ಯುವ ಜನರು ಪ್ರಶ್ನಿಸುವುದು . . .
ತೀರ ಚಿಕ್ಕಪ್ರಾಯದಲ್ಲಿ ವಿವಾಹ—ನಾವು ಸಫಲರಾಗಬಲ್ಲೆವೊ?
“ನಾನು 16 ವರ್ಷದವಳಾಗಿದ್ದಾಗಿಂದಲೂ ನಾವು ಡೇಟಿಂಗ್ ಮಾಡುತ್ತಿದ್ದೆವು. 18ರ ಪ್ರಾಯದಲ್ಲಿ ನಾವು ವಿವಾಹವಾದೆವು. ಅದು ಸದಾಕಾಲಕ್ಕೂ ಅದ್ಭುತಕರವಾಗಿರಲಿಕ್ಕಿತ್ತು! ಆದರೆ ಸುಮಾರು ನಾಲ್ಕು ಮಾಸಗಳ ಅನಂತರ, ಒತ್ತಡದ ಕೆಳಗೆ ನಾನು ಉನ್ಮತ್ತಳಾದೆ.”—ಟಾನ್ಯ.a
ಯಾವುದೇ ಪ್ರಾಯದಲ್ಲಿನ ವಿವಾಹವು ಗಂಭೀರವಾಗಿರಬಲ್ಲದು. ಬೈಬಲ್ ಹೇಳುವುದು: “ಯಾರು ವಿವಾಹವಾಗುತ್ತಾರೋ ಅವರು ನೋವನ್ನೂ ದುಃಖವನ್ನೂ ಹೊಂದಿರುವರು.” (1 ಕೊರಿಂಥ 7:28, ದ ನ್ಯೂ ಇಂಗ್ಲಿಷ್ ಬೈಬಲ್) ಆದರೆ “ಯೌವನದ ಕಾಂತಿ”ಯಲ್ಲಿ ವಿವಾಹ ಬಂಧವನ್ನು ಪ್ರವೇಶಿಸುವ ಬಹು ಮಂದಿಗೆ, ಅನೇಕ ಸಲ ನೋವು ಮತ್ತು ದುಃಖವು ಸಹಿಸಲಸಾಧ್ಯವಾದ ಪ್ರಮಾಣದಲ್ಲಿ ಬರುವಂತೆ ತೋರುತ್ತದೆ.—1 ಕೊರಿಂಥ 7:36.
ಇದು ಮುಖ್ಯವಾಗಿ ಯಾಕೆಂದರೆ ಹದಿವಯಸ್ಕರು ಇನ್ನೂ ಬೆಳೆಯುತ್ತಲಿದ್ದಾರೆ; ಅವರು ಪತಿ ಅಥವಾ ಪತ್ನಿಯ ಪಾತ್ರವನ್ನು ಸ್ವೀಕರಿಸಲಿಕ್ಕೆ ಸಿದ್ಧರಾಗಿರುವುದು ವಿರಳ. ಡಾ. ಜೇನ್ ಕೆ. ಬರ್ಜಸ್ ಅವಲೋಕಿಸುವುದು: “ಯುವ ಜನರು ವಿವಾಹದ ಕುರಿತಾಗಿ ವಿಪರೀತ ಭಾವನಾ ವಾದಿಗಳಾಗಿದ್ದಾರೆ. ಒಂದು ಸಫಲತೆಯ ವಿವಾಹದಲ್ಲಿಯ ದಿನನಿತ್ಯದ ಕಾರ್ಯ ಮತ್ತು ಶ್ರಮದ ರೀತಿಯ ಕುರಿತಾಗಿ ಅವರು ಆಲೋಚಿಸುವುದೇ ಇಲ್ಲ.” ವಿವಾಹದ ನಿಜತ್ವಗಳು ಹೀಗೆ ದಂಪತಿಗಳಿಗೆ, ಕಪಾಲಕ್ಕೆ ಹೊಡೆದಷ್ಟು ಆದರಣೆಯೂ ಮೋಹಕವೂ ಆಗಿರಬಲ್ಲದು.
