ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w92 12/15 ಪು. 18-23
  • ಏಕೀಕೃತವಾದ ಹೃದಯದೊಂದಿಗೆ ನಡೆಯುವದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಕೀಕೃತವಾದ ಹೃದಯದೊಂದಿಗೆ ನಡೆಯುವದು
  • ಕಾವಲಿನಬುರುಜು—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೋಗ್ಯ ಭಯ
  • ಯೆಹೋವನ ಪ್ರೀತಿಪಾತ್ರ-ದಯೆ
  • “ಒಂದು ಶುಭಸೂಚನೆ”
  • ಯೆಹೋವನು, ಮಹತ್ಕಾರ್ಯಗಳನ್ನು ನಡಿಸುವಾತನು
    ಕಾವಲಿನಬುರುಜು—1992
  • ಯೆಹೋವನು—ಒಳ್ಳೇತನದ ಅತ್ಯುತ್ತಮ ಮಾದರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಒಳ್ಳೇತನವನ್ನು ತೋರಿಸುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • “ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಇನ್ನಷ್ಟು
ಕಾವಲಿನಬುರುಜು—1992
w92 12/15 ಪು. 18-23

ಏಕೀಕೃತವಾದ ಹೃದಯದೊಂದಿಗೆ ನಡೆಯುವದು

“ಯೆಹೋವನೇ, ನನಗೆ ಬೋಧಿಸು . . . . ನಿನ್ನ ನಾಮಕ್ಕೆ ಭಯಪಡುವರೆ ನನ್ನ ಹೃದಯವನ್ನು ಏಕೀಕರಿಸು.”—ಕೀರ್ತನೆ 86:11, NW.

1. ತನ್ನ ನಿಷ್ಠಾವಂತರನ್ನು ಯೆಹೋವನು ಹೇಗೆ ಬಹುಮಾನಿಸುತ್ತಾನೆ?

‘ಯೆಹೋವನೇ, ದೇವರು ನೀನೊಬ್ಬನೇ.’ (ಕೀರ್ತನೆ 86:8, 10) ಗಣ್ಯತೆಯ ತುಂಬಿತುಳುಕಿದ ಹೃದಯವೊಂದರಿಂದ, ದಾವೀದನು ದೇವರನ್ನು ಸ್ತುತಿಸಿದನು. ಎಲ್ಲಾ ಇಸ್ರಾಯೇಲ್ಯರ ಮೇಲೆ ದಾವೀದನು ರಾಜನಾಗುವ ಮೊದಲು ಸಹಿತ, ಯೆಹೋವನು ಸೌಲನಿಂದ ಮತ್ತು ಫಿಲಿಷ್ಟಿಯರುಗಳಿಂದ ಅವನನ್ನು ವಿಮೋಚಿಸಿದ್ದನು. ಆದಕಾರಣ, ಅವನು ಹೀಗೆ ಹಾಡಶಕ್ತನಾದನು: “ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ಆಗಿದ್ದಾನೆ. ನೀನು ಕೃಪೆಯುಳ್ಳವನಿಗೆ ಕೃಪಾವಂತನೂ [ನಿಷ್ಠಾವಂತನಿಗೆ ನಿಷ್ಠೆಯವನೂ, NW] . . . . ಆಗಿರುವಿ.” (2 ಸಮುವೇಲ 22:2, 26) ಅನೇಕ ಶೋಧನೆಗಳಿಂದ ತನ್ನ ನಿಷ್ಠಾವಂತ ಸೇವಕನನ್ನು ಯೆಹೋವನು ಸಂರಕ್ಷಿಸಿದ್ದನು. ತನ್ನ ನಿಷ್ಠೆಯ ದೇವರ ಮೇಲೆ ದಾವೀದನು ತನ್ನ ಭರವಸೆ ಮತ್ತು ನೆಚ್ಚಿಕೆಯನ್ನು ಇಡಶಕ್ತನಾಗಿದ್ದನು, ಆದರೆ ಅವನಿಗೆ ಮುಂದರಿದ ಮಾರ್ಗದರ್ಶನವು ಆವಶ್ಯವಾಗಿತ್ತು. ಈಗ ದಾವೀದನು ದೇವರಿಗೆ ಭಿನ್ನಹ ಮಾಡಿದ್ದು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು.”—ಕೀರ್ತ 86:11.

2. ಆತನಿಂದ ಕಲಿಸಲ್ಪಡುವಂತೆ ಯೆಹೋವನು ಹೇಗೆ ಒದಗಿಸುವಿಕೆಯನ್ನು ಮಾಡಿದ್ದಾನೆ?

2 ಲೌಕಿಕ ಯೋಜನೆಗಳನ್ನು ಯಾ ತತ್ವಜ್ಞಾನಗಳನ್ನು ದಾವೀದನು ಪೂರ್ಣವಾಗಿ ತೊರೆಯಲು ಬಯಸಿದ್ದನು. ದೇವರ ಪ್ರವಾದಿಯು ನಂತರ ವ್ಯಕ್ತಪಡಿಸಿದಂತೆ, “ಯೆಹೋವನಿಂದ ಶಿಕ್ಷಿತರಾಗಿರಲು” ಅವನು ಬಯಸಿದ್ದನು. (ಯೆಶಾಯ 54:13) ಅವನ ದಿನಗಳಲ್ಲಿ ದೊರಕಬಹುದಾಗಿದ್ದ ಬೈಬಲಿನ ಕೇವಲ ಒಂಭತ್ತು ಪುಸ್ತಕಗಳಲ್ಲಿ ದಾವೀದನು ಮನನಮಾಡಸಾಧ್ಯವಿದ್ದಿರಬಹುದು. ಆದರೂ, ಯೆಹೋವನಿಂದ ಬರುವ ಆ ಉಪದೇಶವು ಅವನಿಗೆ ಬಹುಮೂಲ್ಯವಾಗಿತ್ತು! ಇಂದು ಕಲಿಸಲ್ಪಡುವ ನಾವಾದರೋ, ಬೈಬಲಿನ ಎಲ್ಲಾ 66 ಪುಸ್ತಕಗಳಿಂದ ಹಾಗೂ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಮೂಲಕ ಒದಗಿಸಲ್ಪಡುವ ರಾಜ್ಯ ಸಾಹಿತ್ಯದ ವಿಪುಲತೆಯಲ್ಲಿ ಮೃಷ್ಟಾನಭೋಜನವನ್ನು ಮಾಡಬಲ್ಲೆವು. (ಮತ್ತಾಯ 24:45) ದಾವೀದನಂತೆ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು . . . . ದೇವರ ಅಗಾಧವಾದ ವಿಷಯಗಳನ್ನು ಕೂಡ” ಪರಿಶೋಧಿಸುವದರ ಆತನ ಆತ್ಮವು ನಮಗೆ ಸಹಾಯಮಾಡುವಂತೆ, ನಾವು ಯೆಹೋವನಿಗೆ ಮೊರೆಯಿಡೋಣ.—1 ಕೊರಿಂಥ 2:9, 10.

3. ಯಾವ ರೀತಿಗಳಲ್ಲಿ ಬೈಬಲ್‌ ಬೋಧನೆಯು ನಮಗೆ ಪ್ರಯೋಜನವಾಗಬಲ್ಲದು?

