ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 10/1 ಪು. 3-4
  • ನಾವು ಕನಸು ಕಾಣಲೇಬೇಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವು ಕನಸು ಕಾಣಲೇಬೇಕು
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕನಸುಗಳ ಜಗತ್ತು
  • ಭವಿಷ್ಯತ್ತನ್ನು ಕನಸುಗಳು ಮುಂತಿಳಿಸಬಲ್ಲವೊ?
    ಕಾವಲಿನಬುರುಜು—1996
  • ನಿಮ್ಮ ದೇಹಕ್ಕೆ ನಿದ್ರೆಯು ಅಗತ್ಯವಾಗಿರುವುದರ ಕಾರಣ
    ಎಚ್ಚರ!—1995
  • ನಿದ್ದೆ—ನಿಮ್ಮ ಎನರ್ಜಿ ಟಾನಿಕ್‌
    ಯುವಜನರ ಪ್ರಶ್ನೆಗಳು
ಕಾವಲಿನಬುರುಜು—1996
w96 10/1 ಪು. 3-4

ನಾವು ಕನಸು ಕಾಣಲೇಬೇಕು

ನಿಮಗೆ ಕನಸುಗಳು ಬೀಳುತ್ತವೊ? ನಿಮಗೆ ಕನಸುಗಳು ಬೀಳುತ್ತವೆಂದು ಭಾವಿಸುವುದು ಸುರಕ್ಷಿತ, ಏಕೆಂದರೆ ನಾವು ಕನಸು ಕಾಣುವುದಿಲ್ಲವೆಂದು ನಾವು ಪ್ರತಿಪಾದಿಸಬಹುದಾದರೂ, ನಾವೆಲ್ಲರೂ ನಿದ್ರಿಸುತ್ತಿರುವಾಗ ಕನಸು ಕಾಣುತ್ತೇವೆ. ಎಲ್ಲಾ ಕನಸುಗಳಲ್ಲಿ 95 ಪ್ರತಿಶತಕ್ಕಿಂತಲೂ ಹೆಚ್ಚಿನ ಕನಸುಗಳು ಜ್ಞಾಪಿಸಿಕೊಳ್ಳಲ್ಪಡುವುದಿಲ್ಲ ಎಂದು ಅಂದಾಜುಮಾಡಲಾಗಿದೆ. ನೀವು ಯಾವ ಕನಸುಗಳನ್ನು ಜ್ಞಾಪಿಸಿಕೊಳ್ಳುತ್ತೀರಿ? ವಾಸ್ತವವಾಗಿ, ನಾವು ಎಚ್ಚರಗೊಳ್ಳುವುದಕ್ಕೆ ಸ್ವಲ್ಪ ಮುಂಚಿತವಾಗಿ ನಮಗೆ ಬೀಳುವ ಕನಸುಗಳೇ, ನಾವು ಸಾಮಾನ್ಯವಾಗಿ ಜ್ಞಾಪಿಸಿಕೊಳ್ಳುವ ಕನಸುಗಳಾಗಿವೆ.

ನಿದ್ರೆಯು ಪ್ರಗತಿಪರವಾದ ಒಂದು ಪ್ರಕ್ರಿಯೆಯಾಗಿದೆ, ಅಂದರೆ, ಮೊದಲ ಕೆಲವು ತಾಸುಗಳಲ್ಲಿ ಅದು ಅತ್ಯಂತ ಗಾಢವಾಗಿದ್ದು, ತದನಂತರ ಕ್ರಮೇಣವಾಗಿ ಹೆಚ್ಚು ಲಘುವಾಗಿ ಪರಿಣಮಿಸುತ್ತದೆಂದು ಕನಸಿನ ಸಂಶೋಧಕರು ಕಂಡುಕೊಂಡಿದ್ದಾರೆ. ಕನಸು ಕಾಣುವಿಕೆಯು ವಿಶೇಷವಾಗಿ ತೀವ್ರಗತಿಯ ಕಣ್ಚಲನೆಯ—ಇದನ್ನು ಆರ್‌ಇಎಮ್‌ (ರ್ಯಾಪಿಡ್‌ ಐ ಮೂವ್‌ಮೆಂಟ್‌) ನಿದ್ರೆ ಎಂದು ಕರೆಯಲಾಗುತ್ತದೆ—ಕಾಲಾವಧಿಗಳಲ್ಲಿ ಸಂಭವಿಸುತ್ತದೆ. ಇದು ಆರ್‌ಇಎಮ್‌ರಹಿತ ನಿದ್ರೆಯೊಂದಿಗೆ ಅನುಕ್ರಮಿಸುತ್ತದೆ. ಆರ್‌ಇಎಮ್‌ರಹಿತ ನಿದ್ರೆ/ಆರ್‌ಇಎಮ್‌ ನಿದ್ರೆಯ ಪ್ರತಿ ಚಕ್ರವು, ಸುಮಾರು 90 ನಿಮಿಷಗಳ ವರೆಗೆ ಉಳಿಯುತ್ತದೆ, ಮತ್ತು ರಾತ್ರಿಯ ಸಮಯದಲ್ಲಿ ಈ ಚಕ್ರಗಳು ಐದು ಅಥವಾ ಆರು ಬಾರಿ ಪುನರಾವರ್ತಿಸುತ್ತವೆ; ಅವುಗಳಲ್ಲಿ ಕೊನೆಯದ್ದು ನಾವು ಎಚ್ಚರಗೊಳ್ಳುವುದಕ್ಕೆ ಸ್ವಲ್ಪ ಮೊದಲು ಸಂಭವಿಸುತ್ತದೆ.

