ಮಳೆ ಕಾಡುಗಳನ್ನು ಏಕೆ ರಕ್ಷಿಸಬೇಕು?
ಒಂದು ಜನರ ಗುಂಪು ಫುಟ್ಬಾಲ್ ಪಂದ್ಯಾಟವನ್ನು ಪ್ರೇಕ್ಷಿಸುತ್ತಾ ಉನ್ಮತ್ತದ ಪ್ರೋತ್ಸಾಹ ಧ್ವನಿಯನ್ನು ಮಾಡುತ್ತಾ ಇದೆ. ಆ ಆಟ ಸದಾಕಾಲಕ್ಕೂ ಮುಂದುವರಿಯಲಿ ಎಂಬುದು ಅವರ ಮನಸ್ಸು. ಆದರೆ ಆಟಗಾರರನ್ನು ಅವರು ಕೊಲ್ಲುತ್ತಿದ್ದಾರೆ. ಸತ್ತವರಲ್ಲಿ ಒಬ್ಬರ ಹಿಂದೆ ಒಬ್ಬರನ್ನು ಮೈದಾನಿನಿಂದ ಹೊರಗೆ ಸಾಗಿಸುತ್ತಾರೆ. ಆದರೂ ಆಟ ನಿಧಾನಿಸುವುದನ್ನು ನೋಡಿ ಜನರು ಕೋಪೋದ್ರೇಕಗೊಳ್ಳುತ್ತಾರೆ.
ಕಾಡು ಕಡಿತ ಹೆಚ್ಚು ಕಡಿಮೆ ಹೀಗೆಯೇ. ಜನರಿಗೆ ಕಾಡುಗಳೆಂದರೆ ಇಷ್ಟ. ವಾಸ್ತವವಾಗಿ, ಜನರು ಅವುಗಳ ಮೇಲೆ ಅವಲಂಬಿಸಿರುತ್ತಾರೆ. ಆದರೆ ಅಲ್ಲಿ ಆಟವಾಡುವವರನ್ನು ಅಂದರೆ ಯಾವುದರ ಅನ್ಯೋನ್ಯ ಕ್ರಿಯೆಗಳು ಕಾಡನ್ನು ಜೀವಂತವಾಗಿರಿಸುತ್ತದೋ, ಆ ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿಗಳನ್ನು ಅವರು ಕೊಲ್ಲುತ್ತಾರೆ. ಆದರೆ ಇದು ಕೇವಲ ಆಟವಲ್ಲ. ಕಾಡು ಕಡಿತ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ನೀವು ಮಳೆ ಕಾಡನ್ನು ನೋಡಿಯೇ ಇರದಿದ್ದರೂ, ಈ ಕಾಡು ಕಡಿತ ನಿಮ್ಮ ಜೀವನದ ಗುಣಮಟ್ಟವನ್ನು ತಟ್ಟುತ್ತದೆ.
ಯಾವುದನ್ನು ವಿಜ್ಞಾನಿಗಳು ಜೀವವಿವಿಧತೆಯೆಂದು ಕರೆಯುತ್ತಾರೋ, ಆ ಮಹತ್ತರವಾದ ಜೀವಿ ಅನೇಕತೆಯೇ ಮಳೆ ಕಾಡುಗಳ ಅತ್ಯಂತ ಉತ್ತಮ ಗುಣವೆಂದು ಕೆಲವರ ವಾದ. ಮಲೇಷಿಯರ ಮಳೆ ಕಾಡಿನ ಒಂದು ಚದರ ಮೈಲಿನ ಐದನೆಯ ಒಂದಂಶದಲ್ಲಿ ಸುಮಾರು 835 ವಿವಿಧ ಜಾತಿಯ ಮರಗಳು ಬೆಳೆಯ ಬಹುದು. ಇದು ಅಮೆರಿಕ ಮತ್ತು ಕೆನಡಾಗಳನ್ನು ಸೇರಿಸಿದರೆ, ಅಷ್ಟೇ ಪ್ರದೇಶದಲ್ಲಿ ಎಷ್ಟು ಬೆಳೆಯುತ್ತದೋ ಅದಕ್ಕಿಂತಲೂ ಜಾಸ್ತಿಯಾಗಿದೆ.