3 ನಮ್ಮ ಜೀವಿತದಲ್ಲಿ ಏಳಬಹುದಾದಂತಹ ಪ್ರತಿಯೊಂದು ಪ್ರಶ್ನೆಗೂ ಮತ್ತು ಸಮಸ್ಯೆಗೂ ಬೈಬಲಿನಲ್ಲಿ ಉತ್ತರವಿದೆ. “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ಯೆಹೋವನಿಂದ ಬರುವ ಬೋಧನೆಯನ್ನು ಹೇರಿಕೊಳ್ಳುವದರಿಂದ ಕಷ್ಟದೆಸೆಗಳನ್ನು ತಾಳಿಕೊಳ್ಳಲು ನಮ್ಮನ್ನು ಬಲಗೊಳಿಸುವುದು, ಮನಗುಂದಿದವರಾದಾಗ ನಮ್ಮನ್ನು ಸಂತೈಸುವುದು, ಮತ್ತು ನಮ್ಮ ಹೃದಯಗಳಲ್ಲಿ ರಾಜ್ಯ ನಿರೀಕ್ಷೆಯನ್ನು ಉಜ್ವಲವಾಗಿಡುವುದು. ದೇವರ ವಾಕ್ಯವನ್ನು ಓದುವದರಲ್ಲಿ ಮತ್ತು ಅದನ್ನು “ಹಗಲಿರುಳು” ಧ್ಯಾನಿಸುವದರಲ್ಲಿ ಉಲ್ಲಾಸವನ್ನು ನಾವು ಕಂಡುಕೊಳ್ಳೋಣ, ಯಾಕಂದರೆ ಬೈಬಲಾಧಾರಿತ ವಿವೇಕವು “ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು.”—ಕೀರ್ತನೆ 1:1-3; ಜ್ಞಾನೋಕ್ತಿ 3:13-18; ಇದನ್ನು ಕೂಡ ನೋಡಿರಿ. ಯೋಹಾನ 17:3.

4. ನಮ್ಮ ವರ್ತನೆಗಳ ಕುರಿತು, ಯೇಸುವು ನಮಗೆ ಯಾವ ಮಾದರಿಯನ್ನಿಟ್ಟಿದ್ದಾನೆ?

4 “ದಾವೀದನ ಕುಮಾರ”ನೆಂದೂ ಕೂಡ ಕರೆಯಲ್ಪಟ್ಟಿರುವ ದೇವರ ಮಗನಾದ ಯೇಸುವು ಯಾವಾಗಲೂ ಬೋಧನೆಗಾಗಿ ಯೆಹೋವನೆಡೆಗೆ ನೋಡಿದ್ದನು. (ಮತ್ತಾಯ 9:27)a ಅವನಂದದ್ದು: “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ.” “ತನ್ನಷ್ಟಕ್ಕೆ ತಾನೇ ಏನೂ ಮಾಡದೆ ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನು.” (ಯೋಹಾನ 5:19; 8:28) “ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು” ಯೇಸುವು ನಮಗಾಗಿ ಒಂದು ಮಾದರಿಯನ್ನು ಬಿಟ್ಟುಹೋದನು. (1 ಪೇತ್ರ 2:21) ಕೇವಲ ಯೋಚಿಸಿರಿ! ಯೇಸುವು ಮಾಡಿರುವಂತೆಯೇ ನಾವು ಅಭ್ಯಾಸಿಸುವುದಾದರೆ, ಯಾವುದೇ ಪರಿಸ್ಥಿತಿಯಲ್ಲಾದರೂ ನಾವು ಹೇಗೆ ವರ್ತಿಸಬೇಕೆಂದು ಯೆಹೋವನು ಬಯಸುತ್ತಾನೋ ಹಾಗೆಯೇ ವರ್ತಿಸಲು ನಾವು ಶಕ್ತರಾಗುವೆವು. ಯೆಹೋವನ ಮಾರ್ಗವಾದರೋ ಯಾವಾಗಲೂ ಸರಿಯಾದ ಮಾರ್ಗವಾಗಿದೆ.

5. “ಸತ್ಯ” ಅಂದರೇನು?

5 ತದನಂತರ ದಾವೀದನು ಘೋಷಿಸಿದ್ದು: “ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು.” (ಕೀರ್ತನ 86:11) ಒಂದು ಸಾವಿರ ವರ್ಷದನಂತರ, ಪಿಲಾತನು ದಾವೀದನ ಕುಮಾರನಾದ ಯೇಸುವಿಗೆ ಸಂಬೋಧಿಸುತ್ತಾ ಕೇಳಿದ್ದು: “ಸತ್ಯವಂದರೇನು?” ಆದರೆ ಯೇಸುವು ಈಗಾಗಲೇ ಆ ಪ್ರಶ್ನೆಗೆ ಹೀಗನ್ನುತ್ತಾ ಪಿಲಾತನಿಗೆ “ನನ್ನ ರಾಜ್ಯವು ಈ ಲೋಕದ್ದಲ್ಲ” ಎಂದು ಉತ್ತರಿಸಿ, ಕೂಡಿಸಿದ್ದು: “ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು; ಅದಕ್ಕೋಸ್ಕರವೇ ಲೋಕಕ್ಕೆ ಬಂದಿದ್ದೇನೆ.”(ಯೋಹಾನ 18:33-38) ಮೆಸ್ಸೇಯತ್ವದ ರಾಜ್ಯದ ಮೇಲೆ ಸತ್ಯವು ಕೇಂದ್ರೀಕರಿಸುತ್ತದೆ ಎಂದು ಯೇಸುವು ಹೀಗೆ ತಿಳಿಸಿದನು. ನಿಜವಾಗಿಯೂ, ಬೈಬಲಿನ ಸಮಗ್ರ ಮುಖ್ಯವಿಷಯವು ಆ ರಾಜ್ಯದ ಮೂಲಕ ಯೆಹೋವನ ಹೆಸರಿನ ಪವಿತ್ರೀಕರಣವಾಗಿದೆ.—ಯೆಹೆಜ್ಕೇಲ 38:23; ಮತ್ತಾಯ 6:9, 10; ಪ್ರಕಟನೆ 11:15.

6. ಸತ್ಯತೆಗನುಸಾರ ನಡೆಯುವುದರಲ್ಲಿ, ಯಾವುದರ ಜಾಗ್ರತೆಯಲ್ಲಿ ನಾವಿರತಕ್ಕದ್ದು?

