“ಬೆಳಕು ವಾಹಕರು” ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ
“ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ.” (ಯೆಶಾಯ 60:2) ಆ ಮಾತುಗಳು ಇಂದು ಎಷ್ಟು ಸತ್ಯವಾಗಿರುತ್ತವೆ! ದೇವರು ಯಾವ ರೀತಿಯ ಭಕ್ತಿಯನ್ನು ಮೆಚ್ಚುತ್ತಾನೆ ಎಂಬ ವಿಷಯದಲ್ಲಿ ಸುಳ್ಳು ಧರ್ಮವು ಜನರನ್ನು ಕತ್ತಲೆಯಲ್ಲಿಟ್ಟಿದೆ ಎಂಬ ವಿಷಯದಲ್ಲಿ ಯಾವ ಸಂಶಯವೂ ಇಲ್ಲ. ಏಕೆ? ಏಕೆಂದರೆ ಈ ವಿಷಯ ವ್ಯವಸ್ಥೆಯ ದೇವರಾದ ಸೈತಾನನು “ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದ್ದಾನೆ.”—2 ಕೊರಿಂಥ 4:4.
ಸೈತಾನನಿಂದ ಮಂಕುಮಾಡಲ್ಪಟ್ಟವರಿಗೆ ಗಮನಾರ್ಹ ವೈದೃಶ್ಯವಾಗಿ ಯೆಹೋವನ ಸಾಕ್ಷಿಗಳು ಇದ್ದಾರೆ. ಅವರಿಗೆ ಪ್ರವಾದಿ ಯೆಶಾಯನ ಮಾತುಗಳನ್ನು ಅನ್ವಯಿಸ ಸಾಧ್ಯವಿದೆ: “ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.” (ಯೆಶಾಯ 60:2) ಕತ್ತಲೆಯೊಳಗಿಂದ ಹೊರಟು ದೇವರ ಆಶ್ಚರ್ಯಕರವಾದ ಬೆಳಕಿನೊಳಗೆ ಬರುವುದಕ್ಕೆ ಅವರೆಷ್ಟು ಕೃತಜ್ಞರಾಗಿರುತ್ತಾರೆ! ಅದು ಒಂದು ಆತ್ಮಿಕ ಬೆಳಕಾಗಿದೆ, ಅಕ್ಷರಾರ್ಥವಾಗಿ ಕುರುಡರಾಗಿರುವವರು ಸಹ ಸತ್ಯವನ್ನು ಕಾಣಶಕ್ತರಾಗುವಂತೆ ಮನಸ್ಸನ್ನು ಬೆಳಗಿಸುವ ದೇವರ ವಾಕ್ಯದ ಸತ್ಯವಾಗಿರುತ್ತದೆ.
ಆದರೆ, ಸಹಾಯವು ಬೇಕು ನಿಶ್ಚಯ. ದೈವಿಕವಾಗಿ ಒದಗಿಸಲ್ಪಟ್ಟ ಸಹಾಯಕಗಳ ಸದುಪಯೋಗವನ್ನು ಮಾಡದೆ ಕೇವಲ ಬೈಬಲನ್ನು ಓದುವ ಮೂಲಕ ಒಬ್ಬನು ಆ ಬೆಳಕನ್ನು ಪಡೆಯಲಾರನು. ಆದುದರಿಂದಲೇ, ಯೆಹೋವ ದೇವರು ಮತ್ತಾಯ 24:45-47 ರಲ್ಲಿ ಮುಂತಿಳಿಸಲ್ಪಟ್ಟ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು” ಒದಗಿಸಿರುತ್ತಾನೆ. ಇಂದು ಆ “ಆಳು” ಯೆಹೋವನ ಸಾಕ್ಷಿಗಳ ಆಡಳಿತಾ ಮಂಡಲಿಯಿಂದ ಪ್ರತಿನಿಧಿಸಲ್ಪಟ್ಟಿದ್ದಾನೆ. “ಬೆಳಕು ವಾಹಕರು” ಜಿಲ್ಲಾ ಅಧಿವೇಶನವು ಏರ್ಪಡಿಸಲ್ಪಟ್ಟಿರುವುದು ಈ ಮಂಡಲಿಯ ಮಾರ್ಗದರ್ಶನೆಯ ಕೆಳಗೆಯೇ.
