲೆ ಸ್ವಲ್ಪ ಉಗುಳನ್ನು ಉಜ್ಜುವುದು ಇದನ್ನು ತಡೆಗಟ್ಟುವ ಒಂದು ಸರಳ ವಿಧಾನವಾಗಿದೆ. ಒಂದು ಅಥವಾ ಎರಡು ಕ್ಷಣಗಳ ಬಳಿಕ ಉಗುಳನ್ನು ತೊಳೆದುಬಿಡಿರಿ, ಮತ್ತು ಬಹಳ ದೀರ್ಘ ಸಮಯದ ವರೆಗೆ ಗಾಜು ಸ್ವಚ್ಛವಾಗಿ ಉಳಿಯುವುದೆಂದು ನೀವು ಕಂಡುಕೊಳ್ಳುವಿರಿ.
ಕೆಲವೊಮ್ಮೆ ಮುಳುಗುವಿಕೆಯ ಸಮಯದಲ್ಲಿ ನಿಮ್ಮ ಮಧ್ಯ ಕಿವಿಯಲ್ಲಿ ನಿಮಗೆ ನೋವಿನ ಅನಿಸಿಕೆಯಾಗಬಹುದು. ಇದು ಮಧ್ಯ ಕಿವಿಯ ಹಿಂಡಿಕೆಯೆಂದು ಕರೆಯಲ್ಪಡುತ್ತದೆ. ನಿಮ್ಮ ಕಿವಿಯ ಹರೆಗಳ ಸುತ್ತಲೂ ವ್ಯತ್ಯಾಸಾತ್ಮಕವಾದ ಒತ್ತಡದಿಂದ ಇದು ಉಂಟುಮಾಡಲ್ಪಡುತ್ತದೆ. ಸಾಮಾನ್ಯವಾಗಿ, ಇದು ನೀವು ಒಂದರಿಂದ ಎರಡು ಮೀಟರ್ಗಳಷ್ಟು ಕೆಳಕ್ಕೆ ಇಳಿದ ಬಳಿಕ ಆರಂಭವಾಗುತ್ತದೆ. ಈ ನೋವನ್ನು ಅಲಕ್ಷಿಸಬೇಡಿರಿ ಮತ್ತು ಅದು ಉತ್ತಮವಾಗುವುದೆಂದು ನಿರೀಕ್ಷಿಸುತ್ತಾ ಕೆಳಕ್ಕೆ ಇಳಿಯಲು ಮುಂದುವರಿಯದಿರಿ. ನೀವು ಹೆಚ್ಚು ಆಳಕ್ಕೆ ಹೋದಂತೆ ಅದು ಹೆಚ್ಚು ತೀವ್ರವಾಗುತ್ತದೆ, ಮತ್ತು ನೀವು ಕಿವಿಯ ಹರೆಯನ್ನು ಬಿರಿಸಿಕೊಳ್ಳಲೂ ಸಾಧ್ಯವಿದೆ. ಯಾವುದೇ ನೋವಿನ ಅನಿಸಿಕೆಯಾಗುವುದಕ್ಕೆ ಮೊದಲು ಪ್ರತಿಯೊಂದು ಮೀಟರ್ ಅಥವಾ ಅದಕ್ಕಿಂದ ಕಡಿಮೆ ಅಂತರದಲ್ಲಿ ಒತ್ತಡವು ಸಮೀಕರಿಸಲ್ಪಡಬೇಕೆಂದು ಮುಳುಗಾಳುಗಳ ಪತ್ರಿಕೆಯಾದ ಪೇಡೀ ಡೈವರ್ ಮ್ಯಾನುವಲ್ ಶಿಫಾರಸ್ಸು ಮಾಡುತ್ತದೆ. ನಿಮ್ಮ ಮೂಗನ್ನು ಇರುಕಿಸುವ ಮೂಲಕ ಮತ್ತು ಮೆತ್ತಗೆ ಏದುಸಿರು ಬಿಡುವ ಮೂಲಕ ಇದನ್ನು ಮಾಡಲಾಗುತ್ತದೆ. ಇದಕ್ಕಾಗಿಯೇ ಮುಸುಕಿನ ಮೇಲೆ ಒಂದು ಸಮೀಕಾರಕವು ಇರಬೇಕಾದ ಅಗತ್ಯವಿದೆ, ಇದರಿಂದ ಮುಸುಕು ನಿಮ್ಮ ಮುಖದ ಮೇಲೆ ಅಚುಕ್ಚಟಾಗ್ಟಿ ಜೋಡಣೆಯಾಗಿರುವಾಗಲೇ ನೀವು ನಿಮ್ಮ ಮೂಗನ್ನು ಇರುಕಿಸಬಲ್ಲಿರಿ. ಅನುಭವದಿಂದ ಈ ಕಾರ್ಯವಿಧಾನವು ಬಹಳ ಸುಲಭವಾಗುತ್ತದೆ, ಬಹುಮಟ್ಟಿಗೆ ಅರ್ಜಿತ ಸ್ವಭಾವವಾಗುತ್ತದೆ.