ಆದರೆ ಈ ಹುಲುಸಾದ ಜಟಿಲ ಜೀವವ್ಯವಸ್ಥೆಯು ಸೂಕ್ಷ್ಮ ರಚನೆಯಾಗಿದೆ. ಒಬ್ಬ ವಿಜ್ಞಾನಿ ಈ ಒಂದೊಂದು ಜಾತಿಯ ಸಸ್ಯಗಳನ್ನು ವಿಮಾನದ ರಿವೆಟ್ ಮೊಳೆಗಳಿಗೆ ಹೋಲಿಸಿದ್ದಾನೆ. ಎಷ್ಟು ರಿವೆಟ್ಗಳು ಸಡಿಲವಾಗುತ್ತವೆಯೋ, ಅಷ್ಟು ಒತ್ತಡವನ್ನು ಇತರ ರಿವೆಟ್ಗಳು ತಕ್ಕೊಂಡು ಅವು ಸಡಿಲವಾಗಲಾರಂಭಿಸುತ್ತವೆ. ಇದು ಯೋಗ್ಯ ಹೋಲಿಕೆಯಾದರೆ, ನಮ್ಮ ಭೂಗ್ರಹ ತೊಂದರೆಗೊಳಗಾಗಿರುವ “ವಿಮಾನ”ವಾಗಿದೆ. ಮಳೆ ಕಾಡುಗಳು ಕ್ಷಯವಾಗುವಂತೆ ಪ್ರತಿ ವರ್ಷ ಹತ್ತು ಸಾವಿರ ಸಸ್ಯ ಮತ್ತು ಪ್ರಾಣಿಗಳು ನಾಶಗೊಳ್ಳುತ್ತವೆಂದು ಕೆಲವರ ಅಂದಾಜು. ಈ ಭೂಗ್ರಹದ ಇತಿಹಾಸದಲ್ಲಿ ಅಳಿವಿನ ವೇಗಗತಿ ಹಿಂದೆಂದಿಗಿಂತಲೂ ಈಗ 400 ಪಾಲು ಹೆಚ್ಚು ಆದಂತೆ.
ಈ ಜೀವ ವಿವಿಧತೆಯ ಕುಸಿತದಿಂದಾಗುವ ವಿಪರೀತ ಜ್ಞಾನನಷ್ಟದ ಕುರಿತು ವಿಜ್ಞಾನಿಗಳು ಪ್ರಲಾಪಿಸುತ್ತಾರೆ. ಇದು ಪುಸ್ತಕಗಳನ್ನು ಒದುವ ಮೊದಲೇ, ಪುಸ್ತಕ ಸಂಗ್ರಹಾಲಯವನ್ನು ಸುಟ್ಟಂತೆ ಎಂದು ಅವರು ಹೇಳುತ್ತಾರೆ. ಆದರೆ ಇದಕ್ಕಿಂತಲೂ ಹೆಚ್ಚು ವಾಸ್ತವವಾದ ನಷ್ಟ ಇವೆ. ಉದಾಹರಣೆಗೆ ಅಮೆರಿಕದಲ್ಲಿ ಕೊಡಲಾಗುವ ಔಷಧಗಳಲ್ಲಿ 25 ಶೇಕಡಾ ಉಷ್ಣವಲಯದ ಕಾಡುಸಸ್ಯಗಳಲ್ಲಿ ಆಧರಿತವಾಗಿವೆ. ಇಂತಹ ಒಂದು ಔಷಧವು ಬಾಲ್ಯದ ಲುಕೆಮೀಯಾ ಉಪಶಮನವನ್ನು 1960ಗಳಲ್ಲಿದ್ದ 20 ಶೇಕಡಾದಿಂದ 1985ರಲ್ಲಿ 80 ಶೇಕಡಾಕ್ಕೆ ಏರಿಸಿತು. ಹೀಗೆ ಜಾಗತಿಕ ವನ್ಯಜೀವ ನಿಧಿಗನುಸಾರವಾಗಿ ಮಳೆ ಅರಣ್ಯಗಳು “ಒಂದು ವಿಸ್ತಾರವಾದ ಔಷಧ ಸಂಗ್ರಹಾಲಯವನ್ನು ಪ್ರತಿನಿಧೀಕರಿಸುತ್ತವೆ.” ಮತ್ತು ಇನ್ನೂ ಅಸಂಖ್ಯಾತ ಸಸ್ಯಗಳು ಔಷಧಕ್ಕಾಗಿ ಪರೀಕ್ಷಿಸಲ್ಪಡುವುದಿರಲಿ, ಕಂಡು ಹಿಡಿಯಲ್ಪಟ್ಟಿರುವುದೂ ಇಲ್ಲ.