“ಒಂದು ಮನಶ್ಚಿತ್ರದಂತೆ, ಪ್ರತಿಯೊಂದೂ ಸರ್ವೋತ್ತಮವೂ ಅದ್ಭುತವೂ ಆಗಿರುವಂತೆ ನೀವು ನಿರೀಕ್ಷಿಸುತ್ತಿದ್ದೀರಿ,” ಎಂದು ಯುವ ಕಿಮ್ ಹೇಳುತ್ತಾಳೆ. “ನವೀನತೆಯ ಅಳಿಸಿ ಹೋಗುತ್ತದೆ, ಮತ್ತು—ನಿಮ್ಮ ಪತಿಯು ಸುಖಾಸನದಲ್ಲಿ ಕುಳಿತಿರುವಾಗ—ನಿಮಗೆ ಅಡಿಗೆ ಮಾಡುವುದು, ಪಾತ್ರೆಗಳನ್ನು ತೊಳೆಯುವುದು, ಫಲಸರಕುಗಳನ್ನು ಕೊಳ್ಳುವುದು, ಬಟ್ಟೆಗೆಳನ್ನು ಒಗೆಯುವುದು ಮಾಡಲಿಕ್ಕಿರುತ್ತದೆ. ಅವನ ತಾಯಿಯು ಅವನಿಗಾಗಿ ಸಕಲವನ್ನು ಮಾಡಿದ ಕಾರಣ ಅಂಥ ಸಣ್ಣಪುಟ್ಟ ಕೆಲಸಗಳನ್ನು ಎಂದೂ ಅವನು ಮಾಡಿರಲಿಕ್ಕಿಲ್ಲ. ನೀವು ಡೇಟಿಂಗ್ ಮಾಡುತ್ತಿರುವಾಗ ಆಯಾಸವನ್ನೂ ಸಿಡುಕನ್ನೂ ಹೊಂದುವ ಕುರಿತು ನೀವೆಂದೂ ಯೋಚಿಸುವುದಿಲ್ಲ. ಆದರೆ ನೀವು ಗರ್ಭವತಿಯಾಗುವಾಗ, ಇದೆಲ್ಲವು ಹತ್ತು ಪಟ್ಟು ತೀರ ಕೆಟ್ಟದ್ದಾಗಿ ಪರಿಣಮಿಸುತ್ತದೆ!”
ಅನೇಕ ಸಲ, ಹದಿವಯಸ್ಕರು ಮುಂದಾಲೋಚನಯಿಲ್ಲದೆ ತರಾತುರಿಯಿಂದ ವಿವಾಹವಾಗುತ್ತಾರೆ. “ಒಬ್ಬ ಸತ್ಕ್ರೈಸ್ತನಾಗಿದ್ದನೆಂದು ಭಾವಿಸಿದ ಒಬ್ಬ ಪುರುಷನನ್ನು ನಾನು ಮದುವೆಯಾದೆ,” ಎಂದು ಹೆಲನ್ ಜ್ಞಾಪಕ ಮಾಡಿಕೊಳ್ಳುತ್ತಾಳೆ. “ನನ್ನ ಸ್ವಂತ ಅನುಭವದ ಕೊರತೆಯ ಕಾರಣದಿಂದ, ಸಾಕಷ್ಟು ಉತ್ತಮವಾಗಿ ಅವನನ್ನು ತಿಳಿದುಕೊಳ್ಳಲು ನನಗಾಗಲಿಲ್ಲ. ವಿವಾಹದ ಹತ್ತು ಮಾಸಗಳ ಅನಂತರ, ಅವನ ಅಕ್ರೈಸ್ತ ವರ್ತನೆಯನ್ನು ನನಗೆ ಇನ್ನು ಮುಂದೆ ಸಹಿಸಿಕೊಳ್ಳಲಸಾಧ್ಯವಾಯಿತು.” ಹೆಲನ್ಳ ವಿವಾಹದ ವೈಫಲ್ಯವು ಅಸದೃಶ್ಯವೇನೂ ಅಲ್ಲ. ಅಮೆರಿಕದಲ್ಲಿ, ಅಧಿಕಾಂಶ ಹದಿವಯಸ್ಕ ವಿವಾಹಗಳು ಐದು ವರ್ಷಗಳೊಳಗೆ ವಿಫಲಗೊಳ್ಳುತ್ತವೆ.
ಭೀತಿಕಾರಕ ಸಂಖ್ಯಾ ಸಂಗ್ರಹಣಗಳ ಹೊರತು, ವಿವಾಹಸ್ಥಿತಿಯೊಳಗೆ ಲಕ್ಷಾಂತರ ಹದಿವಯಸ್ಕರು ಧುಮುಕಿದ್ದಾರೆ. ಪ್ರಾಯಶಃ ಅವರಲ್ಲಿ ನೀವು ಒಬ್ಬರಾಗಿರಬಹುದು. ಹಾಗಿರುವುದಾದರೆ, ವಿವಾಹದ ಒತ್ತಡಗಳಿಂದ ಈಗಾಗಲೇ ಮುಳುಗಿಹೋಗಿರುವಂತೆ ನಿಮಗೆ ಅನಿಸಬಹುದು.
ಪರಿಹಾರಕ್ಕೆ ಮಾರ್ಗವಿಲ್ಲವೋ?
