ಸಿಹಿಸುದ್ದಿ! ಕಿರುಹೊತ್ತಗೆಯನ್ನು ಉಪಯೋಗಿಸಿ ಮಡಗಾಸ್ಕರ್‌ನಲ್ಲಿ ಸಾರುತ್ತಿರುವ ಸಹೋದರಿಯರು
ಮಾದರಿ ನಿರೂಪಣೆಗಳು
ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 ಕರಪತ್ರ)
ಪ್ರಶ್ನೆ: ತೀರಿಕೊಂಡ ನಮ್ಮ ಆತ್ಮೀಯರನ್ನು ಮತ್ತೆ ನೋಡಲು ಸಾಧ್ಯನಾ?
ವಚನ: ಅಕಾ 24:15
ಕರಪತ್ರ ಕೊಡುವಾಗ ಹೀಗೆ ಹೇಳಿ: ಸತ್ತ ಜನರನ್ನು ಪುನಃ ಜೀವಿಸುವಂತೆ ಮಾಡುತ್ತೇನೆಂದು ದೇವರು ಕೊಟ್ಟ ಮಾತನ್ನು ನಂಬಲು ಮೂರು ಕಾರಣಗಳು ಈ ಕರಪತ್ರದಲ್ಲಿವೆ.
ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35 ಕರಪತ್ರ) ಕೊನೆಯ ಪುಟ
ಪ್ರಶ್ನೆ: ಕೆಲವು ಆಮೆಗಳು 150 ವರ್ಷ, ಮರಗಳು ಸಾವಿರಾರು ವರ್ಷ ಬದುಕುವಾಗ ಮನುಷ್ಯರು ಯಾಕೆ ಕೇವಲ 70-80 ವರ್ಷ ಬದುಕುತ್ತಾರೆ?
ವಚನ: ಆದಿ 3:17-19
ಕರಪತ್ರ ಕೊಡುವಾಗ ಹೀಗೆ ಹೇಳಿ: ಈ ಪ್ರಶ್ನೆಗೆ ಬೈಬಲಾಧಾರಿತ ಉತ್ತರ ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯ 6ನೇ ಪಾಠದಲ್ಲಿದೆ.
ದೇವರಿಂದ ನಿಮಗೊಂದು ಸಿಹಿಸುದ್ದಿ!
ಕಿರುಹೊತ್ತಗೆ ಕೊಡುವಾಗ ಹೀಗೆ ಹೇಳಿ: ನಾನು ಉಚಿತ ಬೈಬಲ್ ಅಧ್ಯಯನದ ಕಾರ್ಯಕ್ರಮದ ಕುರಿತು ತಿಳಿಸಲು ಬಂದಿದ್ದೇನೆ. ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲಿನಲ್ಲಿ ಎಲ್ಲಿ ಉತ್ತರ ಸಿಗುತ್ತದೆಂದು ಈ ಕಿರುಹೊತ್ತಗೆ ತೋರಿಸುತ್ತದೆ.
ಪ್ರಶ್ನೆ: ದೇವರು ಭೂಮಿಯನ್ನು ಯಾಕೆ ಸೃಷ್ಟಿ ಮಾಡ್ದ? ಇದಕ್ಕೆ ಉತ್ತರವನ್ನು ಈ ಕಿರುಹೊತ್ತಗೆಯಿಂದ ನೀವು ಸುಲಭವಾಗಿ ಕಂಡು ಹಿಡಿಯಬಹುದು. ಅದು ಹೇಗೆ ಅಂತ ನಾನೀಗ ನಿಮಗೆ ತೋರಿಸ್ಲಾ? [ಪಾಠ 5ರ 1ನೇ ಪ್ರಶ್ನೆಯನ್ನು ಚರ್ಚಿಸಿ.]
ವಚನ: ಕೀರ್ತ 37:29
ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ
ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.