ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w95 3/15 ಪು. 29-31
  • ನೀವು ಯೆಹೋವನನ್ನು ಸ್ತುತಿಸುವಿರೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀವು ಯೆಹೋವನನ್ನು ಸ್ತುತಿಸುವಿರೋ?
  • ಕಾವಲಿನಬುರುಜು—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸುವಾರ್ತೆಯನ್ನು ಘೋಷಿಸುವ ಮೂಲಕ ದೇವರನ್ನು ಸ್ತುತಿಸಿರಿ
  • ಲಭ್ಯವಿರುವ ಸಹಾಯ
  • ಯೆಹೋವನನ್ನು ಸ್ತುತಿಸುವಂತೆ ಮಕ್ಕಳಿಗೆ ಸಹಾಯಮಾಡಿರಿ
  • ಯೆಹೋವನೊಂದಿಗೆ ಒಂದು ಅನಂತ ಸಂಬಂಧ
  • ಲೋಕವ್ಯಾಪಕವಾಗಿ ಹರ್ಷಭರಿತ ಸ್ತುತಿಗಾರರಾಗಿರಲು ಪ್ರತ್ಯೇಕಿಸಲ್ಪಟ್ಟದ್ದು
    ಕಾವಲಿನಬುರುಜು—1997
  • ಎಳೆಯರೇ, ಯೆಹೋವನನ್ನು ಸ್ತುತಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
    ಯೆಹೋವನಿಗೆ ಹಾಡಿರಿ
  • ಹರ್ಷದಿ ಹಾಡಿ ಕೊಂಡಾಡು
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಕಾವಲಿನಬುರುಜು—1995
w95 3/15 ಪು. 29-31

ನೀವು ಯೆಹೋವನನ್ನು ಸ್ತುತಿಸುವಿರೋ?

“ದೇವರೇ, ನಿನ್ನ ನಾಮದ ಘನತೆಗೆ ತಕ್ಕಂತೆಯೇ ಲೋಕವೆಲ್ಲಾ ನಿನ್ನನ್ನು ಹೊಗಳುವದು.” ಇವು ಕೋರಹನ ಪುತ್ರರ ಒಂದು ಪ್ರವಾದನಾತ್ಮಕ ಗೀತೆಯಿಂದ ತೆಗೆಯಲ್ಪಟ್ಟ ಮಾತುಗಳು. (ಕೀರ್ತನೆ 48:10) ಇಂದು, ಲಕ್ಷಾಂತರ ಯೆಹೋವನ ಸಾಕ್ಷಿಗಳ ಒಂದು ದೊಡ್ಡದಾದ ಗಾಯಕ ತಂಡವು ದೇವರನ್ನು ಸ್ತುತಿಸುತ್ತಿದೆ ಮತ್ತು ಆತನ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಆತನ ಹೆಸರನ್ನು ತಿಳಿಯಪಡಿಸುತ್ತಿದೆ. ಇದನ್ನು 232 ದೇಶಗಳಲ್ಲಿ ಮತ್ತು ಸಮುದ್ರದ ದ್ವೀಪಗಳಲ್ಲಿ ಹಾಗೂ 300 ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಮಾಡುವ ಮೂಲಕ, ಅವರು ಅಕ್ಷರಾರ್ಥಕವಾಗಿ “ಲೋಕವೆಲ್ಲಾ” ತಲಪುತ್ತಿದ್ದಾರೆ.

