ಫಲ ನೀಡುವ ಅಭಿಯಾನ
ತಮ್ಮ ತಮ್ಮ ಅಧಿವೇಶನ ಶುರುವಾಗುವ ಮೂರು ವಾರಗಳ ಮುಂಚಿನಿಂದ ಎಲ್ಲಾ ಸಭೆಗಳು ತಮ್ಮ ಸೇವಾಕ್ಷೇತ್ರದ ಆಸಕ್ತರನ್ನು ಆಮಂತ್ರಿಸುವ ಅಭಿಯಾನದಲ್ಲಿ ತೊಡಗುತ್ತಾರೆ. ಇದಕ್ಕೆ ಕಾರಣವಿದೆ. ಏನೆಂದರೆ, ಯಾರು ಈ ಆಮಂತ್ರಣ ಸ್ವೀಕರಿಸುತ್ತಾರೋ ಅವರು ಖಂಡಿತ ಅಲ್ಲಿ ನೀಡುವ ಭಾಷಣಗಳನ್ನು ಕೇಳಿ, ಒಳ್ಳೇ ರೀತಿ ಕಾರ್ಯನಿರ್ವಹಿಸುವ ಡಿಪಾರ್ಟ್‌ಮೆಂಟ್‌ಗಳನ್ನು ನೋಡಿ, ಎಲ್ಲಾ ಕೆಲಸ ಸ್ವಯಂ ಸೇವಕರಿಂದಲೇ ನಡೆಯುವುದನ್ನು ನೋಡಿ, ನಮ್ಮ ಒಳ್ಳೇ ನಡತೆ ಮತ್ತು ಐಕ್ಯತೆ ನೋಡಿ ಬೆರಗಾಗುತ್ತಾರೆ. (ಕೀರ್ತ. 110:3; 133:1; ಯೆಶಾ. 65:13, 14) ಆಮಂತ್ರಣ ಪತ್ರ ಪಡೆಯುವವರೆಲ್ಲ ಅಧಿವೇಶನಕ್ಕೆ ಬರುತ್ತಾರಾ? ಆಸಕ್ತಿ ಇರುವ ಜನರು ಅಧಿವೇಶನ ನಡೆಯುವ ಸ್ಥಳದಿಂದ ತುಂಬ ದೂರದಲ್ಲಿದ್ದರೆ?
2011ರ ಜಿಲ್ಲಾ ಅಧಿವೇಶನ ನಡೆದ ನಂತರ ಬ್ರಾಂಚ್ ಆಫೀಸ್ ಒಂದಕ್ಕೆ ಒಬ್ಬ ಮಹಿಳೆಯ ಪತ್ರ ಬಂತು. ಅವರಿಗೆ ಮನೆ ಬಾಗಿಲ ಹತ್ತಿರ ಆಮಂತ್ರಣ ಪತ್ರ ಸಿಕ್ಕಿರುತ್ತೆ. ಯೆಹೋವನ ಸಾಕ್ಷಿಗಳು ಬಾಗಿಲು ತಟ್ಟಿದರೆ ಈ ಮಹಿಳೆ ಮನೆಯಲ್ಲಿಲ್ಲದವರ ಹಾಗೆ ನಾಟಕ ಮಾಡುತ್ತಿದ್ದರು. ಅವರು ಹೀಗೆ ಬರೆದಿದ್ದರು: “ನನಗೆ ಸುಂದರ ಮನೆ ಇದೆ. ಒಳ್ಳೇ ಗಂಡ ಇದ್ದಾರೆ. ಸಂತೋಷವಾಗಿರಕ್ಕೆ ಏನೆಲ್ಲ ಬೇಕೊ ಎಲ್ಲ ನನ್ನ ಹತ್ತಿರ ಇದೆ ಅಂತ ಅಂದುಕೊಂಡಿದ್ದೆ. ಹಾಗಿದ್ದರೂ ನಾನು ಸಂತೋಷವಾಗಿರಲಿಲ್ಲ. ನನ್ನ ಜೀವನಕ್ಕೊಂದು ಅರ್ಥ ಇರಲಿಲ್ಲ. ಅದಕ್ಕೆ ನಾನು 320 ಕಿ.