ಇದಲ್ಲದೇ ಆದಿಯಲ್ಲಿ ಮಳೆ ಅರಣ್ಯದಲ್ಲಿ ಕಂಡು ಕೊಳ್ಳಲ್ಪಟ್ಟ ಸಸ್ಯಗಳಿಂದ ತಿನ್ನುವ ಎಷ್ಟು ಆಹಾರಗಳು ಬರುತ್ತವೆ ಎಂಬದನ್ನು ನಮ್ಮಲ್ಲಿ ಕೆಲವರೇ ಗ್ರಹಿಸಿದ್ದಾರೆ. (11ನೆಯ ಪುಟದ ಬಾಕ್ಸ್ ನೋಡಿ.) ವಿಜ್ಞಾನಿಗಳು ಇಂದಿನ ವರೆಗೂ ಈ ಗಟ್ಟಿಮುಟ್ಟಾದ ಅರಣ್ಯವಾಸೀ ಸಸ್ಯಗಳ ವಂಶವಾಹಿಗಳನ್ನೇ ಸಂಗ್ರಹಿಸಿ, ಅವನ್ನು ಅವುಗಳ ಹೆಚ್ಚು ದುರ್ಬಲ ವಂಶಸ್ಥರಾದ ನಾಡಿನ ಬೆಳೆಗಳು ಪಡೆಯುವ ರೋಗಗಳನ್ನು ತಡೆಯುವಂತೆ ಅವುಗಳಲ್ಲಿ ಸೇರಿಸುತ್ತಾರೆ. ಹೀಗೆ ಕೋಟ್ಯಾಂತರ ಡಾಲರುಗಳ ಪೈರಿನ ನಷ್ಟವನ್ನು ವಿಜ್ಞಾನಿಗಳು ಉಳಿಸಿದ್ದಾರೆ.
ಇದಲ್ಲದೇ ಜಗತ್ತಿನ ಜನಪ್ರಿಯ ಆಹಾರವಾಗಿ ಇನ್ನಾವ ಮಳೆ ಕಾಡಿನ ಆಹಾರಗಳು ಹೊರಬರಲಿವೆಯೆಂಬದು ನಮಗೆ ತಿಳಿದಿಲ್ಲ. ಸುಮಾರು ನೂರು ವರ್ಷಗಳ ಹಿಂದೆ, ತಮ್ಮ ಪಿತೃಗಳು ಬಾಳೆ ಹಣ್ಣನ್ನು ವಿಚಿತ್ರ ಸೌಂದರ್ಯದ ಫಲವಾಗಿ ಕಂಡಿದ್ದು, ಒಂದೊಂದಾಗಿ ಹೊದಿಸಲ್ಪಟ್ಟಿದ್ದ ಬಾಳೆಹಣ್ಣಿಗೆ ಎರಡು ಡಾಲರ್ ಹಣ ತೆರುತ್ತಿದ್ದರೆಂಬುದು ಉತ್ತರ ಅಮೆರಿಕನರಿಗೆ ಗೊತ್ತಿಲ್ಲ.
ಭೂವ್ಯಾಪಕ ಚಿತ್ರ
ಕಾಡು ಕಡಿತದ ಅಂತಿಮ ಬಲಿಪಶು ಮನುಷ್ಯನೇ. ಭೂಪರಿಸರದ ಪರಿಣಾಮಗಳು ತರಂಗ ತರಂಗವಾಗಿ ಹೊರಾಭಿಮುಖವಾಗಿ ಹೋಗುತ್ತಾ ಲೋಕವನ್ನು ಸುತ್ತುತ್ತವೆ. ಇದು ಹೇಗೆ? ಒಂದು ಮಳೆ ಅರಣ್ಯವನ್ನು ನಾವು ಪುನಃ ಪರೀಕ್ಷಿಸೋಣ. ಅದರ ಹೆಸರೇ ಸೂಚಿಸುವಂತೆ, ಮಳೆಯೇ ಅದರ ಪ್ರಾಮುಖ್ಯ ರೂಪರೇಖೆ. ಒಂದು ದಿನದಲ್ಲೇ ಎಂಟು ಇಂಚು ಅಂದರೆ ವರ್ಷಕ್ಕೆ ಮೂವತ್ತು ಅಡಿಗಳಷ್ಟು ಅಲ್ಲಿ ಬೀಳುತ್ತದೆ! ಈ ಧಾರಾಕಾರವಾಗಿ ಸುರಿಯುವ ಮಳೆಯನ್ನು ನಿಭಾಯಿಸುವಂತೆ ಮಳೆ ಕಾಡು ಪರಿಪೂರ್ಣವಾಗಿ ರೂಪಿಸಲ್ಪಟ್ಟಿದೆ.