ಚಿಕ್ಕ ಪ್ರಾಯದಲ್ಲಿ ವ್ಯಕ್ತಿಯನ್ನು ವಿವಾಹವಾಗುವುದು ವಿವೇಕವಲ್ಲದಿರಬಹುದಾದರೂ, ಅದು ಒಂದು ಪಾಪವಾಗಿರಬೇಕಾಗಿಲ್ಲ. ದೇವರ ನೋಟದಲ್ಲಿ ವಿವಾಹವು ಗೌರವಾರ್ಹವಾದದ್ದಾಗಿದೆ. (ಇಬ್ರಿಯ 13:4) ಕೆಲವು ತೀವ್ರ ವಿರುದ್ಧವಾದ ಸಂದರ್ಭಗಳು ಪ್ರತ್ಯೇಕ ವಾಸವನ್ನು ಅಥವಾ ವಿವಾಹವಿಚ್ಛೇದನವೊಂದನ್ನು ಪಡೆಯುವಂತೆ ಸಮರ್ಥಿಸಬಹುದೆಂಬುದು ನಿಜ. (ಮತ್ತಾಯ 19:9; 1 ಕೊರಿಂಥ 7:12-15) ಹಾಗಿದ್ದರೂ, ಸಾಮಾನ್ಯವಾಗಿ ದಂಪತಿಗಳು ಒಟ್ಟಾಗಿ ಜೊತೆಗೂಡಿರುವಂತೆ ದೇವರು ಅಪೇಕ್ಷಿಸುತ್ತಾನೆ. (ಮತ್ತಾಯ 19:6) ಒಂದು ಅಚಲ ನಿಲುವಿನಂತೆ ಅದು ತೋರಬಹುದಾದರೂ, ನೀವು ಸಫಲರಾಗುವಂತೆ ದೇವರು ಬಯಸುತ್ತಾನೆಂದು ಸಹ ಅದು ಅರ್ಥೈಸುತ್ತದೆ.
ಒಬ್ಬ ಹದಿವಯಸ್ಕ ಪತಿಯು ಹೇಳುವುದು: “‘ನಾನು ತೀರ ಚಿಕ್ಕವನಾಗಿದ್ದೆನೋ? ನಾವು ಒಬ್ಬರಿಗೊಬ್ಬರು ನಿಜವಾಗಿ ಸರಿಹೊಂದುವವರಾಗಿದ್ದೇವೋ?’ ಎಂದು ಕೇಳಿಕೊಳ್ಳುವುದಕ್ಕೆ ಮತ್ತು ಇತರ ಎಲ್ಲ ದ್ವಿತೀಯ ಊಹೆಗೆ ಸಮಯವು ತೀರ ದಾಟಿಹೋಗಿದೆ. ನೀವು ವಿವಾಹವಾಗಿದ್ದೀರಿ!” ಆದುದರಿಂದ ನಿಮ್ಮ ಗತಿಯನ್ನು ಹಲಬುವ ಬದಲು, ನಿಮ್ಮ ವಿವಾಹವು ಸಫಲವಾಗುವಂತೆ ಮಾಡಲು ಯಾವುದಾದರೂ ಮಾರ್ಗವನ್ನು ಕಂಡುಕೊಳ್ಳಲು ಏಕೆ ಪ್ರಯತ್ನಿಸಬಾರದು?
ಇಲ್ಲಿ ಯಾರು ಹೊಣೆಯಾಗಿದ್ದಾರೆ?
ದಂಪತಿಗಳಿಗೆ ಬೈಬಲ್ ಹೇಳುವುದು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. . . . ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.” (ಎಫೆಸ 5:22, 23) ಹಾಗಿದ್ದರೂ, ಒಬ್ಬ ಯುವ ಪುರುಷನು ತನ್ನ ಇಡೀ ಜೀವನವನ್ನು ತಾಯಿ ಮತ್ತು ತಂದೆಯ ರಕ್ಷಣೆಯ ಆಸರೆಯ ಕೆಳಗೆ ವ್ಯಯಿಸಿರುವಾಗ, ಕುಟುಂಬದ ತಲೆಯಾಗಿ ಪರಿಣಮಿಸುವುದು ಒಂದು ಭೀಕರವಾದ ಜವಾಬ್ದಾರಿಯಾಗಿರಸಾಧ್ಯವಿದೆ.
ತನ್ನ ಪತಿಯ ಸಂಬಂಧದಲ್ಲಿ ಒಬ್ಬ ಯುವ ಪತ್ನಿಯು ಜ್ಞಾಪಕ ಮಾಡಿಕೊಳ್ಳುವುದು: “ನಾನಾಗಿಯೇ ಎಲ್ಲಾದರೂ ಹೋಗಲು ಟಾಮ್ ಇಷ್ಟಪಡುತ್ತಿರಲಿಲ್ಲ. ಬಲೆಯಲ್ಲಿ ಸಿಕ್ಕಿಕೊಂಡಂತೆ, ಬಂಧಿಸಲ್ಪಟ್ಟಂತೆ ನನಗೆ ಅನಿಸಿತು. ಆತನನ್ನು ಪ್ರಶ್ನಿಸಲು ಪ್ರಯತ್ನಿಸಿದ ಸಮಯದಲ್ಲೆಲ್ಲಾ, ಅದು ತನ್ನ ಅಧಿಕಾರಕ್ಕೆ ಒಂದು ಸವಾಲಾಗಿತ್ತೆಂದು ಆತನು ಯೋಚಿಸಿದನು.” ಮತ್ತೊಂದು ಕಡೆಯಲ್ಲಿ, ಕೆಲವು ಪತ್ನಿಯರು ತಮ್ಮ ಯುವ ಪತಿಯರನ್ನು ತಮ್ಮ ಶಿರಸ್ಸಿನೋಪಾದಿ ವೀಕ್ಷಿಸುವುದು ಕ್ಲಿಷ್ಟಕರವೆಂದು ಕಂಡುಕೊಳ್ಳುತ್ತಾರೆ. ಇತರರು, ಅವರು ಅಸಮ್ಮತಿಸುವಾಗ ಸಹಕಾರವನ್ನು ನೀಡಲು ನಿರಾಕರಿಸುತ್ತಾ, ಪತಿಯೊಬ್ಬನ ನಿರ್ಣಯದ ತುಸು ಸೂಚನೆಗೆ ಸಿಡಿಮಿಡಿಗೊಳ್ಳಬಹುದು.
