ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 5/15 ಪು. 26-28
  • ಮ್ಯಾಸರೆಟಿಕ್‌ ಮೂಲಗ್ರಂಥ ಏನಾಗಿದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮ್ಯಾಸರೆಟಿಕ್‌ ಮೂಲಗ್ರಂಥ ಏನಾಗಿದೆ?
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವನ ವಾಕ್ಯ
  • ಅನಿಷ್ಕೃಷ್ಟತೆಗೆ ಬಾಗಿಲು ಸ್ವಲ್ಪ ತೆರೆಯಲ್ಪಟ್ಟಿತು
  • ಬಾಗಿಲನ್ನು ಮುಚ್ಚಲು ಪ್ರಯತ್ನಗಳು
  • ಒಂದು “ಶುದ್ಧ” ಮ್ಯಾಸರೆಟಿಕ್‌ ಮೂಲಗ್ರಂಥವನ್ನು ನಾವು ಕಂಡುಹಿಡಿಯಬಲ್ಲೆವೊ?
  • ಮ್ಯಾಸರೀಟರು—ಯಾರಾಗಿದ್ದರು?
    ಕಾವಲಿನಬುರುಜು—1995
  • ಒಂದು ಆದರ್ಶರೂಪದ ಹೀಬ್ರು ಬೈಬಲ್‌ ಹಸ್ತಪ್ರತಿ
    ಕಾವಲಿನಬುರುಜು—1993
  • ಈ ಗ್ರಂಥವು ಹೇಗೆ ಪಾರಾಗಿ ಉಳಿಯಿತು?
    ಸಕಲ ಜನರಿಗಾಗಿರುವ ಒಂದು ಗ್ರಂಥ
  • ಬೈಬಲ್‌ ಸಂದೇಶವನ್ನು ಬದಲಾಯಿಸಲು ಪ್ರಯತ್ನಿಸಿದ್ರೂ ಅದು ಉಳಿಯಿತು
    ಕಾವಲಿನಬುರುಜು: ಅಳಿಯದೇ ಉಳಿದ ಬೈಬಲ್‌
ಇನ್ನಷ್ಟು
ಕಾವಲಿನಬುರುಜು—1995
w95 5/15 ಪು. 26-28

ಮ್ಯಾಸರೆಟಿಕ್‌ ಮೂಲಗ್ರಂಥ ಏನಾಗಿದೆ?

ನೀವು ಬೈಬಲನ್ನು ಯಾವುದೇ ಭಾಷೆಯಲ್ಲಿ ಓದುತ್ತಿರಲಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪುಸ್ತಕದ ಒಂದು ಭಾಗವು, ಹೀಬ್ರು ಶಾಸ್ತ್ರಗಳನ್ನು ಅಥವಾ “ಹಳೆಯ ಒಡಂಬಡಿಕೆ” ಯನ್ನು ಆವರಿಸುವ ಮ್ಯಾಸರೆಟಿಕ್‌ ಮೂಲಗ್ರಂಥದಿಂದ ಭಾಷಾಂತರಿಸಲ್ಪಟ್ಟಿರುವುದು ಸಂಭವನೀಯ. ವಾಸ್ತವವಾಗಿ, ಒಂದಕ್ಕಿಂತಲೂ ಹೆಚ್ಚು ಮ್ಯಾಸರೆಟಿಕ್‌ ಮೂಲಗ್ರಂಥಗಳು ಇದ್ದವು. ಹಾಗಾದರೆ ಯಾವುದನ್ನು ಆರಿಸಲಾಯಿತು, ಮತ್ತು ಏಕೆ? ನಿಜವಾಗಿಯೂ, ಮ್ಯಾಸರೆಟಿಕ್‌ ಮೂಲಗ್ರಂಥವು ಏನಾಗಿದೆ, ಮತ್ತು ಅದು ವಿಶ್ವಾಸಾರ್ಹವಾಗಿದೆಯೆಂದು ನಾವು ಹೇಗೆ ತಿಳಿದುಕೊಳ್ಳಬಲ್ಲೆವು?

ಯೆಹೋವನ ವಾಕ್ಯ

ಸಾ.ಶ.ಪೂ. 1513 ರಲ್ಲಿ ಸೀನಾಯಿ ಪರ್ವತದಲ್ಲಿ ಬೈಬಲ್‌ ಬರಹವು ಆರಂಭವಾಯಿತು. ವಿಮೋಚನಕಾಂಡ 24:3, 4 ನಮಗನ್ನುವುದು: “ಮೋಶೆ ಜನರ ಬಳಿಗೆ ಬಂದು ಯೆಹೋವನ ಎಲ್ಲಾ ಮಾತುಗಳನ್ನೂ ನ್ಯಾಯವಿಧಿಗಳನ್ನೂ ವಿವರಿಸಲು ಜನರೆಲ್ಲರು—ಯೆಹೋವನ ಮಾತುಗಳನ್ನೆಲ್ಲಾ ಅನುಸರಿಸಿ ನಡೆಯುವೆವು ಎಂದು ಒಕ್ಕಟ್ಟಾಗಿ ಉತ್ತರಕೊಟ್ಟರು. ಮೋಶೆಯು ಯೆಹೋವನ ಆಜ್ಞೆಗಳನ್ನೆಲ್ಲಾ ಬರೆ” ದನು.