6 ಸತ್ಯತೆಯಲ್ಲಿ ನಡೆಯುವುದು ಅಂದರೆ ಅರ್ಥವೇನು? ಅದರ ಅರ್ಥವೇನಂದರೆ ನಮ್ಮ ಜೀವಿತದಲ್ಲಿ ರಾಜ್ಯ ನಿರೀಕ್ಷೆಯನ್ನು ಮುಖ್ಯ ಧ್ಯೇಯವನ್ನಾಗಿ ಮಾಡುವುದಾಗಿದೆ. ನಾವು ರಾಜ್ಯಸತ್ಯಕ್ಕನುಸಾರ ಜೀವಿಸಬೇಕು. ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿ ಇಡುವುದರಲ್ಲಿ ನಾವು ಅವಿಭಜಿತವಾಗಿರತಕ್ಕದ್ದು, ಯೇಸುವಿನ ಮಾದರಿಯಂತೆಯೇ ನಮ್ಮ ಸಂದರ್ಭಗಳಿಗನುಸಾರ ರಾಜ್ಯದ ಸತ್ಯಕ್ಕೆ ಸಾಕ್ಷಿಯನ್ನು ನೀಡುವುದರಲ್ಲಿ ಉತ್ಸಕತೆಯುಳ್ಳವರಾಗಿರಬೇಕು. (ಮತ್ತಾಯ 6:33; ಯೋಹಾನ 18:37) ಅತಿರೇಕದ ಮನೋರಂಜನೆಗಳಲ್ಲಿ ಇಚ್ಚಾಪೂರ್ತಿಮಾಡುವಂತೆ, ಯಾ ಸಮಯ-ತಕ್ಕೂಳ್ಳುವ ಜೀವನೋದ್ಯೋಗದಲ್ಲಿ ಪ್ರವೇಶಿಸುವಂತೆ ಯಾ “ಧನವನ್ನೂ ಸೇವಿಸುವಂತೆ” ಬಳಸುದಾರಿ ತಕ್ಕೊಂಡು ಸ್ವತಃ ಸಂತೋಷಪಡಿಸಿಕೊಂಡು ಆದರೆ, ಕೇವಲ ಕುರುಹುಸಲ್ಲಿಕೆಯ ಸೇವೆಯನ್ನು ಮಾತ್ರ ಮಾಡುತ್ತಾ, ಸತ್ಯತೆಯಲ್ಲಿ ಭಾಗಶಃ ಸಮಯ ನಾವು ನಡೆಯಸಾಧ್ಯವಿಲ್ಲ. (ಮತ್ತಾಯ 6:24) ‘ನಿತ್ಯ ಜೀವಕ್ಕೆ ನಡಿಸುವ ಬಿಕ್ಕಟ್ಟಾದ ದಾರಿ’ಯನ್ನು ಮತ್ತೆ ಎಂದೆಂದಿಗೂ ಕಂಡುಕೊಳ್ಳಲಾಗದಂಥ ರೀತಿಯಲ್ಲಿ, ಈ ಬಳಸುದಾರಿಗಳಲ್ಲೊಂದರಲ್ಲಿ ನಾವು ದಾರಿತಪ್ಪಿಹೋಗಸಾಧ್ಯವಿದೆ. ನಾವೆಂದೂ ಆ ದಾರಿಯಿಂದ ಅಲೆದಾಡದೇ ಇರೋಣ! (ಮತ್ತಾಯ 7:13, 14) ನಮ್ಮ ಮಹಾ ಬೋಧಕನಾದ ಯೆಹೋವನು ತನ್ನ ವಾಕ್ಯ ಮತ್ತು ಸಂಸ್ಥಾಪನೆಯ ಮೂಲಕದಾರಿಯನ್ನು ಬೆಳಗಿಸುತ್ತಾ, ಹೇಳುವುದು: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ.” —ಯೆಶಾಯ 30:21.

ಯೋಗ್ಯ ಭಯ

7. ನಮ್ಮ ಹೃದಯಗಳನ್ನು ನಾವು ಹೇಗೆ “ಏಕೀಕೃತಗೊಳಿಸ”ಬಹುದು?

7 ವಚನ 11ರಲ್ಲಿ ದಾವೀದನ ಪ್ರಾರ್ಥನೆಯು ಮುಂದರಿಸುವದು: “ನಿನ್ನ ನಾಮಕ್ಕೆ ಭಯಪಡುವರೆ ನನ್ನ ಹೃದಯವನ್ನು ಏಕೀಕರಿಸು.” (NW). ದಾವೀದನಂತೆ, ನಮ್ಮ ಹೃದಯಗಳು ಕೂಡ ದೇವರ ಚಿತ್ತವನ್ನು ಮಾಡುವುದರಲ್ಲಿ ಅವಿಭಜಿತವೂ, ಸಂಪೂರ್ಣವೂ ಆಗಿರಲು ನಾವು ಬಯಸತಕ್ಕದ್ದು. ಮೊಶೆಯ ಪಿತೋಪ ದೇಶದೊಂದಿಗೆ ಇದು ಸಹಮತದಲ್ಲಿದೆ: “ಆದದರಿಂದ ಇಸ್ರಾಯೇಲ್ಯರೇ, ನೀವು ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಎಲ್ಲಾ ವಿಷಯಗಳಲ್ಲಿಯೂ ಆತನು ಹೇಳುವ ಮಾರ್ಗದಲ್ಲೇ ನಡೆಯುತ್ತಾ ಆತನನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡುತ್ತಾ ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರುವದನ್ನೇ ಹೊರತು ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಬೇರೇನು ಕೇಳಿಕೊಳ್ಳುತ್ತಾನೆ?” (ಧರ್ಮೋಪದೇಶಕಾಂಡ 10:12, 13) ಯೆಹೋವನನ್ನು ಸೇವಿಸುವುದರಲ್ಲಿ ನಮ್ಮ ಹೃದಯ ಮತ್ತು ಆತ್ಮಗಳನ್ನು ವಿನಿಯೋಗಿಸುವದು ಖಂಡಿತವಾಗಿಯೂ ನಮ್ಮ ಒಳಿತಗಾಗಿಯೇ ಇದೆ. ಹೀಗೆ ಅವನ ಸುಪ್ರಸಿದ್ಧ ಹೆಸರಿಗೆ ಯೋಗ್ಯ ಭಯವನ್ನು ನಾವು ತೋರಿಸುತ್ತೇವೆ. ಯೆಹೋವನ ಹೆಸರಿನ ಅಕ್ಷರಶಃ ಅರ್ಥವು “ಆಗುವಂತೆ ಕಾರಣನಾಗುವ ಆತನು,” ನಿರ್ದಿಷ್ಟವಾಗಿ ಅವನ ಮಹತ್ತಾದ ಉದ್ದೇಶಗಳನ್ನು ಪೂರ್ಣತೆಗೆ ತರುವ ಅರ್ಥದಲ್ಲಿ ಸೂಚಿತವಾಗಿದೆ. ವಿಶ್ವವೆಲ್ಲಾದರ ಮೇಲಿನ ಅವನ ಸರ್ವಶ್ರೇಷ್ಠ ಅಧಿಕಾರವನ್ನು ಕೂಡ ಅದು ಪ್ರತಿನಿಧಿಸುತ್ತದೆ. ದೇವರನ್ನು ಘನಗಾಂಭೀರ್ಯತೆಯ ಭಯದಲ್ಲಿ ಸೇವಿಸುವುದರಿಂದ, ಮೃತಪ್ರಾಯ ಮಾನವ ಭಯದಿಂದ ನಾವು ದಾರಿತೊಲಗಿ ಹೋಗೆವು. ನಮ್ಮ ಹೃದಯಗಳು ವಿಭಜಿತಗೊಳ್ಳವು. ಬದಲಾಗಿ, ತನ್ನ ಹಸ್ತದಲ್ಲಿ ನಮ್ಮ ಈ ಜೀವನಗಳನ್ನೇ ಹಿಡಿದುಕೊಂಡಿರುವ ಸರ್ವಶ್ರೇಷ್ಠ ನ್ಯಾಯಾಧಿಪತಿಯೂ, ಸಾರ್ವಭೌಮ ಕರ್ತನೂ ಆಗಿರುವ ಯೆಹೋವನಿಗೆ ಅಪ್ರಸನ್ನಗೊಳಿಸುವ ಯಾವುದನ್ನೂ ಮಾಡಲು ನಾವು ಭಯಪಡುವೆವು.—ಯೆಶಾಯ 12:2; 33:22.

8, 9. (ಎ)ಲೋಕದ ಭಾಗವಾಗಿರದೆ” ಇರುವುದು ಅಂದರೆ ಅರ್ಥವೇನು? (ಬಿ)ನಾವು “ಜಗತ್ತಿಗೆಲ್ಲಾ ನೋಟ”ವಾಗಿರುವುದರಿಂದ, ಯಾವ ಹೆಜ್ಜೆಗಳನ್ನು ನಾವು ತಕ್ಕೊಳ್ಳತಕ್ಕದ್ದು?

