ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 3/1 ಪು. 10-15
  • “ಕೇಳುವ ಯಾವನಾದರೂ ಹೇಳಲಿ: ‘ಬಾ!’”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಕೇಳುವ ಯಾವನಾದರೂ ಹೇಳಲಿ: ‘ಬಾ!’”
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜೀವದ ಜಲಕ್ಕಾಗಿ ಆವಶ್ಯಕತೆ ಏಳುತ್ತದೆ
  • ಮದಲಗಿತ್ತಿ ವರ್ಗವು ಆಮಂತ್ರಣವನ್ನು ಕೊಡುತ್ತದೆ, “ಬಾ!”
  • ಆತ್ಮನೂ, ಮದಲಗಿತ್ತಿಯೂ ಹೇಳುತ್ತಾರೆ, “ಬಾ!”
  • “ಬಾ!” ಎಂದು ಹೇಳುವುದರಲ್ಲಿ ಬೇರೆಕುರಿಗಳು ಸೇರುತ್ತಾರೆ
  • ಘೋಷಿಸುವುದರಲ್ಲಿ ಈಗ ಸೇರಿರಿ
  • “ಪವಿತ್ರಾತ್ಮವೂ ವಧುವೂ, ‘ಬಾ!’ ಎಂದು ಹೇಳುತ್ತಾ ಇರುತ್ತಾರೆ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಕುರಿಮರಿಯ ವಿವಾಹ​—⁠ಹರ್ಷಿಸಿರಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • “ಬಾ!” ಎಂಬ ಆಮಂತ್ರಣವನ್ನು ಧೈರ್ಯದಿಂದ ನೀಡಿರಿ
    1991 ನಮ್ಮ ರಾಜ್ಯದ ಸೇವೆ
  • ಪ್ರಕಟನೆ ಮತ್ತು ನೀವು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
ಇನ್ನಷ್ಟು
ಕಾವಲಿನಬುರುಜು—1991
w91 3/1 ಪು. 10-15

“ಕೇಳುವ ಯಾವನಾದರೂ ಹೇಳಲಿ: ‘ಬಾ!’”

“ಆತ್ಮನು ಮತ್ತು ಮದಲಗಿತ್ತಿಯು ಹೇಳುತ್ತಾ ಇದ್ದಾರೆ: ‘ಬಾ!’ ಕೇಳುವ ಯಾವನಾದರೂ ಹೇಳಲಿ: ‘ಬಾ!’ ಮತ್ತು ಬಾಯಾರಿದವನು ಬರಲಿ; ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.”—ಪ್ರಕಟನೆ 22:17, NW.

ಜಗದ್ವ್ಯಾಪಕ 200 ಕ್ಕಿಂತಲೂ ಹೆಚ್ಚು ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು, 1991ರ ವರ್ಷವಚನಕ್ಕನುಸಾರ ವರ್ಷವಿಡೀ ತಮ್ಮನ್ನು ಸ್ವತಃ ವ್ಯಯಿಸಿಕೊಳ್ಳುವರು: “ಕೇಳುವ ಯಾವನಾದರೂ ಹೇಳಲಿ: ‘ಬಾ!’”

1. ಯಾವ “ಜಲದ” ಹತ್ತಿರ “ಬಾ!” ಎಂದು ನಮ್ಮನ್ನು ಆಮಂತ್ರಿಸಲಾಗಿದೆ?

ನಿಮ್ಮನ್ನು “ಬರಲು” ಆಮಂತ್ರಿಸಲಾಗಿದೆ. ಬರುವುದು ಯಾತಕ್ಕೆ? ಯಾಕೆ, ಜಲದಿಂದ ನಿಮ್ಮ ಬಾಯಾರಿಕೆಯನ್ನು ತಣಿಸಲಿಕ್ಕಾಗಿ. ಇದೊಂದು ಸಾಮಾನ್ಯವಾದ ಜಲವಲ್ಲ, ಆದರೆ ಬಾವಿಯ ಬಳಿಯಲ್ಲಿ ಸಮಾರ್ಯದ ಹೆಂಗಸಿನ ಹತ್ತಿರ ಮಾತಾಡಿದ ಸಂದರ್ಭದಲ್ಲಿ ಯೇಸು ಕ್ರಿಸ್ತನು ಹೇಳಿದ ಅದೇ ನೀರು ಆಗಿತ್ತು: “ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವುದು.” (ಯೋಹಾನ 4:14) ಈ “ನೀರು” ಯೇಸುವಿಗೆ ಎಲ್ಲಿಂದ ದೊರಕಿತು?

2. “ಜಲದ” ಉಗಮವು ಯಾವುದು, ಮತ್ತು ಯಾವ ಘಟನೆಯ ನಂತರ ಮಾತ್ರವೇ ಅದು ಹರಿಯಸಾಧ್ಯವಿದೆ?

2 ಈ “ನೀರು” ಬರುವ ಉಗಮವನ್ನು ದರ್ಶನವೊಂದರಲ್ಲಿ ನೋಡುವ ಸೌಭಾಗ್ಯವು ಅಪೊಸ್ತಲ ಯೋಹಾನದ್ದಾಗಿತ್ತು, ಅವನದನ್ನು ಪ್ರಕಟನೆ 22:1 ರಲ್ಲಿ ದಾಖಲೆ ಮಾಡಿರುತ್ತಾನೆ: “ಆ ಮೇಲೆ ಅವನು ಸ್ಫಟಿಕದಂತೆ ಪ್ರಕಾಶಮಾನವಾಗಿದ್ದ ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಯಾದಾತನ ಸಿಂಹಾಸನದಿಂದ ಹೊರಟು ಬರುತ್ತಿತ್ತು.” ಹೌದು, ಸ್ಫಟಿಕದಷ್ಟು ಶುಭ್ರವಾಗಿರುವ, ಜೀವ ಕೊಡುವ ಘಟಕಾಂಶಗಳನ್ನು ಕೂಡಿದ್ದ ಈ ನೀರಿನ ಉಗಮವು, ಜೀವ-ದಾತನಾದ ಯೆಹೋವನು ತಾನೇ ಅಲ್ಲದೇ ಬೇರೆ ಯಾರೂ ಅಲ್ಲ, ಅವನು ಇದನ್ನು ಕುರಿಮರಿಯಾದ ಯೇಸು ಕ್ರಿಸ್ತನ ಮೂಲಕ ದೊರಕುವಂತೆ ಮಾಡುತ್ತಾನೆ. (ಪ್ರಕಟನೆ 21:6 ಹೋಲಿಸಿರಿ.) “ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವನ್ನು” ಉಲ್ಲೇಖಿಸಿರುವುದರಿಂದ, ಇದು 1914 ರಲ್ಲಿ ಮೆಸ್ಸೀಯನ ರಾಜ್ಯವನ್ನು ಸ್ಥಾಪಿಸಿದ ನಂತರ ಆಗಿರಬೇಕು, ಅಂದರೆ ಕರ್ತನ ದಿನವು ಆರಂಭಿಸಿದ ನಂತರ, ಈ ಜೀವಜಲವು ಹರಿಯಲು ಆರಂಭಿಸಿರಬೇಕು.—ಪ್ರಕಟನೆ 1:10.

3, 4. “ಜಲವು” ಏನನ್ನು ಸೂಚಿಸುತ್ತದೆ, ಮತ್ತು ಅದು ಯಾರಿಗೆ ದೊರಕುತ್ತದೆ?

