ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋ.-ಡಿಸೆಂ.
“ಪ್ರಾಮುಖ್ಯ ನಿರ್ಣಯಗಳನ್ನು ಮಾಡುವಾಗ ವಿಶ್ವಾಸಾರ್ಹ ಸಲಹೆಗಳು ನಮಗೆಲ್ಲಿ ಸಿಗುತ್ತವೆ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಅವರ ಅನುಮತಿ ಕೇಳಿ ಜ್ಞಾನೋಕ್ತಿ 3:5, 6 ಓದಿ] ಈ ಲೇಖನವು, ನಿರ್ಣಯ ಮಾಡುವ ಮುಂಚೆ ಅದರಿಂದುಂಟಾಗುವ ಫಲಿತಾಂಶಗಳನ್ನು ಪರಿಗಣಿಸುವ ದೈವಿಕ ವಿವೇಕವನ್ನು ಒತ್ತಿಹೇಳುತ್ತದೆ.” ಪುಟ 28ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.
ಎಚ್ಚರ! ಅಕ್ಟೋ.-ಡಿಸೆಂ.
“ಭೂಮಿ ಬಿಸಿಯೇರುವಿಕೆಯ ಸಮಸ್ಯೆಗೆ ಪರಿಹಾರವಿದೆಯೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗೆ ಅವಕಾಶಕೊಡಿ. ಭೂಮಿಯ ಭವಿಷ್ಯತ್ತಿನ ಕುರಿತು ಒಂದು ವಚನವನ್ನು ಓದಲೋ ಎಂದು ಕೇಳಿ. ಒಪ್ಪುವುದಾದರೆ ಯೆಶಾಯ 11:9 ಓದಿ.] ಈ ಪತ್ರಿಕೆಯು, ಭೂಮಿ ಸದಾ ಮಾನವರ ಬೀಡಾಗಿ ಇರುವುದು ಎಂಬುದನ್ನು ನಾವೇಕೆ ನಂಬಬಹುದೆಂದು ವಿವರಿಸುತ್ತದೆ.”
ಕಾವಲಿನಬುರುಜು ಜನ.-ಮಾರ್ಚ್
“ಪ್ರೀತಿಯ ದೇವರು ನಿತ್ಯ ಯಾತನೆಯನ್ನು ಕೊಡುತ್ತಾನೆಂದು ನಂಬುವುದು ಅನೇಕರಿಗೆ ಕಷ್ಟ. ಈ ಕುರಿತು ನೀವೇನು ಹೇಳುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ದೇವರು ಪೀಡಕನಲ್ಲ ಅಥವಾ ಸೇಡುತೀರಿಸುವವನಲ್ಲ ಎಂದು ದೇವರ ವಾಕ್ಯವು ಸ್ಪಷ್ಟವಾಗಿ ತಿಳಿಸುತ್ತದೆ. [ಮನೆಯವನು ಆಸಕ್ತಿ ತೋರಿಸುವಂತೆ ಕಂಡರೆ ಯೆಹೆಜ್ಕೇಲ 18:23 ಓದಿ.] ಈ ಪತ್ರಿಕೆಯಲ್ಲಿ ನೀಡಲಾದ ಶಾಸ್ತ್ರೀಯ ತರ್ಕವನ್ನು ನೀವು ಗಣ್ಯಮಾಡುವಿರಿ.”
ಎಚ್ಚರ! ಜನ.-ಮಾರ್ಚ್
“ಜನರು ಹೆಚ್ಚಾಗಿ ಯಶಸ್ಸನ್ನು ಕೀರ್ತಿ, ಸಿರಿಸಂಪತ್ತು, ಅಧಿಕಾರದಿಂದ ಅಳೆಯುತ್ತಾರೆ. ಆದರೆ ನೀವು ಯಶಸ್ಸನ್ನು ಹೇಗೆ ಅಳೆಯುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ಒಂದು ಪವಿತ್ರ ಗ್ರಂಥಕ್ಕನುಸಾರ ಯಶಸ್ಸಿಗೆ ನಡೆಸುವಂಥಾದ್ದು ಯಾವುದು ಎಂದು ಗಮನಿಸಿ. [ಮನೆಯವನು ಆಸಕ್ತಿ ತೋರಿಸುವಂತೆ ಕಂಡರೆ ಕೀರ್ತನೆ 1:1-3 ಓದಿ.] ಈ ಲೇಖನವು ಯಶಸ್ಸಿನ ಆರು ಕೀಲಿಕೈಗಳನ್ನು ಚರ್ಚಿಸುತ್ತದೆ.” ಪುಟ 6ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.