ಹನಿಗಳ ರಭಸವನ್ನು ಎಲೆಯ ಚಪ್ಪರವು ತಡೆಯುವುದರಿಂದ ನೆಲದ ಮಣ್ಣನ್ನು ಅದು ಕೊಚ್ಚಿ ಕೊಂಡು ಹೋಗುವುದಿಲ್ಲ. ಅನೇಕ ಎಳೆಗಳಲ್ಲಿ ದೊಡ್ಡ ಹನಿಯನ್ನು ಒಡೆಯುವ ಚೂಪಾದ ತುದಿ ಅಥವಾ ತೊಟ್ಟಿಕ್ಕುವ ತುದಿಗಳಿವೆ. ಹೀಗೆ ರಭಸದಿಂದ ಬೀಳುವ ಮಳೆ ಒಂದೇ ಗತಿಯಲ್ಲಿ ತೊಟ್ಟಿಕ್ಕಿ ನೆಲಕ್ಕೆ ಬೀಳುತ್ತದೆ. ಇಂಥ ಚೂಪು ತುದಿಯ ಎಲೆಗಳು ನೀರನ್ನು ಬೇಗನೇ ಕೆಳಗೆ ಬೀಳಿಸುತ್ತವೆ. ಹೀಗೆ ಈ ಎಲೆಗಳು ತಮ್ಮ ಆವಿ ವಿಸರ್ಜನೆಯ ಅಂದರೆ ತೇವವನ್ನು ವಾತಾವರಣಕ್ಕೆ ಹಿಂದೆ ಕಳುಹಿಸುವ ಕೆಲಸಕ್ಕೆ ಹಿಂದೆ ಹೋಗುತ್ತವೆ. ಕಾಡಿನ ನೆಲವನ್ನು ತಲಪುವ 95 ಸೇಕಡಾ ನೀರನ್ನು ಬೇರುಗಳು ಹೀರಿ ಕೊಳ್ಳುತ್ತವೆ. ಒಟ್ಟಿನಲ್ಲಿ ಕಾಡು ಒಂದು ಬೃಹದಾಕಾರದ ಸ್ಪಂಜಿನಂತೆ ಮಳೆ ನೀರನ್ನು ಹೀರಿ ಕೊಂಡು ಅದನ್ನು ನಿಧಾನವಾಗಿ ಹೊರಬಿಡುತ್ತದೆ.
ಆದರೆ ಕಾಡು ಕಣ್ಮರೆಯಾಗುವಾಗ ಮಳೆ ನೇರವಾಗಿ ಮತ್ತು ರಭಸವಾಗಿ ಹೊದಿಕೆಯಿಲ್ಲದ ಮಣ್ಣಿಗೆ ಬಿದ್ದು ಟನ್ನುಗಳಷ್ಟನ್ನು ಕೊಚ್ಚಿ ಕೊಂಡು ಹೋಗುತ್ತದೆ. ಉದಾಹರಣೆಗೆ, ಪಶ್ಚಿಮ ಆಫ್ರಿಕಾದ ಐವರಿಕೋಸ್ಟ್ ದೇಶದ ಸ್ವಲ್ಪ ಇಳಿಜಾರಿರುವ ಎರಡೂವರೆ ಎಕ್ರೆ ಉಷ್ಣ ವಲಯದ ಮಳೆ ಕಾಡು ವರ್ಷಕ್ಕೆ ಒಂದು ಟನ್ನಿನ ನೂರರಲ್ಲಿ ಮೂರಂಶ ಮಣ್ಣನ್ನು ಕಳೆದು ಕೊಳ್ಳುತ್ತದೆ. ಆದರೆ ಅದೇ ಎರಡೂವರೆ ಎಕ್ರೆ ಸ್ಥಳ ಕಾಡು ಕಡಿದು ವ್ಯವಸಾಯ ಮಾಡಿದ ಸ್ಥಳವಾಗಿರುವಲ್ಲಿ ಅದು ವರ್ಷಕ್ಕೆ 90 ಟನ್ನು ಮಣ್ಣನ್ನು ಕಳೆದು ಕೊಳ್ಳುತ್ತದೆ. ಮತ್ತು ಬೋಳು ನೆಲವಾಗಿರುವಲ್ಲಿ 138 ಟನ್ನು ಮಣ್ಣನ್ನು ಕಳೆದು ಕೊಳ್ಳುತ್ತದೆ.
