ನೀವು ಸಾವಿನ ಭಯದಿಂದ ಹೇಗೆ ಹೊರಬರಬಹುದು?
ಬೈಬಲ್ ಕೊಡೋ ಉತ್ರ
ಸಾವಿನ ಭಯ ಯಾರಿಗಿಲ್ಲ ಹೇಳಿ, ನಮ್ಮೆಲ್ರಿಗೂ ಸಾವಿನ ಭಯ ಇದೆ. ಅದಕ್ಕೆ ನಮ್ಮ ಜೀವ ಉಳಿಸ್ಕೊಳ್ಳೋಕೆ ಎಲ್ಲಾ ಪ್ರಯತ್ನ ಹಾಕ್ತೀವಿ. (1 ಕೊರಿಂಥ 15:26) ಆದ್ರೆ ಇವತ್ತು ಎಷ್ಟೋ ಜನ ಸಳ್ಳಾದ ವಿಷ್ಯಗಳಿಂದ, ಮೂಢನಂಬಿಕೆಗಳಿಂದ ಸಾವಿಗೆ ಅತಿಯಾಗಿ ಭಯಪಡ್ತಿದ್ದಾರೆ. ಆ ‘ಭಯಕ್ಕೆ ಜೀವನವಿಡೀ ದಾಸರಾಗಿದ್ದಾರೆ.’ (ಇಬ್ರಿಯ 2:15) ಇದ್ರಿಂದ ಅವ್ರ ಜೀವನದಲ್ಲಿ ಖುಷಿ ಕಣ್ಮರೆ ಆಗಿ ಭಯ ತುಂಬ್ಕೊಂಡಿದೆ. ಆದ್ರೆ ಸಾವಿನ ಬಗ್ಗೆ ಸತ್ಯ ತಿಳ್ಕೊಂಡ್ರೆ ಅತಿಯಾಗಿ ಭಯಪಡ್ದೆ ಖುಷಿ-ಖುಷಿಯಾಗಿ ಜೀವನ ಮಾಡೋಕಾಗುತ್ತೆ.—ಯೋಹಾನ 8:32.
ಸಾವಿನ ಬಗ್ಗೆ ಸತ್ಯ
ಸತ್ತಿರೋರಿಗೆ ಏನೂ ಗೊತ್ತಾಗಲ್ಲ. (ಕೀರ್ತನೆ 146:4) ಹಾಗಾಗಿ ‘ಸತ್ತ ಮೇಲೆ ನಂಗೆ ಶಿಕ್ಷೆ ಸಿಗುತ್ತೆ, ನರಕ ಅನುಭವಿಸಬೇಕಾಗುತ್ತೆ’ ಅಂತ ಭಯಪಡೋ ಅಗತ್ಯ ಇಲ್ಲ. ಯಾಕಂದ್ರೆ ಸತ್ತಿರೋರು ನಿದ್ರೆ ಮಾಡ್ತಿದ್ದಾರೆ ಅಂತ ಬೈಬಲ್ ಹೇಳುತ್ತೆ.—ಕೀರ್ತನೆ 13:3; ಯೋಹಾನ 11:11-14.
ಸತ್ತಿರೋರು ನಮಗೆ ತೊಂದ್ರೆ ಕೊಡೋಕಾಗಲ್ಲ. ಅವರು ಎಷ್ಟೇ ಕೆಟ್ಟವ್ರಾಗಿದ್ರೂ, ಎಷ್ಟೇ ದೊಡ್ಡ ಶತ್ರು ಆಗಿದ್ರೂ ಸತ್ತಮೇಲೆ ಏನ್ ಮಾಡೋಕೂ ಅವ್ರ ಕೈಯಲ್ಲಿ ಶಕ್ತಿ ಇರಲ್ಲ. (ಜ್ಞಾನೋಕ್ತಿ 21:16) ‘ಅವ್ರಲ್ಲಿದ್ದ ದ್ವೇಷ, ಹೊಟ್ಟೆಕಿಚ್ಚು ಸಹ ಅವ್ರ ಜೊತೆ ಮಣ್ಣಾಗುತ್ತೆ’ ಅಂತ ಬೈಬಲ್ ಹೇಳುತ್ತೆ.—ಪ್ರಸಂಗಿ 9:6.
ಹಾಗಾದ್ರೆ ಸಾವೇ ನಮ್ಮ ಕೊನೆನಾ? ಇಲ್ಲ. ದೇವರು ಸತ್ತಿರೋರರನ್ನ ಮತ್ತೆ ಎಬ್ಬಿಸಿ ಅವರು ಕಳ್ಕೊಂಡಿದ್ದ ಜೀವಾನ ವಾಪಾಸ್ ಕೊಡ್ತಾನೆ.—ಯೋಹಾನ 5:28, 29; ಅಪೊಸ್ತಲರ ಕಾರ್ಯ 24:15.
‘ಸಾವೇ ಇಲ್ಲದೆ ಇರೋ ಪರಿಸ್ಥತಿ ತರ್ತೀನಿ’ ಅಂತ ದೇವರು ಮಾತು ಕೊಟ್ಟಿದ್ದಾನೆ. (ಪ್ರಕಟನೆ 21:4) ಆಗ “ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ” ಅಂತ ಬೈಬಲ್ ಹೇಳುತ್ತೆ. ಹೌದು, ಕೊನೆಗೂ ಸಾವಿನ ಭಯ ಇಲ್ಲದೆ ಶಾಶ್ವತವಾಗಿ ಜೀವಿಸ್ತಾರೆ!—ಕೀರ್ತನೆ 37:29.