ನೋವಿನ ಅನಿಸಿಕೆಯಾದ ಕೂಡಲೆ, ಮೇಲ್ಮೈಗೆ ಬರುವುದು ಅತ್ಯುತ್ತಮ, ಏಕೆಂದರೆ ಅಸೌಖ್ಯವು ಆರಂಭವಾದ ಬಳಿಕ, ಸಮೀಕರಿಸಲಿಕ್ಕಾಗಿ ಮಾಡುವ ಸತತ ಪ್ರಯತ್ನಗಳು ನಿಷ್ಫಲವಾಗುವವು. ವಿನೋದದ ಒಂದು ರೂಪದೋಪಾದಿ ಸ್ನಾರ್ಕೆಲ್ ಮುಳುಗುವಿಕೆಯು ಹಿತಕರವೂ, ಶೈಕ್ಷಣಿಕವೂ, ಉಲ್ಲಾಸಗೊಳಿಸುವಂತಹದ್ದೂ ಆಗಿದೆ. ಪ್ರಾಯೋಗಿಕವಾಗಿ ಎಲ್ಲ ವಯೋಮಿತಿಗಳವರಿಗೆ, ವ್ಯಾಯಾಮ, ಸ್ವಚ್ಛವಾದ ಗಾಳಿ, ಮತ್ತು ಸೂರ್ಯಪ್ರಕಾಶವನ್ನು ಸಂಯೋಜಿಸಲು ಇದೊಂದು ಅತ್ಯುತ್ತಮ ವಿಧಾನವಾಗಿದೆ. ಅಂತಹ ಪ್ರವೃತ್ತಿಯುಳ್ಳವರಿಗೆ, ಅಂತರ್ಜಲ ಸಮುದ್ರ ಜೀವಿಗಳ ಒಂದು ಚಿಕ್ಕ ಸಂಖ್ಯೆಯನ್ನು ಗುರುತಿಸಲು ಕಲಿಯುವುದು ಮತ್ತು ಅವುಗಳ ಹೆಸರುಗಳನ್ನು ನಮೂದಿಸುವುದು ಸಹ, ಸ್ನಾರ್ಕೆಲ್ ಮುಳುಗುವಿಕೆಯನ್ನು ಒಂದು ಪಂಥಾಹ್ವಾನವನ್ನಾಗಿ ಮಾಡುತ್ತದೆ. ಆದರೂ, ಫಿಜಿಯಲ್ಲಿ ಈಗತಾನೇ ಸ್ನಾರ್ಕೆಲ್ ಮುಳುಗುವಿಕೆಯಿಂದ ಹಿಂದಿರುಗಿರುವ ಟೋನಿಯಂತಹ ಅಧಿಕಾಂಶ ಜನರಿಗೆ, “ಆಶ್ಚರ್ಯಕರ ಬಣ್ಣಗಳ ಇನ್ನೊಂದು ಲೋಕದಲ್ಲಿರುವುದರ” ಆನಂದವೇ ಸ್ನಾರ್ಕೆಲ್ ಮುಳುಗುವಿಕೆಯನ್ನು ಪ್ರಯೋಜನಕಾರಿಯೂ ಸಂತೋಷಕರವೂ ಆದದ್ದಾಗಿ ಮಾಡುತ್ತದೆ. ಅವನ ಗೆಳತಿಯಾದ ಲೀನ ಒಪ್ಪಿಕೊಳ್ಳುವುದು: “ನನ್ನ ಸುತ್ತಲೂ ಆವರಿಸಿದ್ದ ಸೌಂದರ್ಯದಿಂದ ನಾನು ಎಷ್ಟು ಉದ್ರೇಕಗೊಂಡಿದ್ದೆನೆಂದರೆ, ನಾನೆಲ್ಲಿದ್ದೆನೆಂಬುದನ್ನು ನಾನು ಮರೆತೆ!”