ನೀವು ಒಬ್ಬ ಅನನುಭವಿ ಪತಿಯಾಗಿರುವುದಾದರೆ ಇದು ಅತಿ ಪ್ರಯಾಸಕರವಾಗಿರಬಲ್ಲದು. ಆದರೆ ನಿಮ್ಮ ಪ್ರತಿಯೊಂದು ಆಜೆಗ್ಞೆ ವಧುವು ಕೇವಲ ತಡವಿಲ್ಲದೆ ವಿಧೇಯಳಾಗಲಿಲ್ಲವೆಂಬ ಕಾರಣಕ್ಕಾಗಿ ನಿಜವಾಗಿ ಕ್ಷೋಭೆಗೊಳ್ಳುವ ಅಗತ್ಯವು ಇಲ್ಲಿರುವುದಿಲ್ಲ. ನಿಮ್ಮ ಶಿರಸ್ಸುತನದ ಕೆಳಗೆ ನಿರ್ಭಯತೆಯ ಅನಿಸಿಕೆಯನ್ನು ತಾಳಲು ನಿಮ್ಮ ಪತ್ನಿಗೆ ಸ್ವಲ್ಪ ಸಮಯ ಹಿಡಿಯುವುದು. ಅಷ್ಟರ ತನಕ, ಆಕೆಯ ಗೌರವವನ್ನು ಸಂಪಾದಿಸಲು ಕಾರ್ಯನಡಿಸಿರಿ, ಆಕೆಯನ್ನು ಹತೋಟಿಯಲ್ಲಿಡಲು ಪ್ರಯತ್ನಿಸುವ ಮೂಲಕವಾಗಿ ಅಲ್ಲ, ಬದಲಿಗೆ ಮುಂದಾಳತ್ವವನ್ನು ತೆಗೆದುಕೊಳ್ಳುವ ಮತ್ತು ಸಮತೆಯ ನಿರ್ಣಯಗಳನ್ನು ಮಾಡಲು ಪ್ರಯತ್ನಿಸುವ ಮೂಲಕವೇ.—ಹೋಲಿಸಿ 1 ಕೊರಿಂಥ 16:13.
ಬೈಬಲ್ ಇನ್ನೂ ಬುದ್ಧಿವಾದ ಹೇಳುವುದು: “ಮಾನಮರ್ಯಾದೆ ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾಪುರ 12:10) ಹೌದು, ನಿಮ್ಮ ಸ್ವಂತ ಅಭಿರುಚಿಗಳಿಗಿಂತ ಮುಂದಾಗಿ ನಿಮ್ಮ ಪತ್ನಿಯ ಅಭಿರುಚಿಗಳನ್ನಿಡುವ ಮೂಲಕ ಆಕೆಗೆ ಮರ್ಯಾದೆ ತೋರಿಸಿರಿ. (ಫಿಲಿಪ್ಪಿ 2:4) ಆಕೆಯನ್ನು ಒಬ್ಬ ದಾಸಿಯೋಪಾದಿಯಲ್ಲ, ಒಬ್ಬ ಗೌರವಾನಿತ್ವ ಸಂಗಾತಿಯೋಪಾದಿ ಕಾಣುತ್ತಾ, ಆಕೆಗೆ ಸ್ವಾತಂತ್ರ್ಯವನ್ನು ನೀಡಿರಿ. (ನೋಡಿರಿ ಮಲಾಕಿಯ 2:14.) ಸಾಧ್ಯವಾದಾಗಲೆಲ್ಲಾ, ಪ್ರಮುಖ ನಿರ್ಣಯಗಳನ್ನು ಮಾಡಬೇಕಾಗಿರುವಾಗ ಆಕೆಯೊಂದಿಗೆ ಪರ್ಯಾಲೋಚಿಸಿರಿ. (ಜ್ಞಾನೋಕ್ತಿ 13:10) ಇದು ಆಕೆಗೆ ನಿಮ್ಮ ಶಿರಸ್ಸುತನಕ್ಕೆ ಅಧೀನಳಾಗುವುದನ್ನು ಸುಲಭವನ್ನಾಗಿ ಮಾಡುವುದು.
