ಪರಿಣಾಮಕಾರಕ ಬೈಬಲಧ್ಯಯನಗಳ ಮೂಲಕ ಹೃದಯಗಳನ್ನು ತಲಪಿರಿ
1 ತನ್ನ ತಂದೆಯ ಚಿತ್ತವನ್ನು ಮಾಡುವುದರಲ್ಲಿ ಯೇಸುವು ಸಂತೋಷವನ್ನು ಕಂಡುಕೊಂಡನು, ಮತ್ತು ಯೆಹೋವನನ್ನು ಸೇವಿಸುವಂತೆ ಇತರರಿಗೆ ನೆರವಾಗುವುದರಲ್ಲಿಯೂ ಅವನು ಆನಂದವನ್ನು ಅನುಭವಿಸಿದನು. (ಕೀರ್ತ. 40:8; ಮತ್ತಾ. 9:37, 38; 11:28-30) ತನ್ನ ಸಂದೇಶವನ್ನು ಕೊಡುವುದರಲ್ಲಿ ಮಾತ್ರವೇ ಯೇಸುವು ಸಂತೃಪ್ತನಿರಲಿಲ್ಲ. ಇತರರು ನಮ್ಮೊಂದಿಗೆ ಸೌವಾರ್ತಿಕ ಸೇವೆಯಲ್ಲಿ ಭಾಗಿಗಳಾಗುವಂತೆ ಉತ್ತೇಜಿಸುವುದರಲ್ಲಿ ನಾವು ಸಫಲರಾಗಬೇಕಾದರೆ ನಮ್ಮ ಬೈಬಲ್ ವಿದ್ಯಾರ್ಥಿಗಳ ಹೃದಯವನ್ನು, ನಾವು ತಲಪಲೇ ಬೇಕು. ಇದರಲ್ಲಿ ಪುಸ್ತಕದ ಪ್ರಶ್ನೋತ್ತರ ಅಭ್ಯಾಸವನ್ನು ನಡಿಸುವದಕ್ಕಿಂತ ಹೆಚ್ಚಿನದ್ದು ಕೂಡಿದೆ. ಹೃದಯವನ್ನು ತಲಪಬೇಕಾದರೆ ನಾವು ವಿದ್ಯಾರ್ಥಿಯ ಮನಸ್ಸನ್ನು ತಯಾರಿಸುವ ಅಗತ್ಯವಿದೆ.
2 ಯೇಸು ಇತರರಲ್ಲಿ ವ್ಯಕ್ತಿಪರ ಆಸಕ್ತಿಯನ್ನು ತೋರಿಸಿದನು. ಅವರ ದೃಷ್ಟಿಕೋನವನ್ನು ಅವನು ಗಣನೆಗೆ ತಂದನು. ಕಷ್ಟದ ವಿಷಯಗಳನ್ನು ಸುಲಭಿಸಲು ಅವನು ದೃಷ್ಟಾಂತಗಳನ್ನು ಉಪಯೋಗಿಸಿದನು. (ಮತ್ತಾ. ಅಧ್ಯಾ. 5-7) ಅವರು ಎದುರಿಸಲಿದ್ದ ಸಮಸ್ಯೆಗಳನ್ನು ಮುನ್ನೋಡಿ ತಕ್ಕದಾದ್ದ ಸೂಚನೆಗಳನ್ನು ಅವರಿಗೆ ಕೊಟ್ಟನು. (ಮಾರ್ಕ 9:33-37) ತನಗೆ ಕಿವಿಗೊಟ್ಟವರು ತನ್ನ ಕಲಿಸುವಿಕೆಯ ಅರ್ಥವನ್ನು ಮೊದಲಾಗಿ ಗ್ರಹಿಸದೆ ಹೋದಾಗ ಅವನು ತಾಳ್ಮೆಯಿಂದ ತನ್ನ ಹೇಳಿಕೆಯನ್ನು ದೃಷ್ಟಾಂತದಲ್ಲಿ ಹೇಳಿದನು. (ಮತ್ತಾ. 16:5-12) ಯೇಸುವಿಗೆ ಬೇರೆಯವರಲ್ಲಿದ್ದ ಆಳವಾದ ಆಸಕ್ತಿಯು, “ನಾನು ವಿದ್ಯಾರ್ಥಿಯಾಗಿದ್ದಲ್ಲಿ ಅದನ್ನು ತಿಳುಕೊಳ್ಳಲು ಮತ್ತು ಕಲಿಸಲ್ಪಟ್ಟ ವಿಷಯದಿಂದ ಪ್ರೇರೇಪಣೆ ಹೊಂದಲು ನನಗೇನು ಅಗತ್ಯವಿರುತ್ತಿತ್ತು?” ಎಂಬ ಪ್ರಶ್ನೆಯನ್ನು ನಮಗೆ ಹಾಕಿಕೊಳ್ಳುವಂತೆ ನಮ್ಮನ್ನು ಪ್ರಚೋದಿಸ ಬೇಕು.—1971 ರ ವರ್ಷಪುಸ್ತಕ ಪುಟ 246-7 ನೋಡಿ.