ಈ ರೀತಿಯ ಮಣ್ಣು ನಷ್ಟವು ವ್ಯವಸಾಯ ಮತ್ತು ಹುಲ್ಲುಗಾವಲಿಗಾಗಿ ನೆಲವನ್ನು ಹಾಳು ಮಾಡುವುದು ಮಾತ್ರವಲ್ಲ, ಹಾಸ್ಯವ್ಯಂಗವಾಗಿ, ದೊಡ್ಡ ರೀತಿಯಲ್ಲಿ ಕಾಡನ್ನು ಬರಿದು ಮಾಡುವ ಆಣೆಕಟ್ಟುಗಳೇ ಈ ಮಣ್ಣು ನಷ್ಟದಿಂದ ಹಾಳಾಗುತ್ತವೆ. ಕಾಡು ಕಡಿತದ ಸ್ಥಳಗಳಿಂದ ನದಿಗಳು ಎತ್ತಿಕೊಂಡು ಬರುವ ಗೋಡುಮಣ್ಣಿನಿಂದ ತುಂಬಲ್ಪಟ್ಟು ಅವು ಬೇಗನೇ ನೀರು ಹರಿಯುವುದನ್ನು ತಡೆದು ಆಣೆಕಟ್ಟುಗಳನ್ನು ವ್ಯರ್ಥಮಾಡುತ್ತವೆ. ಹೀಗೆ ತೀರಾ ಹೆಚ್ಚು ಗೋಡುಮಣ್ಣಿನಿಂದಾಗಿ ಕರಾವಳಿ ಪ್ರದೇಶಗಳು ಮತ್ತು ಮೊಟ್ಟೆಯಿಡುವ ಮತ್ತು ಮರಿ ಹಾಕುವ ಪ್ರದೇಶಗಳು ಮಲಿನಗೊಳ್ಳುತ್ತವೆ.
ಮಳೆ ಮತ್ತು ಹವಾಮಾನದ ಮೇಲೆ ಇನ್ನೂ ಹೆಚ್ಚು ವಿಪತ್ಕಾರಕ ಪರಿಣಾಮವಾಗುತ್ತದೆ. ಉಷ್ಣ ವಲಯದ ಮಳೆ ಕಾಡುಗಳಿಂದ ಬರುವ ನದಿಗಳು ಸಾಮಾನ್ಯವಾಗಿ ವರ್ಷವಿಡೀ ತುಂಬಿ ಹರಿಯುತ್ತವೆ. ಆದರೆ ನದಿಗಳಿಗೆ ಇಳಿದು ಬರುವ ನೀರನ್ನು ನಿಯಂತ್ರಿಸಲು ಕಾಡು ಇಲ್ಲದಿರುವುದರಿಂದ ಥಟ್ಟನೆ ಮಳೆ ಬಂದಾಗ ಅವು ಉಕ್ಕಿ ಹರಿದು ಆ ಬಳಿಕ ಒಣಗಿ ಹೋಗುತ್ತವೆ. ಹೀಗೆ ನೆರೆ ಮತ್ತು ಅನಾವೃಷ್ಟಿಗಳು ಸರದಿಯಾಗಿ ಬರುತ್ತವೆ. ಮಳೆ ಅರಣ್ಯವು ಆವಿ ವಿಸರ್ಜನೆಯ ಮೂಲಕ ಸ್ಥಳೀಕ ವಾತಾವರಣಕ್ಕೆ ಅರ್ಧಾಂಶದಷ್ಟೂ ತೇವವನ್ನು ಒದಗಿಸುವುದರಿಂದ ಇದು ಮಳೆಯ ನಮೂನೆಯ ಮೇಲೆ ಸಾವಿರಾರು ಮೈಲುಗಳಷ್ಟು ವಿಸ್ತಾರಕ್ಕೂ ಪರಿಣಾಮ ಬೀರ ಬಹುದು. ಹೀಗೆ, ಕಳೆದ ದಶಕದಲ್ಲಿ ಬಾಂಗ್ಲಾ ದೇಶದಲ್ಲಿ ನೆರೆಯಿಂದ ಮತ್ತು ಇಥಿಯೋಪಿಯದಲ್ಲಿ ಅನಾವೃಷ್ಟಿಯಿಂದ ಅಷ್ಟೊಂದು ಜನರು ಕೊಲ್ಲಲ್ಪಟ್ಟದ್ದಕ್ಕೆ ಸಹಾಯಕ ಕಾರಣವು ಕಾಡು ಕಡಿತವಾಗಿದ್ದಿರಬಹುದು.