ನೀವು ಒಬ್ಬ ಯುವ ಪತ್ನಿಯಾಗಿರುವುದಾದರೆ ಆಗೇನು? ನಿಮ್ಮ ಯುವ ಪತಿಯ ಪ್ರೌಢತೆಯ ಕೊರತೆಯು ಕೆಲವು ವೇಳೆ ತೊಂದರೆಗೀಡಾಗುವಂತೆ ಸುವ್ಯಕ್ತವಾಗುವಾಗ ಅಥವಾ ಉತ್ತಮವಾದ ತೀರ್ಮಾನವನ್ನು ಅವನು ತೋರಿಸದಿರುವಾಗ ಅವನಿಗೆ ಅಧೀನವಾಗುವ ಸಂಬಂಧದಲ್ಲಿ ನಿಮ್ಮ ತಾಳ್ಮೆಯನ್ನು ಇದು ಪರೀಕ್ಷಿಸಬಹುದು. ಹಾಗಿದ್ದರೂ, ಅವನನ್ನು ಹಳಿಯುವುದು ಅಥವಾ ದಂಗೆಯೇಳುವುದು ನಿಮ್ಮ ಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯವನ್ನೀಯದು. “ಅವಳು ನನ್ನನ್ನು ಹೆಚ್ಚು ನಿಂದಿಸಿದಷ್ಟು, ಹೆಚ್ಚು ಕಡಿಮೆ ಮಾತಿನವನಾಗುತ್ತಿದ್ದೆನು ನಾನು,” ಎಂದು ಒಬ್ಬ ಯುವ ಪತಿಯು ನಿವೇದಿಸುತ್ತಾನೆ. ಅವನ ಅನನುಭವವನ್ನು ಸಹಿಸಿಕೊಳ್ಳುವ ಮೂಲಕ ಮರ್ಯಾದೆಯನ್ನು ತೋರಿಸಲು ಪ್ರಯತ್ನಿಸಿರಿ. ನಿಮ್ಮ ದೃಷ್ಟಿಕೋನಕ್ಕೆ ಹೆಚ್ಚಾದ ಗೌರವವನ್ನು ತೋರಿಸುವ ಮೂಲಕ ಅವನು ಪ್ರತಿಕ್ರಿಯಿಸಬಹುದು. ನಿಮ್ಮನ್ನು ರೇಗಿಸುವ, ಆದರೆ ನೀತಿನಿಯಮಗಳನ್ನು ಉಲ್ಲಂಘಿಸದ ಒಂದು ನಿರ್ಣಯವನ್ನು ಅವನು ಮಾಡುವುದಾದರೆ, ಅದರೊಂದಿಗೆ ಸುಮ್ಮನೆ ಏಕೆ ಸಹಕಾರವನ್ನು ನೀಡಬಾರದು? “ಆದರೆ ಮೇಲಣಿಂದ ಬರುವ ಜ್ಞಾನವು . . . ಸಂತೋಷವಾಗಿ ಒಪ್ಪಿಕೊಳ್ಳುವಂಥದು.” (ಯಾಕೋಬ 3:17) ಅವನ ಶಿರಸ್ಸುತನಕ್ಕೆ ಒತ್ತಾಸೆಯಾಗಿರುವ ಮೂಲಕ, ಇನ್ನು ಹೆಚ್ಚು ಸಮರ್ಥನಾಗಿ ಪರಿಣಮಿಸುವಂತೆ ನೀವು ಅವನಿಗೆ ಸಹಾಯ ನೀಡಬಲ್ಲಿರಿ.
ಹಣದ ಸಮಸ್ಯೆಗಳು
ಯುವ ದಂಪತಿಗಳಿಗಿರುವ ಅಗ್ರಸ್ಥಾನದ ಸಮಸ್ಯೆಯು ಹಣವಾಗಿದೆ ಎಂದು ಕೆಲವರು ಹೇಳುತ್ತಾರೆ. ಕೇವಲ ಜೀವನಾಧಾರಕ್ಕೆ ಎಷ್ಟೊಂದು ಖರ್ಚು ತಗಲುತ್ತದೆ ಎಂಬುದನ್ನು ಅರಿಯಲು ಅನೇಕ ಸಲ ದಂಪತಿಗಳು ತಲ್ಲಣಗೊಂಡಿದ್ದಾರೆ. ಉದಾಹರಣೆಗಾಗಿ, ರೇ ಮತ್ತು ಲೋರ ಅವರ ವಿವಾಹದ ಅನಂತರ ಅವರಿಗೆ “ಆಹಾರ ಅಥವಾ ಹಣ ಇರಲಿಲ್ಲ.” “ನಾವು ನೆಲದ ಮೇಲೆ ಮಲಗಿದೆವು,” ಎಂದು ಅವರು ನಿವೇದಿಸುತ್ತಾರೆ. ಬ್ರ್ಯಾಡ್ ತನ್ನ ಕೆಲಸವನ್ನು ಕಳೆದುಕೊಂಡಾಗ, ಮತ್ತು ಟಾನ್ಯ ಹಣಕಾಸಿನ ವಿಷಯದಲ್ಲಿ ಬೆಂಬಲವನ್ನು ನೀಡಬೇಕಾಗಿ ಬಂದಾಗ ತದ್ರೀತಿಯ ಆರ್ಥಿಕ ಒತ್ತಡದಿಂದ ಬ್ರ್ಯಾಡ್ ಮತ್ತು ಟಾನ್ಯ ನರಳಿದರು.