ಸಾ.ಶ.ಪೂ. 1513 ರಿಂದ ಸುಮಾರು ಸಾ.ಶ.ಪೂ. 443ರ ವರೆಗೆ, ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಸಮಯದ ತನಕ ಹೀಬ್ರು ಶಾಸ್ತ್ರಗಳು ದಾಖಲಿಸಲ್ಪಡುತ್ತಾ ಮುಂದುವರಿದವು. ಬರಹಗಾರರು ದೇವರಿಂದ ಪ್ರೇರೇಪಿಸಲ್ಪಟ್ಟದ್ದರಿಂದ, ಆತನ ಸಂದೇಶವು ನಂಬಿಗಸ್ತಿಕೆಯಿಂದ ಕಾಪಾಡಲ್ಪಡಸಾಧ್ಯವಾಗುವಂತೆ ಆತನು ವಿಷಯಗಳನ್ನು ಮಾರ್ಗದರ್ಶಿಸುವನೆಂಬುದು ವಿವೇಕಯುತವಾಗಿದೆ. (2 ಸಮುವೇಲ 23:2; ಯೆಶಾಯ 40:8) ಆದರೂ, ಪ್ರತಿಗಳು ಮಾಡಲ್ಪಟ್ಟಂತೆ ಒಂದೇ ಒಂದು ಪತ್ರವನ್ನಾದರೂ ಬದಲಾಯಿಸದಂತೆ, ಎಲ್ಲಾ ಮಾನವ ದೋಷಗಳನ್ನು ಯೆಹೋವನು ಸೇರದಂತೆ ಮಾಡಬಹುದೆಂದು ಇದರ ಅರ್ಥವೋ?

ಅನಿಷ್ಕೃಷ್ಟತೆಗೆ ಬಾಗಿಲು ಸ್ವಲ್ಪ ತೆರೆಯಲ್ಪಟ್ಟಿತು

ದೇವರ ವಾಕ್ಯಕ್ಕಾಗಿರುವ ಆಳವಾದ ಗೌರವದೊಂದಿಗೆ ಮನುಷ್ಯರು ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ಇದನ್ನು ನಕಲು ಮಾಡಿದರೂ, ಹಸ್ತ ಪ್ರತಿಗಳೊಳಗೆ ಸ್ವಲ್ಪ ಪ್ರಮಾಣದ ಮಾನವ ದೋಷಗಳು ನುಸುಳಿದವು. ಬೈಬಲ್‌ ಬರಹಗಾರರು ಪ್ರೇರಿಸಲ್ಪಟ್ಟವರಾಗಿದ್ದರು, ಆದರೆ ನಕಲುಗಾರರು ದೈವಿಕ ಪ್ರೇರಣೆಯ ಕೆಳಗೆ ತಮ್ಮ ಕಾರ್ಯವನ್ನು ಮಾಡಲಿಲ್ಲ.

ಸಾ.ಶ.ಪೂ 537 ರಲ್ಲಿ ಬಾಬೆಲಿನ ಬಂದಿವಾಸದಿಂದ ಹಿಂದಿರುಗಿದ ಬಳಿಕ, ಬಾಬೆಲಿನಲ್ಲಿ ಕಲಿತಿದ್ದ ಚೌಕ ಅಕ್ಷರಗಳನ್ನು ಉಪಯೋಗಿಸಿದ ಹೊಸ ಶೈಲಿಯ ಬರಹವನ್ನು ಯೆಹೂದ್ಯರು ಅಳವಡಿಸಿಕೊಂಡರು. ನಿರ್ದಿಷ್ಟ ಅಕ್ಷರಗಳು ಒಂದೇ ರೀತಿಯ ತೋರಿಕೆಯುಳ್ಳವುಗಳಾಗಿದ್ದು ಒಂದಕ್ಕೊಂದು ತಪ್ಪಾಗಿ ಗ್ರಹಿಸಸಾಧ್ಯವಿರುವ ಅಂತರ್ಗತವಾದ ಸಮಸ್ಯೆಯನ್ನು, ಈ ಪ್ರಮುಖವಾದ ಸಂಪೂರ್ಣ ಬದಲಾವಣೆಯು ತನ್ನೊಂದಿಗೆ ತಂದಿತು. ಹೀಬ್ರು ಭಾಷೆಯು, ಸಂದರ್ಭದ ಗ್ರಹಿಸುವಿಕೆಗನುಸಾರವಾಗಿ ಓದುಗನಿಂದ ಕೂಡಿಸಲ್ಪಡುವ ಸ್ವರೋಚ್ಚಾರಗಳೊಂದಿಗೆ, ವ್ಯಂಜನಗಳ ಮೇಲಾಧಾರಿಸಿರುವ ಒಂದು ಭಾಷೆಯಾಗಿರುವುದರಿಂದ, ಒಂದು ವ್ಯಂಜನದ ಬದಲಾವಣೆಯು ಒಂದು ಶಬ್ದದ ಅರ್ಥವನ್ನು ಸುಲಭವಾಗಿಯೇ ಮಾರ್ಪಡಿಸಬಹುದು. ಆದರೂ, ಹೆಚ್ಚಿನ ವಿದ್ಯಮಾನಗಳಲ್ಲಿ, ಅಂತಹ ದೋಷಗಳು ಪತ್ತೆಹಚ್ಚಲ್ಪಡುತ್ತಿದ್ದು, ತಿದ್ದಲ್ಪಡುತ್ತಿದ್ದವು.