ಈ ಅಧಿವೇಶನದ ಉದ್ದೇಶವು, ಫಿಲಿಪ್ಪಿ 2:15 ರ ಪೌಲನ ಮಾತಿಗೆ ಹೊಂದಿಕೆಯಲ್ಲಿ, ಯೆಹೋವನ ಸಾಕ್ಷಿಗಳಿಗೆಲ್ಲರಿಗೆ ಒಳ್ಳೇ ಬೆಳಕು ವಾಹಕರಾಗಿ ಇರುವಂತೆ ಸಹಾಯ ಮಾಡಲಿಕ್ಕಾಗಿದೆ. ಅಲ್ಲಿ ಕ್ರೈಸ್ತರಿಗೆ “ಜ್ಯೋತಿರ್ಮಂಡಲಗಳಂತೆ” ಹೊಳೆಯುವಂತೆ ಉಪದೇಶ ಮಾಡಲಾಗಿದೆ.—ಮತ್ತಾಯ 5:14, 16.
ಭಾರತದಲ್ಲಿ “ಬೆಳಕು ವಾಹಕರ” ಜಿಲ್ಲಾ ಅಧಿವೇಶನ ಮಾಲೆಯು ಸಪ್ಟಂಬರದಲ್ಲಿ ಪ್ರಾರಂಭಿಸಲಿದೆ. ಶುಕ್ರವಾರ ಬೆಳಿಗ್ಗೆ 10:20 ಕ್ಕೆ ಒಂದು ಸಂಗೀತ ಕಾರ್ಯಕ್ರಮವು, ಎಲ್ಲರೂ ಯೋಗ್ಯ ಹೃದಯ ಮತ್ತು ಮನಸ್ಸಿನಿಂದ ನಿಯೋಜಿತರಾಗುವಂತೆ, ಕಾರ್ಯಕ್ರಮಕ್ಕೆ ಮುಂದಾಗಿ ಸಿದ್ಧರಾಗುವಂತೆ ಸಹಾಯ ಮಾಡುವುದು. ಪ್ರತಿ ದಿನಕ್ಕೆ ಅದರ ಸ್ವಂತ ಮುಖ್ಯ ವಿಷಯವು ಇರುವುದು ಮತ್ತು ಶುಕ್ರವಾರದ ಮುಖ್ಯ ವಿಷಯ, “ನಿನ್ನ ಸತ್ಯಪ್ರಸನ್ನತೆಗಳನ್ನು [ಸತ್ಯ ಮತ್ತು ಬೆಳಕನ್ನು, NW] ಕಳುಹಿಸು” ಎಂದಾಗಿದೆ.—ಕೀರ್ತನೆ 43:3.
ಶುಕ್ರವಾರ ಬೆಳಿಗ್ಗೆಯ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣವಾದ “ಬೆಳಕು ವಾಹಕರು—ಯಾವ ಉದ್ದೇಶಕ್ಕಾಗಿ?” ನೀಡಲ್ಪಡುವುದು. ನಿಶ್ಚಯವಾಗಿಯೂ ಕ್ರೈಸ್ತರು ಯಾವುದೇ ವೈಯಕ್ತಿಕ, ಸ್ವಾರ್ಥ ಉದ್ದೇಶಕ್ಕಾಗಿ ಬೆಳಕು ವಾಹಕರಾಗಿರುವುದಿಲ್ಲ. ಬದಲಿಗೆ, ಮುಖ್ಯ ಬೆಳಕು ವಾಹಕನಾದ ಯೇಸು ಕ್ರಿಸ್ತನು ಭೂಮಿಗೆ ಯಾವ ಉದ್ದೇಶಕ್ಕಾಗಿ ಬಂದನೋ ಅವೇ ಕಾರಣಗಳಿಗಾಗಿ ಅಂದರೆ ಸತ್ಯಕ್ಕೆ ಸಾಕ್ಷಿ ಕೊಡಲು ಮತ್ತು ನಿರ್ಮಾಣಿಕನ ನಾಮವನ್ನು ಮಹಿಮೆ ಪಡಿಸಲಿಕ್ಕಾಗಿ, ಕಾರ್ಯನಡಿಸುತ್ತಾರೆ. ಯುಕ್ತವಾಗಿಯೇ ಯೇಸು ತನ್ನ ಕುರಿತಾಗಿ ಅಂದದ್ದು: “ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ.” (ಯೋಹಾನ 