ಸ್ಕೂಬ ಮುಳುಗುವಿಕೆಯ ಕುರಿತೇನು?
ಒಳ್ಳೆಯ ಈಜುಗಾರರಾಗಿರುವವರಿಗೆ ಮತ್ತು ಹೆಚ್ಚು ಆಳವಾದ ನೀರಿನ ಅದ್ಭುತಗಳಿಂದ ಆಕರ್ಷಿಸಲ್ಪಡುವವರಿಗೆ ಅಥವಾ ಬಹುಶಃ ಅಂತರ್ಜಲ ಛಾಯಾಚಿತ್ರಗ್ರಹಣವನ್ನು ಪ್ರಯತ್ನಿಸಲು ಬಯಸುವವರಿಗೆ, ಸ್ಕೂಬ ಮುಳುಗುವಿಕೆಯು ಮುಂದಿನ ಹೆಜ್ಜೆಯಾಗಿದೆ. ನೀವು ಒಳ್ಳೆಯ ಆರೋಗ್ಯದಿಂದಿರುವುದಾದರೆ, ನಿಮ್ಮ ಸಲಕರಣೆಯ ಉತ್ತಮ ಕಾಳಜಿಯನ್ನು ತೆಗೆದುಕೊಳ್ಳುವುದಾದರೆ, ಮತ್ತು ಮೂಲಭೂತ ನಿಯಮಗಳನ್ನು ಅನುಸರಿಸುವುದಾದರೆ, ನೀವು ದೃಢವಿಶ್ವಾಸದಿಂದ ನೀರನ್ನು ಪ್ರವೇಶಿಸಬಹುದು. ಆದಾಗಲೂ, ಮೊದಲಾಗಿ ಸರಿಯಾದ ಒಂದು ಪಾಠ ಕ್ರಮವನ್ನು ತೆಗೆದುಕೊಳ್ಳುವ, ಹಾಗೂ ಅಗತ್ಯವಿದ್ದಲ್ಲಿ ಹೆಸರುವಾಸಿಯಾದ ಶಿಕ್ಷಕರೊಬ್ಬರಿಂದ ಒಂದು ಪರವಾನೆ (ಲೈಸನ್ಸ್)ಯನ್ನು ಪಡೆದುಕೊಂಡಿರುವ ಹೊರತು ನೀವು ಎಂದಿಗೂ ಸ್ಕೂಬ ಮುಳುಗುವಿಕೆಗೆ ಹೋಗಬಾರದು. ಆಗಲೂ, ನಿಮ್ಮ ಪರವಾನೆಯು ಅನುಮತಿಸುವ ಆಳದ ಪರಿಮಿತಿಗಳನ್ನು ನೀವು ಮೀರಬಾರದು. ಮತ್ತು ಯಾವಾಗಲೂ ಒಬ್ಬ ಜೊತೆಗಾರನೊಂದಿಗೆ ಮುಳುಗಿರಿ. ಆಸ್ಟ್ರೇಲಿಯದಂತಹ ಕೆಲವು ದೇಶಗಳಲ್ಲಿ, ಅಂತಹ ಒಂದು ಪಾಠ ಕ್ರಮವನ್ನು ಆರಂಭಿಸುವುದಕ್ಕೆ ಮೊದಲು ನೀವು ಒಂದು ಮುಳುಗು ಸಂಬಂಧಿತ ವೈದ್ಯಕೀಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದನ್ನು ನಿಯಮವು ಅಗತ್ಯಪಡಿಸುತ್ತದೆ.