ವಿಭಿನ್ನ ಸಾಂಸ್ಕೃತಿಕ, ಸಾಮಾಜಿಕ, ಹಾಗೂ ಭಾಷೆಯ ಹಿನ್ನೆಲೆಗಳಿರುವ ಜನರು ಯೆಹೋವನನ್ನು ಸ್ತುತಿಸುವಂತೆ ಅವರನ್ನು ಯಾವುದು ನಿರ್ಬಂಧಿಸುತ್ತದೆ? ದೇವರ ವಾಕ್ಯವಾದ ಬೈಬಲಿನ ಒಂದು ನಿಷ್ಕೃಷ್ಟವಾದ ಜ್ಞಾನಕ್ಕಾಗಿ ಅವರ ಕೃತಜ್ಞತೆಯು, ಒಂದು ಪ್ರಧಾನ ಕಾರಣವಾಗಿದೆ. ಆತ್ಮಿಕ ಸತ್ಯಗಳು, ಮೂಢನಂಬಿಕೆಗಳಿಂದ ಮತ್ತು ಅನಂತ ಯಾತನೆಯಂತಹ ಅಡಿಯಾಳನ್ನಾಗಿ ಮಾಡುವ ಧಾರ್ಮಿಕ ವಿಶ್ವಾಸಗಳಿಂದ ಅವರನ್ನು ಬಿಡಿಸಿದೆ. (ಯೋಹಾನ 8:32) ಕರುಣೆಯೊಂದಿಗೆ ಕೂಡಿದ ದೇವರ ಪ್ರೀತಿ, ಶಕ್ತಿ, ವಿವೇಕ, ಮತ್ತು ನ್ಯಾಯಗಳಂತಹ ಆತನ ಅದ್ಭುತಕರವಾದ ಗುಣಗಳನ್ನು ಗಣ್ಯಮಾಡುವಂತೆ ಸಹ ಸತ್ಯವು ಅವರಿಗೆ ಸಹಾಯ ಮಾಡಿದೆ. ತನ್ನ ಏಕಜಾತ ಪುತ್ರನಾದ ಯೇಸು ಕ್ರಿಸ್ತನನ್ನು ಮಾನವಜಾತಿಗಾಗಿ ಒಂದು ಪ್ರಾಯಶ್ಚಿತ್ತ ಯಜ್ಞದೋಪಾದಿ ದೇವರ ಅರ್ಪಣೆಯ ತಿಳಿವಳಿಕೆಯನ್ನು ಪಡೆಯುವುದು, ಯೆಹೋವನನ್ನು ಸ್ತುತಿಸುವಂತೆ ಮತ್ತು ಸೇವಿಸುವಂತೆ ಸಹೃದಯವುಳ್ಳ ಜನರನ್ನು ಪ್ರಚೋದಿಸುತ್ತದೆ.

ಬೈಬಲ್‌ ಪುಸ್ತಕವಾದ ಪ್ರಕಟನೆಗನುಸಾರ, ಒಂದು ಸ್ವರ್ಗೀಯ ಗಾಯಕ ತಂಡವು ಹೀಗೆ ಘೋಷಿಸುತ್ತದೆ: “ಕರ್ತನೇ, [“ಯೆಹೋವ,” NW] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” (ಪ್ರಕಟನೆ 4:11) ಇಂತಹ ಸ್ತುತಿಯು ಕೇವಲ ಒಂದು ಹಂಗಿನ ಪ್ರಜ್ಞೆಯಿಂದ ಫಲಿಸುವುದಿಲ್ಲ. ಬದಲಿಗೆ, ಅದು ಯೆಹೋವನಿಗಾಗಿರುವ ಪೂಜ್ಯಭಾವನೆಯಿಂದ ಉದ್ಭವಿಸುತ್ತದೆ.

ಸುವಾರ್ತೆಯನ್ನು ಘೋಷಿಸುವ ಮೂಲಕ ದೇವರನ್ನು ಸ್ತುತಿಸಿರಿ

ಯೆಹೋವನನ್ನು ಸ್ತುತಿಸುವುದರಲ್ಲಿ, ವ್ಯಕ್ತಿಯೊಬ್ಬನು ದೇವರ ಪ್ರಧಾನ ಸ್ತುತಿಗಾರನಾದ ಯೇಸು ಕ್ರಿಸ್ತನ ಅತ್ಯುತ್ತಮ ಮಾದರಿಯನ್ನು ಅನುಕರಿಸುತ್ತಿದ್ದಾನೆ. ಯೇಸುವಿನ ಹೆಜ್ಜೆಜಾಡುಗಳನ್ನು ಅನುಸರಿಸುವುದು, ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಭಾಗವಹಿಸುವುದನ್ನು ಒಳಗೊಳ್ಳುತ್ತದೆ. (ಮತ್ತಾಯ 4:17, 23; 24:14) ಈ ಸಾರುವ ಚಟುವಟಿಕೆಯು, ಯೆಹೋವನನ್ನು ಸ್ತುತಿಸುವುದರಲ್ಲಿ ಅತ್ಯಂತ ದೊಡ್ಡ ಲೋಕವ್ಯಾಪಕ ಪ್ರಯತ್ನವಾಗಿ ಪರಿಣಮಿಸಿದೆ.