8 ನಿಂದೆ ಮತ್ತು ಹಿಂಸೆಯ ಎದುರಿನಲ್ಲಿಯೂ, ನಮ್ಮ ಸುತ್ತಲಿರುವ ದುಷ್ಟ ಲೋಕದ ಭಾಗವಾಗಿರದಂತೆ ಯೇಸುವಿನ ನಿರ್ಭೀತಿಯ ಉದಾಹರಣೆಯನ್ನು ನಾವು ಹಿಂಬಾಲಿಸುವೆವು. (ಯೋಹಾನ 15:17-21) ಯೇಸುವಿನ ಶಿಷ್ಯರು ಏಕಾಂತವಾಸಿಗಳಾಗಿ ಯಾ ಯಾವುದಾದರೊಂದು ಸಂನ್ಯಾಸಿಮಠದಲ್ಲಿ ಅವಿತು ಕೊಂಡಿರಬೇಕು ಎಂದು ಇದರ ಅರ್ಥವಲ್ಲ. ತನ್ನ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸುವು ಹೇಳಿದ್ದು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರು ಲೋಕದವರಲ್ಲ. ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು; ನಿನ್ನ ವಾಕ್ಯವೇ ಸತ್ಯವು. ನೀನು ನನ್ನನ್ನು ಲೋಕಕ್ಕೆ ಕಳುಹಿಸಿಕೊಟ್ಟಂತೆ ನಾನೂ ಇವರನ್ನು ಲೋಕಕ್ಕೆ ಕಳುಹಿಸಿಕೊಟ್ಟನು.” (ಯೋಹಾನು 17:15-18) ಯೇಸುವಿನಂತೆ ರಾಜ್ಯದ ಸತ್ಯವನ್ನು ಪ್ರಚುರಿಸಲು ನಾವು ಕಳುಹಿಸಲ್ಪಟ್ಟಿದ್ದೇವೆ. ಯೇಸುವನ್ನು ಸಮೀಪಿಸಬಹುದಿತ್ತು. ಅವನ ಬೋಧನೆಯ-ರೀತಿಯಿಂದ ಜನರು ಉಲ್ಲಸಿತರಾಗುತ್ತಿದ್ದರು. (ಹೋಲಿಸಿರಿ ಮತ್ತಾಯ 7:28, 29; 11:28, 29; ಯೋಹಾನ 7:46.) ನಮ್ಮ ವಿಷಯದಲ್ಲೂ ಇದು ಸತ್ಯವಾಗಿರಬೇಕು.

9 ನಮ್ಮ ಮುಂದುವರಿಯುವ ಸ್ನೇಹ, ಸುಸಂಸ್ಕೃತ ಕೇಶಾಲಂಕಾರ ಮತ್ತು ಗೋಚರಿಸುವಿಕೆ, ದಯಾಭರಿತ ಮತ್ತು ನಿರ್ಮಲ ಸಂಭಾಷಣೆಯು ಯೋಗ್ಯ ಹೃದಯದ ವ್ಯಕ್ತಿಗಳಿಗೆ ನಮ್ಮನ್ನೂ, ನಮ್ಮ ಸಂದೇಶವನ್ನೂ ಸ್ವೀಕರಿಸುವಂತೆ ಮಾಡತಕ್ಕದ್ದು. ನಾವು ನಮ್ಮ ಸುತ್ತಲೂ ಲೋಕದಲ್ಲಿ ಕಾಣಬಹುದಾದ ಪಡಪೋಸಿಯನ್ನು ಅಸಭ್ಯತೆಯ ಉಡುಪುಗಳನ್ನು, ಲೌಕಿಕ ಒಳಗೂಡುವಿಕೆಗಳಿಗೆ ನಡಿಸಬಹುದಾದ ಸಹವಾಸಗಳನ್ನು, ಮತ್ತು ಸಡಿಲು ನಡತೆಯು ಸ್ವೇಚ್ಚಾಚಾರದ ಜೀವನ ಮಾರ್ಗವನ್ನು ನಾವು ವರ್ಜಿಸಬೇಕು. “ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ನೋಟ”ವಾಗಿದ್ದು, ಆದರ್ಶಪ್ರಾಯ ಕ್ರಿಸ್ತರೋಪಾದಿ ಸೇವೆ ಸಲ್ಲಿಸಲು ಮತ್ತು ಜೀವಿಸಲು ನಾವು ಪ್ರತಿದಿನ 24 ಘಂಟೆಗಳ ಉದ್ಯೋಗದಲ್ಲಿದ್ದೇವೆ. (1 ಕೊರಿಂಥ 4:9; ಎಫೆಸ 5:1-4; ಫಿಲಿಪ್ಪಿ 4:8, 9; ಕೊಲೊಸ್ಸೆ 4:5, 6) ಈ ಉದ್ದೇಶಸಾಧನೆಯಲ್ಲಿ ನಮ್ಮ ಹೃದಯವು ಏಕೀಕೃತವಾಗಿರತಕ್ಕದ್ದು.

10. ಪವಿತ್ರ ಸೇವಯಲ್ಲಿ ತಮ್ಮ ಹೃದಯಗಳನ್ನು ಏಕೀಕೃತಗೊಳಿಸುವವರನ್ನು ಯೆಹೋವನು ಹೇಗೆ ನೆನಪಿಸುತ್ತಾನೆ?

10 ಯೆಹೋವನ ನಾಮದ ಭಯದಲ್ಲಿ ನಮ್ಮ ಹೃದಯಗಳನ್ನು ಏಕೀಕೃತಗೊಳಿಸಿರುವ, ಅವನ ಮಹತ್ತಾದ ಉದ್ದೇಶಗಳನ್ನು ಮನನಮಾಡುವ, ಮತ್ತು ಪವಿತ್ರ ಸೇವೆಯೊಂದಿಗೆ ನಮ್ಮ ಜೀವನವನ್ನು ತುಂಬಿಸಿರುವ ನಾವು, ಯೆಹೋವನಿಂದ ನೆನಪಿಸಲ್ಪಡುವೆವು. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9) ನಮ್ಮ ದಿನಗಳಿಗೆ ಪ್ರವಾದನಾರೂಪದಲ್ಲಿ ಸೂಚಿಸುತ್ತಾ, ಮಲಾಕಿಯ 3:16 ಓದುವುದು: “ಇಂಥ ಮಾತುಗಳನ್ನು ಕೇಳಿ ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” ಯೆಹೋವನ ಆ ಆರೋಗ್ಯಕರ ಭಯದಿಂದ ನಮ್ಮ ಹೃದಯಗಳು ಏಕೀಕೃತವಾಗಿರಲಿ!

ಯೆಹೋವನ ಪ್ರೀತಿಪಾತ್ರ-ದಯೆ

11. ನಿಷ್ಠಾವಂತರ ಕಡೆಗೆ ಯೆಹೋವನ ಪ್ರೀತಿಪಾತ್ರ-ದಯೆಯು ಹೇಗೆ ವ್ಯಕ್ತಗೊಳಿಸಲ್ಪಡಲಿದೆ?

