ಭಕ್ತಿಚಿಕಿತ್ಸೆ ದೇವರಿಂದ ಒಪ್ಪಲ್ಪಟ್ಟಿದೆಯೇ?
“ನಾವು ಇಂದು ಸೋಜಿಗದ ಸಂಗತಿಗಳನ್ನು ನೋಡಿದೆವು!” ಹೌದು, ಅವಲೋಕಿಸುವವರು ಪ್ರಭಾವಕ್ಕೊಳಪಟ್ಟರು. ಕಠಿಣವಾಗಿ ಪಾರ್ಶ್ವವಾಯು ರೋಗಪೀಡಿತ ಮನುಷ್ಯನೊಬ್ಬನು ಅವರ ಕಣ್ಣುಗಳ ಮುಂದೆಯೇ ವಾಸಿಮಾಡಲ್ಪಟ್ಟನು. ವಾಸಿಮಾಡುವವನು ಮನುಷ್ಯನಿಗಂದದ್ದು: “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು.” ಮತ್ತು ಆ ಮನುಷ್ಯನು ಅದನ್ನೇ ಮಾಡಿದನು! ಅವನು ಇನ್ನು ಮುಂದೆ ಪಾರ್ಶ್ವವಾಯು ರೋಗಪೀಡಿತನಾಗಿರಲಿಲ್ಲ. ಅಲ್ಲಿ ಹಾಜರಿದ್ದವರೆಲ್ಲರೂ “ದೇವರನ್ನು ಕೊಂಡಾಡಲು” ಆರಂಭಿಸಿದರ್ದಲ್ಲೇನೂ ಆಶ್ಚರ್ಯವಿಲ್ಲ! (ಲೂಕ 5:18-26) ಸುಮಾರು 2,000 ವರ್ಷಗಳ ಹಿಂದೆ ಯೇಸು ಕ್ರಿಸ್ತನಿಂದ ನಡಿಸಲ್ಪಟ್ಟ ಈ ಚಿಕಿತ್ಸೆಯ ಮೇಲೆ, ಅತಿ ಸ್ಪಷ್ಟವಾಗಿದ ದೇವರ ಒಪ್ಪಿಗೆ ಇತ್ತು.
ಇಂದಿನ ಕುರಿತೇನು? ವೈದ್ಯಕೀಯ ಚಿಕಿತ್ಸೆಯನ್ನು ಯಾರು ಕಂಡುಕೊಳ್ಳಶಕ್ತರಲ್ಲವೋ, ಅವರಿಗೆ ಈಗಲೂ ಅದ್ಭುತಕರವಾದ ವಾಸಿಮಾಡುವಿಕೆಯ ಉತ್ತಮ ಸಾಧ್ಯತೆಯು ಇದೆಯೋ? ಯೇಸುವು ವಾಸಿಮಾಡುವ ಅದ್ಭುತಗಳನ್ನು ನಡಿಸಿದನು. ಭಕ್ತಿ ಚಿಕಿತ್ಸಕರು ಇಂದು ಅವನನ್ನು ಅನುಕರಿಸುತ್ತೇವೆಂದು ಹೇಳಿಕೊಳ್ಳುತ್ತಾರೆ. ಅವರ ವಾದಗಳನ್ನು ನಾವು ಹೇಗೆ ವೀಕ್ಷಿಸತಕ್ಕದ್ದು?
ಭಕ್ತಿಚಿಕಿತ್ಸೆಗೆ “ಪ್ರಾರ್ಥನೆ ಮತ್ತು ದೇವರ ಮೇಲೆ ತೋರ್ಪಡಿಸುವ ನಂಬಿಕೆಯ ಮೂಲಕ ರೋಗಗಳನ್ನು ಉಪಚರಿಸುವ ವಿಧಾನ” ಎಂಬ ಅರ್ಥವಿವರಣೆಯನ್ನು ನೀಡಲಾಗಿದೆ. ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಸ್ಥಿರೀಕರಿಸುವದು: “ಭಕ್ತಿಚಿಕಿತ್ಸೆಯ ಇತಿಹಾಸವು ಯೇಸುವಿನ ಮತ್ತು ಅಪೊಸ್ತಲರುಗಳ ಬೆರಗುಗೊಳಿಸುವ ವೈಯಕ್ತಿಕ ಶುಶ್ರೂಷೆಗಳ ಮೂಲಕ ಕ್ರೈಸ್ತತ್ವದಲ್ಲಿ ಆರಂಭಿಸಲ್ಪಟ್ಟಿತು.” ಹೌದು, ಯೇಸುವು ಎದ್ದುತೋರುವ ವಾಸಿಮಾಡುವಿಕೆಗಳನ್ನು ನಡಿಸಿದನು. ಇಂದು ನಂಬಿಕೆಯಿಂದ ವಾಸಿಮಾಡುವವರು ಅವನು ಮಾಡಿದಂತೆಯೇ ಅದ್ಭುತಗಳನ್ನು ಮಾಡುತ್ತಾರೋ?