ಒಳ್ಳೆಯ ವೇತನವನ್ನು ನೀಡುವ ಕೆಲಸವನ್ನು ಕಂಡುಹಿಡಿಯಲು ಯುವಜನರಿಗೆ ಅನೇಕಸಲ ಕ್ಲಿಷ್ಟಕರವಾಗುವುದು ಸತ್ಯವಾಗಿರುವುದಾದರೂ, ಹಣದ ಸಮಸ್ಯೆಗಳು ಕೆಲವೊಮ್ಮೆ, ಹಣ ನಿರ್ವಹಣೆಯ ಕೊರತೆಯ ಫಲವಾಗಿರುತ್ತವೆ. ಹೀಗೆ ಹೇಳುವ ಒಬ್ಬ ಯುವ ಪತ್ನಿಯನ್ನು ಪರಿಗಣಿಸಿರಿ: “ವ್ಯಯಿಸಲು ಹಣವಿಲ್ಲದೆ ಹೋಗುವ ತನಕ ನಾನು ಹಣವನ್ನು ವ್ಯಯಿಸುತ್ತೇನೆ ಮತ್ತು ಮಾಸದ ಕೊನೆಯ ವಾರಕ್ಕೆ ನನ್ನಲ್ಲಿ ಏನೂ ಇರುವುದಿಲ್ಲ.” ಇತರ ದಂಪತಿಗಳು ಸಂವಹನವನ್ನು ಮಾಡಲು ತಪ್ಪುವ ಕಾರಣ ನೋವನ್ನು ಅನುಭವಿಸುತ್ತಾರೆ. “ಆಕೆಯೊಂದಿಗೆ ಚರ್ಚಿಸದೆ, ನಾನು ಹೊರಹೋಗಿ ಕಾರೊಂದನ್ನು ಖರೀದಿಸಿದೆ,” ಎಂದು ಜೇಕ್ ಎಂಬ ಹೆಸರುಳ್ಳ ಒಬ್ಬ ಪತಿಯು ನಿವೇದಿಸುತ್ತಾನೆ. “ನಮಗೆ ನಿಜವಾಗಿಯೂ ಆವಶ್ಯಕವಾಗಿದುದ್ದು ಪೀಠೋಪಕರಣ” ಎಂದು ಆತನ ಪತ್ನಿಯು ಪ್ರಲಾಪಿಸುತ್ತಾಳೆ.
ಇದು ಸುಪರಿಚಿತವಾಗಿ ಧ್ವನಿಸುತ್ತದೋ? ಹಾಗಿದ್ದರೆ, ಹಣದ ನಿರ್ವಹಣೆಯ ಕುರಿತಾಗಿ ನೀವು ಪ್ರಾಯಶಃ “ಶಿಶುವಿನ ಗುಣಗಳನ್ನು” ಬಿಟ್ಟುಬಿಟ್ಟಿರುವುದಿಲ್ಲ. (1 ಕೋರಿಂಥ 13:11, NW) ಹಠಾತ್ತಾದ ಪ್ರವೃತ್ತಿಯಿಂದ ನೀವು ಸಾಮಾನನ್ನು ಖರೀದಿಸುತ್ತೀರೋ? ಹಾಗಿರುವಲ್ಲಿ ಖರೀದಿಸಲ್ಪಡಬೇಕಾದ ಸಾಮಾನುಗಳ ಪಟ್ಟಿಯನ್ನು ಮಾಡಲು ಕಲಿಯಿರಿ, ಮತ್ತು ಅದಕ್ಕೆ ಅಂಟಿಕೊಳ್ಳಿರಿ. ಪ್ರಮುಖ ಕೊಳ್ಳಿಕೆಗಳನ್ನು ಚರ್ಚಿಸಿರಿ. (ಜ್ಞಾನೋಕ್ತಿ 15:22) ನಿಮ್ಮ ಖರ್ಚುಗಳನ್ನು ಬರೆದಿಡಿರಿ ಮತ್ತು ಒಂದು ಸಮಂಜಸವಾದ ಆಯವ್ಯಯವನ್ನು ರಚಿಸಿರಿ.b ಹೀಗೆ ಮಾಡುವುದು ಹೆಚ್ಚಿನ ಹಣಕಾಸಿನ ಒತ್ತಡದಿಂದ ನಿಮ್ಮನ್ನು ತಪ್ಪಿಸಬಲ್ಲದು.
