Photo by Stringer/Getty Images
ಸದಾ ಎಚ್ಚರವಾಗಿರಿ!
ಇಸ್ರೇಲ್ ಮತ್ತು ಸುತ್ತಲಿನ ದೇಶಗಳ ಯುದ್ಧ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಇಡೀ ಪ್ರಪಂಚದಲ್ಲಿ ಈಗ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಬಗ್ಗೆನೇ ಬಿಸಿಬಿಸಿ ಚರ್ಚೆ. ಇವ್ರ ಮಧ್ಯೆ ಇರೋ ಯುದ್ಧ ಮುಂದೆ ಇನ್ನೂ ದೊಡ್ಡದಾಗುತ್ತಾ? ಸರ್ಕಾರಗಳು ಎಚ್ಚೆತ್ಕೊಂಡು ಈ ವಿಪತ್ತನ್ನ ತಪ್ಪಿಸಿ, ಶಾಶ್ವತ ಶಾಂತಿ ತರುತ್ತಾ?
ಬೈಬಲ್ ಭವಿಷ್ಯವಾಣಿ ಬಗ್ಗೆ ತಿಳ್ಕೊಂಡಿರೋರು ಈ ಯುದ್ಧದಿಂದ ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಹೇಳಿರೋ ಹರ್ಮಗೆದೋನ್ ಯುದ್ಧ ಶುರುವಾಗುತ್ತಾ ಅಂತ ಯೋಚಿಸ್ತಿರಬಹುದು.
ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಸರ್ಕಾರಗಳು ಈ ಯುದ್ಧಗಳನ್ನ ನಿಲ್ಲಿಸುತ್ತಾ?
ಬೈಬಲ್ ಹೀಗೆ ಹೇಳುತ್ತೆ: “ದೊಡ್ಡದೊಡ್ಡ ಅಧಿಕಾರಿಗಳ ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ, ಅವರು ರಕ್ಷಣೆ ಕೊಡೋಕೆ ಆಗಲ್ಲ.”—ಕೀರ್ತನೆ 146:3.
ಇಸ್ರೇಲಲ್ಲಿ ನಡೀತಿರೋ ಯುದ್ಧಗಳನ್ನ ಸರ್ಕಾರಗಳು ನಿಲ್ಲಿಸೋಕೆ ಆಗುತ್ತಾ ಇಲ್ವಾ ಅಂತ ನಮಗೆ ಗೊತ್ತಿಲ್ಲ. ಆದ್ರೆ ಯಾವುದೇ ರಾಜಕೀಯ ನಾಯಕ, ಮನುಷ್ಯ ಸರ್ಕಾರ ಅಥವಾ ಜನ್ರ ಗುಂಪು ಯುದ್ಧಗಳನ್ನ ನಿಲ್ಲಿಸಿ, ಶಾಶ್ವತ ಶಾಂತಿಯನ್ನ ತರೋಕೆ ಸಾಧ್ಯನೇ ಇಲ್ಲ ಅಂತ ಬೈಬಲ್ ಸ್ಪಷ್ಟವಾಗಿ ಹೇಳಿದೆ. ಹಾಗಾದ್ರೆ ಯುದ್ಧಗಳು ನಿಲ್ಲೋದೇ ಇಲ್ವಾ? ದೇವರಿಗೆ ಮಾತ್ರನೇ ‘ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸುವ ಶಕ್ತಿ ಇದೆ.’—ಕೀರ್ತನೆ 46:9.
ಇದ್ರ ಬಗ್ಗೆ ಹೆಚ್ಚನ್ನ ತಿಳ್ಕೊಳೋಕೆ ಕಾವಲಿನಬುರುಜು “ಯುದ್ಧಗಳು ಕೊನೆಯಾಗುತ್ತೆ—ಹೇಗೆ?” ಅನ್ನೋ ಲೇಖನ ನೋಡಿ.
ಇಸ್ರೇಲಲ್ಲಿ ನಡೀತಿರೋ ಯುದ್ಧ ಭವಿಷ್ಯವಾಣಿನ ನೆರವೇರಿಸ್ತಾ ಇದ್ಯಾ?
ಬೈಬಲ್ ಹೀಗೆ ಹೇಳುತ್ತೆ: “ಯುದ್ಧ ನಡಿಯೋದನ್ನ, ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿಯನ್ನ ನೀವು ಕೇಳ್ತೀರ. . . . ಜನ್ರ ಮೇಲೆ ಜನ್ರು ಆಕ್ರಮಣ ಮಾಡ್ತಾರೆ. ಒಂದು ದೇಶ ಇನ್ನೊಂದು ದೇಶದ ಮೇಲೆ ಯುದ್ಧಮಾಡುತ್ತೆ.”—ಮತ್ತಾಯ 24:6, 7.
ಇಸ್ರೇಲಲ್ಲಿ ನಡೀತಿರೋ ಯುದ್ಧ “ಈ ಲೋಕದ ಅಂತ್ಯಕಾಲಕ್ಕೆ” ಮತ್ತು ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ ಅನ್ನೋದಕ್ಕೆ ಇನ್ನೊಂದು ಸೂಚನೆ ಆಗಿದೆ. (ಮತ್ತಾಯ 24:3; 2 ತಿಮೊತಿ 3:1) ದೇವರು ಯುದ್ಧಗಳನ್ನ ತುಂಬ ಬೇಗ ನಿಲ್ಲಿಸ್ತಾನೆ ಮತ್ತು ಮನುಷ್ಯರ ಕಷ್ಟಗಳನ್ನ ತೆಗೆದು ಹಾಕ್ತಾನೆ ಅಂತ ಈ ಯುದ್ಧಗಳು ತೋರಿಸ್ತಿವೆ.