ಬಾಬೆಲಿನ ಪತನದ ಬಳಿಕ ಅಧಿಕಾಂಶ ಯೆಹೂದ್ಯರು ಇಸ್ರಾಯೇಲಿಗೆ ಹಿಂದಿರುಗಲಿಲ್ಲ. ಹೀಗೆ, ಮಧ್ಯ ಪೂರ್ವ ಮತ್ತು ಯೂರೋಪಿನಾದ್ಯಂತ, ಸಭಾಮಂದಿರಗಳು ಯೆಹೂದಿ ಸಮುದಾಯಗಳಿಗೆ ಆತ್ಮಿಕ ಕೇಂದ್ರಗಳಾಗಿ ಪರಿಣಮಿಸಿದವು.a ಪ್ರತಿ ಸಭಾಮಂದಿರಕ್ಕೆ ಶಾಸ್ತ್ರಗಳ ಸುರುಳಿಗಳ ಪ್ರತಿಗಳ ಅಗತ್ಯವಿತ್ತು. ಪ್ರತಿಗಳು ಬಹುಸಂಖ್ಯಾಕವಾದಂತೆ, ನಕಲುಗಾರನ ದೋಷಗಳ ಸಾಧ್ಯತೆಯು ಹೆಚ್ಚಾಯಿತು.

ಬಾಗಿಲನ್ನು ಮುಚ್ಚಲು ಪ್ರಯತ್ನಗಳು

ಸಾ.ಶ. ಮೊದಲನೆಯ ಶತಮಾನದ ಆರಂಭದಲ್ಲಿ, ಇತರ ಎಲ್ಲಾ ಹೀಬ್ರು ಶಾಸ್ತ್ರ ಸುರುಳಿಗಳನ್ನು ಯಾವುದರಿಂದ ಸರಿಪಡಿಸಸಾಧ್ಯವಿತ್ತೋ, ಆ ನಾಯಕ ಕೃತಿಯೊಂದನ್ನು ಸ್ಥಾಪಿಸಲು ಯೆರೂಸಲೇಮಿನ ಶಾಸ್ತ್ರಿಗಳು ಪ್ರಯತ್ನಿಸಿದರು. ಆದರೂ, ಮೂಲಗ್ರಂಥದ ಮೂಲಕೃತಿ ಮತ್ತು ನಕಲುಗಾರರ ದೋಷಗಳನ್ನು ಒಳಗೊಂಡಿದ್ದ ಹಸ್ತಪ್ರತಿಗಳ ನಡುವಿನ ವ್ಯತ್ಯಾಸ ತೋರಿಸಲಿಕ್ಕಾಗಿ ಪ್ರಮಾಣಭೂತವಾದ ಯಾವ ಕಾರ್ಯವಿಧಾನವೂ ಇರಲಿಲ್ಲ. ಇದು ಅಧಿಕೃತವಾಗಿ ಇನ್ನೂ ದೃಢಪಡಿಸಲ್ಪಟ್ಟಿರದಿದ್ದರೂ, ಸಾ.ಶ. ಎರಡನೆಯ ಶತಮಾನದ ನಂತರದಿಂದ, ಹೀಬ್ರು ಶಾಸ್ತ್ರಗಳ ವ್ಯಂಜನಾತ್ಮಕ ಮೂಲಗ್ರಂಥವು ತಕ್ಕಮಟ್ಟಿಗೆ ಸಪ್ರಮಾಣಭೂತವಾಗಿದ್ದಂತೆ ತೋರುತ್ತದೆ. ಟ್ಯಾಲ್ಮಡ್‌ (ಸಾ.ಶ. ಎರಡನೆಯ ಹಾಗೂ ಆರನೆಯ ಶತಮಾನಗಳ ನಡುವೆ ಒಟ್ಟುಗೂಡಿಸಲ್ಪಟ್ಟದ್ದು) ನಲ್ಲಿ ಕಂಡುಬರುವ ಹೀಬ್ರು ಶಾಸ್ತ್ರದ ಉದ್ಧರಣೆಗಳು ತೀರ ಅನೇಕವೇಳೆ, ತದನಂತರ ಯಾವುದು ಮ್ಯಾಸರೆಟಿಕ್‌ ಮೂಲಗ್ರಂಥವೆಂದು ಪ್ರಸಿದ್ಧವಾಯಿತೋ ಅದಕ್ಕಿಂತ ಬೇರೆಯಾದ ಮೂಲವನ್ನು ಸೂಚಿಸುತ್ತವೆ.