ನಾವು ಚರ್ಚಿಸಬಲ್ಲೆವೋ?
ಯುವ ದಂಪತಿಗಳ ನಡುವೆಯಿರುವ ದ್ವಿತೀಯ ಸ್ಥಾನದ ಸಮಸ್ಯೆ ಎಂದು ಯಾವುದನ್ನು ಕೆಲವರು ಕರೆಯುತ್ತಾರೊ, ಆ ಸಂವಹನ ಸಮಸ್ಯೆಯ ಕಡೆಗೆ ಅದು ನಮ್ಮನ್ನು ಕರೆತರುತ್ತದೆ. ಬಿಗುವಿನ ಮೌನಕ್ಕೆ ಕೆಲವು ದಂಪತಿಗಳು ಹಿಮ್ಮೆಟ್ಟುತ್ತಾರೆ. ಇತರರು ಶಾಬ್ದಿಕ ಹಿಂಸಾಚಾರದಲ್ಲಿ ತೊಡಗುತ್ತಾರೆ. “[ನಮಗೆ] ಇದ್ದ ಅತಿ ದೊಡ್ಡ ವಾಗ್ವಾದಗಳು, ಅತಿ ಕ್ಷುಲ್ಲಕ ವಿಷಯಗಳ ಮೇಲಿದ್ದವು,” ಎಂದು ಸಿಲ್ವಿಯ ಎಂಬ ಒಬ್ಬ ವಿವಾಹ ವಿಚ್ಛೇದಿತೆ ಜ್ಞಾಪಕ ಮಾಡಿಕೊಳ್ಳುತ್ತಾಳೆ. “ಅವನು ತನ್ನ ಷೂಗಳನ್ನು ಕಳಚಿ ಮನೆಯಲ್ಲೆಲ್ಲಾ ಬಿಟ್ಟುಬಿಡುವುದು ಮತ್ತು ಅವನ ಊಟದ ತಟ್ಟೆಯಿಂದ ನಾನು ತುತ್ತುಗಳನ್ನು ತೆಗೆದುಕೊಳ್ಳುವಂಥ ವಿಷಯಗಳು.”
ಅಪಾರ್ಥಗಳು ಮತ್ತು ಭಿನ್ನಾಭಿಪ್ರಾಯಗಳು ಖಂಡಿತವಾಗಿ ಸಂಭವಿಸುತ್ತವೆ. ಆದರೆ “ದ್ವೇಷ ಕೋಪ ಕ್ರೋಧ ಕಲಹ ದೂಷಣೆ” ಸುಲಭವಾಗಿ ವಿವಾಹವೊಂದನ್ನು ವಿಭಜಿಸುತ್ತದೆ. (ಎಫೆಸ 4:31) ಕೆರಳಿಕೆಯು ಚಿಕ್ಕದಾಗಿರುವಾಗಲೇ ವಿಷಯಗಳ ಕುರಿತು ಚರ್ಚಿಸುವುದನ್ನು ಅಭ್ಯಾಸ ಮಾಡಿರಿ. ನೀವು ಚರ್ಚಿಸುವಾಗ, ವ್ಯಕ್ತಿಯನ್ನಲ್ಲ, ಸಮಸ್ಯೆಯ ಮೇಲೆ ಆಕ್ರಮಣ ಮಾಡಿರಿ. ವಿಷಯಗಳು ಹತೋಟಿಯನ್ನು ಮೀರುವುದಾದರೆ, ವಾಗ್ವಾದವನ್ನು ಉದ್ದೀಪಿಸಲು ನಿರಾಕರಿಸಿರಿ. “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು” ಎಂದು ಜ್ಞಾನೋಕ್ತಿ 26:20 ಹೇಳುತ್ತದೆ. ನೀವಿಬ್ಬರು ಶಾಂತವಾದ ಅನಂತರ ಪುನಃ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸಿರಿ.