3 ಈ ಜೀವಜಲವು ಏನನ್ನು ಸೂಚಿಸುತ್ತದೆ? ಪರದೈಸವಾಗಿ ಮಾರ್ಪಟ್ಟಿರುವ ಭೂಮಿಯ ಮೇಲೆ ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು, ಪರಿಪೂರ್ಣ ಮಾನವ ಜೀವದ ಪುನಃಸ್ಥಾಪನೆಯ ದೇವರ ಒದಗಿಸುವಿಕೆಗಳನ್ನು ಚಿತ್ರಿಸುತ್ತದೆ. ಜೀವಜಲವು ಯೇಸು ಕ್ರಿಸ್ತನ ಮೂಲಕ ಜೀವಕ್ಕಾಗಿರುವ ಎಲ್ಲಾ ಒದಗಿಸುವಿಕೆಗಳನ್ನು ಪ್ರತಿನಿಧಿಸುತ್ತದೆ. ಇದೆಲ್ಲಾ ಈಗ ದೊರಕುತ್ತವೋ? ಇಲ್ಲ, ಎಲ್ಲಾ ದೊರಕುವುದಿಲ್ಲ, ಯಾಕಂದರೆ ದೇವರು ಈ ಪ್ರಚಲಿತ ವಿಷಯಗಳ ವ್ಯವಸ್ಥೆಯೊಂದಿಗೆ, ಅದರ ಅದೃಶ್ಯ ಅಧಿಪತಿಯಾಗಿರುವ ಪಿಶಾಚನಾದ ಸೈತಾನನನ್ನು ಮೊದಲು ಇಲ್ಲದಂತೆ ಮಾಡಬೇಕು. ಆದರೆ, ರಾಜ್ಯದ ಸುವಾರ್ತೆಯನ್ನು ಕೇಳುವುದರ ಮತ್ತು ಅದಕ್ಕೆ ವಿಧೇಯರಾಗುವುದರ ಮೂಲಕ ಹಾಗೂ ನಮ್ಮ ಜೀವಿತಗಳನ್ನು ಅದಕ್ಕೆ ಸರಿಹೊಂದಿಸುವುದರ ಮೂಲಕ, ದೊರಕುವ ಈ “ಜಲ” ವನ್ನು ಈಗಲೇ ತೆಗೆದು ಕೊಳ್ಳಬಹುದು.—ಯೋಹಾನ 3:16; ರೋಮಾಪುರದವರಿಗೆ 12:2.

4 ಹೀಗೆ, ಯೋಹಾನನಿಗೆ ‘ಜೀವಜಲದ ನದಿ’ ಯನ್ನು ತೋರಿಸಿದ ನಂತರ, ದರ್ಶನದೊಂದಿಗೆ ತನ್ನ ದೂತನನ್ನು ಕಳುಹಿಸುವ ತನ್ನ ಉದ್ದೇಶದ ಕುರಿತು ಯೇಸುವು ಯೋಹಾನನಿಗೆ ತಿಳಿಸುತ್ತಾನೆ. ಆನಂತರ ಯೋಹಾನನು ಈ ಉದ್ಘೋಷವನ್ನು ಕೇಳುತ್ತಾನೆ: “ಆತ್ಮನು ಮತ್ತು ಮದಲಗಿತ್ತಿಯು ಹೇಳುತ್ತಾ ಇದ್ದಾರೆ: ‘ಬಾ!’ ಕೇಳುವ ಯಾವನಾದರೂ ಹೇಳಲಿ: ‘ಬಾ!’ ಮತ್ತು ಬಾಯಾರಿದವನು ಬರಲಿ; ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದು ಕೊಳ್ಳಲಿ.” (ಪ್ರಕಟನೆ 22:17, NW.) ಆದಕಾರಣ, ದೇವರ ಕುರಿಮರಿಯ ಮೂಲಕ ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯಲಿಕ್ಕಾಗಿರುವ ದೇವರ ಒದಗಿಸುವಿಕೆಗಳನ್ನು ಕುಡಿಯಲು ಆರಂಭಿಸುವಂತೆ ಬಾಯಾರಿದವರಿಗೆ ದೇವರ ಸೇವಕರು ಆಮಂತ್ರಣವನ್ನು ನೀಡುತ್ತಾ ಇದ್ದಾರೆ.—ಯೋಹಾನ 1:29.

ಜೀವದ ಜಲಕ್ಕಾಗಿ ಆವಶ್ಯಕತೆ ಏಳುತ್ತದೆ

5. ಈ ದೈವಿಕ ಒದಗಿಸುವಿಕೆಯ ಆವಶ್ಯಕತೆ ಮಾನವಕುಲಕ್ಕೆ ಬಂದದ್ದು ಹೇಗೆ?

5 ವಿಷಾದಕರವಾಗಿಯೇ, ಪರದೈಸ ಮನೆಯೊಂದರಲ್ಲಿ ಪರಿಪೂರ್ಣ ಮಾನವ ಜೀವವನ್ನು ಆನಂದಿಸುವ ಅವಕಾಶವನ್ನು ತಮ್ಮ ಸಂತತಿಯವರಿಗೆ ಕೊಡುವ ಜೀವಿತಮಾರ್ಗಕ್ಕೆ ಮಾನವ ಕುಟುಂಬದ ಮೊದಲ ಹೆತ್ತವರು ಅಂಟಿಕೊಳ್ಳಲಿಲ್ಲ. ಮಾನವ ಕುಲವು ನಿತ್ಯಜೀವವನ್ನು ಪಡೆಯಲಿಕ್ಕಾಗಿ, ಅವನ ಸೃಷ್ಟಿಕರ್ತನನ್ನು ವಿಧೇಯತೆಯಿಂದ ಸೇವಿಸುವ ಬುದ್ಧಿಶಕ್ತಿಯ ಆರಿಸುವಿಕೆಯನ್ನು ಆದಾಮನು ಮಾಡುವುದು ಆವಶ್ಯವಾಗಿತ್ತು. ದಂಗೆಕೋರ ಆತ್ಮಜೀವಿಯೊಂದರ ಪ್ರಭಾವದ ಕೆಳಗೆ, ಹವ್ವಳು ಆರಂಭಿಸಿದ ಕಾರ್ಯ ಚಟುವಟಿಕೆಯು, ಮಾನವ ಕುಲವನ್ನು ಮರಣಕ್ಕೆ ನಡಿಸಿತು, ಮತ್ತು ಅವಳ ಪರಿಪೂರ್ಣ ಗಂಡನಾದ ಆದಾಮನು ಈ ಮರಣ-ಕಾರಕ ಪಥದಲ್ಲಿ ಅವಳೊಂದಿಗೆ ಸೇರಿಕೊಳ್ಳಲು ಆರಿಸಿದನು. ಈ ರೀತಿಯಲ್ಲಿ ಮಾನವಕುಲದ ಮುಂದಿನ ಸಂತತಿಗಳಿಗೆ ಸ್ವಾಭಾವಿಕವಾದ ಜೀವವನ್ನು ಕೊಡುವವನಾದುದರಿಂದಾಗಿ, ಆದಾಮನು ಸಮಗ್ರ ಮಾನವ ಕುಲದಲ್ಲಿ ಮರಣದ ಕಾರ್ಯಚಲನೆಯನ್ನು ನಿಜವಾಗಿಯೂ ಪ್ರಸ್ತಾಪಿಸಿದವನಾಗಿದ್ದಾನೆ. ಆದುದುದರಿಂದ ಬೈಬಲು ಹೇಳುವುದು: “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರದವರಿಗೆ 5:12) ಆದಾಮ ಮತ್ತು ಹವ್ವರು ಪಾಪ ಮಾಡಿದ ನಂತರ ಮಾನವ ಕುಲದಲ್ಲಿ ಅಧಿಕ ಹೊಸ ಸದಸ್ಯರನ್ನು ಸೇರಿಸಲು ಅವರು ಪ್ರಾರಂಭಿಸಿದರು.—ಕೀರ್ತನೆ 51:5.

6. “ಜಲವು” ದೊರಕುವಂತೆ ಯೆಹೋವನು ಏರ್ಪಡಿಸಿದ್ದು ಯಾಕೆ?