ಹೀಬ್ರು ಭಾಷೆಯಲ್ಲಿ “ಸಂಪ್ರದಾಯ” ಎಂಬ ಶಬ್ದವು ಮ್ಯಾಸರಾ ಅಥವಾ ಮ್ಯಾಸರೆತ್‌ ಆಗಿದೆ. ಸಾ.ಶ. ಆರನೆಯ ಶತಮಾನದಷ್ಟಕ್ಕೆ, ಹೀಬ್ರು ಶಾಸ್ತ್ರಗಳನ್ನು ನಿಷ್ಕೃಷ್ಟವಾಗಿ ನಕಲು ಮಾಡುವ ಸಂಪ್ರದಾಯವನ್ನು ಕಾಪಾಡಿಕೊಂಡವರು ಮ್ಯಾಸರೆಟ್‌ಗಳು ಎಂದು ಪ್ರಸಿದ್ಧರಾದರು. ಅವರು ಮಾಡಿದ ಪ್ರತಿಗಳು ಮ್ಯಾಸರೆಟಿಕ್‌ ಮೂಲಗ್ರಂಥಗಳೆಂದು ನಿರ್ದೇಶಿಸಲ್ಪಡುತ್ತವೆ. ಅವರ ಕೆಲಸ ಮತ್ತು ಅವರು ಸಿದ್ಧಪಡಿಸಿದ ಮೂಲಗ್ರಂಥದ ಕುರಿತು ವಿಶೇಷತೆ ಏನಿತ್ತು?

ಬಳಕೆಯಲ್ಲಿರುವ, ರಾಷ್ಟ್ರೀಯ ಭಾಷೆಯೋಪಾದಿ ಹೀಬ್ರು ಭಾಷೆಯು ಅಳಿಸಿಹೋಗಿತ್ತು, ಮತ್ತು ಅನೇಕ ಯೆಹೂದ್ಯರು ಇನ್ನು ಮುಂದೆ ಅದರೊಂದಿಗೆ ಚಿರಪರಿಚಿತರಿರಲಿಲ್ಲ. ಆದುದರಿಂದ, ವ್ಯಂಜನಾತ್ಮಕವಾದ ಬೈಬಲಿನ ಮೂಲಗ್ರಂಥವು ತಾನೇ ಅಪಾಯಕ್ಕೆ ಒಳಗಾಯಿತು. ಅದನ್ನು ಸಂರಕ್ಷಿಸಲಿಕ್ಕಾಗಿ, ಚುಕ್ಕೆಗಳು ಮತ್ತು ಅಡಗ್ಡೆರೆಗಳು, ಅಥವಾ ಬಿಂದುಗಳಿಂದ ಪ್ರತಿನಿಧಿಸಲ್ಪಟ್ಟ ಸರ್ವಗಳ ವ್ಯವಸ್ಥೆಯನ್ನು ಮ್ಯಾಸರೆಟ್‌ಗಳು ವಿಕಸಿಸಿದರು. ಇವುಗಳನ್ನು ವ್ಯಂಜನಗಳ ಮೇಲೆ ಮತ್ತು ಕೆಳಗೆ ಇಡಲಾಯಿತು. ಸರ್ವಚಿಹ್ನೆಯ ಒಂದು ರೂಪದೋಪಾದಿ ಮತ್ತು ಹೆಚ್ಚು ನಿಷ್ಕೃಷ್ಟವಾದ ಉಚ್ಛಾರಣೆಗಾಗಿ ಒಂದು ಮಾರ್ಗದರ್ಶಕದೋಪಾದಿ ಕಾರ್ಯನಡಿಸಿದ, ಚಿಹ್ನೆಗಳ ಜಟಿಲ ವ್ಯವಸ್ಥೆಯನ್ನು ಸಹ ಮ್ಯಾಸರೆಟ್‌ಗಳು ವಿಕಸಿಸಿದರು.