11 ದಾವೀದನದ್ದು ಎಂಥ ಕಳಕಳಿಯ ಪ್ರಾರ್ಥನೆಯು! ಅವನು ಮುಂದರಿಸುವುದು: “ಕರ್ತನೇ, [ಯೆಹೋವನೇ, NW], ನನ್ನ ದೇವರೇ, ಮನಃಪೂರ್ವಕವಾಗಿ [ಹೃದಯಪೂರ್ವಕವಾಗಿ, NW] ನಿನ್ನನ್ನು ಕೊಂಡಾಡುವೆನು; ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು. ನೀನು ಬಹಳವಾಗಿ ಕನಿಕರಿಸಿ [ಪ್ರೀತಿಪಾತ್ರ-ದಯೆಗಾಗಿ, NW] ನನ್ನ ಪ್ರಾಣವನ್ನು ಪಾತಾಳತಲದಿಂದ ತಪ್ಪಿಸಿದ್ದೀಯಲ್ಲಾ.” (ಕೀರ್ತನೆ 86:12, 13) ಈ ಕೀರ್ತನೆಯಲ್ಲಿ ಎರಡನೆಯ ಬಾರಿ, ಅವನ ಪ್ರೀತಿಪಾತ್ರ-ದಯೆಗಾಗಿ—ನಿಷ್ಠೆಯ ಪ್ರೀತಿಗಾಗಿ—ಯೆಹೋವನನ್ನು ದಾವೀದನು ಸ್ತುತಿಸುತ್ತಾನೆ. ಅಸಾಧ್ಯವೆಂದು ತೋರಿಬಂದಂಥ ಸನ್ನಿವೇಶಗಳಲ್ಲೂ ಈ ಪ್ರೀತಿಯು ಅವನನ್ನು ಅಟ್ಟಿಕೊಂಡು ಬೇಟೆಯಾಡುತ್ತಿದ್ದಾಗ, ಯಾವುದಾದರೊಂದು ಮೂಲೆಗೆ ನುಸುಳಿ ಸಾಯುವ ಅನಿಸಿಕೆ ದಾವೀದನಿಗೆ ಆಗಿದ್ದಿರಬಹುದು. ಪಾತಾಳ (ಶಿಯೋಲ್‌)—ಸಮಾಧಿಯ ತಲದಷ್ಟು ಆಳವನ್ನು ಮುಖಾಮುಖಿ ಎದುರಿಸುವಷ್ಟು ಅದಾಗಿತ್ತು. ಆದರೆ ಯೆಹೋವನು ಅವನನ್ನು ರಕ್ಷಿಸಿದನು! ಅದೇ ರೀತಿಯಲ್ಲಿ, ತನ್ನ ಇಂದಿನ ದಿನಗಳ ಸೇವಕರುಗಳಿಗೆ ಅತ್ಯಾಶ್ಚರ್ಯಕರ ವಿಧಗಳಲ್ಲಿ ಪರಿಹಾರವನ್ನು ಯೆಹೋವನು ಒದಗಿಸಿದ್ದಾನೆ, ಮತ್ತು ಮರಣದತನಕವೂ ವಿಶ್ವಾಸದಿಂದ ತಾಳಿಕೊಂಡಿದ್ದ ಯಥಾರ್ಥತ್ವ ಪಾಲಕರನ್ನು ಕೂಡ ಅವನು ಪೋಷಿಸಿದ್ದಾನೆ. ಎಲ್ಲಾ ನಿಷ್ಠಾವಂತರಿಗೆ ಅವರ ಬಹುಮಾನವು ಇರುವುದು, ಜರೂರಿ ಬಂದಲ್ಲಿ ಪುನರುತ್ಥಾನದ ಮೂಲಕವೂ.—ಹೋಲಿಸಿರಿ ಯೋಬ 1:6-12; 2:1-6, 9, 10; 27:5; 42:10; ಜ್ಞಾನೋಕ್ತಿ 27:11; ಮತ್ತಾಯ 24:9, 13; ಪ್ರಕಟನೆ 2:10.b

12. ವೈದಿಕರು ಅಹಂಭಾವದವರೂ, ನಿರುಂಕುಶತ್ವದವರೂ ಆಗಿರುವದು ಹೇಗೇ, ಮತ್ತು ಅವರ ಪ್ರತಿಫಲವೇನಾಗಿರುವದು?

12 ಹಿಂಸಕರ ಕುರಿತಾಗಿ ದಾವೀದನು ಗಟ್ಟಿಯಾಗಿ ಕೂಗುವುದು: “ದೇವರೇ, ಗರ್ವಿಗಳು ನನಗೆ ವಿರೋಧವಾಗಿದ್ದಾರೆ; ಬಲಾತ್ಕಾರಿಗಳ ಗುಂಪು ನನ್ನ ಪ್ರಾಣಕ್ಕೆ ಕಾದಿದೆ. ಅವರು ನಿನ್ನನ್ನು ಲಕ್ಷಿಸುವದಿಲ್ಲ.” (ಕೀರ್ತನೆ 86:14) ಇಂದು, ಹಿಂಸಕರಲ್ಲಿ ಕ್ರಿಸ್ತ ಪ್ರಪಂಚದ ವೈದಿಕರು ಕೂಡಿರುತ್ತಾರೆ. ದೇವರನ್ನು ಆರಾಧಿಸುತ್ತೇವೆಂದು ಅವರು ಕೊಚ್ಚಿಕೊಳ್ಳುತ್ತಾರೆ, ಆದರೆ ಅವನ ಪವಿತ್ರ ನಾಮವನ್ನು “ಕರ್ತ” ಎಂಬ ಬಿರುದಿನಿಂದ ಸ್ಥಾನಾಂತರಮಾಡಿದ್ದಾರೆ ಮತ್ತು ಬೈಬಲಿನಲ್ಲಿ ಎಲ್ಲಿಯೂ ಉಲ್ಲೇಖಿಸಿರದ ಒಂದು ರಹಸ್ಯಾರ್ಥದ ತ್ರಿಯೇಕತ್ವದಿಂದ ಅವನನ್ನು ಸಾದರಪಡಿಸುತ್ತಾರೆ. ಎಂತಹ ಅಹಂಭಾವ! ಇದಕ್ಕೆ ಕೂಡಿಸಿ, ಇಂದು ಭೂವ್ಯಾಪಕವಾಗಿ ಆಶ್ಚರ್ಯಕರವಾದ ರೀತಿಯಲ್ಲಿ ಮಾಡಲ್ಪಡುತ್ತಿರುವಂತೆ, ಬಹುಸಂಖ್ಯಾತ ದೇಶಗಳಲ್ಲಿ ಯೆಹೋವನಸಾಕ್ಷಿಗಳನ್ನು ಕಾನೂನುಬಾಹಿರರನ್ನಾಗಿ ಮಾಡಲು ಮತ್ತು ಸೆರೆಮನೆಗೆ ಹಾಕಿಸಲು ರಾಜಕೀಯ ಶಕ್ತಿಗಳನ್ನು ಒತ್ತಾಯಿಸಲು ಅವರು ಪ್ರಯತ್ನಿಸುತ್ತಾರೆ. ಈ ವೈದಿಕ ಪೋಷಾಕುಧಾರಿ ದೇವರ ಹೆಸರಿನ ನಿಂದಕರು, ಮಹಾ ಬಾಬೆಲಿನ ಜಾರಸ್ತ್ರೀಯಂಥ ಎಲ್ಲಾ ವಿಭಾಗಗಳೊಂದಿಗೆ, ಅವರ ಪ್ರತಿಫಲವನ್ನು ಕೊಯ್ಯಲಿರುವರು.—ಪ್ರಕಟನೆ 17:1, 2, 15-18; 19:1-3.

13. ತನ್ನ ಒಳ್ಳೇತನವನ್ನು ಪ್ರಕಟಿಸುವದರಲ್ಲಿ ಯೆಹೋವನು ಯಾವ ಗುಣಗಳನ್ನು ತೋರಿಸುವನು?

