ಎಡೆಬಿಡದೆ ಕಲಿಸುವುದನ್ನು ಮುಂದರಿಸಿರಿ
1 ಅಪೊಸ್ತಲರಿಗೆ ಮತ್ತು ಆದಿ ಕ್ರೈಸ್ತ ಶಿಷ್ಯರಿಗೆ ಯಾವ ರೀತಿಯ ಕ್ಷೇತ್ರವಿತ್ತು ಎಂಬದರ ಕುರಿತು ಬೈಬಲು ನಮ್ಮನ್ನು ಸಂದೇಹದಲ್ಲಿ ಇಡುವುದಿಲ್ಲ. ಯೇಸುವಿನ ಮರಣವಾದ ಸ್ವಲ್ಪದರಲ್ಲಿಯೇ, “ಆ ಯೇಸುವಿನ ಹೆಸರನ್ನು ಎತ್ತಿ ಹೇಗೂ ಮಾತಾಡ ಬಾರದು” ಎಂಬ ಬೆದರಿಕೆಯನ್ನು ಅಧಿಕಾರಿಗಳು ಹಾಕಿದ್ದರು. (ಅಪೊ. 4:18) ಏಕೆ? ಅವರಿಗೆ ಸಿಗುತ್ತಿದ್ದ ಅಚ್ಚರಿಯ ಸಾಫಲ್ಯವೇ ಒಂದು ಕಾರಣವಾಗಿತ್ತು. ಸಾವಿರಾರು ಮಂದಿ ವಿಶ್ವಾಸಿಗಳಾಗುತ್ತಿದ್ದರು. ಅಪೊಸ್ತಲರ ಕೃತ್ಯ 4:4 ವರದಿಸಿದ್ದು: “ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರದ ತನಕ ಬೆಳೆಯಿತು.”
2 ನಾವು ಸಹ ಎಡೆಬಿಡದೆ ಕಲಿಸುತ್ತಿರುವುದರಿಂದ ಸಾವಿರಾರು ಮಂದಿ, ಹೌದು, ಮಿಲ್ಯಾಂತರ ಮಂದಿ ನಮ್ಮ ದಿನಗಳಲ್ಲಿ ವಿಶ್ವಾಸಕ್ಕೆ ಬರುತ್ತಿದ್ದಾರೆ. ನವಂಬರದಲ್ಲಿ ಅವೇಕ್! ಮತ್ತು ವಾಚ್ಟವರ್ ಚಂದಾವನ್ನು ಜನರಿಗೆ ನೀಡುವ ಸುಯೋಗ ನಮಗಿದೆ. ಅವೇಕ್! ಜನರಿಗೆ ಆತ್ಮಿಕ ಹಸಿವಿನ ಅರುಹನ್ನು ಕೊಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ ಎಂಬದಕ್ಕೆ ಯಾವ ಸಂದೇಹವೂ ಇಲ್ಲ. ಇದು ಅನೇಕರಿಗೆ ಯೆಹೋವನ ಚಿತ್ತವನ್ನು ಮಾಡಲು ಕಲಿಸಿ, ಅವರ ಸಂತೋಷಕ್ಕೆ ನೆರವಾಗಿದೆ.—ಮತ್ತಾ. 5:3 ಹೋಲಿಸಿ.