ಮೂಲಗ್ರಂಥವು ಎಲ್ಲಿ ಮಾರ್ಪಡಿಸಲ್ಪಟ್ಟಿದೆ ಅಥವಾ ಹಿಂದಿನ ಸಂತತಿಗಳ ಶಾಸ್ತ್ರಿಗಳಿಂದ ದೋಷಯುಕ್ತವಾಗಿ ನಕಲು ಮಾಡಲ್ಪಟ್ಟಿತ್ತೆಂದು ಮ್ಯಾಸರೆಟ್‌ಗಳಿಗೆ ಅನಿಸಿದ್ದಲ್ಲಿ, ಮೂಲಪಾಠವನ್ನು ಬದಲಾಯಿಸುವುದಕ್ಕೆ ಬದಲಾಗಿ, ಅವರು ಪಕ್ಕ ಟಿಪ್ಪಣಿಗಳನ್ನು ಮಾಡಿದರು. ಅಸಾಮಾನ್ಯವಾದ ಶಬ್ದ ರೂಪಗಳು ಮತ್ತು ಧಾತುಗಳನ್ನು ಹಾಗೂ ಕೇವಲ ಒಂದೇ ಪುಸ್ತಕದಲ್ಲಿ ಅಥವಾ ಇಡೀ ಹೀಬ್ರು ಶಾಸ್ತ್ರಗಳಲ್ಲಿ ಇವುಗಳು ಕಂಡುಬರುವ ಸಂಭವ ಪ್ರಮಾಣಗಳನ್ನು ಅವರು ದಾಖಲಿಸಿದರು. ಅಡತ್ಡನಿಖೆಯಲ್ಲಿ ನಕಲುಗಾರರಿಗೆ ಸಹಾಯ ಮಾಡಲಿಕ್ಕಾಗಿ ಹೆಚ್ಚಿನ ಟಿಪ್ಪಣಿಗಳು ಸಹ ಟಿಪ್ಪಣಿ ಮಾಡಲ್ಪಟ್ಟವು. ವಿಪರೀತ ಸಂಕ್ಷಿಪ್ತದೆಯೊಂದಿಗೆ ಈ ಸಮಾಚಾರವನ್ನು ದಾಖಲಿಸಲಿಕ್ಕಾಗಿ, ತೀರ ಹ್ರಸ್ವಗೊಳಿಸಿದ “ಸಂಕೇತಗಳ” ನ್ನೊಳಗೊಂಡ ಒಂದು ವ್ಯವಸ್ಥೆಯ ವಿಕಸಿಸಲ್ಪಟ್ಟಿತು. ಮೇಲಿನ ಮತ್ತು ಕೆಳಗಿನ ಅಂಚುಗಳಲ್ಲಿ, ಒಂದು ರೀತಿಯ ಸಣ್ಣ ಅನುಕ್ರಮಣಿಕೆಯು ಪಕ್ಕದ ಅಂಚಿನ ಟಿಪ್ಪಣಿಗಳಲ್ಲಿ ವ್ಯಾಖ್ಯಾನಿಸಲ್ಪಟ್ಟ ಸಂಬಂಧಿತ ವಚನಗಳ ಅಂಶಗಳನ್ನು ಪಟ್ಟಿಮಾಡಿತು.

ಅತ್ಯಂತ ಪ್ರಖ್ಯಾತವಾದ ಪದ್ಧತಿಯು, ಗಲಿಲಾಯ ಸಮುದ್ರದ ಬಳಿಯ ತಿಬೇರಿಯದಲ್ಲಿನ ಮ್ಯಾಸರೆಟ್‌ಗಳಿಂದ ಪರಿಪೂರ್ಣಗೊಳಿಸಲ್ಪಟ್ಟಿತು. ಸಾ.ಶ. ಒಂಬತ್ತು ಮತ್ತು ಹತ್ತನೆಯ ಶತಮಾನಗಳ ಬಹುಶಃ ಕಾರಿಸಮ್‌ ಅನುಯಾಯಿಗಳಾದ ಬೆನ್‌ ಆ್ಯಶರ್‌ ಮತ್ತು ಬೆನ್‌ ನೆಫ್ತಲೈಯರ ಕುಟುಂಬಗಳು, ವಿಶೇಷವಾಗಿ ಪ್ರಖ್ಯಾತವಾದವು.b ಈ ಎರಡು ಪರಂಪರೆಗಳ ಉಚ್ಚಾರಣಾ ರೀತಿ ಮತ್ತು ಪಕ್ಕ ಟಿಪ್ಪಣಿಗಳ ನಡುವೆ ಭಿನ್ನತೆಗಳು ಅಸ್ತಿತ್ವದಲ್ಲಿ ಇದ್ದರೂ, ಅವುಗಳ ಮೂಲಗ್ರಂಥದ ವ್ಯಂಜನಗಳು ಇಡೀ ಹೀಬ್ರು ಶಾಸ್ತ್ರಗಳಲ್ಲಿ ಹತ್ತಕ್ಕಿಂತಲೂ ಕಡಿಮೆ ಸ್ಥಳಗಳಲ್ಲಿ ಭಿನ್ನವಾಗಿವೆ.