ಸಾರುವ ಈ ಕೆಲಸವು ಎಷ್ಟು ಪ್ರಾಮುಖ್ಯವಾಗಿದೆ ಎಂದರೆ, ಬೈಬಲ್‌ ಸ್ಪಷ್ಟವಾಗಿಗಿ ಅದನ್ನು ರಕ್ಷಣೆಯೊಂದಿಗೆ ಸಂಬಂಧಿಸುತ್ತದೆ. ರೋಮಾಪುರ 10:13-15 ಓದುವುದು: “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ಬರೆದದೆ. ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ? ಇದಕ್ಕೆ ಸರಿಯಾಗಿ ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ.”

ಕಳೆದ ವರ್ಷವೇ, ಯೆಹೋವನ ಸಾಕ್ಷಿಗಳು ಸಾರುವ ಕೆಲಸದಲ್ಲಿ ನೂರು ಕೋಟಿಗಳಿಗಿಂತಲೂ ಅಧಿಕ ತಾಸುಗಳನ್ನು ವಿನಿಯೋಗಿಸಿದರು. ದೇವರ ಈ ಸ್ತುತಿಸುವಿಕೆಯಿಂದ ಎಂತಹ ಉತ್ತಮ ಫಲಿತಾಂಶಗಳು ಬಂದವು! ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಸಂಕೇತಿಸಿದ ಸುಮಾರು 3,14,000 ಜನರು, ಸುತ್ತಿಗಾರರ ಗಾಯಕ ತಂಡವನ್ನು ಸೇರಿದರು.

ಆದರೂ, 1994ರ ಕ್ರಿಸ್ತನ ಮರಣದ ಜ್ಞಾಪಕವನ್ನು ಹಾಜರಾದ 1,22,88,917 ಜನರ ಕುರಿತು ಏನನ್ನು ಹೇಳಸಾಧ್ಯವಿದೆ? ಅವರಲ್ಲಿ ಸುವಾರ್ತೆಯನ್ನು ಸಾರುವವರೋಪಾದಿ ಯೆಹೋವನನ್ನು ಇನ್ನೂ ಸ್ತುತಿಸದಿರುವ 70,00,000 ಕ್ಕಿಂತಲೂ ಹೆಚ್ಚಿನವರು ಇದ್ದರು. ಆದರೆ ಪ್ರಾಮುಖ್ಯವಾದ ಈ ಸಂದರ್ಭದಲ್ಲಿ ಅವರ ಉಪಸ್ಥಿತಿಯು, ಕಟ್ಟಕಡೆಗೆ ಸ್ತುತಿಗಾರರ ಗಾಯಕ ತಂಡಕ್ಕೆ ಇನ್ನೂ ಲಕ್ಷಾಂತರ ಜನರ ಸೇರಿಕೆಯಲ್ಲಿ ಫಲಿಸಸಾಧ್ಯವಿದೆ. ಯೆಹೋವನ ಸ್ತುತಿಗಾರರಾಗುವಂತೆ ಈ ಆಸಕ್ತ ಜನರಿಗೆ ಸಹಾಯ ನೀಡಲು ಏನನ್ನು ಮಾಡಸಾಧ್ಯವಿದೆ?

ಲಭ್ಯವಿರುವ ಸಹಾಯ

ಅನೇಕ ಆಸಕ್ತ ಜನರಿಗೆ ಯೆಹೋವನನ್ನು ಸ್ತುತಿಸುವ ಬಯಕೆ ಇರಬಹುದು, ಆದರೆ ಆವಶ್ಯಕತೆಗಳನ್ನು ಪೂರೈಸಲು ಸಾಧ್ಯವಿಲ್ಲವೆಂದು ಅವರಿಗೆ ಅನಿಸಬಹುದು. ಅವರು ಕೀರ್ತನೆಗಾರನ ಮಾತುಗಳನ್ನು ಜ್ಞಾಪಿಸಿಕೊಳ್ಳುವುದು ಒಳ್ಳೆಯದು: “ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು? ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.” (ಕೀರ್ತನೆ 121:1, 2) ಕೀರ್ತನೆಗಾರನು ಎಲ್ಲಿ ಯೆಹೋವನ ಮಂದಿರ ಮತ್ತು ದೇವಪ್ರಭುತ್ವ ಸರಕಾರದ ಭೂಸ್ಥಾನವು ನೆಲೆಸಿತ್ತೊ, ಆ ಯೆರೂಸಲೇಮಿನ ಪರ್ವತಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತರಿಸಿದನು. ದೇವರನ್ನು ಸ್ತುತಿಸಲು ಮತ್ತು ರಾಜ್ಯದ ಸಂದೇಶವನ್ನು ಘೋಷಿಸಲು ಬೇಕಾದ ಸಹಾಯವು, ಯೆಹೋವನಿಂದ ಮತ್ತು ಆತನ ಸಂಸ್ಥೆಯಿಂದ ಮಾತ್ರ ಬರುತ್ತದೆ ಎಂಬುದನ್ನು ನಾವು ಇದರಿಂದ ಸರಿಯಾಗಿ ತೀರ್ಮಾನಿಸಸಾಧ್ಯವಿದೆ.—ಕೀರ್ತನೆ 3:4; ದಾನಿಯೇಲ 6:10.

