ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 13-14
ಭಯಪಡದೆ ಸುಮ್ಮನೆ ನಿಂತು ಯೆಹೋವನು ನಿಮ್ಮನ್ನ ಹೇಗೆ ಕಾಪಾಡುತ್ತಾನೆ ಅಂತ ನೋಡಿ
ಯೆಹೋವನಿಗೆ ನಮ್ಮ ಬಗ್ಗೆ ಕಾಳಜಿ ಇದೆ. ನಮ್ಮನ್ನ ಪ್ರೀತಿಯಿಂದ ಸಂರಕ್ಷಿಸುತ್ತಾನೆ. ಇಸ್ರಾಯೇಲ್ಯರನ್ನ ಈಜಿಪ್ಟಿನಿಂದ ಬಿಡಿಸಿ ಕರಕೊಂಡು ಬರುವಾಗ ಯೆಹೋವನು ಅವರಿಗೆ ಹೇಗೆ ಪ್ರೀತಿ ಕಾಳಜಿ ತೋರಿಸಿದನು?
ಅವರನ್ನು ವ್ಯವಸ್ಥಿತವಾಗಿ ಗುಂಪುಗುಂಪಾಗಿ ಕರಕೊಂಡು ಬಂದನು.—ವಿಮೋ 13:18
ಅವರಿಗೆ ಬೇಕಾದ ಮಾರ್ಗದರ್ಶನೆ ಮತ್ತು ಸಂರಕ್ಷಣೆ ಕೊಟ್ಟನು.—ವಿಮೋ 14:19, 20
ಚಿಕ್ಕವರಿಂದ ಹಿಡಿದು ದೊಡ್ಡವರ ವರಗೆ ಪ್ರತಿಯೊಬ್ಬರನ್ನ ಕಾಪಾಡಿದನು.—ವಿಮೋ 14:29, 30
ಮಹಾಸಂಕಟ ಹತ್ತಿರದಲ್ಲಿದ್ದರೂ ನಾವು ಯಾವ ಭರವಸೆ ಇಡಬಹುದು?—ಯೆಶಾ 30:15