ನಿದ್ರೆಮಾಡುವ ಸಮಯದಲ್ಲಿ ನಿಮ್ಮ ಮಿದುಳು ಕಡಿಮೆ ಮಟ್ಟದ ಚಟುವಟಿಕೆಯನ್ನು ನಡಿಸುತ್ತದೆಂದು ಆಲೋಚಿಸುವುದು ತಪ್ಪಾಗಿದೆ. ಮಿದುಳು, ಗಮನ ಮತ್ತು ಸ್ಮರಣೆಗೆ ಸಂಬಂಧಿಸಿರುವ, ಮಿದುಳು ಕಾಂಡದಲ್ಲಿರುವ ನಿರ್ದಿಷ್ಟ ನ್ಯೂರಾನ್‌ಗಳ ಹೊರತಾಗಿ, ಎಚ್ಚತ್ತಿರುವ ಕೆಲವು ಸ್ಥಿತಿಗಳಿಗಿಂತಲೂ ಕನಸುಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತದೆಂದು ಕಂಡುಕೊಳ್ಳಲ್ಪಟ್ಟಿದೆ. ಈ ನ್ಯೂರಾನ್‌ಗಳು ಆರ್‌ಇಎಮ್‌ ನಿದ್ರೆಯ ಸಮಯದಲ್ಲಿ ವಿರಮಿಸುವಂತೆ ಕಂಡುಬರುತ್ತವೆ. ಆದರೆ ಸರ್ವಸಾಮಾನ್ಯವಾಗಿ ಮಿದುಳಿನಲ್ಲಿರುವ ನರ ಜೀವಕೋಶಗಳು, ನಿರಂತರವಾದ ಅಂತರ್‌ಕೋಶೀಯ ಸಂವಾದವನ್ನು ಮಾಡುತ್ತಿರುತ್ತವೆ.

ಒಂದು ಸೆಕೆಂಡಿಗೆ ಸರಿಸುಮಾರಾಗಿ ಒಂದು ನೂರರಿಂದ ಎರಡು ಅಥವಾ ಮೂರು ನೂರರಷ್ಟು ಸೂಚನೆಗಳನ್ನು ಉತ್ಪತ್ತಿಮಾಡುವಂತಹ ನೂರಾರು ಕೋಟಿ ಘಟಕಗಳನ್ನು ಹೊಂದಿರುವ ನಮ್ಮ ಮಿದುಳು, ದೇಹದ ಅದ್ಭುತಕರವಾದ ಜಟಿಲ ಭಾಗವಾಗಿದೆ. ಭೂಮಿಯ ಮೇಲಿರುವ ಜನರಿಗಿಂತಲೂ, ಮಾನವ ಮಿದುಳೊಂದರಲ್ಲಿ ಹೆಚ್ಚು ಘಟಕಗಳು ಇವೆ. ಅದು 2,000 ಕೋಟಿಯಿಂದ 5,000 ಕೋಟಿಗಿಂತಲೂ ಹೆಚ್ಚು ಘಟಕಗಳನ್ನು ಒಳಗೊಂಡಿದೆಯೆಂದು ಕೆಲವು ಸಂಶೋಧಕರು ಅಂದಾಜುಮಾಡುತ್ತಾರೆ. ಅದರ ಜಟಿಲತೆಯು, ಮಾನವ ದೇಹದ ಕುರಿತಾಗಿ ಬೈಬಲ್‌ ಬರಹಗಾರನಾದ ದಾವೀದನು ಬರೆದ ವಿಷಯವನ್ನು ದೃಢಪಡಿಸುತ್ತದೆ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆ.”—ಕೀರ್ತನೆ 139:14.