ಆದರೆ ಕಾಡು ಕಡಿತವು ಇಡೀ ಭೂಗ್ರಹದ ಹವಾಮಾನದ ಮೇಲೆಯೂ ಪ್ರಭಾವ ಬೀರಬಹುದು. ಮಳೆ ಅರಣ್ಯಗಳು ಗಾಳಿಯಿಂದ ಕಾರ್ಬನ್ ಡೈ ಆಕ್ಸೈಡನ್ನು ಹೀರಿ, ಆ ಇಂಗಾಲದಿಂದ ತಮ್ಮ ಕಾಂಡ, ಕೊಂಬೆ ಮತ್ತು ತೊಗಟೆಗಳನ್ನು ರಚಿಸುವುದರಿಂದ ಅವುಗಳನ್ನು ಭೂಮಿಯ ಹಸಿರು ಶಾವಸಕೋಶವೆಂದು ಕರೆಯಲಾಗಿದೆ. ಆದರೆ ಕಾಡು ಸುಡಲ್ಪಡುವಾಗ ಇಂಗಾಲವೆಲ್ಲಾ ವಾತಾವರಣಕ್ಕೆ ಎಸೆಯಲ್ಪಡುತ್ತದೆ. ಮನುಷ್ಯನು (ಭೂಮಿಯಡಿಯ ಇಂಧನವನ್ನು ಮತ್ತು ಕಾಡನ್ನು ಉರಿಸಿ) ಎಷ್ಟೊಂದು ಕಾರ್ಬನ್ ಡೈ ಆಕ್ಸೈಡನ್ನು ವಾತಾವರಣಕ್ಕೆ ಎಸೆಯುತ್ತಾನೆಂದರೆ ಯಾವುದು ಭೂಗ್ರಹದ ಧ್ರುವಗಳ ಮಂಜುಗಡ್ಡೆಯನ್ನು ಕರಗಿಸಿ, ಸಮುದ್ರದ ಮಟ್ಟವನ್ನೇರಿಸಿ, ಕರಾವಳಿಗಳನ್ನು ಮುಳುಗಿಸಬಲ್ಲದೋ, ಆ ಸಸ್ಯಾಗಾರ ಕಾರ್ಯಭಾವವೆಂದು ಕರೆಯಲ್ಪಡುವ ಭೂವ್ಯಾಪಕವಾಗಿ ಬೆಚ್ಚಗಾಗುವ ಪ್ರವೃತ್ತಿಯನ್ನು ಆಗಲೇ ಆರಂಭಿಸಿರ ಬಹುದು.a
ಹೀಗೆ ಜಗತ್ತಿನ ಎಲ್ಲಾ ಕಡೆಗಳ ಜನರು ಈ ಬಿಕ್ಕಟ್ಟಿನಲ್ಲಿ ಸೇರಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಅವರು ಸಹಾಯಮಾಡುತ್ತಿದ್ದಾರೋ? ಪರಿಹಾರ ಮಾರ್ಗವನ್ನು ತೋರಿಸುತ್ತಿದ್ದಾರೋ? ಈ ಮಬ್ಬುಗವಿದ ಪರಿಸ್ಥಿತಿಯಲ್ಲಿ ಯಾವ ನಿರೀಕ್ಷೆಯಿದೆ? (g90 3/22)
[ಅಧ್ಯಯನ ಪ್ರಶ್ನೆಗಳು]
a ಸಪ್ಟಂಬರ 8, 1989ರ ಅವೇಕ್! ನೋಡಿ.