6 ಪರಿಪೂರ್ಣ ಮಾನವರು ತುಂಬಿರುವ ಪರದೈಸ ಭೂಮಿಯ ದೇವರ ಉದ್ದೇಶವನ್ನು ಪೂರೈಸುವುದನ್ನು ಎಂದೆಂದಿಗೂ ತಡೆಹಿಡಿಯಲಾಯಿತೋ? ಬೈಬಲಿನ ಉತ್ತರವು ಏನಂದರೆ, ಖಂಡಿತವಾಗಿಯೂ ಇಲ್ಲ! ಆದಾಗ್ಯೂ, ಅವನ ಉದ್ದೇಶವನ್ನು ಪೂರೈಸಲು, ಆದಾಮನ ವಿಪತ್ಕಾರಕ ಪರಾಜಯವನ್ನು ನಿಷ್ಫಲಗೊಳಿಸಲು ಯೆಹೋವನು ಪ್ರೀತಿಯ ಒದಗಿಸುವಿಕೆಯೊಂದನ್ನು ಮಾಡಿದನಾದರೂ, ನ್ಯಾಯ ಮತ್ತು ನೀತಿಗೆ ಪೂರ್ಣ ಸಹಮತದಲ್ಲಿರುವಂತೆ ನೋಡಿದನು, ಅದಕ್ಕೆ ಅವನು ಪೂರ್ಣನೂ, ಅಂತಿಮ ನಿರೂಪಕನೂ ಆಗಿರುತ್ತಾನೆ. ಇದನ್ನು ಅವನು “ಜೀವಜಲದ ನದಿಯ” ಮೂಲಕ ಮಾಡಲಿರುವನು. ಅದರ ಮೂಲಕ, ಯಾರಿಗೆ ಜೀವದ ಉಗಮದ ಬಳಿಗೆ ಬರುವ ಹಕ್ಕು ಕಳಕೊಳ್ಳಲ್ಪಟ್ಟಿತ್ತೋ, ಆ ವಿಧೇಯ ಮಾನವ ಕುಲವನ್ನು ಪರಿಪೂರ್ಣ ಜೀವಿತಕ್ಕೆ ಪುನಃ ಸ್ಥಾಪಿಸುವನು. ಈ ನದಿಯು ಅದರ ಪೂರ್ಣತೆಯ ಅರ್ಥದಲ್ಲಿ ಯೇಸು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ಸಮಯದಲ್ಲಿ ಹರಿಯಲಿರುವುದು. ಹೀಗೆ, ಕ್ರಿಸ್ತನ ಸಹಸ್ರ ವರ್ಷದ ಆಡಳಿತೆಯ ಸಮಯಾವಧಿಯಲ್ಲೆಲ್ಲಾ” ಮಾನವರು, ಸತ್ತವರೊಳಗಿಂದ ಪುನರುತ್ಥಾನಗೊಂಡವರ ಸಹಿತ, ಮಾನವರು “ಜೀವಜಲದ ನದಿಯಿಂದ” ಕುಡಿಯಬೇಕಾಗಿದೆ.—ಹೋಲಿಸಿರಿ ಯೆಹೆಜ್ಕೇಲನು 47:1-10; ಅ.ಕೃತ್ಯಗಳು 24:15.

7. ಯಾವುದರ ಆಧಾರದ ಮೇಲೆ “ಜಲದ” ಒದಗಿಸುವಿಕೆಯನ್ನು ಮಾಡಲಾಗಿದೆ?

7 ಯೆಹೋವನು ತನ್ನ ಸ್ವಂತ ಜೀವಿತದಲ್ಲಿ ಆನಂದಿಸುತ್ತಾನೆ ಮತ್ತು ಅವನ ಸೃಷ್ಟಿಯ ಕೆಲವರಿಗೆ ಬುದ್ಧಿಶಕ್ತಿಯ ಜೀವಿತವೊಂದರಲ್ಲಿ ಆನಂದಿಸುವ ಸುಯೋಗವನ್ನು ಅನುಗ್ರಹಿಸುತ್ತಾನೆ. ಯೆಹೋವನ ಜೀವದಾಯಕ ಒದಗಿಸುವಿಕೆಗಳಿಗೆ ಆಧಾರವು ಯೇಸುವಿನ ವಿಮೋಚನ ಯಜ್ಞವೇ. (ಮಾರ್ಕ 10:45; 1 ಯೋಹಾನ 4:9,10) ಇದರಲ್ಲಿ ದೇವರ ವಾಕ್ಯವು ಸೇರಿರುತ್ತದೆ, ಬೈಬಲು ಕೆಲವೊಮ್ಮೆ ಅದನ್ನು “ಜಲ” ಎಂದು ಕರೆದಿದೆ. (ಎಫೆಸದವರಿಗೆ 5:26) ಪರಿಪೂರ್ಣ ಮಾನವ ಜೋಡಿಯಾದ ಆದಾಮ-ಹವ್ವರಿಗೆ ದೇವರು ಮಾಡಿದ ಮೂಲ ಒದಗಿಸುವಿಕೆಗಳನ್ನು ನಷ್ಟ ಹೊಂದಿದ ಮಾನವ ವರ್ಗಕ್ಕೆ “ಬಾ!” ಎಂದು ಹೇಳಲು ಯೆಹೋವನು ಸ್ವತಂತ್ರನಾಗಿದ್ದಾನೆ.

ಮದಲಗಿತ್ತಿ ವರ್ಗವು ಆಮಂತ್ರಣವನ್ನು ಕೊಡುತ್ತದೆ, “ಬಾ!”

8. ಈ “ಜಲವು” ಮೊದಲು ಯಾರಿಗೆ ಮತ್ತು ಯಾವಾಗ ಒದಗಿಸಲ್ಪಟ್ಟಿತು?

8 “ಬಾ!” ಎಂದು ಆಮಂತ್ರಣವನ್ನು ಕೊಡುವವರಲ್ಲಿ ಮೊದಲಿಗರು, ಯೆಹೋವನ ಜೇಷ್ಠಜನಿತ ಆತ್ಮೀಕ ಪುತ್ರನ, ಯಾ ಕುರಿಮರಿಯ ಸಾಂಕೇತಿಕ ಮದಲಗಿತ್ತಿಯವರಾಗಿರುತ್ತಾರೆ. (ಪ್ರಕಟನೆ 14:1, 3, 4; 21:9) ಕ್ರಿಸ್ತನ ಆತ್ಮೀಕ ಮದಲಗಿತ್ತಿಯು “ಬಾ!” ಎಂದು ತನಗೆ ಹೇಳಿ ಕೊಳ್ಳುವುದಿಲ್ಲ, ಅಂದರೆ 1,44,000 ಮಂದಿಯಿರುವ ಮದಲಗಿತ್ತಿ ವರ್ಗದಲ್ಲಿ ಪಾಲಿಗರಾಗಲು ಯೆಹೋವ ದೇವರು ಇನ್ನೂ ಒಟ್ಟುಗೂಡಿಸುವ ಉಳಿದಿರುವವರನ್ನು ಕರೆಯುವುದಲ್ಲ. ಈ ಮಾತುಗಳು, ಅರ್ಮೆಗೆದ್ದೋನಿನ ನಂತರ ಭೂಮಿಯ ಮೇಲೆ ಪರಿಪೂರ್ಣ ಮಾನವ ಜೀವವನ್ನು ಎಟಕಿಸಿ ಕೊಳ್ಳುವ ನಿರೀಕ್ಷೆಯಿರುವ ಮಾನವರಿಗೆ ನೀಡಿದ ಆಮಂತ್ರಣವಾಗಿರುತ್ತದೆ. (ಪ್ರಕಟನೆ 16:14, 16) 1914 ರಿಂದ ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಸಮಯಾವಧಿಯಲ್ಲಿ, ದೇವರ ಆತ್ಮದ ಸಹಮತದೊಂದಿಗೆ “ಮದಲಗಿತ್ತಿ” ಯು ಈ ಆಮಂತ್ರಣವನ್ನು ನೀಡಿರುವುದನ್ನು ನಾವು ಕೇಳಿರುತ್ತೇವೆ.

9. ಒಂದು ಚಿಕ್ಕ ಗುಂಪಿಗಾಗಿ ಅದಿರುವುದಿಲ್ಲವೆಂದು ನಮಗೆ ತಿಳಿದಿರುವುದು ಹೇಗೆ?