ಕನಸುಗಳ ಜಗತ್ತು

ನಾವು ಎಚ್ಚರವಾಗಿರುವಾಗ, ನಮ್ಮ ಪಂಚೇಂದ್ರಿಯಗಳು ಸತತವಾಗಿ ಮಿದುಳಿಗೆ ಸಮಾಚಾರವನ್ನೂ ಪ್ರತಿಬಿಂಬಗಳನ್ನೂ ತಿಳಿಯಪಡಿಸುತ್ತಿರುತ್ತವೆ, ಆದರೆ ನಿದ್ರೆಮಾಡುವ ಸಮಯದಲ್ಲಿ ವಿದ್ಯಮಾನವು ಹೀಗಿರುವುದಿಲ್ಲ. ನಮ್ಮ ಪಂಚೇಂದ್ರಿಯಗಳ ಸಹಾಯವಿಲ್ಲದೇ, ಮಿದುಳು ತನ್ನೊಳಗೇ ಪ್ರತಿಬಿಂಬಗಳನ್ನು ಉತ್ಪನ್ನಮಾಡುತ್ತದೆ. ಆದುದರಿಂದಲೇ, ನಾವು ಕನಸುಗಳಲ್ಲಿ ನೋಡುವ ವಿಷಯಗಳು ಹಾಗೂ ಅವುಗಳಲ್ಲಿ ನಾವು ಅನುಭವಿಸುವ ಕ್ರಿಯೆಗಳು ಕೆಲವೊಮ್ಮೆ ಭ್ರಾಂತಿಗಳಂತಿರುತ್ತವೆ. ಇದು ನಮಗೆ, ಪೀಟರ್‌ ಪ್ಯಾನ್‌ನಂತೆ ಹಾರುತ್ತಿರುವುದು ಅಥವಾ ಹಾನಿರಹಿತವಾಗಿ ಪ್ರಪಾತವೊಂದರಿಂದ ಬೀಳುತ್ತಿರುವಂತಹ, ಸ್ವಾಭಾವಿಕ ನಿಯಮಗಳ ಉಲ್ಲಂಘನೆಗಳಾಗಿರುವ ವಿಷಯಗಳನ್ನು ಮಾಡುವುದನ್ನು ಸಾಧ್ಯಮಾಡುತ್ತದೆ. ಭೂತಕಾಲವು ವರ್ತಮಾನಕಾಲವಾಗಿದೆಯೋ ಎಂಬಂತೆ ಕಂಡುಬರುವಂತೆ ಸಮಯವು ವಿಕೃತಗೊಳ್ಳಬಹುದು. ಅಥವಾ ನಾವು ಓಡಿಹೋಗಲು ಪ್ರಯತ್ನಿಸುತ್ತಿರುವುದಾದರೆ, ನಮಗೆ ನಮ್ಮ ಚಲನೆಗಳ ಮೇಲೆ ನಿಯಂತ್ರಣವಿಲ್ಲದಿರುವಂತೆ ಭಾಸವಾಗುತ್ತದೆ—ನಮ್ಮ ಕಾಲುಗಳು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾವು ಎಚ್ಚರವಾಗಿರುವ ಸಮಯದಲ್ಲಿ ನಮಗಿರಬಹುದಾದ ಪ್ರಬಲವಾದ ಪ್ರಭಾವಗಳು ಹಾಗೂ ಅನುಭವಗಳು, ನಮ್ಮ ಕನಸುಗಳನ್ನು ಪ್ರಭಾವಿಸಬಲ್ಲವೆಂಬುದು ನಿಶ್ಚಯ. ಯುದ್ಧದ ಭೀತಿಕಾರಕ ಘೋರ ಕೃತ್ಯಗಳನ್ನು ಅನುಭವಿಸಿರುವ ಅನೇಕರು, ಅವುಗಳನ್ನು ಸುಲಭವಾಗಿ ಮರೆಯಲು ಸಾಧ್ಯವಿಲ್ಲ, ಅಥವಾ ಕೆಲವರು ಅಪರಾಧಿಯೊಬ್ಬನಿಂದ ಆಕ್ರಮಣಕ್ಕೊಳಗಾಗಿಸಲ್ಪಡುವ ಅನಿಸಿಕೆಯನ್ನೂ ಮರೆಯಸಾಧ್ಯವಿಲ್ಲ. ನಾವು ಎಚ್ಚರವಾಗಿರುವಾಗ ಸಂಭವಿಸಿದ ಅಂತಹ ಕ್ಷೋಭೆದಾಯಕ ಅನುಭವಗಳು, ಘೋರ ಕನಸುಗಳನ್ನು ಉಂಟುಮಾಡುತ್ತಾ, ನಮ್ಮ ಕನಸುಗಳಲ್ಲಿ ಗೋಚರಿಸಬಲ್ಲವು. ನಾವು ನಿದ್ರೆಮಾಡಲು ಹೋಗುವಾಗ ನಮ್ಮ ಮನಸ್ಸುಗಳಲ್ಲಿರುವ ಸಾಮಾನ್ಯ ವಿಚಾರಗಳು, ನಮ್ಮ ಕನಸುಗಳಲ್ಲಿ ಮೇಲೆ ಬರಬಲ್ಲವು.