ಇಂದು, ಯೆಹೋವನನ್ನು ಸ್ತುತಿಸಲು ಬಯಸುವವರು, ಆತನ ಭೂಸಂಸ್ಥೆಯಿಂದ ಪ್ರೀತಿಯ ನೆರವನ್ನು ನಿರೀಕ್ಷಿಸಬಲ್ಲರು. ಉದಾಹರಣೆಗೆ, ಆಸಕ್ತ ಜನರೊಂದಿಗೆ ಉಚಿತವಾದ ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುವ ಮೂಲಕ ಯೆಹೋವನ ಸಾಕ್ಷಿಗಳು ಸಹಾಯವನ್ನು ನೀಡುತ್ತಾರೆ. ಈ ಶೈಕ್ಷಣಿಕ ಕಾರ್ಯಕ್ರಮವು ಕೇವಲ ಬೈಬಲ್‌ ಸಿದ್ಧಾಂತಗಳನ್ನು ಕಲಿಯುವುದಕ್ಕಿಂತ ಹೆಚ್ಚಿನದನ್ನು ಒಳಗೊಳ್ಳುತ್ತದೆ. ತಾನು ಕಲಿಯುತ್ತಿರುವ ವಿಷಯಕ್ಕಾಗಿ ಮತ್ತು ಯೆಹೋವನು ಉಪಯೋಗಿಸುತ್ತಿರುವ ಸಂಸ್ಥೆಗಾಗಿ ಗಣ್ಯತೆಯನ್ನು ವಿಕಸಿಸಿಕೊಳ್ಳಲು ಅದು ವಿದ್ಯಾರ್ಥಿಗೆ ಸಹಾಯ ಮಾಡುತ್ತದೆ.

ಇದಕ್ಕೆ ಹೊಂದಿಕೆಯಾಗಿ, ಹೊಸದಾಗಿ ಕಂಡುಕೊಳ್ಳಲ್ಪಟ್ಟ ಸತ್ಯಗಳು ಮನಸ್ಸನ್ನು ಮಾತ್ರವಲ್ಲ ಹೃದಯವನ್ನೂ ತಲಪುತ್ತಿವೆ ಎಂಬುದನ್ನು ಖಚಿತಮಾಡಿಕೊಳ್ಳಲು, ಬೈಬಲ್‌ ಅಧ್ಯಯನವನ್ನು ನಡೆಸುತ್ತಿರುವ ಸಾಕ್ಷಿಯು ಪ್ರಯತ್ನಿಸುತ್ತಾನೆ. ಮತ್ತು ಭೂಮಿಯ ಮೇಲೆ ತನ್ನ ಉದ್ದೇಶವನ್ನು ಸಾಧಿಸಲು ಯೆಹೋವನು ತನ್ನ ಸಂಸ್ಥೆಯನ್ನು ಹೇಗೆ ಉಪಯೋಗಿಸುತ್ತಿದ್ದಾನೆಂದು ವಿದ್ಯಾರ್ಥಿಗೆ ತೋರಿಸುವುದರಿಂದ ಶಿಕ್ಷಕನು ಹಿಂಜರಿಯಬಾರದು. ಇದನ್ನು ಸಾಧಿಸುವುದರಲ್ಲಿ, ಜಿಹೋವಾಸ್‌ ವಿಟ್ನೆಸಸ್‌—ಯುನೈಟೆಡ್ಲಿ ಡೂಯಿಂಗ್‌ ಗಾಡ್ಸ್‌ ವಿಲ್‌ ವರ್ಲ್ಡ್‌ವೈಡ್‌ ಎಂಬ ಬ್ರೋಷರ್‌ ಮತ್ತು ಜಿಹೋವಾಸ್‌ ವಿಟ್ನೆಸಸ್‌—ದಿ ಆರ್ಗನೈಜೇಷನ್‌ ಬಿಹೈಂಡ್‌ ದ ನೇಮ್‌ ಎಂಬ ವಿಡೀಯೊಟೇಪ್‌, ಅನೇಕವೇಳೆ ಸಹಾಯಕಾರಿಯಾಗಿ ಪರಿಣಮಿಸಿವೆ.