9 ಪುಳಕಿತಗೊಳಿಸುವಂತೆ, ಬೈಬಲಿನ ಕೊನೆಯ ಪುಸ್ತಕವು ‘ಯಾರೂ ಎಣಿಸಲಾಗದಂತಹ ಒಂದು ಮಹಾ ಸಮೂಹವು’ ರಾಜ್ಯದ ಸುವಾರ್ತೆಯ ಘೋಷಣೆಗೆ ಪ್ರತಿವರ್ತನೆ ತೋರಿಸುವದನ್ನೂ, ಮತ್ತು ಆ ರಾಜ್ಯ ಸರಕಾರದ ಪಕ್ಕದಲ್ಲಿ ತಮ್ಮನ್ನು ದೃಢತೆಯಿಂದ ಇಟ್ಟುಕೊಳ್ಳುತ್ತಿರುವುದನ್ನೂ ತೋರಿಸಿದೆ. (ಪ್ರಕಟನೆ 7:9, 10, 16, 17) ಆ ಮಹಾ ಸಮೂಹದವರಲ್ಲಿ ನೀವೂ ಒಬ್ಬರಾಗಿದ್ದೀರೋ? ಹಾಗಿರುವುದಾದರೆ, “ಕೇಳುವ ಯಾವನಾದರೂ ಹೇಳಲಿ: ‘ಬಾ!’ ”

ಆತ್ಮನೂ, ಮದಲಗಿತ್ತಿಯೂ ಹೇಳುತ್ತಾರೆ, “ಬಾ!”

10. ಸಾಂಕೇತಿಕ ನೀರು ಎಲ್ಲಿಂದ ಆರಂಭಗೊಳ್ಳಬೇಕು, ಮತ್ತು ಯಾಕೆ?

10 ಆದರೆ ದೇವರ ಮತ್ತು ಸಾಂಕೇತಿಕ ಮದಲಿಂಗನ ಕುರಿತಾಗಿ ಪ್ರಕಟನೆ 22:17 ರಲ್ಲಿ ಯಾಕೆ ಉಲ್ಲೇಖಿಸಲಾಗಿಲ್ಲ? ಮೊದಲನೆಯದಾಗಿ, ಆತ್ಮನು ಯಾರ ಮಾರ್ಗದರ್ಶನೆಯ ಕೆಳಗೆ ಕ್ರಿಯೆಗೈಯುತ್ತಾ ಇದ್ದಾನೆ ಎಂದು ವಚನವು ತಿಳಿಸುವುದಿಲ್ಲ. ಆದರೂ, ಆತ್ಮಕ್ಕೆ ನಿರ್ದೇಶಿತವಾದದ್ದು ನಮ್ಮ ಗಮನವನ್ನು ಯೆಹೋವ ದೇವರೆಡೆಗೆ ಸೆಳೆಯುತ್ತದೆ. ತಂದೆಯು ಚಿತ್ರಣದಿಂದ ಹೊರಗೆ ದೂಡಲ್ಪಟ್ಟಿಲ್ಲ, ಯಾಕಂದರೆ ಅವನು ಸ್ವತಃ ಪವಿತ್ರಾತ್ಮನ ಉಗಮನಾಗಿದ್ದಾನೆ. ಎರಡನೆಯದ್ದು, ತನ್ನ ತಂದೆಯೊಂದಿಗೆ ಮಗನು ಪೂರ್ಣವಾಗಿ ಸಹಕರಿಸುತ್ತಾನೆ, ಅವನು ಸ್ವತಃ ಅಂದದ್ದು: “ತಂದೆಯು ಮಾಡುವುದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು.” (ಯೋಹಾನ 5:19) ಅದಲ್ಲದೆ, ಈ ಆಮಂತ್ರಣವು ಅಂತಿಮವಾಗಿ ಯೆಹೋವ ದೇವರಿಂದ ಉಗಮವಾಗುವ ಪ್ರೇರಿತ ನುಡಿಯಾಗಿರುವುದರಿಂದ, ಮಾನವರು ದೈವಿಕ ಮಾರ್ಗದರ್ಶನೆಯನ್ನು ಯಾ “ಪ್ರೇರೇಪಣೆಯ ಮಾತುಗಳನ್ನು” “ವಾಕ್ಯವಾದ” ಯೇಸು ಕ್ರಿಸ್ತನ ಮೂಲಕ ಪಡೆಯಶಕ್ತರು. (ಪ್ರಕಟನೆ 22:6; ಮತ್ತು ಪ್ರಕಟನೆ 22:17, ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ; ಯೋಹಾನ 1:1) ಆದುದರಿಂದ ಸಹಜವಾಗಿಯೇ, ನಾವು ಮದಲಿಂಗನಾದ ಕ್ರಿಸ್ತನನ್ನು ಈ ಆಮಂತ್ರಣದೊಂದಿಗೆ ಜೋಡಿಸುತ್ತೇವೆ. ಹೌದು, ಮದಲಿಂಗನ ತಂದೆಯಾದ ಯೆಹೋವ ದೇವರು ಮತ್ತು ಮದಲಿಂಗನಾದ ಯೇಸು ಕ್ರಿಸ್ತನು, ಇಬ್ಬರೂ ಪವಿತ್ರಾತ್ಮನ ಮೂಲಕ “ಮದಲಗಿತ್ತಿ” ಯೊಂದಿಗೆ “ಬಾ!” ಹೇಳುವುದರಲ್ಲಿ ಸೇರುತ್ತಾರೆ.

11, 12. (ಎ)ಕುಡಿಯಲು ನೀಡುವ ಆಮಂತ್ರಣವು ವಿಸ್ತಾರಗೊಳ್ಳಲಿದೆ ಎಂದು ಆರಂಭದ ಯಾವ ಸೂಚನೆಗಳು ಇವೆ? (ಬಿ) ವರ್ಷಗಳು ಗತಿಸಿದಂತೆ ವಿಷಯವು ಅಧಿಕವಾಗಿ ಸ್ಪಷ್ಟಗೊಂಡದ್ದು ಹೇಗೆ?

11 “ಜೀವಜಲಕ್ಕಾಗಿ” ಬಾಯಾರಿರುವ ಜನರಿಗೆ ಈ ಆಮಂತ್ರಣವು ದಶಮಾನಗಳಿಂದ ಕೊಡಲ್ಪಡುತ್ತಾ ಇದೆ. 1918 ರಷ್ಟು ಹಿಂದಕ್ಕೆ ಭೂಮಿಯ ಮೇಲೆ ಜೀವಿಸಬಹುದಾದ ಜನರ ಕುರಿತಾಗಿ ಒಂದು ಸಂದೇಶವನ್ನು ವಿಶೇಷವಾಗಿ ಮದಲಗಿತ್ತಿ ವರ್ಗವು ಸಾರಲು ಆರಂಭಿಸಿತು. ಅದೊಂದು ಬಹಿರಂಗ ಭಾಷಣವಾಗಿತ್ತು, “ಈಗ ಜೀವಿಸುವ ಮಿಲ್ಯಾಂತರ ಜನರು ಎಂದಿಗೂ ಸಾಯದೇ ಇರಬಹುದು.” ಇದು ಅರ್ಮೆಗೆದ್ದೋನಿನಲ್ಲಿ ಅನೇಕರು ಪಾರಾಗಿ ಉಳಿಯುವರು ಮತ್ತು ಅನಂತರ, ದೇವರ ಮೆಸ್ಸೀಯ ರಾಜ್ಯದ ಕೆಳಗೆ ಪರದೈಸ ಭೂಮಿಯ ಮೇಲೆ ನಿತ್ಯಜೀವವನ್ನು ಗಳಿಸುವರು ಎಂಬ ನಿರೀಕ್ಷೆಯನ್ನು ಕೊಡಲಾಗಿತ್ತು. ಆದರೆ ಈ ಸಂದೇಶವು ಸಾಮಾನ್ಯವಾಗಿ ನೀತಿಯುಕ್ತರಾಗಿರುವುದರ ಹೊರತು ಈ ಪಾರಾಗುವಿಕೆಯ ಸುಯೋಗಕ್ಕಾಗಿ ನಿರ್ದಿಷ್ಟ ದಾರಿಯನ್ನು ತೋರಿಸಲಿಲ್ಲ.

