ಜನವರಿ 4-10
2 ಪೂರ್ವಕಾಲವೃತ್ತಾಂತ 29-32
ಗೀತೆ 114 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಶ್ರಮಪಟ್ಟರೆ ಮಾತ್ರ ಸತ್ಯಾರಾಧನೆ ಸಾಧ್ಯ”: (10 ನಿ.)
2ಪೂರ್ವ 29:10-17—ಹಿಜ್ಕೀಯನು ದೃಢನಿಶ್ಚಯದಿಂದ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುತ್ತಾನೆ
2ಪೂರ್ವ 30:5, 6, 10-12—ಹಿಜ್ಕೀಯನು ಸಹೃದಯದ ಜನರನ್ನೆಲ್ಲಾ ಆರಾಧನೆಗಾಗಿ ಕೂಡಿಬರುವಂತೆ ಆಮಂತ್ರಿಸುತ್ತಾನೆ
2ಪೂರ್ವ 32:25, 26—ಹಿಜ್ಕೀಯನು ತನ್ನನ್ನು ತಗ್ಗಿಸಿಕೊಂಡು ಗರ್ವವನ್ನು ಬಿಟ್ಟನು (ಕಾವಲಿನಬುರುಜು 05 10/15 ಪು. 25, ಪ್ಯಾ. 20)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
2ಪೂರ್ವ 29:11—ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎನ್ನುವ ವಿಷಯದಲ್ಲಿ ಹಿಜ್ಕೀಯನು ಹೇಗೆ ಉತ್ತಮ ಮಾದರಿಯಿಟ್ಟನು? (ಕಾವಲಿನಬುರುಜು 13 11/15 ಪು. 17, ಪ್ಯಾ. 6-7)
2ಪೂರ್ವ 32:7, 8—ಭವಿಷ್ಯತ್ತಿನಲ್ಲಿ ಎದುರಾಗುವಂಥ ಕಷ್ಟಗಳನ್ನು ಎದುರಿಸಲು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ನಾವೀಗಲೇ ತೆಗೆದುಕೊಳ್ಳಬಹುದು? (ಕಾವಲಿನಬುರುಜು 13 11/15 ಪು. 20, ಪ್ಯಾ. 17)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: 2ಪೂರ್ವ 31:1-10 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ. (15 ನಿ.)
ಚರ್ಚೆ. T-35 ಕರಪತ್ರದ ಮೊದಲನೇ ಮಾದರಿ ನಿರೂಪಣೆಯ ವಿಡಿಯೋವನ್ನು ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಪುನರ್ಭೇಟಿಗಾಗಿ ಪ್ರಚಾರಕನು ಏನು ಮಾಡಿದನೆಂದು ಒತ್ತಿಹೇಳಿ. ಇದರಂತೆಯೇ ಕರಪತ್ರದ ಎರಡನೇ ಮಾದರಿ ನಿರೂಪಣೆಯನ್ನು ಮತ್ತು ಸಿಹಿಸುದ್ದಿ ಕಿರುಹೊತ್ತಗೆಯ ನಿರೂಪಣೆಯನ್ನು ಮಾಡಿ ತೋರಿಸಿ. “ಸಿಹಿಸುದ್ದಿ ಕಿರುಹೊತ್ತಗೆಯಿಂದ ಬೈಬಲ್ ಅಧ್ಯಯನವನ್ನು ಮಾಡುವುದು ಹೇಗೆ?” ಎಂಬ ಲೇಖನವನ್ನು ನೋಡಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
“ಸತ್ಯಾರಾಧನೆಯ ಸ್ಥಳಗಳನ್ನು ಕಟ್ಟುವುದು ಮತ್ತು ಸುಸ್ಥಿತಿಯಲ್ಲಿಡುವುದು ನಮ್ಮ ಸುಯೋಗ”: (15 ನಿ.) ಚರ್ಚೆ. ರಾಜ್ಯ ಸಭಾಗೃಹದ ನಿರ್ಮಾಣ ಕೆಲಸದಲ್ಲಿ ಭಾಗವಹಿಸಿರುವ ಪ್ರಚಾರಕರು ತಮಗಾದ ಆನಂದವನ್ನು ಸಭೆಯೊಂದಿಗೆ ಹಂಚಿಕೊಳ್ಳುವಂತೆ ಕೇಳಿಕೊಳ್ಳಿ. ರಾಜ್ಯ ಸಭಾಗೃಹವನ್ನು ಶುಚಿಗೊಳಿಸುವ ಮತ್ತು ಸುಸ್ಥಿತಿಯಲ್ಲಿಡುವ ಕೆಲಸವನ್ನು ನೋಡಿಕೊಳ್ಳುವ ಸಹೋದರನನ್ನು ಚುಟುಕಾಗಿ ಸಂದರ್ಶನ ಮಾಡಿ, ಸ್ಥಳೀಯ ಏರ್ಪಾಡುಗಳ ಬಗ್ಗೆ ಕೇಳಿ.
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 89, 90 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 140 ಮತ್ತು ಪ್ರಾರ್ಥನೆ
ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.