ಪ್ರತಿಯೊಬ್ಬನನ್ನು ತಲಪಿರಿ
3 ನಮ್ಮ ಕ್ಷೇತ್ರಗಳಲ್ಲಿ ಬಹಳ ಸಾರಿ ಸೇವೆಯಾಗಿದ್ದಾಗ್ಯೂ ಸುವಾರ್ತೆಯನ್ನು ಕೇಳಲು ಕೊಂಚವೇ ಸಂದರ್ಭವಿದ್ದ ಕೆಲವರೊಂದಿಗೆ ಇನ್ನೂ ಮಾತಾಡಲು ಶಕ್ಯವಾಗಬಹುದು. ಅದು ಹೇಗೆ? ಮನೆಮನೆಯ ಸೇವೆಯಲ್ಲಿ ತಲಪಲಾಗದ ಕ್ಷೇತ್ರಗಳಲ್ಲಿ ಟೆಲಿಫೋನ್ ಸಾಕ್ಷಿಯನ್ನು ಮಾಡುವ ಮೂಲಕವೇ. ನಮ್ಮ ಜಿಲ್ಲಾ ಸಮ್ಮೇಲನದಲ್ಲಿ ಮತ್ತು ಅಗೋಸ್ತ್ 1990 ರ ನಮ್ಮ ರಾಜ್ಯದ ಸೇವೆಯಲ್ಲಿ ಕೊಟ್ಟ ಆ ಸಲಹೆಯ ಸದುಪಯೋಗ ಯಾಕೆ ಮಾಡಬಾರದು? ಅಥವಾ, ಸಂಜೆಯ ಮತ್ತು ವಾರಾಂತ್ಯದ ಸಾಕ್ಷಿಯಲ್ಲಿ, ಮನೆಯ ಯಜಮಾನನೊಂದಿಗೆ ಮಾತಾಡಲು ವಿಶೇಷ ಪ್ರಯತ್ನವನ್ನು ಮಾಡಿರಿ. ಒಳ್ಳೇ ಮನೆ ಮನೆಯ ರೆಕಾರ್ಡನ್ನು ಇಡುವ ಮೂಲಕ ಕುಟುಂಬದ ಇತರ ಸದಸ್ಯರನ್ನು ಅಂದರೆ ಅಜಿಯ್ಜನ್ನು, ಶಾಲೆಗೆ ಹೋಗುವ ಸೋದರನಂಟ ಯಾ ಸೋದರಳಿಯನನ್ನು, ವಾರದಲ್ಲಿ ಕೆಲಸಮಾಡುವ ನಾದಿನಿಯನ್ನು, ನೀವು ಭೇಟಿಯಾಗಬಲ್ಲಿರಿ. ಕುಟುಂಬದ ಪ್ರತಿಯೊಬ್ಬ ಸದಸ್ಯನೊಂದಿಗೆ ಮಾತಾಡಲು ಅಧಿಕ ಪ್ರಯತ್ನವನ್ನು ಮಾಡುವುದರಿಂದ ಒಳ್ಳೇ ಪ್ರತಿಫಲವು ದೊರೆಯಬಹುದು.
4 ಚಂದಾ ಪಡೆಯಲು ಈ ತಿಂಗಳಲ್ಲಿ ಅನೇಕ ಉತ್ತಮ ಸಂದರ್ಭಗಳು ನಮಗೆ ಸಿಕ್ಕಬಹುದು. ನಮ್ಮ ಬೈಬಲ್ ವಿದ್ಯಾರ್ಥಿಗಳನ್ನು ಮತ್ತು ಇತರ ಆಸಕ್ತ ಜನರನ್ನು ಚಂದಾ ಮಾಡಲು ನಾವು ಆಮಂತ್ರಿಸಬಹುದು. ಪ್ರಾಯಶಃ ನಮ್ಮ ಬೈಬಲ್ ವಿದ್ಯಾರ್ಥಿಗಳು ಈವಾಗಲೇ ಒಂದು ಪತ್ರಿಕೆಗೆ ಚಂದಾ ಮಾಡಿರಬಹುದು. ಎರಡೂ ಪತ್ರಿಕೆಗಳಿಗೆ ಅವರು ಚಂದಾ ಮಾಡುವಂತೆ ಯಾಕೆ ಸೂಚಿಸಬಾರದು? ಕುಟುಂಬವು ಕಾವಲಿನಬುರುಜು ಅಭ್ಯಾಸಕ್ಕೆ ತಯಾರಿಸುವರೇ ಪ್ರತಿ ಸದಸ್ಯನಿಗಾಗಿ ಒಂದೊಂದು ಚಂದಾವನ್ನು ಪಡೆಯುವಂತೆ ಕುಟುಂಬಗಳನ್ನು ಪ್ರೋತ್ಸಾಹಿಸಬಹುದು. ಇನ್ನೊಂದು ಸಲಹೆಯೇನಂದರೆ ಪತ್ರಿಕಾ ಮಾರ್ಗಗಳನ್ನು ಆರಂಭಿಸಿ, ಅನಂತರ, ಅನಂತರ ಸಾಮಾನ್ಯಕ್ಕಿಂತ ಹೆಚ್ಚು ಅಸಕ್ತಿ ತೋರಿಸುವವರಿಗೆ ಚಂದಾ ನೀಡುವ ಮೂಲಕವೇ. ನಿಜಾಸಕ್ತಿ ತೋರಿಸುವವರಿಗೆ ಬೈಬಲಧ್ಯಯನದ ನೀಡಿಕೆಯನ್ನೂ ನಾವು ಮಾಡಬೇಕು.
ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಿರಿ
5 ನವಂಬರಿನಲ್ಲಿ ಸಹಾಯಕ ಪಯನೀಯರರಾಗುವದಕ್ಕೆ ಅರ್ಜಿಮಾಡಲು ಇನ್ನೂ ವೇಳೆ ಮೀರಿಲ್ಲ. ದಶಂಬರದ ಐಹಿಕ ರಜೆಯಲ್ಲಿ ಕುಟುಂಬವಾಗಿ ರಜಾ ಪಯನೀಯರರಾಗುವಂತೆ ನೀವು ಯೋಜನೆ ಮಾಡಿದ್ದೀರೋ? ಅದನ್ನು ಹೇಗೆ ಯಶಸ್ವಿಯಾಗಿ ಮಾಡಬಹುದೆಂದು ಯೋಚಿಸುವ ಸಮಯವು ಈಗಲೇ. ಇಡೀ ಕುಟುಂಬವು ಸಹಾಯಕ ಪಯನೀಯರರಾಗ ಸಾಧ್ಯವಿಲ್ಲದಿದ್ದರೆ ಒಬ್ಬರು ಅಥವಾ ಹೆಚ್ಚು ಸದಸ್ಯರು ಅದನ್ನು ಮಾಡಲಾಗುವಂತೆ ಸಹಕಾರ ಕೊಡಬಲ್ಲಿರೋ? ಇಲ್ಲವಾದರೆ ಕಡಿಮೆಪಕ್ಷ ಶುಶ್ರೂಷೆಯಲ್ಲಿ ಅಧಿಕ ಸಮಯವನ್ನು, ಅವೇಕ್! ಮತ್ತು ವಾಚ್ಟವರ್ ಪತ್ರಿಕೆಗಳಿಗೆ ಚಂದಾ ನೀಡುವದರಲ್ಲಿ ನೀವು ಕಳೆಯ ಸಾಧ್ಯವಿದೆಯೇ?
6 ಅವೇಕ್! ಮತ್ತು ವಾಚ್ಟವರ್ ಮುಖಾಂತರ ನಾವು ಪಡೆದ ಪ್ರಯೋಜನ ಮತ್ತು ಆಶೀರ್ವಾದಗಳನ್ನು ನಾವು ಗಣ್ಯಮಾಡುತ್ತೇವೆ. ಅವನ್ನು ಕ್ರಮವಾಗಿ ಪಡೆಯುವ ಮೂಲಕ ನಮ್ಮ ಕ್ಷೇತ್ರದ ಪ್ರಾಮಾಣಿಕ ಜನರು ಸಹ ಬಹಳವಾಗಿ ಪ್ರಯೋಜನ ಪಡೆಯುವರು ಎಂದು ನಮಗೆ ಗೊತ್ತಿದೆ. ಆದ್ದರಿಂದ, ನವಂಬರ ತಿಂಗಳಲ್ಲಿ, ಯೆಹೋವನು ನಮಗೆ ಕೊಟ್ಟಿರುವ ಉತ್ತಮ ಸಾಧನಗಳೊಂದಿಗೆ ನಮ್ಮ ಕಲಿಸುವಿಕೆಯನ್ನು ಮುಂದುವರಿಸೋಣ. ಇದನ್ನು ಮಾಡುವ ಮೂಲಕ ನಾವು ಯೆಹೋವನ ಆಶೀರ್ವಾದವನ್ನು ಕೊಯ್ಯುವೆವು ಮತ್ತು ಇತರರಿಗೆ ನಮ್ಮನ್ನು ಆಶೀರ್ವಾದಪ್ರದರಾಗಿ ರುಜುಪಡಿಸುವೆವು.—ಗಲಾ. 6:9.