[ಪುಟ 9ರಲ್ಲಿರುವಚೌಕ]
ಮಳೆ ಕಾಡುಗಳಿಂದ ಕೊಡುಗೆ
ಈಗಲೇ ನಿಮ್ಮ ಸಮೀಪದಲ್ಲಿ ಉಷ್ಣ ವಲಯದ ಮಳೆ ಕಾಡಿರುವ ಜಮೀನು ತುಂಡು ಇದೆಯೋ? ಲೋಕದಾದ್ಯಂತವಿರುವ ಮಳೆ ಕಾಡುಗಳಲ್ಲಿ ಮೂಲದಲ್ಲಿ ದೊರಕುತ್ತಿದ್ದ ಆಹಾರಗಳಲ್ಲಿ ಕೆಲವನ್ನು ಗಮನಿಸಿರಿ: ಅಕ್ಕಿ, ಕಾಳುಧಾನ್ಯಗಳು, ಸಿಹಿಗೆಣಸುಗಳು, ಮನಿಯೋಕ (ಕಸವಾ ಮುಡಿಗೆಣಸು, ಇಲ್ಲವೇ ಮರಗೆಣಸು), ಕಬ್ಬು, ಬಾಳೆಹಣ್ಣು, ಕಿತ್ತಳೆ ಹಣ್ಣು, ಕಾಫಿ, ಟೊಮಾಟೊ, ಚಾಕೊಲೇಟ್, ಅನಾನಸು ಹಣ್ಣು, ಅವೊಕಾಡೊ ಹಣ್ಣು, ಸೀತಾಳೆ ಹೂವಿನ ಹಣ್ಣು, ದ್ರಾಕ್ಷೇ ಹಣ್ಣುಗಳು, ವಿವಿಧ ಥರಹದ ಕರಟಕಾಯಿಗಳು, ಸಂಬಾರ ಜಿನಿಸಿಗಳು, ಮತ್ತು ಚಾ, ಪ್ರಪಂಚದ ಆಹಾರ ಬೆಳೆಯ ಅರ್ಧದಷ್ಟು ಪೂರ್ಣವಾಗಿ ಮಳೆ ಕಾಡುಗಳಲ್ಲಿರುವ ಸಸ್ಯಾದಿಗಳ ಮೇಲೆ ಆಧರಿತವಾಗಿವೆ! ಮತ್ತು ಆಹಾರಗಳಲ್ಲಿ ಕೇವಲ ಕೆಲವೇ ಆಗಿವೆ.
ಔಷಧಗಳನ್ನು ಗಮನಿಸಿರಿ: ದ್ರಾಕ್ಷಿ ಬಳ್ಳಿಗಳಿಂದ ಬರುವ ಸಸ್ಯಕ್ಷಾರಗಳನ್ನು, ಶಸ್ತ್ರಚಿಕಿತ್ಸೆಯ ಮೊದಲು ಸ್ನಾಯುಗಳನ್ನು ಶಮನಗೊಳಿಸಲು ಬಳಸಲಾಗುತ್ತದೆ; ಹೈಡ್ರೊಕೊರ್ಟೀಸನ್ನ ಕಾರ್ಯಪ್ರವೃತ್ತಕ ಘಟಕಾಂಶಗಳನ್ನು ಊರಿಯೂತಕ್ಕೆ ವಿರುದ್ಧವಾಗಿ, ಕ್ವೀನೀನನ್ನು ಮಲೇರಿಯಾಕ್ಕೆ ವಿರುದ್ಧವಾಗಿ, ಡಿಜಿಟಾಲಿಸನ್ನು ಹೃದಯ ಸ್ತಂಭನವನ್ನು ಉಪಚರಿಸಲು, ಜನನ ನಿಯಂತ್ರಣದ ಗುಳಿಗೆಗಳಲ್ಲಿ ಡಿಯೊಜನಿನನ್ನು ಮತ್ತು ಕಾರುವುದನ್ನು ಪ್ರಚೋದಿಸಲು ಒಂದು ರೀತಿಯ ಗುಲ್ಮ ಬೇರನ್ನು ಉಪಯೋಗಿಸುತ್ತಾರೆ. ಇವೆಲ್ಲಾ ಮಳೆ ಕಾಡುಗಳ ಸಸ್ಯಗಳಿಂದ ಬರುತ್ತವೆ. ಇನ್ನಿತರ ಸಸ್ಯಗಳು ಏಯ್ಡ್ಸ್ನ್ನು, ಕಾನ್ಸರನ್ನು, ಅಲ್ಲದೇ ಅತಿ ಭೇದಿ, ಜ್ವರ, ಹಾವು ಕಡಿತ ಮತ್ತು ಕೆಂಪು ಕಣ್ಣು-ನೋವು ಹಾಗೂ ಕಣ್ಣಿನ ಇತರ ರೋಗಗಳಿಗೆ ಸಹಾಯವಾಗಬಹುದೆಂದು ಕಂಡು ಬರುತ್ತಾ ಇದೆ. ಮರೆಯಾಗಿರುವ ಇತರ ಚಿಕಿತ್ಸೆಗಳು ಏನಿವೆಯೋ ಅವು ಇನ್ನೂ ಅಪರಿಚಿತವಾಗಿವೆ. ಮಳೆ ಕಾಡುಗಳ ಸಸ್ಯಜಾತಿಯ ಕೇವಲ 1 ಸೇಕಡಾಕ್ಕಿಂತ ಕಡಿಮೆಯಷ್ಟು ವಿಜ್ಞಾನಿಗಳಿಂದ ಪರೀಕ್ಷಿಸಲ್ಪಟ್ಟಿದೆ. ಒಬ್ಬ ಸಸ್ಯ ವಿಜ್ಞಾನಿ ಪ್ರಲಾಪಿಸಿದ್ದು: “ಅಸ್ತಿತ್ವದಲ್ಲಿವೆ ಎಂದು ನಾವು ತಿಳಿಯದೇ ಇರುವ ವಸ್ತುಗಳನ್ನು ನಾವು ನಾಶ ಮಾಡುತ್ತಿದ್ದೇವೆ.”