13 ಒಂದು ಸಂತಸದ ವಿಪರ್ಯಸ್ತತೆಯೊಂದಿಗೆ ದಾವೀದನ ಪ್ರಾರ್ಥನೆಯು ಮುಂದರಿಯುವುದು: “ಕರ್ತನೇ, [ಯೆಹೋವನೇ, NW] ನೀನು ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನು, ಬಹಳ ಪ್ರೀತಿಯೂ ನಂಬಿಕೆಯೂ ಉಳ್ಳವನು.” (ಕೀರ್ತನೆ 86:15) ನಮ್ಮ ದೇವರ ಅಂತಹ ಗುಣಗಳು ಉತ್ಕೃಷ್ಠತೆಯವುಗಳು ಎಂಬುದು ಖಂಡಿತ. ಈ ಮಾತುಗಳು ನಮ್ಮನ್ನು ಯೆಹೋವನ ಮಹಿಮೆಯನ್ನು ನೋಡಲು ಮೋಶೆಯು ವಿನಂತಿಸಿದ ಸೀನಾಯಿ ಪರ್ವತಕ್ಕೆ ಕೊಂಡೊಯ್ಯುತ್ತವೆ. ಯೆಹೋವನು ಉತ್ತರಿಸಿದ್ದು: “ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಾಗಿ ದಾಟಿಹೋಗುವಂತೆ ಮಾಡುವೆನು; ಯೆಹೋವನ ನಾಮ ಮಹತ್ವವನ್ನು ನಿನ್ನೆದುರಾಗಿ ಪ್ರಕಟಿಸುವೆನು.” ಆದರೆ ಅವನು ಮೋಶೆಗೆ ಎಚ್ಚರಿಸಿದ್ದು: “ನೀನು ನನ್ನ ಮುಖವನ್ನು ನೋಡುವದಕ್ಕಾಗದು; ಮನುಷ್ಯರಲ್ಲಿ ಯಾವನೂ ನನ್ನನ್ನು ನೋಡಿ ಜೀವಿಸಲಾರನು.” ತದನಂತರ, ಯೆಹೋವನು ಮೇಘದಿಂದ ಆವರಿಸಲ್ಪಟ್ಟವನಾಗಿ ಇಳಿದುಬಂದು, ಪ್ರಕಟಿಸಿದ್ದು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು;” (ವಿಮೋಚನಕಾಂಡ 33:18-20; 34:5, 6) ಈ ಮಾತುಗಳನ್ನು ದಾವೀದನು ತನ್ನ ಪ್ರಾರ್ಥನೆಯಲ್ಲಿ ಉಲ್ಲೇಖಿಸಿದನು. ಯಾವುದೇ ಶಾರೀರಿಕ ಗೋಚರಿಸುವಿಕೆಗಿಂತ ಯೆಹೋವನ ಅಂಥ ಗುಣಗಳು ನಮಗೆ ಎಷ್ಟೋ ಹೆಚ್ಚಿನ ಅರ್ಥದಲ್ಲಿವೆ! ಈ ಉತ್ತಮ ಗುಣಲಕ್ಷಣಗಳಿಂದ ಉದಾಹರಿಸಲ್ಪಟ್ಟಂತೆ, ಯೆಹೋವನ ಒಳ್ಳೇತನವನ್ನು ನಮ್ಮ ಸ್ವಂತ ಅನುಭವದಿಂದ ನಾವು ಗಣ್ಯಮಾಡುವುದಿಲ್ಲವೇ?

“ಒಂದು ಶುಭಸೂಚನೆ”

14, 15. ಯೆಹೋವನು ತನ್ನ ಸೇವಕರಿಗೆ “ಒಂದು ಶುಭಸೂಚನೆ”ಯನ್ನು ನಡಿಸುವದು ಹೇಗೆ?

14 ದಾವೀದನು ಪುನಃ ಯೆಹೋವನ ಆಶೀರ್ವಾದಕ್ಕಾಗಿ ಮೊರೆಯಿಡುತ್ತಾ, ಹೇಳುವುದು: “ಕಟಾಕ್ಷವಿಟ್ಟು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ಬಲವನ್ನು ಅನುಗ್ರಹಿಸು; ನಿನ್ನ ಸೇವಕಳ ಮಗನನ್ನು ರಕ್ಷಿಸು. ನನಗಾಗಿ ಒಂದು ಶುಭಸೂಚನೆಯನ್ನು ತೋರಿಸು; ನನ್ನ ಹಗೆಗಾರರು ನೋಡಿ—ಯೆಹೋವನು ನೆರವಾಗಿ ಇವನನ್ನು ಸಂತೈಸಿದ್ದಾನೆಂದು ನಾಚಿಕೆಪಡಲಿ.” (ಕೀರ್ತನ 86:16, 17) ‘ಯೆಹೋವನ ಸೇವಕಳ ಮಗನೋಪಾದಿ” ತಾನೂ ಯೆಹೋವನಿಗೆ ಸೇರತಕ್ಕವನು ಎಂದು ದಾವೀದನು ಗುರುತಿಸಿಕೊಳ್ಳುತ್ತಾನೆ. ಯೆಹೋವನಿಗೆ ನಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡ ಮತ್ತು ಆತನ ಸೇವೆಯಲ್ಲಿ ದುಡಿಯುವ ನಮ್ಮೆಲ್ಲರ ಕುರಿತೂ ಹಾಗೆಯೇ ಇರುತ್ತದೆ. ಅವನ ಆತ್ಮನ ಮೂಲಕ ಯೆಹೋವನ ಸಂರಕ್ಷಣೆಯ ಬಲವು ನಮಗೆ ಜರೂರಿಯಿದೆ. ಆದಕಾರಣ, ನಮ್ಮೊಂದಿಗೆ “ಒಂದು ಶುಭ ಸೂಚನೆಯನ್ನು” ತೋರಿಸುವ ಕಾರ್ಯ ಮಾಡುವಂತೆ ನಾವು ನಮ್ಮ ದೇವರಿಗೆ ಭಿನ್ನಹಿಸುತ್ತೇವೆ. ಯೆಹೋವನ ಒಳ್ಳೇತನದಲ್ಲಿ ನಾವೀಗಾಗಲೇ ಚರ್ಚಿಸಿದಂತಹ ಉತ್ತಮ ಗುಣಗಳು ಒಳಗೂಡಿರುತ್ತವೆ. ಇದರ ಆಧಾರದಲ್ಲಿ, ನಮಗೆ ಕೊಡುವಂತೆ ಯೆಹೋವನಿಂದ ನಾವು ಯಾವ ಸಂಕೇತ ಯಾ ಕುರುಹುಚಿಹ್ನೆಯನ್ನು ನಿರೀಕ್ಷಿಸಸಾಧ್ಯವಿದೆ?

15 ಯೆಹೋವನು “ಎಲ್ಲಾ ಒಳ್ಳೇ ದಾನಗಳ ಕುಂದಿಲ್ಲದ ಎಲ್ಲಾವರಗಳ” ದಾತನಾಗಿದ್ದಾನೆ ಮತ್ತು ಯೇಸುವು ನಮಗೆ ಆಶ್ವಾಸನೆಯನ್ನಿತ್ತಂತೆ, “ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು” ಕೊಡುವುದರಲ್ಲಿ ಉದಾರಿಯಾಗಿದ್ದಾನೆ. (ಯಾಕೋಬ 1:17; ಲೂಕ 11:13) ಪವಿತ್ರಾತ್ಮ—ಯೆಹೋವನಿಂದ ಎಂಥ ಅಮೂಲ್ಯವಾದ ಕೊಡುಗೆ! ಪವಿತ್ರಾತ್ಮನ ಮೂಲಕವಾಗಿ, ಯೆಹೋವನು ಹೃದಯಾನಂದವನ್ನು, ಹಿಂಸೆಯ ಸಮಯದಲ್ಲೂ ಒದಗಿಸುತ್ತಾನೆ. ಹೇಗೆ, ಯೇಸುವಿನ ಅಪೊಸ್ತಲರುಗಳು ಅವರ ಜೀವದ ವಿಚಾರಣೆಯಲ್ಲಿದ್ದಾಗ, ಅಧಿಪತಿಯಾಗಿರುವ ಅವನಿಗೆ ವಿಧೇಯರಾಗುವವರಿಗೆ ದೇವರು ಪ್ರವಿತ್ರಾತ್ಮವನ್ನು ಕೊಡುತ್ತಾನೆ ಎಂದು ಆನಂದದಿಂದ ಪ್ರಕಟಿಸಶಕ್ತರಾದರು. (ಅ. ಕೃತ್ಯಗಳು 5:27-32) ಪವಿತ್ರಾತ್ಮನ ಆನಂದವು ಅವರಿಗೆ “ಒಂದು ಶುಭಸೂಚನೆ”ಯಾಗಿ ಆವಿರತವಾಗಿ ಕಾರ್ಯನಡಿಸಿತು.—ರೋಮಾಪುರ 14:17, 18.