ಸ್ಕೂಬ ಸಲಕರಣೆಯು ಬಹಳ ದುಬಾರಿಯಾಗಿರಸಾಧ್ಯವಿದೆ. ಸ್ನಾರ್ಕೆಲ್ ಮುಳುಗುವಿಕೆಗಾಗಿ ಉಪಯೋಗಿಸಲ್ಪಡುವ ಮುಖ್ಯ ಸಲಕರಣೆಗಳಾದ, ಮುಖದ ಮುಸುಕು, ಈಜುರೆಕ್ಕೆಗಳು, ಮತ್ತು ಸ್ನಾರ್ಕೆಲ್ನ ಜೊತೆಗೆ, ಬಹುಶಃ ಬೆಚ್ಚನೆಯ, ಉಷ್ಣವಲಯದ ನೀರುಗಳನ್ನು ಹೊರತಾಗಿ ನಿಮಗೆ ಬಹುಮಟ್ಟಿಗೆ ವೆಟ್ ಸೂಟ್ನ ಅಗತ್ಯವಿರುತ್ತದೆ ನಿಶ್ಚಯ. ಒಂದು ಪವ್ಲನತೆ ನಿಯಂತ್ರಿಸುವ ಸಾಧನ, ಒಂದು ವೆಯ್ಟ್ ಬೆಲ್ಟ್, ಒಂದು ಕತ್ತಿ, ಒಂದು ಉಸಿರಾಟದ ಉಪಕರಣ (ನಿಮ್ಮ ಜೊತೆಗಾರನು ತನ್ನ ಗಾಳಿ ಸರಬರಾಯಿಯಿಂದ ತೊಂದರೆಗಳಿಗೆ ಸಿಕ್ಕಿಕೊಳ್ಳುವಲ್ಲಿ ಅವನಿಗಾಗಿ ಒಂದು ಹೆಚ್ಚಿಗೆ), ಮತ್ತು ಸ್ಕೂಬ ಟ್ಯಾಂಕ್ ಸಹ ನಿಮಗೆ ಅಗತ್ಯವಾಗಿದೆ. ಒಂದು ಮುಳುಗು ಗಡಿಯಾರ, ಒಂದು ಆಳಮಾಪಕ, ಮತ್ತು ನಿಮ್ಮಲ್ಲಿ ಎಷ್ಟು ಗಾಳಿಯಿದೆ ಎಂಬುದನ್ನು ನೀವು ತಿಳಿದುಕೊಳ್ಳಲಿಕ್ಕಾಗಿ, ನಿಮ್ಮ ಟ್ಯಾಂಕ್ಗಾಗಿ ನೀರೊಳಗೆ ಮುಳುಗಸಾಧ್ಯವಿರುವ ಒಂದು ಒತ್ತಡಮಾಪಕಗಳಂತಹ ಅಗತ್ಯವಾದ ಉಪಕರಣಗಳು ಸಹ ನಿಮ್ಮಲ್ಲಿರಬೇಕು. ಜನಪ್ರಿಯವಾದ ಅನೇಕ ಮುಳುಗು ತಾಣಗಳಲ್ಲಿ, ಈ ಸಲಕರಣೆಯನ್ನು ಸುಲಭವಾಗಿ ಬಾಡಿಗೆಗೆ ಪಡೆಯಸಾಧ್ಯವಿದೆ, ನೀವು ಆಗಾಗ್ಗೆ ಮುಳುಗದಿರುವುದಾದರೆ, ನಿಮ್ಮ ಸ್ವಂತದ್ದನ್ನು ಖರೀದಿಸುವುದಕ್ಕೆ ಬದಲಾಗಿ ಅದು ಅನೇಕವೇಳೆ ಹೆಚ್ಚು ಮಿತವ್ಯಯದ್ದಾಗಿ ಪರಿಣಮಿಸುತ್ತದೆ.
