ಬೆಳಕು ವಾಹಕರಾಗಿ ನಮ್ಮ ಆದರ್ಶಪ್ರಾಯನನ್ನು ಹಿಂಬಾಲಿಸುವುದು
1 ಯೇಸು ತನ್ನ ಕುರಿತಾಗಿ ಘೋಷಿಸಿದ್ದು: “ನಾನೇ ಲೋಕಕ್ಕೆ ಬೆಳಕು.” ಯೇಸುವಿನ ಮಾದರಿಯನ್ನು ಹಿಂಬಾಲಿಸುವ ಮೂಲಕ ಅವನ ಶಿಷ್ಯರು ಸಹ “ಲೋಕಕ್ಕೆ ಬೆಳಕಾಗಿ” ದ್ದರು. (ಮತ್ತಾ. 5:14) “ಲೋಕಕ್ಕೆ ಬೆಳಕಾಗಿ” ಅವನನ್ನು ಹಿಂಬಾಲಿಸುವವರೆಲ್ಲರೂ “ಜೀವಕೊಡುವ ಬೆಳಕನ್ನು” ಹೊಂದುವರೆಂದು ಯೇಸು ಹೇಳಸಾಧ್ಯವಿತ್ತು. (ಯೋಹಾನ 8:12) ಆ ಬೆಳಕನ್ನು ಅಡಗಿಸಲು ಅಥವಾ ಮಂಕುಗೊಳಿಸಲು ಯಾವುದನ್ನೂ ಎಂದೂ ಬಿಡದಂತಹ ಆತ್ಮಿಕ ಬೆಳಕು ವಾಹಕರನ್ನಾಗಿ ಅದು ನಮ್ಮನ್ನು ಮಾಡುತ್ತದೆ.
2 ನಾವು ಪರಿಣಾಮಕಾರಿ ಬೆಳಕು ವಾಹಕರಾಗಿರುವ ವಿಧವನ್ನು ತೋರಿಸಲು ಯೆಹೋವನ ಸಂಸ್ಥೆಯು ತರಬೇತಿಯನ್ನು ಒದಗಿಸುತ್ತದೆ. ನಾವು ಪಡೆಯುವ ಸಲಹೆ ಮತ್ತು ನಿರ್ದೇಶನವನ್ನು ನಾವು ನಿಕಟವಾಗಿ ಅನುಸರಿಸುವಲ್ಲಿ, ಎಲ್ಲಾ ವಿಧದ ಜನರಿಗೆ ರಾಜ್ಯ ಸತ್ಯತೆಯ ಕುರಿತಾದ ಜ್ಞಾನೋದಯವನ್ನು ಕೊಡಲು ನಾವು ಶಕ್ತರಾಗಿರುವೆವು. (1 ತಿಮೊ. 4:6) ಬೆಳಕು ವಾಹಕರಾಗಿ ಸೇವೆ ಸಲಿಸುವುದ್ಲು ಪ್ರತಿಯೊಂದು ಸಂದರ್ಭದಲ್ಲಿ ಸತ್ಯವನ್ನು ಮಾತಾಡುವುದನ್ನು ಮಾತ್ರವಲ್ಲದೆ ಕ್ರೈಸ್ತರೋಪಾದಿ ಉತ್ತಮ ನಡತೆಯನ್ನು ಕಾಪಾಡಿಕೊಳ್ಳುವುದನ್ನು ಸಹ ಒಳಗೂಡುತ್ತದೆ. ನಮ್ಮ ಆದರ್ಶಪ್ರಾಯನ ನಡತೆಯು ನಿಂದಾರಹಿತವಾಗಿತ್ತು. ಅವನ ಹಿಂಬಾಲಕರೋಪಾದಿ, ಕ್ರೈಸ್ತತ್ವವು ನಮ್ಮ ದಿನನಿತ್ಯದ ಜೀವಿತದ ಮಾರ್ಗವಾಗಿದೆಯೆಂದು ನಾವು ಪ್ರದರ್ಶಿಸತಕ್ಕದ್ದು. (ಎಫೆ. 5:9; ತೀತ 2:7, 8, 10) ಇತರರು ನೋಡಬಲ್ಲ, ದೇವರನ್ನು ಕೊಂಡಾಡುವಂತೆ ಅವರನ್ನು ಪ್ರಚೋದಿಸಬಲ್ಲ ಉತ್ತಮ ಕಾರ್ಯಗಳನ್ನು ನಾವು ಉತ್ಪಾದಿಸಬೇಕು.—ಮತ್ತಾ. 5:16.