ಬೆನ್‌ ಆ್ಯಶರ್‌ ಮತ್ತು ಬೆನ್‌ ನೆಫ್ತಲೈಯರ, ಮ್ಯಾಸರೆಟ್‌ಗಳ ಎರಡೂ ಪರಂಪರೆಗಳು, ಅವರ ಕಾಲದಲ್ಲಿ ಮೂಲಗ್ರಂಥದ ಪಾಂಡಿತ್ಯಕ್ಕೆ ಒಂದು ಪ್ರಧಾನವಾದ ನೆರವನ್ನು ನೀಡಿದವು. ಮೈಮಾನಡೀಸ್‌ನು (12 ನೆಯ ಶತಮಾನದ ಟ್ಯಾಲ್ಮಡ್‌ನ ಒಬ್ಬ ಪ್ರಭಾವಶಾಲಿ ಪಂಡಿತ) ಬೆನ್‌ ಆ್ಯಶರ್‌ನ ಮೂಲಗ್ರಂಥವನ್ನು ಹೊಗಳಿದ ಬಳಿಕ, ಇತರರು ಇದಕ್ಕೆ ಪ್ರತ್ಯೇಕ ಆದ್ಯತೆಯನ್ನು ಕೊಟ್ಟರು. ಇದು ಎಷ್ಟು ವಿಸ್ತೃತವಾಗಿತ್ತೆಂದರೆ, ಪ್ರಸ್ತುತವಾಗಿ ಬೆನ್‌ ನೆಫ್ತಲೈಯ ಹಸ್ತಪ್ರತಿಯನ್ನು ಎಲ್ಲಿಯೂ ಕಾಣಸಾಧ್ಯವಿಲ್ಲ. ಎರಡು ಪರಂಪರೆಗಳ ನಡುವಿನ ವ್ಯತ್ಯಾಸಗಳ ಪಟ್ಟಿಯೊಂದೇ, ಬೆನ್‌ ನೆಫ್ತಲೈಯ ಮೂಲಗ್ರಂಥದ ಕುರಿತಾಗಿ ಉಳಿದಿರುವ ವಿಷಯವಾಗಿದೆ. ಹಾಸ್ಯವ್ಯಂಗ್ಯವಾಗಿ, ನಿಷ್ಕೃಷ್ಟವಾದ ವಹನತೆಯ ಹೆಚ್ಚು ಪ್ರಾಮುಖ್ಯವಾದ ಅಂಶಗಳಿಗಾಗಿ ಅಲ್ಲ, ಬದಲಾಗಿ ಪರಿಚ್ಛೇದಗಳ ನಡುವಿನ ಸ್ಥಳದಂತಹ ಸಾಹಿತ್ಯ ಶೈಲಿಯ ಪರಿಗಣನೆಗಳಿಗೆ ಮೈಮಾನಡೀಸ್‌ನ ಟಿಪ್ಪಣಿಯು ಸಂಬಂಧಿಸಲ್ಪಟ್ಟಿತ್ತು.

ಒಂದು “ಶುದ್ಧ” ಮ್ಯಾಸರೆಟಿಕ್‌ ಮೂಲಗ್ರಂಥವನ್ನು ನಾವು ಕಂಡುಹಿಡಿಯಬಲ್ಲೆವೊ?

ಬೆನ್‌ ಆ್ಯಶರ್‌ ಮೂಲಗ್ರಂಥವು “ನಿಜ” ವಾದ ಮ್ಯಾಸರೆಟಿಕ್‌ ಮೂಲಗ್ರಂಥವನ್ನು ನಮಗೆ ಒದಗಿಸುವುದೋ ಎಂಬಂತೆ, ಇಂದು ದೊರೆಯುತ್ತಿರುವ ಯಾವ ಕೋಡೆಕ್ಸ್‌ “ಶುದ್ಧ” ವಾದದ್ದಾಗಿದೆ ಎಂಬುದರ ಕುರಿತು ಪಂಡಿತರ ನಡುವೆ ಬಹಳ ವಾಗ್ವಾದವಿದೆ. ವಾಸ್ತವವಾಗಿ, ಅಪೂರ್ವವಾದ, “ಶುದ್ಧ” ವಾದ, ಮತ್ತು ಅಧಿಕೃತವಾದ ಒಂದು ಮ್ಯಾಸರೆಟಿಕ್‌ ಮೂಲಗ್ರಂಥವು ಎಂದೂ ಇರಲಿಲ್ಲ. ಅದಕ್ಕೆ ಬದಲಾಗಿ, ಅನೇಕ ಮ್ಯಾಸರೆಟಿಕ್‌ ಮೂಲಗ್ರಂಥಗಳಿದ್ದು, ಪ್ರತಿಯೊಂದೂ ಇತರವುಗಳಿಗಿಂತ ಸ್ವಲ್ಪಮಟ್ಟಿಗೆ ಭಿನ್ನವಾಗಿದ್ದವು. ಈಗಲೂ ಇರುವ ಎಲ್ಲಾ ಕೋಡೆಕ್ಸ್‌ಗಳು, ಬೆನ್‌ ಆ್ಯಶರ್‌ ಮತ್ತು ಬೆನ್‌ ನೆಫ್ತಲೈ—ಇವರಿಬ್ಬರ ಪಾಠಾಂತರದಿಂದಲೂ ಮಿಶ್ರಗೊಂಡ ಮೂಲಗ್ರಂಥಗಳಾಗಿವೆ.