ಇದ್ರ ಬಗ್ಗೆ ಹೆಚ್ಚನ್ನ ತಿಳ್ಕೊಳೋಕೆ ‘ಕೊನೇ ದಿನಗಳ’ ಅಥವಾ ‘ಅಂತ್ಯಕಾಲದ’ ಸೂಚನೆಗಳೇನು? ಅನ್ನೋ ಲೇಖನ ನೋಡಿ.
ಹರ್ಮಗೆದೋನ್ ಇಸ್ರೇಲಿಂದ ಶುರುವಾಗುತ್ತಾ?
ಬೈಬಲ್ ಹೀಗೆ ಹೇಳುತ್ತೆ: “ಆ ಕೆಟ್ಟ ದೇವದೂತರು ರಾಜರನ್ನ ಒಂದು ಜಾಗದಲ್ಲಿ ಒಟ್ಟು ಸೇರಿಸಿದ್ರು. ಹೀಬ್ರು ಭಾಷೆಯಲ್ಲಿ ಆ ಜಾಗದ ಹೆಸ್ರು ಹರ್ಮಗೆದೋನ್.”—ಪ್ರಕಟನೆ 16:16.
ಹರ್ಮಗೆದೋನ್ ಯುದ್ಧ ಇಸ್ರೇಲಲ್ಲಿ ಮನುಷ್ಯ ಸರ್ಕಾರಗಳ ಮಧ್ಯೆ ಶುರುವಾಗೋ ಯುದ್ಧ ಅಲ್ಲ. ಹರ್ಮಗೆದೋನ್ ಎಲ್ಲ ಮನುಷ್ಯ ಸರ್ಕಾರಗಳು ಜೊತೆ ಸೇರಿ ದೇವರ ಜೊತೆ ಮಾಡೋ ಇಡೀ ಭೂಮಿಯಲ್ಲಿ ನಡೆಯೋ ಯುದ್ಧ ಆಗಿದೆ.
ಇದ್ರ ಬಗ್ಗೆ ಹೆಚ್ಚನ್ನ ತಿಳ್ಕೊಳೋಕೆ “ಹರ್ಮಗೆದೋನ್ ಯುದ್ಧ ಅಂದರೇನು?” ಅನ್ನೋ ಲೇಖನ ನೋಡಿ.
ಇದೆಲ್ಲದ್ರ ಮಧ್ಯ ಶಾಂತಿಯಿಂದ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
ಬೈಬಲ್ ಹೀಗೆ ಹೇಳುತ್ತೆ: “ಯಾವುದ್ರ ಬಗ್ಗೆನೂ ಚಿಂತೆ ಮಾಡಬೇಡಿ. ಅದ್ರ ಬದ್ಲು ಯಾವಾಗ್ಲೂ ದೇವರಿಗೆ ಪ್ರಾರ್ಥಿಸಿ. ಪ್ರತಿಯೊಂದು ವಿಷ್ಯದಲ್ಲೂ ಮಾರ್ಗದರ್ಶನೆಗಾಗಿ ಕೇಳ್ಕೊಳ್ಳಿ, ಅಂಗಲಾಚಿ ಬೇಡಿ, ಯಾವಾಗ್ಲೂ ಆತನಿಗೆ ಧನ್ಯವಾದ ಹೇಳಿ.”—ಫಿಲಿಪ್ಪಿ 4:6.
ನಾವು ಪ್ರಾರ್ಥನೆ ಮಾಡಬೇಕು ಅಂತ ಯೆಹೋವa ದೇವರೇ ನಮಗೆ ಹೇಳ್ತಿದ್ದಾನೆ. ಯಾಕಂದ್ರೆ ದೇವರಿಗೆ ನಮ್ಮ ಮೇಲೆ ಪ್ರೀತಿ ಇದೆ. ಆದ್ರಿಂದ ನಮ್ಮ ಪ್ರಾರ್ಥನೆ ಕೇಳಿಸ್ಕೊತಾನೆ ಮತ್ತು ಚಿಂತೆಗಳನ್ನ ನಿಭಾಯಿಸೋಕೆ ಸಹಾಯ ಮಾಡ್ತಾನೆ. (1 ಪೇತ್ರ 5:7) ಆತನು ನಮಗೆ ಸಹಾಯ ಮಾಡಬೇಕು ಅಂತ ಈ ಯುದ್ಧಗಳು ಯಾಕೆ ಇವೆ ಮತ್ತು ಅವನ್ನ ಆತನು ಹೇಗೆ ನಿಲ್ಲಿಸ್ತಾನೆ ಅಂತ ತಿಳಿಸಿದ್ದಾನೆ. ಅಷ್ಟೇ ಅಲ್ಲ, ಯುದ್ಧಗಳಿಂದ ಆಗಿರೋ ಸಾವು ನೋವನ್ನ ಹೇಗೆ ಸರಿ ಮಾಡ್ತಾನೆ ಅಂತಾನೂ ಹೇಳಿದ್ದಾನೆ.—ಪ್ರಕಟನೆ 21:3, 4.
ದೇವರು ನಮಗೆ ಹೇಗೆಲ್ಲ ಸಹಾಯ ಮಾಡ್ತಾನೆ ಅಂತ ಹೆಚ್ಚು ತಿಳ್ಕೊಳೋಕೆ “ಯೂ ಕ್ಯಾನ್ ಫೈಂಡ್ ವರ್ಡ್ಸ್ ಆಫ್ ಕಂಫರ್ಟ್ ಇನ್ ದಿ ಬೈಬಲ್” ಅನ್ನೋ ಲೇಖನ (ಇಂಗ್ಲಿಷ್) ನೋಡಿ.
a ದೇವರ ಹೆಸ್ರು ಯೆಹೋವ.—ಕೀರ್ತನೆ 83:18.