9:5) ಹೀಗೆ ಆತನನ್ನು ನಿಕಟವಾಗಿ ಅನುಸರಿಸುವಂತೆ ಆತನು ನಮಗೆ ಒಂದು ನಮೂನೆಯನ್ನು ಬಿಟ್ಟುಹೋಗಿದ್ದಾನೆ. (1 ಪೇತ್ರ 2:21) ಆ ಮೊದಲನೆಯ ದಿನದ ಮದ್ಯಾಹ್ನವು, ಯುವಕರಿಗೆ ವಿಶೇಷಾಸಕ್ತಿಯುಳ್ಳ ಒಂದು ಭಾಷಣ ಮತ್ತು ರಾಜ ಯೋಷೀಯನ ಕುರಿತಾದ ಒಂದು ಡ್ರಾಮ ಎರಡನ್ನೂ ಎತ್ತಿಹೇಳಲಿದೆ.
ಶನಿವಾರದ ಮುಖ್ಯ ವಿಷಯವು “ನೀವು ಲೋಕಕ್ಕೆ ಬೆಳಕಾಗಿದ್ದೀರಿ. . . . ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ” ಎಂದಾಗಿದೆ. (ಮತ್ತಾಯ 5:14, 16) ಬೆಳಿಗ್ಗಿನ ಕಾರ್ಯಕ್ರಮವು “ನಿಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುವುದು” ಎಂಬ ಶೀರ್ಷಿಕೆಯ ಭಾಷಣಮಾಲೆಯನ್ನು ನೀಡಲಿದೆ. ಯಾರು ಯೆಹೋವನಿಗೆ ಒಂದು ಸಮರ್ಪಣೆಯನ್ನು ಮಾಡಿರುತ್ತಾರೋ ಅವರು ದೀಕ್ಷಾಸ್ನಾನ ಪಡೆಯುವಂತೆ ಸಂದರ್ಭವನ್ನು ಒದಗಿಸಲಾಗುವುದು. “ಕ್ರಿಸ್ತನ ಸಾನಿಧ್ಯ ಮತ್ತು ಪ್ರಕಟನೆಯು” ಎಂಬ ಶೀರ್ಷಿಕೆಯ ತಿಳುವಳಿಕೆಯುಕ್ತ ಭಾಷಣಮಾಲೆಯನ್ನು ಮಧ್ಯಾಹ್ನದ ಕಾರ್ಯಕ್ರಮವು ನೀಡಲಿದೆ.
ಅಧಿವೇಶನದ ಮೂರನೆಯ ಮತ್ತು ಕೊನೆಯ ದಿನವಾದ ಭಾನುವಾರಕ್ಕಾಗಿ ಆರಿಸಿದ ಮುಖ್ಯ ವಿಷಯವು “ಬೆಳಕಿನವರಂತೆ ನಡೆದುಕೊಳ್ಳುತ್ತಾ ಇರ್ರಿ” ಎಂದಾಗಿದೆ. (ಎಫೆಸ 5:8) ಬೆಳಗ್ಗಿನ ಕಾರ್ಯಕ್ರಮದಲ್ಲಿ ಕುಟುಂಬ ಹಂಗುಗಳನ್ನು ಚರ್ಚಿಸುವ “ಕ್ರೈಸ್ತ ಮನೆವಾರ್ತೆಯಲ್ಲಿ ಒಬ್ಬರನ್ನೊಬ್ಬರು ಲಕ್ಷ್ಯಿಸುವುದು” ಎಂಬ ಶೀರ್ಷಿಕೆಯ ಭಾಷಣಮಾಲೆ ಅಡಕವಾಗಿರುವುದು. ದೇವರಿಗೆ ಮತ್ತು ಕ್ರಿಸ್ತನಿಗೆ ಅಧೀನರಾಗಿರುವುದು ಎಂದರೇನು ಎಂಬದನ್ನು ವಿವರಿಸುವ ಒಂದು ಭಾಷಣವೂ ಅಲ್ಲಿರುವದು.