ಮತ್ತೊಂದು ಸಾಮಾನ್ಯ ಸಮಸ್ಯೆಯಾದ ಲೈಂಗಿಕ ಅತೃಪ್ತಿಯನ್ನು ಪರಿಹರಿಸಲು ಸಹ, ಒಳ್ಳೆಯ ಸಂವಹನವು ಕೀಲಿ ಕೈಯಾಗಿದೆ. ಕೆಲವೊಮ್ಮೆ ಒಬ್ಬ ಯುವ ದಂಪತಿಗಳು ವಿವಾಹ ಸ್ಥಿತಿಯ ಆಪತ್ತೆಯನ್ನು ಅನುಭವಿಸಲು, ತಮ್ಮ ನವೀನ ನಿಯತಕ್ರಮದಿಂದ ಸುಲಭವಾಗಿ ಬಹಳ ಬಳಲಿ ಹೋಗುತ್ತಾರೆ. ಬಿಲ್ಡಿಂಗ್ ಎ ಸಕ್ಸಸ್ಫುಲ್ ಮ್ಯಾರೆಜ್ ಎಂಬ ಪುಸ್ತಕವು ಹೇಳುವುದು: “ಪತಿಪತ್ನಿಯರು ಲೈಂಗಿಕತೆಯ ಪಾತ್ರ ಮತ್ತು ಸ್ವಾಭಾವಿಕ ಕ್ರಿಯೆಯ ಕುರಿತಾದ ಒಂದು ಅಪಾರವಾದ ತಪ್ಪು ತಿಳಿವಳಿಕೆಯೊಂದಿಗೆ ವೈವಾಹಿಕತೆಯೊಳಗೆ ಪ್ರವೇಶಿಸುತ್ತಾರೆ.” ಲೋಕದ ಪ್ರಚಾರದ ಮೂಲಕ ಮೋಸಗೊಳಿಸಲ್ಪಟ್ಟು, ಅನೇಕ ದಂಪತಿಗಳು ಈ ಸಂಬಂಧದಲ್ಲಿ ತೀರ ಕಾಲ್ಪನಿಕ ನಿರೀಕ್ಷಣೆಗಳಿಗೆ ಬರುತ್ತಾರೆ. ಸ್ವಾರ್ಥತೆ ಮತ್ತು ಸ್ವನಿಯಂತ್ರಣದ ಕೊರತೆಯು ಸಹ ಒಂದು ಪಾತ್ರವನ್ನು ವಹಿಸುತ್ತದೆ. ಸಮಯ ಮತ್ತು ತಾಳ್ಮೆಯೊಂದಿಗೆ ತೆರೆದ ಸಂವಹನವು ಅತಿ ಪ್ರಾಮುಖ್ಯ. ಪ್ರತಿಯೊಬ್ಬರು ‘ಪರಹಿತವನ್ನು ಚಿಂತಿಸು’ವಾಗ ಲೈಂಗಿಕತೆಯು ಒಂದು ಗಂಭೀರ ಸಮಸ್ಯೆಯಾಗಿರುವುದು ವಿರಳ.—1 ಕೊರಿಂಥ 10:24.
ಹಾಗಾದರೆ, ವಿವಾಹವು ಮಕ್ಕಳಿಗೆ ಅಲ್ಲ ಎಂಬುದು ಸ್ಫುಟ. ಈಗಾಗಲೇ ನೀವು ವಿವಾಹವಾಗಿರುವುದಾದರೆ, ನಿಮಗೆ ವೈಫಲ್ಯವು ವಿಧಿಸಲ್ಪಟ್ಟಿರುವುದಿಲ್ಲ. “ನನ್ನ ವಿವಾಹದ ಪ್ರಥಮ ವರ್ಷವು ನಿಜವಾಗಿಯೂ ಕಠಿನವಾಗಿತ್ತು,” ಎಂದು ವಿವಾಹಿತ ಸ್ತ್ರೀಯೊಬ್ಬಳು ಹೇಳುತ್ತಾಳೆ. “ಆದರೆ ಬೈಬಲ್ ತತ್ವಗಳನ್ನು ಅನ್ವಯಿಸಿದ ಕಾರಣದಿಂದ, ನಾವೀಗ ಒಂದು ತೃಪ್ತ, ಸಂತೋಷಿತ ವೈವಾಹಿಕ ಜೀವನವನ್ನು ನಡೆಸುತ್ತಿದ್ದೇವೆ.” ನೀವೂ ಹೀಗೆ ನಡೆಸಬಲ್ಲಿರಿ.
[ಅಧ್ಯಯನ ಪ್ರಶ್ನೆಗಳು]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
b “ನಿಮ್ಮ ಹಣದ ಆಯವ್ಯಯ—ಒಂದು ಸುಲಭವಾದ ವಿಧ!” (ಇಂಗ್ಲಿಷ್) ಎಂಬ ನಮ್ಮ ಏಪ್ರಿಲ್ 22, 1985ರ ಸಂಚಿಕೆಯಲ್ಲಿನ ಪ್ರಕಟಿತ ಲೇಖನವು, ಕೆಲವು ಸಹಾಯಕಾರಿ ಸಲಹೆಗಳನ್ನು ಹೊಂದಿದೆ.
[ಪುಟ 32 ರಲ್ಲಿರುವ ಚಿತ್ರ]
ಒಬ್ಬ ಯುವ ಪುರುಷನನ್ನು ಅವನ ಪತಿಯ ಪಾತ್ರದಲ್ಲಿ ಬೆಂಬಲಿಸುವುದು ಅವನಲ್ಲಿರುವ ಉತ್ತಮತೆಯನ್ನು ಉತ್ಪ್ರೇಕ್ಷಿಸಬಲ್ಲದು.