ಯೆಹೋವನ ಭಾವಿ ಸ್ತುತಿಗಾರರಿಗೆ ನೆರವನ್ನು ನೀಡುವುದರಲ್ಲಿ ಕ್ರೈಸ್ತ ಕೂಟಗಳು ಸಹ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಒಂದು ಬೈಬಲ್‌ ಅಧ್ಯಯನದ ಅತಿ ಆರಂಭಿಕ ಹಂತಗಳಲ್ಲಿಯೇ, ಕ್ರೈಸ್ತ ಕೂಟಗಳನ್ನು ಹಾಜರಾಗುವಂತೆ ವಿದ್ಯಾರ್ಥಿಯು ಆಮಂತ್ರಿಸಲ್ಪಡಬಹುದು. ಸಕಾಲದಲ್ಲಿ ಅವನು ಎಲ್ಲ ಸಭಾ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮತ್ತು ಅವುಗಳಲ್ಲಿ ಭಾಗವಹಿಸುವ ಮಹತ್ವವನ್ನು ಕಲಿಯುವನು. (ಇಬ್ರಿಯ 10:24, 25) ಆತ್ಮಿಕವಾಗಿ ಭಕ್ತಿವೃದ್ಧಿಮಾಡುವ ಮತ್ತು ಪ್ರಾಯೋಗಿಕವಾಗಿರುವ ಕೂಟಗಳನ್ನು ಸಿದ್ಧಗೊಳಿಸುವ ಮೂಲಕ, ಮೇಲ್ವಿಚಾರಕರು ಜೊತೆ ವಿಶ್ವಾಸಿಗಳಿಗೆ ಮತ್ತು ಯೆಹೋವನ ಭಾವಿ ಸ್ತುತಿಗಾರರಿಗೆ ಅಮೂಲ್ಯವಾದ ಸಹಾಯವನ್ನು ಒದಗಿಸಬಲ್ಲರು.

ಯೆಹೋವನನ್ನು ಸ್ತುತಿಸುವಂತೆ ಮಕ್ಕಳಿಗೆ ಸಹಾಯಮಾಡಿರಿ

ಸಮೀಪದ ಭವಿಷ್ಯತ್ತಿನಲ್ಲಿ ಸುವಾರ್ತೆಯ ಪ್ರಚಾರಕರಾಗುವ ಅನೇಕರಲ್ಲಿ ಮಕ್ಕಳು ಸೇರಿದ್ದಾರೆ. ತಮ್ಮ ಮಕ್ಕಳನ್ನು “ಶಿಸ್ತಿನಲ್ಲಿ ಮತ್ತು ಯೆಹೋವನ ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸುವ ಬೈಬಲ್‌ ಸಂಬಂಧಿತ ಜವಾಬ್ದಾರಿಯು, ವಿಶೇಷವಾಗಿ ತಂದೆಯರಿಗಿದೆ. (ಎಫೆಸ 6:4, NW) ದೇವಭಯವುಳ್ಳ ಹೆತ್ತವರಿಂದ ಸರಿಯಾಗಿ ಶಿಕ್ಷಿಸಲ್ಪಟ್ಟಾಗ, ಬಹಳ ಎಳೆಯ ಮಕ್ಕಳು ಸಹ ಯೆಹೋವನನ್ನು ಸ್ತುತಿಸುವ ಬಯಕೆಯನ್ನು ವಿಕಸಿಸಿಕೊಳ್ಳಬಲ್ಲರು.