ಭಾನುವಾರ ಅಪರಾಹ್ನದಲ್ಲಿ, “ಲೋಕದ ಬೆಳಕನ್ನು ಹಿಂಬಾಲಿಸಿರಿ” ಎಂಬ ಶೀರ್ಷಿಕೆಯ ಬಹಿರಂಗ ಭಾಷಣದೊಂದಿಗೆ ಅಧಿವೇಶನವು ತನ್ನ ಪರಮಾವಧಿಯನ್ನು ಮುಟ್ಟುವುದು. ಈ ಉಪನ್ಯಾಸದಲ್ಲಿ ಯೋಹಾನ 1:1-16 ರ ಒಂದು ಚರ್ಚೆಯು ಅಡಕವಾಗಿರುವುದು ಮತ್ತು ಯೇಸು ಕ್ರಿಸ್ತನು ಲೋಕದ ಬೆಳಕಾಗಿದ್ದಾನೆ ಎಂಬದನ್ನು ಒತ್ತಿಹೇಳುತ್ತಾ, ಬೈಬಲ್ ಜ್ಞಾನದ ಅವಶ್ಯಕತೆಯನ್ನು ತೋರಿಸಿಕೊಡುವುದು. “ಬೆಳಕಿನಲ್ಲಿ ನಡೆಯುತ್ತಾ ಮುಂದರಿಯಿರಿ” ಎಂಬ ಶ್ರದ್ಧಾಪೂರ್ವಕ ಬುದ್ಧಿವಾದದೊಂದಿಗೆ ಅಧಿವೇಶನವು ಕೊನೆಗೊಳ್ಳುವುದು.
ತನ್ನ ದೃಶ್ಯ ಸಂಸ್ಥೆಯ ಮೂಲಕ ಯೆಹೋವನು ಒದಗಿಸುತ್ತಿರುವ ಈ ಆತ್ಮಿಕ ಔತಣಕ್ಕಾಗಿ ನಿಮ್ಮ ಗಣ್ಯತೆಯನ್ನು ತೋರಿಸಿರಿ. ಶುಕ್ರವಾರ ಬೆಳಿಗ್ಗಿನ ಆರಂಭದ ಸಂಗೀತದಿಂದ ಭಾನುವಾರ ಸಂಜೆಯ ಸಮಾಪ್ತಿಯ ಪ್ರಾರ್ಥನೆಯ ತನಕ ಹಾಜರಾಗಿರ್ರಿ. ವೇದಿಕೆಯಿಂದ ಹೇಳಲ್ಪಡುವ ಎಲ್ಲಾ ವಿಷಯಗಳಿಗೆ ನಿಕಟವಾದ ಗಮನ ಕೊಡಿರಿ. ಮನಸ್ಸಿನ ಏಕಾಗ್ರತೆಗಾಗಿ ಮತ್ತು ಮುಂದಣ ಪರಾಮರ್ಶೆಗಾಗಿ ನೋಟ್ಸ್ ಬರೆದುಕೊಳ್ಳಿರಿ. ಕೊನೆಯದಾಗಿ, ವಾಲಂಟಿಯರ ಸೇವೆಯಲ್ಲಿ ಸ್ವಲ್ಪವಾದರೂ ಪಾಲಿಗರಾಗುವಂತೆ ಯೋಜನೆ ಮಾಡಿರಿ. ಹೀಗೆ, ತಕ್ಕೊಳ್ಳುವುದರಲ್ಲಿ ಮಾತ್ರವಲ್ಲ ಕೊಡುವುದರಲ್ಲಿಯೂ ಇರುವ ಹೆಚ್ಚಿನ ಆಶೀರ್ವಾದದಲ್ಲಿ ನೀವು ಆನಂದಿಸುವಿರಿ.—ಅ.ಕೃತ್ಯಗಳು 20:35. (w92 5/1)