12 “ಬಾ!” ಎನ್ನುವ ಆಮಂತ್ರಣದೊಂದಿಗೆ ಅನೇಕ ಜನರನ್ನು ತಲಪಲು, 1922 ರಲ್ಲಿ ದೇವರನ್ನು ಸೇವಿಸಲು ಆಸಕ್ತಿಯುಳ್ಳವರೆಲ್ಲರಿಗೆ ಒಂದು ಕರೆಯು ಕೊಡಲ್ಪಟ್ಟಿತ್ತು: “ರಾಜನನ್ನೂ, ರಾಜ್ಯವನ್ನೂ ಪ್ರಕಟಪಡಿಸಿರಿ.” ಮತ್ತಾಯ 25:31-46 ರಲ್ಲಿರುವ ಯೇಸುವಿನ ಸಾಮ್ಯದ “ಕುರಿಗಳು” ಮತ್ತು “ಆಡುಗಳು” ಅರ್ಮೆಗೆದ್ದೋನ್‌ನ ಮೊದಲು ತೋರಿಬರಲಿದ್ದಾರೆಂದು 1923 ರಲ್ಲಿ ಮದಲಗಿತ್ತಿ ವರ್ಗಕ್ಕೆ ತಿಳಿದು ಬಂತು. ತದನಂತರ 1929 ರ ಮಾರ್ಚ್‌ 15 ರ ದ ವಾಚ್‌ಟವರ್‌ ನಲ್ಲಿ “ಹಿತಕರವಾದ ಆಹ್ವಾನ” ಎಂಬ ಲೇಖನವೊಂದು ಬಂತು. ಅದರ ಮುಖ್ಯ ವಿಷಯದ ಆಧಾರವಚನ ಪ್ರಕಟನೆ 22:17 ಆಗಿತ್ತು ಮತ್ತು ಅದು “ಬಾ!” ಎಂಬ ಆಮಂತ್ರಣವನ್ನು ಕೊಡುವ ಮದಲಗಿತ್ತಿ ವರ್ಗದ ಜವಾಬ್ದಾರಿಕೆಯನ್ನು ಒತ್ತಿ ಹೇಳಿತು.—ಪುಟಗಳು 87-9.a

“ಬಾ!” ಎಂದು ಹೇಳುವುದರಲ್ಲಿ ಬೇರೆಕುರಿಗಳು ಸೇರುತ್ತಾರೆ

13, 14. 1930 ರ ದಶಕದಲ್ಲಿ ಈ ಸಾಂಕೇತಿಕ ನೀರನ್ನು ಇತರರು ಕುಡಿಯುವರೆಂದು ಯಾವ ಹೆಚ್ಚಿನ ಸ್ಪಷ್ಟತೆಗಳು ಒದಗಿಸಲ್ಪಟ್ಟವು?

13 ಅದಲ್ಲದೇ, 1932 ರಷ್ಟು ಹಿಂದೆ ದ ವಾಚ್‌ಟವರ್‌ “ಬೇರೆ ಕುರಿಗಳ” ಜವಾಬ್ದಾರಿಕೆಯನ್ನು ಸೂಚಿಸಿತ್ತು ಮತ್ತು ಅವರು ತಮ್ಮ ವತಿಯಿಂದ “ಬಾ!” ಎಂದು ಹೇಳಬೇಕಿತ್ತು. (ಯೋಹಾನ 10:16) ಅದರ ಅಗಷ್ಟ್‌ 1 ರ ಸಂಚಿಕೆಯ 232 ನೆಯ ಪುಟದ 29 ನೆಯ ಪಾರಗ್ರಾಫ್‌ ಅಂದದ್ದು: “ಯೆಹೋವನ ಸಾಕ್ಷಿಗಳಲ್ಲಿ ಯೇಹುನಲ್ಲಿದ್ದಂತಹ ಹುರುಪು ಈಗ ಇದೆ, ಮತ್ತು ಅವರು ತಮ್ಮೊಂದಿಗೆ ಬರುವಂತೆ ಮತ್ತು ಸನ್ನಿಹಿತವಾಗಿರುವ ದೇವರ ರಾಜ್ಯವು ಇತರರಿಗೆ ಸಾರುವುದರಲ್ಲಿ ಭಾಗವನ್ನು ತೆಗೆದು ಕೊಳ್ಳುವಂತೆ ಯೆಹೋನಾದಾಬ ವರ್ಗದವರನ್ನು [ಬೇರೆ ಕುರಿಗಳು] ಉತ್ತೇಜಿಸಬೇಕು.” ಅನಂತರ ಪ್ರಕಟನೆ 22:17 ನ್ನು ಉಲ್ಲೇಖಿಸಿ ಪಾರಗ್ರಾಫ್‌ ಅಂದದ್ದು: “ರಾಜ್ಯದ ಸುವಾರ್ತೆಯನ್ನು ತಿಳಿಸುವುದರಲ್ಲಿ ಭಾಗವಹಿಸುವ ಎಲ್ಲರನ್ನೂ ಅಭಿಷಿಕ್ತರು ಪ್ರೋತ್ಸಾಹಿಸಲಿ. ಕರ್ತನ ಸಂದೇಶವನ್ನು ಸಾರಲು ಅವರು ಕರ್ತನ ಅಭಿಷಿಕ್ತರಾಗಿರಬೇಕೆಂದಿಲ್ಲ. ಅರ್ಮಗೆದ್ದೋನ್‌ನಲ್ಲಿ ಪಾರಾಗ ಬಹುದಾದ ಮತ್ತು ಯೆಹೋವನ ವಿಫುಲ ಒಳ್ಳೇತನದ ಕಾರಣದಿಂದ ಭೂಮಿಯ ಮೇಲೆ ನಿತ್ಯಜೀವವನ್ನು ಕೊಡುವ ಜನರ ವರ್ಗಕ್ಕೆ ಜೀವಜಲವನ್ನು ಕೊಂಡೊಯ್ಯಲು ಅವರಿಗೆ ಅನುಮತಿಸಲಾಗಿದೆ ಎಂದು ಈಗ ತಿಳಿಯುವುದು ಯೆಹೋವನ ಸಾಕ್ಷಿಗಳಿಗೆ ಒಂದು ಮಹಾ ತೃಪ್ತಿಯ ಸಂಗತಿಯಾಗಿದೆ.”b

14 ಈ ಬೇರೆ ಕುರಿಗಳು ಈಗ ತಾವಾಗಿಯೇ ಸ್ವತಃ ಸಮರ್ಪಿಸಿಕೊಳ್ಳಬೇಕು ಮತ್ತು ಈ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಾಂಕೇತಿಕವಾಗಿ ತೋರಿಸಬೇಕು ಮತ್ತು ಅನಂತರ, ಮದಲಗಿತ್ತಿ ವರ್ಗದವರೊಂದಿಗೆ ಸೇರಿ, ಬಾಯಾರಿರುವ ಇನ್ನೂ ಇತರರಿಗೆ, “ಬಾ!” ಎಂಬ ಕರೆಯನ್ನು ಕೊಡತಕ್ಕದ್ದು ಎಂದು ಅಭಿಷಿಕ್ತ ಉಳಿಕೆಯವರು 1934 ರಿಂದ ನಿರ್ದೇಶಿಸಲಾರಂಭಿಸಿದರು. ಈ ರೀತಿಯಲ್ಲಿ “ಒಬ್ಬನೇ ಕುರುಬನಾದ” ಯೇಸು ಕ್ರಿಸ್ತನ ಕೆಳಗಿರುವ “ಒಂದೇ ಹಿಂಡಿನಲ್ಲಿ” ಬಾಯಾರಿದ ಬೇರೆ ಕುರಿಗಳನ್ನು ಒಟ್ಟುಗೂಡಿಸುವುದರಲ್ಲಿ ಒಂದು ನಿರ್ದಿಷ್ಟವಾದ ಆಮಂತ್ರಣವನ್ನು ಮದಲಗಿತ್ತಿ ವರ್ಗವು ಈಗ ಕೊಟ್ಟಿತು. (ಯೋಹಾನ 10:16) 1935 ರಲ್ಲಿ “ಬಾ!” ಎಂದು ಅವರು ಕರೆಗೊಡುತ್ತಿದ್ದ ಕುರಿಗಳಂತಹ ಜನರು, ವಾಸ್ತವದಲ್ಲಿ ಪ್ರಕಟನೆ 7:9-17 ರ “ಮಹಾ ಸಮೂಹ”ದವರೆಂಬದನ್ನು ಆ ವರ್ಷದ ವಾರ್ಷಿಕ ಸಮ್ಮೇಳನದಲ್ಲಿ ಅಭಿಷಿಕ್ತ ಉಳಿಕೆಯವರು ಕಲಿಯುವಂತೆ ಪ್ರಚೋದಿಸಲ್ಪಟ್ಟರು. ಇದು ಅಮಂತ್ರಣದ ಕಾರ್ಯಕ್ಕೆ ಅಪಾರವಾದ ರಭಸವನ್ನು ಕೊಟ್ಟಿತು.