ಇಂದು ಹೀಬ್ರು ಶಾಸ್ತ್ರದ ಯಾವನೇ ಭಾಷಾಂತರಕಾರನಿಗೆ ಎದುರಾಗುವ ಕಾರ್ಯಭಾರವು ಅತಿ ಕಠಿನ. ಅವನು ಕೇವಲ ಹೀಬ್ರು ಮೂಲಗ್ರಂಥದೊಂದಿಗೆ ಮಾತ್ರವಲ್ಲ, ಬದಲಾಗಿ ನಕಲುಗಾರರ ದೋಷ ಅಥವಾ ಇನ್ನಿತರ ಕಾರಣಗಳಿಂದಾಗಿ ಮೂಲಗ್ರಂಥವು ಬದಲಾಯಿಸಲ್ಪಟ್ಟಿರಬಹುದಾದಂತಹ ಸಮಂಜಸವಾದ ಎಲ್ಲಾ ಆಯ್ಕೆಗಳೊಂದಿಗೆ ತನ್ನನ್ನು ಪರಿಚಯಿಸಿಕೊಳ್ಳಬೇಕು. ವಿವಿಧ ಮ್ಯಾಸರೆಟಿಕ್‌ ಮೂಲಗ್ರಂಥಗಳು ಒಂದು ಆಧಾರದೋಪಾದಿ ಕಾರ್ಯನಡಿಸುವಾಗ, ಅವನು ವ್ಯಂಜನಾತ್ಮಕ ಮೂಲಪಾಠದ ಹೆಚ್ಚು ಪುರಾತನವಾದ ಮತ್ತು ಬಹುಶಃ ಹೆಚ್ಚು ನಿಷ್ಕೃಷ್ಟವಾದ ವರ್ಷನ್‌ಗಳನ್ನು ಸಮಂಜಸವಾಗಿ ಪ್ರತಿನಿಧಿಸಸಾಧ್ಯವಿರುವ, ಇತರ ಸಪ್ರಮಾಣವಾದ ಮೂಲಗಳನ್ನು ಸಂಪರ್ಕಿಸುವ ಅಗತ್ಯವಿರುತ್ತದೆ.

ದ ಟೆಕ್ಸ್ಟ್‌ ಆಪ್‌ ದಿ ಓಲ್ಡ್‌ ಟೆಸ್ಟಮೆಂಟ್‌ ಎಂಬ ಅವನ ಪುಸ್ತಕಕ್ಕೆ ಪೀಠಿಕೆಯಲ್ಲಿ, ಅರ್ನ್‌ಸ್ಟ್‌ ವ್ಯುರ್ಟ್‌ವೈನ್‌ ವಿವರಿಸುವುದು: “ಕಷ್ಟಕರವಾದ ಒಂದು ಉದ್ಧೃತ ಭಾಗದಿಂದ ಎದುರಿಸಲ್ಪಡುವಾಗ, ನಾವು ವಿವಿಧ ಪಾಠಾಂತರಗಳನ್ನು ಕೇವಲ ಒಟ್ಟಿಗೆ ಒಟ್ಟುಗೂಡಿಸಿ, ತೀರ ಸುಲಭವಾದ ಪರಿಹಾರವನ್ನು ಒದಗಿಸುವಂತೆ ತೋರುವ ಒಂದನ್ನು ಆರಿಸಿ, ಕೆಲವೊಮ್ಮೆ ಹೀಬ್ರು ಮೂಲಗ್ರಂಥವನ್ನು, ಇತರ ಸಮಯಗಳಲ್ಲಿ ಸೆಪ್ಟ್ಯೂಅಜಿಂಟನ್ನು, ಮತ್ತು ಇನ್ನಿತರ ಸಮಯಗಳಲ್ಲಿ ಆರಮೇಯಿಕ್‌ ಟಾರ್ಗಮ್‌ (ಸರಳಾನುವಾದ) ಅನ್ನು ಇಷ್ಟಪಟ್ಟು ಆಯ್ದುಕೊಳ್ಳಲು ಸಾಧ್ಯವಿಲ್ಲ. ಮೂಲಗ್ರಂಥದ ಸಾಕ್ಷ್ಯಗಳೆಲ್ಲವೂ ಸಮಾನವಾಗಿ ವಿಶ್ವಾಸಾರ್ಹವಾಗಿಲ್ಲ. ಪ್ರತಿಯೊಂದಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ ಮತ್ತು ಸ್ವಂತ ವಿಶಿಷ್ಟ ಇತಿಹಾಸವಿದೆ. ನಾವು ಅಸಮರ್ಪಕವಾದ ಅಥವಾ ಸುಳ್ಳು ಪರಿಹಾರಗಳನ್ನು ತೊರೆಯಲು ನಿರೀಕ್ಷಿಸುವಲ್ಲಿ, ನಾವು ಇವುಗಳೊಂದಿಗೆ ಪರಿಚಿತರಾಗಿರಬೇಕು.”