ಮಹಾಸಾಗರ ಮತ್ತು ಅದರ ಜೀವಿಗಳಿಗಾಗಿ ಗಣ್ಯತೆ
“ಕ್ವೀನ್ಸ್ಲ್ಯಾಂಡ್ನ ಸನ್ಶೈನ್ ಕೋಸ್ನ್ಟ ಕ್ಯಾಲಾಂಡ್ರದ ಬಳಿಯ ಬಂಡೆಯ ಸಾಲಿನ ಮೇಲೆ, ಸುಮಾರು ಎರಡು ಮೀಟರ್ಗಳ ದೂರದಿಂದ ವರ್ಣಭರಿತವಾದ ಒಂದು ಚಿಟ್ಟೆ ಮೀನನ್ನು ವೀಕ್ಷಿಸುತ್ತಾ ನಾನು ಸ್ನಾರ್ಕೆಲ್ ಮುಳುಗುವಿಕೆ ಮಾಡುತ್ತಿದ್ದೆ,” ಎಂದು ಸ್ನಾರ್ಕೆಲ್-ಅತ್ಯುತ್ಸಾಹಿ ಪೀಟರ್ ಜ್ಞಾಪಿಸಿಕೊಳ್ಳುತ್ತಾನೆ. “ಆಗ, ಕೂಡಲೆ, ಹೊಳೆಯುತ್ತಿರುವ ಸ್ಟೀಲ್ನ ಈಟಿಯೊಂದು ಥಟ್ಟನೆ ಗೋಚರಿಸಿತು ಮತ್ತು ಹಿಂಸಾತ್ಮಕವಾದ ದಡ್ ಶಬ್ದದೊಂದಿಗೆ ನಿಂತುಹೋಯಿತು. ಆ ಸಣ್ಣ ಮೀನು ವ್ಯರ್ಥವಾಗಿ ಹೋರಾಡಿತು, ಅದು ಬಂಡೆಗೆದುರಾಗಿ ಕಿವಿರುಗಳ ಮೂಲಕ ಇರಿಯಲ್ಪಟ್ಟಿತು. ಮನೋಹರವಾಗಿದ್ದ ಆ ಮೀನನ್ನು ಕೇವಲ ಗುರಿಯ ಅಭ್ಯಾಸಕ್ಕಾಗಿ ತಾನು ಕೊಂದಿದ್ದೆನೆಂದು ಅದಕ್ಕೆ ಜವಾಬ್ದಾರನಾದ ತರುಣನು ಒಪ್ಪಿಕೊಂಡನು! ತಿನ್ನಲು ಅದು ತೀರ ಸಣ್ಣದಾಗಿತ್ತು.” ಅಸಂತೋಷಕರವಾಗಿ, ಅವಿಚಾರದ ಅಂತಹ ಕೃತ್ಯಗಳು ಲೋಕದಾದ್ಯಂತ ಅಧಿಕಗೊಳ್ಳುತ್ತಿವೆ.
ಮಾಲಿನ್ಯವು ಸಹ ತನ್ನ ಗುರುತನ್ನು ಬಿಟ್ಟಿದೆ. ಜನಪ್ರಿಯ ತಾಣಗಳು ಅನೇಕವೇಳೆ, ಪ್ಲ್ಯಾಸ್ಟಿಕ್ ಚೀಲಗಳು ಮತ್ತು ಪಾನೀಯದ ಉಪಯೋಗಿಸಲ್ಪಟ್ಟ ಕ್ಯಾನ್ಗಳಿಂದ ಸೆತ್ತೆಗೂಡಿದ ಕಸದ ರಾಶಿಯನ್ನು ಹೋಲುವವುಗಳಾಗಿ ಪರಿಣಮಿಸುತ್ತಿವೆ. ಕೆಲವು ದೇಶಗಳಲ್ಲಿ, ನಾಶಕಾರಕವಾದ ರಾಸಾಯನಿಕ ಪ್ರವಹಿಸುವಿಕೆಯೂ ಹೆಚ್ಚುತ್ತಿರುವ ಒಂದು ಸಮಸ್ಯೆಯಾಗಿದೆ. ಹೊಲಸು ಮತ್ತು ಕಸವು ಹೆಚ್ಚಾದಂತೆ, ಮೀನು ಬೇರೆಲ್ಲಿಗಾದರೂ ಸ್ಥಳಬದಲಾಯಿಸುತ್ತದೆ, ಮತ್ತು ಹವಳ ಸಾಯುತ್ತದೆ.