ಆದರೂ ಕಣ್ಮರೆಯಾಗುತ್ತಿರುವ ಕಾಡುಗಳಿಂದ ಇನ್ನು ಹೆಚ್ಚು ಉತ್ಪಾದನೆಗಳು ಬರುತ್ತಾ ಇವೆ: “ಸಸ್ಯಕ್ಷಿರಗಳು, ರಾಳಗಳು, ಮೇಣ, ಅಮ್ಲಗಳು, ಮದ್ಯಸಾರಗಳು (ಎಸಿಡ್ಸ್), ರುಚಿಕಾರಕಗಳು, ಸಿಹಿಕಾರಕಗಳು, ರಂಗುಗಳು, ಜೀವರಕ್ಷಕ ತೋಳುಳ್ಳ ನಡುವಂಗಿ (ಲೈಫ್ ಜ್ಯಾಕೆಟ್)ಗಳಲ್ಲಿ ಬಳಸುವಂತಹ ನಾರುಗಳು, ಅಗಿಯುವ ಸಿಹಿ-ಗೊಂದು ಪದಾರ್ಥದಲ್ಲಿ ಗೋಂದು (ಚೂವಿಂಗ್ ಗಮ್), ಬಿದಿರು ಮತ್ತು ಬೆತ್ತದ ಗಿಡಗಳು— ಹೀಗೆ ಭೂಗೋಲದ ಉದ್ಯಮಕ್ಕೆ ಅದು ತಾನೇ ಒಂದು ವಿಸ್ತಾರವಾದ ಬುನಾದಿಯನ್ನು ಒದಗಿಸುತ್ತದೆ.
[ಪುಟ 10 ರಲ್ಲಿರುವಚಿತ್ರ]
(For fully formatted text, see publication)
ಕಾಡುಗಳ ಪಾತ್ರ
ಕಾಡುಗಳು ವಾತಾವರಣಕ್ಕೆ ತೇವ ಮತ್ತು ಆಮ್ಲಜನಕವನ್ನು ಸೇರಿಸುತ್ತವೆ ಜಡಿಮಳೆಯಿಂದ ಎಲೆಚಪ್ಪರವು ಮಣ್ಣನ್ನು ರಕ್ಷಿಸುತ್ತದೆ ಸಸ್ಯಗಳು ಇಂಗಾಲವನ್ನು ಹೀರಿ, ಸಂಗ್ರಹಿಸಿಡುತ್ತವೆ ಬೇರುಗಳು ತೇವ ನದಿಗಳಿಗೆ ಹರಿಯುವುದನ್ನು ನಿಯಂತ್ರಿಸುತ್ತವೆ
[ಪುಟ 10 ರಲ್ಲಿರುವ ಚಿತ್ರ]
ಕಾಡುಕಡಿತದ ಪರಿಣಾಮಗಳು
ವಾತಾವರಣಕ್ಕೆ ತೇವದ ನ್ಯೂನತೆಯೆಂದರೆ ಹೆಚ್ಚು ಅನಾವೃಷ್ಟಿಗಳು ಮಳೆಯು ಅರಕ್ಷಿತ ಮಣ್ಣನ್ನು ಕೊರೆದು ಹಾಕುತ್ತದೆ, ನೆರೆಗಳು ಹೆಚ್ಚುತ್ತವೆ ಮರ ಸುಡುವುದು ಇಂಗಾಲವನ್ನು ಹೊರಡಿಸಿ ಸಸ್ಯಾಗಾರ ಕಾರ್ಯಭಾವವನ್ನು ಹೆಚ್ಚಿಸುತ್ತದೆ