15. “ಬಾ!” ಎನ್ನುವ ಆಮಂತ್ರಣದಲ್ಲಿ “ಆತ್ಮನು” ಒಳಗೂಡಿರುವುದು ಹೇಗೆ?

15 “ಬಾ!” ಎಂದು ಮದಲಗಿತ್ತಿ ವರ್ಗವು ಹೇಳುವುದರಲ್ಲಿ ದೇವರ ಆತ್ಮನೊಂದಿಗೆ ಸಹಮತದಲ್ಲಿತ್ತು. ಅವನ ಆತ್ಮದ ಮೂಲಕ ಅವನ ವಾಕ್ಯದಲ್ಲಿ ಬರೆಯಲ್ಪಟ್ಟ ಪ್ರವಾದನೆಗಳ ಅರ್ಥವನ್ನು ತಿಳಿಸುವುದರ ಮೂಲಕ, ಆಮಂತ್ರಣವನ್ನು ನೀಡಲು ಮದಲಗಿತ್ತಿ ವರ್ಗದ ಉಳಿಕೆಯವರಿಗೆ ಕಾರಣವಾಯಿತು. ಅವರ ಆಮಂತ್ರಣವು ಆಧರಿಸಿರುವ ಈ ಪ್ರವಾದನೆಗಳು ದೇವರ ಆತ್ಮದ ಮೂಲಕ ಪ್ರೇರಿಸಲ್ಪಟ್ಟಿದ್ದವು. ಆದುದರಿಂದ, ಕ್ರಿಸ್ತನ ಮತ್ತು ಅವನ ಮದಲಗಿತ್ತಿ ವರ್ಗದವರ ಮೂಲಕ ಪ್ರವಹಿಸುತ್ತಿರುವ ದೇವರ ಆತ್ಮವು ಕುರಿಗಳಂಥ ಜನರ ಮಹಾ ಸಮೂಹಕ್ಕೆ, ತತ್ಪರಿಣಾಮವಾಗಿ ಹೇಳುವುದು: “ಬಾ!”—ಪ್ರಕಟನೆ 19:10.

16. ಇಂದು ಆಮಂತ್ರಣದಲ್ಲಿ ಆತ್ಮನೂ, ಮದಲಗಿತ್ತಿಯೂ ಸೇರಿರುವುದು ಹೇಗೆ?

16 ಇಂದಿನ ದಿನದ ತನಕ ಆತ್ಮನು ಮತ್ತು ಉಳಿಕೆಯವರಿಂದ ಪ್ರತಿನಿಧಿಸಲ್ಪಡುತ್ತಿರುವ ಮದಲಗಿತ್ತಿಯು “ಹೇಳುತ್ತಾ ಇದ್ದಾರೆ: ‘ಬಾ!’ ” ಇಂದು ದೊರಕುತ್ತಿರುವ “ಜೀವಜಲ” ವನ್ನು ಅವರು ಸ್ವತಃ ತಮಗಾಗಿ ಇಟ್ಟುಕೊಳ್ಳುವುದಿಲ್ಲ. ಅವರು “ಆತ್ಮನ ಮತ್ತು ಮದಲಗಿತ್ತಿಯ” ಅಪ್ಪಣೆಗೆ, ಅಂದರೆ, “ಕೇಳುವ ಯಾವನಾದರೂ ಹೇಳಲಿ: ‘ಬಾ!’ ” ಎನ್ನುವುದಕ್ಕೆ ವಿಧೇಯರಾಗಲೇ ಬೇಕು. ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುವವರೆಲ್ಲರೂ ಈ ಆಮಂತ್ರಣವನ್ನು ಪ್ರಚುರಿಸಬೇಕು. ಕುಲ, ಜನಾಂಗ, ಭಾಷೆ ಯಾ ಸದ್ಯದ ಅವರ ಧರ್ಮವನ್ನು ಪರಿಗಣಿಸದೇ—ಎಲ್ಲೆಡೆಗಳಲ್ಲಿರುವ ಪ್ರತಿಯೊಬ್ಬನಿಗೆ—ಅವರದನ್ನು ನೀಡತಕ್ಕದ್ದು! ಯೆಹೋವನ ಸಾಕ್ಷಿಗಳಲ್ಲಿ ಪ್ರಚಲಿತ ಸಮಯದಲ್ಲಿ ಆಮಂತ್ರಿಸಲು ಮತ್ತು ಎಲ್ಲಾ ಜನರು ಪಾಲಿಗರಾಗುವಂತೆ ಸಹಾಯಮಾಡಲು ಏನಿದೆಯೋ, ದೊರಕುವ ಅದೆಲ್ಲಾ “ಜೀವಜಲವು” ದರ್ಮಾರ್ಥವಾಗಿರುತ್ತದೆ!

17. ಯಾವ ತರಹದ “ಜಲವು” ಈಗ ದೊರಕುತ್ತದೆ?

17 ಕುರಿಮರಿಯಾದ ಯೇಸು ಕ್ರಿಸ್ತನು ಭೂವ್ಯಾಪಕವಾಗಿ ಮಹಾ ಸಮೂಹವನ್ನು “ಜೀವಜಲದ ಒರತೆಗಳ” ಬಳಿಗೆ ಮಾರ್ಗದರ್ಶಿಸುತ್ತಾ ಇದ್ದಾನೆ. (ಪ್ರಕಟನೆ 7:17) ಇದು ಮಾಲಿನ್ಯಕರ ಜಲವಲ್ಲ, ಬದಲು ಉಗಮದಿಂದಲೇ ಶುಭ್ರವೂ, ಹಿತ ಶೀತಲವೂ, ಆರೋಗ್ಯಕರವೂ ಆದ ಜಲವಾಗಿರುತ್ತದೆ. ಈ ಸಾಂಕೇತಿಕ ಜಲವೆಂದರೆ ಬೈಬಲಿನ ಸತ್ಯತೆಗಳನ್ನು ತಿಳಿದುಕೊಳ್ಳುವುದು ಎಂಬರ್ಥಕ್ಕಿಂತಲೂ ಮಿಗಿಲಾದದ್ದಾಗಿದೆ; ಸಂತೋಷದ ಪರಿಪೂರ್ಣ ಜೀವವನ್ನು ಪಡೆಯುವ ಪಥದಲ್ಲಿ ಈಗಲೇ ಮಹಾ ಸಮೂಹದವರನ್ನು ನಡಿಸಲು ಆರಂಭಿಸಿರುವ ಯೇಸು ಕ್ರಿಸ್ತನ ಮೂಲಕವಾದ ದೇವರ ಎಲ್ಲಾ ಒದಗಿಸುವಿಕೆಗಳು ಎಂಬರ್ಥ ಅದಕ್ಕಿದೆ.

ಘೋಷಿಸುವುದರಲ್ಲಿ ಈಗ ಸೇರಿರಿ

18. ನಮ್ಮ ದಿನಗಳಲ್ಲಿ ಆಮಂತ್ರಣದ ವಿಸ್ತಾರ್ಯವು ಎಷ್ಟು?