ಸ್ಕೂಬ ಮುಳುಗುವಿಕೆ ಮಾಡುವಾಗ ಯಾವಾಗಲೂ ಕೈಗವಸನ್ನು ಹಾಕಿಕೊಳ್ಳುವುದು ಒಂದು ಒಳ್ಳೆಯ ಹವ್ಯಾಸವಾಗಿದೆ. ಆಗಲೂ, ನೀವೇನನ್ನು ಸ್ಪರ್ಶಿಸುತ್ತೀರಿ ಎಂಬುದರ ಕುರಿತು ಜಾಗರೂಕರಾಗಿರುವುದು ಪ್ರಯೋಜನಕರವಾದದ್ದಾಗಿದೆ. ಉದಾಹರಣೆಗೆ, ಸರ್ವದಾ ಇರುವ ಸಮುದ್ರದ ಚಿಪ್ಪು ಪ್ರಾಣಿಯ ಸೂಜಿಯಂತಹ ಮುಳ್ಳುಗಳು ಅರಕ್ಷಿತ ಕೈಗಳನ್ನು ಬೇಧಿಸಲು ಶಕವ್ತಾಗಿವೆ. ಮತ್ತು ಭ್ರಾಮಕವಾದ ಚಿಟ್ಟೆ ಕಾಡ್ ಮೀನು, ಸಣ್ಣದಿರುವುದಾದರೂ, ಅದು ತನ್ನ ಪ್ರಕಾಶಮಾನವಾದ ಕೆಂಪು ಮತ್ತು ಬಿಳಿಯ ಗೆರೆಗಳನ್ನು ಗರ್ವದಿಂದ ಪ್ರದರ್ಶಿಸುವಾಗ, ‘ತೀರ ಸಮೀಪಕ್ಕೆ ಬರಬೇಡಿರಿ. ಇದು ನನ್ನ ಕ್ಷೇತ್ರ!’ ಎಂದು ಎಚ್ಚರಿಕೆ ನೀಡುತ್ತಿರುವಂತೆ ತೋರುತ್ತದೆ. ಅದರ ಕುಚ್ಚುಪಟ್ಟಿಗಳ ನಡುವೆ ವಂಚನಾತ್ಮಕವಾಗಿ ಹುದುಗಿಕೊಂಡಿರುವ ಉದ್ದವಾದ ಮುಳ್ಳುಗಳು, ವಿಷಪೂರಿತವಾದ ಲೋಳೆಯಿಂದ ಆವರಿಸಲ್ಪಟ್ಟಿವೆ. ಅವುಗಳ ವಿರುದ್ಧವಾಗಿ ಉಜ್ಜಿಕೊಂಡು ಹೋಗುವುದೇ ವೇದನಾಭರಿತವಾಗಿರಸಾಧ್ಯವಿದೆ.