3 ಮನೆಯಿಂದ ಮನೆಗೆ ಹೋಗುವಾಗ ಒಬ್ಬ ಸಾಕ್ಷಿಯು ಒಂದು ಅಸಾಮಾನ್ಯ ವಿನಂತಿಯನ್ನು ಎದುರಿಸಿದನು. ಮನೆಯ ಯಜಮಾನ ಮತ್ತು ಅವನ ಹೆಂಡತಿಯು ತುಂಬ ಅಸ್ವಸ್ಥರಾಗಿದ್ದರು, ಆದರೆ ಅವರಿಗೆ ಬ್ಯಾಂಕಿನಲ್ಲಿ ಸ್ವಲ್ಪ ಹಣವನ್ನು ಠೇವಣಿಯಾಗಿಡುವ ಅಗತ್ಯವಿತ್ತು. ಅವನು ಅದನ್ನು ಮಾಡುವನೋ ಎಂದು ಅವರು ಸಾಕ್ಷಿಯನ್ನು ಕೇಳಿದರು. ಅವನು ಒಪ್ಪಿದನು ಮತ್ತು ಬ್ಯಾಂಕಿಗೆ ಕೊಂಡೊಯ್ಯಲು ಅವನಿಗೆ 2,000 ಡಾಲರುಗಳ ನಗದು ಹಣವನ್ನು ಕೊಡಲಾಯಿತು! ಅವನು ಹಿಂದಿರುಗಿದಾಗ, ಅವನು ಕೇಳಿದ್ದು: “ನನ್ನ ಪರಿಚಯವಿಲ್ಲದ್ದದರೂ ನೀವು ನನ್ನ ಮೇಲೆ ಹೇಗೆ ಭರವಸೆ ಇಡಸಾಧ್ಯವಿತ್ತು?” ಉತ್ತರವು: “ಭರವಸೆ ಇಡಬಹುದಾದ ಏಕಮಾತ್ರ ವ್ಯಕ್ತಿಗಳು ಯೆಹೋವನ ಸಾಕ್ಷಿಗಳಾಗಿದ್ದಾರೆಂದು ನಮಗೆ ಮತ್ತು ಇನ್ನೆಲ್ಲರಿಗೂ ತಿಳಿದಿದೆ.” ಬೈಬಲಿನ ನೈತಿಕ ಸೂತ್ರಗಳನ್ನು ನಿಕಟವಾಗಿ ಪಾಲಿಸುವದು ದೇವರನ್ನು ಸನ್ಮಾನಿಸುವಂತಹ ಖ್ಯಾತಿಯನ್ನು ಉತ್ಪಾದಿಸುತ್ತದೆಂಬದಕ್ಕೆ ನಾವೆಷ್ಟು ಆಭಾರಿಗಳಾಗಿರಸಾಧ್ಯವಿದೆ!
4 ಹ್ಯಾಲೊವೀನ್ ಚಿತ್ರಗಳಿಗೆ ಬಣ್ಣ ಬಳಿಯುವುದರಲ್ಲಿ ಒಬ್ಬ ಆರು ವರ್ಷ ಪ್ರಾಯದ ಸಾಕ್ಷಿ ವಿದ್ಯಾರ್ಥಿಯು ಯಾಕೆ ಭಾಗವಹಿಸುತ್ತಿರಲಿಲ್ಲವೆಂದು, ಒಂದನೆಯ ವರ್ಗದ ಶಿಕ್ಷಕಿಯೊಬ್ಬಳು ತನ್ನ ತರಗತಿಗೆ ವಿವರಿಸಿದಳು. ಅವಳೇನನ್ನು ನಂಬುತ್ತಾಳೋ ಅದಕ್ಕೋಸ್ಕರ ಭಿನ್ನಳಾಗಿರುವ ಧೈರ್ಯವಿದದ್ದಕ್ಕಾಗಿ ತಾನು ಅವಳ ವಿಷಯದಲ್ಲಿ ತುಂಬ ಹೆಮ್ಮೆಪಡುತ್ತೇನೆಂದು ಆ ಶಿಕ್ಷಕಿ ಹೇಳಿದಳು. ನಾವು ಯಾವ ವಿಷಯವನ್ನಾದರೂ ದೃಢವಾಗಿ ನಂಬುವುದಾದರೆ, ಅದರ ಪರವಾಗಿ ವಾದಿಸಲು ನಮಗೆ ಧೈರ್ಯವಿರಬೇಕೆಂದು ಶಿಕ್ಷಕಿ ಹೇಳಿದಳು. ಆ ರಾತ್ರಿ ಶಿಕ್ಷಕಿಯು ತನ್ನ ಸ್ವಂತ ನಂಬಿಕೆಗಳನ್ನು ವಿಶ್ಲೇಷಿಸಿದಳು ಮತ್ತು ತನ್ನ ನೀತಿಗಳ ಪರವಾಗಿ ವಾದಿಸುವ ಅದೇ ರೀತಿಯ ಧೈರ್ಯವನ್ನು ತಾನು ತೋರಿಸಿರಲಿಲ್ಲವೆಂದು ಅವಳು ಒಪ್ಪಬೇಕಾಯಿತು. ಯಾವುದರಲ್ಲಿ ಕೆಲವನ್ನು ತಾನೇ ನಂಬುತ್ತಿರಲಿಲ್ಲವೊ ಅಂತಹ ಯಾವುದೇ ಭಾವಿ ರಜಾ ಆಚರಣೆಗಳಲ್ಲಿ ತಾನು ತನ್ನ ತರಗತಿಯವರನ್ನು ಒಳಗೂಡಿಸುವುದಿಲ್ಲವೆಂದು ಅವಳು ಮರುದಿನ ಪ್ರಕಟಿಸಿದಳು!