18 ಈಗಾಗಲೇ, ಈ ಮಹಾ ಸಮೂಹದ ಸಂಖ್ಯೆಯು ಹಲವಾರು ಮಿಲ್ಯದಷ್ಟು ಎತ್ತರಕ್ಕೆ ಏರಿದೆ. ನಿವಾಸಿತ ಭೂಮಿಯಲ್ಲೆಲ್ಲಾ ರಾಜ್ಯದ ಸುಸಮಾಚಾರವನ್ನು ಘೋಷಿಸುವುದನ್ನು ಅವರು ಹುರುಪಿನಿಂದ ಮುಂದುವರಿಸುತ್ತಾ ಇದ್ದಾರೆ. ಅವರು ರಾಜ್ಯದ ಸುವಾರ್ತೆಯ ಸಾರೋಣದ ಕ್ಷೇತ್ರ ಚಟುವಟಿಕೆಗಳ ವರದಿಯನ್ನು ಕ್ರಮವಾಗಿ ಮಾಡುತ್ತಾರೆ, ಅದು ಈಗ 212 ದೇಶಗಳಿಗೆ ಮುಟ್ಟಿದೆ. ವಿಷಯಗಳ ವ್ಯವಸ್ಥೆಯ ಅಂತ್ಯದ ಅವಧಿಯಲ್ಲಿ ಸಮಯವು ಅನುಮತಿಸುವಂತೆ, ಮಹಾ ಸಮಯವಿಧಾಯಕನಾದ ಯೆಹೋವ ದೇವರ ತಾಳ್ಮೆ ಮತ್ತು ದೀರ್ಘಶಾಂತಿಗನುಗುಣವಾಗಿ ಆಮಂತ್ರಣ ನೀಡುವುದು ಮುಂದುವರಿಯುವುದು. ಸಮಯವು ಯಾವಾಗ ಅಂತ್ಯಗೊಳ್ಳಬೇಕೆಂದು ಅವನಿಗೆ ತಿಳಿದದೆ ಮತ್ತು ಬೈಬಲಿನ ಪ್ರವಾದನೆಯಲ್ಲಿ ತಾನು ವಚನಿಸಿದ್ದನ್ನು ಮಾಡುವೆನು ಎಂದು ಅವನು ಪುನರಾವರ್ತಿಸಿದ ಹೇಳಿಕೆಗಳಿಗನುಸಾರವಾಗಿ ಎಲ್ಲರಿಗೂ ತಾನು ಯೆಹೋವನೆಂದು ಗೊತ್ತಾಗಬಹುದಾದ ನಿಖರವಾದ ಗಳಿಗೆ ಅವನಿಗೆ ತಿಳಿದಿರುತ್ತದೆ.—ಯೆಹೆಜ್ಕೇಲನು 36:23; 38:21-23; 39:7.

19. ಈ “ಜಲವು” ಧರ್ಮಾರ್ಥವಾಗಿ ನೀಡಲ್ಪಡುತ್ತದೆ ಎಂದು ನಾವು ಯಾಕೆ ಹೇಳಸಾಧ್ಯವಿದೆ?

19 ಆದಕಾರಣ, ಇನ್ನೂ ಸಮಯವಿರುವಾಗಲೇ, ಮಹಾ ಸಮೂಹದ ಸದಸ್ಯರು, ಮದಲಗಿತ್ತಿಯ ಉಳಿಕೆಯವರ ಜತೆಯಲ್ಲಿ ಇದನ್ನು ಹೇಳುವುದರಲ್ಲಿ ಸಂತೋಷದಿಂದ ಪಾಲಿಗರಾಗುತ್ತಾರೆ: ‘ಬನ್ನಿರಿ, ಮತ್ತು ಜೀವಜಲದಲ್ಲಿ ಕ್ರಯವಿಲ್ಲದೆ ಪಾಲಿಗರಾಗಿರಿ!’ ಈ ಜೀವರಕ್ಷಕ ಸುವಾರ್ತೆಯ ಘೋಷಕರು ಧರ್ಮಾರ್ಥವಾಗಿ ಘೋಷಣೆಯನ್ನು ಮಾಡುತ್ತಾರೆ, ಇಡೀ ಲೋಕದಲ್ಲಿ ರಾಜ್ಯದ ಸಂದೇಶವನ್ನು ಪ್ರಚುರಿಸುವಾಗ ಅವರು ಸಲ್ಲಿಸುವ ಸೇವೆಗಾಗಿ ಯಾವುದೇ ಸಂಭಾವನೆ ಅವರು ವಿಧಿಸುವುದಿಲ್ಲ.

20. ಈ “ಜಲವು” ದೊರಕುವುದರಿಂದ ಯಾವ ಫಲಿತಾಂಶ ಉಂಟಾಗಲಿದೆ?

20 ಭೂಗೋಲದಲ್ಲೆಲ್ಲಾ ಜೀವಜಲವು ಈಗ ದೊರಕುತ್ತದೆ, ಇದರಿಂದಾಗಿ ಪಾಲಿಗರಾಗಲು ಬಯಸುವವರು ಜೀವರಕ್ಷಕ ಫಲಿತಾಂಶಗಳ ಪೂರ್ಣ ತೃಪ್ತಿಯೊಂದಿಗೆ ಹಾಗೆ ಮಾಡಬಹುದು. ವಿಮೋಚಿತ ಮಾನವ ಕುಲವು ಇಲ್ಲಿಯೇ ಭೂಮಿಯ ಮೇಲೆ ಅಂತ್ಯವಿಲ್ಲದ ಜೀವಿತದಲ್ಲಿ ಆನಂದಿಸುವದು, ಇದು ಪರದೈಸವಾಗಿ ಮಾರ್ಪಟ್ಟು, ಯೆಹೋವನ ಬಹುಮೂಲ್ಯ ಉದ್ದೇಶವನ್ನು ಸಮರ್ಥಿಸಲಿರುವುದು. ವ್ಯರ್ಥತೆಗಾಗಿ ನಮ್ಮ ನಿರ್ಮಾಣಿಕನು ಭೂಮಿಯನ್ನು ರೂಪಿಸಲಿಲ್ಲ, ಬದಲು ಭೂವ್ಯಾಪಕವಾಗಿರುವ ಏದೇನ್‌ ಉದ್ಯಾನವನವಾಗಿರುವಂತೆ ಯಾ ಸಂತಸದ ಪರದೈಸವಾಗಿರುವಂತೆ ಮತ್ತು ದೇವರ ಸ್ವರೂಪದ ಮತ್ತು ಹೋಲಿಕೆಯ ಪರಿಪೂರ್ಣ ಮಾನವ ಜೀವಿಗಳಿಂದ ಅದು ನಿವಾಸಿಸಲ್ಪಡುವಂತೆ ಉಂಟುಮಾಡಿದ್ದಾನೆ.

21. ಭೂಮಿಯ ಕಡೆಗಿನ ದೇವರ ಉದ್ದೇಶವು ಹೇಗೆ ಪೂರೈಸಲ್ಪಡಲಿರುವುದು?