ನಂಬಿಕೆ—ಒಂದು ಆವಶ್ಯಕತೆಯೋ?
ಬ್ಲ್ಯಾಕ್ಸ್ ಬೈಬಲ್ ಡಿಕ್ಷನರಿ ಗನುಸಾರ, ಯೇಸುವು “ವಾಸಿಮಾಡುವಿಕೆಯ ಅವನ ಅದ್ಭುತಗಳಿಗೆ [ನಂಬಿಕೆಯು] ಒಂದು ಪೂರ್ವಾಪೇಕ್ಷಿತವೆಂದು ನಿರ್ದೇಶಿಸಿದನು.” ಆದರೆ ಸಂಗತಿಯು ಹಾಗೆ ಇತ್ತೋ? ಒಬ್ಬ ಮನುಷ್ಯನನ್ನು ಗುಣಪಡಿಸುವ ಮೊದಲು ರೋಗಿಯೊಬ್ಬನಿಂದ ಯೇಸುವು ನಂಬಿಕೆಯ ತಗಾದೆ ಮಾಡಿದನೋ? ಉತ್ತರವು ಇಲ್ಲ ಎಂದಾಗಿದೆ. ವಾಸಿಮಾಡುವವನ ವತಿಯಿಂದ ನಂಬಿಕೆಯು ಆವಶ್ಯಕವಾಗಿತ್ತು, ಆದರೆ ರೋಗಿಯಿಂದ ಅದೇನೂ ಆವಶ್ಯಕವಾಗಿ ಬೇಕಾಗಿರಲಿಲ್ಲ. ಒಂದು ಸಂದರ್ಭದಲ್ಲಿ ಯೇಸುವಿನ ಶಿಷ್ಯರು ಒಬ್ಬ ಮೂರ್ಛಾರೋಗದ ಹುಡುಗನನ್ನು ಗುಣಪಡಿಸಲು ಶಕ್ತರಾಗಲಿಲ್ಲ. ಯೇಸುವು ಹುಡುಗನನ್ನು ವಾಸಿಮಾಡಿದನು, ತದನಂತರ ಅವರು ಅವನನ್ನು ವಾಸಿಮಾಡಲು ಅಶಕ್ಯರಾದದ್ದು ಯಾಕೆ ಎಂದು ಅವನ ಶಿಷ್ಯರಿಗೆ ಹೇಳಿದನು. “ಆತನು ಅವರಿಗೆ—ನಿಮ್ಮ ನಂಬಿಕೆ ಕಡಿಮೆಯಾಗಿರುವದರಿಂದಲೇ ಆಗಲಿಲ್ಲ. . . . ಅಂದನು.”—ಮತ್ತಾಯ 17:14-20.
ಮತ್ತಾಯ 8:16, 17 ಕ್ಕನುಸಾರ, ಯೇಸುವು “ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನು ವಾಸಿಮಾಡಿದನು.” ಅವನನ್ನು ಅವರು ಸಮೀಪಿಸುವಂತೆ ಕಾರಣವಾಗುವಷ್ಟು ನಂಬಿಕೆಯು ಯೇಸುವಿನ ಮೇಲೆ ಈ ಜನರಿಗೆ ಇತ್ತು, ನಿಜ. (ಮತ್ತಾಯ 8:13; 9:22, 29) ಅಧಿಕಾಂಶ ವಿದ್ಯಮಾನಗಳಲ್ಲಿ ಅವರನ್ನು ವಾಸಿಮಾಡುವ ಮೊದಲು ಅವರೇ ಬಂದು, ಕೇಳಬೇಕಿತ್ತು. ಆದಾಗ್ಯೂ, ಅದ್ಭುತವು ನಡಿಸಲ್ಪಡಬೇಕಾದರೆ, ನಂಬಿಕೆಯ ಅರಿಕೆಯನ್ನು ಮಾಡುವ ಆವಶ್ಯಕತೆಯೇನೂ ಇರಲಿಲ್ಲ. ಒಂದು ಸಂದರ್ಭದಲ್ಲಿ ಯೇಸುವು ಯಾರೆಂದು ಪರಿಚಯ ಕೂಡ ಇಲ್ಲದಂತಹ ಒಬ್ಬ ಕುಂಟನನ್ನು ಯೇಸುವು ವಾಸಿಮಾಡಿದನು. (ಯೋಹಾನ 5:5-9, 13) ಅವನ ದಸ್ತಗಿರಿಯ ರಾತ್ರಿಯಲ್ಲಿ, ಅವನನ್ನು ಬಂಧಿಸಲು ಬಂದ ಯೇಸುವಿನ ವೈರಿಗಳ ತಂಡದಲ್ಲಿ ಅವನೊಬ್ಬನಾಗಿದ್ದರೂ ಕೂಡ, ಮಹಾ ಯಾಜಕನ ಆ ಸೇವಕನ ಕತ್ತರಿಸಲ್ಪಟ್ಟ ಕಿವಿಯನ್ನು ಯೇಸುವು ಪುನಃ ಸ್ಥಾಪಿಸಿದನು. (ಲೂಕ 22:50, 51) ಕೆಲವು ಸಂದರ್ಭಗಳಲ್ಲಿ ಯೇಸುವು ಸತ್ತವರನ್ನೂ ಕೂಡ ಖಂಡಿತವಾಗಿಯೂ ಎಬ್ಬಿಸಿದನು!—ಲೂಕ 8:54, 55; ಯೋಹಾನ 11:43, 44.