ಇತರ ಜೀವಿಗಳು ಕಂಡುಹಿಡಿಯಲು ಬಹಳ ಕಷ್ಟಕರವಾಗಿವೆ. ಉದಾಹರಣೆಗಾಗಿ, ವಿಕಾರವಾದ ಸಮುದ್ರ ಡ್ರ್ಯಾಗನ್ ಕಣ್ಣಿಗೆ ಮಣ್ಣೆರಚುವುದರಲ್ಲಿ ಪ್ರತಿಭಾಶಾಲಿಯಾಗಿದೆ. ಇದು ಸಸ್ಯದ ಒಂದು ಭಾಗದಂತೆಯೇ ಕಾಣುತ್ತಿದ್ದು, ಯಾವುದೇ ಮುಳುಗಾಳುವಿನ ಕಣ್ಣಿನ ಚುರುಕುತನವನ್ನು ಪಂಥಾಹ್ವಾನಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಮೃದ್ವಂಗಿಯಾದ ಸಮುದ್ರ ಗೊಂಡೆಹುಳುವಿನ ಮನೋಹರವಾದ, ಪ್ರಕಾಶಮಾನ ವರ್ಣಗಳು, ಸರಳವಾಗಿ ನಿಮ್ಮ ಗಮನವನ್ನು ಸೆಳೆಯುತ್ತವೆ. ಆದರೆ ಇದು ಪ್ರಲೋಭನಗೊಳಿಸುವ ಆಹಾರದ ಒಂದು ತುಂಡಾಗಿದೆಯೆ? ಭಾವಿ ಬೇಟೆಯಾಡುವ ಪ್ರಾಣಿಗಳು ಅತಿ ಬೇಗನೆ ಅದು ಹಾಗಿಲ್ಲವೆಂದು ತಿಳಿಯುತ್ತವೆ, ಏಕೆಂದರೆ ಅದು ಕೆಲವು ಅಸಹ್ಯವಾದ ರಾಸಾಯನಿಕ ಪದಾರ್ಥಗಳಿಂದ ಸಜ್ಜಿತವಾಗಿದೆ.
ಅನೇಕ ಪ್ರತಿಫಲದಾಯಕ ದೃಶ್ಯಗಳು
ಸ್ನಾರ್ಕೆಲ್ ಮುಳುಗಾಳಿಗೆ ಮತ್ತು ಸದೃಶವಾಗಿ ಸ್ಕೂಬ ಮುಳುಗಾಳಿಗೆ, ವಾಸ್ತವವಾಗಿ ಮಹಾಸಾಗರವು ಜೀವಗಳಿಂದ ಸಮೃದ್ಧವಾಗಿದೆ. ಹವಳದ ಬಂಡೆಯ ಸಾಲುಗಳು ಅಸಂಖ್ಯಾತ ಜೀವಿಗಳ ಅವಿಚ್ಛಿನ್ನ ದೃಶ್ಯವಾಗಿದ್ದು, ಕಡಲತೀರದಿಂದ ಕೇವಲ ಕೆಲವು ಹೊಡೆತಗಳಷ್ಟು ಈಜಾಡುವ ಮೂಲಕ ನೋಡಸಾಧ್ಯವಿದೆ. “ಎಲ್ಲ ಆಕಾರಗಳ ಹಾಗೂ ಗಾತ್ರಗಳ ವರ್ಣಭರಿತವಾದ ಮೀನುಗಳಿಂದ ಸುತ್ತವರಿಯಲ್ಪಟ್ಟಿರುವ, ಕೆಲವು ಮೀನುಗಳು ನಿಮ್ಮ ಕೈಯಲ್ಲಿ ತಿನ್ನುತ್ತಿರುವ ಉತ್ಸಾಹದಾಯಕತೆಯನ್ನು ಸರಿಗಟ್ಟುವುದು ಕಷ್ಟಕರವಾದದ್ದಾಗಿದೆ. ಇದು ಬಹಳ ಮನಕರಗಿಸುವ ಅನುಭವವಾಗಿದೆ,” ಎಂದು ಒಬ್ಬ ಮುಳುಗಾಳು ಹೇಳಿದನು. ಬಳಿಕ ಅವನು ಕೂಡಿಸಿದ್ದು: “ಬಹುಮಟ್ಟಿಗೆ ಗುರುತ್ವಾಕರ್ಷಣೆಗೆ ಅಭೇದ್ಯವಾಗಿ ತೂಗಾಡಿಸಲ್ಪಟ್ಟು, ಅವುಗಳಲ್ಲಿ ಒಂದಾಗಿರುವುದು ತೀರ ಅನೈಜವಾಗಿದೆ.”