21 ಖಂಡಿತವಾಗಿಯೂ, ಅಂತಹ ನೂತನ ಲೋಕದಲ್ಲಿರುವುದು ಒಂದು ಮಹಾ ಹೇಳಲಸಾಧ್ಯವಾದ ಸುಯೋಗವಾಗಲಿರುವುದು! ಅನಂತರ ಆದಿಕಾಂಡ 1:27, 28 ರಲ್ಲಿ ಮೊದಲ ಮಾನವ ದಂಪತಿಗಳಿಗೆ ನಿಯಮಿಸಿದ ಕೆಲಸವನ್ನು ಯಥೇಷ್ಟತೆಯಿಂದ ಪೂರೈಸಲಾಗುವುದು. ಮಾನವ ಕುಟುಂಬವು ಈಡಾದ ದುರಂತದಿಂದ ಪಾರುಗೊಳಿಸಲು ಯೆಹೋವನು ಕೌಶಲ್ಯತೆಯಿಂದ ನಿರ್ವಹಿಸಿದ್ದಕ್ಕಾಗಿ ಯೆಹೋವನಿಗೆ ಉಪಕಾರಗಳು, ಪರದೈಸವಾಗುವಷ್ಟರ ತನಕ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ಪರಿಪೂರ್ಣ ಮಾನವ ಕುಲದಿಂದ ಅದು ತುಂಬಲ್ಪಡುವುದು. ಹೌದು, ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಿರುವನು ಮತ್ತು, ನೋಡಿರಿ, ಅದು ಅತ್ಯುತ್ತಮವಾಗಿ ಇರುವುದು. ನೀವು ಅಲ್ಲಿರುವಿರೋ? ಹಾಗಿರುವುದಾದರೆ, ಜೀವಜಲದಲ್ಲಿ ಧರ್ಮಾರ್ಥವಾಗಿ ಪಾಲು ತೆಗೆದು ಕೊಳ್ಳುವುದನ್ನು ಗಣ್ಯತೆಯಿಂದ ಆರಂಭಿಸಿರಿ. “ಬನ್ನಿರಿ!” ಮತ್ತು ನೀವು ಬೇಕಾದಷ್ಟು ಕುಡಿಯಿರಿ ಮತ್ತು ಈಗಲೇ ಹರಿಯಲು ಆರಂಭಿಸಿ, ಬರಲಿರುವ ಸಾವಿರ ವರ್ಷದಲ್ಲಿ ಸಂಪೂರ್ಣವಾಗಿ ಹರಿಯಲಿರುವ ಜೀವಕರ ಜಲದಿಂದ ನಿಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳಿರಿ. ಈ ಸವಿ ಆಮಂತ್ರಣ ಕೇಳುವ ಪ್ರತಿಯೊಬ್ಬನು ಹೇಳಲಿ: “ಬಾ!” (w90 12/15)

[ಅಧ್ಯಯನ ಪ್ರಶ್ನೆಗಳು]

a  ಇತರ ವಿಷಯಗಳೊಂದಿಗೆ, ಈ ಲೇಖನದಲ್ಲಿ ಹೇಳಿದ್ದು: “ಕಳೆದ ವರ್ಷಗಳಲ್ಲಿ ಕೊಡಲ್ಪಟ್ಟ ಸತ್ಯದ ಸಾಕ್ಷಿಯು ಎಷ್ಟೊಂದು ವಿಸ್ತಾರವಾಗಿತ್ತೆಂದರೆ ಹಾಗೆ ಹಿಂದೆಂದೂ ಕೊಡಲ್ಪಟ್ಟಿರಲಿಲ್ಲ. . . . ಉಳಿಕೆಯವರು ಅವರಿಗೆ ಸಂತೋಷದ ಸುದ್ದಿಯನ್ನು ತರುತ್ತಿದ್ದರು ಮತ್ತು ಅವರಿಗೆ ಹೇಳುತ್ತಿದ್ದರು: ‘ಯಾರೇ ಆಗಲಿ, ಬೇಕಾದರೆ ಜೀವಜಲವನ್ನು ಕ್ರಯವಿಲ್ಲದೆ ಅವನು ತೆಗೆದುಕೊಳ್ಳಲಿ.’ ಅವರು ಕರ್ತನ ಪರವಾಗಿ ಮತ್ತು ಪಿಶಾಚನ ವಿರುದ್ಧವಾಗಿ ತಮ್ಮ ಸ್ಥಾನವನ್ನು ತೆಗೆದು ಕೊಳ್ಳಬಹುದು ಮತ್ತು ಆಶೀರ್ವಾದವನ್ನು ಪಡೆಯಬಹುದು ಎಂದು ಅವರಿಗೆ ತಿಳಿಸಲಾಯಿತು. ನಮ್ರತೆ ಮತ್ತು ಸದ್ಧರ್ಮವನ್ನು ಈಗ ಹುಡುಕುವ ಇಂತಹ ವರ್ಗದ ಜನರು ವ್ಯಕ್ತಪಡಿಸಲ್ಪಡುವ ಅವನ ಕೋಪದ ದಿನದಲ್ಲಿ ಮರೆಯಾಗಿದ್ದು, ಅರ್ಮೆಗೆದ್ದೋನಿನ ಯುದ್ಧವನ್ನು ಪಾರಾಗಿ, ಸಾಯದೇ, ಸದಾಕಾಲ ಜೀವಿಸುವವರಲ್ಲವೇ? (ಜೆಫನ್ಯ 2:3) . . . ನಂಬಿಗಸ್ತ ಉಳಿಕೆಯವರ ವರ್ಗದವರು ಈ ಹಿತಕರವಾದ ಆಹ್ವಾನದಲ್ಲಿ ಸೇರಿ ಕೊಂಡು ‘ಬಾ!’ ಅನ್ನುತ್ತಾರೆ. ಸದ್ಧರ್ಮ ಮತ್ತು ಸತ್ಯದ ಆಸೆಯಿರುವವರೆಲ್ಲರಿಗೆ ಈ ಸಂದೇಶವು ಘೋಷಿಸಲ್ಪಡಬೇಕು. ಅದನ್ನು ಈಗಲೇ ಮಾಡಬೇಕು.”

b  ಅಗಷ್ಟ್‌ 15, 1934 ರ ದ ವಾಚ್‌ಟವರ್‌ 249 ನೆಯ ಪುಟದ 31 ನೆಯ ಪಾರಗ್ರಾಫ್‌ನಲ್ಲಿ ಬೇರೆ ಕುರಿಗಳ ಜವಾಬ್ದಾರಿಕೆಯ ಕುರಿತೂ ಹೇಳಿದ್ದು: “ಸತ್ಯದ ಸಂದೇಶವನ್ನು ‘ಕೇಳುವವರು’ ಯೋನಾದಾಬನ ವರ್ಗದವರಾಗಿದ್ದಾರೆ ಮತ್ತು ಇವರು ಕೇಳುವ ಇತರರಿಗೆ ಹೇಳತಕ್ಕದ್ದು: ‘ಬಾ.’ ಕೇಳುವವನು ಹೇಳಲಿ, ‘ಬಾ.’ ಬಾಯಾರಿದವನು ಬರಲಿ. ಮತ್ತು ಬರುವವನು ಯಾರೇ ಆಗಲಿ, ಜೀವಜಲವನ್ನು ಧರ್ಮಾರ್ಥವಾಗಿ ತೆಗೆದು ಕೊಳ್ಳಲಿ.’ (ಪ್ರಕಟನೆ 22:17) ಯೋನಾದಾಬನ ವರ್ಗದವರು, ಯೆಹೋವನ ಅಭಿಷಿಕ್ತ ಸಾಕ್ಷಿಗಳಾಗಿರದೇ ಇರುವುದಾದರೂ, ಯೇಹುವಿನ ಮೂಲಬಿಂಬವಾಗಿರುವ ಅಭಿಷಿಕ್ತರೊಂದಿಗೆ, ಜತೆಯಲ್ಲಿ ಹೋಗಿ, ರಾಜ್ಯದ ಸಂದೇಶವನ್ನು ಪ್ರಕಟಿಸಬೇಕು.”

ನಿಮ್ಮ ಉತ್ತರವೇನು?

◻ ಪ್ರಕಟನೆ 22:17 ರಲ್ಲಿ ಸೂಚಿಸಲ್ಪಟ್ಟ “ಜಲ” ಯಾವುದು?

◻ “ಜಲ”ದ ಉಗಮವು ಯಾವುದು?

◻ “ಜಲ” ಯಾಕೆ ಬೇಕಾಗಿದೆ, ಮತ್ತು ಅದು ಯಾವಾಗ ಮಾತ್ರ ಹರಿಯಲು ಶಕ್ಯವಾಗಿತ್ತು?

◻ ನಮ್ಮ ವಚನದಲ್ಲಿರುವ “ಆತ್ಮ” ಏನನ್ನು ಸೂಚಿಸುತ್ತದೆ, ಮತ್ತು “ಮದಲಗಿತ್ತಿ” ಯು ಹೇಗೆ ಒಳಗೂಡಿದೆ?

◻ “ಜಲ” ದಲ್ಲಿ ಯಾರೂ ಪಾಲು ತೆಗೆದುಕೊಳ್ಳಬಹುದು, ಮತ್ತು ಯಾವ ಫಲಿತಾಂಶದೊಂದಿಗೆ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