ಬೈಬಲನ್ನು ಎತ್ತಿ ಹೇಳಿರಿ
3 ಸಾಕ್ಷಿಕೊಟ್ಟಾಗ ಅಷ್ಟು ಸಿದ್ಧಮನಸ್ಸಿನ ಪ್ರತಿಕ್ರಿಯೆ ತೋರಿಸಲು ಮಾಡಿದ್ದು ಯಾವುದು ಎಂದು ಒಬ್ಬ ದಂಪತಿಗಳನ್ನು ಪ್ರಶ್ನಿಸಲಾಗಿ, “ಬೈಬಲೇ ಹಾಗೆ ಮಾಡಿತು” ಎಂದವರು ಉತ್ತರ ಕೊಟ್ಟರು. ಹೌದು, ದೇವರ ವಾಕ್ಯವು ಹೃದಯವನ್ನು ತಲಪುತ್ತದೆ. (ಇಬ್ರಿ. 4:12) ಹೆಚ್ಚು ಸಲ ಅದಕ್ಕೆ ನಿರ್ದೇಶಿಸಿರಿ, ಪಾರಾದಲ್ಲಿ ಕೊಡಲಾದ ವಚನಗಳನ್ನು ಯಥೇಷ್ಟವಾಗಿ ಬಳಸಿರಿ. ಒಂದು ವಿಶಿಷ್ಟ ಮಾರ್ಗವು ಯಾಕೆ ವಿವೇಕದ್ದು ಅಥವಾ ಅವಿವೇಕದ್ದು ಎಂದು ವಿದ್ಯಾರ್ಥಿಯು ಕಾಣುವಂತೆ ಮಾಡಿರಿ. ದೇವರ ನಿಯಮಗಳಿಗೆ ವಿಧೇಯತೆಯು ಅವನಿಗೆ ಹೇಗೆ ಪ್ರಯೋಜನಕಾರಿ ಎಂಬದನ್ನು ವಿವೇಚಿಸಿರಿ.—ವಾಚ್ಟವರ್, ಅಗೋಸ್ತ್ 1, 1984 ಪುಟ 15-16 ನೋಡಿ.