16, 17 (ಎ)ಪೌಲ, ಬಾರ್ನಬರಿಗೆ ಯೆಹೋವನು ತನ್ನ ಒಳ್ಳೇತನದ ಯಾವ ಸೂಚನೆಯನ್ನು ಕೊಟ್ಟನು? (ಬಿ)ಹಿಂಸಿಸಲ್ಪಟ್ಟ ಥೆಸೆಲೊನೀಕದವರಿಗೆ ಯಾವ ಸೂಚನೆಯು ಕೊಡಲ್ಪಟ್ಟಿತು?

16 ಏಶ್ಯಾ ಮೈನರಿನ ಅವರ ಮಿಷನೆರಿ ಪ್ರಯಾಣದ ಸಮಯಾವಧಿಯಲ್ಲಿ, ಪೌಲ, ಬಾರ್ನಬರು ಅನೇಕ ಕಷ್ಟದೆಸೆಗಳನ್ನು, ಕಠಿಣವಾದ ಹಿಂಸೆಯನ್ನು ಕೂಡ ಎದುರಿಸಿದರು. ಅವರು ಪಿಸಿದ್ಯದ ಅಂತಿಯೋಕ್ಯದಲ್ಲಿ ಸಾರಿದಾಗ, ಅವರ ಸಂದೇಶವನ್ನು ಯೆಹೂದ್ಯರು ನಿರಾಕರಿಸಿದರು. ಆದಕಾರಣ, ಅವರು ಅನ್ಯ ಜನಾಂಗಗಳ ಕಡೆಗೆ ತಿರುಗಿದರು. ಫಲಿತಾಂಶವೇನಾಯಿತು? “ಅಲ್ಲಿದ್ದ ಅನ್ಯಜನರು ಆ ಮಾತನ್ನು ಕೇಳಿ ಸಂತೋಷಪಟ್ಟು ದೇವರ ವಾಕ್ಯವನ್ನು ಹೊಗಳಿದರು; ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟವರೆಲ್ಲರು ನಂಬಿದರು. ಆದರೆ ಯೆಹೂದ್ಯರು ಗಲಭೆಯನ್ನೆಬ್ಬಿಸಿದರು, ಅದರಿಂದಾಗಿ ಆ ಮಿಷನೆರಿಗಳು ದೇಶದಿಂದ ಹೊರಗೆ ಹಾಕಲ್ಪಟ್ಟರು. ಇದರಿಂದಾಗಿ ಅವರು ಮತ್ತು ಹೊಸ ವಿಶ್ವಾಸಿಗಳು ಎದೆಗುಂದಿದವರಾದರೋ? ಇಲ್ಲವೇ ಇಲ್ಲ! ಬದಲಾಗಿ, “ಶಿಷ್ಯರಾದವರು ಸಂತೋಷಪೂರ್ಣರೂ ಪವಿತ್ರಾತ್ಮಭರಿತರೂ ಆದರು.” (ಅ. ಕೃತ್ಯಗಳು 13:48, 52) ತನ್ನ ಒಳ್ಳೆತನದ ಆ ಸೂಚನೆಯನ್ನು ಯೆಹೋವನು ಅವರಿಗೆ ಕೊಟ್ಟನು.

17 ಅನಂತರ, ಥೆಸೆಲೊನೀಕದ ಹೊಸ ಸಭೆಯು ಹಿಂಸೆಗೊಳಪಟ್ಟಿತ್ತು. ಒಂದು ಸಂತೈಸುವ ಹಾಗೂ ಸಂಕಟದ ಕೆಳಗೆ ಅವರ ಸಹಿಷ್ಣುತೆಯನ್ನು ಶ್ಲಾಘಿಸುವ ಒಂದು ಕಾಗದವನ್ನು ಬರೆಯುವಂತೆ ಇದು ಅಪೊಸ್ತಲ ಪೌಲನನ್ನು ನಡಿಸಿತು. ಅವರು “ಬಹಳ ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ”ದರು. (1 ಥೆಸಲೊನೇಕ 1:6) ಕರುಣಾಭರಿತನೂ, ಕನಿಕರವುಳ್ಳವನೂ, ಕೋಪಿಸುವುದರಲ್ಲಿ ನಿಧಾನನೂ ಮತ್ತು ಪ್ರೀತಿಪಾತ್ರ-ದಯೆ ಮತ್ತು ಸತ್ಯತೆಯು ವಿಪುಲವಾಗಿರುವ ದೇವರಿಂದ “ಪವಿತ್ರಾತ್ಮನ ಆನಂದವು” ಅವರನ್ನು ಬಲಗೊಳಿಸುವ ಒಂದು ರುಜುವಾತಾದ ಸೂಚನೆಯಾಗಿ ಮುಂದರಿಯಿತು.

18. ಯೆಹೋವನ ಒಳ್ಳೇತನಕ್ಕಾಗಿ ಪೂರ್ವ ಯೂರೋಪಿನ ನಮ್ಮ ಸಹೋದರರು ಹೇಗೆ ಗಣ್ಯತೆಯನ್ನು ತೋರಿಸಿದ್ದಾರೆ?

18 ಇತ್ತೀಚೆಗಿನ ಸಮಯಗಳಲ್ಲಿ, ಪೂರ್ವ ಯೂರೋಪಿನ ನಮ್ಮ ನಂಬಿಗಸ್ತ ಸಹೋದರರ ಕಡೆಗೆ ಯೆಹೋವನು ತನ್ನ ಒಳ್ಳೇತನವನ್ನು ವ್ಯಕ್ತಪಡಿಸಿದ್ದಾನೆ, ಅವರನ್ನು ವಿರೋಧಿಸಿದಂಥವರನ್ನು—ಹಿಂದಿನ ಅವರ ಹಿಂಸಕರನ್ನು—ನಾಚಿಕೆಪಡಿಸಿದ್ದಾನೆ. ಶತಗಳ ದಬ್ಬಾಳಿಕೆಯಿಂದ ಇತ್ತೀಚಿಗೆ ಬಿಡುಗಡೆಗೊಂಡಿದ್ದರೂ, ಈ ಪ್ರಿಯ ಸಹೋದರರು ಇನ್ನೂ ಸಹಿಸಿಕೊಳ್ಳಬೇಕಾಗಿದೆ ಯಾಕಂದರೆ ಅನೇಕರಿಗೆ ಅರ್ಥಿಕ ಕಷ್ಟದೆಸೆಗಳನ್ನು ಎದುರಿಸಲಿಕ್ಕಿದೆ. ಆದಾಗ್ಯೂ, ಅವರ “ಪವಿತ್ರಾತ್ಮನ ಆನಂದ”ವು ಅವರನ್ನು ಸಂತೈಸುತ್ತದೆ. ಸಾಕ್ಷಿಯನ್ನು ವಿಸ್ತರಿಸುವದರಲ್ಲಿ ಅವರ ಹೊಸತಾಗಿ ದೊರೆತ ಸ್ವಾತಂತ್ರ್ಯಗಳನ್ನು ಬಳಸುವದಕ್ಕಿಂತ ಅಧಿಕ ಆನಂದ ಅವರಿಗೆ ಬೇರೆ ಯಾವುದು ಇದೆ? ಅಧಿವೇಶನಗಳ ಮತ್ತು ದೀಕ್ಷಾಸ್ನಾನದ ವರದಿಗಳು ಪ್ರಕಟಿಸುವಂತೆ, ಅವರನ್ನು ಅನೇಕ ಜನರು ಆಲಿಸುತ್ತಿದ್ದಾರೆ.—ಹೋಲಿಸಿರಿ ಅ. ಕೃತ್ಯಗಳು 9:31.