ಒಬ್ಬ ರಾಜ್ಯ ಪ್ರಚಾರಕಳಂತೆ ಅರ್ಹತೆಯನ್ನು ಪಡೆಯಲು ಸಭಾ ಹಿರಿಯರ ಸಹಾಯವನ್ನು ಕೇಳುತ್ತಾ, ಆರ್ಜೆಂಟೀನದಲ್ಲಿರುವ ಒಬ್ಬಾಕೆ ಚಿಕ್ಕ ಹುಡುಗಿಯು ಸತತವಾಗಿ ಹಲವಾರು ತಿಂಗಳುಗಳ ವರೆಗೆ ಅವರನ್ನು ಸಮೀಪಿಸಿದಳು. ಸಕಾಲದಲ್ಲಿ, ಆಕೆ ಒಬ್ಬ ಅಸ್ನಾನಿತ ಪ್ರಚಾರಕಳಾಗುವಂತೆ ಆಕೆಯ ಹೆತ್ತವರು ಮತ್ತು ಹಿರಿಯರು ಅನುಮತಿಸಿದರು. ಆಕೆ ಈಗಾಗಲೇ ಪರಿಣಾಮಕಾರಿಯಾಗಿ ರಾಜ್ಯದ ಸಂದೇಶವನ್ನು ಬಾಗಿಲುಗಳಲ್ಲಿ ನೀಡುತ್ತಾಳೆ. ಈ ಚಿಕ್ಕ ಹುಡುಗಿಯು ಕೇವಲ ಐದು ವರ್ಷ ಪ್ರಾಯದವಳಾಗಿರುವುದಾದರೂ, ಆಕೆಗೆ ಓದು ಬಾರದಿದ್ದರೂ, ಆಕೆ ಕೆಲವೊಂದು ಬೈಬಲ್‌ ವಚನಗಳ ಸ್ಥಳವನ್ನು ಕಂಠಪಾಠಮಾಡಿಕೊಂಡಿದ್ದಾಳೆ. ವಚನವೊಂದನ್ನು ಕಂಡುಹಿಡಿದ ಬಳಿಕ, ಮನೆಯವರು ಅದನ್ನು ಓದುವಂತೆ ಆಕೆ ಕೇಳಿಕೊಳ್ಳುತ್ತಾಳೆ, ಮತ್ತು ನಂತರ ವಿವರಣೆಯೊಂದನ್ನು ಕೊಡುತ್ತಾಳೆ.

ಯೆಹೋವನ ಸ್ತುತಿಗಾರರಾಗುವ ಕಡೆಗೆ ಪ್ರಗತಿ ಮಾಡುವವರಿಗೆ ಉತ್ತೇಜನವನ್ನು ಮತ್ತು ಸಹಾಯವನ್ನು ಕೊಡುವ ಮೂಲಕ ಹಿರಿಯರು ಮತ್ತು ಹೆತ್ತವರು, ಇಬ್ಬರೂ ಹೆಚ್ಚಿನ ಒಳಿತನ್ನು ಸಾಧಿಸಬಲ್ಲರೆಂಬುದು ಸ್ಪಷ್ಟ.—ಜ್ಞಾನೋಕ್ತಿ 3:27.

ಯೆಹೋವನೊಂದಿಗೆ ಒಂದು ಅನಂತ ಸಂಬಂಧ

ಆದರೂ, ಸ್ವತಃ ನೀವೇ ಸ್ವಲ್ಪ ಸಮಯದಿಂದ ಯೆಹೋವನ ಸಾಕ್ಷಿಗಳೊಂದಿಗೆ ಸೇರಿಬರುತ್ತಿದ್ದು, ಆದರೆ ಇನ್ನೂ ಅವರ ಸಾರುವ ಕೆಲಸದಲ್ಲಿ ಅವರೊಂದಿಗೆ ಜೊತೆಸೇರಿರದಿದ್ದಲ್ಲಿ ಆಗೇನು? ಮುಂದಿನ ಪ್ರಶ್ನೆಗಳನ್ನು ಸ್ವತಃ ನೀವೇ ಕೇಳಿಕೊಳ್ಳುವುದು ಪ್ರಯೋಜನಕರವಾಗಿರಬಹುದು, ‘ನಾನು ಸತ್ಯವನ್ನು ಕಂಡುಕೊಂಡಿದ್ದೇನೆಂದು ಮತ್ತು ಯೆಹೋವನೇ ಏಕೈಕ ಸತ್ಯ ದೇವರೆಂದು ನಾನು ನಂಬುತ್ತೇನೊ? ಮಾನವಜಾತಿಯ ಸಮಸ್ಯೆಗಳಿಗೆ ದೇವರ ರಾಜ್ಯವು ಏಕೈಕ ಪರಿಹಾರವಾಗಿದೆಯೆಂದು ನಾನು ಮನಗಂಡಿದ್ದೇನೊ? ಯೆಹೋವನ ಮನಸ್ಸನ್ನು ನೋಯಿಸುವ ಎಲ್ಲ ಸುಳ್ಳು ಧರ್ಮವನ್ನು ಮತ್ತು ಲೌಕಿಕ ರೂಢಿಗಳನ್ನು ಹಾಗೂ ಆಚರಣೆಗಳನ್ನು ನಾನು ತೊರೆದಿದ್ದೇನೊ? ದೇವರಿಗಾಗಿ ಮತ್ತು ಆತನ ನೀತಿಯ ಆವಶ್ಯಕತೆಗಳಿಗಾಗಿ ನನ್ನಲ್ಲಿ ಆಳವಾದ ಪ್ರೀತಿಯಿದೆಯೊ?’ (ಕೀರ್ತನೆ 97:10) ಈ ಪ್ರಶ್ನೆಗಳಿಗೆ ನೀವು ಪ್ರಾಮಾಣಿಕತೆಯಿಂದ ಹೌದೆಂದು ಉತ್ತರಿಸಬಲ್ಲಿರಾದರೆ, ಯೆಹೋವನನ್ನು ಸ್ತುತಿಸುವುದರಿಂದ ನಿಮ್ಮನ್ನು ಯಾವುದು ತಡೆಯುತ್ತದೆ?—ಹೋಲಿಸಿ ಅ. ಕೃತ್ಯಗಳು 8:36.