4 ಬೈಬಲನ್ನು ಎತ್ತಿ ಹೇಳುವದಕ್ಕೆ ರೀಸನಿಂಗ್ ಪುಸ್ತಕವನ್ನು ಉಪಯೋಗಿಸುವುದು ಅತಿ ಪರಿಣಾಮಕಾರಿ ಎಂದು ಅನೇಕ ಪ್ರಚಾರಕರು ಕಂಡಿದ್ದಾರೆ. ಉದಾಹರಣೆಗೆ, ಲಿವ್ವ್ ಫಾರೆವರ್ ಪುಸ್ತಕದ 124 ನೇ ಪುಟ, 13 ನೇ ಪಾರಾವನ್ನು ಚರ್ಚಿಸುವಾಗ ಮನೆಯವನೊಬ್ಬನು, ಮಕ್ಕಳು ಸಾಯುವುದು ದೇವರು ಅವರನ್ನು ತನ್ನೊಂದಿಗೆ ಸ್ವರ್ಗದಲ್ಲಿರುವಂತೆ ಬಯಸುವದರಿಂದಲೇ ಎಂದು ತನ್ನ ಪಾದ್ರಿ ಹೇಳುವದೇಕೆ, ಎಂದು ಪ್ರಶ್ನಿಸಬಹುದು. ರೀಸನಿಂಗ್ ಪುಸ್ತಕದ 99 ನೇ ಪುಟದಲ್ಲಿ, “ಮಕ್ಕಳು ಸಾಯುವದೇಕೆ?” ಎಂಬದರ ಕೆಳಗೆ ಮಾಡಲ್ಪಟ್ಟ ಚರ್ಚೆಯು ಕುಟುಂಬದ ಏರ್ಪಾಡನ್ನು ಕಾಪಾಡುವುದರಲ್ಲಿ ಯೆಹೋವನಿಗೆ ಇರುವ ಆಸಕ್ತಿಯನ್ನು ಒತ್ತಿ ಹೇಳುತ್ತದೆ. ಈ ಸಮಾಚಾರವು ವ್ಯಕ್ತಿಗೆ, ಮಾನವರಲ್ಲಿ ಯೆಹೋವನಿಗೆ ಇರುವ ಪ್ರೀತಿಯ ಖಾತ್ರಿಯನ್ನು ಕೊಡುವುದು.
ಪ್ರಶ್ನೆಗಳನ್ನು ಕೇಳಿರಿ
5 ಜನರು ಯೋಚಿಸುವಂತೆ ಮತ್ತು ವಿವೇಚನೆ ಮಾಡುವಂತೆ ಪ್ರಶ್ನೆಗಳ ಪರಿಣಾಮಕಾರಕ ಉಪಯೋಗವು ಯೇಸುವಿಗೆ ಸಹಾಯ ಮಾಡಿತು. (ಮತ್ತಾ. 17:24-27) ವಿದ್ಯಾರ್ಥಿಯ ಉತ್ತರಗಳು ಅವನೇನನ್ನು ಕಲಿಯುತ್ತಿದ್ದಾನೆ ಹಾಗೂ ಯಾವ ಅಶಾಸ್ತ್ರೀಯ ನೋಟಗಳು ಅವನಲ್ಲಿ ಇನ್ನೂ ಇವೆಂಬದನ್ನು ತಿಳಿಯಲು ನಮಗೆ ಸಹಾಯ ಮಾಡುತ್ತವೆ. ಪ್ರಾಯಶಃ ವಿದ್ಯಾರ್ಥಿಯು ಧೂಮ್ರಪಾನದ ಚಟ ಬಿಡಲು ಹೋರಾಡುತ್ತಿರಬಹುದು. ಲಿವ್ವ್ ಫಾರೆವರ್ ಪುಸ್ತಕದ 27 ನೇ ಅಧ್ಯಾಯವನ್ನು ಮತ್ತು ಜುಲೈ 8, 1989 ರ ಅವೇಕ್! ಸಂಚಿಕೆಯ 13-16 ನೇ ಪುಟಗಳ ವಿಷಯವನ್ನು ನೀವು ಅವನೊಂದಿಗೆ ಚರ್ಚಿಸಿದ್ದೀರಿ. ಆ ಚಟವನ್ನು ಬಿಟ್ಟು ಬಿಡುವ ಅಗತ್ಯವನ್ನು ಅವನು ಕಾಣುತ್ತಾನೆ. ಆದರೆ ಅದನ್ನು ಬಿಡಲೇ ಬೇಕು ಎಂಬ ಖಾತ್ರಿಯು ನಿಜವಾಗಿ ಅವನಿಗೆ ಆಗಿದೆಯೇ? ನೀವನ್ನಬಹುದು: “ನಿನಗೆ ಆ ವಿಷಯದಲ್ಲಿ ಹೇಗೆನಿಸುತ್ತದೆ? ಒಂದು ವೇಳೆ ನೀನದನ್ನು ಈಗಲೇ ಬಿಡಲಿರುವಿ, ಆದರೆ ನಿನ್ನ ಕೆಲವು ಮಿತ್ರರು ನಿನಗೆ ಗೇಲಿಮಾಡಾರು. ಆಗೇನು ಮಾಡುವಿ?”