19. ಕೀರ್ತನೆ 86:11ರ ಮಾತುಗಳನ್ನು ನಮ್ಮ ಸ್ವಂತದ್ದಾಗಿ ನಾವು ಹೇಗೆ ಮಾಡಬಹುದು?

19 ಇದರಲ್ಲಿ ಮತ್ತು ಇದರ ಮುಂಚಿನ ಲೇಖನದಲ್ಲಿ ಏನೆಲ್ಲಾ ಚರ್ಚಿಸಲಾಗಿದೆಯೋ, ಅದು ದಾವೀದನು ಯೆಹೋವನಿಗೆ ಮಾಡಿದ ಕಳಕಳಿಯ ಪ್ರಾರ್ಥನೆಯ ಪ್ರತಿಧ್ವನಿಯಾಗಿದೆ: “ಯೆಹೋವನೇ, ನನಗೆ ಬೋಧಿಸು . . . . ನಿನ್ನ ನಾಮಕ್ಕೆ ಭಯಪಡುವರೆ ನನ್ನ ಹೃದಯವನ್ನು ಏಕೀಕರಿಸು.” (ಕೀರ್ತನೆ 86:11, NW) ರಾಜ್ಯದ ಹಿತಾಸಕ್ತಿಗಳಿಗಾಗಿ ಹೃತ್ಪೂರ್ವಕವಾದ ಬೆಂಬಲ ನೀಡುವುದರಲ್ಲಿ ಮತ್ತು ನಮ್ಮ ಏಕ ದೇವರೂ, ಸಾರ್ವಭೌಮ ಕರ್ತನೂ ಆದ ಯೆಹೋವನ ಮುಗಿಯದ ಒಳ್ಳೇತನದ ಗಣ್ಯತೆಯಲ್ಲಿ ನಾವು ಕಾರ್ಯನಡಿಸುವಾಗ, ನಮ್ಮ 1993ರ ವರ್ಷವಚನದ ಆ ಮಾತುಗಳನ್ನು ನಮ್ಮ ಅತಿ ಸ್ವಂತದ್ದಾಗಿ ಮಾಡೋಣ.

[ಅಧ್ಯಯನ ಪ್ರಶ್ನೆಗಳು]

a ವಾಗ್ದಾನಿಸಲ್ಪಟ್ಟ “ಸಂತಾನ”ದೋಪಾದಿ, ಯೇಸುವು ದಾವೀದನ ರಾಜ್ಯಕ್ಕೆ ಹಕ್ಕುದಾರನಾಗಿದ್ದನು, ಆದಕಾರಣ ಅಕ್ಷರಾರ್ಥವಾಗಿಯೂ ಮತ್ತು ಆತ್ಮಿಕ ಅರ್ಥದಲ್ಲಿಯೂ “ದಾವೀದನ ಕುಮಾರ”ನಾಗಿದ್ದನು.—ಆದಿಕಾಂಡ 3:15; ಕೀರ್ತನೆ 89:29, 34-37.

b ಆಧುನಿಕ ದಿನಗಳ ಉದಾಹರಣೆಗಳಿಗೆ, ಯಿಯರ್‌ ಬುಕ್‌ ಆಫ್‌ ಜೆಹೊವಾಸ್‌ ವಿಟ್ನೆಸಸ್‌, ಮುದ್ರಣ 1974ರ ಪುಟಗಳು 113-212; 1985ರ ಪುಟಗಳು 194-7; 1986ರ ಪುಟಗಳು 237-8; 1988ರ ಪುಟಗಳು 182-5; 1990ರ ಪುಟಗಳು 171-2; 1992ರ ಪುಟಗಳು 174-81 ನೋಡಿರಿ.

ನೀವು ಹೇಗೆ ಉತ್ತರಿಸುವಿರಿ?

◻ “ಯೆಹೋವನೇ, ನನಗೆ ಬೋಧಿಸು” ಎಂದು ಪ್ರಾರ್ಥಿಸುವುದರಿಂದ ನಾವೇನನ್ನು ಸೂಚಿಸುತ್ತೇವೆ?

◻ ಯೆಹೋವನ ನಾಮಕ್ಕೆ ಭಯಪಡುವಂತೆ ನಮ್ಮ ಹೃದಯಗಳು ಏಕೀಕೃತಗೊಳ್ಳುವವು ಎಂಬುದರ ಅರ್ಥವೇನು?

◻ ಎಲ್ಲಾ ನಿಷ್ಠಾವಂತರ ಕಡೆಗೆ ಯೆಹೋವನು ತನ್ನ ಪ್ರೀತಪಾತ್ರ-ದಯೆಯನ್ನು ಹೇಗೆ ತೋರಿಸುವನು?

◻ ಯೆಹೋವನು ನಮಗಾಗಿ “ಒಂದು ಶುಭಸೂಚನೆ”ಯನ್ನು ಹೇಗೆ ನಡಿಸುತ್ತಾನೆ?

[ಪುಟ 20 ರಲ್ಲಿರುವ ಚೌಕ]

1993ರ ವರ್ಷವಚನ “ಯೆಹೋವನೇ, ನನಗೆ ಬೋಧಿಸು . . . . ನಿನ್ನ ನಾಮಕ್ಕೆ ಭಯಪಡುವರೆ ನನ್ನ ಹೃದಯವನ್ನು ಏಕೀಕರಿಸು.”—ಕೀರ್ತನೆ 86:11, NW.

[ಪುಟ 19 ರಲ್ಲಿರುವ ಚಿತ್ರ]

ಸತ್ಯತೆಯಲ್ಲಿ ನೇರವಾಗಿ ನಡೆಯುವವರಿಗೆ ಯೆಹೋವನು ಒಂದು ಬಂಡೆಯೂ, ಕೋಟೆಯೂ ಆಗಿದ್ದಾನೆ

[ಪುಟ 22 ರಲ್ಲಿರುವ ಚಿತ್ರ]

ಜೂನ್‌ನಲ್ಲಿ ರಶ್ಯಾದ ಸೈಂಟ್‌ ಪೀಟರ್‌ಬರ್ಗ್ಸ್‌ನಲ್ಲಿ ಜರುಗಿದ ಯೆಹೋವನ ಸಾಕ್ಷಿಗಳ “ಬೆಳಕು ವಾಹಕರು” ಅಂತಾರಾಷ್ಟ್ರೀಯ ಅಧಿವೇಶನಕ್ಕೆ 46,214 ಹಾಜರಾದರು ಮತ್ತು 3,256 ದೀಕ್ಷಾಸ್ನಾನಪಡೆದರು. “ಪವಿತ್ರಾತ್ಮನವನ್ನು ಅವರು ಸ್ವತಃ ತಾವಾಗಿಯೇ ಎಷ್ಟೊಂದು ಆಶ್ಚರ್ಯಕರವಾಗಿ ಪಡಕೊಳ್ಳುತ್ತಿದ್ದಾರೆ!

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