ಯೆಹೋವನನ್ನು ಸ್ತುತಿಸುವುದು, ಸುವಾರ್ತೆಯನ್ನು ಸಾರುವುದಕ್ಕಿಂತ ಹೆಚ್ಚಿನದನ್ನು ಒಳಗೊಳ್ಳುತ್ತದೆ. ನೀವು ನಿಷ್ಕೃಷ್ಟವಾದ ಜ್ಞಾನವನ್ನು ಪಡೆದುಕೊಂಡಿದ್ದರೆ, ನಿಜವಾದ ನಂಬಿಕೆಯಿದ್ದರೆ, ಮತ್ತು ನಿಮ್ಮ ಜೀವಿತವನ್ನು ದೈವಿಕ ಆವಶ್ಯಕತೆಗಳನುಸಾರ ಸರಿಹೊಂದಿಸುತ್ತಿದ್ದರೆ, ದೇವರೊಂದಿಗೆ ಇರುವ ನಿಮ್ಮ ವೈಯಕ್ತಿಕ ಸಂಬಂಧವನ್ನು ಸುದೃಢ ಮಾಡುವ ಅಗತ್ಯ ನಿಮಗಿದೆ. ಹೇಗೆ? ಪ್ರಾರ್ಥನೆಯಲ್ಲಿ ಆತನಿಗೊಂದು ಸಮರ್ಪಣೆಯನ್ನು ಮಾಡುವ ಮತ್ತು ನಂತರ ಇದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸುವುದರಿಂದಲೇ. ನಿತ್ಯಜೀವವು ಅಪಾಯದಲ್ಲಿದೆ. ಆದುದರಿಂದ, ಯೇಸುವಿನ ಸಲಹೆಯ ಮೇಲೆ ಈಗ ಕ್ರಿಯೆಗೈಯಿರಿ: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.”—ಮತ್ತಾಯ 7:13, 14.

ಸದ್ಯದ ವಿಷಯಗಳ ವ್ಯವಸ್ಥೆಯ ಅದರ ಮಹಾಕ್ಷೋಭೆಯ ಅಂತ್ಯವನ್ನು ಸಮೀಪಿಸುತ್ತಿರುವಾಗ, ಇದು ಹಿಂಜರಿಯುವ ಸಮಯವಾಗಿರುವುದಿಲ್ಲ. ಯೆಹೋವನೊಂದಿಗೆ ಒಂದು ಅನಂತ ಸಂಬಂಧದ ಕಡೆಗೆ ತತ್‌ಕ್ಷಣದ ಹೆಜ್ಜೆಗಳನ್ನು ತೆಗೆದುಕೊಳ್ಳಿರಿ. ನೀವು ಯೆಹೋವನನ್ನು ಸ್ತುತಿಸುವಿರೊ? ಎಂಬ ಪ್ರಶ್ನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಮಯವು ನಿಶ್ಚಯವಾಗಿ ಇದಾಗಿದೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