ಕೆಲವೊಮ್ಮೆ ನಾವು ಸಮಸ್ಯೆಯೊಂದನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವಾಗ, ಅದರ ಪರಿಹಾರವು ನಮಗೆ ನಿದ್ರೆಮಾಡುವ ಸಮಯದಲ್ಲಿ ಹೊಳೆಯುತ್ತದೆ. ಎಲ್ಲಾ ನಿದ್ರೆಯು ಕನಸು ಕಾಣುವಿಕೆಯಿಂದ ಕೂಡಿರುವುದಿಲ್ಲ ಎಂಬುದನ್ನು ಇದು ಪ್ರತಿಬಿಂಬಿಸಬಹುದು. ಅದರ ಒಂದು ಭಾಗವು ಆಲೋಚಿಸುವುದಾಗಿದೆ.

ಕನಸುಗಳು ಹಾಗೂ ನಮ್ಮ ಮಿದುಳಿನ ಕುರಿತಾದ ಒಂದು ಪುಸ್ತಕವು ಗಮನಿಸುವುದು: “ನಿದ್ರೆಯಲ್ಲಿನ ಮಾನಸಿಕ ಚಟುವಟಿಕೆಯ ಅತ್ಯಂತ ಸಾಮಾನ್ಯ ರೂಪವು, ಕನಸು ಕಾಣುವುದಲ್ಲ, ಬದಲಾಗಿ ಆಲೋಚಿಸುವುದಾಗಿದೆ. ನಿದ್ರಾಲೋಚನೆಯು ಇಂದ್ರಿಯ ಸಂಬಂಧವಾದ ಭ್ರಮೆಗಳಿಂದ ಜೊತೆಗೂಡಿರುವುದಿಲ್ಲ ಮತ್ತು ಅದು ವಿಲಕ್ಷಣವಾದದ್ದೂ ಆಗಿರುವುದಿಲ್ಲ. ಅದು ಸಾಮಾನ್ಯ ವಿಚಾರವಾಗಿರುವ ಪ್ರವೃತ್ತಿಯುಳ್ಳದ್ದಾಗಿರುತ್ತದೆ, ಅನೇಕವೇಳೆ ನಿನ್ನೆಯ ಅಥವಾ ನಾಳಿನ ಕುರಿತಾದ ನೈಜ-ಜೀವಿತ ಘಟನೆಗಳೊಂದಿಗೆ ಸಂಬಂಧಿಸಿದ ವಿಷಯವಾಗಿರುತ್ತದೆ, ಹಾಗೂ ಸಾಮಾನ್ಯವಾಗಿ ನೀರಸವಾದದ್ದೂ, ಸೃಜನಾತ್ಮಕವಲ್ಲದ್ದೂ, ಪುನರಾವೃತ್ತಿಸುವಂತಹದ್ದೂ ಆಗಿರುತ್ತದೆ.”