6 ಆದರೂ, ಒಂದು ಎಚ್ಚರಿಕೆಯ ಮಾತು. ಕೆಲವು ಸಾರಿ ಪ್ರಶ್ನೆಗಳು ನಿಮಗೆ ಅಚ್ಚರಿಯ ಅಥವಾ ನಿರಾಶೆಯ ಉತ್ತರಗಳನ್ನು ಕೊಟ್ಟಾವು. ಅದು ಸೂಕ್ಷ್ಮವೇದಿ ವಿಷಯವಾಗಿದ್ದರೆ ಪ್ರಶ್ನೆಯನ್ನು ಮುಂದೊತ್ತದೆ, “ನಾವದನ್ನು ಮತ್ತೆ ನೋಡೋಣ, ಈಗ ಮುಂದೆ ಹೋಗುವ” ಇಲ್ಲವೇ, “ಅದು ಯೋಚಿಸಬೇಕಾದ ವಿಷಯ, ಅಲ್ಲವೇ?” ಎಂದು ಹೇಳುವುದೊಳ್ಳೆಯದು. (ಯೋಹಾ. 16:12) ವಿಷಯವನ್ನು ವಿದ್ಯಾರ್ಥಿ ನಿಜವಾಗಿ ಹೇಗೆ ತಕ್ಕೊಳ್ಳುತ್ತಿದ್ದಾನೆಂದು ತಿಳುಕೊಂಡು, ಅವನು ಅಧಿಕ ಪ್ರಗತಿ ಮಾಡುವಂತೆ ವಿಷಯವನ್ನು ನೀವು ತಯಾರಿಸಬಲ್ಲಿರಿ. ವ್ಯಕ್ತಿಯ ಹೃದಯವನ್ನು ಪ್ರಚೋದಿಸಲು ನಾವು ಪ್ರಯತ್ನಿಸಬೇಕು ಮತ್ತು ಅವನು ಆತ್ಮಿಕವಾಗಿ ಬೆಳೆಯುವಂತೆ ಸಹಾಯಕ್ಕಾಗಿ ಯೆಹೋವನನ್ನು ಪ್ರಾರ್ಥಿಸಬೇಕು.—1 ಕೊರಿಂಥ 3:5-9.
7 ಒಂದು ಬೈಬಲಧ್ಯಯನ ನಡಿಸುವಾಗ ಚರ್ಚಿಸುವ ವಿಷಯವನ್ನು ವಿದ್ಯಾರ್ಥಿಯೊಂದಿಗೆ ವಿವೇಚನೆ ಮಾಡಲು ಸಾಕಷ್ಟು ಸಮಯ ಕೊಡಬೇಕೆಂಬದನ್ನು ಯಾವಾಗಲೂ ನೆನಪಲ್ಲಿಡಿರಿ. ನಿಮ್ಮ ಕಲಿಸುವ ವಿಧಾನಗಳನ್ನು ಅವನ ವಿಶಿಷ್ಟ ಅಗತ್ಯತೆಗೆ ಒಪ್ಪುವಂತೆ ಅಳವಡಿಸಿರಿ. ಅವನ ಹೃದಯದಲ್ಲಿ ಯೆಹೋವನಿಗೆ, ಬೈಬಲಿಗೆ ಮತ್ತು ಯೆಹೋವನ ಸಂಸ್ಥೆಗೆ ಆಳವಾದ ಪ್ರೀತಿಯನ್ನು ಬೆಳೆಸಿರಿ. ಹೀಗೆ ಪರಿಣಾಮಕಾರಕ ಬೈಬಲಧ್ಯಯನ ನಡಿಸಲು ಪ್ರಯತ್ನಿಸುವ ಮೂಲಕ ಇತರರು ಕ್ರಿಸ್ತನ ಶಿಷ್ಯರಾಗುವಂತೆ ಸಹಾಯ ಮಾಡಲು ನಾವು ನಮ್ಮ ಪಾಲನ್ನು ಮಾಡುವಂತಾಗಲಿ.—ಅಪೊ. 2:41-46.