ಯೆಹೋವನು ಭೂಮಿಯನ್ನು ಉಳಿಸುವನು
ಮಾಲ್ಡಿವ್ಸ್ನ ಒಂದು ದ್ವೀಪದಲ್ಲಿರುವ ಒಂದು ವಿಮಾನ ನಿಲ್ದಾಣವು ಪ್ರತಿಯೊಂದು ದಿನ ಹಲವಾರು ತಾಸುಗಳಿಗೆ ಮುಚ್ಚಿರುತ್ತದೆ. ಯಾಕೆ? ಯಾಕಂದರೆ ಪೂರ್ಣಭರತದ ಸಮಯದಲ್ಲಿ ನೀರು ವಿಮಾನ ಪಥವನ್ನು ಮುಳುಗಿಸುತ್ತದೆ, ಇದು ವಿಮಾನಗಳು ನೆಲಕ್ಕೆ ಇಳಿಯುವುದನ್ನು ಅರಕ್ಷಿತವನ್ನಾಗಿ ಮಾಡುತ್ತದೆ. ಮುಂದಿನ ಶತಮಾನದಲ್ಲಿ ಮಾಲಿವ್ಡಿನ ದ್ವೀಪಗಳಲ್ಲಿ ಸಮುದ್ರ ಮಟ್ಟವು ಕಡಿಮೆ ಪಕ್ಷ ಒಂದು ಮೀಟರ್ ಏರಬಹುದೆಂದು ಕೆಲವು ವಿಜ್ಞಾನಿಗಳು ಭಯಪಡುತ್ತಾರೆ. ಇದು ಒಂದು ತೀರ ನಿಕೃಷ್ಟ ಮೊತ್ತವಾಗಿ ತೋರುವದಾದರೂ, ಇಂತಹ ಒಂದು ವೃದ್ಧಿಯು ಏಳು ದ್ವೀಪ ಜನಾಂಗಗಳನ್ನು ಭೂಪಟದಿಂದ ಅಳಿಸಿಬಿಡಬಲ್ಲದು. ನಿಜವಾಗಿಯೂ, ಯುಎನ್ ಕ್ರಾನಿಕಲ್ ಗನುಸಾರ, ಎರಡು ಮೀಟರಿನ ಒಂದು ಏರುವಿಕೆಯು ಕಾರ್ಯತಃ ಇಡೀ ದ್ವೀಪಸ್ತೋಮವನ್ನೇ—ಸುಮಾರು 1,200 ದ್ವೀಪಗಳನ್ನು—ಮುಳುಗಿಸಬಲ್ಲದು!
ಸಮುದ್ರ ಮಟ್ಟದ ಏರುವಿಕೆಗೆ ಕಾರಣವೇನು? ಯುಎನ್ ಪರಿಸರೀಯ ಕಾರ್ಯಕ್ರಮಕ್ಕನುಸಾರ, “ಸಸ್ಯಾಗಾರದ ಅನಿಲ” ಗಳಿಂದ ಭೂಮಿಯ ವಾತಾವರಣದ ಮಾಲಿನ್ಯವು, ಬೆಚ್ಚಗೆನ ಪ್ರದೇಶಗಳಲ್ಲಿರುವ ಸಮುದ್ರಗಳು ವಿಸ್ತರಿಸುವಂತೆ, ನೀರ್ಗಲ್ಲ ಹೊದಿಕೆಗಳು ಮತ್ತು ನೀರ್ಗಲ್ಲ ನದಿಗಳು ಕರಗುವಂತೆ, ಮತ್ತು ಹೀಗೆ ಸಮುದ್ರ ಮಟ್ಟಗಳು ಏರುವಂತೆ ಮಾಡುತ್ತದೆ. ಮಾಲಿನ್ಯವು “ನೆಲ ಮತ್ತು ಸಮುದ್ರದ ಮೇರೆಗಳನ್ನೇ ಮಾರ್ಪಡಿಸುವ ಮೆಲ್ಲನೆಚಲಿಸುವ ಒಂದು ಭೌಗೋಲಿಕ ವಿನಾಶವನ್ನು ಕೆರಳಿಸಿದೆ” ಯೆಂದು ಲಂಡನ್ನಲ್ಲಿರುವ ಪೇನಸ್ ಇನ್ಸ್ಟಿಟ್ಯೂಟ್ ಹೇಳುತ್ತದೆ.
ಭೌಗೋಲಿಕ ಕಾವೇರುವಿಕೆಯ ಅಸ್ತಿತ್ವವು ಇನ್ನೂ ವಿಜ್ಞಾನಿಗಳ ಮಧ್ಯೆ ವಾಗ್ವಾದಿಸಲ್ಪಡುತ್ತದೆ. ಆದಾಗಲೂ, ಪರಿಸರೀಯ ಸಮಸ್ಯೆಗಳು ದೇವರ ಉದ್ದೇಶವನ್ನು ತಡೆಗಟ್ಟಲಾರವು. “ಭೂಮಿಯು ಸ್ಥಿರವಾಗಿರುವದು, ಕದಲುವದಿಲ್ಲ” ಎಂದು ಬೈಬಲು ತಿಳಿಸುತ್ತದೆ. (1 ಪೂರ್ವಕಾಲವೃತ್ತಾಂತ 16:30) ಯೆಹೋವನಿಗೆ ಭೂಮಿಯ ಪರಿಸರದ ಮೇಲೆ ನಿಯಂತ್ರಣವಿದೆ, ಮತ್ತು ಆತನು ಬೇಗನೇ ಭೂಮಿಯನ್ನೂ ಮಾನವಕುಲವನ್ನೂ ನಾಶನದಿಂದ ಉಳಿಸುವನೆಂಬದಕ್ಕೆ ನಾವು ಉಲ್ಲಾಸಿಸಬಹುದು.—ಕೀರ್ತನೆ 24:1, 2; 135:6; 2 ಪೇತ್ರ 3:13.
[ಪುಟ 31 ರಲ್ಲಿರುವ ಚಿತ್ರ ಕೃಪೆ]
Drawing based on NASA photo