ತಮ್ಮ ಕನಸುಗಳ ವಿಷಯಗಳು, ತಮಗಾಗಿ ವಿಶೇಷ ಸಂದೇಶಗಳನ್ನು ಪಡೆದಿವೆಯೆಂದು ಕೆಲವು ಜನರು ಭಾವಿಸುತ್ತಾರೆ. ಕನಸುಗಳ ಅರ್ಥವಿವರಣೆಮಾಡಿಸಲಿಕ್ಕಾಗಿ, ತಾವು ಎಚ್ಚರಗೊಳ್ಳುವಾಗ ತಮ್ಮ ಕನಸುಗಳನ್ನು ದಾಖಲುಮಾಡಸಾಧ್ಯವಾಗುವಂತೆ, ತಮ್ಮ ಹಾಸಿಗೆಯ ಬಳಿ ಅವರು ಒಂದು ನೋಟ್‌ ಪ್ಯಾಡನ್ನು ಇಟ್ಟುಕೊಳ್ಳುತ್ತಾರೆ. ಕನಸಿನ ಸಂಕೇತಗಳಿಗೆ ಅರ್ಥವನ್ನು ಕೊಡಲು ಪ್ರಯತ್ನಿಸುವ ಪುಸ್ತಕಗಳ ಉಪಯುಕ್ತತೆಯ ಕುರಿತಾಗಿ, ಆ್ಯನ್‌ ಫ್ಯಾರಡೆಯವರಿಂದ ಬರೆಯಲ್ಪಟ್ಟ ದ ಡ್ರೀಮ್‌ ಗೇಮ್‌ ಎಂಬ ಪುಸ್ತಕವು ಹೀಗೆ ಹೇಳುತ್ತದೆ: “ನೀವು ಯಾವುದರಲ್ಲಿ ಕನಸಿನ ಮುಖ್ಯವಿಷಯಗಳು ಹಾಗೂ ಸಂಕೇತಗಳ ಅರ್ಥಗಳಿಗಾಗಿ ಹುಡುಕುತ್ತೀರೋ ಆ ಕನಸಿನ ಪುಸ್ತಕಗಳು, ಸಾಂಪ್ರದಾಯಿಕವಾಗಿರಲಿ ಅಥವಾ ಮನಶ್ಶಾಸ್ತ್ರಸಂಬಂಧವಾದ ಯಾವುದೊ ಆಧುನಿಕ ಸಿದ್ಧಾಂತದ ಮೇಲಾಧಾರಿತವಾಗಿರಲಿ, ಅವು ಸಮಾನವಾಗಿ ನಿಷ್ಪ್ರಯೋಜಕವಾಗಿವೆ.”

ಕನಸುಗಳು ಮೂಲತಃ ಮಿದುಳಿನೊಳಗೇ ಉತ್ಪತ್ತಿಯಾಗುವಂತೆ ಭಾಸವಾಗುವುದರಿಂದ, ಅವುಗಳು ನಮಗಾಗಿ ವಿಶೇಷ ಸಂದೇಶಗಳನ್ನು ಪಡೆದಿವೆಯೆಂದು ಆಲೋಚಿಸುವುದು ಸಮಂಜಸವಾದದ್ದಾಗಿರುವುದಿಲ್ಲ. ಮಿದುಳನ್ನು ಒಂದು ಸ್ವಸ್ಥಕರವಾದ ಸ್ಥಿತಿಯಲ್ಲಿ ಇರಿಸಲಿಕ್ಕಾಗಿ ಸಹಾಯ ಮಾಡುವ, ಮಿದುಳಿನ ಒಂದು ಸಾಮಾನ್ಯ ಕಾರ್ಯದೋಪಾದಿ ನಾವು ಅವುಗಳನ್ನು ವೀಕ್ಷಿಸಬೇಕು.

ಆದರೆ ತಾವು ಸಂಬಂಧಿಕನೊಬ್ಬನ ಅಥವಾ ಸ್ನೇಹಿತನೊಬ್ಬನ ಸಾವಿನ ಕನಸನ್ನು ಕಂಡಿದ್ದೆವು, ಹಾಗೂ ಮರುದಿನವೇ ಆ ವ್ಯಕ್ತಿಯು ಸತ್ತುಹೋಗಿದ್ದದ್ದು ತಿಳಿದುಬಂತು ಎಂದು ಹೇಳುವವರ ಕುರಿತಾಗಿ ಏನು? ಭವಿಷ್ಯತ್ತನ್ನು ಕನಸುಗಳು ಮುಂತಿಳಿಸಬಲ್ಲವೆಂಬುದನ್ನು ಅದು ಸೂಚಿಸುವುದಿಲ್ಲವೊ? ಮುಂದಿನ ಲೇಖನದಲ್ಲಿ, ಪ್ರವಾದನಾತ್ಮಕವಾದ ಕನಸುಗಳ ಹಿಂದೆ ಏನಿದೆ ಎಂಬುದನ್ನು ನಾವು ಪರಿಗಣಿಸುವೆವು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