ಮೀ. ದೂರದಲ್ಲಿ ನಡೆಯುತ್ತಿದ್ದ ಈ ಅಧಿವೇಶನಕ್ಕೆ ಹೋಗೇ ಬಿಡೋಣ ಅಂತ ತೀರ್ಮಾನಿಸಿ ಶನಿವಾರದ ಕಾರ್ಯಕ್ರಮಕ್ಕೆ ಹೊರಟೇ ಬಿಟ್ಟೆ.” ಅವರಿಗೆ ಅಧಿವೇಶನ ಎಷ್ಟು ಇಷ್ಟ ಆಯಿತು ಅಂದರೆ ಭಾನುವಾರ ಕೂಡ ಹಾಜರಿರಬೇಕು ಅಂತ ಅನಿಸಿತು. ಇದನ್ನು ಗಂಡನಿಗೆ ಫೋನ್ ಮಾಡಿ ಹೇಳಿ, ಅಲ್ಲೇ ಉಳಿದುಕೊಂಡರು. “ಭಾಷಣಗಳನ್ನು ಕಿವಿಗೊಟ್ಟು ಕೇಳಿದೆ. ತುಂಬ ಜನ ಯೆಹೋವನ ಸಾಕ್ಷಿಗಳು ಪರಿಚಯವಾದರು. ಇಂಥ ಸಂತೋಷ ನನಗೆ ಯಾವಾಗಲೂ ಇರಬೇಕು ಅಂತ ತೀರ್ಮಾನ ಮಾಡಿದೆ.” ಮನೆಗೆ ಬಂದ ಕೆಲವು ದಿನಗಳ ನಂತರ ಬೈಬಲ್ ಕಲಿಯಲು ಪ್ರಾರಂಭಿಸಿದರು. ಅನಂತರದ ನಾಲ್ಕು ತಿಂಗಳಲ್ಲಿ ದೀಕ್ಷಾಸ್ನಾನ ಪಡೆದಿಲ್ಲದ ಪ್ರಚಾರಕರಾದರು. “ನನ್ನ ಬಾಗಿಲ ಹತ್ತಿರ ಆಮಂತ್ರಣ ಪತ್ರ ಸಿಕ್ಕಿದ್ದು ಎಷ್ಟು ಒಳ್ಳೇದಾಯಿತು. ನನ್ನ ಜೀವನಕ್ಕೊಂದು ಅರ್ಥವಿದೆ.”
ಆಮಂತ್ರಣ ಪತ್ರ ಪಡೆದವರಲ್ಲಿ ಕೆಲವರಾದರೂ ಕಾರ್ಯಕ್ರಮಕ್ಕೆ ಬಂದೇ ಬರುತ್ತಾರೆ. ಆದ್ದರಿಂದ ಹುರುಪಿನಿಂದ ಅಭಿಯಾನದಲ್ಲಿ ಪಾಲ್ಗೊಳ್ಳಿ. ಆಮಂತ್ರಣ ಪತ್ರ ಇನ್ನೂ ಉಳಿದಿದ್ದರೆ ಅಧಿವೇಶನ ನಡೆಯುವ ಊರಿಗೆ ತೆಗೆದುಕೊಂಡು ಬನ್ನಿ. ಅನೌಪಚಾರಿಕ ಸಾಕ್ಷಿ ನೀಡುವಾಗ ನೀವದನ್ನು ಬಳಸಬಹುದು.
[ಪುಟ 2ರಲ್ಲಿರುವ ಚಿತ್ರ]
ಆಮಂತ್ರಣ ಪತ್ರ ನೀಡುವುದು ಹೇಗೆ?
ಸೇವಾಕ್ಷೇತ್ರದ ಎಲ್ಲ ಜನರಿಗೂ ಆಮಂತ್ರಣ ಪತ್ರ ನೀಡಬೇಕಾದ ಕಾರಣ ನಿರೂಪಣೆ ಚಿಕ್ಕದಾಗಿದ್ದರೆ ಒಳ್ಳೇದು. ಹೀಗೆ ಹೇಳಬಹುದು: “ನಮಸ್ಕಾರ. ಈ ಆಮಂತ್ರಣ ಪತ್ರವನ್ನು ಭೂಮಿಯಲ್ಲಿ ಎಲ್ಲಾ ಕಡೆ ನೀಡಲಾಗುತ್ತಿದೆ. ಇದು ನಿಮಗೆ. ಹೆಚ್ಚಿನ ಮಾಹಿತಿ ಇದರಲ್ಲೇ ಇದೆ.” ನೀಡುವಾಗ ಉತ್ಸಾಹ ಇರಲಿ. ವಾರಾಂತ್ಯದಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳುವುದಾದರೆ ಇದರ ಜತೆಗೆ ಸರಿಬೀಳುವ ಪತ್ರಿಕೆಯನ್ನು ಸಹ ನೀವು ಕೊಡಬಹುದು.