ಇಂಥ ಅದ್ಭುತಗಳನ್ನು ಯೇಸುವು ಹೇಗೆ ಮಾಡಶಕ್ತನಾದನು? ದೇವರ ಪವಿತ್ರಾತ್ಮನ ಯಾ ಕಾರ್ಯಕಾರೀ ಶಕ್ತಿಯ ಮೇಲೆ ಅವನು ಆತುಕೊಂಡಿದ್ದರಿಂದಲೇ. ವಾಸಿಗೆ ನಡಿಸಿದ್ದು ಇದು ತಾನೇ ಆಗಿದೆಯೇ ಹೊರತು ರೋಗಿ ವ್ಯಕ್ತಿಯ ನಂಬಿಕೆಯಲ್ಲ. ಸುವಾರ್ತೆಗಳ ದಾಖಲೆಗಳನ್ನು ನೀವು ಓದುವಾಗ, ಯೇಸುವಿನ ವಾಸಿಮಾಡುವಿಕೆಗಳು ಅತಿ ಕಡಿಮೆ ಸಂಸ್ಕಾರದಿಂದ ಮಾಡಲ್ಪಟ್ಟಿರುವದನ್ನು ನೀವು ಗಮನಿಸುವಿರಿ. ಅಲ್ಲಿ ಯಾವುದೇ ಪ್ರದರ್ಶನ ಸ್ವಭಾವವಾಗಲಿ, ಯಾ ಮನೋಭಾವಗಳ ಮೇಲೆ ಆಟವಾಡುವದಾಗಲಿ ಇರಲಿಲ್ಲ. ಅದಲ್ಲದೆ, ರೋಗವು ಏನೇ ಆಗಿರಲಿ, ಯೇಸುವು ಎಂದೂ ವಿಫಲಗೊಳ್ಳಲಿಲ್ಲ. ಅವನು ಯಾವಾಗಲೂ ಯಶಸ್ವೀಯಾಗಿದ್ದನು, ಮತ್ತು ಅವನು ಎಂದೂ ರುಸುಮು ತಕ್ಕೊಳಲಿಲ್ಲ.—ಮತ್ತಾಯ 15:30, 31.
ಆಧುನಿಕ ವಾಸಿಮಾಡುವಿಕೆಗಳು ಯೇಸುವಿನಂಥವೋ?
ರೋಗವು ಒಂದು ಭಯಂಕರವಾದ ಸಮಸ್ಯೆಯಾಗಿದೆ, ಮತ್ತು ಅದು ತಟ್ಟಿದಾಗ, ಸ್ವಾಭಾವಿಕವಾಗಿ ನಾವು ಪರಿಹಾರವನ್ನು ಹುಡುಕುತ್ತೇವೆ. ಆದರೆ, “ವಿಶೇಷವಾಗಿ ಕೊಂಚವೇ ಆರ್ಥಿಕ ಆದಾಯವಿರುವ ಜನರನ್ನು ವಿಷಯಗಳಾಗಿ,—ಮಾನವ ವ್ಯಕ್ತಿಗಳಾಗಿ ಅಲ್ಲ,—ವೃತ್ತಿಪರ ಸ್ವಾಸ್ಥ ಕಾರ್ಮಿಕರು ಉಪಚರಿಸುವ” ಸ್ಥಳವೊಂದರಲ್ಲಿ ನಾವು ಜೀವಿಸುವದಾದರೆ ಆಗ ಏನು? ಲ್ಯಾಟೀನ್ ಅಮೆರಿಕನ್ ದೇಶವೊಂದರಲ್ಲಿ ಇಂಥ ಸನ್ನಿವೇಶವನ್ನು ವೈದ್ಯನೊಬ್ಬನು ಅವಲೋಕಿಸಿದನು. ಮತ್ತು ಅದೇ ದೇಶದಲ್ಲಿರುವಂತೆ, ‘ಔಷಧ ಚಿಕಿತ್ಸೆಯ ವೈದ್ಯರುಗಳಲ್ಲಿ ಕೇವಲ 40 ಪ್ರತಿಶತ ವೈದ್ಯರು ಮತ್ತು ಯೋಗ್ಯತೆ ಪಡೆದವರು’ ಆಗಿರುವ ಸ್ಥಳದಲ್ಲಿ ನಾವು ಜೀವಿಸುತ್ತಿರುವದಾದರೆ, ಆಗೇನು?