ಆದುದರಿಂದ, ಸ್ನಾರ್ಕೆಲ್ ಮುಳುಗುವಿಕೆ ಅಥವಾ ಸ್ಕೂಬ ಮುಳುಗುವಿಕೆಗೆ ನಿಮಗೆಂದಾದರೂ ಅವಕಾಶ ದೊರಕುವುದಾದರೆ, ಅನುಭವಿಗಳಾದ ಮುಳುಗಾಳುಗಳಿಂದ ಶಿಫಾರಸ್ಸು ಮಾಡಲ್ಪಟ್ಟ ಸರಳವಾದ ಮುನ್ನೆಚ್ಚರಿಕೆಗಳನ್ನು ನೀವು ತೆಗೆದುಕೊಳ್ಳುವುದಾದರೆ ಅದನ್ನು ಬಹಳ ಸುರಕ್ಷಿತವಾಗಿ ಮಾಡಸಾಧ್ಯವಿದೆಯೆಂಬುದನ್ನು ನೆನಪಿನಲ್ಲಿಡಿರಿ. ಅಲೆಗಳ ಕೆಳಗಿನ ಜಗತ್ತಿನ ಸೌಂದರ್ಯವನ್ನು ಅನ್ವೇಷಿಸುವುದರ ಕುರಿತಾಗಿ ಸಂಪದ್ಯುಕ್ತ ಮಾಡುವ ಈ ಅನುಭವವನ್ನು ಬಹುಶಃ ಒಂದು ದಿನ ನೀವು ಸಹ ಅನುಭೋಗಿಸಬಹುದು.
[ಅಧ್ಯಯನ ಪ್ರಶ್ನೆಗಳು]
a “ಸ್ಕೂಬ [SCUBA]” ಎಂಬುದು “ಸೆಲ್ಫ್ ಕಂಟೆಯ್ನ್ಡ್ ಅಂಡರ್ವಾಟರ್ ಬ್ರೀದಿಂಗ್ ಎಪರೇಟಸ್” ಎಂಬುದರ ಪ್ರಥಮಾಕ್ಷರಿ. ಸ್ಕೂಬ ಮುಳುಗಾಳುಗಳಿದ್ದಾರೆಂದು ಎಚ್ಚರಿಸಲಿಕ್ಕಾಗಿರುವ ಪ್ರಚಲಿತ ಅಂತಾರಾಷ್ಟ್ರೀಯ ಧ್ವಜವು, ಬಿಳಿನೀಲ ಆ್ಯಲ್ಫ ಧ್ವಜವಾಗಿದೆ. ಮೇಲೆ ತೋರಿಸಿರುವಂತೆ, ಕೆಲವು ದೇಶಗಳು ಈಗಲೂ ಬಿಳಿ ಗೆರೆಗಳಿರುವ ಕೆಂಪು ಧ್ವಜವನ್ನು ಉಪಯೋಗಿಸುತ್ತವೆ.
[ಪುಟ 27 ರಲ್ಲಿರುವ ಚಿತ್ರ]
ಚಿಟ್ಟೆ ಕಾಡ್ ಮೀನು
[ಪುಟ 28 ರಲ್ಲಿರುವ ಚಿತ್ರ]
ಫೆಮ್ಲಿಂಗೊ ಟಂಗ್
[ಪುಟ 28 ರಲ್ಲಿರುವ ಚಿತ್ರ]
ಬ್ಲೂ ಟ್ಯಾಂಗ್
[ಪುಟ 28 ರಲ್ಲಿರುವ ಚಿತ್ರ]
ಹವಳದ ಮೇಲೆ ಮೃದ್ವಂಗಿ
[ಪುಟ 26 ರಲ್ಲಿರುವ ಚಿತ್ರ ಕೃಪೆ]
By courtesy of Australian International Public Affairs