ಯೆಹೋವನು ತನ್ನ ವಾಕ್ಯವನ್ನು ಸಂರಕ್ಷಿಸಿಟ್ಟಿದ್ದಾನೆಂಬ ಪೂರ್ಣ ಭರವಸೆಗಾಗಿ ಒಂದು ದೃಢವಾದ ಆಧಾರವು ನಮಗಿದೆ. ಶತಮಾನಗಳಲ್ಲಿ ಅನೇಕ ಪ್ರಾಮಾಣಿಕ ಪುರುಷರ ಸಂಯೋಜಿತ ಪ್ರಯತ್ನಗಳಿಂದಾಗಿ, ಸಾರಾಂಶ, ವಿಷಯಸೂಚಿ, ಮತ್ತು ಬೈಬಲಿನ ಸಂದೇಶದ ವಿವರಣೆಗಳು ಸಹ ಸುಲಭವಾಗಿ ದೊರೆಯುತ್ತವೆ. ಅಕ್ಷರ ಅಥವಾ ಶಬ್ದದಲ್ಲಿನ ಯಾವ ಅಲ್ಪ ಬದಲಾವಣೆಗಳೂ, ಶಾಸ್ತ್ರಗಳನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಬಾಧಿಸಿಲ್ಲ. ದೇವರ ವಾಕ್ಯವಾದ ಬೈಬಲಿಗನುಗುಣವಾಗಿ ನಾವು ಜೀವಿಸುವೆವೊ? ಎಂಬುದು ಈಗ ಪ್ರಾಮುಖ್ಯವಾದ ಪ್ರಶ್ನೆಯಾಗಿರುತ್ತದೆ.

[ಅಧ್ಯಯನ ಪ್ರಶ್ನೆಗಳು]

a  ಇಸ್ರಾಯೇಲಿನ ಹೊರಗಿರುವ ಅನೇಕ ಯೆಹೂದ್ಯರು ಹೀಬ್ರು ಭಾಷೆಯ ನಿರರ್ಗಳ ಓದುಗರಾಗಿರದ ಕಾರಣದಿಂದ, ಈಜಿಪ್ಟಿನ ಅಲೆಕ್ಸ್ಯಾಂಡ್ರಿಯದಲ್ಲಿರುವಂತಹ ಯೆಹೂದಿ ಸಮುದಾಯಗಳು, ದೇಶೀಯ ಭಾಷೆಗೆ ಬೈಬಲಿನ ಭಾಷಾಂತರಗಳನ್ನು ಮಾಡುವ ಅಗತ್ಯವನ್ನು ಬೇಗನೆ ಕಂಡುಕೊಂಡವು. ಈ ಆವಶ್ಯಕತೆಯನ್ನು ಪೂರೈಸಲಿಕ್ಕಾಗಿ, ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಗ್ರೀಕ್‌ ಸೆಪ್ಟ್ಯೂಅಜಿಂಟ್‌ ವರ್ಷನ್‌ ಅನ್ನು ಸಿದ್ಧಪಡಿಸಲಾಯಿತು. ಈ ವರ್ಷನ್‌ ತದನಂತರದಲ್ಲಿ, ಮೂಲಗ್ರಂಥದ ತುಲನೆಗಾಗಿ ಪ್ರಮುಖವಾದ ಮೂಲವಾಗಿ ಪರಿಣಮಿಸಲಿತ್ತು.

b  ಸಾ.ಶ. 760 ನೆಯ ವರ್ಷದಷ್ಟಕ್ಕೆ, ಕಾರಿಸಮ್‌ ಅನುಯಾಯಿಗಳೆಂದು ಪ್ರಸಿದ್ಧವಾದ ಒಂದು ಯೆಹೂದಿ ಗುಂಪು, ಶಾಸ್ತ್ರಗಳಿಗೆ ಹೆಚ್ಚು ಕಟ್ಟುನಿಟ್ಟಿನ ಪಾಲನೆಗಾಗಿ ತಗಾದೆ ಮಾಡಿತು. ರಬ್ಬಿಗಳ ಅಧಿಕಾರ, “ವಾಚಿಕ ನಿಯಮ” ಮತ್ತು ಟ್ಯಾಲ್ಮಡ್‌ ಅನ್ನು ತಿರಸ್ಕರಿಸುತ್ತಾ, ಬೈಬಲ್‌ ಮೂಲಗ್ರಂಥವನ್ನು ವ್ಯವಸ್ಥಿತವಾಗಿ ಜೋಪಾನಮಾಡಲು ಅವರಿಗೆ ಹೆಚ್ಚು ಮಹತ್ತಾದ ಕಾರಣವಿತ್ತು. ಈ ಗುಂಪಿನಿಂದ ಕೆಲವು ಕುಟುಂಬಗಳು ಪ್ರವೀಣ ಮ್ಯಾಸರೆಟಿಕ್‌ ನಕಲುಗಾರರಾದರು.

[ಪುಟ 26 ರಲ್ಲಿರುವ ಚಿತ್ರ]

ಅಲೆಪೊ ಕೋಡೆಕ್ಸ್‌ ಮ್ಯಾಸರೆಟಿಕ್‌ ಮೂಲಗ್ರಂಥವನ್ನು ಒಳಗೊಂಡಿದೆ.

[ಕೃಪೆ]

Bibelmuseum, Münster

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