ಬೇರೆ ಯಾವುದೇ ಪರಿಹಾರ ಇಲ್ಲದಿರುವದನ್ನು ಕಾಣುವ ಅನೇಕರು, ಕಡಿಮೆ ಪಕ್ಷ ಭಕ್ತಿಚಿಕಿತ್ಸೆಯನ್ನು ಪ್ರಯತ್ನಿಸಿ ನೋಡಲು ಅರ್ಹವಾಗಿದೆ ಎಂದು ವೀಕ್ಷಿಸುವದರಲ್ಲಿ ಆಶ್ಚರ್ಯವಿಲ್ಲ. ಆದರೂ, ಭಕ್ತಿಚಿಕಿತ್ಸಕರಿಂದ ಹೇಳಿಕೊಳ್ಳಲ್ಪಟ್ಟ ಚಿಕಿತ್ಸೆಗಳು ವಾದಾಸ್ಪದವಾಗಿವೆ. ಉದಾಹರಣೆಗೆ, ಬ್ರೆಸೀಲ್ನ ಸಾನ್ ಪೌಲೋದ ಒಂದು ಕೂಟಕ್ಕೆ 70,000 ಮಂದಿ ಹಾಜರಿದ್ದರು ಎಂದು ಅಂದಾಜಿಸಲಾಗಿದ್ದು, ಅಲ್ಲಿ ಇಬ್ಬರು ಭಕ್ತಿಚಿಕಿತ್ಸಕರು ‘ಮೂಢ ಶೃದ್ಧೆಯ ಯಜಮಾನರಿಗೆ ಅವರ ದೃಷ್ಠಿಯನ್ನು ಪುನಃ ಸ್ಥಾಪಿಸಲಾಗುವದು ಎಂಬ ಆಶ್ವಾಸನೆಯೊಂದಿಗೆ, ಸಭಿಕರಿಂದ ಎಸೆಯಲ್ಪಟ್ಟ ನೂರಾರು ಕನ್ನಡಕಗಳ ಮೇಲೆ ತುಳಿದಾಡಿದರು.’ ಭಕ್ತಿಚಿಕಿತ್ಸಕರಲ್ಲೊಬ್ಬನು ಒಂದು ಸಂದರ್ಶನದಲ್ಲಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದು: “ನಾವು ಯಾರಿಗಾಗಿ ಪ್ರಾರ್ಥಿಸಿದ್ದೇವೊ ಆ ರೋಗಿಗಳೆಲ್ಲಾ ಗುಣಮುಖರಾಗುವರೆಂದು ನಾನು ಹೇಳಶಕ್ತನಲ್ಲ. ಅದು ಅವರ ನಂಬಿಕೆಯ ಮೇಲೆ ಆತುಕೊಂಡಿದೆ. ವ್ಯಕ್ತಿಯೊಬ್ಬನು ನಂಬುವದಾದರೆ, ಅವನು ವಾಸಿಹೊಂದುವನು.” ವಾಸಿಯಾಗುವದರಲ್ಲಿ ವಿಫಲಗೊಳ್ಳುವದಾದರೆ, ಅದು ರೋಗಿಯ ವತಿಯಿಂದ ನಂಬಿಕೆಯ ಕೊರತೆಯಿಂದ ಎಂದು ಅವನು ಆಪಾದಿಸಿದನು. ಆದರೂ, ನಾವು ಮೊದಲು ನೋಡಿದಂತೆ, ವಾಸಿಮಾಡುವವರ ನಂಬಿಕೆಯ ಕೊರತೆಯಿಂದ ವಾಸಿಮಾಡುವದರಲ್ಲಿ ವೈಫಲ್ಯ ಆಗಿರುವದೆಂದು ಯೇಸುವು ಆಪಾದಿಸಿದ್ದನ್ನು ನೆನಪಿಸಿರಿ!