5 ತಾವು ಎಲ್ಲಿಯೇ ಇದ್ದರೂ, ತಮ್ಮ ಬೆಳಕನ್ನು ಪ್ರಕಾಶಿಸಲು ಯೆಹೋವನ ಜನರು ಆತುರರಾಗಿದ್ದಾರೆ. ಶಾಲೆಯಲ್ಲಿ ಎಳೆಯರ ಆದರ್ಶಪ್ರಾಯ ನಡತೆಯು, ಶಾಲಾಸಂಗಾತಿಗಳನ್ನು ಮತ್ತು ಶಿಕ್ಷಕರನ್ನು ಅನುಕೂಲಕರವಾಗಿ ಪ್ರಭಾವಿಸಿದೆ. ನೆರೆಹೊರೆಯಲ್ಲಿ ಉತ್ತಮ ನಡತೆಯನ್ನು ಪ್ರದರ್ಶಿಸುವ ವಯಸ್ಕ ಸಾಕ್ಷಿಗಳು ಇತರರು ರಾಜ್ಯ ಸಂದೇಶದ ಕುರಿತಾಗಿ ಮೆಚ್ಚಿಕೆಯಿಂದ ಮಾತಾಡುವಂತೆ ಮಾಡುತ್ತಾರೆ. ಅನೇಕ ಸಂದರ್ಭಗಳ ಕೆಳಗೆ ಅನೌಪಚಾರಿಕ ಸಾಕ್ಷಿಯು, ಹೆಚ್ಚನ್ನು ಕಲಿಯಲು ಬಯಸುವ ಪ್ರಾಮಾಣಿಕ ಜನರನ್ನು ಆಕರ್ಷಿಸುತ್ತದೆ. ಐಹಿಕ ಕೆಲಸದಲ್ಲಿ ನಮ್ಮ ಶ್ರದ್ಧೆ ಮತ್ತು ಪ್ರಾಮಾಣಿಕತೆಯು ಸಹ ಒಂದು ಸಾಕ್ಷಿಯನ್ನು ಕೊಡುತ್ತದೆ. ಹೌದು, ನಾವೆಲ್ಲಿಯೇ ಇದ್ದರೂ ಅಥವಾ ಏನೇ ಮಾಡುತ್ತಿದ್ದರೂ, ನಾವು ಸತ್ಯದಲ್ಲಿ ಆಸಕ್ತಿಯನ್ನು ಕೆರಳಿಸಬಲ್ಲೆವು.
6 ನಮ್ಮ ಮಹಾ ಆದರ್ಶಪ್ರಾಯನ ಲೋಪವಿಲ್ಲದ ಜೀವನ ನಮೂನೆಯ ಮೇಲೆ ನಮ್ಮ ದೃಷ್ಟಿಯನ್ನಿಡುವ ಮೂಲಕ, ಆತನ ಶಿಷ್ಯರಾಗಿ ನಾವು ನಮ್ಮ ಕೌಶಲಗಳನ್ನು ಉತ್ತಮಗೊಳಿಸುವದನ್ನು ಮುಂದುವರಿಸಬಲ್ಲೆವು. ಅವನ ಮಾದರಿಯನ್ನು ನಕಲು ಮಾಡುವುದು ನಮ್ಮ ಬೆಳಕು “ಎಲ್ಲರ ಮೇಲೆ ಪ್ರಕಾಶಿಸುವುದ”ನ್ನು ಖಚಿತಪಡಿಸುವುದು.—ಮತ್ತಾ. 5:15, NW; 1 ಪೇತ್ರ 2:21.