ಇನ್ನೊಬ್ಬ ವಾಸಿಮಾಡುವವನು ಅರ್ಬುದ ರೋಗ (ಕ್ಯಾನ್ಸರ್) ಮತ್ತು ಪಾರ್ಶ್ವವಾಯು ರೋಗವನ್ನು ಗುಣಪಡಿಸುತ್ತೇನೆ ಎಂದು ಆಶ್ವಾಸನೆಯನ್ನಿತ್ತನು. ಏನು ಸಂಭವಿಸಿತು? ವೇಸಾ ಪತ್ರಿಕೆಗನುಸಾರ, “ಆಶ್ವಾಸನೆಯು, ಪೂರೈಸಲ್ಪಡಲಿಲ್ಲ ಎಂಬುದು ವ್ಯಕ್ತ.” ಮತ್ತು ಆ ಮನುಷ್ಯನು ವರ್ತಿಸಿದ ವಿಧಾನಕ್ಕೆ ಕಿವಿಗೊಡಿರಿ: “ಸುಮಾರು ಎರಡು ತಾಸುಗಳ ತನಕ, [ಭಕ್ತಿಚಿಕಿತ್ಸಕನು] ಸಭಿಕರನ್ನು ಪ್ರಸಂಗಗಳಿಂದ, ಪ್ರಾರ್ಥನೆಗಳಿಂದ, ಕಿರಿಚಾಟಗಳಿಂದ ಮತ್ತು ಗಾನಗಳಿಂದ—ವಿಶ್ವಾಸಿಗಳ ದೇಹದೊಳಗೆ ನಿವಾಸಿಸಿರುವ ದೆವ್ವಗಳನ್ನು ಹೊರದಬ್ಬಲು ಹೊಡೆತಗಳನ್ನು ಕೊಡುವದರ ಮೂಲಕ—ಮನ ರಂಜನೆಗೊಳಿಸಿದನು. ಅಂತ್ಯದಲ್ಲಿ ಅವನು ತನ್ನ ಕಂಠಬಂಧ (ನೆಕ್ಟೈ) ಮತ್ತು ಕರವಸ್ತ್ರವನ್ನು ಪರವಶಗೊಂಡ ಸಭಿಕರೆಡೆಗೆ ಬಿಸಾಡಿದನು ಮತ್ತು ‘ಸ್ವಯಂ ಆಗಿ ಕಾಣಿಕೆಗಳನ್ನು’ ಜಮಾಯಿಸಲು ಬಟ್ಟಲೊಂದನ್ನು ದಾಟಿಸಿದನು.” ಅದ್ಭುತಕರವಾದ ವಾಸಿಮಾಡುವಿಕೆಗಳಿಗಾಗಿ ಯೇಸುವಾಗಲಿ, ಅವನ ಅಪೊಸ್ತಲರುಗಳಾಗಲಿ ಎಂದೂ ಹಣವನ್ನು ಕೇಳಿರಲಿಲ್ಲ, ಮತ್ತು ಅವರು ಅಂಥ ರೀತಿಯ ನಾಟಕೀಯತೆಗಳಲ್ಲಿ ಎಂದೂ ತೊಡಗಿರಲಿಲ್ಲ.
ಸ್ಪಷ್ಟವಾಗಿಗಿ, ಹಾಗಾದರೆ, ಇಂಥ ಆಧುನಿಕ ವಾಸಿಮಾಡುವವರು ಯೇಸುವು ಮಾಡಿದ್ದನ್ನು ಮಾಡುವುದಿಲ್ಲ. ಮತ್ತು ಅವರೇನು ಮಾಡುತ್ತಾರೋ ಅದನ್ನು ದೇವರು ಒಪ್ಪುತ್ತಾನೆ ಎಂದು ನೋಡುವದು ಕಷ್ಟಕರ. ಆದರೂ, ಇಂದು ಯಾವುದೇ ಅದ್ಭುತಕರ ವಾಸಿಮಾಡುವಿಕೆಯನ್ನು ಅವನು ಒಪ್ಪುತ್ತಾನೋ? ಯಾ ನಾವು ಯಾ ನಮ್ಮ ಪ್ರಿಯರು ಅಸ್ವಸ್ಥರಾದಾಗ, ನಮ್ಮ ನಂಬಿಕೆಯು ಯಾವುದೇ ವಿಧದಲ್ಲಿ ನಮಗೆ ಸಹಾಯಮಾಡಶಕ್ತವೋ?